ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕೃತಕ ನೆರೆ: ಜನಜೀವನ ಅಸ್ತವ್ಯಸ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸತತವಾಗಿ ಮಳೆ ಸುರಿತಾ ಇದೆ. ಬಂಟ್ವಾಳ, ಸುಳ್ಯ, ಪುತ್ತೂರು ತಾಲೂಕಿನಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಬೆಳ್ತಂಗಡಿ ತಾಲೂಕಿನಾದ್ಯಂತ ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದ್ದು, ಧರ್ಮಸ್ಥಳದಲ್ಲಿ ನೇತ್ರಾವತಿ ಸೇರಿದಂತೆ ತಾಲೂಕಿನಲ್ಲಿ ಹರಿಯುವ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಬೆಳ್ತಂಗಡಿ-ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ಸ್ಥಳೀಯ ನದಿಯ ನೀರಿನ ನೆರೆ ಪರಿಣಾಮ ರಸ್ತೆಗೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನೆರಿಯಾ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ನಷ್ಟ ಉಂಟಾಗಿದೆ. ಬಹುತೇಕ ಕಿಂಡಿ ಅಣೆಕಟ್ಟುಗಳ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಸಂಪರ್ಕಗಳು ಕಡಿತಗೊಂಡಿವೆ.ತಾಲೂಕಿನ ಕೆಲವೆಡೆ ಮುಖ್ಯ ರಸ್ತೆ ಪ್ರದೇಶದ ಹಳ್ಳ-ಕೊಳ್ಳ, ಚರಂಡಿಗಳು ತುಂಬಿ ಹರಿಯುತ್ತಿದ್ದು, ನಾವೂರು ಪೇಟೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ. ಮುಂಡಾಜೆ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದು, ನದಿ, ತೋಡುಗಳು ತುಂಬಿ ಹರಿದು ಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು, ಕೆಲ ಮನೆಗಳಿಗೂ ನೀರು ನುಗ್ಗಿದೆ. ತೋಟಗಳು ಜಲಾವೃತವಾಗಿದ್ದು, ಕೃಷಿಕರು ಕೃಷಿ ಹಾನಿ ಭೀತಿಯಲ್ಲಿದ್ದಾರೆ. ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿದ್ದು, ನದಿಯಂತೆ ಹರಿಯುತ್ತಿದೆ.

- ವಿಶ್ವಕಪ್ ಕಬಡ್ಡಿ ಚಾಂಪಿಯನ್ ಸುರತ್ಕಲ್ ನ ಧನಲಕ್ಷ್ಮೀ ಪೂಜಾರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ವಿಶ್ವಕಪ್ ಕಬಡ್ಡಿ ಚಾಂಪಿಯನ್ ನಮ್ಮ ಸುರತ್ಕಲ್‌ನ ಹೆಮ್ಮೆಯ ಪುತ್ರಿ ಕು. ಧನಲಕ್ಷ್ಮೀ ಪೂಜಾರಿ ಅವರಿಗೆ ಗುಜರಾತ್‌ನ ಅಹಮದಾಬಾದ್‌ನ ಆದಾಯ ತೆರಿಗೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ದೊರೆತಿರುವುದು ಸಂತಸದ ಹಾಗೂ ಹೆಮ್ಮೆಯ ವಿಷಯ. ಈ ಅವಕಾಶಕ್ಕೆ ಸಹಕರಿಸಿದ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ, ಇಲಾಖೆಯ ಅಧಿಕಾರಿಗಳಿಗೆ ಹಾಗೂ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.1
- ಸಂಪಾಜೆ ಸಮೀಪ ಕರ್ತೋಕಜಿಯಲ್ಲಿ ಹೆದ್ದಾರಿಗೆ ಉರುಳಿದ ಬಂಡೆ, ಸಂಚಾರ ವ್ಯತ್ಯಯ ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕರ್ತೋಜಿ ಬಳಿ ರಸ್ತೆಗೆ ಬಂದೆ ಉರುಳಿದ್ದು ವಾಹನ ಸವಾರರು ಎಚ್ಚರದಿಂದ ಸಂಚರಿಸುವಂತೆ ಕೋರಲಾಗಿದೆ.1
- ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ಸೊರಬ: ದೇಶಕ್ಕೆ ಅನ್ನ ನೀಡುವ ರೈತ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಆದರೆ ಈ ವರ್ಷ ಮಳೆಯ ಕೊರತೆಯಿಂದ ರೈತ ಆತಂಕ ಪಡುವಂತಾಗಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಗೂ ನಾಟಿ ಮಾಡುವ ಮಹಿಳೆಯರಿಗೆ ಹಲವು ಸಲಕರಣೆ ನೀಡಲಾಗಿದೆ ಎಂದು ದಂತ ವೈದ್ಯ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್ ಎಚ್.ಈ. ಹೇಳಿದರು. ತಾಲೂಕಿನ ಕೊಡಕಣಿಯ ವೀರಭದ್ರಪ್ಪ ಗೌಡರ ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ರೋಟರಿ ವತಿಯಿಂದ ಹಲವು ವಸ್ತುಗಳನ್ನು ನೀಡಿ ಅವರೊಂದಿಗೆ ನಾಟಿ ಮಾಡುವ ಮೂಲಕ ಅವರು ಮಾತನಾಡಿದರು. ರೈತ ಇಂದು ಸಂಕಷ್ಟ ಅನುಭವಿಸು ವಂತಾಗಿದೆ. ರೈತರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್ ಕೊಡಕಣಿ ಮಾತನಾಡಿ, ರೋಟರಿ ಸಂಸ್ಥೆ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇನ್ನು ಮುಂದೆ ಯೂ ಇದೇ ರೀತಿ ರೈತಸ್ನೇಹಿಯಾಗಿ ಕಾರ್ಯಕ್ರಮ ಮಾಡುತ್ತದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಾಲತೇಶ್ ಕೊಡಕಣಿ, ಕಾರ್ಯದರ್ಶಿ ಪ್ರಕಾಶ್ ಬಿಳವಗೋಡು, ಡಾ। ನಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ರೋಟರಿ ಮಾಜಿ ಅಧ್ಯಕ್ಷರಾದ ಸಂತೋಷ್, ವೀರಭದ್ರಪ್ಪ ಗೌಡ, ಪರಶುರಾಮ್, ಹಾಲಮ್ಮ, ಶೃತಿ, ಪದ್ಮಾ, ಜಯಮ್ಮ, ಅನ್ನಪೂರ್ಣ, ಶಿಲ್ಪಾ ಕುಮಾರ್ ಮೊದಲಾದವರಿದ್ದರು1
- ಶ್ರೀ ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆಯನ್ನು ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಚರಿಸಲಾಯಿತು ತುರುವೇಕೆರೆ: ಶ್ರೀ ಶ್ರೀ ಶ್ರೀ ಡಾ // ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆ ವೈಭವದಿಂದ ಆಚರಣೆ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಶ್ರೀ ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆಯನ್ನು ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣದ ಖ್ಯಾತ ಹಿರಿಯ ವೈದ್ಯ ಡಾ. ಎ. ನಾಗರಾಜ್ ಅವರು ಮಾತನಾಡಿ, ಮಕ್ಕಳು ಹಾಗೂ ಯುವಕರಲ್ಲಿ ಮಾದಕ ವ್ಯಸನದ ಬೆಳವಣಿಗೆ, ಅದರ ಆರೋಗ್ಯದ ಮೇಲಾಗುವ ಪರಿಣಾಮಗಳು ಮತ್ತು ಕುಟುಂಬ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಮಕ್ಕಳು ಮಾದಕ ವ್ಯಸನದ ಬಲೆಗೆ ಬೀಳುವ ಮೊದಲೇ ತಡೆಯುವುದು ಹೇಗೆ, ಪೋಷಕರು ಮತ್ತು ಶಿಕ್ಷಕರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸಿದರು. ಉಪನ್ಯಾಸಕ ವಿಜಯಕುಮಾರ್ ಅವರು ಮಾದಕ ವ್ಯಸನದಿಂದ ಯುವ ಸಮೂಹಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗೆಳೆಯನಂತೆ ತಿಳಿಸಿಕೊಟ್ಟರು. ವ್ಯಸನದಿಂದ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಹಾಳಾಗುತ್ತದೆ, ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ, ಮತ್ತು ವ್ಯಸನದಿಂದ ದೂರವಿರಲು ಯುವಕರು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟರು. ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಆಡಳಿತ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳ ಸಮನ್ವಯದ ಅಗತ್ಯವನ್ನು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ವ್ಯಸನ ಮುಕ್ತಿಯ ಸಂದೇಶಕ್ಕೆ ಬೆಂಬಲ ಸೂಚಿಸಿದರು. ಈ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಇ ಓ ಅನಂತರಾಜು, ಗ್ರೇಡ್( 2) ತಹಶೀಲ್ದಾರ್ ಸುನಿಲ್, ಬಿಇಒ ಸೋಮಶೇಖರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಾಪಣ್ಣ, ಸಮಾಜ ಕಲ್ಯಾಣ ಇಲಾಖೆಯ ವರ್ಷಿಣಿ, ತಾಲೋಕು ಚುನಾವಣಾ ಶಾಖೆಯ ಶಿರಸ್ತೆದಾರ್ ರಂಗಸ್ವಾಮಿ, ಆರ್ ಆರ್ ಟಿ ಶಾಖೆಯ ಶ್ರೀನಿವಾಸ್, ವತ್ಸಲ, ಬಿ ಆರ್ ಸಿ ಸುರೇಶ್,ಉಪನ್ಯಾಸಕ ಡಾ, ಚಂದ್ರಯ್ಯ,ಆರೋಗ್ಯ ಇಲಾಖೆಯ ಸದಾಶಿವಯ್ಯ ಆಶಾ ಕಾರ್ಯಕರ್ತೆಯರು ಶಾಲಾ-ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರು ಭಾಗವಹಿಸಿದ್ದರು.4
- ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ4
- ಹಾನಗಲ್. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಶಡಗರವಳ್ಳಿ ನೂತನವಾಗಿ ಆಯ್ಕೆ. 3 ವರ್ಷಗಳ ಅವಧಿಗೆ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಒಟ್ಟು 20 ಜನ ಸದಸ್ಯರನ್ನೋಳಗೊಂಡ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಇದಾಗಿದ್ದು, ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು1
- All About,Anyone when if question them for Transparency they will Anytime Speak Contridectary Statements and blaming the Residents *ಭಾರತ ನಲ್ಲಿ ವೈರಲ್*1
- ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ದಿನಾಂಕ: 23.06.2025 ರಂದು ಅಪ್ರಾಪ್ತ ಪ್ರಾಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ : 79/2025, ಕಲಂ: 11, 12 ಪೋಕ್ಸೋ ಆಕ್ಟ್ -2012 & ಕಲಂ : 75(i) (ii), 79 BNS-2023 ಪ್ರಕರಣದಲ್ಲಿ, ತನಿಖೆ ನಡೆಸಿದ ಪ್ರಕರಣದ ಅಂದಿನ ತನಿಖಾಧಿಕಾರಿಗಳಾದ ಕೀರಪ್ಪ ಘಟಕಾಂಬಳೆ, ಪಿಎಸ್ಐ ರವರು ಹಾಗೂ ಕೃಷ್ಣಕಾಂತ ಪಾಟೀಲ್ ಪಿ.ಎಸ್.ಐ ರವರು, ಪ್ರಕರಣದ ಆರೋಪಿತನಾದ ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ಎಂಬಾತನ ವಿರುದ್ಧ ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ, ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಮಾನ್ಯ FTSC-I, ಮಂಗಳೂರು ನ್ಯಾಯಾಲಯದಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ರವರು ಆರೋಪಿಗೆ ದಿನಾಂಕ 31.07.2026 ರಂದು ಶಿಕ್ಷೆ ಪ್ರಮಾಣ ಘೋಷಿಸಿದ್ದಾರೆ.1