ಕುಷ್ಟಗಿ ತಾಯಿ-ಮಕ್ಕಳ ಆಸ್ಪತ್ರೆ: ಆರಂಭವಾಗಿ ಕೇವಲ 15 ದಿನಗಳಲ್ಲೇ ಮೂಲಸೌಕರ್ಯಗಳ ಅವ್ಯವಸ್ಥೆ; ಸಾರ್ವಜನಿಕರ ಆಕ್ರೋಶ ಕುಷ್ಟಗಿ: ಸುಮಾರು ರೂ.27 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯಡಿ ನಿರ್ಮಿಸಲಾದ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಕಾರ್ಯಾರಂಭವಾಗಿ ಕೇವಲ 15 ದಿನಗಳಲ್ಲೇ ಹಲವು ಮೂಲಸೌಕರ್ಯಗಳು ಹಾಳಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸಾ ಸೇವೆಗಳು ಆರಂಭವಾಗಿದ್ದರೂ, ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಅಗತ್ಯವಾದ ಮೂಲಸೌಲಭ್ಯಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಬಿಸಿನೀರು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರು ಮತ್ತು ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಆಸ್ಪತ್ರೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಸೋಲಾರ್ ವಾಟರ್ ಹೀಟರ್‌ನ ಗಾಜಿನ ಟ್ಯೂಬ್‌ಗಳು ಒಡೆದು ನುಚ್ಚುನೂರಾಗಿವೆ. ಕುಡಿಯುವ ನೀರಿನ ಶುದ್ಧೀಕರಣ ಘಟಕದ ಎರಡು ಬಾಗಿಲುಗಳು ಕಿತ್ತುಹೋಗಿದ್ದು, ಒಳಗಿರುವ ಯಂತ್ರೋಪಕರಣಗಳು ಯಾವುದೇ ಭದ್ರತೆಯಿಲ್ಲದೆ ಬಿದ್ದಿರುವುದರಿಂದ ಅವು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಲೈಟ್, ಫ್ಯಾನ್‌ಗಳ ದೋಷ; ಸುರಕ್ಷತೆಗೂ ಪ್ರಶ್ನೆ ಆಸ್ಪತ್ರೆಯ ಹಲವೆಡೆ ಅಳವಡಿಸಿರುವ ಎಲ್‌ಇಡಿ ಟ್ಯೂಬ್‌ಲೈಟ್‌ಗಳು ಜೊತ ಬಿದ್ದುದ್ದು ಕಂಡು ಬಂದಿದೆ,ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಫ್ಯಾನ್‌ಗಳು ಕೂಡ ಚಾಲನೆಯಲ್ಲಿಲ್ಲ. ಮೇಲ್ಚಾವಣಿಯ ಮೇಲಿನ ನೀರಿನ ಪೈಪ್‌ಲೈನ್ ಹಾಗೂ ವಿದ್ಯುತ್ ಸರಬರಾಜು ಪೈಪ್‌ಲೈನ್‌ಗಳು ಸುರಕ್ಷತಾ ಕ್ರಮಗಳಿಲ್ಲದೆ ಹೊರಗಡೆ ತೆರೆದ ಸ್ಥಿತಿಯಲ್ಲಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ವೈದ್ಯರು, ಸಿಬ್ಬಂದಿ ಕೊರತೆ 100 ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ ಅಗತ್ಯ ಸಂಖ್ಯೆಯ ತಜ್ಞ ವೈದ್ಯರು, ನರ್ಸ್‌ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಲಭ್ಯವಿಲ್ಲ. ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆ ಹಾಗೂ ಆಸ್ಪತ್ರೆಯ ಸ್ವಚ್ಛತೆ ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಆಸ್ಪತ್ರೆಯ ಕೆಲ ಭಾಗಗಳಲ್ಲಿ ಈಗಾಗಲೇ ಜೇಡರ ಬಲೆಗಳು ಕಾಣಿಸಿಕೊಂಡಿವೆ. ಕಟ್ಟಡದ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಸ್ ಸೌಲಭ್ಯ ಇಲ್ಲ; ಆಟೋಗಳ ದರ ದಬ್ಬಾಳಿಕೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 2–3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ನೇರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು ಹಾಗೂ ರೋಗಿಗಳು ಆಟೋಗಳನ್ನು ಅವಲಂಬಿಸಬೇಕಾಗಿದ್ದು, ಕೆಲ ಆಟೋ ಚಾಲಕರು ಅಧಿಕ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಕೇಂದ್ರ ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ನೇರ ಬಸ್ ಸೇವೆ ಆರಂಭಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ದಿಕ್ಕು ಸೂಚನಾ ಫಲಕಗಳ ಕೊರತೆ ಆಸ್ಪತ್ರೆಯೊಳಗೆ ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ದಾರಿ ತೋರಿಸುವ ಸೂಚನಾ ಫಲಕಗಳ ಕೊರತೆಯಿಂದ ಗ್ರಾಮೀಣ ಭಾಗಗಳಿಂದ ಬರುವ ರೋಗಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯೊಳಗೆ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಸಂಪರ್ಕ ರಸ್ತೆ ದುಸ್ಥಿತಿ ತಹಶೀಲ್ದಾರ್ ಕಚೇರಿಯಿಂದ ವಣಗೇರಾ ಹಳೆ ರಸ್ತೆ ಮೂಲಕ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಕೆಲವೆಡೆ ವಿದ್ಯುತ್ ಕಂಬಗಳು ರಸ್ತೆಯ ಅಂಚಿನಲ್ಲೇ ಇರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಎರಡು ವಾಹನಗಳು ಎದುರುಬಂದರೆ ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ಭೇಟಿ ಆಗ್ರಹ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯ ನಡುವೆಯೇ ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸಾ ಸೇವೆ ಆರಂಭಿಸಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜೊತೆಗೆ ಕುಡಿಯುವ ನೀರು, ಬಿಸಿನೀರು, ವಿದ್ಯುತ್, ವೈದ್ಯರು, ಸಿಬ್ಬಂದಿ ಹಾಗೂ ಸಾರಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ.ಶಾಸಕ ದೊಡ್ಡನಗೌಡ ಎಚ್. ಪಾಟೀಲ್,"ಆಸ್ಪತ್ರೆಯ ಕಾಮಗಾರಿ ಸಂಪೂರ್ಣವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಂಡ ಬಳಿಕವೇ ಹಸ್ತಾಂತರ ಮಾಡಬೇಕು ಎಂದು ನಾನು ಸೂಚಿಸಿದ್ದೆ. ಆದರೆ ಅದಕ್ಕೂ ಮುನ್ನವೇ ಅವಸರದಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಿ ಕಾರ್ಯಾರಂಭ ಮಾಡಲಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳ ಕೊಪ್ಪಳ ಆಗಮನದ ಹಿನ್ನೆಲೆಯಲ್ಲಿ ಅವರಿಂದ ಉದ್ಘಾಟಿಸುವ ಸಲುವಾಗಿ ಅಧಿಕಾರಿಗಳ ಒತ್ತಡ ಹಾಗೂ ಅವಸರದ ನಿರ್ಧಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಹೇಳಿದರು. "ಆಸ್ಪತ್ರೆಯ ದುರಸ್ತಿ ಕಾಮಗಾರಿ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಲು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಲಾಗುವುದು. ಕಾಮಗಾರಿಯನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣಗೊಳಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಹೇಳಿದರು. ವೈದ್ಯಾಧಿಕಾರಿ ಡಾ. ಚಂದ್ರಕಲಾ ಸ್ಪಷ್ಟನೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರಕಲಾ ಮಾತನಾಡಿ, "ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡವನ್ನು ಗುತ್ತಿಗೆದಾರರು ಅಥವಾ ಇಂಜಿನಿಯರ್‌ಗಳು ಇನ್ನೂ ಅಧಿಕೃತವಾಗಿ ನಮಗೆ ಹಸ್ತಾಂತರ ಮಾಡಿಲ್ಲ. ಕಟ್ಟಡದ ನಕ್ಷೆಯನ್ನು ಮಾತ್ರ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಮೇಲಾಧಿಕಾರಿಗಳ ಒತ್ತಡದಿಂದ ಆಸ್ಪತ್ರೆಯ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ," ಎಂದು ಹೇಳಿದರು. "ಆಸ್ಪತ್ರೆಯ ಮೇಲ್ಭಾಗದಲ್ಲಿರುವ ನೀರು ಶುದ್ಧೀಕರಣ ಘಟಕದ ಬಾಗಿಲುಗಳು ಕಿತ್ತುಹೋಗಿವೆ. ಸೋಲಾರ್ ವಾಟರ್ ಹೀಟರ್‌ನ ಗಾಜುಗಳು ಒಡೆದಿವೆ. ಕೊಠಡಿಗಳ ಬಾಗಿಲುಗಳು, ಲೈಟಿಂಗ್ ವ್ಯವಸ್ಥೆ ಹಾಗೂ ಫ್ಯಾನ್‌ಗಳಲ್ಲಿ ಲೋಪದೋಷಗಳಿದ್ದು, ಕೆಲವು ಫ್ಯಾನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪ್ರಸ್ತುತ ನಾವು ಸ್ವಂತವಾಗಿ ಒಂದು ಫ್ಯಾನ್ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ," ಎಂದು ವಿವರಿಸಿದರು. "ಈ ಎಲ್ಲಾ ಸಮಸ್ಯೆಗಳು ಹಾಗೂ ಅಪೂರ್ಣ ಕಾಮಗಾರಿಯ ಕುರಿತು ಸಂಬಂಧಪಟ್ಟ ಇಂಜಿನಿಯರ್‌ಗೆ ಅಧಿಕೃತವಾಗಿ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು," ಎಂದು ಅವರು ತಿಳಿಸಿದರು.
ಕುಷ್ಟಗಿ ತಾಯಿ-ಮಕ್ಕಳ ಆಸ್ಪತ್ರೆ: ಆರಂಭವಾಗಿ ಕೇವಲ 15 ದಿನಗಳಲ್ಲೇ ಮೂಲಸೌಕರ್ಯಗಳ ಅವ್ಯವಸ್ಥೆ; ಸಾರ್ವಜನಿಕರ ಆಕ್ರೋಶ ಕುಷ್ಟಗಿ: ಸುಮಾರು ರೂ.27 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯಡಿ ನಿರ್ಮಿಸಲಾದ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಕಾರ್ಯಾರಂಭವಾಗಿ ಕೇವಲ 15 ದಿನಗಳಲ್ಲೇ ಹಲವು ಮೂಲಸೌಕರ್ಯಗಳು ಹಾಳಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸಾ ಸೇವೆಗಳು ಆರಂಭವಾಗಿದ್ದರೂ, ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಅಗತ್ಯವಾದ ಮೂಲಸೌಲಭ್ಯಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಬಿಸಿನೀರು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರು ಮತ್ತು ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಆಸ್ಪತ್ರೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಸೋಲಾರ್ ವಾಟರ್ ಹೀಟರ್‌ನ ಗಾಜಿನ ಟ್ಯೂಬ್‌ಗಳು ಒಡೆದು ನುಚ್ಚುನೂರಾಗಿವೆ. ಕುಡಿಯುವ ನೀರಿನ ಶುದ್ಧೀಕರಣ ಘಟಕದ ಎರಡು ಬಾಗಿಲುಗಳು ಕಿತ್ತುಹೋಗಿದ್ದು, ಒಳಗಿರುವ ಯಂತ್ರೋಪಕರಣಗಳು ಯಾವುದೇ ಭದ್ರತೆಯಿಲ್ಲದೆ ಬಿದ್ದಿರುವುದರಿಂದ ಅವು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಲೈಟ್, ಫ್ಯಾನ್‌ಗಳ ದೋಷ; ಸುರಕ್ಷತೆಗೂ ಪ್ರಶ್ನೆ ಆಸ್ಪತ್ರೆಯ ಹಲವೆಡೆ ಅಳವಡಿಸಿರುವ ಎಲ್‌ಇಡಿ ಟ್ಯೂಬ್‌ಲೈಟ್‌ಗಳು ಜೊತ ಬಿದ್ದುದ್ದು ಕಂಡು ಬಂದಿದೆ,ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಫ್ಯಾನ್‌ಗಳು ಕೂಡ ಚಾಲನೆಯಲ್ಲಿಲ್ಲ. ಮೇಲ್ಚಾವಣಿಯ ಮೇಲಿನ ನೀರಿನ
ಪೈಪ್‌ಲೈನ್ ಹಾಗೂ ವಿದ್ಯುತ್ ಸರಬರಾಜು ಪೈಪ್‌ಲೈನ್‌ಗಳು ಸುರಕ್ಷತಾ ಕ್ರಮಗಳಿಲ್ಲದೆ ಹೊರಗಡೆ ತೆರೆದ ಸ್ಥಿತಿಯಲ್ಲಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ವೈದ್ಯರು, ಸಿಬ್ಬಂದಿ ಕೊರತೆ 100 ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ ಅಗತ್ಯ ಸಂಖ್ಯೆಯ ತಜ್ಞ ವೈದ್ಯರು, ನರ್ಸ್‌ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಲಭ್ಯವಿಲ್ಲ. ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆ ಹಾಗೂ ಆಸ್ಪತ್ರೆಯ ಸ್ವಚ್ಛತೆ ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಆಸ್ಪತ್ರೆಯ ಕೆಲ ಭಾಗಗಳಲ್ಲಿ ಈಗಾಗಲೇ ಜೇಡರ ಬಲೆಗಳು ಕಾಣಿಸಿಕೊಂಡಿವೆ. ಕಟ್ಟಡದ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಸ್ ಸೌಲಭ್ಯ ಇಲ್ಲ; ಆಟೋಗಳ ದರ ದಬ್ಬಾಳಿಕೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 2–3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ನೇರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು ಹಾಗೂ ರೋಗಿಗಳು ಆಟೋಗಳನ್ನು ಅವಲಂಬಿಸಬೇಕಾಗಿದ್ದು, ಕೆಲ ಆಟೋ ಚಾಲಕರು ಅಧಿಕ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಕೇಂದ್ರ ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ನೇರ ಬಸ್ ಸೇವೆ ಆರಂಭಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ದಿಕ್ಕು ಸೂಚನಾ ಫಲಕಗಳ ಕೊರತೆ ಆಸ್ಪತ್ರೆಯೊಳಗೆ ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ದಾರಿ ತೋರಿಸುವ ಸೂಚನಾ ಫಲಕಗಳ ಕೊರತೆಯಿಂದ ಗ್ರಾಮೀಣ ಭಾಗಗಳಿಂದ ಬರುವ ರೋಗಿಗಳು
ಹಾಗೂ ಸಾರ್ವಜನಿಕರು ಆಸ್ಪತ್ರೆಯೊಳಗೆ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಸಂಪರ್ಕ ರಸ್ತೆ ದುಸ್ಥಿತಿ ತಹಶೀಲ್ದಾರ್ ಕಚೇರಿಯಿಂದ ವಣಗೇರಾ ಹಳೆ ರಸ್ತೆ ಮೂಲಕ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಕೆಲವೆಡೆ ವಿದ್ಯುತ್ ಕಂಬಗಳು ರಸ್ತೆಯ ಅಂಚಿನಲ್ಲೇ ಇರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಎರಡು ವಾಹನಗಳು ಎದುರುಬಂದರೆ ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ಭೇಟಿ ಆಗ್ರಹ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯ ನಡುವೆಯೇ ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸಾ ಸೇವೆ ಆರಂಭಿಸಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜೊತೆಗೆ ಕುಡಿಯುವ ನೀರು, ಬಿಸಿನೀರು, ವಿದ್ಯುತ್, ವೈದ್ಯರು, ಸಿಬ್ಬಂದಿ ಹಾಗೂ ಸಾರಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ.ಶಾಸಕ ದೊಡ್ಡನಗೌಡ ಎಚ್. ಪಾಟೀಲ್,"ಆಸ್ಪತ್ರೆಯ ಕಾಮಗಾರಿ ಸಂಪೂರ್ಣವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಂಡ ಬಳಿಕವೇ ಹಸ್ತಾಂತರ ಮಾಡಬೇಕು ಎಂದು ನಾನು ಸೂಚಿಸಿದ್ದೆ. ಆದರೆ ಅದಕ್ಕೂ ಮುನ್ನವೇ ಅವಸರದಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಿ ಕಾರ್ಯಾರಂಭ ಮಾಡಲಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳ ಕೊಪ್ಪಳ
ಆಗಮನದ ಹಿನ್ನೆಲೆಯಲ್ಲಿ ಅವರಿಂದ ಉದ್ಘಾಟಿಸುವ ಸಲುವಾಗಿ ಅಧಿಕಾರಿಗಳ ಒತ್ತಡ ಹಾಗೂ ಅವಸರದ ನಿರ್ಧಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಹೇಳಿದರು. "ಆಸ್ಪತ್ರೆಯ ದುರಸ್ತಿ ಕಾಮಗಾರಿ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಲು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಲಾಗುವುದು. ಕಾಮಗಾರಿಯನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣಗೊಳಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಹೇಳಿದರು. ವೈದ್ಯಾಧಿಕಾರಿ ಡಾ. ಚಂದ್ರಕಲಾ ಸ್ಪಷ್ಟನೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರಕಲಾ ಮಾತನಾಡಿ, "ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡವನ್ನು ಗುತ್ತಿಗೆದಾರರು ಅಥವಾ ಇಂಜಿನಿಯರ್‌ಗಳು ಇನ್ನೂ ಅಧಿಕೃತವಾಗಿ ನಮಗೆ ಹಸ್ತಾಂತರ ಮಾಡಿಲ್ಲ. ಕಟ್ಟಡದ ನಕ್ಷೆಯನ್ನು ಮಾತ್ರ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಮೇಲಾಧಿಕಾರಿಗಳ ಒತ್ತಡದಿಂದ ಆಸ್ಪತ್ರೆಯ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ," ಎಂದು ಹೇಳಿದರು. "ಆಸ್ಪತ್ರೆಯ ಮೇಲ್ಭಾಗದಲ್ಲಿರುವ ನೀರು ಶುದ್ಧೀಕರಣ ಘಟಕದ ಬಾಗಿಲುಗಳು ಕಿತ್ತುಹೋಗಿವೆ. ಸೋಲಾರ್ ವಾಟರ್ ಹೀಟರ್‌ನ ಗಾಜುಗಳು ಒಡೆದಿವೆ. ಕೊಠಡಿಗಳ ಬಾಗಿಲುಗಳು, ಲೈಟಿಂಗ್ ವ್ಯವಸ್ಥೆ ಹಾಗೂ ಫ್ಯಾನ್‌ಗಳಲ್ಲಿ ಲೋಪದೋಷಗಳಿದ್ದು, ಕೆಲವು ಫ್ಯಾನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪ್ರಸ್ತುತ ನಾವು ಸ್ವಂತವಾಗಿ ಒಂದು ಫ್ಯಾನ್ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ," ಎಂದು ವಿವರಿಸಿದರು. "ಈ ಎಲ್ಲಾ ಸಮಸ್ಯೆಗಳು ಹಾಗೂ ಅಪೂರ್ಣ ಕಾಮಗಾರಿಯ ಕುರಿತು ಸಂಬಂಧಪಟ್ಟ ಇಂಜಿನಿಯರ್‌ಗೆ ಅಧಿಕೃತವಾಗಿ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು," ಎಂದು ಅವರು ತಿಳಿಸಿದರು.
- . ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. #SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ #naturephotography #naturelovers #earthfocus #mothernature Lush greenery," "indoor plant care," "botanical garden near me," "low-light indoor plants" ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. #GoogleMaps #Riya #ಚೇತನಾ #mcom #chetan #cmkarnataka #chethana_muniswamygowda #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. #ಪಕ್ಷಿಗಳು #ಹಣ್ಣುಗಳು #ಕೀಟಗಳು #ಪರಿಸರಸಮತೋಲನ #ಜೀವವೈವಿಧ್ಯ ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು . ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. #SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ #naturephotography #naturelovers #earthfocus #mothernature Lush greenery," "indoor plant care," "botanical garden near me," "low-light indoor plants" ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. #GoogleMaps #Riya #ಚೇತನಾ #mcom #chetan #cmkarnataka #chethana_muniswamygowda #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. #ಪಕ್ಷಿಗಳು #ಹಣ್ಣುಗಳು #ಕೀಟಗಳು #ಪರಿಸರಸಮತೋಲನ #ಜೀವವೈವಿಧ್ಯ ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು4
- ಯಡಹಳ್ಳಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್, ಲೇಖನಿ ವಿತರಣೆ ಬೀಳಗಿ: ತಾಲೂಕಿನ ಯಡಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸಮಾಜಸೇವಕ ಉಮೇಶ್ ಚೆನ್ನಿ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಿದರು,ನವಚೇತನ ಚಾರಿಟೇಬಲ್ ಟ್ರಸ್ಟ್ ಪಾರ್ ಡಿಸೆಬಲ್ಡಸ್ (ರಿ)ರಾಮನಗರ (ಬೆಂಗಳೂರು) ಶ್ರೀ ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಂಘ(ರಿ) ಅನಗವಾಡಿ (ಬೀಳಗಿ) ಇವರ ಸಂಯೋಗದಲ್ಲಿ ನಡೆದು ಕಾರ್ಯಕ್ರಮ.ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.4
- ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಬೀಳಗಿ-ಯಡಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಉಚಿತ ನೋಟ್‌ಬುಕ್ ಹಾಗೂ ಲೇಖನಿ ವಿತರಣೆ : ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಬೀಳಗಿ ತಾಲೂಕಿನ ಯಡಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ್ (ರಿ), ರಾಮನಗರ (ಬೆಂಗಳೂರು) ಹಾಗೂ ಶ್ರೀ ಬಸವೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಅನಗವಾಡಿ (ಬೀಳಗಿ) ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಅಶೋಕ್ ಹನಮರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸದಾಶಿವ ನಂದಗಾವಿ, ದೊಡ್ಡಣ್ಣ ದೇಸಾಯಿ, ಜಿತೇಂದ್ರ ಪಾಟೀಲ್, ಚಾಂದ್ ಸಾಬ್ ವಿರೋಜಿ, ಮೌಲಾಸಾಬ್ ಜೈನಾಪುರ ಹಾಗೂ ತಾಲೂಕು ವಿಕಲಚೇತನರ ಸಂಸ್ಥೆಯ ಮಾರ್ಗದರ್ಶಕರಾದ ಭೀಮಸಿ ದೇವನಾಳ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಸವೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಉಮೇಶ್ ಎಂ. ಚನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ, "ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು. ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವೂ ಅಗತ್ಯ. ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ನೋಟ್‌ಬುಕ್‌ಗಳ ಮೇಲೆ ಮಹನೀಯರು ಹಾಗೂ ಇತಿಹಾಸಕಾರರ ಭಾವಚಿತ್ರ ಮತ್ತು ಅವರ ಪರಿಚಯವಿರುವುದರಿಂದ ಮಕ್ಕಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವ್ಯಸನಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು," ಎಂದು ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಲಾಯಿತು. ಶಿಕ್ಷಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಹ ಶಿಕ್ಷಕರಾದ ಆನಂದ ಬಿರಾದಾರ್ ಸ್ವಾಗತಿಸಿದರು. ಜಗದೀಶ ಮುಚ್ಛಂಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.4
- ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತೆ ಸಭೆ ಕೂಡ್ಲಿಗಿ: ಆಗಷ್ಟ-15ರಂದು ನಡೆಯುವ 80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳು ಹಾಗೂ ಸ್ವಾತಂತ್ರ್ಯೋತ್ಸವ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆ ಇಲ್ಲಿನ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶನಿವಾರ ನಡೆಯಿತು. ಆಚರಣೆ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ವಿ.ಕೆ ನೇತ್ರಾವತಿ ಮಾತನಾಡಿ, 80ನೇ ಸ್ವಾತಂತ್ರ್ಯ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನ ಮಾಡುವ ಮುಖೇನ ಅವರಿಗೆ ಗೌರವ ಸಲ್ಲಿಸೋಣ. ಪ್ರೌಢಶಾಲಾ ಹಾಗೂ ಕಾಲೇಜು ಮಟ್ಟದ ವಿಧ್ಯಾರ್ಥಿಗಳಿಗೆ ದೇಶ ಭಕ್ತಿ ಹುಟ್ಟಿಸುವ ಹಾಗೂ ದೇಶದ ಪ್ರಗತಿ ವಿಷಯವಾಗಿ ಭಾಷಣ ಹಾಗೂ ಪ್ರಭಂದ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುವ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು. ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಮೊದಲು ಪುಷ್ಪ ನಮನ ಸಲ್ಲಿಸಿ ನಂತರ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುವುದು. ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ಮಕ್ಕಳಿಂದ ಧ್ವಜಾ ವಂದನೆ ಕಾರ್ಯಕ್ರಮ, ಆಯ್ದಾ ಹತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಶಾಲಾ ಮಕ್ಕಳಿಂದ ಪ್ರಭಾತ್ ಪೇರಿ ನಡೆಸಲಿದ್ದು ಸುಗಮ ಸಂಚಾರಕ್ಕೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಇಒ ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಪಿಎಸ್ಐ ಪ್ರಕಾಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಮುಖಂಡರಾದ ಹಿರೇಕುಂಬಳಗುಂಟೆ ಉಮೇಶ್, ಕೋಗಳಿ ಮಂಜುನಾಥ, ಗುನ್ನಳ್ಳಿ ರಾಘವೇಂದ್ರ, ಕಾಟೇರ ಹಾಲೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.1
- ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಅನುಚಿತವರ್ತನೆ ವಿದ್ಯಾರ್ಥಿಗಳ ಪ್ರತಿಭಟನೆ1
- ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.3
- ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ವಿರೋಧಿಸಿ ಪ್ರತಿಭಟನೆ1
- " ಪಕ್ಷ ನಮ್ಮೆಲ್ಲರ ತಾಯಿ " ನಾವೆಲ್ಲರೂ ಸಹೋದರರು , ಹಿರಿಯ ಸಹೋದರರ ಮಾರ್ಗದರ್ಶನದಂತೆ ನಾವೆಲ್ಲರೂ ಮುನ್ನಡೆಯೋಣ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ -ವಿಜಯನಗರ ಜಿಲ್ಲೆ ಕೂಡ್ಲಿಗಿ *" ಪಕ್ಷ ನಮ್ಮೆಲ್ಲರ ತಾಯಿ " ನಾವೆಲ್ಲರೂ ಸಹೋದರರು , ಹಿರಿಯ ಸಹೋದರರ ಮಾರ್ಗದರ್ಶನದಂತೆ ನಾವೆಲ್ಲರೂ ಮುನ್ನಡೆಯೋಣ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*-ವಿಜಯನಗರ ಜಿಲ್ಲೆ ಕೂಡ್ಲಿಗಿ : " ಕಾಂಗ್ರೆಸ್ ಪಕ್ಷ ನಮ್ಮೆಲ್ಲರ ತಾಯಿ " , ನಾವೆಲ್ಲರೂ ಸಹೋದರರು. ಪಕ್ಷದ ಹಿರಿಯ ಸಹೋದರರ ಮಾರ್ಗದರ್ಶನದಂತೆ , ಸಂಘಟನೆ ಮಾಡಿ ಪಕ್ಷವನ್ನು ಬಲ ಪಡಿಸೋಣ ಎಂದು. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ ಸಂಘಟನೆಗಾಗಿ ಆಯೋಜಿಸಲಾಗಿದ್ದ. ಸಂಘಟನೆ ಸೃಜನ ಅಭಿಯಾನದಲ್ಲಿ , ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು. ಟಿಪಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಹಾ ಸಮಿತಿಯ ಹಿರಿಯರು. ವೀಕ್ಷಕರಾದ ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ಹಾಗೂ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷರಾದ , ಶಿರಾಜ್ ಶೇಖ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗ: ತಾಲೂಕಿನ ನಗರಗುಂಡ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಇದೀಗ ದೇವದುರ್ಗ ಪಟ್ಟಣದ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಗುಡ್ಡ ಪ್ರದೇಶದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಚಿರತೆಗಳ ಓಡಾಟದ ಕುರಿತು ವರದಿಯಾಗುತ್ತಿದ್ದು, ಇದೀಗ ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಚಲನವಲನ ಹಾಗೂ ಜಾಡು ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಮೂಲಕ ನಿಗಾ ವಹಿಸುತ್ತಿದ್ದು, ಗುಡ್ಡ ಪ್ರದೇಶದಲ್ಲಿ ಚಿರತೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ತಾಲೂಕಿನ ವಿವಿಧೆಡೆ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ವಲಸೆ ಬಂದಿರುವ ಚಿರತೆಗಳಾಗಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಗುಡ್ಡ ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಚಿರತೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ತೆರಳದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.2