logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಯಾರು ಈ ಅಂಬೇಡ್ಕರ್?* 🔸 ಭಾರತ ಭೂಮಿಯೇ ಹಂಬಲಿಸಿ ಪಡೆದ ಹೆಮ್ಮೆಯ ಪುತ್ರ 🔹.ನಿಸ್ಸಂದೇಹವಾಗಿ ಕಳೆದ ಸಹಸ್ರಮಾನದಲ್ಲಿ ಭಾರತ ಸೃಷ್ಟಿಸಿದ ನೈಜ ಚಿಂತಕ. 🔹.ಎಲ್ಲಾದಕ್ಕೂ ಮಿಗಿಲಾದ ವ್ಯಕ್ತಿ. ಸ್ಕೇಲ್ ನಿಂದ ಹಿಡಿದು ಅಳೆಯುವ ವ್ಯಕ್ತಿ ಅವರಲ್ಲ. ಅವರೇ ಒಂದು ಬೆಳಕು. ಅವರ ಕಾಂತಿಯನ್ನ ಅಂಗೈಯಲ್ಲಿ ಮುಚ್ಚಿಡಲು ಆಗುವುದಿಲ್ಲ. 🔹. ಜಗತ್ತಿನಲ್ಲಿ ಯಾರು ಕೂಡಾ ಹುಟ್ಟಿನಿಂದ, ಧರ್ಮದಿಂದ, ಜಾತಿಯಿಂದ ಶ್ರೇಷ್ಠರಲ್ಲ ಅವರ ಸಾಧನೆಯಿಂದ ಶ್ರೇಷ್ಠರು ಎಂದು ಜಗತ್ತಿಗೆ ತೋರಿಸಿಕೊಟ್ಟವರು. 🔹.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗುಜರಾತ್ ನಿಂದ ಅರುಣಾಚಲ ಪ್ರದೇಶದ ವರೆಗೆ ಪ್ರತಿಯೊಬ್ಬ ಭಾರತೀಯ ಸ್ಮರಿಸಬೇಕಾದ ವ್ಯಕ್ತಿ. 🔹. 64 ವಿಷಯಗಳಲ್ಲಿ ಪರಿಣಿತಿ ಹೊಂದಿದ್ದು 10 ಭಾಷೆಗಳಲ್ಲಿ ಜ್ಞಾನವಿದ್ದು ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ತುಲನಾತ್ಮಕ ಅಧ್ಯಯನ ನಡೆಸಿದವರು. 🔹.ಜಗತ್ತಿನಲ್ಲಿ ಒಬ್ಬ ನಾಯಕನ ಮೇಲೆ ಹೆಚ್ಚು ಹಾಡುಗಳು ರಚನೆಯಾಗಿದ್ದರೆ?ಅತಿ ಹೆಚ್ಚು ಪುಸ್ತಕಗಳು ರಚನೆಯಾಗಿದ್ದರೇ? ಹಾಗೂ ಅತಿ ಹೆಚ್ಚು ಪ್ರತಿಮೆಗಳನ್ನ ಹೊಂದಿದ್ದರೆ? ಅದು ಅಂಬೇಡ್ಕರ್ ಮಾತ್ರ. 🔹.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಲಿಂಗಸೂಕ್ಷ್ಮತೆಯಿಂದ ಮಹಿಳಾ ಸಮಾನತೆಯ ಬಗ್ಗೆ ಯೋಚನೆ ಮಾಡಿದವರು. ಮಾತನಾಡುವ ಮಹಿಳೆ ಮತ್ತು ಮಾತನಾಡದ ಮಹಿಳೆ ಇಬ್ಬರ ಬಗ್ಗೆ ಮಾತನಾಡಿದ ಏಕೈಕ ಮಹಿಳಾ ವಾದಿ. 🔹.ಹಿಂದೂ ಕೋಡ್ ಬಿಲ್ ಸಂಸತ್ತಿನಲ್ಲಿ ಶಾಸನವಾಗಲಿಲ್ಲ. ಹಾಗೂ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಲಿಲ್ಲ ಎಂಬ ಕಾರಣಕ್ಕಾಗಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದವರು. 🔹.ಕನಸು ಕಾಣಲು ಸಾಧ್ಯವಾಗದ ಕಟ್ಟ ಕಡೆಯ ಭಾರತೀಯನಿಗೆ ಸಂವಿಧಾನದ ಮೂಲಕ ಕನಸು ಕಾಣಲು ಸಾಧ್ಯವಾಗಿಸಿದವರು. 🔹.ಬೇಧ ಭಾವದ, ಅಸಮಾನತೆಯಹಾಗೂ ತಾರತಮ್ಯದ ಕೊಳೆಯ ತೊಳೆದವರು. 🔹.ಎರಡು- ಮೂರು ಸಾವಿರ ವರ್ಷಗಳಿಂದ ಏಕಮುಖವಾಗಿ ಹರಿಯುತ್ತಿದ್ದ ನದಿಗೆ ಬೌದ್ಧಿಕ ಅಣೆಕಟ್ಟು ಕಟ್ಟಿ ಕಾಲುವೆಗಳ ಮುಖಾಂತರ ಕೋಟ್ಯಂತರ ಜನರಿಗೆ ತಲುಪುವಂತೆ ಮಾಡಿದ ಮಹಾನ್ ಸಾಧಕ. 🔹. ಭಾರತೀಯ ಸಂಸ್ಕೃತಿ ಮತ್ತು ಚರಿತ್ರೆಯಲ್ಲಿ ಭಾರತದ ಬಹುಜನರ ಮತ್ತು ಅಸ್ಪೃಶ್ಯರ ಚರಿತ್ರೆಯನ್ನು ಮ್ಯೂಟ್(Mute) ಮಾಡಲಾಗಿತ್ತು. ಅದನ್ನು ಅನ್ಮ್ಯೂಟ್ (Unmute ) ಮಾಡಿದವರು. 🔹.ಬರಿಗಾಲಲ್ಲಿ ಇದ್ದವರು ಚಪ್ಪಲಿ ಬೂಟ್ ಧರಿಸುವಂತೆ, ನಡೆಯುತ್ತಿದ್ದವರು ಸ್ಕೂಟರ್ ಕಾರಿನಲ್ಲಿ ಓಡಾಡುವಂತೆ, ಗುಡಿಸಿಲಿನಲ್ಲಿ ಇದ್ದವರು ಉತ್ತಮ ಮನೆಯಲ್ಲಿ ವಾಸ ಮಾಡುವಂತೆ, ಹರಿದ ಬಟ್ಟೆ ಹಾಕುತ್ತಿದ್ದವರು ಸೂಟ್ ಹಾಕುವಂತೆ ಮಾಡಿದವರು. 🔹.ಆಕಾಶದೆತ್ತರದ ಪಾತಾಳದಷ್ಟು ಆಳದ ವ್ಯಕ್ತಿತ್ವ ಹೊಂದಿದವರು,ಅಷ್ಟೇ ಜ್ಞಾನವನ್ನು ಹೊಂದಿದವರು. 🔹.ಮನುವಾದಿಗಳ ಸಾವಿರಾರು ವರ್ಷಗಳ ಇತಿಹಾಸವನ್ನ ಕೇವಲ 2 ವರ್ಷ 11 ತಿಂಗಳು 18 ದಿನಗಳಲ್ಲಿ ತಮ್ಮ ಜ್ಞಾನ ಮತ್ತು ಲೇಖನಿಯಿಂದ ಬದಲಾಯಿಸಿದವರು. 🔹.ಅವರು ರಾಜ ಮನೆತನದಿಂದ ಬಂದವರಲ್ಲ ದೇಸಾಯಿ ಮನೆತನದಿಂದ ಬಂದವರಲ್ಲ ಬಿಲ್ಲು ಬಾಣ ಇಟ್ಟುಕೊಂಡು ಬಂದವರಲ್ಲ ಕತ್ತಿ ಇಟ್ಟುಕೊಂಡು ಬಂದವರಲ್ಲ ಬುದ್ಧಿ, ಜ್ಞಾನ ಮತ್ತು ಲೇಖನಿ ಇಟ್ಟುಕೊಂಡು ಬಂದವರು. 🔹.ಅವರು ಶೋಷಿತ ದಮನಿತ ಮತ್ತು ನೋಂದವರಿಗೆ ಪರಮಾತ್ಮ. ಬಡವರು ಮತ್ತು ಹಿಂದುಳಿದವರಿಗೆ ಮಹಾತ್ಮ. ಹಸಿದವರು ಮತ್ತು ಮಹಿಳೆಯರ ಪಾಲಿಗೆ ಪುಣ್ಯಾತ್ಮ. 🔹.ದೇಶದ್ರೋಹಿಗಳಿಗೆ ದೇಶಪ್ರೇಮದ ಪಾಠವ ಹೇಳಿಕೊಟ್ಟು *We are Indians firstly and lastly* ಎಂದವರು. 🔹.ಧ್ವನಿ ಇಲ್ಲದವರಿಗೆ ದನಿಯಾಗಿದ್ದರು. ಕಣ್ಣಿಲ್ಲದವರಿಗೆ ದೃಷ್ಟಿ ಯಾಗಿದ್ದರು. ಸಮಸ್ಯೆಗಳಿಗೆ ಪರಿಹಾರವಾಗಿದ್ದವರು. 🔹.ಯಾರ ಯಾರ ಮೇಲೆ ಭಾರತದಲ್ಲಿ ಬೆಳಕಿನ ಕಿರಣಗಳು ಸ್ಪರ್ಶಿಸುತ್ತವೆಯೋ ಅವರೆಲ್ಲ ಒಂದಲ್ಲ ಒಂದು ರೀತಿಯ ಬಾಬಾ ಸಾಹೇಬರ ಋಣದ ಫಲಾನುಭವಿಗಳು 🔹.ಬಾಬಾ ಸಾಹೇಬರನ್ನ *ಭಾರತದ ಮಾತೃ* ಎಂದರೆ ತಪ್ಪಾಗಲಾರದು.ಕಾರಣ ಪಿತೃ ಎಂದರೆ ನಂಬಿಕೆ ಮಾತೃ ಎಂದರೆ ವಾಸ್ತವ. 🔹. ಸ್ವಾತಂತ್ರ ಸಮಾನತೆ ಮತ್ತು ಭ್ರಾತೃತ್ವದ ಸಾರ್ವತ್ರಿಕ ಲಾಂಛನ ಹಾಗೂ ರಾಷ್ಟ್ರದ ಆಧಾರಸ್ತಂಭ. 🔹.ಮಾನವತೆಯ ಹೊಳಪು, ಭರವಸೆಯ ಬೆಳಕು ಮತ್ತು ದಾರಿದೀಪ. 🔹.ವಾಸ್ತವತೆಯ ಅದ್ಭುತ, ಚಮತ್ಕಾರ, ಪ್ರೇರಣ ಸಂಕೇತ, ಬದಲಾವಣೆಯ ಸ್ಫೂರ್ತಿ 🔹. ಮಾನವ ಹಕ್ಕುಗಳನ್ನು ಎತ್ತಿ ಹಿಡಿದ ಶೂರ.ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಂಕೇತ, ಸಾಮಾಜಿಕ ವಿಜ್ಞಾನಿ. 🔹.ಎರಡು ಮೂರು ಸಾವಿರಗಳ ವರ್ಷಗಳ ಭಾರತದ ಚರಿತ್ರೆಯಲ್ಲಿ ಒಬ್ಬ ರಾಜನ ಖಡ್ಗವು ಕೂಡ ಅಸ್ಪೃಶ್ಯತೆ ವಿರುದ್ಧ ಮಾತಾಡಲೇ ಇಲ್ಲ. ಆದರೆ ಅಂಬೇಡ್ಕರ್ ಅವರು ಪೆನ್ನಿನಿಂದ ಮಾತನಾಡಿದರು. 🔹.ಶಾಲೆಯ ಕಿಟಕಿಗಳ ಸರಳುಗಳ ಸಂಧಿಯಲ್ಲಿ ಪಾಠ ಕೇಳಿದವರು,ಇಂದು ಅವರ ಜನ್ಮದಿನವನ್ನು ವಿಶ್ವದಾದ್ಯಂತ ವಿಶ್ವ ಜ್ಞಾನ ದಿನ ಎಂದು ಆಚರಿಸಲಾಗುವಂತೆ ಮಾಡಿದವರು. 🔹.ಬೇರೆಯವರು ಬರೆದ ಚರಿತ್ರೆಯನ್ನು ಓದುವುದು ಒಂದು ಮಾದರಿಯಾದರೆ, ನಾವೇ ಚರಿತ್ರೆಯಾಗುವುದು ಇನ್ನೊಂದು ಮಾದರಿ. ಎರಡನೇ ಮಾದರಿ ಬಾಬಾ ಸಾಹೇಬರದ್ದು. 🔹.ಭಾರತ ದೇಶದ ಬೌದ್ಧಿಕ ರಾಯಬಾರಿ, ಬಾನಗಲದ ದೀಪ 🔹.ನಾಡಿನ ಎಲ್ಲರೂ ಕೂಡ ಹಸನಾಗಿ ಬದುಕಲು ಬೇಕಾಗುವ ಸಂವಿಧಾನವನ್ನು ರೂಪಿಸಿ,ಲೋಕದ ಕತ್ತಲನ್ನು ಭೇದಿಸಿ ಬೆಳಕನ್ನ ಮೂಡಿಸುವ ಸೂರ್ಯನಾಗಿ ಉದಯಿಸಿದವರು. 🔹.ಮನುಷ್ಯನ ಉಗುಳಿಗೂ, ನೆರಳಿಗೂ, ಹಾಗೂ ಹೆಜ್ಜೆ ಗುರುತಿಗೂ ಸ್ವಾತಂತ್ರ್ಯ ತಂದು ಕೊಟ್ಟವರು. 🔹. ಅಸಮಾನತೆಯ ಸಂಕೇತವಾಗಿದ್ದ ಮನುಸ್ಮೃತಿಯನ್ನು ದಹಿಸಿ ಸಮಾನತೆಯ ಸಂವಿಧಾನವನ್ನ ರಚಿಸಿದವರು. 🔹.ಜಗತ್ತಿನ ಸುಮಾರು 60 ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿದ ಜಗತ್ತಿನ ಮೊಟ್ಟಮೊದಲ ವ್ಯಕ್ತಿ. 🔹.ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊಟ್ಟ ಮೊದಲ ಭಾರತೀಯ ವಿದ್ಯಾರ್ಥಿ. *ಜಗತ್ತಿನ ಸಾಧಕರ ದೃಷ್ಠಿಯಲ್ಲಿ ಅಂಬೇಡ್ಕರ್* 🔹.ಅಂಬೇಡ್ಕರ್ ನನ್ನ ಆತ್ಮೀಯ ಸ್ನೇಹಿತರು.ಅವರು ನನ್ನ ದೇಶದಲ್ಲಿ ಜನಿಸಬೇಕಿತ್ತು. - ವಿನ್ ಸ್ಟನ್ ಚರ್ಚಿಲ್ 🔹.ಅಂಬೇಡ್ಕರ್ ರವರು ಭಾರತಮಾತೆಯ ಪಾದಗಳಿಗೆ ಬಂಗಾರದ ಪಾದುಕೆಗಳನ್ನ ತೊಡಿಸಿ,ತಲೆಗೆ ವಜ್ರ ಖಚಿತ ಕಿರೀಟವನ್ನು ಮುಡಿಸಿದ ಭಾರತಾಂಬೆಯ ಸುಪುತ್ರ - ಧನಂಜಯ್ ಕೀರ್ 🔹.ಡಾ. ಅಂಬೇಡ್ಕರ್ ರವರು ಅಮೂಲ್ಯ ಗುಣಗಳುಳ್ಳ ಒಬ್ಬ ಶ್ರೇಷ್ಠ ದೇಶಭಕ್ತ. - ಮಹಾತ್ಮ ಗಾಂಧೀಜಿ 🔹.ಗಾಂಧಿ ಮತ್ತು ನೆಹರು ಭಾರತೀಯ ದೈತ್ಯ ಮುಖಂಡರು. ಆದರೆ ಅಂಬೇಡ್ಕರ್ ರವರು ದೈತ್ಯರಲ್ಲಿ ದೈತ್ಯರು. - ಪ್ರೊ. ಮೈಕಲ್ ಪೂಟ್ 🔹. ಡಾ. ಅಂಬೇಡ್ಕರ್ ರವರು ವಿವೇಕ ಮತ್ತು ಜ್ಞಾನಗಳ ಮೂಲ - ಪ್ರೊ. ಲಾರ್ಡ್ ಕ್ಯಾಸೆ 🔹.ಭಾರತದಲ್ಲಿ ಸಾಕಷ್ಟು ಅವಮಾನಕರ ಸಂದರ್ಭಗಳನ್ನ ಎದುರಿಸಿದ್ದರೂ ಸಹ ದೇಶದ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಎಂದು ಯೋಚಿಸಲಿಲ್ಲ. ಅವರು ತಮ್ಮ ಜೀವನದುದ್ದಕ್ಕೂ ವಿಷವನ್ನು ಕುಡಿದು ನಮ್ಮೆಲ್ಲರಿಗೂ ಅಮೃತ ನೀಡಿದ್ದಾರೆ. -ನರೇಂದ್ರ ಮೋದಿ 🔹.ಡಾ.ಅಂಬೇಡ್ಕರ್ ಅವರು ಭಾರತೀಯ ಸಂವಿಧಾನಸೌಧದ ಶಿಲ್ಪಿ. ಅವರ ಘನತೆ ಮತ್ತು ಅಂತರ ದೃಷ್ಟಿಗಳಿಗೆ ಭಾರತೀಯ ಸಂವಿಧಾನ ಒಂದು ಜೀವಂತ ಪುರಾವೆ. - ಜಸ್ಟೀಸ್ ಚಿನ್ನಪ್ಪ ರೆಡ್ಡಿ 🔹.ಡಾ. ಅಂಬೇಡ್ಕರ್ ಅವರು ಸ್ವತಂತ್ರ ಭಾರತ ಸಂವಿಧಾನದ ರಚನೆಯ ಮೂಲಕ ಅಮರರಾಗಿದ್ದಾರೆ. - ಜಸ್ಟಿಸ್ ಡಾ. ರಾಮಾಜೋಯಿಸ್ 🔹.ಡಾ.ಅಂಬೇಡ್ಕರ್ ಅವರು ಕಾನೂನಾತ್ಮಕ ವಿನ್ಯಾಸ ಮತ್ತು ಕ್ಷಾತ್ರ ಸಂಸ್ಕೃತಿಯನ್ನು ರೂಪಿಸಲು ಒಂದೆಡೆ ಮಿಲನಗೊಂಡಿದ್ದ ಅತ್ಯುತ್ತಮ ಮೆದುಳು ಮತ್ತು ಹೃದಯಗಳನ್ನು ಹೊಂದಿದವರು. - ಜಸ್ಟೀಸ್ ವಿ. ಆರ್. ಕೃಷ್ಣ ಅಯ್ಯರ್ 🔹.ಡಾ.ಅಂಬೇಡ್ಕರ್ ಅವರು ಮಾನವ ಹಕ್ಕುಗಳ ನಿಜವಾದ ವೀರಾಗ್ರಣಿ. ಅವರು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತನ್ನ ಇಡೀ ಬದುಕನ್ನ ಅರ್ಪಿಸಿಕೊಂಡ ಅದ್ವಿತೀಯ ವ್ಯಕ್ತಿ. -ಡಾ. ನೆಲ್ಸನ್ ಮಂಡೇಲಾ 🔹.ಇಂತಹ ಒಬ್ಬ ಮೇಧಾವಿಯನ್ನ, ಮಹಾನ್ ರಾಷ್ಟ್ರಭಕ್ತನನ್ನ ಇಷ್ಟು ದಿನ ತಪ್ಪಾಗಿ ತಿಳಿದಿದ್ದೆ ಇದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲೇಬೇಕೆಂದು ನಿರ್ಧರಿಸಿ ಪ್ರಾಯಶ್ಚಿತವಾಗಿ ನಾನು ಬದುಕಿರುವವರೆಗೂ ಈ ಮಹಾನ್ ರಾಷ್ಟ್ರಭಕ್ತನ ವಿರುದ್ಧ ಒಂದೇ ಒಂದು ಅಕ್ಷರ ಬರೆಯುವುದಿಲ್ಲ. - ಖ್ಯಾತ ಪತ್ರಕರ್ತ ಶ್ರೀ ಆಚಾರ್ಯ ಅತ್ರಿ 🔹.ಡಾ. ಅಂಬೇಡ್ಕರ್ ಅವರ ಆದರ್ಶಮಯ ವ್ಯಕ್ತಿತ್ವ ಮತ್ತು ರಾಷ್ಟ್ರಭಕ್ತಿಯು ಒಂದು ಪಾಠವಾಗಬೇಕು. - ಜಸ್ಟಿಸ್ ಸಂತೋಷ್ ಹೆಗಡೆ 🔹.ಭಾರತದ ಸಂವಿಧಾನದ ಪ್ರತಿ ಪದದಲ್ಲಿಯೂ ಅಂಬೇಡ್ಕರ್ ಅವರ ಧ್ವನಿ ಕೇಳಿಸುತ್ತದೆ. - ಡಾ.ಎಂ. ವಿ. ಫೈಲಿ ಖ್ಯಾತ ಸಂವಿಧಾನ ತಜ್ಞ 🔹.ನಾನು ಹುಟ್ಟಿರುವ ವರ್ಗದ ನರಳಾಟವನ್ನ ನಿಲ್ಲಿಸಲಾಗದಿದ್ದರೆ ನಾನೇ ಗುಂಡಿಟ್ಟುಕೊಂಡು ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತೇನೆ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ಸಂವಿಧಾನ ರಚನೆಯ ಮೂಲಕ ಅಸ್ಪೃಶ್ಯತೆಯನ್ನ ರದ್ದು ಮಾಡಿ ಅವರ ಪ್ರತಿಜ್ಞೆಯನ್ನ ನೆರವೇರಿಸಿಕೊಂಡರು. - ಆರ್ ಕುಲದೀಪ್ ನಯ್ಯರ್. ಖ್ಯಾತ ವಿದ್ವಾಂಸರು 🔹.ಒಂದು ಹಳ್ಳಿಯ ಬಡ ರೈತನ ಮಗನಾದ ನಾನು ಈ ದೇಶಕ್ಕೆ ಪ್ರಧಾನಿಯಾಗಲು ಡಾ. ಅಂಬೇಡ್ಕರ್ ರವರು ರಚಿಸಿಕೊಟ್ಟ ಭಾರತದ ಸಂವಿಧಾನದಿಂದ ಸಾಧ್ಯವಾಯಿತು . - ಶ್ರೀ ಹೆಚ್. ಡಿ.ದೇವೇಗೌಡ 🔹. ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿರುವುದರ ಹಿಂದೆ ನಮ್ಮ ಸಮಾಜದಲ್ಲಿ ಇದ್ದ ಅನ್ಯಾಯವನ್ನ ಸರಿಪಡಿಸುವ ಮಾನವತೆ ಮತ್ತು ಸಾಮಾಜಿಕ ನ್ಯಾಯದ ಉದಾತ್ತ ಉದ್ದೇಶ ಆಡಗಿದೆ. - ಶ್ರೀ ಅಟಲ್ ಬಿಹಾರಿ ವಾಜಪೇಯಿ 🔹.ಡಾ. ಅಂಬೇಡ್ಕರ್ ಅವರ ಪ್ರತಿಭೆ ಮತ್ತು ಪಾಂಡಿತ್ಯಕ್ಕೆ ಹೋಲಿಕೆ ಮಾಡಬಹುದಾದ ವ್ಯಕ್ತಿ ಮತ್ತೊಬ್ಬರು ಸಿಗಲಾರರು. - ಶ್ರೀ.ವಿ.ಪಿ. ಸಿಂಗ್ 🔹.ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನವು ಸಮಾನತೆಯ ಶಾಸನವಾಗಿದ್ದು ಅವರು ಭಾರತದ ಸಂವಿಧಾನದ ನಿರ್ಮಾತೃ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. - ಶ್ರೀಮತಿ ಇಂದಿರಾಗಾಂಧಿ 🔹.ತಮ್ಮ ಸಮಯ ಪ್ರತಿಭೆಗಳೆಲ್ಲವನ್ನ ಶ್ರೇಷ್ಠವಾದ ಭಾರತದ ಸಂವಿಧಾನದ ರಚನೆಗಾಗಿ ಧಾರೆ ಎರೆದ ಅಂಬೇಡ್ಕರ್ ಅವರಿಗೆ ಭಾರತದ ಜನತೆ ಸದಾ ಋಣಿಯಾಗಿರುತ್ತದೆ. ಇಂತಹ ಮಹಾನ್ ಪುತ್ರರನ್ನು ದೇಶ ಎಂದಿಗೂ ಮರೆಯಬಾರದು. - ಡಾ. ಎಸ್. ರಾಧಾಕೃಷ್ಣನ್ 🔹. ಡಾ. ಅಂಬೇಡ್ಕರ್ ರವರು ವಕೀಲ ವೃಂದದ ಶ್ರೇಷ್ಠ ಸದಸ್ಯರಾಗಿದ್ದರು. ಭಾರತದ ಸಂವಿಧಾನದ ರಚನೆಯಲ್ಲಿ ಅವರ ಪರಿಣಿತಿ ಮತ್ತು ಉದ್ಯೋಗಶೀಲತೆಯಿಂದ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದರು. - ಜಸ್ಟೀಸ್ ಕೊಯೆಜೆ 🔹.ಆಧುನಿಕ ಭಾರತದ ನಿರ್ಮಾಣಕ್ಕೆ ಡಾ. ಅಂಬೇಡ್ಕರ್ ಅವರು ನೀಡಿರುವ ಅಮೂಲ್ಯವಾದ ಕೊಡುಗೆಗಳನ್ನು ಮುಂದಿನ ಪೀಳಿಗೆಗಳು ಕೃತಜ್ಞತೆ ಮತ್ತು ಹೆಮ್ಮೆಯಿಂದ ಸ್ಮರಿಸಿಕೊಳ್ಳಬೇಕು. - ಭಾಸ್ಕರ್ ಘೋರ್ಪಡೆ 🔹.ಶಿಕ್ಷಣವೇತ್ತರಾಗಿ, ವಿದ್ವಾಂಸರಾಗಿ,ರಾಜಕೀಯ ಹಾಗೂ ಧಾರ್ಮಿಕ ಮುಖಂಡರಾಗಿ ತಮ್ಮ ದೇಶ ಮತ್ತು ಜನಗಳಿಗೆ ಸೇವೆ ಸಲ್ಲಿಸಿರುವ ಭಾರತದ ಮಹಾನ್ ನಾಯಕನೊಂದಿಗೆ ಸಹಚರ್ಯ ಹೊಂದಿದ್ದಕ್ಕಾಗಿ ನಮ್ಮ ವಿಶ್ವವಿದ್ಯಾನಿಲಯ ಹೆಮ್ಮೆ ಪಡುತ್ತದೆ. - ಸರ್ ವಾಲ್ಟರ್ ಆಡಮ್ಸ್ ನಿರ್ದೇಶಕರು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ 🔹.ವಿಶ್ವದಲ್ಲೆಲ್ಲ ಸಮಾನತೆ ಮತ್ತು ನ್ಯಾಯಕ್ಕಾಗಿ ಕೇಳಿ ಬರುತ್ತಿರುವ ಬೇಡಿಕೆಗಳಿಗೆ ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಕಿವಿ ಕೊಡುತ್ತಿರುವ ಈ ವರ್ತಮಾನ ಕಾಲದಲ್ಲಿ ಅಂಬೇಡ್ಕರ್ ಅವರ ಜೀವನ ಮತ್ತು ಕಾರ್ಯಗಳಿಗೆ ಒಂದು ವಿಶೇಷ ಅರ್ಥ ಬಂದಿದೆ. - ಡಾ. ಎನ್ ಸ್ಲಿ.ಟಿ. ಎಂಬ್ರೀ, ಡೀನ್, ಕೊಲಂಬಿಯ ವಿ.ವಿ 🔹.ನಮ್ಮ ಕೊಲಂಬಿಯ ವಿಶ್ವವಿದ್ಯಾಲಯದ ಪದವೀಧರನನ್ನು ಭಾರತದ ಅನನ್ಯ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಆರಿಸಿದ್ದು ನಮಗೆ ತೀವ್ರ ಸಂತೃಪ್ತಿ ಕೊಟ್ಟಿದೆ. - ವಿಲಿಯಂ ಜೆ.ಮೆಕ್ ಗಿಲ್. ಅಧ್ಯಕ್ಷರು ಕೊಲಂಬಿಯ ವಿಶ್ವವಿದ್ಯಾನಿಲಯ 🔹.ಭಾರತ ದೇಶದ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಕರಿಸಿದವರಲ್ಲಿ ಅಂಬೇಡ್ಕರ್ ಪ್ರಮುಖರು.ಈ ಪ್ರಕ್ರಿಯೆಯ ಸಂದರ್ಭದಲ್ಲಿ ಲಕ್ಷಾಂತರ ಅಲ್ಲ,ಕೋಟ್ಯಾಂತರ ಜನರು ಕೂಡ ಉತ್ತಮವಾದ ಸಂತೋಷಪೂರ್ಣ ಬದುಕನ್ನ ಎದುರು ನೋಡಲು ಸಾಧ್ಯವಾಯಿತು. - ಉ. ನು. ಬರ್ಮ ದೇಶದ ಪ್ರಧಾನಿ 🔹.ಅಂಬೇಡ್ಕರ್ ಅವರು ಮಾನವ ಸಮಾನತೆಯ ಆಶಯ ಹೊಂದಿದ್ದು, ಜನಾಂಗ ವರ್ಣ ಸಿದ್ದಾಂತ ಮತ್ತು ರಾಜಕೀಯ ನಂಬಿಕೆಗಳಿಗೆ ಹೊರತಾಗಿರುವ ಸರ್ವರಿಗೂ ಸಮಾನ ಹಕ್ಕುಗಳು ಎಂಬ ಸಿದ್ದಾಂತವನ್ನು ಸಮರ್ಪಣೆ ಮಾಡಿಕೊಂಡಿರುವ ಕಾಮನ್ ವೆಲ್ತ್ ಒಕ್ಕೂಟಕ್ಕೆ ಸದಾ ಸ್ಪೂರ್ತಿಯಾಗಿರುತ್ತಾರೆ. - ಚೀಫ್ ಇಮೇಕ ಅನೌಕು ಕಾಮನ್ ವೆಲ್ತ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ 🔹.ಡಾ. ಅಂಬೇಡ್ಕರ್ ಅವರು ಒಬ್ಬ ಅಸಾಧಾರಣ ರಾಜಕಾರಣಿ, ಕಾನೂನು ಪಂಡಿತ ಮತ್ತು ಬುದ್ಧಿಜೀವಿಯಾಗಿದ್ದರು. - ಮಾರ್ಗರೇಟ್ ಥ್ಯಾಚರ್ 🔹.ಭಾರತದ ಶಕ್ತಿಶಾಲಿ ಸಂವಿಧಾನವು ವಿಶ್ವದ ಮಾದರಿ ಸಂವಿಧಾನವಾಗಿದೆ. ಅಲ್ಲದೆ ಭಾರತದ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಟ್ಟಿದೆ. ನಮ್ಮ ದೇಶವು ಅಂಬೇಡ್ಕರ್ ಅವರ ಮೇಲೆ ಎಂದೆಂದೂ ವಿಶೇಷ ಗೌರವ ಹೊಂದಿದೆ. - ಬರಾಕ್ ಒಬಾಮ 🔹.ಅಂಬೇಡ್ಕರ್ ಅವರು ಶೋಷಿತರ ಹಕ್ಕುಗಳಿಗಾಗಿ ಪ್ರಜಾಪ್ರಭುತ್ವದ,ಜಾತ್ಯತೀತ ಮತ್ತು ಮುಕ್ತ ಸಮಾಜದ ಪೌರತ್ವ ಪಡೆಯಲು ಅನುವಾಗುವಂತಹ ಸಂವಿಧಾನದ ಚೌಕಟ್ಟು ನಿರ್ಮಿಸಿದರು. - ದಿ ರೈಟ್ ಹಾನರಬಲ್, ನೀಲ್ ಕಿನಾಕ್, ಲೇಬರ್ ಪಕ್ಷದ ನಾಯಕ, ಬ್ರಿಟನ್ 🔹.ಪ್ರತಿಯೊಬ್ಬ ಭಾರತೀಯ ನಾಗರೀಕನು ತನ್ನ ಹಕ್ಕುಗಳನ್ನ ಆನಂದದಿಂದ ಅನುಭವಿಸುವಾಗ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನ ಕೃತಜ್ಞತೆಯಿಂದ ಸ್ಮರಿಸುತ್ತಾನೆ. - ಜಸ್ಟೀಸ್ ಛಾoಗ್ಲಾ 🔹.ಅಂಬೇಡ್ಕರ್ ರವರು :ನನ್ನ ಅರ್ಥಶಾಸ್ತ್ರದ ಪಿತಾಮಹ ' ಅವರು ಹೇಳಿದ್ದನ್ನ ವಿಸ್ತರಿಸಿದ್ದೇನೆ. ನಾನೇನು ಹೆಚ್ಚಿನದ್ದು ಸಾಧಿಸಿಲ್ಲ - ಅಮರ್ತ್ಯಸೇನ್, ನೊಬೆಲ್ ಪ್ರಶಸ್ತಿ ವಿಜೇತ 🔹.ಅಂಬೇಡ್ಕರ್ ರವರು ಆಧುನಿಕ ಭಾರತದ ಪ್ರಧಾನ ಶಿಲ್ಪಿಗಳಲ್ಲಿ ಒಬ್ಬರು. ಅವರು ಸಾಮಾಜಿಕ ನ್ಯಾಯದ ಸಮರ್ಥಕ. - ರಾಮಚಂದ್ರ ಗುಹಾ, ಖ್ಯಾತ ಇತಿಹಾಸಕಾರ 🔹.Ambedkar was an 'intellectual Colossus' (ಬೌದ್ಧಿಕತೆಯ ದೈತ್ಯ ) -ನರೇಂದ್ರ ಜಾಧವ್, ಖ್ಯಾತ ಅರ್ಥಶಾಸ್ತ್ರಜ್ಞ 🔹.ಭಾರತದ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಕುರಿತು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್, ಉಪಾಧ್ಯಕ್ಷರಾಗಿದ್ದ ಟಿ.ಟಿ.ಕೃಷ್ಣಮಚಾರಿ, ಭಾರತದ ಕೊನೆಯ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್, ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಭಾರತೀಯ ಗವರ್ನರ್ ಜನರಲ್ ಸಿ.ರಾಜಗೋಪಾಲಚಾರಿ, ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು, ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳಾದ ಅಶೋಕ್ ಮೆಹತಾ, ಶ್ರೀ ಅಲ್ಲಡಿ ಕೃಷ್ಣಸ್ವಾಮಿ ಅಯ್ಯರ್, ಫ್ರಾಂಕ್ ಆoತೋಣಿ, ಶ್ರೀ ಡಾ. ಪಟ್ಟಾಭಿ ಸೀತಾರಾಮಯ್ಯ, ತಜಮುಲ್ ಹುಸೇನ್, ರಾಮಚಂದ್ರ ಗುಪ್ತ, ಹೆಚ್ ಜೆ ಖಂಡೇಕರ್, ಶ್ರೀ ತಿರುಮಲ ರಾವ್, ಶ್ರೀ ಆರ್ ವಿ ಧೂಲೇಕರ್, ಶ್ರೀ ಜಸ್ಪತ್ ರಾಯ್ ಕಪೂರ್, ಮುನಿಸ್ವಾಮಿ ಪಿಳ್ಳೈ ಮುಂತಾದವರು ಸಂವಿಧಾನ ರಚನೆಯಲ್ಲಿ ಡಾ.ಅಂಬೇಡ್ಕರ್ ಅವರ ಶ್ರಮವನ್ನ ಹಾಡಿ ಹೊಗಳಿದ್ದಾರೆ. ಯಾರು ಈ ಅಂಬೇಡ್ಕರ್ ಎಂದು ಜಗತ್ತಿಗೆ ಗೊತ್ತು. ಏನೇ ಇರಲಿ ಅಂಬೇಡ್ಕರ್ ಅವರ ಮಹಾನ್ ಕಾರ್ಯಗಳ ಅಧ್ಯಯನ ಮಾಡುತ್ತ ಹೋದರೆ ನಮಗೆ ಆಶ್ಚರ್ಯವಾಗಿ ಬಿಡುತ್ತದೆ ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಸಾಧ್ಯವೇ?ಎಂದೂ ... 🔹.ಅಂಬೇಡ್ಕರ್ ಅವರ ಹೆಸರಿನಲ್ಲಿ 13 ಕಾಲೇಜುಗಳು, 36 ಸಂಶೋಧನಾ ಕೇಂದ್ರಗಳು ಮತ್ತು ವಿಶ್ವವಿದ್ಯಾನಿಲಯಗಳು, 4 ರೈಲ್ವೆ ನಿಲ್ದಾಣಗಳು, 2 ವಿಮಾನ ನಿಲ್ದಾಣಗಳು, 9 ಕ್ರೀಡಾಂಗಣಗಳು, 15 ವಸ್ತು ಸಂಗ್ರಹಾಲಯಗಳು ಉದ್ಯಾನಗಳು ಮತ್ತು ಕಟ್ಟಡಗಳು, 5 ಗ್ರಂಥಾಲಯಗಳು, 8 ಆಸ್ಪತ್ರೆಗಳು 4 ಹಳ್ಳಿಗಳು, ಮತ್ತು ಪಟ್ಟಣಗಳು ರಚನೆಯಾಗಿವೆ. 12 ಚಲನಚಿತ್ರಗಳು ನಿರ್ಮಾಣವಾಗಿವೆ. *ಯಾರು ಈ ಅಂಬೇಡ್ಕರ್?* *ಅಂಬೇಡ್ಕರ್ ಮಾನವ ಮಾತ್ರವಲ್ಲ, ಇಷ್ಟೆಲ್ಲಾ ವಿಕ್ರಮಗಳನ್ನು ಸಾಧಿಸಿರುವ ಮಾನವದ್ಭುತ* 🔹.*ಜೈ ಭೀಮ್* ಎನ್ನುವುದು ಕೇವಲ ಹೆಸರಲ್ಲ, ಕೋಟ್ಯಂತರ ಭಾರತೀಯರ ನಿತ್ಯ ಬದುಕಿನ ಉಸಿರು. ಪ್ರತಿಯೊಬ್ಬ ಭಾರತೀಯರ ಎದೆ ಬಡಿತ ಮತ್ತು ನಾಡಿಮಿಡಿತ. 🔹.ಎಲ್ಲರೂ ಎಲ್ಲವೂ ಆಗುವಂತೆ ಮಾಡಿದ, ನ್ಯಾಯವು ಪ್ರಭುತ್ವದ ಪಾಲಾಗದಂತೆ ತಡೆದ ನೆಲದ ಕರುಣೆಯ ದನಿ... ಹುಟ್ಟಿದರೂ ಮನುಷ್ಯರಾಗದೇ ಉಳಿದಿದ್ದ ಜನರನ್ನು ಮನುಷ್ಯರನ್ನಾಗಿ ಮಾಡಿದ ದೊಡ್ಡ ಮನುಷ್ಯನ ಹುಟ್ಟಿದ ದಿನ. ಭಾರತದ ಪ್ರತಿ ಹಳ್ಳಿಯ ಗಲ್ಲಿಯಿಂದ ಹಿಡಿದು ವಿಶ್ವಸಂಸ್ಥೆಯವರೆಗೆ ಆಚರಿಸುವ ಏಕೈಕ ಜಯಂತಿ ಅದು ಭೀಮ ಜಯಂತಿ. *ವಿಶ್ವಗಣಕ್ಕೆ ವಿಶ್ವಜ್ಞಾನಿ,ವಿಶ್ವರತ್ನ, ಭಾರತರತ್ನ,ಭಾರತ ಭಾಗ್ಯವಿಧಾತ, ಮಹಾನ್ ಮಾನವತಾವಾದಿ ಡಾ. ಬಾಬಾ ಸಾಹೇಬ್ ಭೀಮರಾವ್ ರಾಮ್ ಜೀ ಅಂಬೇಡ್ಕರ್ ರವರ 135 ನೇ ಜಯಂತಿಯ ಶುಭಾಶಯಗಳು* 💐🙏💙 *ಶಿವಪ್ಪ ಜಿ ಕಂಬಾರ್* ಕೆ ಆರ್ ಡಿ ಎಸ್ ಎಸ್ ಸಂಚಾಲಕರು ತಾಲೂಕು ಸಮಿತಿ *ಲಕ್ಷ್ಮಿ ನಾರಾಯಣ* ನಾಗವರ್ ಸ್ಥಾಪಿತ ಕೆಂಭಾವಿ 💙ಜೈಭೀಮ್ 💙

17 hrs ago
user_ಶಿವಪ್ಪ ಜಿ ಕಂಬಾರ್ ಕೆಂಭಾವಿ
ಶಿವಪ್ಪ ಜಿ ಕಂಬಾರ್ ಕೆಂಭಾವಿ
ಶೋರಾಪುರ, ಯಾದಗಿರಿ, ಕರ್ನಾಟಕ•
17 hrs ago
c293b545-26bc-4249-8370-1cc6041efb50

More news from ಕರ್ನಾಟಕ and nearby areas
  • ಕರ್ನಾಟಕದ ಸಾರ್ವನಿಕರಿಗೆ ಒಂದು ಪ್ರಕಟಣಿ ಯಾರೆ ಬಂದು ಕೇಳಿದರೆ ಏನೆ ಹೇಳಿದರು ದೂರ ನಿಂತ್ತು ಮಾತನಾಡಿಸಿ ಕರ್ನಾಟಕದಲ್ಲಿ ಹೊಸ ಅಡ್ವಡಿಜ್ ಮೆಂಟ ತರುತಾಇರತಾರೆ ಹುಶಾರ ಆಗಿ ಇರಿ.
    1
    ಕರ್ನಾಟಕದ ಸಾರ್ವನಿಕರಿಗೆ ಒಂದು ಪ್ರಕಟಣಿ ಯಾರೆ ಬಂದು ಕೇಳಿದರೆ ಏನೆ ಹೇಳಿದರು  ದೂರ ನಿಂತ್ತು ಮಾತನಾಡಿಸಿ ಕರ್ನಾಟಕದಲ್ಲಿ ಹೊಸ ಅಡ್ವಡಿಜ್ ಮೆಂಟ ತರುತಾಇರತಾರೆ ಹುಶಾರ ಆಗಿ ಇರಿ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    2 hrs ago
  • ಅಫಜಲಪೂರ : ತಾಲೂಕಿನಲ್ಲಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಹೊರಬಂದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ದಾಖಲಿಸಿದ್ದು, ಭಾಗಣ್ಣ ಎಂಬ ವಿದ್ಯಾರ್ಥಿ ಶೇ. 97.16 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಕೀರ್ತಿಯನ್ನು ತಂದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 85% ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಕುಮಾರಿ ಅಂಕಿತಾ ಅವರು ಶೇ. 82.33 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಯ್ಯ ಸಾಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    1
    ಅಫಜಲಪೂರ : ತಾಲೂಕಿನಲ್ಲಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಹೊರಬಂದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ದಾಖಲಿಸಿದ್ದು, ಭಾಗಣ್ಣ ಎಂಬ ವಿದ್ಯಾರ್ಥಿ ಶೇ. 97.16 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಕೀರ್ತಿಯನ್ನು ತಂದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 85% ಫಲಿತಾಂಶ ಹಾಗೂ
ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಕುಮಾರಿ ಅಂಕಿತಾ ಅವರು ಶೇ. 82.33 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಯ್ಯ ಸಾಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    13 hrs ago
  • ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.
    1
    ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ  ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. 
ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    18 hrs ago
  • ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಜೀರಂಕಲಗಿ ಗ್ರಾಮದ ಶ್ರೀ ಕಲ್ಮೀಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಿವೃತ್ತ ಯೋಧ ಶ್ರೀ ಖಂಡೋಬಾ ಮುರಳೀಧರ ಬಿರಾದಾರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಯೋಧರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವ ವೀರರು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    1
    ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಜೀರಂಕಲಗಿ ಗ್ರಾಮದ ಶ್ರೀ ಕಲ್ಮೀಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಿವೃತ್ತ ಯೋಧ ಶ್ರೀ ಖಂಡೋಬಾ ಮುರಳೀಧರ ಬಿರಾದಾರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಯೋಧರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವ ವೀರರು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    47 min ago
  • "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ" ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ: ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ, ಆನಂದ ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
    1
    "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ"
ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ:
ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ  ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ  ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ  ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ,  ಆನಂದ  ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ  ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    13 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    12 hrs ago
  • ಯಾದಗಿರಿ || Yadgir S p Pruthvik Shankar
    1
    ಯಾದಗಿರಿ || Yadgir S p Pruthvik Shankar
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    20 hrs ago
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    18 hrs ago
  • ತಾಲೂಕಿಗೆ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಅಳ್ಳಗಿ (ಬಿ) ಗ್ರಾಮದ ವಿದ್ಯಾರ್ಥಿನಿ: ಬಡತನ ಇದ್ದರೂ ಛಲ ಬಿಡದೆ ಯಶಸ್ಸು ಕಂಡ ನೀಲಮ್ಮ ಕಲಶೇಟ್ಟಿ.
    1
    ತಾಲೂಕಿಗೆ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಅಳ್ಳಗಿ (ಬಿ) ಗ್ರಾಮದ ವಿದ್ಯಾರ್ಥಿನಿ: ಬಡತನ ಇದ್ದರೂ ಛಲ ಬಿಡದೆ ಯಶಸ್ಸು ಕಂಡ ನೀಲಮ್ಮ ಕಲಶೇಟ್ಟಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.