ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ಶಹಾಪುರ : ಸರ್ಕಾರಿ ಅರೇ ಸರ್ಕಾರಿ ಸೇವೆಯಲ್ಲಿ ತಮ್ಮ ಜೀವನ ಕಳೆದು ನಿವೃತ್ತಿ ನಂತರ ಹಾಗೂ ಸೇವೆಯಲ್ಲಿರುವವರ ಸೇವಾ ಅವಧಿ ನಂತರ ನೆಮ್ಮದಿ ಬದುಕು ಕಳೆಯಲು ಸಹಕಾರ ಸಂಘಗಳ ಅವಶ್ಯಕತೆ ತುಂಬಾ ಇರುವುದು ಎಂದು ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಶಹಾಪುರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ್ ದರ್ಶನಾಪುರ ಹೇಳಿದರು. ನಗರದ ಎನ್ ಜಿ ಓ ಕಾಲೋನಿಯ ಭೀಮರಡ್ಡಿ ಭೈರಡ್ಡಿ ಬಡಾವಣೆಯ ನೌಕರರ ವಿವಿಧ ಸಂಘಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕುರಿತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ, ನೌಕರರಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ನೌಕರರ ರಿಕ್ರಿಯೆಷನ್ ಕ್ಲಬ್ ಗಳ ನೂತನವಾಗಿ ನಿರ್ಮಾಣವಾದ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಡಿ 30 ರ ಸೋಮವಾರದಂದು ಬೆಳಿಗ್ಗೆ 10 : 30ಗಂಟೆಗೆ ನೆರವೇರಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಆಜೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ವಹಿಸುವರು ಉದ್ಘಾಟಕರಾಗಿ ಮಾಜಿ ಸಚಿವರು, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಹಸ್ತದಿಂದ ಹಾಗೂ ಘನ ಅಧ್ಯಕ್ಷತೆಯನ್ನು ಕ ರಾ ಸರಕಾರಿ ನಿವೃತ್ತ ಸಂಘದ ರಾಜ್ಯಾಧ್ಯಕ್ಷರಾದ ಡಾ :ಎಲ್ ಭೈರಪ್ಪ ಅಧ್ಯಕತೆಯನ್ನು ಎನ್ ಸಿ ಪಾಟೀಲ ಅಧ್ಯಕ್ಷರು ಕ ರಾ ಸರಕಾರಿ ನಿವೃತ್ತ ಸಂಘ, ವಿಶೇಷ ಆಹ್ವಾನಿತಾರಾಗಿ ರಂಗೇಗೌಡ ಎಸ್ ಎಂ ಆನಂದಪ್ಪ, ಸೂರ್ಯಕಾಂತ ಕದಂ, ಶಂಕರಗೌಡ ಎಂ ಬಿರಾದಾರ ಆಗಮಿಸುವರು ಮುಖ್ಯ ಅತಿಥಿಗಳಾಗಿ ಎಂ ನಾರಾಯಣ, ಮಲ್ಲಿಕಾರ್ಜುನ ಪಾಟೀಲ ಅಲಂಕರಿಸುವರು ಕಾರಣ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ಶಹಾಪುರ : ಸರ್ಕಾರಿ ಅರೇ ಸರ್ಕಾರಿ ಸೇವೆಯಲ್ಲಿ ತಮ್ಮ ಜೀವನ ಕಳೆದು ನಿವೃತ್ತಿ ನಂತರ ಹಾಗೂ ಸೇವೆಯಲ್ಲಿರುವವರ ಸೇವಾ ಅವಧಿ ನಂತರ ನೆಮ್ಮದಿ ಬದುಕು ಕಳೆಯಲು ಸಹಕಾರ ಸಂಘಗಳ ಅವಶ್ಯಕತೆ ತುಂಬಾ ಇರುವುದು ಎಂದು ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಶಹಾಪುರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ್ ದರ್ಶನಾಪುರ ಹೇಳಿದರು. ನಗರದ ಎನ್ ಜಿ ಓ ಕಾಲೋನಿಯ ಭೀಮರಡ್ಡಿ ಭೈರಡ್ಡಿ ಬಡಾವಣೆಯ ನೌಕರರ ವಿವಿಧ ಸಂಘಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕುರಿತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ, ನೌಕರರಗೃಹ ನಿರ್ಮಾಣ ಸಹಕಾರ ಸಂಘ ಹಾಗೂ
ನೌಕರರ ರಿಕ್ರಿಯೆಷನ್ ಕ್ಲಬ್ ಗಳ ನೂತನವಾಗಿ ನಿರ್ಮಾಣವಾದ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಡಿ 30 ರ ಸೋಮವಾರದಂದು ಬೆಳಿಗ್ಗೆ 10 : 30ಗಂಟೆಗೆ ನೆರವೇರಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಆಜೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ವಹಿಸುವರು ಉದ್ಘಾಟಕರಾಗಿ ಮಾಜಿ ಸಚಿವರು, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಹಸ್ತದಿಂದ ಹಾಗೂ ಘನ ಅಧ್ಯಕ್ಷತೆಯನ್ನು ಕ ರಾ ಸರಕಾರಿ ನಿವೃತ್ತ ಸಂಘದ ರಾಜ್ಯಾಧ್ಯಕ್ಷರಾದ ಡಾ :ಎಲ್ ಭೈರಪ್ಪ ಅಧ್ಯಕತೆಯನ್ನು ಎನ್ ಸಿ ಪಾಟೀಲ ಅಧ್ಯಕ್ಷರು ಕ ರಾ ಸರಕಾರಿ ನಿವೃತ್ತ ಸಂಘ, ವಿಶೇಷ ಆಹ್ವಾನಿತಾರಾಗಿ ರಂಗೇಗೌಡ ಎಸ್ ಎಂ ಆನಂದಪ್ಪ, ಸೂರ್ಯಕಾಂತ ಕದಂ, ಶಂಕರಗೌಡ ಎಂ ಬಿರಾದಾರ ಆಗಮಿಸುವರು ಮುಖ್ಯ ಅತಿಥಿಗಳಾಗಿ ಎಂ ನಾರಾಯಣ, ಮಲ್ಲಿಕಾರ್ಜುನ ಪಾಟೀಲ ಅಲಂಕರಿಸುವರು ಕಾರಣ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
- ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ಶಹಾಪುರ : ಸರ್ಕಾರಿ ಅರೇ ಸರ್ಕಾರಿ ಸೇವೆಯಲ್ಲಿ ತಮ್ಮ ಜೀವನ ಕಳೆದು ನಿವೃತ್ತಿ ನಂತರ ಹಾಗೂ ಸೇವೆಯಲ್ಲಿರುವವರ ಸೇವಾ ಅವಧಿ ನಂತರ ನೆಮ್ಮದಿ ಬದುಕು ಕಳೆಯಲು ಸಹಕಾರ ಸಂಘಗಳ ಅವಶ್ಯಕತೆ ತುಂಬಾ ಇರುವುದು ಎಂದು ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಶಹಾಪುರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ್ ದರ್ಶನಾಪುರ ಹೇಳಿದರು. ನಗರದ ಎನ್ ಜಿ ಓ ಕಾಲೋನಿಯ ಭೀಮರಡ್ಡಿ ಭೈರಡ್ಡಿ ಬಡಾವಣೆಯ ನೌಕರರ ವಿವಿಧ ಸಂಘಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕುರಿತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ, ನೌಕರರಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ನೌಕರರ ರಿಕ್ರಿಯೆಷನ್ ಕ್ಲಬ್ ಗಳ ನೂತನವಾಗಿ ನಿರ್ಮಾಣವಾದ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಡಿ 30 ರ ಸೋಮವಾರದಂದು ಬೆಳಿಗ್ಗೆ 10 : 30ಗಂಟೆಗೆ ನೆರವೇರಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಆಜೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ವಹಿಸುವರು ಉದ್ಘಾಟಕರಾಗಿ ಮಾಜಿ ಸಚಿವರು, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಹಸ್ತದಿಂದ ಹಾಗೂ ಘನ ಅಧ್ಯಕ್ಷತೆಯನ್ನು ಕ ರಾ ಸರಕಾರಿ ನಿವೃತ್ತ ಸಂಘದ ರಾಜ್ಯಾಧ್ಯಕ್ಷರಾದ ಡಾ :ಎಲ್ ಭೈರಪ್ಪ ಅಧ್ಯಕತೆಯನ್ನು ಎನ್ ಸಿ ಪಾಟೀಲ ಅಧ್ಯಕ್ಷರು ಕ ರಾ ಸರಕಾರಿ ನಿವೃತ್ತ ಸಂಘ, ವಿಶೇಷ ಆಹ್ವಾನಿತಾರಾಗಿ ರಂಗೇಗೌಡ ಎಸ್ ಎಂ ಆನಂದಪ್ಪ, ಸೂರ್ಯಕಾಂತ ಕದಂ, ಶಂಕರಗೌಡ ಎಂ ಬಿರಾದಾರ ಆಗಮಿಸುವರು ಮುಖ್ಯ ಅತಿಥಿಗಳಾಗಿ ಎಂ ನಾರಾಯಣ, ಮಲ್ಲಿಕಾರ್ಜುನ ಪಾಟೀಲ ಅಲಂಕರಿಸುವರು ಕಾರಣ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.2
- ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದ ಒಕ್ಕೂಟದಿಂದ ನ.30ರಂದು ಬೃಹತ್ ಪ್ರತಿಭಟನೆ ಯಲಬುರ್ಗಾ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣದಲ್ಲಿ ಅವೈಜ್ಞಾನಿಕ ಹಾಗೂ ಸಮರ್ಪಕ ಅಧ್ಯಯನವಿಲ್ಲದ ಕ್ರಮ ಅನುಸರಿಸಲಾಗಿದೆ ಎಂದು ಆರೋಪಿಸಿ, ಬಂಜಾರ, ಭೋವಿ, ಕೊರಮ ಹಾಗೂ ಕೊರಚ ಸಮುದಾಯ ಗಳ ಒಕ್ಕೂಟದಿಂದ ನ.30ರಂದು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಜನಸಂಖ್ಯೆಯ ವಾಸ್ತವಿಕ ಸ್ಥಿತಿಗತಿಗಳನ್ನು ಸಮರ್ಪಕವಾಗಿ ಪರಿಗಣಿಸದೆ ಒಳಮೀಸಲಾತಿ ವರ್ಗೀಕರಣ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ಈಗಾಗಲೇ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲಿ ಸರ್ಕಾರದ ಗಮನ ಸೆಳೆಯಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು. ಪಟ್ಟಣದ ಸೇವಾಲಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ನಾಲ್ಕು ಸಮುದಾಯಗಳ ಮುಖಂಡರು, ಮಹಿಳೆಯರು, ಯುವಕರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಯಾವುದೇ ಒಂದು ಸಮುದಾಯದ ಹೋರಾಟವಲ್ಲ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಹೀಗಾಗಿ ಎಲ್ಲರೂ ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣವು ಕೇವಲ ಅಂಕಿ-ಅಅಶಗಳ ಆಧಾರದಲ್ಲಿ ನಡೆಯಬಾರದು. ಆಯಾ ಸಮುದಾಯಗಳ ಜನಸಂಖ್ಯೆ, ಸಾಮಾಜಿಕ ಹಿಂದುಳಿದಿರುವಿಕೆ, ಶೈಕ್ಷಣಿಕ ಪ್ರಗತಿ, ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ದೊರೆತಿರುವ ಪ್ರಾತಿನಿಧ್ಯ ಸೇರಿದಂತೆ ಸಮಗ್ರ ಅಂಶಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಸಮುದಾಯಗಳ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಸಮುದಾಯಗಳ ವಾಸ್ತವ ಸ್ಥಿತಿಗತಿಗಳನ್ನು ಅರಿತು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಅಧಿವೇಶನಕ್ಕೂ ಮುನ್ನ ಸಮಸ್ಯೆ ಬಗೆಹರಿಸಲು ಆಗ್ರಹ: ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಾಲ್ಕು ಸಮುದಾಯಗಳ ಮುಖಂಡ ರೊಂದಿಗೆ ಚರ್ಚಿಸಬೇಕು. ಯಾವುದೇ ಸಮುದಾ ಯದ ಹಕ್ಕುಗಳಿಗೆ ಧಕ್ಕೆಯಾಗದಂತೆ ವೈಜ್ಞಾನಿಕ ಹಾಗೂ ಪಾರದರ್ಶಕ ಅಧ್ಯಯನ ನಡೆಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ನಾಲ್ಕು ಸಮುದಾಯಗಳ ಹಕ್ಕು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು. ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಿದಾಗ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ. ಆದ್ದರಿಂದ ನ.30ರಂದು ನಡೆಯುವ ಪ್ರತಿಭಟನೆ ಯನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪರಸಪ್ಪ ನಾಯಕ, ಲೋಕೇಶ ಭಜಂತ್ರಿ, ದುರ್ಗಪ್ಪ ವಡ್ಡರ, ಗಣೇಶ ವಡ್ಡರ, ದೇವಪ್ಪ ಪೂಜಾರ, ವಂಕಟೇಶ ಕಾರಭಾರಿ, ವೆಂಕಟೇಶ ನಾಯಕ, ಪ್ರವೀಣ ವಡ್ಡರ, ನಾಗರಾಜ ನಾಯಕ, ಲಕ್ಷ್ಮಣ ಸೇರಿದಂತೆ ನಾಲ್ಕು ಸಮುದಾಯಗಳ ಮುಖಂಡರು ಹಾಜರಿದ್ದರು.1
- ಜಾತಿಯಿಂದ ಬೇರೆಯಾದರೂ ನಾವು ಬಸವಣ್ಣನ ಅನುಯಾಯಿಗಳು: ಸಿದ್ದಣ್ಣ ತೇಜಿ1
- ಯಲಬುರ್ಗಾ ಪಟ್ಟಣದಲ್ಲಿ ಇಂದು ಭಕ್ತ ಕನಕದಾಸ ಜಯಂತಿ ಆಚರಣೆ ಮಾಡಲಾಯಿತು ಕನಕ ಜಯಂತೋತ್ಸವದ ಪ್ರಯುಕ್ತ ಕೇಂದ್ರ ಸಾಹಿತ್ಯ ಜನಪದ ಆಕಾಡಮಿ ಪ್ರಶಸ್ತಿ ಪುರಸ್ಕೃತ ಮಾರೇಪ್ಪ ಮಾರೇಪ್ಪ ಚನ್ನದಾಸರ ಹಾಗೂ ಸಂಗಡಿಗರಿಂದ ಕನಕ ಹಾಗೂ ಪುರಂದ ದಾಸರ ತತ್ವ ಪದ ಕಾರ್ಯಕ್ರಮ ಜರುಗಿತು.1
- "ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ, ಸ್ಥಳೀಯರ ಬೇಡಿಕೆ ಹಾಗೂ ಗವಿಸಿದ್ದೇಶ್ವರ ಶ್ರೀಗಳ ಒತ್ತಾಯದ ಹಿನ್ನೆಲೆಯಲ್ಲಿ ಕೆರೆ ನಿರ್ಮಾಣದ ಸಾಧ್ಯತೆ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಇದರ ಬಗ್ಗೆ ವರದಿ ಬಂದ ಬಳಿಕ ಚರ್ಚಿಸಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕೊಪ್ಪಳದ ಬಸಾಪುರ ಏರ್ ಸ್ಟ್ರಿಪ್ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ಬಲ್ಡೋಟಾ ಕಾರ್ಖಾನೆ ಸ್ಥಗಿತಗೊಳಿಸಲು ಹೋರಾಟ ಹಾಗೂ ಶ್ರೀಗಳೂ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಕೇಳಿದಾಗ, "ನನಗೂ ಈ ವಿಚಾರ ಗೊತ್ತಿದೆ. ಸಿದ್ದರಾಮಯ್ಯ ಅವರು ಇದ್ದಾಗಲೂ ಈ ಸಮಸ್ಯೆ ಇತ್ತು. ಯಾವುದಾದರೂ ಒಂದು ಕಡೆ ಕೆರೆ ನಿರ್ಮಿಸಬೇಕು ಎಂಬ ಬೇಡಿಕೆಯಿದೆ. ವರದಿ ಬಂದ ನಂತರ ಮಾತನಾಡುತ್ತೇನೆ" ಎಂದರು. ಸಂವಿಧಾನ ವಿಚಾರವಾಗಿ ನಿಮ್ಮ ಹೇಳಿಕೆಗೆ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, "ನಾನು ಹೇಳಿರುವ ಸಂವಿಧಾನ ಬದಲಾವಣೆ ಎಂದರೆ ಬಿಜೆಪಿಯವರು ಹೇಳುವ ರೀತಿಯ ಬದಲಾವಣೆಯಲ್ಲ. ಜನರ ಭಾವನೆ, ಪರಿಸ್ಥಿತಿ, ಸಮಸ್ಯೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿ ಅಗತ್ಯ ತಿದ್ದುಪಡಿ ಮಾಡುವುದು" ಎಂದು ಹೇಳಿದರು. "371 ಜೆ ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಭಾಗದ ಜನರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು 371ಜೆ ಜಾರಿಗೆ ತರಲಾಯಿತು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾದವು. ಕಾಲೇಜುಗಳಲ್ಲಿ ಪ್ರವೇಶ ದೊರೆಯಿತು. ವೈದ್ಯರು, ಎಂಜಿನಿಯರ್‌ಗಳು ಹಾಗೂ ಎಸಿ, ಡಿಸಿ ಹುದ್ದೆಗಳನ್ನು ಪಡೆಯಲು ಈ ಭಾಗದವರಿಗೆ ಅವಕಾಶ ಸಿಕ್ಕಿದೆ. ಇಂತಹ ಬದಲಾವಣೆಗಳನ್ನೇ ನಾನು ತಿಳಿಸಿದ್ದು" ಎಂದು ಹೇಳಿದರು. "ಇಂದಿರಾ ಗಾಂಧಿ ಅವರ ಕಾಲದಲ್ಲಿ ಸಂವಿಧಾನಕ್ಕೆ ಜಾತ್ಯತೀತ ಎಂಬ ಪದವನ್ನು ಸೇರ್ಪಡೆ ಮಾಡಲಾಯಿತು" ಎಂದು ಹೇಳಿದರು. *ಸಿದ್ದರಾಮಯ್ಯ ಅವರು ಅಹಿಂದ ಸಭೆ ಮಾಡಿದರೆ ತಪ್ಪೇನಿದೆ?* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರ ಸಭೆ ನಡೆಸಿರುವ ಬಗ್ಗೆ ಕೇಳಿದಾಗ, "ಅದರಲ್ಲಿ ತಪ್ಪೇನಿದೆ? ತಪ್ಪೇನೂ ಇಲ್ಲವಲ್ಲ" ಎಂದು ಹೇಳಿದರು. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಒಟ್ಟಿಗೆ ಇದ್ದಾರೆ ಎಂಬ ಚರ್ಚೆಗೆ, "ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ. ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?" ಎಂದರು. *ಲಿಖಿತವಾಗಿ ಭರವಸೆ ನೀಡಲು ಸಾಧ್ಯವಿಲ್ಲ* ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ಬೇಡಿಕೆಗಳ ಬಗ್ಗೆ ಕೇಳಿದಾಗ, "ಆಶಾ ಕಾರ್ಯಕರ್ತರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಆದರೆ, ಅವರು ಕೇಳುತ್ತಿರುವ ಎಲ್ಲ ಭರವಸೆಗಳನ್ನು ಲಿಖಿತವಾಗಿ ನೀಡಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು. "ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು. ರಾಜ್ಯ ಸರ್ಕಾರವೊಂದನ್ನೇ ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ. ಲಿಖಿತವಾಗಿ ಭರವಸೆ ಕೊಡಿ ಎಂದು ಕೇಳುತ್ತಿದ್ದಾರೆ. ಯಾವ ಸರ್ಕಾರಕ್ಕೂ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಬರೆದುಕೊಡಲು ಸಾಧ್ಯವಿಲ್ಲ" ಎಂದರು. "ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರ್ಕಾರ ಗೌರವಿಸುತ್ತದೆ. ಬೇರೆ ಕೆಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಇರುವ ಸೌಲಭ್ಯಗಳಿಗಿಂತ ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಗೌರವ ನೀಡಲಾಗುತ್ತಿದೆ ಎಂದು ಹೇಳಿದರು. "ಅವರು ನಮ್ಮ ಹೆಣ್ಣುಮಕ್ಕಳು. ಆಶಾ ಕಾರ್ಯಕರ್ತೆಯರ ವ್ಯವಸ್ಥೆಯನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆರಂಭಿಸಲಾಯಿತು. ಅವರ ಶ್ರಮದ ಬಗ್ಗೆ ನಮಗೆ ಗೌರವವಿದೆ. ಕೆಲವು ಪ್ರೋತ್ಸಾಹಧನಗಳ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವರ ಬಗ್ಗೆ ನನಗೂ ಸಹಾನುಭೂತಿಯಿದೆ. ಈ ವಿಚಾರವಾಗಿ ನಾನು ಈಗಾಗಲೇ ಅವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪ್ರತಿಭಟನೆ ನಡೆಸಿದವರ ನೋವು, ಸಮಸ್ಯೆ ಮತ್ತು ಬೇಡಿಕೆಗಳು ಸರ್ಕಾರಕ್ಕೆ ಅರ್ಥವಾಗಿವೆ" ಎಂದು ತಿಳಿಸಿದರು. ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ರಾಜಕೀಯ ಬೆರೆಸಲಾಗುತ್ತಿದೆ. ಕೆಲವರು ರಾಜಕೀಯಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಾಗಿ ಬರುವುದು, ಸಿನಿಮಾ ಕ್ಷೇತ್ರದವರನ್ನು ಕಳುಹಿಸುವುದು, ಕಾರ್ಯಕರ್ತರನ್ನು ಕಳುಹಿಸುವುದು ಹೀಗೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ನನಗೆ ಇವೆಲ್ಲವೂ ಗೊತ್ತಿದೆ. ಅವರ ಹೋರಾಟವನ್ನು ರಾಜಕೀಯಗೊಳಿಸಬಾರದು. ಸರ್ಕಾರವನ್ನು ಎದುರಿಸುವ ಹೋರಾಟ ಎಂಬ ಭಾವನೆ ಮೂಡಬಾರದು" ಎಂದು ಹೇಳಿದರು. "ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ಮರಳುವಂತೆ ಮನವಿ ಮಾಡಿದ್ದೇನೆ. ಸರ್ಕಾರ ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿಲ್ಲ" ಎಂದರು. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅನ್‌ಫಿಟ್ ಆಗಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಕೇಳಿದಾಗ, "ಫಿಟ್ ಮಾಡಿಕೊಳ್ಳೋಣ. ಅವರೇ ಫಿಟ್ ಮಾಡಲಿ" ಎಂದು ತಿರುಗೇಟು ನೀಡಿದರು. ಆಶಾ ಕಾರ್ಯಕರ್ತೆಯರಿಗೆ ಅಧಿವೇಶನದಲ್ಲಿ ಗುಡ್‌ನ್ಯೂಸ್ ನೀಡುವುದಾಗಿ ಹೇಳಿದ್ದೀರಿ ಎಂದು ಕೇಳಿದಾಗ, "ಅದೆಲ್ಲವನ್ನೂ ಚರ್ಚೆ ಮಾಡಬೇಕು. ಮಾಧ್ಯಮದವರು ಹೇಳುತ್ತಾರೆ ಎಂಬ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಅವರೊಂದಿಗೆ ಮಾತನಾಡಿದ್ದೇನೆ" ಎಂದರು.1
- ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುತ್ತೇವೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ .1
- ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ' ನಡೆಸುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಭೇಟಿ! ಅಧಿವೇಶನ ಮುಗಿದ ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯುತ್ತೇವೆ" — ಸಚಿವ ಶ್ರೀ ಶಿವರಾಜ್ ತಂಗಡಗಿ ಭರವಸೆ ಕೊಪ್ಪಳ: ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಬಲ್ಡೋಟಾ ಸಮೂಹದ (MSPL) ಪೆಲ್ಲೆಟ್ ಘಟಕದಿಂದ ಉಂಟಾಗುತ್ತಿರುವ ತೀವ್ರ ವಾಯುಮಾಲಿನ್ಯ ಹಾಗೂ ಕಂದು ಧೂಳನ್ನು ವಿರೋಧಿಸಿ 'ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ' ನಡೆಸುತ್ತಿರುವ ನಿರಂತರ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶಿವರಾಜ್ ತಂಗಡಗಿ, ಕೊಪ್ಪಳ ಶಾಸಕ ಶ್ರೀ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. "ಬಲ್ಡೋಟಾ ತಡೆಯಿರಿ, ಬೇಕೇ ಬೇಕು ನ್ಯಾಯ ಬೇಕು, ಶುದ್ಧ ಗಾಳಿ ಮತ್ತು ಶುದ್ಧ ಪರಿಸರ ನಮ್ಮ ಹಕ್ಕು" ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಜನಪ್ರತಿನಿಧಿಗಳನ್ನು ಬರಮಾಡಿಕೊಂಡರು. ಧರಣಿ ಸ್ಥಳದ ಪ್ರಮುಖ ಮುಖ್ಯಾಂಶಗಳು: ಹೋರಾಟಗಾರರ ಮನವಿ ಮತ್ತು ಅಳಲು: 2011ರಿಂದ ಕಾರ್ಯಾಚರಣೆ ನಡೆಸುತ್ತಿರುವ ಎಂಎಸ್‌ಪಿಎಲ್ (MSPL) ಪೆಲ್ಲೆಟ್ ಘಟಕದ ಕಂದು ಧೂಳು, ದಟ್ಟ ಹೊಗೆ ಮತ್ತು ವಿಷಾನಿಲವು ಕೊಪ್ಪಳ ಜಿಲ್ಲಾ ಕೇಂದ್ರದ ಸುಮಾರು ಶೇ. 40ರಷ್ಟು ಭಾಗಕ್ಕೆ ಹರಡುತ್ತಿದೆ. ಇದರಿಂದ ಜನರ ಆರೋಗ್ಯ ಮತ್ತು ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದ್ದು, ಕೂಡಲೇ ಮಾಲಿನ್ಯ ತಡೆಗಟ್ಟಬೇಕೆಂದು ಹೋರಾಟ ಸಮಿತಿಯವರು ಮನವಿ ಪತ್ರ ಓದಿ ಒತ್ತಾಯಿಸಿದರು. ಜನಪ್ರತಿನಿಧಿಗಳ ಬೆಂಬಲ: ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, "ನಾನಾಗಲಿ, ಶಾಸಕರಾಗಲಿ, ಲೋಕಸಭಾ ಸದಸ್ಯರಾಗಲಿ—ನಮ್ಮ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ನಿಮ್ಮ ಪರವಾಗಿದ್ದೇವೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿರುವ ಸಾಕಷ್ಟು ಉದಾಹರಣೆಗಳು ನಿಮ್ಮ ಕಣ್ಣೆದುರಿಗಿವೆ," ಎಂದು ಸ್ಪಷ್ಟಪಡಿಸಿದರು. ಡಿಸಿ ಕಚೇರಿಯಲ್ಲಿ ಸಭೆ ಹಾಗೂ ಸಿಎಂ ಭೇಟಿಯ ಭರವಸೆ: "ಬೆಳಗಾವಿ/ನಗರ ಅಧಿವೇಶನ ಮುಗಿದ ತಕ್ಷಣ, ಕಾನೂನು ತೊಡಕುಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಮ್ಮೆಲ್ಲರನ್ನೂ ಕರೆದು ಮಹತ್ವದ ಸಭೆ ನಡೆಸಲಾಗುವುದು. ಅಂದೇ ದಿನಾಂಕ ನಿಗದಿಪಡಿಸಿ, ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದುಕೊಂಡು ಹೋಗುವ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಸಚಿವರು ಭರವಸೆ ನೀಡಿದರು. ಸಚಿವರು ಹಾಗೂ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಇತರೆ ಸ್ಥಳೀಯ ವಿಷಯಗಳ ಬಗ್ಗೆ ಚರ್ಚಿಸಲು ಮುಂದಾದಾಗ, ಹೋರಾಟಗಾರರು ಸದ್ಯಕ್ಕೆ ಪರಿಸರ ಮಾಲಿನ್ಯ ಮತ್ತು ಬಲ್ಡೋಟಾ ವಿಷಯವನ್ನು ಮಾತ್ರ ಕೇಂದ್ರೀಕರಿಸುವಂತೆ ಒತ್ತಾಯಿಸಿದರು. ಕೊಪ್ಪಳದ ಪರಿಸರ ಹಾಗೂ ಜನರ ಆರೋಗ್ಯ ರಕ್ಷಣೆಗಾಗಿ ನಡೆಯುತ್ತಿರುವ 'ಬಲ್ಡೋಟಾ ಹಠಾವೋ' ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶಿವರಾಜ್ ತಂಗಡಗಿ, ಸಂಸದರು, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು. ಜನರ ಹಿತಾಸಕ್ತಿ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. 📌 ಕೊಪ್ಪಳ ಉಳಿಸಿ ಹೋರಾಟಕ್ಕೆ ಕೈಜೋಡಿಸಿ, ಈ ಸುದ್ದಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ! #KoppalBachavo #BaldotaHatao #KoppalNews #ShivarajTangadagi #RaghavendraHitnal #SaveKoppal #ShuruNews #DigitalNews #KannadaNews1
- ಕಮಡೊಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ | 400ಕ್ಕೂ ಹೆಚ್ಚು ಜನರಿಗೆ ತಜ್ಞ ವೈದ್ಯರಿಂದ ತಪಾಸಣೆ! | ಪತ್ರವಾಣಿ1