logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು : ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು. ಆಗಸ್ಟ್ 01ರ ಶನಿವಾರ ದಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಲಕ್ಷಾಂತರ ಜನರು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜಿನ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ಮೋಜಿಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಎಂದರು. ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರ್ಥಪೂರ್ಣವಾಗಿದೆ. ಇಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ, ತಾಯಿಯರ ಆಸೆಗಳನ್ನು ಈಡೇರಿಸಲು ವಿಫಲವಾಗುತ್ತಾರೆ. ಮಹಾಂತ್ ಶಿವಯೋಗಿಗಳು ಮಹಾಂತ್ ಜೋಳಿಗೆಯನ್ನು ಸ್ಥಾಪಿಸಿ. ಸಮಾಜದಲ್ಲಿ ಆನೇಕ ಕುಟುಂಬಗಳನ್ನು ದುಶ್ಚಟಗಳಿಂದ ಹೊರತಂದರು. ಅವರು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ‌ಮಾಡಿದ್ದಾರೆ ಎಂದರು. ಡ್ರಗ್ಸ್ ಮುಕ್ತ ರಾಜ್ಯಕ್ಕಾಗಿ ಆಪರೇಷನ್ ರೈಸಿ ಈಗಾಗಲೇ ಸರ್ಕಾರದಿಂದ ಪ್ರಾರಂಭವಾಗಿದೆ. ಸಾರ್ವಜನಿಕರಿಗೆ ಡ್ರಗ್ಸ್ ಕುರಿತು ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಸಹಕರಿಸಬೇಕು. ಅಲ್ಲದೆ ‌ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಅತ್ಯಂತ ಶ್ರದ್ಧೆಯಿಂದ ಚೆನ್ನಾಗಿ ಓದಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಂತರ ಉಪನ್ಯಾಸಕರಾಗಿ ಮನೋ ವೈದ್ಯರಾದ ಡಾ.ವಿ.ಎ.ಮಾಲಿ ಪಾಟೀಲ್ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನವು ಬಹಳಷ್ಟು ಮಹತ್ವ ಪೂರ್ಣವಾಗಿದ್ದು, ಜೀವನದಲ್ಲಿ ಅವರು ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ ಎನ್ನುವಂತೆ ಪ್ರತಿಯೊಬ್ಬರೂ ಇವರ ರೀತಿಯ ಜೀವನವನ್ನು ನಡೆಸಿದರೆ ಯುವಜನತೆಯು ವ್ಯಸನಗಳಿಂದ ಮುಕ್ತರಾಗಿ ಒಳ್ಳೆಯ ಜೀವನವನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.

3 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
3 hrs ago

ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು : ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು. ಆಗಸ್ಟ್ 01ರ ಶನಿವಾರ ದಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಲಕ್ಷಾಂತರ ಜನರು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜಿನ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ಮೋಜಿಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಎಂದರು. ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರ್ಥಪೂರ್ಣವಾಗಿದೆ. ಇಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ, ತಾಯಿಯರ ಆಸೆಗಳನ್ನು ಈಡೇರಿಸಲು ವಿಫಲವಾಗುತ್ತಾರೆ. ಮಹಾಂತ್ ಶಿವಯೋಗಿಗಳು ಮಹಾಂತ್ ಜೋಳಿಗೆಯನ್ನು ಸ್ಥಾಪಿಸಿ. ಸಮಾಜದಲ್ಲಿ ಆನೇಕ ಕುಟುಂಬಗಳನ್ನು ದುಶ್ಚಟಗಳಿಂದ ಹೊರತಂದರು. ಅವರು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ‌ಮಾಡಿದ್ದಾರೆ ಎಂದರು. ಡ್ರಗ್ಸ್ ಮುಕ್ತ ರಾಜ್ಯಕ್ಕಾಗಿ ಆಪರೇಷನ್ ರೈಸಿ ಈಗಾಗಲೇ ಸರ್ಕಾರದಿಂದ ಪ್ರಾರಂಭವಾಗಿದೆ. ಸಾರ್ವಜನಿಕರಿಗೆ ಡ್ರಗ್ಸ್ ಕುರಿತು ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಸಹಕರಿಸಬೇಕು. ಅಲ್ಲದೆ ‌ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಅತ್ಯಂತ ಶ್ರದ್ಧೆಯಿಂದ ಚೆನ್ನಾಗಿ ಓದಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಂತರ ಉಪನ್ಯಾಸಕರಾಗಿ ಮನೋ ವೈದ್ಯರಾದ ಡಾ.ವಿ.ಎ.ಮಾಲಿ ಪಾಟೀಲ್ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನವು ಬಹಳಷ್ಟು ಮಹತ್ವ ಪೂರ್ಣವಾಗಿದ್ದು, ಜೀವನದಲ್ಲಿ ಅವರು ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ ಎನ್ನುವಂತೆ ಪ್ರತಿಯೊಬ್ಬರೂ ಇವರ ರೀತಿಯ ಜೀವನವನ್ನು ನಡೆಸಿದರೆ ಯುವಜನತೆಯು ವ್ಯಸನಗಳಿಂದ ಮುಕ್ತರಾಗಿ ಒಳ್ಳೆಯ ಜೀವನವನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.

More news from ಕರ್ನಾಟಕ and nearby areas
  • ಬಂಗಿಕುಂಟಾ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗೆ ಬೆಂಕಿ., ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.. ರಾಯಚೂರು ನಗರದ ಬಂಗಿಕುಂಟಾ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಬಂಗಿಕುಂಟಾದಲ್ಲಿ ತಾಯಣ್ಣ ಎಂಬುವವರಿಗೆ ಸೇರಿದ ಟಿನ್ ಶಡ್‌ನಲ್ಲಿದ್ದ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿಗಳು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದಾಗಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ತಾಯಣ್ಣ ಅವರು ಹೆಚ್ಚಿನ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್‌ ಇಟ್ಟುಕೊಂಡಿದ್ದರು. ಆದರೆ, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಬ್ಬದ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿವೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದರು. ಘಟನೆ ಕುರಿತು ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗ್ನಿ ಅವಘಡದ ಕಾರಣ ಹಾಗೂ ನಷ್ಟದ ಪ್ರಮಾಣದ ಕುರಿತು ಪರಿಶೀಲನೆ ಮುಂದುವರಿದಿದೆ.
    2
    ಬಂಗಿಕುಂಟಾ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗೆ ಬೆಂಕಿ., ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ..
ರಾಯಚೂರು ನಗರದ ಬಂಗಿಕುಂಟಾ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಬಂಗಿಕುಂಟಾದಲ್ಲಿ ತಾಯಣ್ಣ ಎಂಬುವವರಿಗೆ ಸೇರಿದ ಟಿನ್ ಶಡ್‌ನಲ್ಲಿದ್ದ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿಗಳು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದಾಗಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ತಾಯಣ್ಣ ಅವರು ಹೆಚ್ಚಿನ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್‌ ಇಟ್ಟುಕೊಂಡಿದ್ದರು. ಆದರೆ, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಬ್ಬದ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿವೆ.
ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದರು.
ಘಟನೆ ಕುರಿತು ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗ್ನಿ ಅವಘಡದ ಕಾರಣ ಹಾಗೂ ನಷ್ಟದ ಪ್ರಮಾಣದ ಕುರಿತು ಪರಿಶೀಲನೆ ಮುಂದುವರಿದಿದೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
  • ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
    3
    ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ.
ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ
ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ.
ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ
ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು.
ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು
ಸರಾಗವಾಗಿ ಮಾಡಬೇಕು. ಹರಿಯುವಂತೆ
ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು.
ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ
ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    12 hrs ago
  • ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗ: ತಾಲೂಕಿನ ನಗರಗುಂಡ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಇದೀಗ ದೇವದುರ್ಗ ಪಟ್ಟಣದ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಗುಡ್ಡ ಪ್ರದೇಶದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಚಿರತೆಗಳ ಓಡಾಟದ ಕುರಿತು ವರದಿಯಾಗುತ್ತಿದ್ದು, ಇದೀಗ ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಚಲನವಲನ ಹಾಗೂ ಜಾಡು ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಮೂಲಕ ನಿಗಾ ವಹಿಸುತ್ತಿದ್ದು, ಗುಡ್ಡ ಪ್ರದೇಶದಲ್ಲಿ ಚಿರತೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ತಾಲೂಕಿನ ವಿವಿಧೆಡೆ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ವಲಸೆ ಬಂದಿರುವ ಚಿರತೆಗಳಾಗಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಗುಡ್ಡ ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಚಿರತೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ತೆರಳದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
    2
    ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ?
ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ?
ದೇವದುರ್ಗ: ತಾಲೂಕಿನ ನಗರಗುಂಡ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಇದೀಗ ದೇವದುರ್ಗ ಪಟ್ಟಣದ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಗುಡ್ಡ ಪ್ರದೇಶದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಕಳೆದ ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಚಿರತೆಗಳ ಓಡಾಟದ ಕುರಿತು ವರದಿಯಾಗುತ್ತಿದ್ದು, ಇದೀಗ ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಚಿರತೆಯ ಚಲನವಲನ ಹಾಗೂ ಜಾಡು ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಮೂಲಕ ನಿಗಾ ವಹಿಸುತ್ತಿದ್ದು, ಗುಡ್ಡ ಪ್ರದೇಶದಲ್ಲಿ ಚಿರತೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ತಾಲೂಕಿನ ವಿವಿಧೆಡೆ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ವಲಸೆ ಬಂದಿರುವ ಚಿರತೆಗಳಾಗಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಗುಡ್ಡ ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಚಿರತೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ತೆರಳದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    1 hr ago
  • ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ ದಿನಾಂಕ: 31-07-2026 ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 📰 ಜಾಲಹಳ್ಳಿ–ದೇವದುರ್ಗ ಬ್ರೇಕಿಂಗ್ ನ್ಯೂಸ್ ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ ದಿನಾಂಕ: 31-07-2026 ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಣವೇ ಭವಿಷ್ಯದ ಬುನಾದಿ ವಿಶೇಷ ಉಪನ್ಯಾಸ ನೀಡಿದ ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ ಅವರು, "ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಸಮಯದ ಸದ್ಬಳಕೆ ಮಾಡಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಕಾಲೇಜು, ಪೋಷಕರು ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು" ಎಂದು ಕರೆ ನೀಡಿದರು ಮುಖ್ಯ ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶ್ರೀ ಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ. ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದು, ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಅವರ ಹೆಸರು ತರಬೇಕು ಎಂದರು. ನಿವೃತ್ತ ಪ್ರಾಚಾರ್ಯ ಶ್ರೀ ಉಮೇಶ್ ಹೆಸರೂರು ಅವರು, ಮಾತನಾಡಿ ಕಠಿಣ ಪರಿಶ್ರಮ ಮತ್ತು ಗುರಿಯೊಂದಿಗೆ ವ್ಯಾಸಂಗ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. --_----------------- ಬಾಕ್ಸ್ ನಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್ ಅವರು, ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅವರು ಹೇಳಿದ ಸಂದೇಶ ಎಲ್ಲರ ಗಮನ ಸೆಳೆಯಿತು: «"ಮೊಬೈಲ್ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ನೋಡು, ನಾನು ನಿನಗೆ ತಲೆ ತಗ್ಗಿಸುವಂತೆ ಮಾಡುತ್ತೇನೆ. ಪುಸ್ತಕ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ಓದು, ನಾನು ನಿನಗೆ ತಲೆ ಎತ್ತುವಂತೆ ಮಾಡುತ್ತೇನೆ."»ಪುಸ್ತಕ ಓದುವದು ಕಡೆ ಹೆಚ್ಚು ಗಮನ ಹರಿಸಿ ಎಂದು ಹೇಳಿದರು ----------------===- ಬಾಕ್ಸ್ ನಲ್ಲಿ ಅಧ್ಯಕ್ಷೀಯ ಭಾಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಮಾತನಾಡಿ, ಜಾಲಹಳ್ಳಿ ಕಾಲೇಜು ಇಂದು ಉತ್ತಮ ಮಟ್ಟಕ್ಕೆ ಬೆಳೆಯಲು ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು ಅವರ ಸೇವೆ ಮತ್ತು ದೂರದೃಷ್ಟಿಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. 2006ರಲ್ಲಿ ಆರಂಭವಾದ ಕಾಲೇಜಿನ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು. ------------------- ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಅವರು, ಮಾತನಾಡಿ ಜಾಲಹಳ್ಳಿ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಅಧಿಕಾರಿಗಳಾಗಿದ್ದಾರೆ. ನೂತನ ವಿದ್ಯಾರ್ಥಿಗಳು ಕೂಡ ಅದೇ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಪ್ರೋತ್ಸಾಹಿಸಿದರು. ಪತ್ರಕರ್ತ ಶ್ರೀ ಮೌನೇಶ್ ಜಾಲಹಳ್ಳಿ ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ಕರೆ ನೀಡಿದರು. ಭೂದಾನಿಗಳು ಹಾಗೂ ಸಾಧಕರಿಗೆ ಸನ್ಮಾನ ಕಾಲೇಜಿಗೆ ಜಾಗವನ್ನು ದಾನವಾಗಿ ನೀಡಿದ ಉದಾರ ಮನಸ್ಸಿನ ಶ್ರೀ ಅಮರೇಶ ತಂದೆ ನೀಲಕಂಠಪ್ಪ ಮೆಣಸಿನಕಾಯಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದೆ ವೇಳೆ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಅವರಿಗೆ ಸನ್ಮಾನ ಮಾಡಲಾಯಿತು, ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು)ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು. - ಶ್ರೀದೇವಿ ಶರಣಪ್ಪ (ಜಾಲಹಳ್ಳಿ) – 564 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ. ರಾಜ್ಯಶಾಸ್ತ್ರದಲ್ಲಿ 99/100 ಹಾಗೂ ಸಮಾಜಶಾಸ್ತ್ರದಲ್ಲಿ 99/100 ಅಂಕ ಗಳಿಸಿದ್ದರು. ಕಾಲೇಜಿನಿಂದ ₹1,500 ಹಾಗೂ ನಿವೃತ್ತ ಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹3,000 ನಗದು ಬಹುಮಾನ ನೀಡಿ ಗೌರವಿಸಲಾಯಿತು. - ಪವಿತ್ರಾ ಬಸವರಾಜ್ ಬಂಡಿ (ಜಾಲಹಳ್ಳಿ) – ಕಾಲೇಜಿಗೆ ದ್ವಿತೀಯ ಸ್ಥಾನ. ಕನ್ನಡ ವಿಷಯದಲ್ಲಿ 100/100 ಅಂಕ ಗಳಿಸಿದ್ದು, ಕಾಲೇಜು ಹಾಗೂ ನಿವೃತ್ತಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹2,000 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. - ಪೂರ್ಣಿಮಾ (ಜಾಲಹಳ್ಳಿ) – 544 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಇದರ ಜೊತೆಗೆ ಸಂಸ್ಕೃತ ವಿಭಾಗ ಹಾಗೂ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಉಪಸ್ಥಿತಿ ಕಾರ್ಯಕ್ರಮದಲ್ಲಿಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ . ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯಗುರು ನಿಂಗಪ್ಪ, ಇಂಗ್ಲಿಷ್ ಉಪನ್ಯಾಸಕ ಶೇಖರ್, ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಬಾಬುಮಿಯಾ ಟೇಲರ್, ಹಿರಿಯ ಉಪನ್ಯಾಸಕರಾದ ವಿರೂಪಣ್ಣ, ಬಸವರಾಜ್, ಪ್ರಕಾಶ್, ಚನ್ನಬಸವ, ಬಸವರಾಜ್ ಸೋಮನಂಬರಡಿ, ಹನುಮೇಶ್, ಪೂರ್ಣಿಮಾ ಮೇಡಂ ಸೇರಿದಂತೆ ಉಪನ್ಯಾಸಕ ವೃಂದ, ಸಿಬ್ಬಂದಿ, ಗಣ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಉಪನ್ಯಾಸಕ ಬಸವರಾಜ್ ರಸ್ತಾಪುರ್ ಅವರು ನೆರವೇರಿಸಿದರು. ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
    4
    ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ

ದಿನಾಂಕ: 31-07-2026
ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ

ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


📰 ಜಾಲಹಳ್ಳಿ–ದೇವದುರ್ಗ ಬ್ರೇಕಿಂಗ್ ನ್ಯೂಸ್
ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ
ದಿನಾಂಕ: 31-07-2026
ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ
ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಣವೇ ಭವಿಷ್ಯದ ಬುನಾದಿ
ವಿಶೇಷ ಉಪನ್ಯಾಸ ನೀಡಿದ ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ ಅವರು, "ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಸಮಯದ ಸದ್ಬಳಕೆ ಮಾಡಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಕಾಲೇಜು, ಪೋಷಕರು ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು" ಎಂದು ಕರೆ ನೀಡಿದರು
ಮುಖ್ಯ ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಶ್ರೀ ಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ. ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದು, ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಅವರ ಹೆಸರು ತರಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಶ್ರೀ ಉಮೇಶ್ ಹೆಸರೂರು ಅವರು, ಮಾತನಾಡಿ ಕಠಿಣ ಪರಿಶ್ರಮ ಮತ್ತು ಗುರಿಯೊಂದಿಗೆ ವ್ಯಾಸಂಗ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
--_-----------------
ಬಾಕ್ಸ್ ನಲ್ಲಿ
ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್ ಅವರು, ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅವರು ಹೇಳಿದ ಸಂದೇಶ ಎಲ್ಲರ ಗಮನ ಸೆಳೆಯಿತು:
«"ಮೊಬೈಲ್ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ನೋಡು, ನಾನು ನಿನಗೆ ತಲೆ ತಗ್ಗಿಸುವಂತೆ ಮಾಡುತ್ತೇನೆ.
ಪುಸ್ತಕ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ಓದು, ನಾನು ನಿನಗೆ ತಲೆ ಎತ್ತುವಂತೆ ಮಾಡುತ್ತೇನೆ."»ಪುಸ್ತಕ ಓದುವದು ಕಡೆ ಹೆಚ್ಚು ಗಮನ ಹರಿಸಿ ಎಂದು ಹೇಳಿದರು 
----------------===-
ಬಾಕ್ಸ್ ನಲ್ಲಿ
ಅಧ್ಯಕ್ಷೀಯ ಭಾಷಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಮಾತನಾಡಿ, ಜಾಲಹಳ್ಳಿ ಕಾಲೇಜು ಇಂದು ಉತ್ತಮ ಮಟ್ಟಕ್ಕೆ ಬೆಳೆಯಲು ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು ಅವರ ಸೇವೆ ಮತ್ತು ದೂರದೃಷ್ಟಿಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. 2006ರಲ್ಲಿ ಆರಂಭವಾದ ಕಾಲೇಜಿನ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು.
-------------------
ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಅವರು, ಮಾತನಾಡಿ ಜಾಲಹಳ್ಳಿ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಅಧಿಕಾರಿಗಳಾಗಿದ್ದಾರೆ. ನೂತನ ವಿದ್ಯಾರ್ಥಿಗಳು ಕೂಡ ಅದೇ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಪ್ರೋತ್ಸಾಹಿಸಿದರು.
ಪತ್ರಕರ್ತ ಶ್ರೀ ಮೌನೇಶ್ ಜಾಲಹಳ್ಳಿ ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ಕರೆ ನೀಡಿದರು.
ಭೂದಾನಿಗಳು ಹಾಗೂ ಸಾಧಕರಿಗೆ ಸನ್ಮಾನ
ಕಾಲೇಜಿಗೆ ಜಾಗವನ್ನು ದಾನವಾಗಿ ನೀಡಿದ ಉದಾರ ಮನಸ್ಸಿನ ಶ್ರೀ ಅಮರೇಶ ತಂದೆ ನೀಲಕಂಠಪ್ಪ ಮೆಣಸಿನಕಾಯಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಇದೆ ವೇಳೆ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಅವರಿಗೆ ಸನ್ಮಾನ ಮಾಡಲಾಯಿತು, ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು)ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ
2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು.
- ಶ್ರೀದೇವಿ ಶರಣಪ್ಪ (ಜಾಲಹಳ್ಳಿ) – 564 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ. ರಾಜ್ಯಶಾಸ್ತ್ರದಲ್ಲಿ 99/100 ಹಾಗೂ ಸಮಾಜಶಾಸ್ತ್ರದಲ್ಲಿ 99/100 ಅಂಕ ಗಳಿಸಿದ್ದರು. ಕಾಲೇಜಿನಿಂದ ₹1,500 ಹಾಗೂ ನಿವೃತ್ತ ಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹3,000 ನಗದು ಬಹುಮಾನ ನೀಡಿ ಗೌರವಿಸಲಾಯಿತು.
- ಪವಿತ್ರಾ ಬಸವರಾಜ್ ಬಂಡಿ (ಜಾಲಹಳ್ಳಿ) – ಕಾಲೇಜಿಗೆ ದ್ವಿತೀಯ ಸ್ಥಾನ. ಕನ್ನಡ ವಿಷಯದಲ್ಲಿ 100/100 ಅಂಕ ಗಳಿಸಿದ್ದು, ಕಾಲೇಜು ಹಾಗೂ ನಿವೃತ್ತಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹2,000 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
- ಪೂರ್ಣಿಮಾ (ಜಾಲಹಳ್ಳಿ) – 544 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ಇದರ ಜೊತೆಗೆ ಸಂಸ್ಕೃತ ವಿಭಾಗ ಹಾಗೂ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ಉಪಸ್ಥಿತಿ
ಕಾರ್ಯಕ್ರಮದಲ್ಲಿಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು)  ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ .
ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯಗುರು ನಿಂಗಪ್ಪ, ಇಂಗ್ಲಿಷ್ ಉಪನ್ಯಾಸಕ ಶೇಖರ್, ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಬಾಬುಮಿಯಾ ಟೇಲರ್, ಹಿರಿಯ ಉಪನ್ಯಾಸಕರಾದ ವಿರೂಪಣ್ಣ, ಬಸವರಾಜ್, ಪ್ರಕಾಶ್, ಚನ್ನಬಸವ, ಬಸವರಾಜ್ ಸೋಮನಂಬರಡಿ, ಹನುಮೇಶ್, ಪೂರ್ಣಿಮಾ ಮೇಡಂ ಸೇರಿದಂತೆ ಉಪನ್ಯಾಸಕ ವೃಂದ, ಸಿಬ್ಬಂದಿ, ಗಣ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಉಪನ್ಯಾಸಕ ಬಸವರಾಜ್ ರಸ್ತಾಪುರ್ ಅವರು ನೆರವೇರಿಸಿದರು.
ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    10 hrs ago
  • ಬಾಡಿಯಾಳ ಹಳ್ಳಕ್ಕೆ ಕಡೇಚೂರ ಕೈಗಾರಿಕ ಪ್ರದೇಶದಿಂದ ವಿಷಪೂರಿತ ದ್ರವದಿಂದ ಹಳ್ಳದ ನೀರಲ್ಲಿ ಮೀನು-ಜಲಚರ ಮಾರಣಹೋಮ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪ ಜನ ಜಾನುವಾರುಗಳಿಗೆ ಈ ಹಳ್ಳದ ನೀರು ಬಳಕೆ ಆಗುವಂತೆ ಮಾಡಲು ಬ್ರಿಜ್ ಕಂ ಬ್ಯಾರೇಜ್ ಮೇಲೆ ಕುಳಿತು ರೈತರ ಸಮ್ಮುಖದಲ್ಲೇ ದೀಢಿರ್ ಪ್ರತಿಭಟನೆ ಮೂಲಕ ಜಿಲ್ಲಾಡಳಿತಕ್ಕೆ ವಾರದ ಗಡುವು ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ! ಸೈದಾಪೂರ : ಯಾದಗಿರಿ ತಾಲೂಕಿನ ಕಡೇಚೂರ ಕೈಗಾರಿಕ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರ್‌ಗಳಿಂದ ವಿಷಕಾರಿತ ದ್ರವ ಪದಾರ್ಥಗಳು ಚರಂಡಿ ಮುಖಾಂತರ ಹರಿದು ಬಂದು ಬಾಡಿಯಾಳ ಗ್ರಾಮದ ಹಳ್ಳದದಿಂದ ಗೂಡೂರ ಹಳ್ಳದ ಮುಖಾಂತರ ಭೀಮಾನದಿಗೆ ಸೇರುವ ಈ ಹಳ್ಳದಲ್ಲಿ ವಾರದಿಂದೇ ಮೀನುಗಳ ಸತ್ತು ಗಬ್ಬೆದ್ದು ನಾರುತ್ತಿದ್ದು ಈ ದುರವಾಸನೆ ದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಜನ ಜಾನುವಾರು ಬದುಕುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದು ಶನಿವಾರ ಬೆಳಿಗ್ಗೆ ಬಾಡಿಯಾಳ ಗ್ರಾಮಸ್ಥರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಪಂದಿಸಿ ಬಾಡಿಯಾಳ ಗ್ರಾಮಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಕಾಲ್ನೆಡಿಗೆ ಮುಖಾಂತರ ಹಳ್ಳದ ಕಡೆ ಸಂಚಾರ ಮಾಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ವಾರದಿಂದೆ ಈ ಹಳ್ಳದಲ್ಲಿ ಮೀನು ಮತ್ತು ಜಲಚರಗಳು ಸತ್ತು ಕೊಳೆತು ದುರಗಂಧದ ವಾಸನೆ ಹೆಚ್ಚಾದರು ಸಂಬAಧಪಟ್ಟ ಅಧಿಕಾರಿಗಳು ಇಲ್ಲಿ ವರೆಗೆ ಸ್ಥಳಕ್ಕೆ ಬೇಟಿ ನೀಡುವುದಾಗÀಲಿ ಸಮಸ್ಯೆ ಬಗ್ಗೆ ಗ್ರಾಮಸ್ಥರ ಬಗ್ಗೆ ಚರ್ಚಿಸುದಾಗಲಿ ಜನ ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಲಿ ಮಾಡದಿರುವುದು ದುರದುಷ್ಟಕರ ಸಂಗತಿ ಎಂದು ದೂರರಿದ್ದರು. ಈ ಹಳ್ಳದ ನೀರು ಜನ ಜಾನುವಾರುಗಳಿಗೆ ದಿನ ನಿತ್ಯ ಕುಡಿಯಲು ಮತ್ತು ಜಮೀನಲ್ಲಿ ಬೆಳೆಗಳಿಗೆ ನೀರು ಉಣಿಸಲು ಈ ಹಳ್ಳದ ನೀರನ್ನೆ ಬಳಕೆ ಮಾಡುತ್ತಿದ್ದರು. ಆದರೆ ಕಡೇಚೂರ ಫ್ಯಾಕ್ಟರ್ ಪ್ರಾರಂಭವಾದದಿAದ ಮಳೆ ಬಂದರೆ ಸಾಕು ಚರಂಡಿ ಮುಖಾಂತರ ದ್ರವ ಪದಾರ್ಥಗಳು ಹರಿದು ಬಂದು ಈ ಹಳ್ಳಕ್ಕೆ ಸೇರಿ ವಿಷಪೂರಿತ ನೀರಾಗಿ ಮಾರ್ಪಟ್ಟು ಜನ ಜಾನುವಾರು ಕುಡಿಯಲು ಆಗದೆ ಈ ಹಳ್ಳ ಇದ್ದರು ಇಲ್ಲದಂತಾಗಿದೆ ಆದ ಕಾರಣ ಸ್ಥಳದಲ್ಲೇ ಮಿನಿ ಬ್ರಿಜ್ ಕಂ ಬ್ಯಾರೇಜಿನ ಮೇಲೆ ದೀಢೀರ್ ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಜಿಲ್ಲಾಡತಕ್ಕೆ ವಾರದ ಗಡವು ನೀಡಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಕೊಟ್ : ಬಾಡಿಯಾಳ ಗ್ರಾಮದ ಹಳ್ಳಕ್ಕೆ 2013ರಲ್ಲಿ ಅಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ ನಂತರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನು ನಿರ್ವಹಣೆ ಮಾಡದೇ ದಿವ್ಯ ನಿರ್ಲಕ್ಷವಹಿಸಿ ಸ್ಥಳಕ್ಕೆ ಬೇಟಿ ನೀಡಿದೇ ರೈತರಿಗೆ ಜಾಗೃತಿ ಮೂಡಿಸಿದೇ ಕಳ್ಳಾಟ ಆಡುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮೇಲೆ ಜಿಲ್ಲಾಧಿಕಾರಿಗಳು ಕಾನೂನಿನ ಕಠಿಣ ಕ್ರಮ ಜರುಗಿಸಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಇದೇ ಸಂಧರ್ಬದಲ್ಲಿ ವಿಶ್ವನಾಥ್ ಗಂಟೆ ಬಾಡಿಯಲ್ . ಮಲ್ಲೇಶಿ, ಗೋವಿಂದ ಡಾಕ್ಟರ್ ಶಾಂತವೀರ ಮಕ್ಥಲ್. ವೆಂಕಟೇಶ್ ಕಾವಲಿ ತಿಮ್ಮಾಜಿ .ಬಸವರಾಜ್ ಚನ್ನು ಕಳೂರ್. ಕೊತ್ತಪಲ್ಲಿ ಶಿವು ಬಾಯ್ಲ್. ದೇವೋಗಂಟಿ .ದೇವಪುತ್ರ ತಿಮ್ಮೊಜಿ. ಶರಣಪ್ಪ ಜಿನ್ಕೆರಿ ಹಣಮಂತರಾಯ ತಿಮ್ಮಾಜಿ ಶಿವಶಂಕರ ತಿಮೋಜಿ ಕಾವಲಿ ಎಲ್ಲಪ್ಪ . ರಾಮಣ್ಣ ಗೂಡೂರ್. ಶಿವಪುತ್ರ ತಿಮೋಜಿ .ಕಾಶೀನಾಥ್. ದೇವು ಚಂದಾಪುರ್ ರಾಮಣ್ಣ .ಸೂಗಪ್ಪ ಬೈನ್ ಯಂಕಪ್ಪ ತಿಮ್ಮ ಜಿ. ಯಂಕಪ್ಪ ಚಂದಾಪುರ್ ಸಿದ್ದಪ್ಪ ಶಿವಪುರ ಬನ್ನಪಾನೂರ್. ಅಶೋಕ್ ಗಣಪುರ್. ಮಂಜುನಾಥ್ ಕಾವಲಿ. ಬಸವರಾಜ್ ಕವಲಿ. ಭೀಮು ಗುಡೇಬಲ್ಲೂರ್ ಅಯ್ಯಪ್ಪ ಇರ್ಜನ್ ಬಸವರಾಜ ಇರ್ಜನ್ ಬನ್ನಪ್ಪ ನೀಡುಗುಂದಿ ಖಾಜಾ ಹುಸೇನ್ ಪೊಂಗಲ್. ಚಂದ್ರಮಣ್ಣ. ದೇವಪ್ಪ. ಬಸಪ್ಪ ಜಾನಕಿ ಗಟ್ಟಿಗರ್ ಮಲ್ಲಪ್ಪ ಜಾನಕ. ಮಲ್ಲೇಶ್ ಗಡಾದ್.ರಾಮಣ್ಣ ಅಂಗಡಿ. ಗೋಪಾಲ ಹೊಸ್ಮನಿ. ದೇವಪುತ್ರ ಗುಡೇಬಲ್ಲೂರು . ಹಣಮಂತ ಹಿರಿಜನ್ ಸೇರಿದಂತೆ ಅನೇಕ ರೈತರು ಇದ್ದರು
    4
    ಬಾಡಿಯಾಳ ಹಳ್ಳಕ್ಕೆ ಕಡೇಚೂರ ಕೈಗಾರಿಕ ಪ್ರದೇಶದಿಂದ ವಿಷಪೂರಿತ ದ್ರವದಿಂದ ಹಳ್ಳದ ನೀರಲ್ಲಿ ಮೀನು-ಜಲಚರ ಮಾರಣಹೋಮ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪ
ಜನ ಜಾನುವಾರುಗಳಿಗೆ ಈ ಹಳ್ಳದ ನೀರು ಬಳಕೆ ಆಗುವಂತೆ ಮಾಡಲು ಬ್ರಿಜ್ ಕಂ ಬ್ಯಾರೇಜ್ ಮೇಲೆ ಕುಳಿತು ರೈತರ ಸಮ್ಮುಖದಲ್ಲೇ ದೀಢಿರ್ ಪ್ರತಿಭಟನೆ ಮೂಲಕ ಜಿಲ್ಲಾಡಳಿತಕ್ಕೆ ವಾರದ ಗಡುವು ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ !
ಸೈದಾಪೂರ : ಯಾದಗಿರಿ ತಾಲೂಕಿನ ಕಡೇಚೂರ ಕೈಗಾರಿಕ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರ್‌ಗಳಿಂದ ವಿಷಕಾರಿತ ದ್ರವ ಪದಾರ್ಥಗಳು ಚರಂಡಿ ಮುಖಾಂತರ ಹರಿದು ಬಂದು ಬಾಡಿಯಾಳ ಗ್ರಾಮದ ಹಳ್ಳದದಿಂದ ಗೂಡೂರ ಹಳ್ಳದ ಮುಖಾಂತರ ಭೀಮಾನದಿಗೆ ಸೇರುವ ಈ ಹಳ್ಳದಲ್ಲಿ ವಾರದಿಂದೇ ಮೀನುಗಳ ಸತ್ತು ಗಬ್ಬೆದ್ದು ನಾರುತ್ತಿದ್ದು ಈ ದುರವಾಸನೆ ದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಜನ ಜಾನುವಾರು ಬದುಕುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಶನಿವಾರ ಬೆಳಿಗ್ಗೆ ಬಾಡಿಯಾಳ ಗ್ರಾಮಸ್ಥರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಪಂದಿಸಿ ಬಾಡಿಯಾಳ ಗ್ರಾಮಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಕಾಲ್ನೆಡಿಗೆ ಮುಖಾಂತರ ಹಳ್ಳದ ಕಡೆ ಸಂಚಾರ ಮಾಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ವಾರದಿಂದೆ ಈ ಹಳ್ಳದಲ್ಲಿ ಮೀನು ಮತ್ತು ಜಲಚರಗಳು ಸತ್ತು ಕೊಳೆತು ದುರಗಂಧದ ವಾಸನೆ ಹೆಚ್ಚಾದರು ಸಂಬAಧಪಟ್ಟ ಅಧಿಕಾರಿಗಳು ಇಲ್ಲಿ ವರೆಗೆ ಸ್ಥಳಕ್ಕೆ ಬೇಟಿ ನೀಡುವುದಾಗÀಲಿ ಸಮಸ್ಯೆ ಬಗ್ಗೆ ಗ್ರಾಮಸ್ಥರ ಬಗ್ಗೆ ಚರ್ಚಿಸುದಾಗಲಿ ಜನ ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಲಿ ಮಾಡದಿರುವುದು ದುರದುಷ್ಟಕರ ಸಂಗತಿ ಎಂದು ದೂರರಿದ್ದರು.
ಈ ಹಳ್ಳದ ನೀರು ಜನ ಜಾನುವಾರುಗಳಿಗೆ ದಿನ ನಿತ್ಯ ಕುಡಿಯಲು ಮತ್ತು ಜಮೀನಲ್ಲಿ ಬೆಳೆಗಳಿಗೆ ನೀರು ಉಣಿಸಲು ಈ ಹಳ್ಳದ ನೀರನ್ನೆ ಬಳಕೆ ಮಾಡುತ್ತಿದ್ದರು. ಆದರೆ ಕಡೇಚೂರ ಫ್ಯಾಕ್ಟರ್ ಪ್ರಾರಂಭವಾದದಿAದ ಮಳೆ ಬಂದರೆ ಸಾಕು ಚರಂಡಿ ಮುಖಾಂತರ ದ್ರವ ಪದಾರ್ಥಗಳು ಹರಿದು ಬಂದು ಈ ಹಳ್ಳಕ್ಕೆ ಸೇರಿ ವಿಷಪೂರಿತ ನೀರಾಗಿ ಮಾರ್ಪಟ್ಟು ಜನ ಜಾನುವಾರು ಕುಡಿಯಲು ಆಗದೆ ಈ ಹಳ್ಳ ಇದ್ದರು ಇಲ್ಲದಂತಾಗಿದೆ ಆದ ಕಾರಣ ಸ್ಥಳದಲ್ಲೇ ಮಿನಿ ಬ್ರಿಜ್ ಕಂ ಬ್ಯಾರೇಜಿನ ಮೇಲೆ ದೀಢೀರ್ ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಜಿಲ್ಲಾಡತಕ್ಕೆ ವಾರದ ಗಡವು ನೀಡಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಕೊಟ್ : 
ಬಾಡಿಯಾಳ ಗ್ರಾಮದ ಹಳ್ಳಕ್ಕೆ 2013ರಲ್ಲಿ ಅಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ ನಂತರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನು ನಿರ್ವಹಣೆ ಮಾಡದೇ ದಿವ್ಯ ನಿರ್ಲಕ್ಷವಹಿಸಿ ಸ್ಥಳಕ್ಕೆ ಬೇಟಿ ನೀಡಿದೇ ರೈತರಿಗೆ ಜಾಗೃತಿ ಮೂಡಿಸಿದೇ ಕಳ್ಳಾಟ ಆಡುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮೇಲೆ ಜಿಲ್ಲಾಧಿಕಾರಿಗಳು ಕಾನೂನಿನ ಕಠಿಣ ಕ್ರಮ ಜರುಗಿಸಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. 
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್
ಇದೇ ಸಂಧರ್ಬದಲ್ಲಿ ವಿಶ್ವನಾಥ್ ಗಂಟೆ ಬಾಡಿಯಲ್ . ಮಲ್ಲೇಶಿ, ಗೋವಿಂದ ಡಾಕ್ಟರ್ ಶಾಂತವೀರ ಮಕ್ಥಲ್. ವೆಂಕಟೇಶ್ ಕಾವಲಿ ತಿಮ್ಮಾಜಿ .ಬಸವರಾಜ್ ಚನ್ನು ಕಳೂರ್. ಕೊತ್ತಪಲ್ಲಿ ಶಿವು ಬಾಯ್ಲ್. ದೇವೋಗಂಟಿ .ದೇವಪುತ್ರ ತಿಮ್ಮೊಜಿ. ಶರಣಪ್ಪ ಜಿನ್ಕೆರಿ ಹಣಮಂತರಾಯ ತಿಮ್ಮಾಜಿ ಶಿವಶಂಕರ ತಿಮೋಜಿ ಕಾವಲಿ ಎಲ್ಲಪ್ಪ . ರಾಮಣ್ಣ ಗೂಡೂರ್. ಶಿವಪುತ್ರ ತಿಮೋಜಿ .ಕಾಶೀನಾಥ್. ದೇವು ಚಂದಾಪುರ್ ರಾಮಣ್ಣ .ಸೂಗಪ್ಪ ಬೈನ್ ಯಂಕಪ್ಪ ತಿಮ್ಮ ಜಿ. ಯಂಕಪ್ಪ ಚಂದಾಪುರ್ ಸಿದ್ದಪ್ಪ ಶಿವಪುರ ಬನ್ನಪಾನೂರ್. ಅಶೋಕ್ ಗಣಪುರ್. ಮಂಜುನಾಥ್ ಕಾವಲಿ. ಬಸವರಾಜ್ ಕವಲಿ. ಭೀಮು ಗುಡೇಬಲ್ಲೂರ್ ಅಯ್ಯಪ್ಪ ಇರ್ಜನ್ ಬಸವರಾಜ ಇರ್ಜನ್ ಬನ್ನಪ್ಪ ನೀಡುಗುಂದಿ ಖಾಜಾ ಹುಸೇನ್ ಪೊಂಗಲ್. ಚಂದ್ರಮಣ್ಣ. ದೇವಪ್ಪ. ಬಸಪ್ಪ ಜಾನಕಿ ಗಟ್ಟಿಗರ್ ಮಲ್ಲಪ್ಪ ಜಾನಕ. ಮಲ್ಲೇಶ್ ಗಡಾದ್.ರಾಮಣ್ಣ ಅಂಗಡಿ. ಗೋಪಾಲ ಹೊಸ್ಮನಿ. ದೇವಪುತ್ರ ಗುಡೇಬಲ್ಲೂರು . ಹಣಮಂತ ಹಿರಿಜನ್ ಸೇರಿದಂತೆ ಅನೇಕ ರೈತರು ಇದ್ದರು
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    2 hrs ago
  • ಗುರುಮಠಕಲ್‌ ಪಟ್ಟಣದ ಎಸ್‌ ಎಂ ಆರ್ ಆರ್ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಡಿವೈಎಸ್ಪಿ ಸುರೇಶ ಎಂ ನಾಯಕ್ ಉದ್ಘಾಟಿಸಿದರು. ಮಾದಕ ವ್ಯಸನಕ್ಕೆ 'ಬೇಡ ಬೋ'; ಉತ್ತಮ ಸ್ನೇಹವೇ ಉಜ್ವಲ ಭವಿಷ್ಯದ ದಾರಿ ಬೇಡ ಬೋ' ಸಂದೇಶದೊಂದಿಗೆ ವ್ಯಸನದ ವಿರುದ್ಧ ಪೊಲೀಸರ ಜಾಗೃತಿ ಸಮರ ಗುರುಮಠಕಲ್: ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು, ಮದ್ಯಪಾನ ಸೇರಿದಂತೆ ಯಾವುದೇ ಮಾದಕ ವಸ್ತುಗಳ ವ್ಯಸನಕ್ಕೆ ಯುವಕರು ಹಾಗೂ ವಿದ್ಯಾರ್ಥಿಗಳು ಎಂದಿಗೂ ಬಲಿಯಾಗಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಯಾದಗಿರಿ ಡಿವೈಎಸ್ಪಿ ಸುರೇಶ ಎಂ. ಕರೆ ನೀಡಿದರು. ಪಟ್ಟಣದ ಎಸ್‌ಎಂಆರ್ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ 'ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ' ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಹಾಗೂ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಉತ್ತಮ ಸ್ನೇಹ ಬಳಗವೇ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಪೋಷಕರು ಮತ್ತು ಕುಟುಂಬದವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ. ಸ್ನೇಹಿತರಲ್ಲಿ ಯಾರಾದರೂ ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಅವರಿಗೆ 'ಬೇಡ ಬೋ' ಎಂದು ಮನವರಿಕೆ ಮಾಡಿಕೊಡಿ. ಅವರ ದುಶ್ಚಟಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬೇಡಿ. ಅಕ್ರಮ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ನಾಗಭೂಷಣ ಶೆಟ್ಟಿ ಮಾತನಾಡಿ, ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ಆರಂಭವಾಗುವ ಮಾದಕ ವಸ್ತುಗಳ ಸೇವನೆಯು ಬಳಿಕ ಗಂಭೀರ ವ್ಯಸನವಾಗಿ ಪರಿಣಮಿಸುತ್ತದೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುವುದರ ಜೊತೆಗೆ ನೆನಪಿನ ಶಕ್ತಿ ಕುಂದುತ್ತದೆ, ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ, ಆತಂಕ, ಖಿನ್ನತೆ, ಕೋಪ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಸಿಯುತ್ತದೆ ಎಂದು ಎಚ್ಚರಿಸಿದರು. ಮಾದಕ ವ್ಯಸನವು ವ್ಯಕ್ತಿಯ ಬದುಕಷ್ಟೇ ಅಲ್ಲದೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಗೌರವಕ್ಕೂ ಧಕ್ಕೆ ತರುತ್ತದೆ. ಶಿಕ್ಷಣ ಮಧ್ಯದಲ್ಲೇ ನಿಲ್ಲುವುದು, ಉದ್ಯೋಗಾವಕಾಶ ಕಳೆದುಕೊಳ್ಳುವುದು ಹಾಗೂ ಅಪರಾಧ ಚಟುವಟಿಕೆಗಳತ್ತ ಆಕರ್ಷಿತರಾಗುವ ಅಪಾಯವೂ ಹೆಚ್ಚುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಕ್ರೀಡೆ, ಯೋಗ, ಓದು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿರಬಹುದು. ಸಾರ್ವಜನಿಕರು ತಮ್ಮ ಸುತ್ತಮುತ್ತ ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ನರಸಿಂಹ ಸ್ವಾಮಿ, ವೈದ್ಯಾಧಿಕಾರಿ ಡಾ. ನೀಲಾಂಬಿಕ, ರಾಜ್ಯಮಟ್ಟದ ತರಬೇತುದಾರ ಹಣಮಂತರಾವ್ ಗೊಂಗಲೆ, ಸಿಪಿಐ ದೌಲತ್ ಎನ್. ಕುರಿ, ಶಿಕ್ಷಣ ಸಂಯೋಜಕ ರವೀಂದ್ರ ಉಪಸ್ಥಿತರಿದ್ದರು. ಉಪನ್ಯಾಸಕಿ ಜ್ಯೋತಿಲತಾ ತಡಬಿಡಿಮಠ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಬಾಕ್ಸ್: ೦೧ ಬೇಡ ಬೋ' ಅಭಿಯಾನಕ್ಕೆ ಪೊಲೀಸರ ಒತ್ತು ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ 'ಬೇಡ ಬೋ – ವ್ಯಸನ ಬೇಡ' ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಯಿತು. ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು, ಇ-ಸಿಗರೇಟ್ ಸೇರಿದಂತೆ ಎಲ್ಲ ರೀತಿಯ ಮಾದಕ ವ್ಯಸನಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸ್ನೇಹಿತರ ಒತ್ತಡಕ್ಕೆ ಮಣಿಯದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು. ವ್ಯಸನ ಬೇಡ. ಆರೋಗ್ಯಕರ ಜೀವನವೇ ನಮ್ಮ ಗುರಿ ಎಂಬ ಸಂದೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕೋಟ್: ೦೧ ಸ್ನೇಹಿತರ ಒತ್ತಡಕ್ಕೆ ಮಣಿದು ವ್ಯಸನದ ದಾರಿ ಹಿಡಿಯಬೇಡಿ "ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು ಸೇರಿದಂತೆ ಯಾವುದೇ ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು.ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. – – ಸುರೇಶ ಎಂ., ಡಿವೈಎಸ್ಪಿ, ಯಾದಗಿರಿ
    4
    ಗುರುಮಠಕಲ್‌ ಪಟ್ಟಣದ ಎಸ್‌ ಎಂ ಆರ್ ಆರ್ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಡಿವೈಎಸ್ಪಿ ಸುರೇಶ ಎಂ ನಾಯಕ್ ಉದ್ಘಾಟಿಸಿದರು.
ಮಾದಕ ವ್ಯಸನಕ್ಕೆ 'ಬೇಡ ಬೋ'; ಉತ್ತಮ ಸ್ನೇಹವೇ ಉಜ್ವಲ ಭವಿಷ್ಯದ ದಾರಿ
ಬೇಡ ಬೋ' ಸಂದೇಶದೊಂದಿಗೆ ವ್ಯಸನದ ವಿರುದ್ಧ ಪೊಲೀಸರ ಜಾಗೃತಿ ಸಮರ
ಗುರುಮಠಕಲ್: ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು, ಮದ್ಯಪಾನ ಸೇರಿದಂತೆ ಯಾವುದೇ ಮಾದಕ ವಸ್ತುಗಳ ವ್ಯಸನಕ್ಕೆ ಯುವಕರು ಹಾಗೂ ವಿದ್ಯಾರ್ಥಿಗಳು ಎಂದಿಗೂ ಬಲಿಯಾಗಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಯಾದಗಿರಿ ಡಿವೈಎಸ್ಪಿ ಸುರೇಶ ಎಂ. ಕರೆ ನೀಡಿದರು.
ಪಟ್ಟಣದ ಎಸ್‌ಎಂಆರ್ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ 'ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ' ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಹಾಗೂ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಉತ್ತಮ ಸ್ನೇಹ ಬಳಗವೇ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಪೋಷಕರು ಮತ್ತು ಕುಟುಂಬದವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ. ಸ್ನೇಹಿತರಲ್ಲಿ ಯಾರಾದರೂ ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಅವರಿಗೆ 'ಬೇಡ ಬೋ' ಎಂದು ಮನವರಿಕೆ ಮಾಡಿಕೊಡಿ. ಅವರ ದುಶ್ಚಟಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬೇಡಿ. ಅಕ್ರಮ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ನಾಗಭೂಷಣ ಶೆಟ್ಟಿ ಮಾತನಾಡಿ, ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ಆರಂಭವಾಗುವ ಮಾದಕ ವಸ್ತುಗಳ ಸೇವನೆಯು ಬಳಿಕ ಗಂಭೀರ ವ್ಯಸನವಾಗಿ ಪರಿಣಮಿಸುತ್ತದೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುವುದರ ಜೊತೆಗೆ ನೆನಪಿನ ಶಕ್ತಿ ಕುಂದುತ್ತದೆ, ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ, ಆತಂಕ, ಖಿನ್ನತೆ, ಕೋಪ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಸಿಯುತ್ತದೆ ಎಂದು ಎಚ್ಚರಿಸಿದರು.
ಮಾದಕ ವ್ಯಸನವು ವ್ಯಕ್ತಿಯ ಬದುಕಷ್ಟೇ ಅಲ್ಲದೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಗೌರವಕ್ಕೂ ಧಕ್ಕೆ ತರುತ್ತದೆ. ಶಿಕ್ಷಣ ಮಧ್ಯದಲ್ಲೇ ನಿಲ್ಲುವುದು, ಉದ್ಯೋಗಾವಕಾಶ ಕಳೆದುಕೊಳ್ಳುವುದು ಹಾಗೂ ಅಪರಾಧ ಚಟುವಟಿಕೆಗಳತ್ತ ಆಕರ್ಷಿತರಾಗುವ ಅಪಾಯವೂ ಹೆಚ್ಚುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಕ್ರೀಡೆ, ಯೋಗ, ಓದು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿರಬಹುದು. ಸಾರ್ವಜನಿಕರು ತಮ್ಮ ಸುತ್ತಮುತ್ತ ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ನರಸಿಂಹ ಸ್ವಾಮಿ, ವೈದ್ಯಾಧಿಕಾರಿ ಡಾ. ನೀಲಾಂಬಿಕ, ರಾಜ್ಯಮಟ್ಟದ ತರಬೇತುದಾರ ಹಣಮಂತರಾವ್ ಗೊಂಗಲೆ, ಸಿಪಿಐ ದೌಲತ್ ಎನ್. ಕುರಿ, ಶಿಕ್ಷಣ ಸಂಯೋಜಕ ರವೀಂದ್ರ ಉಪಸ್ಥಿತರಿದ್ದರು. ಉಪನ್ಯಾಸಕಿ ಜ್ಯೋತಿಲತಾ ತಡಬಿಡಿಮಠ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಬಾಕ್ಸ್: ೦೧
ಬೇಡ ಬೋ' ಅಭಿಯಾನಕ್ಕೆ ಪೊಲೀಸರ ಒತ್ತು
ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ 'ಬೇಡ ಬೋ – ವ್ಯಸನ ಬೇಡ' ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಯಿತು. ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು, ಇ-ಸಿಗರೇಟ್ ಸೇರಿದಂತೆ ಎಲ್ಲ ರೀತಿಯ ಮಾದಕ ವ್ಯಸನಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸ್ನೇಹಿತರ ಒತ್ತಡಕ್ಕೆ ಮಣಿಯದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು. ವ್ಯಸನ ಬೇಡ. ಆರೋಗ್ಯಕರ ಜೀವನವೇ ನಮ್ಮ ಗುರಿ ಎಂಬ ಸಂದೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಕೋಟ್: ೦೧
ಸ್ನೇಹಿತರ ಒತ್ತಡಕ್ಕೆ ಮಣಿದು ವ್ಯಸನದ ದಾರಿ ಹಿಡಿಯಬೇಡಿ
"ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು ಸೇರಿದಂತೆ ಯಾವುದೇ ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು.ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ.
– – ಸುರೇಶ ಎಂ., ಡಿವೈಎಸ್ಪಿ, ಯಾದಗಿರಿ
    user_N S Patange
    N S Patange
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    22 hrs ago
  • ರಾಯಚೂರಿನಲ್ಲಿ ಆ.4 ರಂದು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ: ಭಾವಚಿತ್ರ ಮೆರವಣಿಗೆ ರಾಯಚೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 4 ರಂದು ಆಚರಿಸಲಾಗುತ್ತದೆ ಎಂದು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹರವಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಬಸವ ವೃತ್ತದಿಂದ ಜಂಬಲದಿನ್ನಿ ರಂಗಮಂದಿರದವರೆಗೆ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಜಂಬಲದಿನ್ನಿ ರಂಗಮಂದಿರದಲ್ಲಿ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮಾಜದ ಬಂಧುಗಳು, ಹಿತೈಷಿಗಳು, ಸಾರ್ವಜನಿಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೊಷ್ಟಿಯಲ್ಲಿ ಗದೆಪ್ಪ ಎಂ, ಬಸವರಾಜ್, ಬಸವಂತ ರಾಯ, ಅಮರಪ್ಪ, ದೇವೇಂದ್ರಪ್ಪ ಸೇರಿದಂತೆ ಇತರರು ಇದ್ದರು.
    1
    ರಾಯಚೂರಿನಲ್ಲಿ ಆ.4 ರಂದು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ: ಭಾವಚಿತ್ರ ಮೆರವಣಿಗೆ
ರಾಯಚೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 4 ರಂದು  ಆಚರಿಸಲಾಗುತ್ತದೆ ಎಂದು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹರವಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಬಸವ ವೃತ್ತದಿಂದ ಜಂಬಲದಿನ್ನಿ ರಂಗಮಂದಿರದವರೆಗೆ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಜಂಬಲದಿನ್ನಿ ರಂಗಮಂದಿರದಲ್ಲಿ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾಜದ ಬಂಧುಗಳು, ಹಿತೈಷಿಗಳು, ಸಾರ್ವಜನಿಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೊಷ್ಟಿಯಲ್ಲಿ ಗದೆಪ್ಪ ಎಂ, ಬಸವರಾಜ್, ಬಸವಂತ ರಾಯ, ಅಮರಪ್ಪ, ದೇವೇಂದ್ರಪ್ಪ ಸೇರಿದಂತೆ ಇತರರು ಇದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
  • ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ! ​ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ​ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ​ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ​ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ! ​ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ​ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ​ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ​ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
    1
    ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ!
​ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
​ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
​ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
​ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ!
​ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
​ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
​ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
​ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.