ಮಾಗಡಿ ಕೆರೆಗಳಿಗೆ ನೀರು ತುಂಬಿಸಿ. ಮಾಗಡಿ : ಮಾಗಡಿ ಕೆರೆಗಳನ್ನು ತುಂಬಿಸಿ ನಂತರ ಡಾಬಸ್‍ಪೇಟೆ ಕೈಗಾರಿಕೆ ಪ್ರದೇಶಕ್ಕೆ ನೀರು ನೀಡಲಿ ಇಲ್ಲದಿದ್ರೆ ಏ. 17 ರಂದು ಬೃಹತ್ ತಡೆ ನಡೆಸುವುದಾಗಿ ತಾಲೂಕು ರೈತಸಂಘದ ಅಧ್ಯಕ್ಷ ಹೋಸಪಾಳ್ಯ ಲೋಕೇಶ್ ಎಚ್ಚರಿಕೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ಸರಕಾರ ಇಂತಿಷ್ಟು ನೀರು ಅಲೋಕೇಟ್ ಮಾಡಿದೆ ಈ ನೀರನ್ನು ಮಾಗಡಿಗೆ ನೀಡಲು ತುಮಕೂರಿನ ಚುನಾಯಿತ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಈ ನಡುವೆ ಸತ್ತೆಗಾಲದಿಂದ ಕಣ್ವ ಮಾಗಡಿ ಪಟ್ಟಣದ ಮೂಲಕ ದಾಬಸ್ ಪೇಟೆ ಕೈಗಾರಿಕೆ ಪ್ರದೇಶಕ್ಕೆ ಬೃಹತ್ ಗಾತ್ರದ ಪೈಪು ಮೂಲಕ ನೀಡಲು ಸರಕಾರ ಮುಂದಾಗಿದ್ದು ನೂರಾರು ಮರಗಳಿಗೆ ಹಾಗೂ ರಸ್ತೆಗಳನ್ನು ಹಾನಿ ಮಾಡಿ ಕಾಮಗಾರಿಯೂ ನಡೆಯುತ್ತಿದೆ ಮೊದಲು ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಕೊಟ್ಟು ನಂತರ ಡಾಬಸ್ ಪೇಟೆ ಕೈಗಾರಿಕೆ ಪ್ರದೇಶಕ್ಕೆ ನೀಡಲಿ ಎಂದು ಒತ್ತಾಯಿಸಿದರು. ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರು, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಜಿಲ್ಲೆಯವರೆ ಆಗಿರುವುದರಿಂದ ಕಾವೇರಿ ನದಿ ನೀರನ್ನು ಈ ಭಾಗದ ಕೆರೆ,ಕಟ್ಟೆಗಳಿಗೆ ತುಂಬಿಸಬೇಕು. ಡಾಬಸ್ ಪೇಟೆ ಕೈಗಾರಿಕೆ ಪ್ರದೇಶಕ್ಕೆ ಎಷ್ಟು ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಯಾವ ಮಾನದಂಡದಲ್ಲಿ ನೀರನ್ನು ಕೊಡೋಯ್ಯಲಾಗುತ್ತಿದೆ ಎಂಬುದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ರೈತಸಂಘದೊಂದಿಗೆ ಸಭೆ ನಡೆಸಿ ಸಂಬಂಧ ಪಟ್ಟ ಮಾಹಿತಿ ತಿಳಿಸಬೇಕು ಇಲ್ಲದಿದ್ರೆ ಏ. 17 ರಂದು ಪಟ್ಟಣದ ಹೋಸಪೇಟೆ ವೃತ್ತದಲ್ಲಿ ರಸ್ತೆ ತಡೆನಡೆಸಿ ನಂತರ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜೆಸಿಬಿ ಮೂಲಕ ಪೈಪುಗಳನ್ನು ಕಿತ್ತುಹಾಕುವ ಕೆಲಸಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸತ್ತೆಗಾಲದಿಂದ ಡಾಬಸ್ ಪೇಟೆ ಕೈಗಾರಿಕೆ ಪ್ರದೇಶ ಸುಮಾರು 100 ಕಿಲೋಮೀಟರ್ ಗೂ ಹೆಚ್ಚಿದ್ದು ಅಲ್ಲಿಂದ ಇಲ್ಲಿಗೆ ನೀರು ಕೊಡುವ ಅಗತ್ಯವಾದರೂ ಏನಿದೆ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನೀರನ್ನು ಕೈಗಾರಿಕೆ ಪ್ರದೇಶಕ್ಕೆ ನೀಡಬಹುದಿತ್ತು ಅದನ್ನು ಬಿಟ್ಟು ಕಾವೇರಿ ನೀರನ್ನು ಕೋಡುತ್ತಿರುವುದಾದರು ಏನು ಈ ಬಗ್ಗೆ ಸಾಕಷ್ಟು ಅನುಮಾನ ಮೂಢಿದೆ. ಮಾಗಡಿ ತಾಲೂಕಿನ ಜನರಿಗೆ ಕುಡಿಯುವ ನೀರಿಲ್ಲದೆ ಆಹಾಕಾರ ಉಂಟಾಗಿದೆ. ಅದರಲ್ಲೂ ಮಂಚನಬೆಲೆ ಜಲಾಶಯದಿಂದ ಮಾಗಡಿ ಪಟ್ಟಣಕ್ಕೆ ಸರಬರಾಜು ಮಾಡುವ ನೀರು ಸಮರ್ಪಕವಾಗಿ ನೀಡುತ್ತಿಲ್ಲ ಈಗಿರುವಾಗ ಮಾಗಡಿ ತಾಲೂಕಿನ ಜನರಿಗೆ ಕಾವೇರಿಯ ನೀರು ಅತ್ಯವಶ್ಯಕವಾಗಿದೆ ಎಂದರು. ತಾಲೂಕಿನಲ್ಲಿ ಸಮರ್ಪಕ ವಿದ್ಯುತ್ ನೀಡದೆ ಇರುವುದರಿಂದ ರೈತರ ಮೋಟಾರ್ ಸುಟ್ಟುಹೋಗುತ್ತಿದೆ, ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಫೆಯಿಂದ ಕೂಡಿದೆ, ತಾಲೂಕಿನಲ್ಲಿನ ಎಲ್ಲಾ ಶುದ್ದಕುಡಿಯುವ ನೀರಿನ ಘಟಕಗಳು ಸುಟ್ಟುಹೋಗಿವೆ, ತಾಲೂಕು ಕಚೇರಿಗಳಲ್ಲಿ ರೈತರ ಕೆಲಸವಾಗುತ್ತಿಲ್ಲ, ಬಹುತೇಕ ಗ್ರಾಮಗಳಲ್ಲಿ ಬಸ್ ಸೌಲಭ್ಯಗಳಿಲ್ಲ ರೈತರ ಸಮಸ್ಯೆಗಳು ದಿನೆ,ದಿನೇ ಹೆಚ್ಚಾಗುತ್ತಿದೆ ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಹಶೀಲ್ದಾರ್ ಶರತ್ ಕುಮಾರು ವಿಫಲರಾಗಿದ್ದಾರೆ ಈ ಸಂಬಂಧ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಮಾಡಲಾಗುವುದು ಎಂದರು. ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ಹೂಳೆತ್ತಿದ್ದರೆ ಮಾಗಡಿ- ಕುಣಿಗಲ್ ಭಾಗದಲ್ಲಿ ಅಂತರ್ ಜಲವೃದ್ದಿಯಾಗುತ್ತದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಮಾಗಡಿ- ತಿಪ್ಪಗೊಂಡನಹಳ್ಳಿ ವರೆಗೆ ಪಾದಯಾತ್ರೆ ನಡೆಸಿ 3 ಭಾರಿ ರಸ್ತೆ ತಡೆನಡೆಸಿದ ಕಾರಣ ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳೆತ್ತಲು ಸರಕಾರ 100 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿತು ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಪೂರ್ಣಗೊಳಿಸುವಂತೆ ಹಾಗೂ ಬೆಂಗಳೂರು ಸುತ್ತಮುತ್ತಲಿನಿಂದ ಜಲಾಶಯಕ್ಕೆ ಸೇರುವ ಕಲುಷಿತ ನೀರು ತಡೆಗಟ್ಟುವಂತೆ ಆಗ್ರಹಿಸಿ ಏ. 28 ರಂದು ಮಾಗಡಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ವರೆಗೂ ಬೃಹತ್ ಬೈಕ್ ರ್ಯಾಲಿ ಮೂಲಕ ಉಗ್ರಹೋರಾಟವನ್ನು ತಾಲೂಕು ರೈತಸಂಘ ಹಮ್ಮಿಕೊಳ್ಳಲಿದೆ ಈ ಹೋರಾಟಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡುವಂತೆ ಮನವಿ ಮಾಡಿದರು. ಕಾಂಗ್ರೆಸ್, ಜೆಡಿಎಸ್‍ನ ಮುಖಂಡರು ಪ್ರತಿನಿತ್ಯ ಪತ್ರಿಕಾಘೋಷ್ಠಿ ಏರ್ಪಡಿಸಿ ರಾಜಕೀಯ ಕೆಸೆರೆಚಾಟ ಮಾಡುವುದನ್ನು ಬಿಟ್ಟು ರೈತರ ಸಮಸ್ಯೆಗಳಿಗೆ ಧ್ವನಿಗೂಡಿಸಿ ಎಂದು ಮನವಿ ಮಾಡಿದರು. ರೈತಮುಖಂಡರಾದ ಶಿವಲಿಂಗಯ್ಯ, ರವಿಕುಮಾರು, ರಾಮಣ್ಣ, ಚಿಕ್ಕಣ್ಣ, ವೆಂಕಟೇಶ್, ಶಿವರುದ್ರಯ್ಯ, ಕಾಂತರಾಜು, ನಾಗರಾಜು, ಆಂಜನಪ್ಪ, ನಾರಾಯಣಪ್ಪ, ಕರಿಯಪ್ಪ, ಮುನಿರಾಜು, ಶಂಕರಯ್ಯ, ಹನುಮಂತಯ್ಯ, ಗಂಗಾಧರಯ್ಯ ಇತರರು ಇದ್ದರು.

- ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.1
- full dirty please clean this one full y dirty and this honor is not an agree in to clean not anyone cleaning this one. full dirty please clean this one full y dirty and this honor is not an agree in to clean not anyone cleaning this one.1
- KOLAR KI.AWAAZ KOUSAR NEWS1
- Post by Rownak Ali khan1
- Contact AIJAZ PASHA BANNUR DARGAH 8970712631 63635830171
- ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರದ ಅಶ್ವಿನಿ ಮತ್ತು ಲಕ್ಷ್ಮೀದೇವಿ ಮೇಲೆ ಅಂಗಡಿ ಮಂಜಮ್ಮ ಎಂಬ ಸವರ್ಣೀಯ ಮಹಿಳೆ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 5, 2026) ಬೆಳಿಗ್ಗೆ 08 ಗಂಟ್ಟೆಗೆ ನಡೆದಿದೆ. ಜಾತಿ ಹೆಸರಿನಲ್ಲಿ ನಿಂದಿಸಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿ, ಗಂಭೀರವಾಗಿ ಬಾಯಿಂದ ಕಚ್ಚಿ ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ. ಘಟನೆಯ ವಿವರ: ಹೋಳೂರು ಗ್ರಾಮದ ನಿವಾಸಿಗಳು ಅಶ್ವಿನಿ ಹಾಗೂ ಲಕ್ಷ್ಮೀದೇವಿ ಎಂಬುವರು ಭಾನುವಾರ ನೀರು ಹಿಡಿಯಲು ಟ್ಯಾಂಕ್ ಬಳಿ ಹೋದಾಗ, ಅದೇ ಗ್ರಾಮದ ಅಂಗಡಿ ಮಂಜಮ್ಮ ಎಂಬ ಮಹಿಳೆ ತಕರಾರು ತೆಗೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ಮಂಜಮ್ಮ, ಅಶ್ವಿನಿ ಹಾಗೂ ಲಕ್ಷ್ಮೀದೇವಿ ರವರನ್ನು ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿದ್ದಲ್ಲದೆ, ಬಾಯಿಂದ ಕಚ್ಚಿ ಗಾಯಮಾಡಿ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸಿ ಮಚ್ಚನ್ನು ಕಸಿದುಕೊಂಡಾಗ, ಆಕ್ರೋಶಗೊಂಡ ಮಂಜಮ್ಮ ಅಶ್ವಿನಿ ರವರ ಕೈಯನ್ನು ಎರಡು ಬಾರಿ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೊಂದು ಸುತ್ತಿನ ಹಲ್ಲೆ: ಇದಾದ ಕೆಲವೇ ಸಮಯದಲ್ಲಿ,ಅಶ್ವಿನಿ ರವರ ತಂಗಿ ಆದ ಲಕ್ಷ್ಮಿ ದೇವಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿ ತಡೆದು ಮಂಜಮ್ಮ ಮತ್ತು ತಂಡದವರು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಲಕ್ಷ್ಮಿ ದೇವಮ್ಮ ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ, ಕಿಂಚಿತ್ತೂ ದಯೆಯಿಲ್ಲದೆ ಅವರ ಹೊಟ್ಟೆಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಅವರ ಕೊರಳಲ್ಲಿದ್ದ ತಾಳಿ ಸರವನ್ನು ಕಿತ್ತು ಎಸೆದಿದ್ದು, ಹಲ್ಲೆಯ ತೀವ್ರತೆಗೆ ಲಕ್ಷ್ಮಿ ದೇವಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಮಾನವೀಯ ನಡವಳಿಕೆ: ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೂ ಮಂಜಮ್ಮನಮಗ ಅರ್ಜುನ್ ರೆಡ್ಡಿ ಎಂಬ ವೆಕ್ತಿ ಆಟೋ ಚಾಲಕನನ್ನು ರಸ್ತೆಯಲ್ಲಿ ತಡೆದು . "ನಿನಗೆ ಇವರು ಏನು ಸಂಬಂಧ?" ಎಂದು ಪ್ರಶ್ನಿಸಿ ಆತನ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹ: ಸದ್ಯ ಇಬ್ಬರೂ ಮಹಿಳೆಯರು ಕೋಲಾರದ ಎಸ್.ಎನ್ .ಆರ್ (SNR) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಗಡಿ ಮಂಜಮ್ಮ ಎಂಬುವವರನ್ನು ಕೂಡಲೇ ಬಂಧಿಸಬೇಕು ಮತ್ತು ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು ಎಂದು ದಲಿತ ಮುಖಂಡರು ಮತ್ತು ಸಂತ್ರಸ್ತ ಕುಟುಂಬದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.1
- ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ1
- Post by Rownak Ali khan1
- KOLAR KI.AWAAZ KOUSAR1