Shuru
Apke Nagar Ki App…
ದೇವರು ಕ್ರೂರಿಯನ್ನು ಬಲಿ ತೆಗೆದುಕೊಂಡ: ಖಮೇನಿ ಹತ್ಯೆಗೆ ಖುಷಿ ಹಂಚಿಕೊಂಡ ನಟಿ ಬಾಲಕೋಟ್ ಮತ್ತು ಬಿಯಾಂಡ್, ಟೆಹ್ರಾನ್ ನಂತಹ ವೆಬ್ ಸರಣಿಗಳಲ್ಲಿ ನಟಿಸಿರುವ ಇರಾನಿನ ನಟಿ ಎಲ್ನಾಜ್ ನೊರೌಜಿ, ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ನಟಿ ಖಮೇನಿ ಸಾವಿನ ಬಗ್ಗೆ 'ಧನ್ಯವಾದಗಳು' ಎಂದು ಶೀರ್ಷಿಕೆ ನೀಡಿ ಸುದ್ದಿ ವರದಿಯನ್ನು ಹಂಚಿಕೊಂಡಿದ್ದು, 'ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ, 47 ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೆವು' ಎಂದು ಹೇಳಿದ್ದಾರೆ.
YSRmedia vijayanagaraupsates
ದೇವರು ಕ್ರೂರಿಯನ್ನು ಬಲಿ ತೆಗೆದುಕೊಂಡ: ಖಮೇನಿ ಹತ್ಯೆಗೆ ಖುಷಿ ಹಂಚಿಕೊಂಡ ನಟಿ ಬಾಲಕೋಟ್ ಮತ್ತು ಬಿಯಾಂಡ್, ಟೆಹ್ರಾನ್ ನಂತಹ ವೆಬ್ ಸರಣಿಗಳಲ್ಲಿ ನಟಿಸಿರುವ ಇರಾನಿನ ನಟಿ ಎಲ್ನಾಜ್ ನೊರೌಜಿ, ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ನಟಿ ಖಮೇನಿ ಸಾವಿನ ಬಗ್ಗೆ 'ಧನ್ಯವಾದಗಳು' ಎಂದು ಶೀರ್ಷಿಕೆ ನೀಡಿ ಸುದ್ದಿ ವರದಿಯನ್ನು ಹಂಚಿಕೊಂಡಿದ್ದು, 'ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ, 47 ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೆವು' ಎಂದು ಹೇಳಿದ್ದಾರೆ.
More news from ಕರ್ನಾಟಕ and nearby areas
- ಹೊಸದುರ್ಗ ತಾಲೂಕು: ಹೆಗ್ಗೆರೆ ಸಮೀಪ ಟ್ರಾಕ್ಟರ್ ಪಲ್ಟಿ – ಬೆಂಕಿಗಾಹುತಿಯಾದ ವಾಹನ ಹೌದು ಇದು ಹೊಸದುರ್ಗ ತಾಲೂಕಿನ ಹೆಗ್ಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರಾಕ್ಟರ್ ರಸ್ತೆ ಬದಿಯ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ವೇಳೆ ರಸ್ತೆಯ ಪಕ್ಕದಲ್ಲಿದ್ದ ಆಕಸ್ಮಿಕ ಬೆಂಕಿಯ ಮೇಲೆ ಟ್ರಾಕ್ಟರ್ ಬಿದ್ದ ಕಾರಣ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆಯ ತೀವ್ರತೆಗೆ ಟ್ರಾಕ್ಟರ್ ಬಹುತೇಕ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.1
- Post by ALTAF,❤️🙏1
- ದಾವಣಗೆರೆ: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ದ ಜೋರಾಗಿದ್ದು, ಇರಾನ್ ಕುಸ್ತಿಪಟುಗಳು ದಾವಣಗೆರೆಗೆ ಬಂದು ಕುಸ್ತಿ ಆಡಿದರು.ನಗರದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳು ಮಾತ್ರವಲ್ಲದೇ ಇರಾನ್ ದೇಶದಿಂದಲೂ ಕುಸ್ತಿಪಟುಗಳು ಭಾಗವಹಿಸಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನಿಂದ ಆಗಮಿಸಿದ್ದ ಕುಸ್ತಿಪಟುಗಳು ಗಮನ ಸೆಳೆದರು. ಫೈನಲ್ ಪಂದ್ಯದಲ್ಲಿ ಇರಾನ್‌ನ ಮಿರ್ಜಾ -ಹಾಗೂ ಮಹಾರಾಷ್ಟ್ರದ ರವಿರಾಜ್ ಸೆಣಸಾಡಿಸಿದರು. 43 ನಿಮಿಷ ಸೆಣಸಾಡಿದರೂ ಫಲಿತಾಂಶ ಬಾರದ ಕಾರಣ ಪಂದ್ಯ ಸಮಬಲವಾಯಿತು. ಇಬ್ಬರಿಗೂ ತಲಾ ರೂ. 1 ಲಕ್ಷ ನಗದು ನೀಡಲಾಯಿತು. ಬೆಳ್ಳಿ ಗದೆ ಆಯೋಜಕರ ಬಳಿಯೇ ಉಳಿಯಿತು. . ಎರಡನೇ ಅತಿ ಮುಖ್ಯ ಪಂದ್ಯದಲ್ಲಿ ಇರಾನ್‌ನ ಜಲಾಲ್ ಹಾಗೂ ಭಾರತದ ಲಕ್ಕಿ ಕೊಯ್ಲಿ ಅವರ ನಡುವೆ ಪಂದ್ಯ ನಡೆಯಿತು. ಈ ಪಂದ್ಯವೂ ಫಲಿತಾಂಶ ಸಿಗದೇ ಸಮಬಲದಲ್ಲಿ ಮುಕ್ತಾಯವಾಯಿತು.1
- ಪರಶುರಾಂಪುರ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಗೆ 8 ಮಂದಿ ಸಿಬ್ಬಂದಿ ಭದ್ರತೆಯಲ್ಲಿ ಪರೀಕ್ಷೆ, ಅಪರೂಪದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಪರಶುರಾಮಪುರ ಈ ಒಂದು ವಿಧ್ಯಮಾನಕ್ಕೆ ಸಾಕ್ಷಿಯಾಗಿದೆ1
- ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ತೋಟದಲ್ಲಿನ ಹುಲ್ಲಿನ ಬಣವಿಗೆ ಬೆಂಕಿ ಬಿದ್ದಿದ್ದು ಅಪಾರ ಪ್ರಮಾಣದ ಹುಲ್ಲು ಸುಟ್ಟು ಬಸ್ಮವಾಗಿದೆ.. ಹೊಳಲ್ಕೆರೆ ಮತ್ತು ದಾವಣಗೆರೆ ರಸ್ತೆಯಯಲ್ಲಿರು ಮಂಜುನಾಥ್ ಎನ್ನುವವರ ತೋಟದಲ್ಲಿನ ಹುಲ್ಲಿನ ಬಣವೆ ಮೇಲೆ ಹಾದೂ ಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕೊಟ್ ನಿಂದ ಬೆಂಕಿ ಬಿದ್ದು ಒಣಗಿದ ಹುಲ್ಲು ಹಾಗಿದ್ದ ಕಾರಣ ತಕ್ಷಣವೇ ಬೆಂಕಿ ಹುಲ್ಲಿನ ಬಣವೆ ತುಂಬ ವ್ಯಪಿಸಿಕೊಂಡು ಸುಮಾರು 3ಲೋಡ್ ಹಲ್ಲುನ ಬಣವೆ ಸಂಪೂರ್ಣ ಸುಟ್ಟು ಹೋಗಿದೆ. ಜಾನುವಾರಿಗಳಿಗೆ ಮೇವು ಶೇಖರಣೆ ಮಾಡಿದ್ದ ರೈತ ಮಂಜುನಾಥ ಬಣವೆ ಸುಟ್ಟ ಕಾರಣ ಜಾನುವಾರುಗಳ ಮೇವಿಗಾಗಿ ಪರಿತಪ್ಪಿಸುವಂತ್ತಾಗಿದೆ1
- ಮಹಾಲಿಂಗಪುರ ಪಟ್ಟಣದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮಲ್ಲಯ್ಯನ ಕಂಬಿ ಹೊತ್ತುಕೊಂಡು ಭಕ್ತರು ಮಂಗಳವಾರ ಬೆಳಿಗ್ಗೆ ಪಾದಯಾತ್ರೆ ಮೂಲಕ ಹೊರಟರು. ಶಿವನ ನಾಮಸ್ಮರಣೆಗಳೊಂದಿಗೆ, ಭಜನೆ–ಕೀರ್ತನೆಗಳ ಮಧ್ಯೆ ಭಕ್ತರು ಭಕ್ತಿಭಾವದಿಂದ ಯಾತ್ರೆ ಆರಂಭಿಸಿದರು. ಯುವಕರು, ಹಿರಿಯರು ಸೇರಿದಂತೆ ಅನೇಕರು ಕುಟುಂಬ ಸಮೇತವಾಗಿ ಭಾಗವಹಿಸಿದ್ದು, ಯಾತ್ರೆಯು ಭಕ್ತಿಯ ಉತ್ಸಾಹದಿಂದ ಕಂಗೊಳಿಸಿತು. ಮಾರ್ಗ ಮಧ್ಯೆ ವಿವಿಧ ಗ್ರಾಮಗಳಲ್ಲಿ ಭಕ್ತರಿಗೆ ನೀರು, ಪ್ರಸಾದ ಹಾಗೂ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಯಿತು. ಶ್ರೀಶೈಲ ತಲುಪಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಸಂಕಲ್ಪದೊಂದಿಗೆ ಭಕ್ತರು ಪಾದಯಾತ್ರೆ ಮುಂದುವರಿಸಿದ್ದಾರೆ. ಈ ಪಾದಯಾತ್ರೆ ಶಿವಭಕ್ತರ ನಂಬಿಕೆ ಹಾಗೂ ಆಧ್ಯಾತ್ಮಿಕ ಶ್ರದ್ಧೆಯ ಪ್ರತೀಕವಾಗಿದೆ.1
- ಚಳ್ಳಕೆರೆ ತ್ಯಾಗರಾಜ ನಗರದಲ್ಲಿ “ಮೈ ಚೋಟ ಸ್ಕೂಲ್” – ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಹೆಜ್ಜೆ 🌟 MY CHHOTA SCHOOL ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಬೆಂಗಳೂರು ರಾಜಧಾನಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ದಂಪತಿಗಳು ಕೋವಿಡ್ ಲಾಕ್‌ಡೌನ್ ಸಂದರ್ಭ ಊರಿಗೆ ಮರಳಿ ಬಂದು, ತಮ್ಮ ಮಕ್ಕಳಿಗೆ ಹಾಗೂ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ “ಮೈ ಚೋಟ ಸ್ಕೂಲ್” ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೂ ಪರೀಕ್ಷೆ ನಡೆಸಿ, ಬುದ್ಧಿವಂತ ಮಕ್ಕಳಿಗೆ ಮಾತ್ರ ಅವಕಾಶ ನೀಡುವ ಪದ್ಧತಿ ಇರುವ ಸಂದರ್ಭದಲ್ಲೂ, ದಂಪತಿಗಳಾದ ಚಂದ್ರಕಲಾ – ವೀರೇಶ್ ಅವರು ಅಕ್ಷರ ಪರಿಚಯವಿಲ್ಲದ ಮಕ್ಕಳಿಗೂ ಪ್ರವೇಶ ನೀಡಿ, ಮೂಲಭೂತ ಶಿಕ್ಷಣದ ಮೂಲಕ ಅವರನ್ನು ರೂಪಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷಾ ಪಾಠಗಳ ಜೊತೆಗೆ ಗಣಿತ, ಪರಿಸರ ಜ್ಞಾನ, ಸ್ವಯಂ ಪರಿಚಯ ಹಾಗೂ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಶಿಸ್ತು, ದೇಶಭಕ್ತಿ ಮತ್ತು ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ಪ್ರಾರಂಭದಲ್ಲಿ 18 ಮಕ್ಕಳಿಂದ ಆರಂಭವಾದ ಶಾಲೆ, ಮೂರನೇ ವರ್ಷಕ್ಕೆ 53 ಮಕ್ಕಳ ದಾಖಲಾತಿಯೊಂದಿಗೆ ಉತ್ತಮ ಬೆಳವಣಿಗೆ ಸಾಧಿಸಿದೆ. 🎯 ಶಾಲೆಯ ಪ್ರಮುಖ ವೈಶಿಷ್ಟ್ಯಗಳು: ✅ ಭಾಷಾ ಕೌಶಲ್ಯ (ಕನ್ನಡ / ಇಂಗ್ಲಿಷ್ / ಹಿಂದಿ) ✅ ಅಕ್ಷರ ಗುರುತಿಸುವಿಕೆ ✅ ಗಣಿತದ ಮೂಲಭೂತ ಪಾಠಗಳು ✅ ಪರಿಸರ ಜ್ಞಾನ ✅ ಸ್ವಯಂ ಪರಿಚಯ ✅ ಕ್ರಿಯಾತ್ಮಕ ಚಟುವಟಿಕೆಗಳು ✅ ಸಾಮಾಜಿಕ ಹಾಗೂ ದೈಹಿಕ ಬೆಳವಣಿಗೆ ✅ ಒಳಾಂಗಣ ಮತ್ತು ಹೊರಾಂಗಣ ಆಟಗಳು ✅ ವ್ಯಾಯಾಮ ಮತ್ತು ಸಂಸ್ಕಾರ ಶಿಕ್ಷಣ 📌 ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದೆ. 📍 ಸ್ಥಳ: ತ್ಯಾಗರಾಜ ನಗರ, ಚಳ್ಳಕೆರೆ 📞 ಸಂಪರ್ಕಿಸಿ: ಚಂದ್ರಕಲಾ – 8310045314 ಗಿರೀಶ್ – 9902216878 🌞 ಜೊತೆಗೆ ಟಾಲೆಂಟ್ ಪಾರ್ಕ್ – ಸಮರ್ ಕ್ಯಾಂಪ್ 🌞 📅 ಏಪ್ರಿಲ್ 10 ರಿಂದ ಮೇ 10ರವರೆಗೆ 📍 1ನೇ ಕ್ರಾಸ್, ಟಿ.ಆರ್. ನಗರ, ಮಾಸ್ಟರ್ ಮೈಂಡ್ ಕಂಪ್ಯೂಟರ್ ಸೆಂಟರ್ ಹತ್ತಿರ, ಚಳ್ಳಕೆರೆ ⚠️ ಸೀಮಿತ ಆಸನಗಳು – ಕೂಡಲೇ ನೋಂದಣಿ ಮಾಡಿಕೊಳ್ಳಿ 👨👩👧👦 ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ – ಇಂದೇ ಸೇರಿಸಿ!1
- ಚಿತ್ರದುರ್ಗ: ಗ್ರಾಮ ದೇವರ ಜಾತ್ರೆಯಲ್ಲಿ ಅತ್ತಿಗೆ-ನಾದಿನಿಯರ ಡಿಚ್ಚಿ ಟಗರು ಕಾಳಗದಂತೆ ಅತ್ತಿಗೆ ನಾದಿನಿಯರು ಡಿಚ್ಚಿ ಕೊಡೆಯೋ ಜಾತ್ರೆ ತಲೆ-ತಲೆ ಹಿಡಿದು ಡಿಚ್ಚಿ ಹೊಡೆಯೋ ಅತ್ತಿಗೆ-ನಾದಿನಿಯರು ಡಿಚ್ಚಿ ಹೊಡೆದು ದೇವರ ಸಮ್ಮುಖ ಹಳೆಯ ವೈಮನಸ್ಸು ಮರೆಯುವ ಜಾತ್ರೆ ಜಾತ್ರೆಲಿ ಡಿಚ್ಚಿ ಹೊಡೆಯದಿದ್ರೆ ಹೆಣ್ಣು ಮಕ್ಕಳಿಗೆ ತಲೆ ನೋವು ಬರುತ್ತೆ ಎಂಬ ನಂಬಿಕೆ ಬುಡಕಟ್ಟು ಸಂಸ್ಕೃತಿಯ ಜಾತ್ರೆಯಲ್ಲಿ ಡಿಚ್ಚಿ ವಿಶೇಷ ಆಚರಣೆ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಿಶಿಷ್ಠ ಆಚರಣೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ CN ಮಾಳಿಗೆ ಗ್ರಾಮ ಜಾತ್ರೆಗೆ ಬರುವ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಅತ್ತಿಗೆಯರೊಂದಿಗೆ ಆದ ವೈಮನಸ್ಸು ಮರೆಯಲು ವಿಶಿಷ್ಠ ಆಚರಣೆ ಡಿಚ್ಚಿ ಆಚರಿಸಿದ್ರೆ ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮಸ್ಥರ ಮಣೇವು ಆಚರಣೆ ಮಣೇವು ಮೂಲಕ ಸಕ್ಕರೆ ಬಾಳೆಹಣ್ಣು, ಹಂಚಿ ಹರಕೆ ತೀರಿಸುವ ಗ್ರಾಮಸ್ಥರು ಕುರಿಗಳಿಂದ ಅಹೋಬಲ ನರಸಿಂಹ ಸ್ವಾಮಿಗೆ ಪ್ರದಕ್ಷಿಣೆ ರೋಗ-ರುಜಿನ ಬಾರದಿರಲಿ ಅಂತಾ ಪ್ರದಕ್ಷಿಣೆ ಹಾಕಿ ದೇವರಿಗೆ ಮೊರೆ1
- ಹೊಳಲ್ಕೆರೆ ಪಟ್ಟಣದ ಮೈರಾಡದ ತೋಟದಲ್ಲಿನ ಬಣವೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ದಾವಣಗೆರೆ ರಸ್ತೆಯ ಮೈರಾಡದ ಪಾನಿಪುರಿ ಮಂಜುನಾಥ್ ಅವರ ತೋಟದಲ್ಲಿನ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ 300 ಪೆಂಡಿ ಹುಲ್ಲಿನ ಬವಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಮಂಜುನಾಥ್ ಅವರಿಗೆ ಅಪಾರ ನಷ್ಟ ಅನುಭವಿಸಿದೆ1