logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಕಾರಿಪುರ : ಮೃತ ಲೈನ್ ಮೆನ್ ಹರೀಶ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಹಾಗೂ ಉದ್ಯೋಗ ನೀಡಬೇಕೆಂದು ಸರ್ಕಾರಕ್ಕೆ ಚಂದ್ರುಕಾಂತ್ ಎಸ್ ರೇವಣಕರ್ ಒತ್ತಾಯ. ಪಟ್ಟಣದ ಮೆಸ್ಕಾಂ ಕಚೇರಿಯ ಎದುರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಲೈನ್ ಮ್ಯಾನ್ ಹರೀಶ್ (45) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುತ್ತಾರೆ. ರಾತ್ರಿ ಸುರಿದ ಮಳೆಗೆ ನೆಲಕ್ಕುರುಳಿದ ವಿದ್ಯುತ್ ತಂತಿ ಸರಿಪಡಿಸುವ ವೇಳೆಯಲ್ಲಿ ದುರ್ಘಟನೆ ಸಂಭವಿಸಿದೆ ದುರಸ್ತಿಗೆ ಎಲ್ ಸಿ ಪಡೆದಿದ್ದರೂ ಹೇಗೆ ವಿದ್ಯುತ್ ಹರಿಯಿತು ಎನ್ನುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ವಿದ್ಯುತ್ ಸ್ಪರ್ಶಿಸಿ ಸಾವಿಗಿಡಾದ ಲೈನ್ ಮೆನ್ ಗೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ಧನ ನೀಡಬೇಕು.ಇಡೀ ಕುಟುಂಬದ ಜವಾಬ್ದಾರಿ ಮನೆ ಯಜಮಾನನ ಮೇಲೆ ಇರುತ್ತದೆ.ಅವನೆ ಕುಟುಂಬದ ಆದಾರಸ್ತಂಭ. ಆತ ಮರಣ ಹೊಂದಿದರೆ ಆ ಕುಟುಂಬದ ರಕ್ಷಣೆಗೆ ಸರ್ಕಾರ ನಿಲ್ಲಬೇಕು. ಲೈನ್ ಮೆನ್ ವಿದ್ಯುತ್ ಕೆಲಸವೆಂದರೆ.ಬೆಂಕಿ ಜೊತೆಗೆ ಕೆಲಸಮಾಡಿದಂತೆ‌ ಎಷ್ಟೇ ಹುಷಾರಿಂದ ಕೆಲಸ ನಿರ್ವಹಿಸಿದರೂ ಕೂಡ ಕೆಲವು ಸಾರಿ ಅನಾಹುತ ನಡೆಯುತ್ತಿದೆ. ದೆಹಲಿ ಎ ಎ ಪಿ ಸರ್ಕಾರ ಇದ್ದಾಗ‌ ಸೈನಿಕ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದರೆ ಅವರಿಗೆ ಒಂದು ಕೋಟಿ ರೂಪಾಯಿ ಕುಟುಂಬದವರಿಗೆ ಪರಿಹಾರದ ಚೆಕ್ ಅವರು ಮನೆಗೆ ಹೋಗಿ ಕೊಡುತ್ತಿದ್ದರು. ಅದೆ ರೀತಿ ವಿದ್ಯುತ್ ಸ್ಪರ್ಶಿಸಿ ಲೈನ್ ಮೆನ್ ಮರಣ ಹೊಂದಿದರೆ ಆ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡುತ್ತಿದ್ದರು. ಶಿಕಾರಿಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಮರಣ ಹೊಂದಿದ ಲೈನ್ ಮೆನ್ ಹರೀಶ್ ಮೂವರು ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ ಆಧಾರವಾಗಿದ್ದ ಇವರ ಸಾವು ತುಂಬಲಾರದ ನಷ್ಟ ಉಂಟು ಮಾಡಿದ್ದು ಕುಟುಂಬಕ್ಕೆ ಸರ್ಕಾರ ಪರಿಹಾರ ಹಾಗೂ ಕುಟುಂಬದ ಸದಸ್ಯರು ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಶಿಕಾರಿಪುರ ತಾಲ್ಲೂಕು ಆಮ್ಆದ್ಮಿ ಪಾರ್ಟಿ‌ಯ ಅಧ್ಯಕ್ಷರಾದ ಚಂದ್ರಕಾಂತ್ ಎಸ್ ರೇವಣಕರ್ ರವರು ಸರ್ಕಾರಕ್ಕೆ ಒತ್ತಾಯಿಸಿದರು.

9 hrs ago
user_Press Narashimha swamy SN
Press Narashimha swamy SN
ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
9 hrs ago
c1709a7d-1b36-4503-b3d5-bc1492aa4916

ಶಿಕಾರಿಪುರ : ಮೃತ ಲೈನ್ ಮೆನ್ ಹರೀಶ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಹಾಗೂ ಉದ್ಯೋಗ ನೀಡಬೇಕೆಂದು ಸರ್ಕಾರಕ್ಕೆ ಚಂದ್ರುಕಾಂತ್ ಎಸ್ ರೇವಣಕರ್ ಒತ್ತಾಯ. ಪಟ್ಟಣದ ಮೆಸ್ಕಾಂ ಕಚೇರಿಯ ಎದುರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಲೈನ್ ಮ್ಯಾನ್ ಹರೀಶ್ (45) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುತ್ತಾರೆ. ರಾತ್ರಿ ಸುರಿದ ಮಳೆಗೆ ನೆಲಕ್ಕುರುಳಿದ ವಿದ್ಯುತ್ ತಂತಿ ಸರಿಪಡಿಸುವ ವೇಳೆಯಲ್ಲಿ ದುರ್ಘಟನೆ ಸಂಭವಿಸಿದೆ ದುರಸ್ತಿಗೆ ಎಲ್ ಸಿ ಪಡೆದಿದ್ದರೂ ಹೇಗೆ ವಿದ್ಯುತ್ ಹರಿಯಿತು ಎನ್ನುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ವಿದ್ಯುತ್ ಸ್ಪರ್ಶಿಸಿ ಸಾವಿಗಿಡಾದ ಲೈನ್ ಮೆನ್ ಗೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ಧನ ನೀಡಬೇಕು.ಇಡೀ ಕುಟುಂಬದ ಜವಾಬ್ದಾರಿ ಮನೆ ಯಜಮಾನನ ಮೇಲೆ ಇರುತ್ತದೆ.ಅವನೆ ಕುಟುಂಬದ ಆದಾರಸ್ತಂಭ. ಆತ ಮರಣ ಹೊಂದಿದರೆ ಆ ಕುಟುಂಬದ ರಕ್ಷಣೆಗೆ ಸರ್ಕಾರ ನಿಲ್ಲಬೇಕು. ಲೈನ್ ಮೆನ್ ವಿದ್ಯುತ್ ಕೆಲಸವೆಂದರೆ.ಬೆಂಕಿ

31aa46c6-dd98-4147-83e4-ccdcc5583ea6

ಜೊತೆಗೆ ಕೆಲಸಮಾಡಿದಂತೆ‌ ಎಷ್ಟೇ ಹುಷಾರಿಂದ ಕೆಲಸ ನಿರ್ವಹಿಸಿದರೂ ಕೂಡ ಕೆಲವು ಸಾರಿ ಅನಾಹುತ ನಡೆಯುತ್ತಿದೆ. ದೆಹಲಿ ಎ ಎ ಪಿ ಸರ್ಕಾರ ಇದ್ದಾಗ‌ ಸೈನಿಕ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದರೆ ಅವರಿಗೆ ಒಂದು ಕೋಟಿ ರೂಪಾಯಿ ಕುಟುಂಬದವರಿಗೆ ಪರಿಹಾರದ ಚೆಕ್ ಅವರು ಮನೆಗೆ ಹೋಗಿ ಕೊಡುತ್ತಿದ್ದರು. ಅದೆ ರೀತಿ ವಿದ್ಯುತ್ ಸ್ಪರ್ಶಿಸಿ ಲೈನ್ ಮೆನ್ ಮರಣ ಹೊಂದಿದರೆ ಆ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡುತ್ತಿದ್ದರು. ಶಿಕಾರಿಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಮರಣ ಹೊಂದಿದ ಲೈನ್ ಮೆನ್ ಹರೀಶ್ ಮೂವರು ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ ಆಧಾರವಾಗಿದ್ದ ಇವರ ಸಾವು ತುಂಬಲಾರದ ನಷ್ಟ ಉಂಟು ಮಾಡಿದ್ದು ಕುಟುಂಬಕ್ಕೆ ಸರ್ಕಾರ ಪರಿಹಾರ ಹಾಗೂ ಕುಟುಂಬದ ಸದಸ್ಯರು ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಶಿಕಾರಿಪುರ ತಾಲ್ಲೂಕು ಆಮ್ಆದ್ಮಿ ಪಾರ್ಟಿ‌ಯ ಅಧ್ಯಕ್ಷರಾದ ಚಂದ್ರಕಾಂತ್ ಎಸ್ ರೇವಣಕರ್ ರವರು ಸರ್ಕಾರಕ್ಕೆ ಒತ್ತಾಯಿಸಿದರು.

More news from ಕರ್ನಾಟಕ and nearby areas
  • ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.
    1
    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 
1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    12 hrs ago
  • ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,
    1
    ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    18 hrs ago
  • ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ ಸ್ವಯಂ ಜನಗಣತೆ..
    1
    ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ  ಸ್ವಯಂ ಜನಗಣತೆ..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ. ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ. ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    3
    ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ.
ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ.
ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    13 hrs ago
  • ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ‌. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ
    1
    ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ‌. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
  • ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ 'ಗುರುರಾಜ್’  ಎಂಬ ಆಳಸಮುದ್ರ  ಮೀನುಗಾರಿಕಾ ಬೋಟ್‍ನಲ್ಲಿ ಗೋಬಿಂದ ದಾಸ್(42)  ಎಂಬವರು  ಮಾರ್ಚ್ 6 ರಂದು  ರಾತ್ರಿ ಒಟ್ಟು 9 ಜನ  ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ  ಗೋಬಿಂದ ದಾಸ್ ಬೋಟ್‍ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್‍ನಿಂದ ಜಾರಿ  ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು,  ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ  ಧರಿಸಿದ್ದರು. ಕಾಣೆಯಾದವರ  ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    1
    ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ 'ಗುರುರಾಜ್’  ಎಂಬ ಆಳಸಮುದ್ರ  ಮೀನುಗಾರಿಕಾ ಬೋಟ್‍ನಲ್ಲಿ ಗೋಬಿಂದ ದಾಸ್(42)  ಎಂಬವರು  ಮಾರ್ಚ್ 6 ರಂದು  ರಾತ್ರಿ ಒಟ್ಟು 9 ಜನ  ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ  ಗೋಬಿಂದ ದಾಸ್ ಬೋಟ್‍ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್‍ನಿಂದ ಜಾರಿ  ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು,  ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ  ಧರಿಸಿದ್ದರು. ಕಾಣೆಯಾದವರ  ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    12 hrs ago
  • ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ (18) ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ ಹಾಗೂ ಮೃತನ ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
    2
    ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ  (18)  ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ  ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು  ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು  ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ
ಹಾಗೂ ಮೃತನ  ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು
ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
    user_ಚಂದ್ರು ನೆಲ್ಲೂರ
    ಚಂದ್ರು ನೆಲ್ಲೂರ
    Local News Reporter ರೋಣ, ಗದಗ, ಕರ್ನಾಟಕ•
    15 hrs ago
  • ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ. ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು ಸ್ಥಾಪಿಸಲಾಯಿತು. ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ. ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ. ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ: ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು, ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ, ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    1
    ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ.
ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು  ಸ್ಥಾಪಿಸಲಾಯಿತು.
ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ.
ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ,  ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ.
ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ:
ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು,  ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ  ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ,  ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.