Shuru
Apke Nagar Ki App…
ಮಡಿವಾಳರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಚಿಂತಾಮಣಿಯಲ್ಲಿ ಸುದ್ದಿಗೋಷ್ಠಿ
Md mansoor
ಮಡಿವಾಳರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಚಿಂತಾಮಣಿಯಲ್ಲಿ ಸುದ್ದಿಗೋಷ್ಠಿ
More news from ಕರ್ನಾಟಕ and nearby areas
- ಮಡಿವಾಳರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಚಿಂತಾಮಣಿಯಲ್ಲಿ ಸುದ್ದಿಗೋಷ್ಠಿ1
- ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕೆಐಎಡಿಬಿಗೆ ಜಮೀನು ನೀಡುವುದಿಲ್ಲವೆಂದು ಪಟ್ಟು ಹಿಡಿದ ರೈತರು1
- Post by Chand Pasha1
- ಪತ್ನಿ ಕಣ್ಣೆದುರೆ ನರಳಾಡಿ ಪ್ರಾಣ ಬಿಟ್ಟ ಪತಿ 3 ತಿಂಗಳ ಗರ್ಬಿಣಿ ಪತ್ನಿಯೊಂದಿಗೆ ಬರ್ತಿದ್ದ ವೇಳೆ ಅವಘಡ 8 ತಿಂಗಳ ಹಿಂದೆ ಲವ್ ಕಂ ಆರೆಂಜ್ ಮ್ಯಾರೇಜ್ ಆಗಿದ್ದ ದಂಪತಿ ನೆಲಮಂಗಲ ಪತ್ನಿ ಕಣ್ಣೆದುರೆ ನರಳಾಡಿ ಪ್ರಾಣ ಬಿಟ್ಟ ಪತಿ 3 ತಿಂಗಳ ಗರ್ಬಿಣಿ ಪತ್ನಿಯೊಂದಿಗೆ ಬರ್ತಿದ್ದ ವೇಳೆ ಅವಘಡ 8 ತಿಂಗಳ ಹಿಂದೆ ಲವ್ ಕಂ ಆರೆಂಜ್ ಮ್ಯಾರೇಜ್ ಆಗಿದ್ದ ದಂಪತಿ ನೆಲಮಂಗಲ ತಾಲೂಕು ಕಚೇರಿಗೆ ಬರುತಿದ್ದ ದಂಪತಿ ಯಶವಂತಪುರದಿಂದ ಬರ್ತಿದ್ದ ಬಿಎಂಟಿಸಿ ಬಸ್ಸಿಗೆ ಬಲಿ ಮುಂಬದಿ ಇದ್ದ ಬೈಕಿಗೆ ರಭಸವಾಗಿ ಬಿಎಂಟಿಸಿ ಬಸ್ ಡಿಕ್ಕಿ ಪತಿ ಮನುಗೌಡ ಬಸ್ಸಿಗೆ ಸಿಲುಕಿ ಸಾವು, ಪತ್ನಿ ಜೀವಪಾಯದಿಂದ ಪಾರು ಪತ್ನಿ ಮಮತಾ ರಸ್ತೆ ಬದಿಗೆ ಬಿದ್ದಿದ್ದರಿಂದ ಪಾರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾರ್ವಜನಿಕರಿಂದ ರವಾನೆ ಅಷ್ಟರಲ್ಲಾಗಲೇ ಪ್ರಾಣ ಬಿಟ್ಟಿರುವ ಮನುಗೌಡ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.2
- ಮುಳಬಾಗಿಲು : ರಾಮಸಂದ್ರ ರಸ್ತೆಯಲ್ಲಿ ಕಸದ ಅವ್ಯವಸ್ಥೆ: ನಗರಸಭೆ ವಿರುದ್ಧ ಸಂಘಟನೆಗಳ ಆಕ್ರೋಶ.!?2
- ಸೂಲಿಬೆಲೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ ತಾಲೂಕಿನಲ್ಲಿ ಗೋಮಾಳ ಜಾಗ ಗುರುತಿಸಿ ಹಸಿರು ಮೇವು ಬೆಳೆಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಸೂಲಿಬೆಲೆಯಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಕೃಷಿ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾ ಡಿದ ಅವರು, ಸೆಪ್ಟೆಂಬರ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಯಲ್ಲಿ ರೈತರು ಹಾಗೂ ಜಾನುವಾರು ಸಾಕಣೆ ದಾರರು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ರ್ಪಾರ್ಯಕ್ರಮ ಕೈಗೊಳ್ಳಬೇಕಿದೆ ಎಂದರು.1
- ದೇಶಿಹಳ್ಳಿ ಆಶ್ರಯ ಬಡಾವಣೆಯಲ್ಲಿ ಬಡವರ ಮನೆ ತೆರವುಕ್ಕೆ ನೋಟಿಸ್: 40 ಅಡಿ ರಸ್ತೆ ಎಲ್ಲಿದೆ? ದಾಖಲೆ ತೋರಿಸಿ; ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ಬಂಗಾರಪೇಟೆ: ಸರ್ಕಾರದ ಆಶ್ರಯ ಯೋಜನೆಯಡಿ 1992ರಲ್ಲಿ ನಿವೇಶನ ಪಡೆದು, ಗ್ರಾಮ ಪಂಚಾಯಿತಿಯ ಅನುಮತಿ, ಇ-ಸ್ವತ್ತು, ತೆರಿಗೆ ಪಾವತಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಇದೀಗ ಏಕಾಏಕಿ ಒತ್ತುವರಿ ಆರೋಪದ ನೋಟಿಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಹೊರವಲಯದ ದೇಶಿಹಳ್ಳಿ ಗ್ರಾಮದ ಆಶ್ರಯ ಬಡಾವಣೆಯಲ್ಲಿ 1992ರಲ್ಲಿ ಅಂದಿನ ಮಂಡಲ ಪಂಚಾಯಿತಿಯಿಂದ ಬಡವರಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಬಳಿಕ ಫಲಾನುಭವಿಗಳು ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇ-ಸ್ವತ್ತು ಮಾಡಲಾಗಿದ್ದು, ಪ್ರತಿವರ್ಷ ತೆರಿಗೆ ಪಾವತಿಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕವನ್ನೂ ಸಂಬಂಧಪಟ್ಟ ಇಲಾಖೆಗಳು ಕಲ್ಪಿಸಿವೆ. ಇಷ್ಟೆಲ್ಲ ದಾಖಲೆಗಳಿದ್ದರೂ ಇದೀಗ ಸರ್ವೆ ನಂಬರ್ 15 ಹಾಗೂ 103ರ ವ್ಯಾಪ್ತಿಯ ಮನೆಗಳು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿವೆ ಎಂದು ಆರೋಪಿಸಿ ತೆರವು ನೋಟಿಸ್ ನೀಡಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 40 ಅಡಿ ರಸ್ತೆ ಎಲ್ಲಿದೆ? ‘ಬಡವರ ಮನೆಗಳ ಮುಂದೆ 40 ಅಡಿ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳಲಾಗುತ್ತಿದೆ. ಆದರೆ ನಕ್ಷೆಯಲ್ಲಿ 40 ಅಡಿ ರಸ್ತೆ ಎಲ್ಲಿದೆ? ಅದರ ದಾಖಲೆ, ಯೋಜನೆ ಅಥವಾ ಮೂಲ ನಕ್ಷೆಯನ್ನು ಅಧಿಕಾರಿಗಳು ತೋರಿಸಬೇಕು. ಹಲವು ವರ್ಷಗಳಿಂದ ಜನರು ವಾಸಿಸುತ್ತಿರುವ ಮನೆಗಳನ್ನು ಏಕಾಏಕಿ ಒತ್ತುವರಿ ಎಂದು ಗುರುತಿಸುವುದು ಯಾವ ನ್ಯಾಯ?’ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಪ್ರಶ್ನಿಸಿದರು. ಸ್ಥಳಕ್ಕೆ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮುನಿರಾಜು ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಬಿ.ವಿ.ಮಹೇಶ್ ಮಾತನಾಡಿ, ‘30–35 ವರ್ಷಗಳಿಂದ ಬಡವರು ಇಲ್ಲಿ ವಾಸಿಸುತ್ತಿದ್ದಾರೆ. ಅಂದಿನ ಮಂಡಲ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ದಾಖಲೆಗಳ ಆಧಾರದಲ್ಲೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯೇ ಮನೆ ನಿರ್ಮಾಣಕ್ಕೆ ಪರವಾನಗಿ ನೀಡಿ, ಇ-ಸ್ವತ್ತು ಮಾಡಿದೆ. ತೆರಿಗೆ ವಸೂಲಿ ಮಾಡಿದೆ. ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಈಗ ಅದೇ ಮನೆಗಳನ್ನು ಒತ್ತುವರಿ ಎಂದು ಹೇಳುವುದು ಬಡವರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ತಾಲೂಕಿನ ವಿವಿಧೆಡೆ ಸರ್ಕಾರಿ ಗೋಮಾಳ ಒತ್ತುವರಿ ಪ್ರಕರಣಗಳಿವೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ, ದೇಶಿಹಳ್ಳಿಯ ಬಡವರ ಮನೆಗಳ ತೆರವಿಗೆ ಮುಂದಾಗಿರುವುದು ರಾಜಕೀಯ ಪ್ರೇರಿತ ಕ್ರಮದ ಅನುಮಾನ ಮೂಡಿಸಿದೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ದಾಖಲೆ ಪರಿಶೀಲಿಸಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು. ನೋಟಿಸ್ ನೀಡಿ ಅಧಿಕಾರಿಗಳೇ ಗೈರು! ದೇಶಿಹಳ್ಳಿ ಗ್ರಾಮದ ಸರ್ವೆ ನಂಬರ್ 15 ಮತ್ತು 13ರ ಸರ್ಕಾರಿ ಗೋಮಾಳ ಜಮೀನುಗಳ ಒತ್ತುವರಿ ತೆರವಿಗೆ ಸೆ.7ರಂದು ಕ್ರಮ ನಿಗದಿಪಡಿಸಲಾಗಿತ್ತು. ಆದರೆ ಸೋಮವಾರ ಏಕಾಏಕಿ ನೋಟಿಸ್ ನೀಡಿ ಮರುದಿನವೇ ಸರ್ವೆ ನಡೆಸಿ ತೆರವುಗೊಳಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ. ಲೋಕಾಯುಕ್ತದ ಆದೇಶದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಸ್ಥಳೀಯರು ದಾಖಲೆಗಳ ಸಮಗ್ರ ಪರಿಶೀಲನೆಗೆ ಆಗ್ರಹಿಸಿದರು. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗ್ರಾಮಸ್ಥೆ ಲಕ್ಷ್ಮಮ್ಮ ಮಾತನಾಡಿ, ‘ನಾವು ಬಡವರು. ಕೂಲಿ ಕೆಲಸ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಯ ದಾಖಲೆಗಳ ಆಧಾರದಲ್ಲೇ ಮನೆ ನಿರ್ಮಿಸಿಕೊಂಡಿದ್ದೇವೆ. ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಈಗ ಏಕಾಏಕಿ ಮನೆ ತೆರವು ಮಾಡುವಂತೆ ಹೇಳಿದರೆ ನಾವು ಎಲ್ಲಿಗೆ ಹೋಗಬೇಕು? ಈ ರಸ್ತೆಗೆ 40 ಅಡಿ ಅಗಲೀಕರಣದ ಅಗತ್ಯವೇ ಇಲ್ಲ’ ಎಂದು ಕಣ್ಣೀರಿಟ್ಟರು. ಹೇಮಾಬಾಯಿ ಮಾತನಾಡಿ, ‘ಹತ್ತು ವರ್ಷ ದುಡಿದು ಹಣ ಕೂಡಿಸಿ ಲಕ್ಷಾಂತರ ರೂಪಾಯಿ ನೀಡಿ ಸೈಟ್ ಖರೀದಿಸಿದ್ದೇವೆ. ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಬಂದು ಇದು ಸರ್ಕಾರಿ ಜಾಗ, ತೆರವು ಮಾಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ನ್ಯಾಯ?’ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಮುಖಂಡರಾದ ಹುಣಸನಹಳ್ಳಿ ಶ್ರೀನಿವಾಸ, ನೆರನಹಳ್ಳಿ ಹನುಮಪ್ಪ, ಚಿಕ್ಕವಲಗಮಾದಿ ಚೌಡಪ್ಪ, ಕೆಸರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಮಂಜುನಾಥ್, ದಲಿತ ರೈತ ಸೇನೆ ರಾಜ್ಯ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಪುರಸಭೆ ಮಾಜಿ ಸದಸ್ಯ ಪ್ರಭಾಕರ ರಾವ್, ದೇಶಿಹಳ್ಳಿ ಶ್ರೀನಿವಾಸ್, ಸುರೇಂದ್ರ, ಚಂದ್ರಪ್ಪ, ಬೂದಿಕೋಟೆ ಶಿವು, ಚಂದ್ರಶೇಖರ್, ಕೊಪ್ಪ ಜಯರಾಮ್, ಹಿರೇಕರಪನಹಳ್ಳಿ ಮುನಿರಾಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು. ಬಡವರ ಬದುಕು ಉಳಿಸುವುದು ಆಡಳಿತದ ಕರ್ತವ್ಯ ದಶಕಗಳಿಂದ ತೆರಿಗೆ ಪಡೆದು, ದಾಖಲೆ ನೀಡಿ, ಮೂಲಸೌಕರ್ಯ ಕಲ್ಪಿಸಿದ ಬಳಿಕ ಅದೇ ಮನೆಗಳನ್ನು ಒತ್ತುವರಿ ಎಂದು ಗುರುತಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ. ರಸ್ತೆ ಅಗಲೀಕರಣ ನಿಜವಾಗಿಯೂ ಅಗತ್ಯವಿದ್ದರೆ ಅದರ ಮೂಲ ನಕ್ಷೆ, ಯೋಜನೆ ಹಾಗೂ ಕಾನೂನುಬದ್ಧ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಇಲ್ಲವಾದರೆ ಬಡವರ ಮನೆಗಳ ಮೇಲೆ ಕೈ ಹಾಕುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟ ಎಚ್ಚರಿಕೆಯಾಗಿದೆ.1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ BLA-2 ಕಾರ್ಯಾಗಾರ ಹಾಗೂ ನಗರ ಮತ್ತು ಮಂಡಲ ಪದಾಧಿಕಾರಿಗಳ ಪ್ರಮುಖ ಸಭೆಯನ್ನು1