Shuru
Apke Nagar Ki App…
SSLC ಫಲಿತಾಂಶ ಹೆಚ್ಚಳಕ್ಕೆ ತಹಶೀಲ್ದಾರ್ ವಿನೂತನ ಅಭಿಯಾನ ರಾಯಚೂರು ಜಿಲ್ಲೆಯ ಮಾನ್ವಿ ತಹಶೀಲ್ದಾರ್ ಭೀಮರಾಯ ಅವರು SSLC ಫಲಿತಾಂಶ ಹೆಚ್ಚಿಸಲು ವಿನೂತನ ಕ್ರಮ ಕೈಗೊಂಡಿದ್ದಾರೆ. ಮದ್ಲಾಪೂರ ಗ್ರಾಮಕ್ಕೆ ತೆರಳಿ ವಿದ್ಯಾರ್ಥಿಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಇನ್ನೂ 30 ದಿನಗಳಲ್ಲಿ ಪರೀಕ್ಷೆ ಇರುವುದರಿಂದ ಮಕ್ಕಳಿಗೆ ಓದಿಗೆ ಹೆಚ್ಚು ಸಮಯ ನೀಡುವಂತೆ ಪೋಷಕರಿಗೆ ಮನವಿ ಮಾಡಿದರು. ಮನೆ ಕೆಲಸಗಳನ್ನು ಹಾಕದೆ ಓದಿಗೆ ಅನುಕೂಲಕರ ವಾತಾವರಣ ಕಲ್ಪಿಸಲು ಸೂಚಿಸಿದರು. ಯಾವ ರೀತಿ ಓದಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಟೈಮ್ ಟೇಬಲ್ ಹಾಕಿ ಕೊಡುತ್ತಿದ್ದಾರೆ.
K2 kannada News

More news from ಕರ್ನಾಟಕ and nearby areas
- ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸಫಾರಿ ಕಾರೊಂದು ಖಾನವಳಿಗೆ ನುಗ್ಗಿದ ಘಟನೆ ನಡೆದಿದೆ. ಪಟ್ಟಣದ ಮಾತಾ ಮಾಣಿಕೇಶ್ವರಿ ದೇವಸ್ಥಾನದ ಬಳಿ ಈ ಅವಘಡ ಸಂಭವಿಸಿದ್ದು, ಖಾನಾವಳಿ ಬಂದ್ ಇದ್ದ ಹಿನ್ನೆಲೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸ್ಥಳೀಯರ ನಿಟ್ಟುಸಿರು ಬಿಡುವಂತಾಗಿದೆ. ದೇವದುರ್ಗದ ಎಪಿಎಂಸಿ ಅಧ್ಯಕ್ಷ ಆದನಗೌಡ ಅವರಿಗೆ ಸೇರಿದ ಸಫಾರಿ ವಾಹನವು ಕಲಬುರಗಿಯಿಂದ ಲಿಂಗಸಗೂರಿನತ್ತ ಬರುತ್ತಿದ್ದ ವೇಳೆ ಅತಿವೇಗದಿಂದ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಖಾನವಳಿಗೆ ನುಗ್ಗಿ ಹಾನಿ ಉಂಟುಮಾಡಿದೆ. ಅದೃಷ್ಟ ಅಂದರೆ ಇಂದು ಕಾನಾವಳಿ ಬಂದ್ ಇದ್ದಿದರಿಂದ ಯಾವುದೇ ದೊಡ್ಡ ಅವಘಡ ಜರುಗಿಲ್ಲ.1
- Post by User52941
- ತುಂಗಭದ್ರಾ ನದಿಯ ನೀರು ನಿಲ್ಲಿಸಿದ್ದರಿಂದ ಹೊಲಗಳಲ್ಲಿ ಒಣಗುತ್ತಿದ್ದ ಮಿರ್ಚಿ ಬೆಳೆಗಾಗಿ ರೈತರು ಸಂಕಷ್ಟದಲ್ಲಿದ್ದರು. ಇಂತಹ ಕಠಿಣ ಸಂದರ್ಭದಲ್ಲೂ ಕಂಪ್ಲಿ ಕ್ಷೇತ್ರದ ಶಾಸಕ J. N. Ganesh ರೈತರ ಪರ ನಿಂತು, Tungabhadra Dam ನಿಂದ ನೀರು ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಅದ್ಭುತ ಕ್ಷಣ ರೈತರ ಮುಖದಲ್ಲಿ ಮತ್ತೆ ನಗು ಮೂಡಿಸಿತು.1
- Post by Star Kannada News 24×71
- ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 5 ಕೋಟಿ ರೂ ವೆಚ್ಚದಲ್ಲಿ ಇಳಕಲ್ ನಗರದ ವಿವಿಧ ವಾರ್ಡಗಳಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ ಕಾಮಗಾರಿ, ಸರ್ಕಲ್ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಫೆ.18 ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನರಸಭೆ ಸದಸ್ಯರು ಹಾಗೂ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಗುತ್ತಿಗೆದಾರರು, ಪಕ್ಷದ ಮುಖಂಡರು ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ವರ್ಗದವರು ಇದ್ದರು.1
- ಮಂಗಳಮುಖಿ ಸುಹಾಸಿನಿ, ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು ಮಂಗಳಮುಖಿ ಸುಹಾಸಿನಿ,ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು1
- ಸಚಿವ ಶಿವರಾಜ್ ತಂಗಡಗಿ ಅವಚ್ಛ ಶಬ್ದ ವಿವಾದವೈರಲ್ ವಿಡಿಯೋಗೆ ರಾಜಕೀಯ ಕಿಡಿ #ಕೊಪ್ಪಳ #koppal #ಕಾರಟಗಿ #ಕನಕಗಿರಿ #ಶಿವರಾಜ್_ತಂಗಡಗಿ1
- ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆಬ್ರವರಿ 20 ಫೆಬ್ರವರಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ನಗರದ ರ೦ಗಮ೦ದಿರದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಕುಂಬಾರ ಸಮಾಜದ ಗೌರವಾಧ್ಯಕ್ಷ ವೈ.ಸುರೇಂದ್ರಬಾಬು ಅವರುಹೇಳಿದರು. ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದ ಮಾದರಿಯಲ್ಲಿ ಈ ವರ್ಷ ಕೂಡ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.1