Shuru
Apke Nagar Ki App…
ಹೊಳಲ್ಕೆರೆ ತೋಟದ ಬಣವೆಗೆ ಬೆಂಕಿ ಬಿದ್ದು ರೈತನಿಗೆ ನಷ್ಟ ಉಂಟಾಗಿದೆ ಹೊಳಲ್ಕೆರೆ ಪಟ್ಟಣದ ಮೈರಾಡದ ತೋಟದಲ್ಲಿನ ಬಣವೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ದಾವಣಗೆರೆ ರಸ್ತೆಯ ಮೈರಾಡದ ಪಾನಿಪುರಿ ಮಂಜುನಾಥ್ ಅವರ ತೋಟದಲ್ಲಿನ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ 300 ಪೆಂಡಿ ಹುಲ್ಲಿನ ಬವಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಮಂಜುನಾಥ್ ಅವರಿಗೆ ಅಪಾರ ನಷ್ಟ ಅನುಭವಿಸಿದೆ
Vinay P palekar
ಹೊಳಲ್ಕೆರೆ ತೋಟದ ಬಣವೆಗೆ ಬೆಂಕಿ ಬಿದ್ದು ರೈತನಿಗೆ ನಷ್ಟ ಉಂಟಾಗಿದೆ ಹೊಳಲ್ಕೆರೆ ಪಟ್ಟಣದ ಮೈರಾಡದ ತೋಟದಲ್ಲಿನ ಬಣವೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ದಾವಣಗೆರೆ ರಸ್ತೆಯ ಮೈರಾಡದ ಪಾನಿಪುರಿ ಮಂಜುನಾಥ್ ಅವರ ತೋಟದಲ್ಲಿನ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ 300 ಪೆಂಡಿ ಹುಲ್ಲಿನ ಬವಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಮಂಜುನಾಥ್ ಅವರಿಗೆ ಅಪಾರ ನಷ್ಟ ಅನುಭವಿಸಿದೆ
More news from ಕರ್ನಾಟಕ and nearby areas
- ಹೊಳಲ್ಕೆರೆ ಪಟ್ಟಣದ ಮೈರಾಡದ ತೋಟದಲ್ಲಿನ ಬಣವೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ದಾವಣಗೆರೆ ರಸ್ತೆಯ ಮೈರಾಡದ ಪಾನಿಪುರಿ ಮಂಜುನಾಥ್ ಅವರ ತೋಟದಲ್ಲಿನ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ 300 ಪೆಂಡಿ ಹುಲ್ಲಿನ ಬವಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಮಂಜುನಾಥ್ ಅವರಿಗೆ ಅಪಾರ ನಷ್ಟ ಅನುಭವಿಸಿದೆ1
- ಹೊಸದುರ್ಗ ತಾಲೂಕು: ಹೆಗ್ಗೆರೆ ಸಮೀಪ ಟ್ರಾಕ್ಟರ್ ಪಲ್ಟಿ – ಬೆಂಕಿಗಾಹುತಿಯಾದ ವಾಹನ ಹೌದು ಇದು ಹೊಸದುರ್ಗ ತಾಲೂಕಿನ ಹೆಗ್ಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರಾಕ್ಟರ್ ರಸ್ತೆ ಬದಿಯ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ವೇಳೆ ರಸ್ತೆಯ ಪಕ್ಕದಲ್ಲಿದ್ದ ಆಕಸ್ಮಿಕ ಬೆಂಕಿಯ ಮೇಲೆ ಟ್ರಾಕ್ಟರ್ ಬಿದ್ದ ಕಾರಣ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆಯ ತೀವ್ರತೆಗೆ ಟ್ರಾಕ್ಟರ್ ಬಹುತೇಕ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.1
- ದಾವಣಗೆರೆ: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ದ ಜೋರಾಗಿದ್ದು, ಇರಾನ್ ಕುಸ್ತಿಪಟುಗಳು ದಾವಣಗೆರೆಗೆ ಬಂದು ಕುಸ್ತಿ ಆಡಿದರು.ನಗರದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳು ಮಾತ್ರವಲ್ಲದೇ ಇರಾನ್ ದೇಶದಿಂದಲೂ ಕುಸ್ತಿಪಟುಗಳು ಭಾಗವಹಿಸಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನಿಂದ ಆಗಮಿಸಿದ್ದ ಕುಸ್ತಿಪಟುಗಳು ಗಮನ ಸೆಳೆದರು. ಫೈನಲ್ ಪಂದ್ಯದಲ್ಲಿ ಇರಾನ್‌ನ ಮಿರ್ಜಾ -ಹಾಗೂ ಮಹಾರಾಷ್ಟ್ರದ ರವಿರಾಜ್ ಸೆಣಸಾಡಿಸಿದರು. 43 ನಿಮಿಷ ಸೆಣಸಾಡಿದರೂ ಫಲಿತಾಂಶ ಬಾರದ ಕಾರಣ ಪಂದ್ಯ ಸಮಬಲವಾಯಿತು. ಇಬ್ಬರಿಗೂ ತಲಾ ರೂ. 1 ಲಕ್ಷ ನಗದು ನೀಡಲಾಯಿತು. ಬೆಳ್ಳಿ ಗದೆ ಆಯೋಜಕರ ಬಳಿಯೇ ಉಳಿಯಿತು. . ಎರಡನೇ ಅತಿ ಮುಖ್ಯ ಪಂದ್ಯದಲ್ಲಿ ಇರಾನ್‌ನ ಜಲಾಲ್ ಹಾಗೂ ಭಾರತದ ಲಕ್ಕಿ ಕೊಯ್ಲಿ ಅವರ ನಡುವೆ ಪಂದ್ಯ ನಡೆಯಿತು. ಈ ಪಂದ್ಯವೂ ಫಲಿತಾಂಶ ಸಿಗದೇ ಸಮಬಲದಲ್ಲಿ ಮುಕ್ತಾಯವಾಯಿತು.1
- “ನಾನು ಮತ್ತು ನಮ್ಮ ಕುಟುಂಬ ಸುರಕ್ಷಿತವಾಗಿದ್ದೇವೆ. ಯಾರೂ ಆತಂಕ ಪಡಬೇಡಿ,” – ನಾರಾ ಭರತ್ ರೆಡ್ಡಿ “ದುಬೈನಲ್ಲಿ ಸಿಲುಕಿರುವ 35 ಜನರಿಗೆ ಸಾಧ್ಯವಾದ ಎಲ್ಲಾ ಸಹಾಯ ಮಾಡುತ್ತಿದ್ದೇವೆ.”1
- Post by Voice news Kannada1
- Post by ಗಿರೀಶ್ B2
- ಚಳ್ಳಕೆರೆ ತ್ಯಾಗರಾಜ ನಗರದಲ್ಲಿ “ಮೈ ಚೋಟ ಸ್ಕೂಲ್” – ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಹೆಜ್ಜೆ 🌟 MY CHHOTA SCHOOL ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಬೆಂಗಳೂರು ರಾಜಧಾನಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ದಂಪತಿಗಳು ಕೋವಿಡ್ ಲಾಕ್‌ಡೌನ್ ಸಂದರ್ಭ ಊರಿಗೆ ಮರಳಿ ಬಂದು, ತಮ್ಮ ಮಕ್ಕಳಿಗೆ ಹಾಗೂ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ “ಮೈ ಚೋಟ ಸ್ಕೂಲ್” ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೂ ಪರೀಕ್ಷೆ ನಡೆಸಿ, ಬುದ್ಧಿವಂತ ಮಕ್ಕಳಿಗೆ ಮಾತ್ರ ಅವಕಾಶ ನೀಡುವ ಪದ್ಧತಿ ಇರುವ ಸಂದರ್ಭದಲ್ಲೂ, ದಂಪತಿಗಳಾದ ಚಂದ್ರಕಲಾ – ವೀರೇಶ್ ಅವರು ಅಕ್ಷರ ಪರಿಚಯವಿಲ್ಲದ ಮಕ್ಕಳಿಗೂ ಪ್ರವೇಶ ನೀಡಿ, ಮೂಲಭೂತ ಶಿಕ್ಷಣದ ಮೂಲಕ ಅವರನ್ನು ರೂಪಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷಾ ಪಾಠಗಳ ಜೊತೆಗೆ ಗಣಿತ, ಪರಿಸರ ಜ್ಞಾನ, ಸ್ವಯಂ ಪರಿಚಯ ಹಾಗೂ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಶಿಸ್ತು, ದೇಶಭಕ್ತಿ ಮತ್ತು ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ಪ್ರಾರಂಭದಲ್ಲಿ 18 ಮಕ್ಕಳಿಂದ ಆರಂಭವಾದ ಶಾಲೆ, ಮೂರನೇ ವರ್ಷಕ್ಕೆ 53 ಮಕ್ಕಳ ದಾಖಲಾತಿಯೊಂದಿಗೆ ಉತ್ತಮ ಬೆಳವಣಿಗೆ ಸಾಧಿಸಿದೆ. 🎯 ಶಾಲೆಯ ಪ್ರಮುಖ ವೈಶಿಷ್ಟ್ಯಗಳು: ✅ ಭಾಷಾ ಕೌಶಲ್ಯ (ಕನ್ನಡ / ಇಂಗ್ಲಿಷ್ / ಹಿಂದಿ) ✅ ಅಕ್ಷರ ಗುರುತಿಸುವಿಕೆ ✅ ಗಣಿತದ ಮೂಲಭೂತ ಪಾಠಗಳು ✅ ಪರಿಸರ ಜ್ಞಾನ ✅ ಸ್ವಯಂ ಪರಿಚಯ ✅ ಕ್ರಿಯಾತ್ಮಕ ಚಟುವಟಿಕೆಗಳು ✅ ಸಾಮಾಜಿಕ ಹಾಗೂ ದೈಹಿಕ ಬೆಳವಣಿಗೆ ✅ ಒಳಾಂಗಣ ಮತ್ತು ಹೊರಾಂಗಣ ಆಟಗಳು ✅ ವ್ಯಾಯಾಮ ಮತ್ತು ಸಂಸ್ಕಾರ ಶಿಕ್ಷಣ 📌 ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದೆ. 📍 ಸ್ಥಳ: ತ್ಯಾಗರಾಜ ನಗರ, ಚಳ್ಳಕೆರೆ 📞 ಸಂಪರ್ಕಿಸಿ: ಚಂದ್ರಕಲಾ – 8310045314 ಗಿರೀಶ್ – 9902216878 🌞 ಜೊತೆಗೆ ಟಾಲೆಂಟ್ ಪಾರ್ಕ್ – ಸಮರ್ ಕ್ಯಾಂಪ್ 🌞 📅 ಏಪ್ರಿಲ್ 10 ರಿಂದ ಮೇ 10ರವರೆಗೆ 📍 1ನೇ ಕ್ರಾಸ್, ಟಿ.ಆರ್. ನಗರ, ಮಾಸ್ಟರ್ ಮೈಂಡ್ ಕಂಪ್ಯೂಟರ್ ಸೆಂಟರ್ ಹತ್ತಿರ, ಚಳ್ಳಕೆರೆ ⚠️ ಸೀಮಿತ ಆಸನಗಳು – ಕೂಡಲೇ ನೋಂದಣಿ ಮಾಡಿಕೊಳ್ಳಿ 👨👩👧👦 ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ – ಇಂದೇ ಸೇರಿಸಿ!1
- Post by ಗಿರೀಶ್ B1
- ಕಡೂರು: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಜನ ಭಕ್ತರ ನಡುವೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಗಜಾರೋಹಣೋತ್ಸವ, ಶ್ರೀ ಕೃಷ್ಣಗಂದೋತ್ಸವ ನಡೆದ ಸ್ವಾಮಿಯ ಮೂಲ ಸ್ಣಾನದಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿದವು. ನಂತರ ಸ್ವಾಮಿಯ ಉತ್ಸವ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತಂದು ಆಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಾಂಪ್ರದಾಯಿಕವಾಗಿ ವಾಡಿಕೆಯಂತೆ ಮುಜರಾಯಿ ಅಧಿಕಾರಿಯಾದ ತಹಶೀಲ್ದಾರ್ ಪೂರ್ಣಿಮಾ ತಾಲ್ಲೂಕಿನ ಜನತೆ ಪರವಾಗಿ ರಥ ಪೂಜೆ ಸಲ್ಲಿಸಿದ ನಂತರ ಸಾಂಕೇತಿಕ ಬಲಿಪೂಜೆ ನಡೆಯಿತು.ನೆರೆದ ಭಕ್ತರು ಉತ್ಸಾಹದಿಂದ ರಥವನ್ನೆಳೆದು ಸಂಭ್ರಮಿಸಿದರು. ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಪಿ.ಕೋಡಿಹಳ್ಳಿಯ ಮೂಲ್ವೀಕರು ಸಂಪ್ರದಾಯದಂತೆ ರಥೋತ್ಸವದ ನೇತೃತ್ವ ವಹಿಸಿದ್ದರು. ಆಗಮೀಕರಾದ ವೀರೇಶ್ ರಥೋತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಯಲುನಾಡಿನ ಪ್ರಮುಖ ರಥೋತ್ಸವ ಇದಾಗಿದ್ದು, ಹೊರ ರಾಜ್ಯ,ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಲ್ಲಿಕಾರ್ಜುನ ಸ್ವಾಮಿ ಅತ್ಯಂತ ಆಪ್ತ ದೇವತೆಯಾಗಿದ್ದು, ಆಲಂಕೃತ ಬಂಡಿಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ. ರಥೋತ್ಸವ ನಡೆದ ನಂತರ ರಥದ ಸುತ್ತ ಪಾನಕದ ಬಂಡಿಗಳನ್ನು ಓಡಿಸುತ್ತಾರೆ. ಈ ಸಂದರ್ಭ ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಾಹನಗಳ ನಿಲುಗಡೆಗೆ ಯಗಟಿ ಪೊಲೀಸರು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಧ್ರತೆ ಕಲ್ಪಿಸಿದ್ದರು. ವ್ಯವಸ್ಥಾಪನ ಸಮಿತಿಅಧ್ಯಕ್ಷ ಜಯಣ್ಣ,ಶಾಂತಪ್ಪ,ಲೋಕೇಶಪ್ಪ,ಜಡೆಯಪ್ಪ, ನಾಗರಾಜು,,ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಯಗಟಿಪುರ ಪ್ರಸನ್ನ ಮತ್ತಿತರರು ಇದ್ದರು.3