ಎನ್.ಜಿ.ಓ ಯುನೈಟೆಡ್ ವೇ ಸಂಸ್ಥೆ ಯವರು ಕೊಡುಗೆ ಅನನ್ಯ:ತುರ್ತು 108 ನೂತನ ಅಂಬ್ಯುಲೆನ್ಸ್ ಆರೋಗ್ಯ ಸೇವೆಗೆ ಚಾಲನೆ ಬಾಗೇಪಲ್ಲಿ:- ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಹಾಗೂ ಎನ್.ಜಿ.ಓ ಯುನೈಟೆಡ್ ವೇ ಸಂಸ್ಥೆ ಯವರು ಕೊಡುಗೆ ಯಾಗಿ ತುರ್ತು 108 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಇದೇ ಅಲ್ಲದೇ ಬಾಗೇಪಲ್ಲಿ ಗುಡಿಬಂಡೆ ಹಾಗೂ ಚೇಳೂರು ತಾಲ್ಲೂಕಿನಲ್ಲಿ ಶಾಲಾ ಕಟ್ಟಡ, ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಅಂಗನವಾಡಿ ಕೇಂದ್ರ ಗಳು, ಹಾಗೂ ಸಾರ್ವಜನಿಕ ಶೌಚಾಲಯ ಗಳನ್ನು ನಿರ್ಮಾಣ ಕಾರ್ಯದಲ್ಲಿ ತೊಡಗಿ ಅಭಿವೃದ್ಧಿ ಗೆ ಶ್ರಮೀಸುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಂಸ್ಥೆ ಮುಖ್ಯಸ್ಥರನ್ನು ಕರೆಸಿ ಆತ್ಮೀಯವಾಗಿ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ ಜನತೆಗೆ ರಂಜಾನ್ ಹಬ್ಬ ಶುಭಾಶಯ ಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಬಾಗೇಪಲ್ಲಿ ತಾಲೂಕಿನಲ್ಲಿ ತನ್ನ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಇಪ್ತಿಯಾರ್ ಕೂಟ ಏರ್ಪಡಿಸಲಾಗುತ್ತದೆ ಎಂದು ಹೇಳಿದರು. ತಾಲ್ಲೂಕಿನಲ್ಲಿ ಹೆಚ್ಚು ಅಂಬ್ಯುಲೆನ್ಸ್ ಗಳ ಅಗತ್ಯವಿದೆ. ಈಗ ಚೇಳೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಗೆ ಅಂಬ್ಯುಲೆನ್ಸ್ ಗೆ ಚಾಲನೆ ಕೊಟ್ಟಿರುವುದು ಸಂತಸವಾಗಿದೆ ಎಂದು ಹೇಳಿದರು ಈ ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಾ ಪ್ರತಿ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ, ಪಿ.ಮಂಜುನಾಥ್ ರೆಡ್ಡಿ, ನರೇಂದ್ರ, ಗಡ್ಡಂ ರಮೇಶ್, ಎ.ನಂಜುಂಡ,ಶ್ರೀನಿವಾಸ ರೆಡ್ಡಿ,ಬಿ.ವಿ.ವೆಂಕಟರವಣ ಹಾಗೂ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಎನ್.ಜಿ.ಓ ಯುನೈಟೆಡ್ ವೇ ಸಂಸ್ಥೆ ಯವರು ಕೊಡುಗೆ ಅನನ್ಯ:ತುರ್ತು 108 ನೂತನ ಅಂಬ್ಯುಲೆನ್ಸ್ ಆರೋಗ್ಯ ಸೇವೆಗೆ ಚಾಲನೆ ಬಾಗೇಪಲ್ಲಿ:- ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಹಾಗೂ ಎನ್.ಜಿ.ಓ ಯುನೈಟೆಡ್ ವೇ ಸಂಸ್ಥೆ ಯವರು ಕೊಡುಗೆ ಯಾಗಿ ತುರ್ತು 108 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಇದೇ ಅಲ್ಲದೇ ಬಾಗೇಪಲ್ಲಿ ಗುಡಿಬಂಡೆ ಹಾಗೂ ಚೇಳೂರು ತಾಲ್ಲೂಕಿನಲ್ಲಿ ಶಾಲಾ ಕಟ್ಟಡ, ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ,
ಅಂಗನವಾಡಿ ಕೇಂದ್ರ ಗಳು, ಹಾಗೂ ಸಾರ್ವಜನಿಕ ಶೌಚಾಲಯ ಗಳನ್ನು ನಿರ್ಮಾಣ ಕಾರ್ಯದಲ್ಲಿ ತೊಡಗಿ ಅಭಿವೃದ್ಧಿ ಗೆ ಶ್ರಮೀಸುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಂಸ್ಥೆ ಮುಖ್ಯಸ್ಥರನ್ನು ಕರೆಸಿ ಆತ್ಮೀಯವಾಗಿ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ ಜನತೆಗೆ ರಂಜಾನ್ ಹಬ್ಬ ಶುಭಾಶಯ ಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಬಾಗೇಪಲ್ಲಿ ತಾಲೂಕಿನಲ್ಲಿ ತನ್ನ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಇಪ್ತಿಯಾರ್ ಕೂಟ ಏರ್ಪಡಿಸಲಾಗುತ್ತದೆ ಎಂದು ಹೇಳಿದರು. ತಾಲ್ಲೂಕಿನಲ್ಲಿ ಹೆಚ್ಚು ಅಂಬ್ಯುಲೆನ್ಸ್ ಗಳ ಅಗತ್ಯವಿದೆ.
ಈಗ ಚೇಳೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಗೆ ಅಂಬ್ಯುಲೆನ್ಸ್ ಗೆ ಚಾಲನೆ ಕೊಟ್ಟಿರುವುದು ಸಂತಸವಾಗಿದೆ ಎಂದು ಹೇಳಿದರು ಈ ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಾ ಪ್ರತಿ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ, ಪಿ.ಮಂಜುನಾಥ್ ರೆಡ್ಡಿ, ನರೇಂದ್ರ, ಗಡ್ಡಂ ರಮೇಶ್, ಎ.ನಂಜುಂಡ,ಶ್ರೀನಿವಾಸ ರೆಡ್ಡಿ,ಬಿ.ವಿ.ವೆಂಕಟರವಣ ಹಾಗೂ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
- ಜಿಲ್ಲಾಧಿಕಾರಿ ಗೌರಿಬಿನಲ್ ನಗರಸಭೆಗೆ ದಿಡೀರ್ ಬೇಟಿ2
- Admissions only limited seats urryup1
- *ವಿಪತ್ತು ನಿರ್ವಹಣೆ ಅರಿವು ಅಗತ್ಯ: ಎಡಿಸಿ ಸೈಯಿದಾ ಆಯಿಷಾ* ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆಗಳು ಸದಾ ಸಿದ್ಧರಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹಾಗೂ ಗ್ಯೇಲ್ ಗ್ಯಾಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನಡೆದ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. ನೈಸರ್ಗಿಕ ವಿಕೋಪಗಳ, ಅಪಾಯಕಾರಿ ಕಾರ್ಖಾನೆಗಳಲ್ಲಿ ಆಗುವಂತಹ ದುರಂತ, ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆ ಅಧಿಕಾರಿಗಳಿಗೆ ಅರಿವು ಇರಬೇಕು. ಕಾರ್ಖಾನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭ ಬಂದರೂ ಕೂಡ ಸಮನ್ವಯ ಇಲಾಖೆಗಳು ಸದಾ ಸನ್ನದ್ಧವಾಗಿರಬೇಕು ಎಂದರು. *ನೈಜ ಘಟನೆಯಂತೆ ರಾಸಾಯನಿಕ ಸೋರಿಕೆ ಮಾಕ್ ಡ್ರಿಲ್* ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನೈಜ ಘಟನೆಯಂತೆ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಂತೆ ಕಾರ್ಖಾನೆ ಆವರಣದಲ್ಲಿ ಅಣಕು ಡ್ರಿಲ್ ಸಂಕೀರ್ಣ ಕೈಗಾರಿಕಾ ತುರ್ತು ಸನ್ನಿವೇಶವನ್ನು ಅನುಕರಿಸಿತು, ಇದರಲ್ಲಿ ಉತ್ಖನನ ಕೆಲಸದ ಸಮಯದಲ್ಲಿ PNG ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಯಿತು, ಇದರ ಪರಿಣಾಮವಾಗಿ ಅನಿಲ ಸೋರಿಕೆ ಮತ್ತು ಸ್ಥಿರ ದಹನದಿಂದಾಗಿ ನಂತರದ ಬೆಂಕಿ ಉಂಟಾಯಿತು. ಅದೇ ಸಮಯದಲ್ಲಿ, LPG ನಿಲ್ದಾಣದಲ್ಲಿ LPG ಟ್ಯಾಂಕರ್ ಇಳಿಸುವ ಕಾರ್ಯಾಚರಣೆಯಲ್ಲಿ ಮೆದುಗೊಳವೆ ಸೋರಿಕೆ ಉಂಟಾಯಿತು, ಇದು ನಂತರ ಉಗಿ ಮೋಡವನ್ನು ರೂಪಿಸಿತು, ಇದು ಆವಿ ಮೋಡ ಸ್ಫೋಟಕ್ಕೆ (VCE) ಕಾರಣವಾಯಿತು. ಪ್ರಥಮ ಚಿಕಿತ್ಸೆ ಅಗತ್ಯವಿರುವ 05 ಜನರು, ಗಂಭೀರ ಸುಟ್ಟ ಗಾಯಗಳೊಂದಿಗೆ 05 ಜನರು ಮತ್ತು 10 ಜನರು ಸಾವನ್ನಪ್ಪಿದ್ದಾರೆ ಎಂದು ಬಂಬಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಿ ಸುಮಾರು 400 ರಿಂದ 500 ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಕಾರ್ಖಾನೆಗಳಲ್ಲಿ ಘಟಿಸುವ ರಾಸಾಯನಿಕ ಸೋರಿಕೆಯಂತಹ ಘಟನೆಯಿಂದ ಕಾರ್ಖಾನೆ ಸಿಬ್ಬಂದಿಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಹಾನಿ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ, ನಿರ್ವಹಣೆ ಮಾಡುವ ಜ್ಞಾನ ಅಧಿಕಾರಿ, ಸಿಬ್ಬಂದಿಗಳಿಗೆ, ಕಾರ್ಖಾನೆಗಳಿಗೆ ಇರಬೇಕು.ಭೂಪಾಲ್ ಅನಿಲ ದುರಂತ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಖಾನೆಗಳಲ್ಲಿ, ಸಾರ್ವಜನಿಕರಿಗೆ ಅರಿವು ಮಾಡಿಸುವ ಸಲುವಾಗಿ ಕಾಲಕಾಲಕ್ಕೆ ಅಣುಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ. ಕಾರ್ಖಾನೆಗಳ ಜಂಟಿ ನಿರ್ದೇಶಕ ಪಾರ್ಥಸಾರಥಿ, ಉಪನಿರ್ದೇಶಕರಾದ ನರಸಿಂಹ ಮೂರ್ತಿ, ತಿಮ್ಮರಾಜು; ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್‌ನಿಂದ ಮುಖ್ಯಸ್ಥರಾದ ವಿಕ್ರಮ್ ಶರ್ಮಾ, ಎಂ. ಸತೇಶ್ ಕುಮಾರ್, ವಿಪತ್ತು ನಿರ್ವಹಣಾ ಪರಿಣಿತರಾದ ಸ್ಮಿತಾ, ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.1
- ವಾರ್ಡ್ ನೊಂ 22 ರಲ್ಲಿ ಮೂವತ್ತು ಲಕ್ಷ ಕಾಮಗಾರಿ ಗೆ ಚಾಲನೆ ನೀಡಿದ ರಫಿ1
- ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದ ಬಂಗಾರಪ್ಪ ಕಾಲೋನಿಯಲ್ಲಿ ಚರಂಡಿ ಯ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಬಂಗಾರಪ್ಪ ಕಾಲೋನಿ ನಿವಾಸಿ ಗಳ ದೇಹ ಸೇರುತ್ತಿದೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ ಮನವಿ ಸಲ್ಲಿಸಿದ ನಂತರವೂ ಯಾವುದೇ ಕೆಲಸ ಆಗಿಲ್ಲ ಎಂದು ಬಂಗಾರಪ್ಪ ಕಾಲೋನಿ ನಿವಾಸಿಗಳ ಅಳಲು ಅಲ್ಲದೆ ಚರಂಡಿ ಕೂಡ ಸ್ವಚ್ಛತೆ ಮಾಡುವ ಕಾರ್ಯ ಮಾಡಿಲ್ಲ , ಸ್ಥಳೀಯ ನಿವಾಸಿಗಳು ಮಕ್ಕಳು ಅನಾರೋಗ್ಯ ಪೀಡಿತ ರಾಗುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿದ್ದಾರೆ.4
- ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಕ್ರೋಧಗೊಂಡ ಒಳ ಮೀಸಲಾತಿ ಹೋರಾಟಗಾರರು ಇದೀಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ....1
- ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.1
- ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ವಂಚನೆಗೊಳಗಾದ ಗ್ರಾಹಕರಿಂದ 2ನೇ ದಿನದ ಅನಿರ್ದಿಷ್ಟ ಧರಣಿ ಗೌರಿಬಿದನೂರು ನಗರದ ಉಪ-ಅಂಚೆ ಕಚೇರಿ ಪೇದೆ ರಮ್ಯಾ ಎಂಬುವವರು ಹಾಲಗಾನಹಳ್ಳಿ ಗ್ರಾಮದ ಅಂಚೆ ಕಛೇರಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡುವುದಾಗಿ ಹೇಳಿ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೋಟ್ಯಂತರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವ ವಿರುದ್ದ ಕಾನೂನು ಜರುಗಿಸಬೇಕೆಂದು ಹಣ ಕಳೆದುಕೊಂಡ ಗ್ರಾಹಕರು ಅನಿರ್ದಿಷ್ಟ ಧರಣಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 3ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು, ನಮಗೆ ನ್ಯಾಯ ದೊರಕಿಸಿಕೊಡಬೇಕು ಅಥವಾ ಹಣ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 12 ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ, ಈ ಕೃತ್ಯ ಎಸಗಿದ್ದಾಳೆ. ಗ್ರಾಹಕರು ಠೇವಣಿ, ಎಸ್.ಬಿ. ಸೇರಿದಂತೆ ವಿವಿಧ ಖಾತೆಗಳಲ್ಲಿ ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ರಮ್ಯ ಹೆರಿಗೆ ಸುದೀರ್ಘ ರಜೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ, ಕಚೇರಿಯಲ್ಲಿ 1,200 ಖಾತೆದಾರರಿದ್ದು, ಸುಮಾರು 200ಗ್ರಾಹಕರಿಗೆ 1.30 ಕೋಟಿ ರೂ. ವಂಚನೆಯಾಗಿದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಪೊಲೀಸರೊಂದಿಗೆ ಮಾತಿನ ಚಕಮಕಿ: ಪೋಸ್ಟ್ ಆಫೀಸ್ ಕಛೇರಿಯಲ್ಲಿ ಹಣ ಕಳೆದುಕೊಂಡು ಗ್ರಾಹಕರು ಅನಿರ್ದಿಷ್ಟ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದರೂ ಅಂಚೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ, ಅಂಚೆ ಇಲಾಖೆಯವರಿಗೆ ಪೊಲೀಸರು ಕಾವಲು ಇದ್ದಾರೆಂದು ಪೊಲೀಸರನ್ನು ನಿಂದಿಸುವ ಮೂಲಕ ಮಾತಿನ ಚಕಮಕಿ ನಡೆಯಿತು. ನಮಗೆ ನೆಡದಿರುವ ಅನ್ಯಾಯವನ್ನು1