ಭೀಮಜ್ಜ ಮುರಡಿ, ಪುಂಡಲಿಕಪ್ಪ ಜ್ಞಾನಮೋಟೆ ಪುಣ್ಯಸ್ಮರಣೆ ನಾಳೆ: ಗಣ್ಯರ ಸಮಾಗಮಕ್ಕೆ ಕುಷ್ಟಗಿ ಸಾಕ್ಷಿ ಕುಷ್ಟಗಿ: ಪಟ್ಟಣದ ಬಸವ ಭವನದಲ್ಲಿ ಆಗಸ್ಟ್ 2ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತಪಸ್ವಿ ಭೀಮಜ್ಜ ಮುರಡಿ ಅವರ 70ನೇ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ದಿ. ಪುಂಡಲಿಕಪ್ಪ ಜ್ಞಾನಮೋಟೆ ಅವರ 13ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಗೌರವಪೂರ್ವಕವಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಶವಂತ ಮಹಾರಾಜ, ಬೋದಲೆ ಮಹಾರಾಜ ಹಾಗೂ ರಮೇಶ ಬೊಂದಾಡೆ, ಹನಮಂತಪ್ಪ ಯಾಳವಾರ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ರಾಜಶೇಖರ ಹಿಟ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಮಣ್ಣ ಹವಳೆ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಡಾ. ದೇವೇಂದ್ರಪ್ಪ ಬಳೂಟಗಿ, ಸಂಗಣ್ಣ ಕರಡಿ, ಹಾಲಪ್ಪ ಆಚಾರ್, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಡಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ದೇಶಸೇವೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭೀಮಜ್ಜ ಮುರಡಿ ತಪೋಭೂಮಿ ಸೇವಾ ಟ್ರಸ್ಟ್ ಪ್ರಧಾನ ಸಂಚಾಲಕ ಅಮೃತರಾಜ ಜ್ಞಾನಮೋಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೀಮಜ್ಜ ಮುರಡಿ, ಪುಂಡಲಿಕಪ್ಪ ಜ್ಞಾನಮೋಟೆ ಪುಣ್ಯಸ್ಮರಣೆ ನಾಳೆ: ಗಣ್ಯರ ಸಮಾಗಮಕ್ಕೆ ಕುಷ್ಟಗಿ ಸಾಕ್ಷಿ ಕುಷ್ಟಗಿ: ಪಟ್ಟಣದ ಬಸವ ಭವನದಲ್ಲಿ ಆಗಸ್ಟ್ 2ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತಪಸ್ವಿ ಭೀಮಜ್ಜ ಮುರಡಿ ಅವರ 70ನೇ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ದಿ. ಪುಂಡಲಿಕಪ್ಪ ಜ್ಞಾನಮೋಟೆ ಅವರ 13ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಗೌರವಪೂರ್ವಕವಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಶವಂತ ಮಹಾರಾಜ, ಬೋದಲೆ ಮಹಾರಾಜ ಹಾಗೂ ರಮೇಶ ಬೊಂದಾಡೆ, ಹನಮಂತಪ್ಪ ಯಾಳವಾರ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ರಾಜಶೇಖರ ಹಿಟ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಮಣ್ಣ ಹವಳೆ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಡಾ. ದೇವೇಂದ್ರಪ್ಪ ಬಳೂಟಗಿ, ಸಂಗಣ್ಣ ಕರಡಿ, ಹಾಲಪ್ಪ ಆಚಾರ್, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಡಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ದೇಶಸೇವೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭೀಮಜ್ಜ ಮುರಡಿ ತಪೋಭೂಮಿ ಸೇವಾ ಟ್ರಸ್ಟ್ ಪ್ರಧಾನ ಸಂಚಾಲಕ ಅಮೃತರಾಜ ಜ್ಞಾನಮೋಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕುಷ್ಟಗಿ ತಾಯಿ-ಮಕ್ಕಳ ಆಸ್ಪತ್ರೆ: ಆರಂಭವಾಗಿ ಕೇವಲ 15 ದಿನಗಳಲ್ಲೇ ಮೂಲಸೌಕರ್ಯಗಳ ಅವ್ಯವಸ್ಥೆ; ಸಾರ್ವಜನಿಕರ ಆಕ್ರೋಶ ಕುಷ್ಟಗಿ: ಸುಮಾರು ರೂ.27 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯಡಿ ನಿರ್ಮಿಸಲಾದ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಕಾರ್ಯಾರಂಭವಾಗಿ ಕೇವಲ 15 ದಿನಗಳಲ್ಲೇ ಹಲವು ಮೂಲಸೌಕರ್ಯಗಳು ಹಾಳಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸಾ ಸೇವೆಗಳು ಆರಂಭವಾಗಿದ್ದರೂ, ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಅಗತ್ಯವಾದ ಮೂಲಸೌಲಭ್ಯಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಬಿಸಿನೀರು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರು ಮತ್ತು ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಆಸ್ಪತ್ರೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಸೋಲಾರ್ ವಾಟರ್ ಹೀಟರ್‌ನ ಗಾಜಿನ ಟ್ಯೂಬ್‌ಗಳು ಒಡೆದು ನುಚ್ಚುನೂರಾಗಿವೆ. ಕುಡಿಯುವ ನೀರಿನ ಶುದ್ಧೀಕರಣ ಘಟಕದ ಎರಡು ಬಾಗಿಲುಗಳು ಕಿತ್ತುಹೋಗಿದ್ದು, ಒಳಗಿರುವ ಯಂತ್ರೋಪಕರಣಗಳು ಯಾವುದೇ ಭದ್ರತೆಯಿಲ್ಲದೆ ಬಿದ್ದಿರುವುದರಿಂದ ಅವು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಲೈಟ್, ಫ್ಯಾನ್‌ಗಳ ದೋಷ; ಸುರಕ್ಷತೆಗೂ ಪ್ರಶ್ನೆ ಆಸ್ಪತ್ರೆಯ ಹಲವೆಡೆ ಅಳವಡಿಸಿರುವ ಎಲ್‌ಇಡಿ ಟ್ಯೂಬ್‌ಲೈಟ್‌ಗಳು ಜೊತ ಬಿದ್ದುದ್ದು ಕಂಡು ಬಂದಿದೆ,ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಫ್ಯಾನ್‌ಗಳು ಕೂಡ ಚಾಲನೆಯಲ್ಲಿಲ್ಲ. ಮೇಲ್ಚಾವಣಿಯ ಮೇಲಿನ ನೀರಿನ ಪೈಪ್‌ಲೈನ್ ಹಾಗೂ ವಿದ್ಯುತ್ ಸರಬರಾಜು ಪೈಪ್‌ಲೈನ್‌ಗಳು ಸುರಕ್ಷತಾ ಕ್ರಮಗಳಿಲ್ಲದೆ ಹೊರಗಡೆ ತೆರೆದ ಸ್ಥಿತಿಯಲ್ಲಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ವೈದ್ಯರು, ಸಿಬ್ಬಂದಿ ಕೊರತೆ 100 ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ ಅಗತ್ಯ ಸಂಖ್ಯೆಯ ತಜ್ಞ ವೈದ್ಯರು, ನರ್ಸ್‌ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಲಭ್ಯವಿಲ್ಲ. ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆ ಹಾಗೂ ಆಸ್ಪತ್ರೆಯ ಸ್ವಚ್ಛತೆ ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಆಸ್ಪತ್ರೆಯ ಕೆಲ ಭಾಗಗಳಲ್ಲಿ ಈಗಾಗಲೇ ಜೇಡರ ಬಲೆಗಳು ಕಾಣಿಸಿಕೊಂಡಿವೆ. ಕಟ್ಟಡದ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಸ್ ಸೌಲಭ್ಯ ಇಲ್ಲ; ಆಟೋಗಳ ದರ ದಬ್ಬಾಳಿಕೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 2–3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ನೇರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು ಹಾಗೂ ರೋಗಿಗಳು ಆಟೋಗಳನ್ನು ಅವಲಂಬಿಸಬೇಕಾಗಿದ್ದು, ಕೆಲ ಆಟೋ ಚಾಲಕರು ಅಧಿಕ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಕೇಂದ್ರ ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ನೇರ ಬಸ್ ಸೇವೆ ಆರಂಭಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ದಿಕ್ಕು ಸೂಚನಾ ಫಲಕಗಳ ಕೊರತೆ ಆಸ್ಪತ್ರೆಯೊಳಗೆ ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ದಾರಿ ತೋರಿಸುವ ಸೂಚನಾ ಫಲಕಗಳ ಕೊರತೆಯಿಂದ ಗ್ರಾಮೀಣ ಭಾಗಗಳಿಂದ ಬರುವ ರೋಗಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯೊಳಗೆ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಸಂಪರ್ಕ ರಸ್ತೆ ದುಸ್ಥಿತಿ ತಹಶೀಲ್ದಾರ್ ಕಚೇರಿಯಿಂದ ವಣಗೇರಾ ಹಳೆ ರಸ್ತೆ ಮೂಲಕ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಕೆಲವೆಡೆ ವಿದ್ಯುತ್ ಕಂಬಗಳು ರಸ್ತೆಯ ಅಂಚಿನಲ್ಲೇ ಇರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಎರಡು ವಾಹನಗಳು ಎದುರುಬಂದರೆ ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ಭೇಟಿ ಆಗ್ರಹ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯ ನಡುವೆಯೇ ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸಾ ಸೇವೆ ಆರಂಭಿಸಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜೊತೆಗೆ ಕುಡಿಯುವ ನೀರು, ಬಿಸಿನೀರು, ವಿದ್ಯುತ್, ವೈದ್ಯರು, ಸಿಬ್ಬಂದಿ ಹಾಗೂ ಸಾರಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ.ಶಾಸಕ ದೊಡ್ಡನಗೌಡ ಎಚ್. ಪಾಟೀಲ್,"ಆಸ್ಪತ್ರೆಯ ಕಾಮಗಾರಿ ಸಂಪೂರ್ಣವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಂಡ ಬಳಿಕವೇ ಹಸ್ತಾಂತರ ಮಾಡಬೇಕು ಎಂದು ನಾನು ಸೂಚಿಸಿದ್ದೆ. ಆದರೆ ಅದಕ್ಕೂ ಮುನ್ನವೇ ಅವಸರದಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಿ ಕಾರ್ಯಾರಂಭ ಮಾಡಲಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳ ಕೊಪ್ಪಳ ಆಗಮನದ ಹಿನ್ನೆಲೆಯಲ್ಲಿ ಅವರಿಂದ ಉದ್ಘಾಟಿಸುವ ಸಲುವಾಗಿ ಅಧಿಕಾರಿಗಳ ಒತ್ತಡ ಹಾಗೂ ಅವಸರದ ನಿರ್ಧಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಹೇಳಿದರು. "ಆಸ್ಪತ್ರೆಯ ದುರಸ್ತಿ ಕಾಮಗಾರಿ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಲು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಲಾಗುವುದು. ಕಾಮಗಾರಿಯನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣಗೊಳಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಹೇಳಿದರು. ವೈದ್ಯಾಧಿಕಾರಿ ಡಾ. ಚಂದ್ರಕಲಾ ಸ್ಪಷ್ಟನೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರಕಲಾ ಮಾತನಾಡಿ, "ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡವನ್ನು ಗುತ್ತಿಗೆದಾರರು ಅಥವಾ ಇಂಜಿನಿಯರ್‌ಗಳು ಇನ್ನೂ ಅಧಿಕೃತವಾಗಿ ನಮಗೆ ಹಸ್ತಾಂತರ ಮಾಡಿಲ್ಲ. ಕಟ್ಟಡದ ನಕ್ಷೆಯನ್ನು ಮಾತ್ರ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಮೇಲಾಧಿಕಾರಿಗಳ ಒತ್ತಡದಿಂದ ಆಸ್ಪತ್ರೆಯ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ," ಎಂದು ಹೇಳಿದರು. "ಆಸ್ಪತ್ರೆಯ ಮೇಲ್ಭಾಗದಲ್ಲಿರುವ ನೀರು ಶುದ್ಧೀಕರಣ ಘಟಕದ ಬಾಗಿಲುಗಳು ಕಿತ್ತುಹೋಗಿವೆ. ಸೋಲಾರ್ ವಾಟರ್ ಹೀಟರ್‌ನ ಗಾಜುಗಳು ಒಡೆದಿವೆ. ಕೊಠಡಿಗಳ ಬಾಗಿಲುಗಳು, ಲೈಟಿಂಗ್ ವ್ಯವಸ್ಥೆ ಹಾಗೂ ಫ್ಯಾನ್‌ಗಳಲ್ಲಿ ಲೋಪದೋಷಗಳಿದ್ದು, ಕೆಲವು ಫ್ಯಾನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪ್ರಸ್ತುತ ನಾವು ಸ್ವಂತವಾಗಿ ಒಂದು ಫ್ಯಾನ್ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ," ಎಂದು ವಿವರಿಸಿದರು. "ಈ ಎಲ್ಲಾ ಸಮಸ್ಯೆಗಳು ಹಾಗೂ ಅಪೂರ್ಣ ಕಾಮಗಾರಿಯ ಕುರಿತು ಸಂಬಂಧಪಟ್ಟ ಇಂಜಿನಿಯರ್‌ಗೆ ಅಧಿಕೃತವಾಗಿ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು," ಎಂದು ಅವರು ತಿಳಿಸಿದರು.4
- ಆಸ್ಪತ್ರೆ ಆರಂಭವಾಗಿ 15 ದಿನಗಳ ಒಳಗಡೆಯೇ 27 ಕೋಟಿ ರೂಪಾಯಿಯ ತಾಯಿ-ಮಕ್ಕಳ ಆಸ್ಪತ್ರೆ ಅವ್ಯವಸ್ಥೆ. ವರದಿ:- ಪವಾಡೆಪ್ಪ ಚೌಡ್ಕಿ ಕುಷ್ಟಗಿ:- ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಬೇಕಾದ ಮೂಲಭೂತ ಸೌಕರ್ಯಗಳು ಇದ್ದರು ಸಹ ಎಲ್ಲವು ಇಲ್ಲದಂತೆ ಆಗಿದೆ ಕೆಲವು ಇನ್ನು ಸೌಲಭ್ಯಗಳು ಸರಿಯಾಗಿ ಇಲ್ಲದ ಕಾರಣ ಈ ಆಸ್ಪತ್ರೆಯನ್ನು ತರಾತುರಿಯಲ್ಲಿ ಆರಂಭ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. *ಅವ್ಯವಸ್ಥೆಗಳ ನಡುವೆಯೇ ಹೆರಿಗೆ ಸೇವೆ ಆರಂಭ ಸಾರ್ವಜನಿಕರ ಆಕ್ರೋಶ* ಚಿಕ್ಕಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಹಾಗೂ ಜನತೆಗೆ ಬೇಕಾಗುವ ಗುಣಮಟ್ಟದ ಆರೋಗ್ಯ ಸೇವೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬಾಣಂತಿರಿಗೆ ಬೇಕಾದ ಬಿಸಿನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಆಸ್ಪತ್ರೆಗೆ ಅಳವಡಿಸಿರುವ ಸೋಲಾರ್ ವಾಟರ್ ಇಟರ್ ಟುಬೂಗಳು ಹೊಡೆದು ಹಾಳಾಗಿ ಹೋಗಿವೆ. ಈ ಎಲ್ಲಾ ಸೋಲಾರ್ ಟುಬೂಗಳು ಅವ್ಯವಸ್ಥೆಯಿಂದ ಕೆಲ ವಸ್ತುಗಳು ಆಸ್ಪತ್ರೆ ಆರಂಭವಾಗಿ 15 ದಿನಗಳ ಒಳಗಡೆಯೇ ಹಾಳಾಗಿ ಒಡೆದು ಹೋಗಿವೆ. ಈ ಆಸ್ಪತ್ರೆಯ ಸ್ಥಿತ ಇದೇ ರೀತಿಯಾಗಿ ಮುಂದುವರೆದರೆ ಇದರಿಂದ ಸಾರ್ವಜನಿಕರು ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. *ಆಸ್ಪತ್ರೆಯಲ್ಲಿ ಕೆಲ ವಿದ್ಯುತ್ ಲೈಟ್ ಗಳು ಮತ್ತು ಪ್ಯಾನ್ ಗಳು ಬಂದ್.* ಆಸ್ಪತ್ರೆಯಲ್ಲಿ ಸಮರ್ಪಕ ಕುಡಿಯುವ ನೀರು, ಬಿಸಿನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲದೆ ಎಲ್ಲವು ಅವ್ಯವಸ್ಥೆಯಾಗಿ ಕೂಡಿದ್ದು ಎಲ್ಲವು ಬಂದ್ ಆಗಿರುವಂತದ್ದು ಕಂಡು ಬಂದಿದೆ. *ವೈದ್ಯರ ಕೊರತೆ ಮತ್ತು ಸಿಬ್ಬಂದಿಗಳ ಕೊರತೆ ಎದುರುಸುತ್ತಿರುವ ಆಸ್ಪತ್ರೆ* ಆಸ್ಪತ್ರೆಗೆ ತಕ್ಕಂತೆ ಬೇಕಾಗುವ ವೈದ್ಯಕೀಯ ಸೇವೆಗೆ ಅಗತ್ಯವಿರುವ ಸಿಬ್ಬಂದಿಯ ಕೊರತೆಯೂ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಮತ್ತು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು ಪ್ರತಿನಿತ್ಯ ಕಾರ್ಯನಿರ್ವಹಣೆಯ ಮೇಲೆ ಮತ್ತು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗಲಾರದು. *ಕೇಂದ್ರ ಬಸ್ ನಿಲ್ದಾಣದಿಂದ 2–3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆಗೆ ಆಗ್ರಹ.* ಪಟ್ಟಣದ ಬಸ್ ನಿಲ್ದಾಣದಿಂದ ಸರಿ ಸುಮಾರು ಎರಡು ಮೂರು ಕಿ.ಮಿ. ದೂರವಿದ್ದು ಗರ್ಭಿಣಿಯರಿಗೆ ಮತ್ತು ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಬಹಳ ಕಷ್ಟವಾಗುತ್ತಿದ್ದು ಬಸ್ ನಿಲ್ದಾಣದಿಂದ ಬಸ್ ಸೌಕರ್ಯ ಇಲ್ಲದೆ ಬರಿ ಆಟೋಗಳನ್ನು ನೆಚ್ಚಿಕೊಂಡು ಆಸ್ಪತ್ರೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕರು ತಮಗೆ ಮನಬಂದಂತೆ ಆಟೋ ಬಾಡಿಗೆ ಏರಿಗೆ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರೀಯ ಬಸ್ ನಿಲ್ದಾಣದಿಂದ ಆಸ್ಪತ್ರೆಯ ವರಗೆ ಬಸ್ ಬೀಡಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ. *ಆಸ್ಪತ್ರೆಯಲ್ಲಿ ಮಾರ್ಗ ಸೂಚಿಸುವ ನಾಮ ಫಲಕಗಳು ಇಲ್ಲ.* ಆಸ್ಪತ್ರೆಯ ಒಳಗಡೆ ಹೆರಿಗೆ ಕೊಠಡಿ ಮತ್ತು ರೋಗಿಗಳ ಹತ್ತಿರ ತರಳಬೇಕು ಎಂದರೆ ಸರಿಯಾದ ಮಾರ್ಗವನ್ನು ಸೂಚಿಸುವ ದಿಕ್ಕು ಸೂಚನಾ ಫಲಕಗಳು ಇಲ್ಲದೆ ಆಸ್ಪತ್ರೆಗೆ ಬರುವ ಸಾರ್ವಜನಿಕರು ಕೊರತೆಯನ್ನು ಎದುರಿಸಬೇಕಾಗಿದೆ. ಮತ್ತು ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಗೆ ಬಂದ ರೋಗಿಗಳು ಅವಳನ್ನು ತೊಂಡಿಕೊಂಡಿದ್ದಾರೆ. *ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಹದೆಗೆಟ್ಟ ಮಾರ್ಗದ ರಸ್ತೆ.* ತಹಶೀಲ್ದಾರ ಕಚೇರಿಯಿಂದ ವಣಗೇರಾ ಹಳೆ ರಸ್ತೆ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಈ ರಸ್ತೆಯು ಹದಗೆಟ್ಟಿದ್ದು, ಸುತ್ತಮುತ್ತಲಿನ ಮೂಲಸೌಕರ್ಯಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಡೆ ವಿದ್ಯುತ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಮತ್ತು ವಿದ್ಯುತ್ ಕಂಬಗಳು ರಸ್ತೆಯ ಪಕ್ಕದಲ್ಲಿ ಇದ್ದು ಯಾವುದೇ ಎರಡು ಗಾಡಿಗಳು ಬಂದರೆ ಸಾಕು ಅದಲು ಬದಲು ಆದಲು ಮತ್ತು ಹೋಗಲು ಮತ್ತು ಬರಲು ಸರಿಯಾದ ರಸ್ತೆ ಇಲ್ಲದೆ ರಸ್ತೆಯ ಅಕ್ಕ ಪಕ್ಕದಲ್ಲಿ ತೆಗ್ಗು ದಿನ್ನೆಗಳು ಇವೆ ಈ ರಸ್ತೆ ಬಹಳ ಇರ್ಕಟ್ಟಾಗಿದ್ದು ಎದ್ದು ಕಾಣುತ್ತಿದೆ ಎಂಬ ಆರೋಪಗಳಿವೆ. ಕೂಡಲೇ ಸರಿ ಪಡಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ಚಿಕಿತ್ಸಾ ಸೇವೆಗಳು ಆರಂಭಗೊಂಡಿರುವುದು ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ರೋಗಿಗಳ ಸುರಕ್ಷತೆ ಹಾಗೂ ಆರೋಗ್ಯ ಸೇವೆಯ ಗುಣಮಟ್ಟದ ದೃಷ್ಟಿಯಿಂದ ಅಗತ್ಯ ಮೂಲಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆಸ್ಪತ್ರೆಯಿಂದ ಬಾಡಿಯಲ್ಲಿ ಅಳವಡಿಸಲಾಗಿರುವ ಸೋಲಾರ್ ಟುಬೂಗಳು ಹೊಡೆದು ಆಹಾಳಾಗಿ ನುಚ್ಚುನುರಾಗಿದ್ದು ಕಂಡು ಬಂದಿದೆ ನೀರಿನ ಶುದ್ದ ಕುಡಿಯುವ ನೀರಿನ ಘಟದ ಕೋಣಿಯ ಎರಡು ಘಟಕದ ಬಾಗಿಲು ಸಂಪೂರ್ಣ ಕಿತ್ತು ಹೋಗಿವೆ ಘಟಕದ ಮಿಷನ್ ಗಳು ಸುರಕ್ಷೆತೆ ಇಲ್ಲ. ಅವುಗಳನ್ನು ಸುಸಜ್ಜಿತವಾಗಿ ಇಡಬೇಕಾಗಿದೆ ಆಸ್ಪತ್ರೆ ಕಟ್ಟಿದಕ್ಕೆ ಸರಕಾರದ ಹಣ ನಷ್ಟವಾಗದಂತೆ ಮತ್ತು ಯಾವುದೇ ಕಾರಣಕ್ಕು ಆಸ್ಪತ್ರೆಯನ್ನು ಆಳಾಗಲು ಬೀಡಬಾರದು ಎಂಬುವದೆ ಸಾರ್ವಜನಿಕರ ಆಸೆಯಾಗಿದೆ ಎಂದು ಹೇಳಬಹುದು. ಬೈಟ್:- ಆಸ್ಪತ್ರೆಯನ್ನು ಸಂಪೂರ್ಣ ಆಗುವವರೆಗೂ ಹಸ್ತಾಂತರ ಜವಾಬ್ದಾರಿ ತೆಗೆದುಕೊಳ್ಳಬೇಡಿ ಎಂದು ತಾಲೂಕ ವೈದ್ಯಾಧಿಕಾರಿ ತಿಳಿಸಿದ್ದೆ ಆದರೆ ತರಾತೂರಿಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರಿಂದ ಕೊಪ್ಪಳದಲ್ಲಿ ಉದ್ಘಾಟನೆ ಮಾಡಿದರು. ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ನಿರ್ವಹಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. *ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ* -------------------------------- ಹೌದು ಆಸ್ಪತ್ರೆಯಲ್ಲಿ ಕೆಲ ಕೊಠಡಿಯಲ್ಲಿ ವಿದ್ಯುತ್ ಲೈಟ್ ಮತ್ತು ಪ್ಯಾನ್ ಇಲ್ಲ ಇದ್ದರು ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಆದರೆ ಈ ಆಸ್ಪತ್ರೆ ಆರಂಭವಾಗಿದ್ದರು ಸಂಬಂಧಿಸಿದ ಏಜೆನ್ಸಿ ಯವರು ಸಹ ನಮಗೆ ಇನ್ನು ಹಸ್ತಾಂತರ ಮಾಡಿಲ್ಲ ಸಂಪೂರ್ಣ ಆಗುವವರೆಗೂ ಜವಾಬ್ದಾರಿ ತೆಗೆದುಕೊಳ್ಳುವದಿಲ್ಲ ಇನ್ನು ಸ್ವಲ್ಪ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇವೆ ಸರಿ ಮಾಡಬೇಕಾಗಿದೆ. *ಡಾ.ಚಂದ್ರಕಲಾ ತಾಲೂಕು ವೈದ್ಯಾಧಿಕಾರಿ.*2
- ಸಚಿವ ಸ್ಥಾನಕ್ಕೆ ₹150 ಕೋಟಿ ಬೇಡಿಕೆ?" | ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹೇಳಿಕೆಯಲ್ಲಿ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ₹150 ಕೋಟಿ ರೂಪಾಯಿಗಳವರೆಗೆ ಹಣ ಬೇಡಿಕೆ ಇಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಸ್ಥಾನಗಳ ಹಂಚಿಕೆ, ಪ್ರಮುಖ ಖಾತೆಗಳ ನೀಡಿಕೆ ಹಾಗೂ ಅಭಿವೃದ್ಧಿ ಅನುದಾನದ ಕೊರತೆ ಕುರಿತು ಸರ್ಕಾರ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ರಾಜ್ಯದ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. #DKShivakumar #DoddanagoudaPatil #KarnatakaPolitics #Congress #BJP #MinisterPost #PoliticalNews #BreakingNews #KarnatakaNews #ASNNews24Kannada #KannadaNews #LatestNews #ViralNews #karnataka1
- ಸ್ಪಂದನ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನಾಚರಣೆ ಸ್ಪಂದನ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನಾಚರಣೆ ಇಳಕಲ್: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪರಮಪೂಜ್ಯ ಲಿಂಗೈಕ್ಯ ಡಾಕ್ಟರ್ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಅಮರೇಶ ಬಿ ಕೌದಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿರ್ದೇಶಕ ಉಪನ್ಯಾಸಕರುಗಳಾದ ರವಿ ಎಲ್ ಅರಸಿದ್ದಿ, ವೀರೇಶ ಡಿ ಬಾಚೇನಹಳ್ಳಿಯವರು ಮತ್ತು ಬಸವರಾಜ ಸಿ ತುಂಬಗಿಯವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಪ್ರಾಚಾರ್ಯರು ಮಾತನಾಡಿ ದುಶ್ಚಟಗಳು ಮಾನವನನ್ನು ತನ್ನ ಗುರಿಯಿಂದ ವಿಮುಕರನ್ನಾಗಿ ಮಾಡಿಸುತ್ತೆ . ತಂದೆ ತಾಯಿ ಬಂಧು ಬಳಗದಿಂದ ದೂರ ಮಾಡುತ್ತೆ, ದುಶ್ಚಟಗಳಿಂದ ವಿಧ್ಯಾರ್ಥಿಜೀವನ ಮಸುಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.ಜೊತೆಗೆ ತಾವು ಶ್ರೀಮಠದಲ್ಲಿ ಕಳೆದಂತ ಬಾಲ್ಯದ ದಿನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು.ವೇದಿಕೆಯಲ್ಲಿ ಉಪಸ್ಥಿತರಿರುವ ವೀರೇಶ ಡಿ ಬಾಚೇನಹಳ್ಳಿಯವರು ಮಾತನಾಡಿ ದುಶ್ಚಟಗಳು ಯಾವದೇ ರೀತಿಯದಾದರು ಅದು ಆರೋಗ್ಯಕ್ಕೆ ಹಾನಿಕಾರಕ ಎಂದು ಮನವರಿಕೆ ಮಾಡಿ ಕೊಟ್ಟರು. ಮಲ್ಲಿಕಾರ್ಜುನ ಜಗ್ಗಲ್ ನಿರೂಪಿಸಿದರು ರಾಘವೇಂದ್ರ ಭಜಂತ್ರಿ ಸ್ವಾಗತಿಸಿದರು ಮತ್ತು ಸಮೀರ್ ಸರ್ಕಾವಸ್ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.4
- ಕಿಸಾನ್ ಕ್ರೆಡಿಟ್ ಕಾರ್ಡ್ ತಪ್ಪದೇ ಪಡೆದುಕೊಳ್ಳಿ: ಶಾಸಕ ಭೀಮಸೇನ ಚಿಮ್ಮನಕಟ್ಟಿ ಗುಳೇದಗುಡ್ಡ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್ ತಪ್ಪದೇ ಪಡೆಯಬೇಕು. ಈ ಕಾರ್ಡನಿಂದ ರೈತರು, ಮೀನುಗಾರರಿಗೆ ಅವಶ್ಯವಾದ ಸಾಲ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಅವರು ಗುರುವಾರ ಸಂಜೆ ಪಟ್ಟಣದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಜಿಲ್ಲಾಪಂಚಾಯಿತಿ, ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರ ಸಹಕಾರಿ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆ ಹಾಗೂ ಮೀನುಗಾರರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಲ್ಲದೇ ಮೀನು ಹಿಡಿಯಲು ಹೋದಾಗ ದುರ್ಘಟನೆಗಳು ಸಂಭವಿಸಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ದೊರೆಯುತ್ತದೆ ಎಂದರು. ಮೀನುಗಾರಿಕೆ ಉದ್ಯಮ ಅಭಿವೃದ್ಧಿಪಡಿಸಿಕೊಳ್ಳಲು ಸರ್ಕಾದಿಂದ ಸಾಕಷ್ಟು ಯೋಜನೆಗಳು ದೊರೆಯುವ ಯೋಜನೆಗಳು ಬಗ್ಗೆ ನಿಮಗೆ ಅರಿವು ಹೊಂದಿರಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮೀನು ಸಾಗಾಣಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಜೊತೆಗೆ ಮೀನುಗಾರರು ದುಶ್ಚಟದಿಂದ ದೂರವಿದ್ದು, ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಮಹೇಶ ಪಿ, ಸಹಾಯಕ ನಿರ್ದೇಶಕ ಪ್ರಕಾಶ ಜಮಖಂಡಿ, ಕೃಷಿ ಅಧಿಕಾರಿ ಆನಂದ ಗೌಡರ, ವೈ.ಆರ್. ಹೆಬ್ಬಳ್ಳಿ, ರಜಾಕ ಕುದರಿ, ಶಿವನಯ್ಯ ಮಳ್ಳಿಮಠ, ಚಿದಾನಂದಸಾ ಕಾಟವಾ, ಇಬ್ರಾಹಿಂ ಹಳ್ಳಿ, ಮದ್ದಾನೆಪ್ಪ ಶಿಳ್ಳಿಕ್ಯಾತರ, ಸದಾಶಿವ ಮರಡಿ ಹಾಗೂ ಮೀನುಗಾರರ ಸಂಘದ ಸದಸ್ಯರು ಇದ್ದರು.3
- ಆಲಮಟ್ಟಿ ಜಲಶಯಕ್ಕೆ ಮುಂದಿನ (48) ಗಂಟೆಗಳಲ್ಲಿ ಸುಮಾರು (2) ಲಕ್ಷ ಕ್ಯೂಸಕವರೆಗೆ ನೀರು ಹರಿದು ಒಳ ಹರಿವು ಸಾದ್ಯತೆ1
- ಮುದ್ದೇಬಿಹಾಳ ಪಟ್ಟಣದಲ್ಲಿ ಎಬಿಪಿ ಕಾಲೇಜ್ ವಿದ್ಯಾರ್ಥಿಗಳಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ಮುದ್ದೇಬಿಹಾಳ ತಾಲೂಕಿನಲ್ಲಿ , ಸರ್ಕಾರಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳು ಕಮ್ಮಿ ಇದ್ದು ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದ ಕಾರಣ ಶೀಘ್ರದಲ್ಲಿ ಸರ್ಕಾರದಿಂದ ಉಪನ್ಯಾಸಕರನ್ನು ಆಯ್ಕೆ ಮಾಡಬೇಕೆಂದು ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದ್ದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಇದ್ದು ಸಮೀಪದಲ್ಲಿರುವ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ವಿದ್ಯಾರ್ಥಿಗಳಿಂದ ತಾಲೂಕ ದಂಡಾಧಿಕಾರಿ ಕೀರ್ತಿ ಚಾಲಕ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು ವರದಿ ಈರಣ್ಣ ತಾರನಾಳ1
- ಹಮ್ಮಿಗಿ ಗ್ರಾಮದಲ್ಲಿ ಸಣ್ಣದೊಂದು ಜನನ ಪ್ರಮಾಣ ಪತ್ರದ ತಿದ್ದುಪಡಿ ಗಾಗಿ ಅಂಗವಿಕಲ ಮಹಿಳೆಯೊಬ್ಬರು ನಾಲ್ಕು ದಿನಗಳಿಂದ ಅಲೆದಾಡುತ್ತಿರುವ ಘಟನೆ... ಹೌದು, ಹಮ್ಮಿಗಿ ಗ್ರಾಮದ ವೀರಮ್ಮ ಬಾಬುಸಾಬ ಮಡಿವಾಳರ ಎಂಬ ವಿಶೇಷ ಚೇತನ ಮಹಿಳೆ, ನವಿನ ಹಾಲಪ್ಪ ಈಟಿ ಅವರ ಜನನ ಪ್ರಮಾಣ ಪತ್ರಕ್ಕಾಗಿ ನಾಲ್ಕು ದಿನಗಳಿಂದ ನಿರಂತರವಾಗಿ ಅಲೆದಾಡುತ್ತಿದ್ದಾರೆ. ಎರಡು ಕಾಲು ಇಲ್ಲದೆ ನಡೆಯಲು ಶಕ್ತಿಯಿಲ್ಲದಿದ್ದರೂ, ಶ್ರಮಪಟ್ಟು ಕಚೇರಿಗೆ ಬಂದರೆ ತಲಾಠಿ ಮಾತ್ರ ಸ್ಥಳದಲ್ಲೇ ಇರುವುದಿಲ್ಲ! ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿ ಹೀಗೆ ನಾಪತ್ತೆಯಾಗುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳು ಹೀಗೆ ಬಡವರನ್ನು, ಅಂಗವಿಕಲರನ್ನು ಸತಾಹಿಸುವುದು ಎಷ್ಟು ಸರಿ ಎನ್ನುವುದು ಗ್ರಾಮಸ್ಥರ ಖಾರವಾದ ಪ್ರಶ್ನೆ.1