logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು

4 hrs ago
user_ನಾಗರಾಜ ವಾರದ
ನಾಗರಾಜ ವಾರದ
Newsagent ದೇವದುರ್ಗ, ರಾಯಚೂರು, ಕರ್ನಾಟಕ•
4 hrs ago

ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು

  • user_ನಾಗರಾಜ ವಾರದ
    ನಾಗರಾಜ ವಾರದ
    ದೇವದುರ್ಗ, ರಾಯಚೂರು, ಕರ್ನಾಟಕ
    super
    4 hrs ago
More news from ಕರ್ನಾಟಕ and nearby areas
  • ಜಯರಾಜ್ ಅಧ್ಯಕ್ಷರು ರಕ್ಷಣಾ ವೇದಿಕೆ ದೇವದುರ್ಗ ನಗರದಲ್ಲಿ ನೂತನ ಲ್ಯಾಂಡ್ರಿ ಶಾಪ್ ಪ್ರಾರಂಭ
    1
    ಜಯರಾಜ್   ಅಧ್ಯಕ್ಷರು ರಕ್ಷಣಾ ವೇದಿಕೆ   ದೇವದುರ್ಗ ನಗರದಲ್ಲಿ ನೂತನ ಲ್ಯಾಂಡ್ರಿ ಶಾಪ್ ಪ್ರಾರಂಭ
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    3 hrs ago
  • ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    1
    ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    4 hrs ago
  • ಕಾಲುವೆ ನೀರಿಗಾಗಿ ರೈತರಿಂದ ಸಿರವಾರ ಬಂದ್ ಗೆ ನೀರಸ ಪ್ರತಿಕ್ರಿಯೆ. ನೀರಿಗಾಗಿ ರೈತರಿಂದ ಸಿರವಾರ ಬಂದ್ ನೀರಸ ಪ್ರತಿಕ್ರಿಯೆ. ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ರೈತರಿಂದ ಸಿರವಾರ ಪಟ್ಟಣ ಬಂದ್ ಗೆ ಕರೆಕೊಡಲಾಗಿತ್ತು. ಬಂದ್ ಕರೆಗೆ ಪಟ್ಟಣದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನು ಕೆಲ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ಪ್ರಕ್ರಿಯೆಗಳು ನಡೆಸಿದ್ದರು.
    1
    ಕಾಲುವೆ ನೀರಿಗಾಗಿ ರೈತರಿಂದ ಸಿರವಾರ ಬಂದ್ ಗೆ ನೀರಸ ಪ್ರತಿಕ್ರಿಯೆ.

ನೀರಿಗಾಗಿ ರೈತರಿಂದ ಸಿರವಾರ ಬಂದ್ ನೀರಸ ಪ್ರತಿಕ್ರಿಯೆ.
ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ರೈತರಿಂದ ಸಿರವಾರ ಪಟ್ಟಣ ಬಂದ್ ಗೆ ಕರೆಕೊಡಲಾಗಿತ್ತು. 
ಬಂದ್ ಕರೆಗೆ ಪಟ್ಟಣದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನು ಕೆಲ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ಪ್ರಕ್ರಿಯೆಗಳು ನಡೆಸಿದ್ದರು.
    user_Mallikarjun Athnoor
    Mallikarjun Athnoor
    ಸಿರ್ವಾರ, ರಾಯಚೂರು, ಕರ್ನಾಟಕ•
    24 min ago
  • "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    1
    "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ 

ಕಲ್ಯಾಣ ವಾರ್ತೆ -ಯಾದಗಿರಿ 
ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. 
೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು.
*ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ 
೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು  ಕೋಲಿ ಸಮಾಜದ ಆಶಯವಾಗಿದೆ*-"
*ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    20 hrs ago
  • ಈದ್ ಮಿಲಾದ್: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮುದಗಲ್: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ ಪೈಗಂಬರರ ಜನ್ಮದಿನದ ಸ್ಮರಣಾರ್ಥ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಮುದಗಲ್ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಬುಧವಾರ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಜುನೈದಿ ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ರೋಗಿಗಳ ಆರೋಗ್ಯ ವಿಚಾರಿಸಿದ ಮುಖಂಡರು, ಹಬ್ಬದ ಸಂದರ್ಭದಲ್ಲಿ ಮಾನವೀಯ ಸೇವೆಯ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ, ಮುದಗಲ್ ಪಟ್ಟಣ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು. ಹಿಂದೂ-ಮುಸ್ಲಿಂ ಸಮುದಾಯದವರು ಮೊಹರಂ ಸೇರಿದಂತೆ ವಿವಿಧ ಹಬ್ಬಗಳನ್ನು ಪರಸ್ಪರ ಸಹಕಾರ ಹಾಗೂ ಸೌಹಾರ್ದತೆಯಿಂದ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಪ್ರವಾದಿಯವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಮುಸ್ಲಿಂ ಸಮುದಾಯದವರು ಸಹೋದರತ್ವ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು. ಮುಖಂಡ ಗುರುಬಸಪ್ಪ ಸಜ್ಜನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯಿಂ ಮಾತನಾಡಿ, ಧರ್ಮ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಮಾನವೀಯತೆಯಿಂದ ಬದುಕಬೇಕು. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ಹಾಗೂ ಪರಸ್ಪರ ಸಹಕಾರ ನೀಡುವುದು ಅಗತ್ಯ. ಪ್ರವಾದಿಯವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ನಡೆದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಸಬೇಕು ಎಂದರು. ಮುದಗಲ್‌ನಲ್ಲಿ ಹಬ್ಬ-ಹರಿದಿನಗಳನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದೇವಿಂದ್ರ ವಕೀಲ್, ಎಸ್ವೆನ್ ಖಾದ್ರಿ, ಮೈಬೂಬು ಕಡ್ಡಿಪುಡಿ, ಹುಸೇನ್ ಪಾಶಾ, ಮಂಜುನಾಥ ಬನ್ನಿಗೋಹುಸೇನ್,ಅಹ್ಮಿದ್ ಜಮಿನ್ದಾರ್,ಬಸವರಾಜ ಹಿರೆಮನಿ, ಮಾಬು ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    4
    ಈದ್ ಮಿಲಾದ್: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು ವಿತರಣೆ
ಮುದಗಲ್: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ ಪೈಗಂಬರರ ಜನ್ಮದಿನದ ಸ್ಮರಣಾರ್ಥ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಮುದಗಲ್ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಬುಧವಾರ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಿದರು.
ಈದ್ ಮಿಲಾದ್ ಅಂಗವಾಗಿ ಜುನೈದಿ ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ರೋಗಿಗಳ ಆರೋಗ್ಯ ವಿಚಾರಿಸಿದ ಮುಖಂಡರು, ಹಬ್ಬದ ಸಂದರ್ಭದಲ್ಲಿ ಮಾನವೀಯ ಸೇವೆಯ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ, ಮುದಗಲ್ ಪಟ್ಟಣ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು.
ಹಿಂದೂ-ಮುಸ್ಲಿಂ ಸಮುದಾಯದವರು ಮೊಹರಂ ಸೇರಿದಂತೆ ವಿವಿಧ ಹಬ್ಬಗಳನ್ನು ಪರಸ್ಪರ ಸಹಕಾರ ಹಾಗೂ ಸೌಹಾರ್ದತೆಯಿಂದ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಪ್ರವಾದಿಯವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಮುಸ್ಲಿಂ ಸಮುದಾಯದವರು ಸಹೋದರತ್ವ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.
ಮುಖಂಡ ಗುರುಬಸಪ್ಪ ಸಜ್ಜನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯಿಂ ಮಾತನಾಡಿ, ಧರ್ಮ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಮಾನವೀಯತೆಯಿಂದ ಬದುಕಬೇಕು. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ಹಾಗೂ ಪರಸ್ಪರ ಸಹಕಾರ ನೀಡುವುದು ಅಗತ್ಯ. ಪ್ರವಾದಿಯವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ನಡೆದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಸಬೇಕು ಎಂದರು.
ಮುದಗಲ್‌ನಲ್ಲಿ ಹಬ್ಬ-ಹರಿದಿನಗಳನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದೇವಿಂದ್ರ ವಕೀಲ್, ಎಸ್ವೆನ್ ಖಾದ್ರಿ, ಮೈಬೂಬು ಕಡ್ಡಿಪುಡಿ, ಹುಸೇನ್ ಪಾಶಾ, ಮಂಜುನಾಥ ಬನ್ನಿಗೋಹುಸೇನ್,ಅಹ್ಮಿದ್ ಜಮಿನ್ದಾರ್,ಬಸವರಾಜ ಹಿರೆಮನಿ, ಮಾಬು ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_ಎಸ್.ಬಿ. ಒಡೆಯರ್ ಮುದಗಲ್
    ಎಸ್.ಬಿ. ಒಡೆಯರ್ ಮುದಗಲ್
    ಲಿಂಗಸುಗೂರು, ರಾಯಚೂರು, ಕರ್ನಾಟಕ•
    3 hrs ago
  • ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ. ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.
    1
    ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್
ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ.
ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ.
2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ.
ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    22 hrs ago
  • ಕರೆಮ್ಮ ಜಿ ನಾಯಕ್ ಶಾಸಕರು ವಿಧಾನ ಸಭಾ ಕ್ಷೇತ್ರ ಇವರಿಂದ ನಮ್ಮ ಚಾನೆಲ್
    2
    ಕರೆಮ್ಮ ಜಿ ನಾಯಕ್ ಶಾಸಕರು ವಿಧಾನ ಸಭಾ ಕ್ಷೇತ್ರ ಇವರಿಂದ ನಮ್ಮ ಚಾನೆಲ್
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    4 hrs ago
  • ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.
    2
    ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ......
ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ.
ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ.
ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ  ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ.
ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.
    user_Mehboob Momin
    Mehboob Momin
    Photographer Sindhnur, Raichur•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.