ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.
ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ
ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.
- ಈದ್ ಮಿಲಾದ್: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮುದಗಲ್: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ ಪೈಗಂಬರರ ಜನ್ಮದಿನದ ಸ್ಮರಣಾರ್ಥ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಮುದಗಲ್ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಬುಧವಾರ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಜುನೈದಿ ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ರೋಗಿಗಳ ಆರೋಗ್ಯ ವಿಚಾರಿಸಿದ ಮುಖಂಡರು, ಹಬ್ಬದ ಸಂದರ್ಭದಲ್ಲಿ ಮಾನವೀಯ ಸೇವೆಯ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ, ಮುದಗಲ್ ಪಟ್ಟಣ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು. ಹಿಂದೂ-ಮುಸ್ಲಿಂ ಸಮುದಾಯದವರು ಮೊಹರಂ ಸೇರಿದಂತೆ ವಿವಿಧ ಹಬ್ಬಗಳನ್ನು ಪರಸ್ಪರ ಸಹಕಾರ ಹಾಗೂ ಸೌಹಾರ್ದತೆಯಿಂದ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಪ್ರವಾದಿಯವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಮುಸ್ಲಿಂ ಸಮುದಾಯದವರು ಸಹೋದರತ್ವ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು. ಮುಖಂಡ ಗುರುಬಸಪ್ಪ ಸಜ್ಜನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯಿಂ ಮಾತನಾಡಿ, ಧರ್ಮ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಮಾನವೀಯತೆಯಿಂದ ಬದುಕಬೇಕು. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ಹಾಗೂ ಪರಸ್ಪರ ಸಹಕಾರ ನೀಡುವುದು ಅಗತ್ಯ. ಪ್ರವಾದಿಯವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ನಡೆದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಸಬೇಕು ಎಂದರು. ಮುದಗಲ್‌ನಲ್ಲಿ ಹಬ್ಬ-ಹರಿದಿನಗಳನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದೇವಿಂದ್ರ ವಕೀಲ್, ಎಸ್ವೆನ್ ಖಾದ್ರಿ, ಮೈಬೂಬು ಕಡ್ಡಿಪುಡಿ, ಹುಸೇನ್ ಪಾಶಾ, ಮಂಜುನಾಥ ಬನ್ನಿಗೋಹುಸೇನ್,ಅಹ್ಮಿದ್ ಜಮಿನ್ದಾರ್,ಬಸವರಾಜ ಹಿರೆಮನಿ, ಮಾಬು ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------1
- ಸಿರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬ ಅದ್ಧೂರಿ ಆಚರಣೆ. ಗಮನ ಸೆಳೆದ ಡಿಜೆ, ಸ್ತಬ್ಧಚಿತ್ರ ಬೃಹತ್ ಮೆರವಣಿಗೆ. ಸಿರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬ ಅದ್ಧೂರಿ ಆಚರಣೆ. ಗಮನ ಸೆಳೆದ ಡಿಜೆ, ಸ್ತಬ್ಧಚಿತ್ರ ಬೃಹತ್ ಮೆರವಣಿಗೆ. ಸಿರವಾರ: ಪಟ್ಟಣದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಪಟ್ಟಣದ ನೂರಾನಿ ಮಸೀದ್ ಯಿಂದ ಆರಂಭಗೊಂಡ ಮೆಕ್ಕಾ, ಮದೀನಗಳ ಸ್ತಬ್ಧಚಿತ್ರಗಳ ಬೃಹತ್ ಮೆರವಣಿಗೆಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ ತಲುಪಿ ನಂತರ ಪುನಃ ನೂರಾನಿ ಮಸೀದಿ ತಲುಪಿತು. ಇದೇ ವೇಳೆ ವಿಶೇಷ ಭೋಜನಕೂಟ ಏರ್ಪಡಿಸಿ ಸಡಗರ ಸಂಭ್ರಮದೊಂದಿಗೆ ಈದ್ ಮಿಲಾದ್ ಹಬ್ಬ ಆಚರಿದರು. ಅದ್ಧೂರಿ ಮೆರವಣಿಗೆ: ಇದೇ ವೇಳೆ ಡಿಜೆ ಮೆರವಣಿಗೆಯೊಂದಿಗೆ ಸ್ತಬ್ಧ ಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯರು, ಯುವಕರು ಇದ್ದರು.4
- ಸರ್ವಸ್ವವನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಹಿಳೆಗೆ ಇದೆ:- ಡಾ ಹೀರಾ ಕುಷ್ಟಗಿ:- ಹೆಣ್ಣನ್ನು ಹೆಣ್ಣಾಗಿ ನೋಡುವದಕ್ಕಿಂತ ಹೆಣ್ಣನ್ನು ಒಬ್ಬ ಸರಿ ಸಮಾನವಾದ ಮನುಷ್ಯರಂತೆ ನೋಡಬೇಕು ಹೆಣ್ಣಿಗೆ ಈ ಜಗತ್ತನ್ನು ಗೆಲ್ಲುವ ಶಕ್ತಿ ಒಬ್ಬ ಮಹಿಳೆಗೆ ಇದ್ದು ಹೆಣ್ಣು ಏನಾನ್ನಾದರು ಸಾಧಿಸಬಲ್ಲಳು ಅದಕ್ಕಾಗಿ ಬಿ.ಎ ಪದವಿಯಲ್ಲಿ ಓದುತ್ತಿರುವ ಮಹಿಳೆಯರು ಹೆಚ್ಚು ಅಂಕ ತೆಗೆಯುವ ಮೂಲಕ ಒಳ್ಳೆಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳ ಕೀರ್ತಿ ಮತ್ತು ಕಾಲೇಜಿನ ಕೀರ್ತಿ ಗಳಿಸಬೇಕು ಎಂದು ಡಾ.ನಾಗರಾಜ ಹೀರಾ ಜಿಲ್ಲಾ ನೋಡಲ್ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರು ಹೇಳಿದರು. ಇಲ್ಲಿನ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಆನರ್ಸ್ ಎಂಬುವದು ಬಡವರು ಕಲಿಯುವ ವಿದ್ಯಯಲ್ಲ ಆನಸ್೯ ಎಂದರೆ ಬದುಕುವ ಕಲೆ ಈ ಒಂದು ಶಿಕ್ಷಣ ಇಡೀ ಜಗತ್ತಿನ ಪ್ರಕ್ರಿಯೆಯಲ್ಲಿ ಬಿ.ಎ ಪದವಿ ಆನರ್ಸ್ ಶಿಕ್ಷಣವಾಗಿದೆ. ಆದರೆ ಇವತ್ತಿನ ಶಿಕ್ಷಣ ತಂತ್ರಜ್ಞಾನದ ಮೂಲಕ ನಾವುಗಳು ಶಿಕ್ಷಣ ಪಡೆಯಬೇಕಾಗಿದೆ. ಅದಕ್ಕಾಗಿ ನಿತ್ಯ ನಿರಂತರ ಶಿಕ್ಷಣ ಪಡೆದಾಗ ಮಾತ್ರ ನಾವುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಂದರೆ ಒಂದು ಮಾಹಿತಿ ಕೇಂದ್ರವಿದ್ದಂತೆ ಆದರೆ ಇತಿಹಾಸದ ಪುಟಗಳಲ್ಲಿ ನಾವುಗಳು ನೋಡಿದಾಗ ಎಲ್ಲಾ ಪುಟಗಳಲ್ಲಿ ಹೆಣ್ಣು ಮೊದಲನೆಯ ಸ್ಥಾನದಲ್ಲಿ ಇದ್ದಾಳೆ.ಈ ಜಗತ್ತು ಸೃಷ್ಟಿಯಾಗಿದ್ದು ಹೆಣ್ಣಿನಿಂದ ಹೆಣ್ಣಿನಿಂದ ಮಾಹಾ ಭಾರತ, ಹೆಣ್ಣಿನಿಂದ ರಾಮಾಯಣ ಅದಕ್ಕಾಗಿ ಪ್ರತಿಯೊಬ್ಬರು ಯಾರು ಕೂಡ ಹೆದರದೆ ಉತ್ತಮ ಶಿಕ್ಷಣವಂತರಾಗಿ ಬಡವರಾದರೆ ಸರಿ ಶ್ರೀಮಂತರಾದರೆ ಸರಿ ಯಾರು ಯಾವ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ ಅವರ ಮೇಲೆ ಆಲಂಬನೆ ಆಗಿರುತ್ತದೆ. ಇವತ್ತಿನ ದಿನಮಾನದಲ್ಲಿ ಚಲವದಿದ್ದರೆ ಈ ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಸಾಧನೆ ಸಾಲಿನಲ್ಲಿ ನಿಂತು ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಮೂಲಕ ಅಂಕವನ್ನು ಪಡೆದು ಕಾಲೇಜಿನ ಕೀರ್ತಿ ತರುವ ಮೂಲಕ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ.ಪ.ಪೂ.ಕಾಲೇಜು ದೋಟಿಹಾಳ ಉಪನ್ಯಾಸಕಿ ಶ್ರೀಮತಿ ಪ್ರಿಯದರ್ಶಿನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ ಕಾಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕಾಲೇಜು ಅಧ್ಯಕ್ಷರಾದ ಹನಮಂತಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ, ಮಾಜಿ ಪಿ ಕಾಡ್೯ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸೂರ್ಯಕಾಂತ ದೇಸಾಯಿ, ಮಾ.ಹೊ.ಮ.ಪ.ಕಲಾ ಕಾಲೇಜು ಪ್ರಾಂಶುಪಾಲರಾದ ತಿಪ್ಪಣ್ಣ ಬಿಜಕಲ್, ದ್ಯಾಮಣ್ಣ ಕಟ್ಟಿಹೊಲ, ಸತ್ಯಪ್ಪ ರಾಜೂರು, ಎ.ವಾಯ್.ಲೋಕರೆ, ಕ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚೌಡ್ಕಿ, ಮಂಜುನಾಥ ಮಾಹಾಲಿಂಗಪೂರ, ಮುಖೇಶ ನಿಲೋಗಲ್, ಶಶಿಧರ ಕುಂಬಾರ, ಸಂಗಮೇಶ ಬಿಳಿಯಪ್ಪನವರ್, ಸುಂದರಕುಮಾರ ಚೌಡ್ಕಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಹಲವರು ಉಪಸ್ಥಿತರಿದ್ದರು.2
- ಜಯರಾಜ್ ಅಧ್ಯಕ್ಷರು ರಕ್ಷಣಾ ವೇದಿಕೆ ದೇವದುರ್ಗ ನಗರದಲ್ಲಿ ನೂತನ ಲ್ಯಾಂಡ್ರಿ ಶಾಪ್ ಪ್ರಾರಂಭ1
- ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು1
- ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.2
- ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿಅತ್ಯಾಚಾರ ಕೊಲೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ಬಳ್ಳಾರಿ / ಕಂಪ್ಲಿ : ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿ ಅತ್ಯಾಚಾರ ಕೊಲೆ ಖಂಡಿಸಿ, ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ರವಾನಿಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದನ ಕೊಲೆ ಮತ್ತು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಯುವತಿ ಅಶ್ವಿನಿ ಅತ್ಯಾಚಾರ ಮತ್ತು ಕೊಲೆಯನ್ನು ತೀವ್ರವಾಗಿ ಖಂಡಿಸಿದ್ದು ದಿನೇ ದಿನೇ ದಲಿತರ ಮೇಲೆ ದೌರ್ಜನ್ಯಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸುತ್ತಿದ್ದು ಇದಕ್ಕೆ ನೇರ ಸರ್ಕಾರವೇ ಹೊಣೆ ಹಾಗೂ ನೊಂದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಸರ್ಕಾರವು ಉದ್ಯೋಗ ಮತ್ತು ಪರಿಹಾರ ಕೊಡಬೇಕು. ಹಾಗೂ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಾತ್ಮಕವಾಗಿ ತನಿಖೆ ನಡೆಸಿ, ಈ ಕೃತ್ಯವನ್ನು ಮಾಡಿದವರಿಗೆ ಸಂಪೂರ್ಣ ವಿಚಾರಣೆ ನಡೆಸಿ ಆದಷ್ಟು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತೇವೆ |1