Shuru
Apke Nagar Ki App…
ಎಸ್ ಆರ್ ಕೆ ಸಹಕಾರಿ ಸಂಘದ ನೂತನ ೧೩ನೇ ಶಾಖೆ ಉದ್ಘಾಟನೆ ಗುಳೇದಗುಡ್ಡದಲ್ಲಿ ನೂತನ ಎಸ್.ಆರ್.ಕೆ ಬ್ಯಾಂಕ್ ಉದ್ಘಾಟಿಸಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಪೂಜ್ಯರು. ಈ ಸಮಯದಲ್ಲಿ ಶ್ರೀ ಎಸ್ ಆರ್ ಕೆ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಗುಳೇದಗುಡ್ಡ ಶಾಖೆಯ ಸಲಹಾ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Aaryan Ganiger
ಎಸ್ ಆರ್ ಕೆ ಸಹಕಾರಿ ಸಂಘದ ನೂತನ ೧೩ನೇ ಶಾಖೆ ಉದ್ಘಾಟನೆ ಗುಳೇದಗುಡ್ಡದಲ್ಲಿ ನೂತನ ಎಸ್.ಆರ್.ಕೆ ಬ್ಯಾಂಕ್ ಉದ್ಘಾಟಿಸಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಪೂಜ್ಯರು. ಈ ಸಮಯದಲ್ಲಿ ಶ್ರೀ ಎಸ್ ಆರ್ ಕೆ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಗುಳೇದಗುಡ್ಡ ಶಾಖೆಯ ಸಲಹಾ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕೆಎಚ್‌ಡಿಸಿ ಕಾಲೋನಿ, ವಿದ್ಯಾಗಿರಿ ಕಾಲೋನಿಯಲ್ಲಿ ರ‍್ನಾಲ್ಕು ಮನೆಗಳ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದಾರೆ ಕಳ್ಳತನಗಳು ವಿಫಲಗೊಂಡಿವೆ. ಮೂರು ಮನೆಯಲ್ಲಿ ಏನು ಸಿಗದೇ ನಿರಾಸೆಗೊಂಡಿದ್ದ ಕಳ್ಳರು ಮತ್ತೊಂದು ಮನೆಗೆ ಕಳ್ಳತನ ಮಾಡಲು ಹೋದಾಗ ಬೀಗ ಹೊಡೆಯುವ ಸಮಯದಲ್ಲಿ ಮುಂದಿನ ಮನೆಯೊಬ್ಬರು ಎಚ್ಚರಗೊಂಡು ಹೋದ ನೋಡಲು ಹೋದಾಗ ನಾಲ್ಕು ಜನರ ಗುಂಪೋದನ್ನು ಕಂಡಿದ್ದ ಮಹಿಳೆ ಬಾಯಿ ಮಾಡಿದ ತಕ್ಷಣವೇ ಆ ಮಹಿಳೆಯ ಮನೆಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಕಳ್ಳರು ಎಸೆದಿದ್ದರಿಂದ ಬಾಗಿಲು ಮತ್ತು ಕುರ್ಚಿಗಳನ್ನು ಮುರಿದಿರುವ ಘಟನೆ ಫೆ.೧೭ ಮಂಗಳವಾರ ನಸುಕಿನ ಜಾವ ೨ ಗಂಟೆಗೆ ಸಂದರ್ಭ ನಡೆದಿದೆ. ಸುದ್ದಿ ತಿಳಿದಿ ಶಹರ್ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ನಡೆಸಿದ್ದಾರೆ. ಈ ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ.2
- ಧಾರ್ಮಿಕ ಶ್ರದ್ಧಾಕೇಂದ್ರ ಸುಕ್ಷೇತ್ರ ಮದ್ವೀರಶೈವ ಶಿವಯೋಗ ಮಂದಿರದ 116 ನೇ ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶ್ರೀಗಳ 65 ಅಡಿ ಎತ್ತರದ ಮಾಹಾರಥೋತ್ಸವ ಸೋಮವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದೊಂದಿಗೆ ಜರುಗಿತು. ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (೬೫ಅಡಿ) ಮಾಹಾರಥೋತ್ಸವಕ್ಕೆ ಸಾಂಪ್ರದಾಯಕವಾಗಿ ಪೂಜೆ ಪುನಸ್ಕಾರ ನೆರೆವೇರಿಸಿದ ಸಂಸ್ಥೆಯ ಅಧ್ಯಕ್ಷ, ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಶಿರಬಡಗಿ ಗ್ರಾಮದ ಭಕ್ತಾಧಿಗಳು ತಂದ ಹಗ್ಗದಿಂದ ಭಕ್ತಗಣ ರಥ ಎಳೆಯಲಾಯಿತು. ಮಾಹಾರಥೋತ್ಸವಕ್ಕೆ ಭಕ್ತರು ಹೂವು ಸಮರ್ಪಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಅಪಾರ ಭಕ್ತ ಸಮೂಹ ಶಿವನ ಹಾಗೂ ಶಿವಯೋಗಿಗಳ ಸ್ಮರಣೆ ಮೂಲಕ ರಥ ಎಳೆದರು. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಪೂಜೆ ಕೈಂಕರ್ಯಗಳು ಜರುಗಿದವು. ಮಾಹಾರಥೋತ್ಸವದಲ್ಲಿ ನಾಡಿನ ಮಹಾಸ್ವಾಮಿಗಳಾದ ಹೊಳೆಹುಚ್ಚೇಶ್ವರ ಶ್ರೀ, ಫಕೀರ ದಿಂಗಾಲೇಶ್ವರ ಸ್ವಾಮಿಜಿ ನೂರಾರು ಮಠಾಧೀಶರು, ಮಹಾಸ್ವಾಮಿಗಳು, ವಟುಸಾಧಕರು ಹಾಜರಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.,ಪಟ್ಟಣಶೆಟ್ಟಿ ಧರ್ಮದರ್ಶಿ ಎಂ.ಬಿ.ಹಂಗರಗಿ, ಶರಣಪ್ಪಗೌಡ ಪಾಟೀಲ, ಕುಮಾರಗೌಡ ಜನಾಲಿ,ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆರ್.ಬಿ.ಪಾಟೀಲ, ಮುಕ್ಕಣಗೌಡ ಜನಾಲಿ, ನಾಗರಾಜ ಕಾಚೆಟ್ಟಿ, ಡಾ.ಆರ್.ಸಿ.ಭಂಡಾರಿ, ಪಂಪಣ್ಣ ಕಾಚೆಟ್ಟಿ, ಸಿಪಿಐ. ಕರೆಪ್ಪ ಬನ್ನೆ, ಪಿ.ಎಸ್.ಐ ಹನಮಂತ ನರಳೆ, ಜಿಲ್ಲೆಯ ವಿವಿಧ ಭಾಗಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ತಾಲೂಕಿನ ಮಂಗಳೂರು ಗ್ರಾಮದ ಭಜನಾ ಮಂಡಳಿಯವರು ನಂದಿಕೋಲು ಮೆರವಣಿಗೆಯೊಂದಿಗೆ ಮಹಾರಥೋತ್ಸವದಲ್ಲಿ ಗಮನಾರ್ಹವಾಗಿತ್ತು.1
- ಬಾಗಲಕೋಟೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಸಾರ್ವಜನಿಕರ ಸೌಲಭ್ಯಕ್ಕಾಗಿ 2022ನೇ ಸಾಲಿನಲ್ಲಿ ಸುಮಾರು 8.40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ, ಗ್ರಂಥಾಲಯ ಹಾಗೂ ವಾಚನಾಲಯ ಕಟ್ಟಡ ಉದ್ಘಾಟನೆ ಆಗದೇ ಬೀಗ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದೇ ಇರುವುದರಿಂದ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರು ಕಟ್ಟಡವನ್ನು ಪರಿಶೀಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಸಾರ್ವಜನಿಕರ ತೆರಿಗೆಯ ಹಣದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ತಕ್ಷಣವೇ ಸಾರ್ವಜನಿಕರಿಗೆ ತೆರೆಯಬೇಕು. ಇಲ್ಲಿ ಗ್ರಂಥಾಲಯ ಎಂದು ಫಲಕದಲ್ಲಿ ಉಲ್ಲೇಖಿಸಿದ್ದರೆ, ಗ್ರಂಥಾಲಯದ ವ್ಯವಸ್ಥೆ ಎಲ್ಲಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಾರ್ವಜನಿಕರ ಮೂಲಭೂತ ಹಕ್ಕುಗಳಾದ ನೀರು, ಶೌಚಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ” ಎಂದು ಅವರು ಆಗ್ರಹಿಸಿದರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಇದೀಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.1
- ಗ್ಯಾರಂಟಿ ಉತ್ಸವದಲ್ಲಿ ಅವ್ಯವಸ್ಥೆ ಅರ್ಧದಲ್ಲೇ ಎದ್ದ ಮಹಿಳೆಯರು –ಕಾರ್ಯಕ್ರಮ ಬಿಟ್ಟು ಹೋಗಬೇಡಿ ಸಚಿವ ತಂಗಡಗಿ ಮನವಿ #ಕೊಪ್ಪಳ #Koppal #ಗ್ಯಾರಂಟಿ_ಉತ್ಸವ #ಯುವಜಾಗೃತಿನ್ಯೂಸ್1
- ಕುಶಾವತಿ ಬಳಿ ತುಂಗಾ ನದಿಯಲ್ಲಿ ನಡೆದ ಘಟನೆ, ತೀರ್ಥಹಳ್ಳಿ: ಕಾಲೇಜು ವಿದ್ಯಾರ್ಥಿಯೋರ್ವ ನದಿಗೆ ಈಜಲ್ಲು ಹೋಗಿ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ನಡೆದಿದೆ. ಪಟ್ಟಣದ ಕುಶಾವತಿ ಬಳಿಯ ನದಿಯ ಸಮೀಪ ಸ್ನೇಹಿತರ ಜೊತೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿಯ ಬಾಳೆಬೈಲಿನ ಡಿಗ್ರಿ ಕಾಲೇಜಿನಲ್ಲಿ ಬಿ ಕಾಂ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿ ( 19 ವರ್ಷ) ಮೃತಪಟ್ಟ ವಿದ್ಯಾರ್ಥಿ. ಹೆದ್ದೂರಿನ ಮಹೇಶ್ ಎಂದು ಅವರ ಪುತ್ರನಾಗಿದ್ದ ತೇಜಸ್ವಿ ಸ್ನೇಹಿತರ ಜೊತೆಗೆ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ನಂತರ ಮುಳುಗು ತಜ್ಞ ಪ್ರಮೋದ್ ಪೂಜಾರಿ ಮೃತದೇಹ ಹೊರ ತೆಗೆದಿದ್ದಾರೆ.1
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಬಹು ವರ್ಷದ ಕನಸು ನನಸು ಮಾಡಿದ್ದಾರೆ ನಮ್ಮ ಸೋಮಣ್ಣ” – ಸಚಿವ ಜಮೀರ್ ಅಹಮದ್ ಖಾನ್ ✨🏗️ ಸಚಿವರಾದ B. Z. Zameer Ahmed Khan ಅವರು “ಬಹು ವರ್ಷದ ಕನಸು ನಮ್ಮ ಸೋಮಣ್ಣ ಅವರು ನನಸು ಮಾಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು 🙌 ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಅವರು ನೀಡಿದ ಪ್ರಶಂಸೆ ಗಮನ ಸೆಳೆದಿದೆ.1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.1