ಬೆಂಗಳೂರು-ಬೆಳಗಾವಿಯಲ್ಲಿ ವಾಯು ಗುಣಮಟ್ಟ ಸುಧಾರಣೆ.!............ ಬೆಂಗಳೂರು-ಬೆಳಗಾವಿಯಲ್ಲಿ ವಾಯು ಗುಣಮಟ್ಟ ಸುಧಾರಣೆ.! ಬೆಂಗಳೂರು : ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟದಲ್ಲಿ ಇತ್ತೀಚೆಗೆ ಗಮನಾರ್ಹ ಬದಲಾವಣೆ ಕಂಡುಬಂದಿದೆ. ವಿಶೇಷವಾಗಿ Bengaluru ಮತ್ತು Belagavi ನಗರಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟದಲ್ಲಿ ಸುಧಾರಣೆ ದಾಖಲಾಗಿದೆ. ಬೆಂಗಳೂರಿನ ಇಂದಿನ AQI 114ಕ್ಕೆ ಇಳಿದಿದ್ದು, ಕಳೆದ ಕೆಲವು ದಿನಗಳಿಗಿಂತ ಉತ್ತಮ ಮಟ್ಟದಲ್ಲಿದೆ. ಆದರೂ ತಜ್ಞರ ಪ್ರಕಾರ ಇದು ಸಂಪೂರ್ಣ ಸುರಕ್ಷಿತ ಮಟ್ಟವಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ 100ಕ್ಕಿಂತ ಮೇಲ್ಪಟ್ಟ AQI ದೀರ್ಘಕಾಲ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಲಾಗಿದೆ. ಬೆಳಗಾವಿಯಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟ ತಲುಪಿದ್ದ ವಾಯು ಗುಣಮಟ್ಟ ಇಂದು 62ಕ್ಕೆ ಇಳಿದು ಗಮನಾರ್ಹ ಸುಧಾರಣೆ ಕಂಡಿದೆ. ಇದೇ ವೇಳೆ ಮಂಗಳೂರು 138, ಮೈಸೂರು 101, ಉಡುಪಿ 118 AQI ದಾಖಲಿಸಿದ್ದು, ಕೆಲವು ನಗರಗಳಲ್ಲಿ ಇನ್ನೂ ಗಾಳಿಯ ಗುಣಮಟ್ಟ ಕಳಪೆ ಮಟ್ಟದಲ್ಲೇ ಮುಂದುವರಿದಿದೆ. ಕಲಬುರ್ಗಿ, ಬಳ್ಳಾರಿ ಮತ್ತು ಶಿವಮೊಗ್ಗ ನಗರಗಳಲ್ಲಿ ಸಹ ಮಧ್ಯಮ ಮಟ್ಟದ AQI ದಾಖಲಾಗಿದೆ. ತಜ್ಞರ ಅಭಿಪ್ರಾಯದಂತೆ ವಾಹನ ದಟ್ಟಣೆ, ಕೈಗಾರಿಕಾ ಮಾಲಿನ್ಯ, ಧೂಳು ಹಾಗೂ ಹವಾಮಾನ ಬದಲಾವಣೆಗಳು ಗಾಳಿಯ ಗುಣಮಟ್ಟದ ಏರಿಳಿತಕ್ಕೆ ಪ್ರಮುಖ ಕಾರಣಗಳಾಗಿವೆ. ಮಕ್ಕಳಲ್ಲಿ, ವೃದ್ಧರಲ್ಲಿ ಮತ್ತು ಶ್ವಾಸಕೋಶ ಸಮಸ್ಯೆ ಇರುವವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಾಸ್ಕ್ ಬಳಕೆ, ಹೊರಾಂಗಣ ಚಟುವಟಿಕೆ ಕಡಿಮೆ ಮಾಡುವುದು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಸಲಹೆ ನೀಡಲಾಗಿದೆ.

- ಆನೇಕಲ್: ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಯುವಕರು; ವಿಡಿಯೋ ವೈರಲ್. ಆನೇಕಲ್‌ನ ಹೊಸೂರು ಮುಖ್ಯರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಹಣದ ವಿಚಾರವಾಗಿ ಇಬ್ಬರು ಯುವಕರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿದ ಯುವಕರು, ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಈ ದೃಶ್ಯಗಳನ್ನು ಹಾದಿಹೋಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ತಮಿಳುನಾಡಿನ ಟಿವಿಕೆ ನಾಯಕ, ನಟ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನ ದ್ರಾವಿಡ ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.1
- ಪ್ರೀತಿ ವಿಚಾರಕ್ಕೆ ಅಪಹರಣ, ಹಲ್ಲೆ ಆರೋಪ ಕೈಕಾಲು ಕಟ್ಟಿ ವಿಡಿಯೋ ಮಾಡಿದ ಘಟನೆ ಪ್ರೀತಿ ವಿಚಾರಕ್ಕೆ ಅಪಹರಣ, ಹಲ್ಲೆ ಆರೋಪ ಕೈಕಾಲು ಕಟ್ಟಿ ವಿಡಿಯೋ ಮಾಡಿದ ಘಟನೆ1
- ಬೆಂಗಳೂರಿನ ಕೊಟ್ಟಿಗೆಪಾಳ್ಯದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಮಿತಿಮೀರಿದ್ದು, ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಳಪೆ ಊಟ, ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಊಟ-ನಿದ್ದೆಯನ್ನೂ ತ್ಯಜಿಸಿದ್ದಾರೆ. ಕೂಡಲೇ ಉತ್ತಮ ವಾರ್ಡನ್ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.1
- ಸನ್ ಸ್ಟ್ರೋಕ್ ಗೆ ಕುಸಿದು ಬಿದ್ದು ವೃದ್ಧ ಸಾವನ್ನಪ್ಪಿರುವ ಶಂಕೆ ಬಿಸಿಲಲ್ಲಿ ನಿಂತಲ್ಲಿಯೇ ಕುಸಿದು ಬಿದ್ದಿರುವ ವೃದ್ಧ ನೆಲಮಂಗಲ ಸನ್ ಸ್ಟ್ರೋಕ್ ಗೆ ಕುಸಿದು ಬಿದ್ದು ವೃದ್ಧ ಸಾವು ಶಂಕೆ ಬಿಸಿಲಲ್ಲಿ ನಿಂತಲ್ಲಿಯೇ ಕುಸಿದು ಬಿದ್ದಿರುವ ವೃದ್ಧ ಶೆಟ್ಟಿಹಳ್ಳಿ ಗ್ರಾಮದ ಚಿಕ್ಕಣ್ಣ(70) ಸಾವು ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಘಟನೆ ಕೋಳಿ ಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಬೆಳಗ್ಗೆ ಅಂಗಡಿಗೆ ಹೋದಾಗ ನಡೆದಿರುವ ಘಟನೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.2
- ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯರು ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕ ಸಾವನ್ನಪ್ಪಿದ ಘಟನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಭಕ್ತರು ಮತ್ತು ಗ್ರಾಮಸ್ಥರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ, ನಾಗಮಲೆ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಭಕ್ತರ ಸುರಕ್ಷತೆಗೆ ಅಗತ್ಯ ಭದ್ರತಾ ಕ್ರಮ, ತುರ್ತು ರಸ್ತೆ ನಿರ್ಮಾಣ ಹಾಗೂ ಕಾಡುಪ್ರಾಣಿಗಳನ್ನು ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈಕುರಿತು ಪ್ರತಿಭಟನಾಕಾರರು ಮಾತನಾಡಿಈ ಕುರಿತು ಪ್ರತಿಭಟನಾಕಾರರು ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಭಕ್ತರು ಮತ್ತು ಗ್ರಾಮಸ್ಥರ ಜೀವ ಭದ್ರತೆ ಪ್ರಶ್ನಾರ್ಥಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ತಕ್ಷಣ ಶಾಶ್ವತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಪಾದಯಾತ್ರೆ ಮಾರ್ಗಗಳಲ್ಲಿ ಸೂಕ್ತ ನಿಗಾವ್ಯವಸ್ಥೆ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರೈತ ಸಂಘಟನೆಯ ಅಧ್ಯಕ್ಷ ಮಾದಪ್ಪ ಚಂಗಡಿಕರಿಯಪ್ಪ ರೈತರ ಶಾಂತರಾಜು ಅಮೋಘ್ ಪುಟ್ಟಸ್ವಾಮಿ ಶ್ರೀನಿವಾಸ್ ಸೇರಿದಂತೆ ಹಲವಾರು ಹಾಜರಿದ್ದರು ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯರು ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕ ಸಾವನ್ನಪ್ಪಿದ ಘಟನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಭಕ್ತರು ಮತ್ತು ಗ್ರಾಮಸ್ಥರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ, ನಾಗಮಲೆ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಭಕ್ತರ ಸುರಕ್ಷತೆಗೆ ಅಗತ್ಯ ಭದ್ರತಾ ಕ್ರಮ, ತುರ್ತು ರಸ್ತೆ ನಿರ್ಮಾಣ ಹಾಗೂ ಕಾಡುಪ್ರಾಣಿಗಳನ್ನು ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈಕುರಿತು ಪ್ರತಿಭಟನಾಕಾರರು ಮಾತನಾಡಿಈ ಕುರಿತು ಪ್ರತಿಭಟನಾಕಾರರು ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಭಕ್ತರು ಮತ್ತು ಗ್ರಾಮಸ್ಥರ ಜೀವ ಭದ್ರತೆ ಪ್ರಶ್ನಾರ್ಥಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ತಕ್ಷಣ ಶಾಶ್ವತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಪಾದಯಾತ್ರೆ ಮಾರ್ಗಗಳಲ್ಲಿ ಸೂಕ್ತ ನಿಗಾವ್ಯವಸ್ಥೆ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರೈತ ಸಂಘಟನೆಯ ಅಧ್ಯಕ್ಷ ಮಾದಪ್ಪ ಚಂಗಡಿಕರಿಯಪ್ಪ ರೈತರ ಶಾಂತರಾಜು ಅಮೋಘ್ ಪುಟ್ಟಸ್ವಾಮಿ ಶ್ರೀನಿವಾಸ್ ಸೇರಿದಂತೆ ಹಲವಾರು ಹಾಜರಿದ್ದರು1
- *ನರೀಪುರ ಗ್ರಾಮದಲ್ಲಿ ಸಡಗರದ ಬಸವ ಜಯಂತಿ ಆಚರಣೆ: ಜನಧ್ವನಿ ವೆಂಕಟೇಶ್ ಭಾಗಿ* ಕೊಳ್ಳೇಗಾಲ : ತಾಲೂಕಿನ ಧನಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೀಪುರ ಗ್ರಾಮದಲ್ಲಿ ಬಸವ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 'ಜನಧ್ವನಿ' ವೆಂಕಟೇಶ್ ಅವರು ಪಾಲ್ಗೊಂಡು ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಗಣ್ಯರು, ಬಸವಣ್ಣನವರ ತತ್ವ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವೃಷಭೇಂದ್ರ ಸ್ವಾಮಿ, ಉಗನಿಯ ಮಹೇಶ್, ಲೋಕೇಶ್ ಜೆಟ್ಟಿ, ವಿಜಯೇಂದ್ರ ಕೂಡ್ಲೂರು, ಮಾದೇಶ್, ಲಿಂಗಾಚಾರಿ, ಚಿನ್ನರಾಜು ಹಾಗೂ ಗ್ರಾಮದ ಮುಖಂಡರುಗಳು, ಹಿರಿಯ ಯಜಮಾನರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ವರದಿ ಉಸ್ಮಾನ್ ಖಾನ್4
- *ಹೆಬ್ಬಾಳ ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡರು.* *ಹೆಬ್ಬಾಳ ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡರು.*1