Shuru
Apke Nagar Ki App…
ದಿ.20 ತ್ರಿಪದಿ ಕವಿ ಸರ್ವಜ್ಞ ಜಯಂತೋತ್ಸವ ರಾಯಚೂರು ರಂಗಮಂದಿರದಲ್ಲಿ ಆಚರಣೆ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆಬ್ರವರಿ 20 ಫೆಬ್ರವರಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ನಗರದ ರ೦ಗಮ೦ದಿರದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಕುಂಬಾರ ಸಮಾಜದ ಗೌರವಾಧ್ಯಕ್ಷ ವೈ.ಸುರೇಂದ್ರಬಾಬು ಅವರುಹೇಳಿದರು. ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದ ಮಾದರಿಯಲ್ಲಿ ಈ ವರ್ಷ ಕೂಡ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
K2 kannada News
ದಿ.20 ತ್ರಿಪದಿ ಕವಿ ಸರ್ವಜ್ಞ ಜಯಂತೋತ್ಸವ ರಾಯಚೂರು ರಂಗಮಂದಿರದಲ್ಲಿ ಆಚರಣೆ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆಬ್ರವರಿ 20 ಫೆಬ್ರವರಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ನಗರದ ರ೦ಗಮ೦ದಿರದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಕುಂಬಾರ ಸಮಾಜದ ಗೌರವಾಧ್ಯಕ್ಷ ವೈ.ಸುರೇಂದ್ರಬಾಬು ಅವರುಹೇಳಿದರು. ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದ ಮಾದರಿಯಲ್ಲಿ ಈ ವರ್ಷ ಕೂಡ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
More news from Ballari and nearby areas
- ತುಂಗಭದ್ರಾ ನದಿಯ ನೀರು ನಿಲ್ಲಿಸಿದ್ದರಿಂದ ಹೊಲಗಳಲ್ಲಿ ಒಣಗುತ್ತಿದ್ದ ಮಿರ್ಚಿ ಬೆಳೆಗಾಗಿ ರೈತರು ಸಂಕಷ್ಟದಲ್ಲಿದ್ದರು. ಇಂತಹ ಕಠಿಣ ಸಂದರ್ಭದಲ್ಲೂ ಕಂಪ್ಲಿ ಕ್ಷೇತ್ರದ ಶಾಸಕ J. N. Ganesh ರೈತರ ಪರ ನಿಂತು, Tungabhadra Dam ನಿಂದ ನೀರು ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಅದ್ಭುತ ಕ್ಷಣ ರೈತರ ಮುಖದಲ್ಲಿ ಮತ್ತೆ ನಗು ಮೂಡಿಸಿತು.1
- Post by Star Kannada News 24×71
- ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 5 ಕೋಟಿ ರೂ ವೆಚ್ಚದಲ್ಲಿ ಇಳಕಲ್ ನಗರದ ವಿವಿಧ ವಾರ್ಡಗಳಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ ಕಾಮಗಾರಿ, ಸರ್ಕಲ್ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಫೆ.18 ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನರಸಭೆ ಸದಸ್ಯರು ಹಾಗೂ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಗುತ್ತಿಗೆದಾರರು, ಪಕ್ಷದ ಮುಖಂಡರು ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ವರ್ಗದವರು ಇದ್ದರು.1
- ಮಾಜಿ ಶಾಸಕ ಭೀಮಾ ನಾಯಕ್ ವಿರುದ್ಧ ಸಿಡಿದೆದ್ದ ತಂಗಿ..!1
- ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಕೊಳ್ಳಹಳ್ಳಿಯಲ್ಲಿ ಇದೇ ಫೆಬ್ರವರಿ 19ರ ಗುರುವಾರದಂದು ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ .಼಼಼ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೊಳಕಾಲ್ಮೂರು ,ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಶಿವಮೊಗ್ಗ ಹಾಗೂ ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಗಮ ಸಹಯೋಗದಲ್ಲಿ ಇದೇ ಫೆಬ್ರವರಿ 19ರ ಗುರುವಾರ ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಕೊಂಡ್ಲಹಳ್ಳಿ ಗ್ರಾಮದ ಬಿಎಂಟಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಼಼಼಼಼಼಼಼಼ಈ ಶಿಬಿರದಲ್ಲಿ ಎಲ್ಲಾ ರಾಸುಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾಹ ಶಿಬಿರವನ್ನು ಹಾಗೂ ಅತಿ ಹೆಚ್ಚು ಹಾಲು ಕರೆಯುವ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುವುದು ಮಿಶ್ರತಳಿಯ ಹಸುಗಳ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳ ಮಾಲೀಕರಿಗೆ ಪಶು ಇಲಾಖೆಯಿಂದ ಬಹುಮಾನ ನೀಡಲಾಗುವುದು಼಼಼಼಼ ಫೆಬ್ರವರಿ 19ರ ಗುರುವಾರ ಬೆಳಿಗ್ಗೆ 7:30 ರಿಂದ 8:30ರೊಳಗೆ ರಾಸುಗಳ ಸಮೇತ ಹೆಸರನ್ನು ನೋಂದಾಯಿಸತಕ್ಕದ್ದು ಎಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಕೆ. ರವಿ ತಿಳಿಸಿದ್ದಾರೆ ಼಼಼಼಼಼಼ಬಹುಮಾನ ವಿತರಣಾ ಸಮಾರಂಭವನ್ನು ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಎನ್ ವೈ ಗೋಪಾಲಕೃಷ್ಣ ಅವರು ನೆರವೇರಿಸುವರು ಼಼಼ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು಼಼ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ ಹಾಗೂ ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ. ಬಿ .ಯೋಗೇಶ್ ಬಾಬು ಅವರು ಬಹುಮಾನ ವಿತರಿಸುವರು ಼಼಼಼಼಼ ಮುಖ್ಯ ಅತಿಥಿಗಳಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿ, ಜಿಪಿ. ರೇವಣಸಿದ್ದಪ್ಪ ಜಿ.ಟಿ .ಶೇಖರಪ್ಪ ,ಬಿ .ಆರ್ .ರವಿಕುಮಾರ್ ,ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ಬಿಇಒ ನಿರ್ಮಲಾದೇವಿ ,ಪಿಡಿಒ ಎನ್ ಪಾಲಯ್ಯ ,಼಼಼ವಿಶೇಷ ಆಹ್ವಾನಿತರಾಗಿ ವ್ಯವಸ್ಥಾಪಕ ನಿರ್ದೇಶಕ ಎಸ್ ಜಿ ಶೇಖರ್ ಕುಮಾರ್ .ಎನ್ .ಉಪ ನಿರ್ದೇಶಕರು ಪಶು ಪಾಲನ ಹಾಗೂ ಪಶು ವೈದ್ಯ ಸೇವಾ ಇಲಾಖೆ ಚಿತ್ರದುರ್ಗ ,಼಼ಮೊಳಕಾಲ್ಮೂರು ತಾಲ್ಲೂಕು ಪಶು ಸಹಾಯಕ ನಿರ್ದೇಶಕ ಡಾ. ರಂಗಪ್ಪ ,ಶಿಮುಲ್ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳಾದ ನಯಾಜ್ ಬೇಗ್, ಎಸ್ ಜಿ ಕೃಷ್ಣಕುಮಾರ್ ಹಾಗೂ ಚಳ್ಳಕೆರೆ ವಿಭಾಗದ ಪಶುವೈದ್ಯಾಧಿಕಾರಿಗಳು ಭಾಗವಹಿಸುವರು .. ಪಶುಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ...4
- ಇಂದು ಫೆಬ್ರವರಿ 19ರಂದು ಜರುಗಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬುಧವಾರ ಮುಂಜಾಗೃತ ಕ್ರಮ ಕೈಗೊಂಡಿದೆ. ಎಸ್‌ಪಿ ಸಿದ್ದಾರ್ಥ ಗೋಯಲ್ ಅವರ ಆದೇಶದ ಮೇರೆಗೆ ಡಿವೈಎಸ್‌ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ, ಪಿಐ ಆನಂದ ವಾಘಮೋಡೆ ಹಾಗೂ ಪಿಎಸ್‌ಐ ಜಯಶ್ರೀ ನಧಾಪ್ ಮತ್ತು ಶಾಂತಾ ಹಳ್ಳಿ ಅವರ ಮುಂದಾಳತ್ವದಲ್ಲಿ ನಗರ ಪ್ರಮುಖ ರಸ್ತೆಗಳಲ್ಲಿಪೊಲೀಸ್ ಪಥಸಂಚಲನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.1
- ತಾಲೂಕಿನ ಬೆಟ್ಟದೂರು ಗ್ರಾಮದ ಸುಚಿತಾ ಕಂಪನಿ ಕ್ರಷರ್ ಮುಂಭಾಗದಲ್ಲಿ ಫೆಬ್ರವರಿ 20ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಮಾಜಸೇವಕ ಗುರುರಾಜ್ ನಾಗಲಾಪುರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ವಿ ತಾಲೂಕಿನ ನೀರಮಾನ್ವಿ ಹಾಗೂ ಬೆಟ್ಟದೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸುಚಿತಾ ಮಿಲೇನಿಯಂ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ, ಎಸ್‌ಎಚ್–23 ರಸ್ತೆ ಕಾಮಗಾರಿಯ ನೆಪದಲ್ಲಿ ಅನುಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದೆ ಎಂದು ಆರೋಪಿಸಿದರು. ಜಂಟಿ ಸ್ಥಳ ಪರಿಶೀಲನೆ ಹಾಗೂ ಡ್ರೋನ್ ಸರ್ವೇ ವರದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ 1,88,25,600 ದಂಡ ವಿಧಿಸಲ್ಪಟ್ಟಿದ್ದರೂ, 10 ತಿಂಗಳು ಕಳೆದರೂ ಪೂರ್ಣ ಮೊತ್ತ ವಸೂಲಿ ಆಗಿಲ್ಲ ಎಂದು ಆರೋಪಿಸಿದರು.1
- Post by Star Kannada News 24×71
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಪ್ರವಾಸಿ ಮಂದಿರ ಎದುರಿನ ಪ್ರಮುಖ ರಸ್ತೆಯಲ್ಲಿ ಅಶೋಕ ಸ್ತಂಭ ನಿರ್ಮಾಣಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನಗರಸಭೆ ಸದಸ್ಯರು ಹಾಗೂ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಗುತ್ತಿಗೆದಾರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.1