logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ ಬೃಹತ್ ರೈತರಪ್ರತಿಭಟನೆ ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ ನಡೆಯಿತು. ಈ ಹೋರಾಟದಲ್ಲಿ ನಟ ಪ್ರಕಾಶ್ ರಾಜ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಚುಕ್ಕಿ ನಂಜುಡಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್.ಹಿರೇಮಠ್, ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ಎಸ್. ವರಲಕ್ಷ್ಮೀ, ಬಸವರಾಜಪ್ಪ, ಲಕ್ಷ್ಮಣ್ ಹೂಗಾರ್ ಸೇರಿದಂತೆ ಹಲವು ಪ್ರಮುಖ ರೈತ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹೋರಾಟದ ತೀವ್ರತೆಯನ್ನು ಮನಗಂಡ ಮುಖ್ಯಮಂತ್ರಿಗಳು ಮಧ್ಯಾಹ್ನ 3 ಗಂಟೆಗೆ ‘ಕೃಷ್ಣಾ’ ಗೃಹ ಕಚೇರಿಯಲ್ಲಿ ರೈತ ಮುಖಂಡರ ನಿಯೋಗದೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬಿಡದಿ ಭಾಗದ ಸಣ್ಣ ಮತ್ತು ಮಧ್ಯಮ ಕ್ರಮಾಂಕದ ರೈತರು ಭಾಗವಹಿಸಿ, ನಾವು ಯಾವುದೇ ಕಾರಣಕ್ಕೂ ಜೀವನಾಧಾರವಾಗಿರುವ ಭೂಮಿಯನ್ನು ಮಾರಾಟ ಮಾಡಲು ಸಿದ್ಧರಿಲ್ಲ, ಟೌನ್‌ಶಿಪ್ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಿ ನಮ್ಮ ಬದುಕನ್ನು ಉಳಿಸಿಕೊಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಹೋರಾಟದ ಮುಖಂಡರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಈ ಯೋಜನೆ ಕೃಷಿ, ಪರಿಸರ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಹಾನಿಕಾರಕವಾಗಿದ್ದು, ಜಸ್ಟಿಸ್ ಗೋಪಾಲಗೌಡರ ನೇತೃತ್ವದ ಸಮಿತಿಯು ನಡೆಸಿದ ಸಾರ್ವಜನಿಕ ವಿಚಾರಣೆಯ ವರದಿ ಹಾಗೂ ಶೇಕಡಾ 80ಕ್ಕೂ ಹೆಚ್ಚು ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ ಸಹಿ ಮಾಡಿರುವ ಬೃಹತ್ ಕಡತವನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. ರೈತರ ನಿಯೋಗವು ಸರ್ಕಾರಕ್ಕೆ ಪ್ರಮುಖವಾಗಿ ನಾಲ್ಕು ಹಕ್ಕೊತ್ತಾಯಗಳನ್ನು ಮುಂದಿಟ್ಟಿದೆ: ಸರ್ಕಾರ ರಚಿಸುವ ಸಮಿತಿಯು ಕಾಲಹರಣ ಮಾಡದೆ ಒಂದು ತಿಂಗಳ ನಿಗದಿತ ಅವಧಿಯೊಳಗೆ ತನ್ನ ಕಾರ್ಯ ಮುಗಿಸಿ ವರದಿ ನೀಡಬೇಕು. ಈ ಸಮಿತಿಯಲ್ಲಿ ಕಡ್ಡಾಯವಾಗಿ ಪರಿಸರ, ಕೃಷಿ ಮತ್ತು ಸಾಮಾಜಿಕ ತಜ್ಞರನ್ನು ಒಳಗೊಳ್ಳಬೇಕು. ಸಮಿತಿಯ ಸದಸ್ಯರು ಬೆಂಗಳೂರಿನಲ್ಲೇ ಉಳಿಯದೆ ಖುದ್ದಾಗಿ ಬಿಡದಿ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರ ನೇರ ಅಭಿಪ್ರಾಯ ಸಂಗ್ರಹಿಸಬೇಕು. ಸಮಿತಿಯ ಅಂತಿಮ ವರದಿ ಬಂದು ಈ ವಿಷಯ ಇತ್ಯರ್ಥವಾಗುವವರೆಗೆ ಬಿಡದಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯನ್ನು ಮುಂದುವರಿಸಬಾರದು. ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, “ನಾನು ಅದೇ ಜಿಲ್ಲೆಯವನಾಗಿದ್ದು, ನೀವು ಬೆಳೆಸಿದ ಹಸಿರನ್ನು ಕಣ್ಣಾರೇ ಕಂಡಿದ್ದೇನೆ. ಹಸಿರು ನಾಶವಾಗುವುದನ್ನು ನಾನು ಬಯಸುವುದಿಲ್ಲ, ನೀವು ಕೃಷಿಯಲ್ಲಿ ಮುಂದುವರಿಯುವುದಾದರೆ ನನಗೂ ಸಂತೋಷವೇ ಎಂದು ಭರವಸೆ ನೀಡಿದರು. ಅಲ್ಲದೆ, ಬಲವಂತವಾಗಿ ಯಾರ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಹಾಗೂ ರೈತರು ಭೂಮಿ ಮಾರಾಟ ಮಾಡಬೇಡಿ ಎಂದು ಸಲಹೆ ನೀಡಿದರು. ಹೋರಾಟಗಾರರು ನೀಡುವ ಶಿಫಾರಸುಗಳನ್ನು ಪರಿಗಣಿಸಿ ಸಮಿತಿಯನ್ನು ರಚಿಸುವುದಾಗಿ ತಿಳಿಸಿದರು.

3 hrs ago
user_Binita
Binita
ಚಿತ್ತಾಪುರ, ಕಲಬುರಗಿ, ಕರ್ನಾಟಕ•
3 hrs ago
da29ca9c-e1a2-4ff5-ae9c-f56f8d593a0c

More news from ಕರ್ನಾಟಕ and nearby areas
  • ಔರಾದ ಮುಖ್ಯ ರಸ್ತ ಸುಗಮ ಸಂಚಾರಕ್ಕೆ ಗುಂಡಿ ಗಂಡಾಂತರ ಬಹುಶಃ ಅಧಿಕಾರಿಗಳು ಏನಾದರೂ ಅನಾಹುತ ಸಂಭವಿಸಲಿ ಎಂದು ಕಾಯುತ್ತಿದ್ದರೇನು ಅನಿಸುತ್ತದೆ.
    1
    ಔರಾದ ಮುಖ್ಯ ರಸ್ತ ಸುಗಮ ಸಂಚಾರಕ್ಕೆ ಗುಂಡಿ ಗಂಡಾಂತರ  ಬಹುಶಃ ಅಧಿಕಾರಿಗಳು ಏನಾದರೂ ಅನಾಹುತ ಸಂಭವಿಸಲಿ ಎಂದು ಕಾಯುತ್ತಿದ್ದರೇನು ಅನಿಸುತ್ತದೆ.
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    18 hrs ago
  • ಬಸವಕಲ್ಯಾಣ ನಗರದಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿದ ಕಾವಡ ಯಾತ್ರೆ ಬಸವಕಲ್ಯಾಣ: ನಗರದಲ್ಲಿ ಶಿವ ಭಕ್ತರಿಂದ ಭಕ್ತಿ ಶ್ರದ್ಧೆಯಿಂದ ಕಾವಡ ಯಾತ್ರೆ ಜರುಗಿತು
    1
    ಬಸವಕಲ್ಯಾಣ ನಗರದಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿದ ಕಾವಡ ಯಾತ್ರೆ
ಬಸವಕಲ್ಯಾಣ: ನಗರದಲ್ಲಿ ಶಿವ ಭಕ್ತರಿಂದ ಭಕ್ತಿ ಶ್ರದ್ಧೆಯಿಂದ ಕಾವಡ ಯಾತ್ರೆ ಜರುಗಿತು
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    16 hrs ago
  • ಬ್ಲಾಕ್ ಕಾಂಗ್ರೇಸ್ ಸಮಿತಿ ಭಾಲ್ಕಿ ವತಿಯಿಂದ ಮಾನ್ಯ ಎ.ಐ.ಸಿ.ಸಿ. ಅಧ್ಯಕ್ಷರಾದ OF ಡಾ. ಮಲ್ಲಿಕಾರ್ಜುನ ಖರ್ಗೆ ರವರ ಭಾಷಣ ಮಾಡಿರುವ ಸ್ಥಳ ಶುದ್ಧಿಕರಣ ಖಂಡಿಸಿ ಬೃಹತ್ ಪ್ರತಿಭಟನೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಆರೋಪ: ಭಾಲ್ಕಿಯಲ್ಲಿ ಬೃಹತ್ ಆಕ್ರೋಶ ಮೆರವಣಿಗೆ
    1
    ಬ್ಲಾಕ್ ಕಾಂಗ್ರೇಸ್ ಸಮಿತಿ ಭಾಲ್ಕಿ ವತಿಯಿಂದ

ಮಾನ್ಯ ಎ.ಐ.ಸಿ.ಸಿ. ಅಧ್ಯಕ್ಷರಾದ

OF

ಡಾ. ಮಲ್ಲಿಕಾರ್ಜುನ ಖರ್ಗೆ ರವರ
ಭಾಷಣ ಮಾಡಿರುವ ಸ್ಥಳ ಶುದ್ಧಿಕರಣ ಖಂಡಿಸಿ

ಬೃಹತ್ ಪ್ರತಿಭಟನೆ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಆರೋಪ: ಭಾಲ್ಕಿಯಲ್ಲಿ ಬೃಹತ್ ಆಕ್ರೋಶ ಮೆರವಣಿಗೆ
    user_JB NEWS ಕನ್ನಡ
    JB NEWS ಕನ್ನಡ
    Bidar, Karnataka•
    21 hrs ago
  • ಮಹಿಬೂಬ್ ಸಾಬ್ ಹೆಗ್ಗಡದಿನ್ನಿ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
    1
    ಮಹಿಬೂಬ್ ಸಾಬ್  ಹೆಗ್ಗಡದಿನ್ನಿ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    24 min ago
  • ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    1
    ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    57 min ago
  • ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು
    1
    ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು
    user_Sharanugouda Patil
    Sharanugouda Patil
    Muddebihal, Vijayapura•
    3 hrs ago
  • ಈದ್ ಮಿಲಾದ್ ಪ್ರಯುಕ್ತ ಘೋಡವಾಡಿ ಗ್ರಾಮದ ಐತಿಹಾಸಿಕ ಇಸ್ಮಾಯಿಲ್ ಷಾ ಖಾದ್ರಿ ದರ್ಗಾದಲ್ಲಿ ರಕ್ತದಾನ ಶಿಬಿರ
    1
    ಈದ್ ಮಿಲಾದ್ ಪ್ರಯುಕ್ತ ಘೋಡವಾಡಿ ಗ್ರಾಮದ ಐತಿಹಾಸಿಕ ಇಸ್ಮಾಯಿಲ್ ಷಾ ಖಾದ್ರಿ ದರ್ಗಾದಲ್ಲಿ ರಕ್ತದಾನ ಶಿಬಿರ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    19 hrs ago
  • ಗೌರವ ಧನ ಹೆಚ್ಚಳಕ್ಕೆ ಒತ್ತಾಯಿಸಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ ಬೀದರ್: ಗೌರವ ಧನ ಹೆಚ್ಚಳಕ್ಕೆ ಒತ್ತಾಯಿಸಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
    1
    ಗೌರವ ಧನ ಹೆಚ್ಚಳಕ್ಕೆ ಒತ್ತಾಯಿಸಿ
ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
ಬೀದರ್: ಗೌರವ ಧನ ಹೆಚ್ಚಳಕ್ಕೆ ಒತ್ತಾಯಿಸಿ
ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    16 hrs ago
  • ಕರೆಮ್ಮ ಜಿ ನಾಯಕ್ ಶಾಸಕರು ದೇವದುರ್ಗ ಇವರಿಂದ ಈದ್ ಮಿಲಾದ್ ಹಬ್ಬದ ಶುಭಾಶಯಗಳು
    1
    ಕರೆಮ್ಮ ಜಿ ನಾಯಕ್ ಶಾಸಕರು ದೇವದುರ್ಗ ಇವರಿಂದ ಈದ್ ಮಿಲಾದ್ ಹಬ್ಬದ ಶುಭಾಶಯಗಳು
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    30 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.