ಭದ್ರಾವತಿ-ಜ.22ರಂದು ಡಾ.ರಾಜಕುಮಾರ್-ಡಾ.ಪುನೀತ್ ರಾಜಕುಮಾರ್ ದೇಗುಲ ಲೋಕಾರ್ಪಣೆ ಭದ್ರಾವತಿ: ಜನಪ್ರಿಯ ನಟರು, ಲಕ್ಷಾಂತರ ಅಭಿಮಾನಿಗಳ ದೇವರುಗಳಾದ ಡಾ.ರಾಜಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಚಾಮೇಗೌಡ ಏರಿಯಾ ಡಾ. ರಾಜಕುಮಾರ್ ರಸ್ತೆ (ಬಿ.ಎಚ್ ರಸ್ತೆ), ನಗರಸಭೆ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ಬಳಿ ನಿರ್ಮಿಸಿರುವ ಡಾ. ರಾಜಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್‌ರವರ ದೇಗುಲ ಹಾಗು ಕಂಚಿನ ಪ್ರತಿಮೆ ಲೋಕಾರ್ಪಣೆ ಜ.22ರ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ.ರಾಜಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್‌ರವರು ಚಿತ್ರರಂಗ ಹಾಗು ಸಾಮಾಜಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅನನ್ಯವಾಗಿದೆ. ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ನಾಡಿನ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವರ ಹೆಸರಿನಲ್ಲಿ ಅಭಿಮಾನಿಗಳು ನಿರ್ಮಿಸಿರುವ ದೇಗುಲ ಹಾಗು ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆಯಾಗಿದೆ ಎಂದರು. ಪುನೀತ್ ರಾಜಕುಮಾರ್‌ರವರ ಪತ್ನಿ ಅಶ್ವಿನಿ ರಾಜಕುಮಾರ್‌ರವರು ದೇಗುಲ ಹಾಗು ಕಂಚಿನ ಪ್ರತಿಮೆ ಲೋಕಾರ್ಪಣೆ ಗೊಳಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ್, ಉಪಾಧ್ಯಕ್ಷ ಚೇತನ್ ಎಸ್. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸದಸ್ಯರಾದ ಬಿ.ಕೆ ಮೋಹನ್, ಜಾರ್ಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ ಮರಿಯಪ್ಪ, ನಿರ್ದೇಶಕ ಎಂ. ಶ್ರೀಕಾಂತ್, ತಹಸೀಲ್ದಾರ್ ಪರುಸಪ್ಪ ಕುರುಬರ, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಯುವ ಮುಖಂಡ ಬಿ.ಎಸ್ ಬಸವೇಶ್, ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಂ ಅರ್ಪಿತ್ ಕುಮಾರ್(ಅಪ್ಪು), ಪೌರಾಯುಕ್ತ ಕೆ.ಎನ್ ಹೇಮಂತ್, ಮುಖಂಡ ಅಣ್ಣಾದೊರೈ, ಗುತ್ತಿಗೆದಾರ ಷರೀಫ್ ಹಾಗು ಕಾಂಗ್ರೆಸ್ ಪಕ್ಷದ ನಗರಸಭೆ ಎಲ್ಲಾ ಸದಸ್ಯರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7 ಗಂಟೆಗೆ ಶ್ರೀ ರಾಜ್ ಮೆಲೋಡಿ ಮೇಕರ್‍ಸ್ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಜರುಗಲಿದೆ. ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್, ನಗರಸಭೆ ಸದಸ್ಯ ಜಾರ್ಜ್, ಸಂಘದ ಅಧ್ಯಕ್ಷ ಬಿ.ಎಂ ಅರ್ಪಿತ್ ಕುಮಾರ್(ಅಪ್ಪು), ಪದಾಧಿಕಾರಿಗಳಾದ ಜಿ.ಕೆ ದೇವೇಂದ್ರ(ದೇವ), ವೆಂಕಟೇಶ್, ಲಲಿತ್ ಕುಮಾರ್, ಬಿ.ಟಿ ರವಿಕುಮಾರ್, ಎಲ್. ಶಂಕರ್, ವೆಂಕಟೇಶ್, ಸದಸ್ಯರಾದ ಗೋಪಿ, ಭೂಮಿನಾಥನ್, ಮಹೇಶ್, ಎಲ್. ಶಂಕರ್, ಸುಮನ್, ಸುನೀಲ್, ರಕ್ಷಿತ್, ಅಮೋಘ, ಪ್ರಜ್ವಲ್, ನಿತಿನ್, ಮದನ್ ಮತ್ತು ಕೆ.ಸಿ ಮನು ಹಾಗು ಮುಖಂಡರಾದ ದಶರಥಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- ಸೊರಬ: ತಾಲೂಕಿನ ಆನವಟ್ಟಿ ತಿಮ್ಮಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಮತ್ತು ಎಂಎಲ್ಸಿ ಭಾರತೀಯ ಶೆಟ್ಟಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಅಯ್ಯಪ್ಪ ಭಕ್ತಾದಿಗಳು ಇಬ್ಬರನ್ನು ಸನ್ಮಾನಿಸಿದರು. ದೇವಸ್ಥಾನಕ್ಕೆ ತಮ್ಮ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಉಡುಗಣಿ, ಪ್ರಕಾಶ್ ತಲಕಾಲಕೊಪ್ಪ, ಕೃಷ್ಣಮೂರ್ತಿ, ಶಿವಪ್ರಸಾದ್ ಮತ್ತಿತರರು ಇದ್ದರು.4
- ರಾಜ್ಯದಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಬುದವಾರ ಬೆಳಗ್ಗೆ 10 ಗಂಟೆಗೆ ಅವರು ಮಾತನಾಡಿದ್ದು ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದ್ದು ಪಾದಯಾತ್ರೆ ಮಾಡುವುದು ಸೂಕ್ತ ಎಂದು ಅನಿಸಿದೆ ವರಿಷ್ಠರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ1
- ಚಿತ್ರದುರ್ಗ ಬ್ರೇಕಿಂಗ್.... ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ ಚಿತ್ರದುರ್ಗ ತಾಲೂಕಿನ ಬೆಳಗಟ್ಟ-ತುರುವನೂರು ರಸ್ತೆಯಲ್ಲಿ ಘಟನೆ ಭೀಮಗೊಂಡನಹಳ್ಳಿಯ ತಿಪ್ಪೇಸ್ವಾಮಿ(28), ಪ್ರಭು(42)ಮೃತ ದುರ್ದೈವಿಗಳು ಬೈಕ್ ಸವಾರನ ಅಜಾಗರೂಕ, ವೇಗದ ಚಾಲನೆ ಘಟನೆಗೆ ಕಾರಣ ಮಾಹಿತಿ ಸ್ಥಳಕ್ಕೆ ತುರುವನೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲು1
- ಹಾನಗಲ್... ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಅಭಿವೃದ್ಧಿ ಮರಿಚಿಕೆ. ಸಾಕಷ್ಟು ಹಣವಿದ್ದರು SDMC ಅಧ್ಯಕ್ಷನ ಗರ್ವದಿಂದ ಬಳಕೆಯಾಗದೆ ವೇತನವಿಲ್ಲದೆ ಅತಿಥಿ ಶಿಕ್ಷಕನೊಂದಿಗೆ ಆವರಣದಲ್ಲಿ ಬಡೆದಾಟ...1
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಳಿಯ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಇಂದು ಪಶ್ಚಿಮ ವಲಯ ಐ.ಜಿ.ಪಿ ಭೇಟಿ ನೀಡಿದರು. ಮೃತ ಬಾಲಕನ ಮನರಯವರೊಂದಿಗೂ ಮಾತುಕತೆ ನಡೆಸಿದರು. ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.1
- ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣದಲ್ಲಿನ ಹೋಟೆಲ್ ಗಳು, ಡಾಬಾಗಳು ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ತಳ್ಳುವ ಗಾಡಿಗಳವರಿಗೆ ಪೊಲೀಸ್ ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿಗಳೊಂದಿಗೆ ಅಧಿಕಾರಿಗಳು ಅಧಿಕಾರಿ ಡಾಕ್ಟರ್ ಜಿ .ಎಚ್. ಗಿರೀಶ್ ಅವರು ಭೇಟಿ ನೀಡಿ ಸ್ವಚ್ಛತೆ ,ಶುಚಿತ್ವ ,,ಶುದ್ಧ ಕುಡಿವ ನೀರಿನ ಬಗ್ಗೆ ಹಾಗೂ ಆಹಾರಗಳಿಗೆ ಬಳಸುವ ನಿಷೇಧಿತ ಕಲರ್ ಮತ್ತು ಪ್ಲಾಸ್ಟಿಕ್ ಗಳು ಹಾಗೂ ಎಫ್ ಎಸ್ ಎಸ್ ಎ ಐ ಲೈಸೆನ್ಸ್ ಪರಿಶೀಲಿಸಿ ನೋಟಿಸ್ ನೀಡಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿ ನಾಗರಾಜ್, ಆರೋಗ್ಯ ಇಲಾಖೆಯ ಜಿ.ಟಿ .ಕುಮಾರ್ ಹಿರಿಯ ಆಹಾರ ಆರೋಗ್ಯ ನಿರೀಕ್ಷಣಾಧಿಕಾರಿಗಳಿದ್ದರು.3
- ಶ್ರೀ ಅಟ್ಟವಿ ಸುಕ್ಷೇತ್ರ ಚಿಕ್ಕ ತೊಟ್ಟಿಲ ಕೆರೆ1ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ #onlinetv24x7 # ಶ್ರೀ ಅಟ್ಟವಿ ಸುಕ್ಷೇತ್ರ #ಮಕರಸಂಕ್ರಾಂತಿಯ #ಜಾತ್ರಾಮಹೋತ್ಸವ #tumkur2
- ತುರುವನೂರು ಬೆಳಘಟ್ಟ ರಸ್ತೆಯಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ಸಂಜೆ 6.30 ರ ವೇಳೆ ಘಟನೆ ನಡೆದಿದ್ದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ1