Shuru
Apke Nagar Ki App…
ಅಣ್ಣ ತಂಗಿ ಸಾಮಾಜಿಕ ನಾಟಕ ಉದ್ಘಾಟನೆಯಲ್ಲಿ ವಿವಿಧ ಪಕ್ಷದ ಮುಖಂಡರು ಮಾಜಿ MLA ರಾಮಣ್ಣ ಲಮಾಣಿ ರಾಮಕೃಷ್ಣ್ಹ ದೊಡ್ಡಮನಿ ಹಾಗೂ ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷರು ಡಾಕ್ಟರ್ ಕುಮಾರಸ್ವಾಮಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
Udachappa tigari
ಅಣ್ಣ ತಂಗಿ ಸಾಮಾಜಿಕ ನಾಟಕ ಉದ್ಘಾಟನೆಯಲ್ಲಿ ವಿವಿಧ ಪಕ್ಷದ ಮುಖಂಡರು ಮಾಜಿ MLA ರಾಮಣ್ಣ ಲಮಾಣಿ ರಾಮಕೃಷ್ಣ್ಹ ದೊಡ್ಡಮನಿ ಹಾಗೂ ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷರು ಡಾಕ್ಟರ್ ಕುಮಾರಸ್ವಾಮಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
More news from Karnataka and nearby areas
- "ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ." ಆಯ್ಕೆ 3 (ಜನಹಿತ ವರದಿಗಾಗಿ): "ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ, ನಾಡಿನ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ನಮ್ಮೊಂದಿಗೆ ಇರಿ." ಸಂಕ್ಷಿಪ್ತ ಸಾರಾಂಶ: ಮೊದಲನೆಯದು: ನಿಖರ ಮಾಹಿತಿ ಮತ್ತು ಸಮಾಜದ ಸುಧಾರಣೆಯ ವರದಿಗಳ ಬಗ್ಗೆ ತಿಳಿಸುತ್ತದೆ. ವೀಡಿಯೊವನ್ನು ಪೂರ್ತಿ ನೋಡಲು ಮತ್ತು ಹಂಚಿಕೊಳ್ಳಲು ವಿನಂತಿಸುತ್ತದೆ1
- ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞ ಪ್ರೊ.ಅಚ್ಯುತ ಸಾಮಂತ, ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ಸ್ಥಾಪಕ ಜಿತೇಂದ್ರ ಮಜೆಥಿಯಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇಸ್ರೋದ ನಿಕಟ ಪೂರ್ವ ಅಧ್ಯಕ್ಷರಾದ ಪ್ರೊ. ಎ.ಎಸ್.ಕಿರಣ ಕುಮಾರ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ ಖಾನ್ ಸೇರಿದಂತೆ ಇತರರಿದ್ದರು.1
- ಜಗಳೂರು: ಮಲ್ಪೆ-ಮೊಳಕಾಲ್ಮೂರು ಹೆದ್ದಾರಿಯ, ಮೆದಿಗಿನಕೆರೆ ಅಂಬೇಡ್ಕರ್ ವಸತಿ ಶಾಲೆಯ ಸಮೀಪ ಎರಡು ಬೈಕ್ ಮುಖಾ ಮುಖಿ ಡಿಕ್ಕಿ, ಎರಡು ಬೈಕ್ ನ ಸವಾರರು ಗಾಯ. *ಜಗಳೂರು ವಿಧಾನಸಭಾ ಕ್ಷೇತ್ರ.* *ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ ಶ್ರೀ ಬಿ.ದೇವೇಂದ್ರಪ್ಪ ರವರು ಖಾಸಗಿ ಕಾರ್ಯಕ್ರಮಗಳ ಪ್ರಯುಕ್ತ ಜಗಳೂರಿನಿಂದ ದಾವಣಗೆರೆಗೆ ತೆರಳುತ್ತಿರುವ ಮಾರ್ಗ ಮಧ್ಯೆ ಮೆದಗಿನಕೆರೆ ಕ್ರಾಸ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ವಿಪರೀತವಾಗಿ ಪೆಟ್ಟು ಬಿದ್ದ ಗಾಯಾಳುಗಳನ್ನು ಮಾನ್ಯ ಶಾಸಕರು ತಮ್ಮ ಸ್ವಂತ ವಾಹನದಲ್ಲಿ ಗಾಯಾಳುಗಳಾದ ಹಿರೇಅರಕೆರೆ ಗ್ರಾಮದ ಚನ್ನಪ್ಪ, ಹಾಗೂ ಖಾನಹೊಸಹಳ್ಳಿ ಹತ್ತಿರದ ಹಾಲೂರು ಗ್ರಾಮದ ಗೋವಿಂದಮ್ಮ ಹಾಗೂ ಪ್ರದೀಪ್ ಇವರನ್ನು ಜಗಳೂರು ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆಯ ನೆರವಿಗಾಗಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.*2
- ಬಾಗಲಕೋಟೆ:625ಕ್ಕೆ 621 ಅಂಕಗಳಿಸಿದ ಬಾಗಲಕೋಟೆಯ ಸಮೃದ್ಧಿ ಗುರುಕುಲ ಶಾಲೆಯ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ಅದ್ಭುತ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು. ಶಾಲೆಯ ಶಿಕ್ಷಕರು ವಿದ್ಯಾರ್ಥಿಯ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಶಿಸ್ತುಬದ್ಧ ಜೀವನ ಶೈಲಿಯೇ ಈ ಯಶಸ್ಸಿನ ಗುಟ್ಟು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರು, ತಮ್ಮ ಯಶಸ್ಸಿಗೆ ತಂದೆ-ತಾಯಿ ಹಾಗೂ ಗುರುಗಳ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲು ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಮೂಡಿಸಿದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ.1
- ಬಳ್ಳಾರಿ ನಗರದ ಹವಾಂಭಾವಿ ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ ⚠️ ಬಿಳಿ ಬಣ್ಣದ ಟೊಯೋಟಾ ಇನೋವಾ ಕ್ರಿಸ್ಟಾ (KA34 P 5446) ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರನ ಮುಖ ಹಾಗೂ ಕಣ್ಣಿನ ಭಾಗದಲ್ಲಿ ಗಾಯಗಳಾಗಿವೆ 😢 👉 ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ 👉 ಹೆಡ್‌ಲೈಟ್, ಬಂಪರ್ ತುಂಡಾಗಿ ರಸ್ತೆಗೆ ಬಿದ್ದಿವೆ ಅಪಘಾತದ ಬಳಿಕ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರ ನಡುವೆ ವಾಗ್ವಾದವೂ ನಡೆದಿದೆ. ಘಟನೆಯ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.1
- ಇಂದು ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶ ಲಭ್ಯವಾಗಿದ್ದು.. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ : ಕಳೆದ ಬಾರಿಗಿಂತ ಶೇ.21.8 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.92.25 ರಷ್ಟು ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು 21,054 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, ಈ ಪೈಕಿ 19,423 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ದಿನವೇ 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಅಯಾನ್ ಬೇಗ್ ಎಂಬ ವಿದ್ಯಾರ್ಥಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಎಂದು ಪೊಲೀಸರು ತಿಳಿಸಿದ್ದಾರೆ .ಘಟನೆಯ ಮುನ್ನ ತಂಗಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾನೆ ಎಂಬ ಮಾಹಿತಿ ಸಹ ಲಭ್ಯವಾಗಿದೆ. ಚಿತ್ರದುರ್ಗದ ಹೊರಪೇಟೆ ನಿವಾಸಿಯಾಗಿದ್ದ ಅಯಾನ್, ಕೆಲವು ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣವಾದ Instagram ನಲ್ಲಿ ಆತಂಕ ಹುಟ್ಟಿಸುವ ರೀತಿಯ ಸ್ಟೇಟಸ್ ಹಾಕಿದ್ದನು.. ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಹೃದಯ ಕಲುಕುವಂತಿದೆ. ಪ್ರಾಥಮಿಕ ಮಾಹಿತಿಯಂತೆ, ವಿದ್ಯಾರ್ಥಿಗೆ ಸುಮಾರು 70% ಅಂಕಗಳು ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಕಾರಣಗಳ ಬಗ್ಗೆ ಕುಟುಂಬಸ್ಥರು ಅಥವಾ ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫಲಿತಾಂಶದ ಒತ್ತಡ, ವೈಯಕ್ತಿಕ ಸಮಸ್ಯೆಗಳು ಅಥವಾ ಇತರೆ ಕಾರಣಗಳು ಈ ಘಟನೆಗೆ ಕಾರಣವಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತಜ್ಞರ ಅಭಿಪ್ರಾಯದಂತೆ, ಪರೀಕ್ಷಾ ಫಲಿತಾಂಶದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಮಾರ್ಗದರ್ಶನ ಅತ್ಯಂತ ಅಗತ್ಯ. ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ನಿರಂತರವಾಗಿ ಮಾತನಾಡಿ, ಒತ್ತಡವನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು ಎಂಬ ಸಲಹೆ1
- *ಬಡತನದ ನಡುವೆಯೂ ಅರಳಿದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಮನೆಗೆ ಶಿಕ್ಷಣಾಧಿಕಾರಿಗಳ ಭೇಟಿ, ಉನ್ನತ ವ್ಯಾಸಂಗದ ಜವಾಬ್ದಾರಿ* ಬಡತನವು ಪ್ರತಿಭೆಗೆ ಅಡ್ಡಿಯಾಗಬಾರದು ಎನ್ನುವುದಕ್ಕೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಈ ಘಟನೆ ಸಾಕ್ಷಿಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣವೇ ಬೇಡವೆಂದು ನಿರ್ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈಕೆಯ ಬೆನ್ನೆಲುಬಾಗಿ ನಿಂತಿರುವ ಶಿಕ್ಷಣಾಧಿಕಾರಿಗಳ ತಂಡ, ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಮುಂದಿನ ವ್ಯಾಸಂಗದ ಭರವಸೆ ನೀಡಿದೆ. ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಇಂದು ಇಡೀ ಗ್ರಾಮಕ್ಕೆ ಹೆಮ್ಮೆಯಾಗಿದ್ದಾಳೆ. ಬರದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದಲೇ ದೂರ ಉಳಿಯಲು ನಿರ್ಧರಿಸಿದ್ದಳು. ಆದರೆ ಕ್ಷೇತ್ರ ಶಿಕ್ಷೆಣಾಧಿಕಾರಿಗಳ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಪರೀಕ್ಷೆ ಎದುರಿಸಿದ ಪಲ್ಲವಿ, ಇಂದು 73.47% ಅಂಕಗಳನ್ನು ಪಡೆಯುವ ಮೂಲಕ "ಛಲವಿದ್ದರೆ ಸಾಧನೆ ಸಾಧ್ಯ" ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಇಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಗಂಗಾಧರ ಹಣ್ಣಿಗೇರಿ ಅವರ ನೇತೃತ್ವದ ತಂಡ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಹಳ್ಳಿಕೇರಿ ಅವರು ಪೇಠಾಲೂರು ಗ್ರಾಮದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕ್ಷೆತ್ರ ಶಿಕ್ಷಣಾಧಿಕಾರಿಗಳು ಪಲ್ಲವಿಗೆ ಗೌರವ ಧನ ನೀಡಿ ಸನ್ಮಾನಿಸಿದರು. ಅಷ್ಟೇ ಅಲ್ಲದೆ, ಹಣದ ಕೊರತೆಯಿಂದ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿನಿಯ ಮುಂದಿನ ಉನ್ನತ ವ್ಯಾಸಂಗಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಭರಿಸುವುದಾಗಿ ಭರವಸೆ ನೀಡಿದ್ದಾರೆ ಯಂದು ಹೇಳಿದರು.1
- ಧಾರವಾಡ: ದ್ವಿಭಾಷಾ ಮಾಧ್ಯಮದ ಹೆಸರಿನಲ್ಲಿ ಕನ್ನಡ ಮಾಧ್ಯಮವನ್ನು ಕಿತ್ತುಹಾಕಿ ಇಂಗ್ಲಿಷ್ ಮಾಧ್ಯಮವನ್ನು ಕಡ್ಡಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಎ.ಐ.ಡಿ.ಎಸ್.ಓ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಧಾರವಾಡ ನಗರದ ವಿವೇಕಾನಂದ ವೃತ್ತದಲ್ಲಿ ಗುರುವಾರ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಎ.ಐ.ಡಿ.ಎಸ್.ಓ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಮುಖಂಡ ವಿನಯ ಚಂದ್ರ, ಮಲ್ಲೇಶ ಕಟಗಿ, ಸಿಂಧು ಕೌದಿ, ಶಶಿಕಲಾ ಮೇಟಿ, ಶರಣಬಸವ ಗೋನವಾರ, ಭುವನ ಬಳ್ಳಾರಿ, ಗಂಗಾ ಕೋಕರೆ, ಸಿದ್ದು ಚಿಪ್ಪಲಕಟ್ಟಿ, ಶಾಂತೇಶ್ ಸೇರಿದಂತೆ ಇತರರಿದ್ದರು.1
- ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.1