Shuru
Apke Nagar Ki App…
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಸಂಬಂಧಿಕರೊಬ್ಬರು ದಲಿತರನ್ನು ಕೀಳಾಗಿ ಕಂಡಿರುವುದಾಗಿ ಗಂಭೀರ ಆರೋಪ ಎದುರಾಗಿದೆ. ಸಚಿವರ ಸ್ವಂತ ಊರಾದ ಸೇಡಂ ತಾಲೂಕಿನ ಊಡಗಿ ಗ್ರಾಮದ ನಿವಾಸಿ ವಿಜಯ ಎಂಬುವವರು ಸಾರ್ವಜನಿಕ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಸಚಿವರ ಸಂಬಂಧಿ ಸಂದೀಪ ಭಾಂಜಿ ಎಂಬುವವರು ನಾಯಿ ಚಿತ್ರವನ್ನು ಕಾಮೆಂಟ್ ಆಗಿ ಹಾಕಿದ್ದರು. ಈ ಘಟನೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದಲಿತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂದೀಪ ಭಾಂಜಿ ಅವರು ಕ್ಷಮೆಯಾಚಿಸಿದ್ದರೂ ಸಹ, ದಲಿತ ಯುವಕನನ್ನು ನಾಯಿಗೆ ಹೋಲಿಸಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
Suddi - Junction
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಸಂಬಂಧಿಕರೊಬ್ಬರು ದಲಿತರನ್ನು ಕೀಳಾಗಿ ಕಂಡಿರುವುದಾಗಿ ಗಂಭೀರ ಆರೋಪ ಎದುರಾಗಿದೆ. ಸಚಿವರ ಸ್ವಂತ ಊರಾದ ಸೇಡಂ ತಾಲೂಕಿನ ಊಡಗಿ ಗ್ರಾಮದ ನಿವಾಸಿ ವಿಜಯ ಎಂಬುವವರು ಸಾರ್ವಜನಿಕ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಸಚಿವರ ಸಂಬಂಧಿ ಸಂದೀಪ ಭಾಂಜಿ ಎಂಬುವವರು ನಾಯಿ ಚಿತ್ರವನ್ನು ಕಾಮೆಂಟ್ ಆಗಿ ಹಾಕಿದ್ದರು. ಈ ಘಟನೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದಲಿತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂದೀಪ ಭಾಂಜಿ ಅವರು ಕ್ಷಮೆಯಾಚಿಸಿದ್ದರೂ ಸಹ, ದಲಿತ ಯುವಕನನ್ನು ನಾಯಿಗೆ ಹೋಲಿಸಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
More news from ಕರ್ನಾಟಕ and nearby areas
- ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಸಂಬಂಧಿಕರೊಬ್ಬರು ದಲಿತರನ್ನು ಕೀಳಾಗಿ ಕಂಡಿರುವುದಾಗಿ ಗಂಭೀರ ಆರೋಪ ಎದುರಾಗಿದೆ. ಸಚಿವರ ಸ್ವಂತ ಊರಾದ ಸೇಡಂ ತಾಲೂಕಿನ ಊಡಗಿ ಗ್ರಾಮದ ನಿವಾಸಿ ವಿಜಯ ಎಂಬುವವರು ಸಾರ್ವಜನಿಕ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಸಚಿವರ ಸಂಬಂಧಿ ಸಂದೀಪ ಭಾಂಜಿ ಎಂಬುವವರು ನಾಯಿ ಚಿತ್ರವನ್ನು ಕಾಮೆಂಟ್ ಆಗಿ ಹಾಕಿದ್ದರು. ಈ ಘಟನೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದಲಿತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂದೀಪ ಭಾಂಜಿ ಅವರು ಕ್ಷಮೆಯಾಚಿಸಿದ್ದರೂ ಸಹ, ದಲಿತ ಯುವಕನನ್ನು ನಾಯಿಗೆ ಹೋಲಿಸಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.3
- ಯಾದಗಿರಿ ಜಿಲ್ಲೆಯಲ್ಲಿ ಮೊಹರಂ ಹಬ್ಬದ ಕೊನೆಯ ದಿನದಂದು ದಫನ್ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ನೆರವೇರಿಸಲಾಯಿತು.1
- ರಾಮನಗರದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಗೆ ವಿವಿಧ ಜಿಲ್ಲೆಗಳ ರೈತರು ಬೆಂಬಲ ನೀಡಿದ್ದಾರೆ. ಆದರೆ, ಈ ಪ್ರತಿಭಟನೆಗೆ ಬೆಂಬಲ ನೀಡಲು ಬಂದ ರೈತರ ವಿರುದ್ಧ ಯೋಜನೆ ಪರವಿರುವ ಭೂಮಾಲೀಕರು ಘೋಷಣೆಗಳನ್ನು ಕೂಗಿದ್ದಾರೆ. ಹೊರಗಿನಿಂದ ಬಂದವರನ್ನು ಗುರಿಯಾಗಿಸಿಕೊಂಡು, ಭೂಮಾಲೀಕರು 'ದಿಕ್ಕಾರ' ಎಂದು ಘೋಷಿಸಿದಲ್ಲದೆ, ಅವರನ್ನು 'ಪೇಮೆಂಟ್ ಗಿರಾಕಿಗಳು' ಎಂದು ಕರೆದಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಾಗ, ಪೊಲೀಸರು ಸ್ಥಳಕ್ಕೆ ಮಧ್ಯಪ್ರವೇಶಿಸಿ, ಯೋಜನೆಯ ಪರವಿರುವ ಭೂಮಾಲೀಕರನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ.1
- ವಡಗೇರಾ ತಾಲ್ಲೂಕು ಕೇಂದ್ರದಲ್ಲಿರುವ ಬಸ್ ನಿಲ್ದಾಣವು ಸಮಸ್ಯೆಗಳ ಕೂಪ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಭಿಕ ಆರ್. ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸ್ ನಿಲ್ದಾಣ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಸೊರಗಿದೆ, ಇದು ಹೆಸರಿಗಷ್ಟೇ ಬಸ್ ನಿಲ್ದಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಸರಿಯಾಗಿ ಬಸ್ಸುಗಳು ನಿಲ್ಲುವುದಿಲ್ಲ, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಇರುವುದಿಲ್ಲ ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳು ಇದ್ದು ಇಲ್ಲದಂತಾಗಿ ಹಾಳು ಬಿದ್ದಿದ್ದು, ನಿಲ್ದಾಣದೊಳಗಿನ ಬೋರ್‌ವೆಲ್ ಕೆಟ್ಟು ಹೋಗಿದೆ. ನೆಲಮಾಳಿಗೆಯ ನೀರಿನ ಟ್ಯಾಂಕ್ ಅನ್ನು ತೆರೆದಿಟ್ಟಿದ್ದು, ಅದರಲ್ಲಿ ಚಿಕ್ಕ ಮಕ್ಕಳು, ವೃದ್ಧರು ಕಾಲು ಜಾರಿ ಬಿದ್ದು ಅನಾಹುತಗಳಾದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದ್ದಾರೆ. ಬಸ್ ನಿಲ್ದಾಣದ ಆವರಣದಲ್ಲಿ ಜಾಲಿ ಗಿಡಗಳು, ಮುಳ್ಳುಕಂಟಿಗಳು ಬೆಳೆದು ನಿಂತಿವೆ, ಎಲ್ಲೆಂದರಲ್ಲಿ ಕಸದ ರಾಶಿಗಳು ಪ್ರಯಾಣಿಕರನ್ನು ಸ್ವಾಗತಿಸುತ್ತಿವೆ. ಫ್ಯಾನ್, ಲೈಟ್‌ಗಳಿಲ್ಲ, ಶೌಚಾಲಯದ ಮೇಲ್ಛಾವಣಿ ಹಾರಿ ಹೋಗಿದೆ, ಒಳಗಡೆ ಕಸಕಡ್ಡಿ, ಜಾಲಿ ಮುಳ್ಳುಗಳು ಬೆಳೆದಿವೆ. ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಾದ ರಾಚಪ್ಪ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಪಟ್ಟಣದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿನನಿತ್ಯ ಬಸ್ ನಿಲ್ದಾಣದ ಮುಂದುಗಡೆ ತಿರುಗಾಡುತ್ತಾರೆ, ಆದರೆ ಬಸ್ ನಿಲ್ದಾಣದ ಒಳಗಡೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಈಗಲಾದರೂ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರು ಮತ್ತು ಸ್ವಚ್ಛತೆ ಒದಗಿಸಬೇಕು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಬೇಕು ಎಂದು ರೈತೋದಯ ಹಸಿರು ಸೇನೆ ಆಗ್ರಹಿಸಿದೆ. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಬಸ್ ನಿಲ್ದಾಣಕ್ಕೆ ಬೀಗ ಜಡಿದು ಹೋರಾಟ ಮಾಡುವುದಾಗಿ ರುದ್ರಾಂಭಿಕ.ಆರ್. ಪಾಟೀಲ್ ಚಟ್ನಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.2
- ಜೇವರ್ಗಿ ತಾಲೂಕಿನ ಮುದಬಾಳ ಬಿ ಗ್ರಾಮದಲ್ಲಿ ಮೊಹರಂನ ಕೊನೆಯ ದಿನದ ಕಾರ್ಯಕ್ರಮವನ್ನು ಹಿಂದೂ ಮತ್ತು ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಹಾಗೂ ಸೌಹಾರ್ದತೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ಭಕ್ತರು ಸೌಹಾರ್ದಯುತವಾಗಿ 'ಅಲಾಯಿ' ಆಡುವುದರ ಮೂಲಕ ಲಾಲ್ ಸಾಹೇಬ್ ಮುತ್ಯಾರ ದಫ್ನ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ನೆರವೇರಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಹುಸೇನಪಟೇಲ ಮಾಲಿಪಟೇಲ, ಅಜೀಜಪಟೇಲ, ರಾಜು ಪೂಜಾರಿ, ಆಜಾದಪಟೇಲ ಮಾಲಿಪಟೇಲ, ಚಂದ್ರಪ್ಪ, ಪರಶುರಾಮ ವಕೀಲರು, ಮಲ್ಲಪ್ಪ, ಸಾಬಣ್ಣ, ಬಸಪ್ಪ ಪೂಜಾರಿ ಮಾರಡಗಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಲಾಲ್ ಸಾಹೇಬ್ ಮುತ್ಯಾರ ಮೊಹರಂನ ಕೊನೆಯ ದಿನದ ಕಾರ್ಯಕ್ರಮವು ಭಕ್ತಿ ಭಾವದಿಂದ ಸಂಪನ್ನಗೊಂಡಿತು.2
- ಕರಜಗಿಯಲ್ಲಿ ಮೊಹರಂ ಹಬ್ಬವನ್ನು ಭಕ್ತಿ ಭಾವದಿಂದ ಸಂಭ್ರಮದಿಂದ ಆಚರಿಸಲಾಯಿತು. ಈ ಆಚರಣೆಯಲ್ಲಿ ದೇವರುಗಳ ಭವ್ಯ ಮೆರವಣಿಗೆ ಮತ್ತು ಅದ್ಭುತ ಕುಣಿತವು ವಿಶೇಷ ಆಕರ್ಷಣೆಯಾಗಿತ್ತು. ಈ ಮೊಹರಂ ಹಬ್ಬವು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಯನ್ನು ಎತ್ತಿಹಿಡಿಯುವ ಮೂಲಕ ಮತ್ತಷ್ಟು ಅರ್ಥಪೂರ್ಣವಾಯಿತು.1
- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಇಂದು ಮೊಹರಂ ಹಬ್ಬವನ್ನು ಆಚರಿಸಲಾಯಿತು. ಗ್ರಾಮದ ಭಕ್ತರು, ಗಣ್ಯರು ಹಾಗೂ ಗ್ರಾಮಸ್ಥರು ಸೇರಿ ಊರಿನ ಎಲ್ಲಾ ಭಾಗದ ಜನರು ಮೊಹರಂ ಹಬ್ಬದ ದಫನ್ ಕಾರ್ಯವನ್ನು ನೆರವೇರಿಸಿದರು.1
- ಸೇಡಂ ತಾಲೂಕಿನಾದ್ಯಂತ ಮೊಹರಂ ಹಬ್ಬವನ್ನು ಅದ್ದೂರಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಈ ಹಬ್ಬದ ಸಂದರ್ಭದಲ್ಲಿ ನಡೆದ ಅಲಾಯಿ ಕುಣಿತವು ಆಚರಣೆಗೆ ಇನ್ನಷ್ಟು ಮೆರುಗು ನೀಡಿತು. ವಿಶೇಷವಾಗಿ, ಯುವಕರು ಪ್ರದರ್ಶಿಸಿದ ನೃತ್ಯವು ಎಲ್ಲರ ಗಮನ ಸೆಳೆಯಿತು.1