Shuru
Apke Nagar Ki App…
ಚಾಮರಾಜನಗರ ಜಿಲ್ಲೆಗೆ ಬರ ಪರಿಹಾರ ಘೋಷಣೆಗೆ ವೀರಭದ್ರಸ್ವಾಮಿ ಆಗ್ರಹ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರಗಾಲದಿಂದ ಶೇ.90 ಕ್ಕೂ ಹೆಚ್ಚು ಫಸಲು ನಾಶವಾಗಿದ್ದು ಸರ್ಕಾರ ನಾಶವಾಗಿರುವ ಫಸಲಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಅಂದಾಜು 30 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿತ್ತು ಇದರಲ್ಲಿ 29.30 ಲಕ್ಷ ಹೆಕ್ಟೇರ್ ನಷ್ಟು ಬಿತ್ತನೆ ಒಣಗಿಹೋಗಿದೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿರ ಪ್ರದೇಶ ಜಿಲ್ಲೆ ಎಂದು ಘೋಷಣೆ ಮಾಡಿ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಸುದ್ದಿ ಮನೆ
ಚಾಮರಾಜನಗರ ಜಿಲ್ಲೆಗೆ ಬರ ಪರಿಹಾರ ಘೋಷಣೆಗೆ ವೀರಭದ್ರಸ್ವಾಮಿ ಆಗ್ರಹ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರಗಾಲದಿಂದ ಶೇ.90 ಕ್ಕೂ ಹೆಚ್ಚು ಫಸಲು ನಾಶವಾಗಿದ್ದು ಸರ್ಕಾರ ನಾಶವಾಗಿರುವ ಫಸಲಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಅಂದಾಜು 30 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿತ್ತು ಇದರಲ್ಲಿ 29.30 ಲಕ್ಷ ಹೆಕ್ಟೇರ್ ನಷ್ಟು ಬಿತ್ತನೆ ಒಣಗಿಹೋಗಿದೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿರ ಪ್ರದೇಶ ಜಿಲ್ಲೆ ಎಂದು ಘೋಷಣೆ ಮಾಡಿ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ಮಾಹಿತಿ ನೀಡಿದ್ದಾರೆ.
More news from Mysuru and nearby areas
- ಗುಂಡ್ಲುಪೇಟೆ 9ರಂದು ಉಚಿತ ಮಂಡಿ (ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರ ಗುಂಡ್ಲುಪೇಟೆ ಆ. 5: ಮೈಸೂರು ನಗರದ ಕಾಳಿದಾಸ ರಸ್ತೆಯ ಸಿಎಫ್‌ಟಿಆರ್‌ಐ ಲೇಔಟ್ ಸಮೀಪದ ಶಾರದಾದೇವಿ ನಗರದಲ್ಲಿರುವ ಎ ಆರ್ ಆಸ್ಪತ್ರೆ (AR Hospital) ವತಿಯಿಂದ ಮಂಡಿ ನೋವು, ಮಂಡಿ ಸವೆತ ಹಾಗೂ ಕೀಲು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗಾಗಿ ಉಚಿತ ಮಂಡಿ ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರವನ್ನು ಶಿಕ್ಷಕರ ಭವನ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹತ್ತಿರ, ಗುಂಡ್ಲುಪೇಟೆ ಆಗಸ್ಟ್ 9ರಂದು (ಭಾನುವಾರ) ಆಯೋಜಿಸಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಖ್ಯಾತ ಅಸ್ಥಿ ತಜ್ಞ ಡಾ. ಮಧುರಾಮ್ ಚೌಧರಿ (ಎಂ.ಬಿ.ಬಿ.ಎಸ್., ಎಂ.ಎಸ್. ಆರ್ಥೋ, ಎಫ್‌ಐಎಎಸ್.), ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ತಜ್ಞರು ಭಾಗವಹಿಸಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಮಂಡಿ ನೋವು, ಮಂಡಿ ಸವೆತ, ನಡೆಯಲು ತೊಂದರೆ, ಮಂಡಿ ಬಿಗಿತ ಹಾಗೂ ಕೀಲು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಾಗುವುದು. ಶಿಬಿರದಲ್ಲಿ ಡಿಜಿಟಲ್ ಎಕ್ಸ್-ರೇ ಮೂಲಕ ಮಂಡಿ ತಪಾಸಣೆ, ಮೂಳೆ ಸವೆತದ ಮೌಲ್ಯಮಾಪನ, ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ, ರೊಮಟಾಯ್ಡ್ ಆರ್ಥ್ರೈಟಿಸ್ ಸೇರಿದಂತೆ ಕೀಲು ಸಂಬಂಧಿತ ಸಮಸ್ಯೆಗಳ ತಪಾಸಣೆ, ಹಾಗೂ ಮಂಡಿ ನೋವು ಮತ್ತು ನೀರಿನ ಮಂಡಿಬೀಳು (Joint Effusion) ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ವೈದ್ಯಕೀಯ ಸಲಹೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಇತರ ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ಆಡಳಿತ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಮುಂಗಡ ನೋಂದಣಿಗೆ 91082 80640, 91080 99748 ಹಾಗೂ 89511 86748 ಸಂಖ್ಯೆಗಳ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.1
- ಮೈದುಂಬಿ ಧುಮುಕುತ್ತಿರುವ ಮಳವಳ್ಳಿ ತಾಲೂಕಿನ ಐತಿಹಾಸಿಕ ಗತ ವೈಭವ ಸಾರುವ ಗಗನಚುಕ್ಕಿ ಜಲಪಾತ ಪ್ರಕೃತಿ ಸೌಂದರ್ಯ ಸವಿಯಲು ಅರಿದು ಬರುತ್ತಿರುವ ಜನಸಾಗರ ಮೈದುಂಬಿ ದುಮುಕ್ಕುತ್ತಿರುವ ಗಗನಚುಕ್ಕಿ-ಜಲಪಾತ-ಪ್ರಕೃತಿ ಸೌಂಧರ್ಯ ಸವಿಯಲು ಹರಿದು ಬರುತ್ತಿರುವ ಜನಸಾಗರ ಮಳವಳ್ಳಿ.ತೀವ್ರ ಬರಗಾಲ ಮಳೆಯಿಲ್ಲದೆ ತತ್ತರಿಸಿ ಹೋಗಿ ನೀರಿಲ್ಲದೆ ಬಣಗುಡುತ್ತಿದ್ದ ಗತ ವೈಭವ ಸಾರುವ ತಾಲೂಕಿನ ಶಿವನಸಮುದ್ರಂನ ಗಗನಚುಕ್ಕಿ ಜಲಪಾತ ಮೈದುಂಬಿ ದುಮುಕ್ಕುತ್ತಿರುವುದು ಪ್ರಕೃತಿ ಸೌಂದರ್ಯವನ್ನು ಸವಿಯುವ ಪ್ರವಾಸಿಗರಿಗೆ ರಸದೌತಣ ನೀಡಿದೆ, ಕಾವೇರಿ ಉಗಮ ಪ್ರದೇಶಗಳಲ್ಲಿ ತೀವ್ರ ಮಳೆ ಕೆ.ಅರ್.ಎಸ್‌ನಿಂದ ಹೆಚ್ಚಿ ನೀರು ಬಿಡುಗಡೆ ಕಾವೇರಿ ಕಬಿನಿ ಕಪಿಲ ನದಿಗಳ ಹರಿವಿನಲ್ಲಿ ಹೆಚ್ಚಳದಿಂದ ನೀರಿನ ಬೋರ್ಗೆರೆತ ಹೆಚ್ಚಾಗಿದೆ, ಕಾವೇರಿ ಕಬಿನಿ ಮತ್ತು ಕೆ.ಆರ್.ಎಸ್‌ನಿಂದ ಹೆಚ್ಚಿನ ನೀರು ಬಿಟ್ಟಿರುವುದರಿಂದ ಕಾವೇರಿ ನದಿಯ ದಡಗಳು ನೀರಿನಿಂದ ಮುಳುಗಿದ್ದು ನೋಡಲು ಬರುವ ಪ್ರವಾಸಿಗರಿಗೆ ಈ ರಮಣೀಯ ದೃಶ್ಯ ಹಬ್ಬವಾಗಿದೆ. ಮೂಲ ಸೌಲಭ್ಯ :ಗಗನಚುಕ್ಕಿ ಜಲಪಾತ ನೋಡಲು ಬರುವ ಜನರಿಗೆ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ವಾಹನ ನಿಲ್ದಾಣವಿದ್ದರೂ ನಿರ್ವಹಣೆ ಕೊರತೆಯಿದೆ. ಜನರು ವಾಹನಗಳನ್ನು ರಸ್ತೆಯ ಬದಿಯಲ್ಲಿ,ಜಮೀನುಗಳಲ್ಲಿ,ನಿಲ್ಲಿಸುವಂತಾಗಿದ್ದರಿAದ ವಾಹನಗಳು ಎಲ್ಲಿ ನೋಡಿದರೆ ಅಲ್ಲಿ ನಿಲ್ಲುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡು ಜನರು ನೋಡಲು ಏಕೆ ಬಂದೆವೋ ಅನ್ನುವಷ್ಠು ಸಂಕಷ್ಠಕ್ಕೀಡಾಗಿದೆ. ಇದಲ್ಲದೆ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರು ಗಗನಚುಕ್ಕಿ ನೋಡಲು ಬಂದು ಟ್ರಾಪಿಕ್ ಜಾಮ್‌ನಲ್ಲಿ ಸಿಲುಕಿ ಇತ್ತು ಹಿಂದೆ ಅಥವಾ ಮುಂದೆ ಹೋಗಲು ಆಗದೆ ಸುಮಾರು ಗಂಟೆಗಳ ಕಾಲ ರಸ್ತೆಯಲ್ಲಿ ಪರದಾಡುವಂತಾಗಿತ್ತು. ಪ್ರವಾಸಿಗರಿಗೆ ಎಚ್ಚರ: ಮೈದುಂಬಿ ಜಲಪಾತಕ್ಕೆ ಧುಮ್ಮುಕ್ಕುತ್ತಿರುವ ನೀರಿನ ದೃಶ್ಯವನ್ನು ನೋಡುವುದೆ ಪ್ರವಾಸಿಗರಿಗೆ ಆನಂದವೋ.ಆನAದ,ಆದರೆ ಈ ಸಂದರ್ಭದಲ್ಲಿ ಎಚ್ಚರವೂ ಅಗತ್ಯವಿದೆ.ಈಗಾಗಲೇ ಹಲವು ಧುರ್ಘಟನೆಗಳು ಇಲ್ಲಿ ಜರುಗಿವೆ.ಆನಂದಲ್ಲಿ ಮೈಮರತೆರ ಸಾವು ಖಚಿತ ಎನ್ನುವುದನ್ನು ಪ್ರವಾಸಿಗರು ಎಚ್ಚರ ವಹಿಸಿಬೇಕಿದೆ. ಮುನ್ನೆಚ್ಚರಿಕೆ ಕ್ರಮ ಅವಶ್ಯ: ಈಗಾಗಲೇ ಬೆಳಕವಾಡಿ ಪೋಲಿಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರು ಸಹ ಕೆಲ ಯುವ ಪ್ರವಾಸಿಗರು ಜಲಪಾತದ ಸವಿಯನ್ನು ಸವಿಯಲು ಜಲಪಾತದ ಕೆಳಗೆಡೆ ಇಳಿಯುವುದು ಹೆಚ್ಚಾಗಿದೆ.ಇದನ್ನು ತಡೆಗಟ್ಟಿ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಢಳಿತ ಮುನ್ನೆಚ್ಚರಿಕೆ ಕ್ರಮವಹಿಸಬೇಕಿದೆ.ಇದಲ್ಲದೆ ಪ್ರವಾದ್ಯೋಮ ಇಲಾಖೆ ಗಗನ ಚುಕ್ಕಿ ಪ್ರದೇಶವ್ನನು ಅಭಿವೃದ್ದಿ ಪಡಿಸಿದರೂ ನಿರ್ವಹಣೆ ಕೊರತೆ ಬರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳ ಸಮಸ್ಯೆ ಇದೆ.ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.1
- ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ, ಭೋರ್ಗೆ ರೆದು ದುಮ್ಮಿಕ್ಕುತ್ತಿರುವ ಜಲಪಾತ ಮಳವಳ್ಳಿ : ಕಳೆದ 5-6 ತಿಂಗ ಳಿಂದ ಮಳೆ ಇಲ್ಲದೆ ನದಿಯಲ್ಲಿ ನೀರು ಇಲ್ಲದೆ ಬತ್ತಿಹೋಗಿದ್ದ ಮಳವಳ್ಳಿ ತಾಲ್ಲೂಕಿನ ಶಿವನ ಸಮುದ್ರ ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತಕ್ಕೆ ಇದೀಗ ಜೀವಕಳೆ ಬಂದಿದೆ. ಕಳೆದ ಒಂದು ವಾರದಿಂದ ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆ ಆರ್ ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣ ದಲ್ಲಿ ನೀರು ಹರಿದು ಬರುತ್ತಿದ್ದು ಕಬಿನಿ ಜಲಾಶಯವಂತು ಭರ್ತಿ ಯಾಗುವ ಹಂತ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಕಾವೇರಿ ನದಿಪಾತ್ರಕ್ಕೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಯಬಿಟ್ಟಿರುವುದ ರಿಂದ ನೀರಿಲ್ಲದೆ ಒಣಗಿ ನಿಂತಿದ್ದ ಗಗನಚುಕ್ಕಿ ಜಲಪಾತ ಮತ್ತೊಮ್ಮೆ ದುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯ ಬಿಟ್ಟಿರುವ ಹಿನ್ನಲೆಯಲ್ಲಿ ಕಳೆದ 3-4 ದಿನಗಳಿಂದಲೂ ಗಗನ ಚುಕ್ಕಿ ಜಲಪಾದಲ್ಲಿ ಮತ್ತೆ ಭೋರ್ಗೆರತ ಮೊಳಗುತ್ತಿದ್ದು ಪ್ರವಾಸಿಗರ ಕೈಬೀಸಿ ಕರೆಯುತ್ತಿದ್ದು ಈ ಮನ ಮೋಹಕ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಸದ್ಯದಲ್ಲೆ ಕೆ ಆರ್ ಎಸ್ ಅಣೆಕಟ್ಟೆ ಸಹ ಭರ್ತಿಯಾಗುವ ಹಂತದಲ್ಲಿದ್ದು ಆಗ ಇನ್ನೂ ಭಾರಿ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿದು ಬರಲಿದ್ದು ಜಲಪಾತದ ದೃಶ್ಯ ಇನ್ನಷ್ಟು ಮನಮೋಹಕವಾಗಲಿದೆ.1
- All About,Why the reasons no one is intended to grant relief for our Downtrodden in our Community *ಭಾರತ ನಲ್ಲಿ ವೈರಲ್*1
- ಕಾಳಿಕಾಂಬ ಕಾಲೋನಿಯಲ್ಲಿ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಚಾಮರಾಜನಗರ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಕೆಲ ದಿನಗಳಿಂದ ಕಾಳಿಕಾಂಬ ಗ್ರಾಮದ ಸುತ್ತಮುತ್ತ ಚಿರತೆ ಕಾಟ ಹೆಚ್ಚಾಗಿತ್ತು. ದನ ಕರುಗಳ ಮೇಲೆ ದಾಳಿ ಮಾಡಿತ್ತು ಇದರಿಂದ ಗ್ರಾಮಸ್ಥರು ಚಿರತೆ ಹಿಡಿಯುವಂತೆ ಒತ್ತಾಯಿಸಿದರು. ಇನ್ನು ಅರಣ್ಯ ಇಲಾಖೆಯವರು ಅಳವಡಿಸಿದ ಬೋನಿಗೆ ಚಿರತೆ ಬಿದ್ದಿದೆ.1
- ಚಾಮರಾಜನಗರ ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೆಲ್ಲಂಬಳ್ಳಿ ಸೋಮನಾಯಕ ಅವರಿಂದ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಒತ್ತಾಯ ಚಾಮರಾಜನಗರ ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೆಲ್ಲಂಬಳ್ಳಿ ಸೋಮನಾಯಕ ಅವರಿಂದ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಒತ್ತಾಯ2
- All About,Which IPC Section will be carried out against those who have passed any educational certificate on fake basis *ಭಾರತ ನಲ್ಲಿ ವೈರಲ್*1
- ರೈತರ ಚಿನ್ನ ವಾಪಸ್ ಕೊಡಿಸುವಂತೆ ಆಗ್ರಹಿಸಿ : ನಗರದಲ್ಲಿ ರೈತರ ಪ್ರತಿಭಟನೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೊಳ್ಳೇಗಾಲದಜ ಸಾಫ್ ಫೈನಾನ್ಸ್ ಬ್ಯಾಂಕ್ ನಲ್ಲಿ ಗಿರಿವಿ ಇಟ್ಟಿರುವ ರೈತರ ಚಿನ್ನವನ್ನು ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ನಲ್ಲಿ. ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರಿವಿ ಇಟ್ಟಿದ್ದ ಚಿನ್ನವನ್ನು ಅನಧಿಕೃತವಾಗಿ ಕೊಳ್ಳೇಗಾಲದ ಇ ಸಾಫ್ ಫೈನಾನ್ಸ್ ಬ್ಯಾಂಕ್ ಗೆ ವರ್ಗಾಯಿಸಿಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು1