Shuru
Apke Nagar Ki App…
ರೈತರ ಚಿನ್ನ ವಾಪಸ್ ಕೊಡಿಸುವಂತೆ ಆಗ್ರಹಿಸಿ : ನಗರದಲ್ಲಿ ರೈತರ ಪ್ರತಿಭಟನೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೊಳ್ಳೇಗಾಲದಜ ಸಾಫ್ ಫೈನಾನ್ಸ್ ಬ್ಯಾಂಕ್ ನಲ್ಲಿ ಗಿರಿವಿ ಇಟ್ಟಿರುವ ರೈತರ ಚಿನ್ನವನ್ನು ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ನಲ್ಲಿ. ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರಿವಿ ಇಟ್ಟಿದ್ದ ಚಿನ್ನವನ್ನು ಅನಧಿಕೃತವಾಗಿ ಕೊಳ್ಳೇಗಾಲದ ಇ ಸಾಫ್ ಫೈನಾನ್ಸ್ ಬ್ಯಾಂಕ್ ಗೆ ವರ್ಗಾಯಿಸಿಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು
ಚಾಮರಾಜನಗರ ಸುದ್ದಿ ಮನೆ
ರೈತರ ಚಿನ್ನ ವಾಪಸ್ ಕೊಡಿಸುವಂತೆ ಆಗ್ರಹಿಸಿ : ನಗರದಲ್ಲಿ ರೈತರ ಪ್ರತಿಭಟನೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೊಳ್ಳೇಗಾಲದಜ ಸಾಫ್ ಫೈನಾನ್ಸ್ ಬ್ಯಾಂಕ್ ನಲ್ಲಿ ಗಿರಿವಿ ಇಟ್ಟಿರುವ ರೈತರ ಚಿನ್ನವನ್ನು ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ನಲ್ಲಿ. ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರಿವಿ ಇಟ್ಟಿದ್ದ ಚಿನ್ನವನ್ನು ಅನಧಿಕೃತವಾಗಿ ಕೊಳ್ಳೇಗಾಲದ ಇ ಸಾಫ್ ಫೈನಾನ್ಸ್ ಬ್ಯಾಂಕ್ ಗೆ ವರ್ಗಾಯಿಸಿಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು
More news from ಕರ್ನಾಟಕ and nearby areas
- ಹೊರಗುತ್ತಿಗೆ ಸ್ವಚ್ಛತಾಗಾರರಿಗೆ ಹೊಸ ವೇತನ ಪರಿಷ್ಕರಣೆ ಜಾರಿಗಾಗಿ ಡಿಸಿಗೆ ಮನವಿ ಚಾಮರಾಜನಗರ: ಸರ್ಕಾರದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ವಚ್ಛತಗಾರರಿಗೆ ಹೊಸ ವೇತನ ಪರಿಷ್ಕರಣೆ ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ಡಿಆರ್.ರಾಜು ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಲಾಯಿತು ಹೊರಗುತ್ತಿಗೆ ಸ್ವಚ್ಛತಾಗಾರರಿಗೆ ಹೊಸ ವೇತನ ಪರಿಷ್ಕರಣೆ ಜಾರಿಗಾಗಿ ಡಿಸಿಗೆ ಮನವಿ ಚಾಮರಾಜನಗರ: ಸರ್ಕಾರದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ವಚ್ಛತಗಾರರಿಗೆ ಹೊಸ ವೇತನ ಪರಿಷ್ಕರಣೆ ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ಡಿಆರ್.ರಾಜು ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಲಾಯಿತು3
- ಚಾಮರಾಜನಗರ ಜಿಲ್ಲೆಗೆ ಬರ ಪರಿಹಾರ ಘೋಷಣೆಗೆ ವೀರಭದ್ರಸ್ವಾಮಿ ಆಗ್ರಹ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರಗಾಲದಿಂದ ಶೇ.90 ಕ್ಕೂ ಹೆಚ್ಚು ಫಸಲು ನಾಶವಾಗಿದ್ದು ಸರ್ಕಾರ ನಾಶವಾಗಿರುವ ಫಸಲಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಅಂದಾಜು 30 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿತ್ತು ಇದರಲ್ಲಿ 29.30 ಲಕ್ಷ ಹೆಕ್ಟೇರ್ ನಷ್ಟು ಬಿತ್ತನೆ ಒಣಗಿಹೋಗಿದೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿರ ಪ್ರದೇಶ ಜಿಲ್ಲೆ ಎಂದು ಘೋಷಣೆ ಮಾಡಿ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ಮಾಹಿತಿ ನೀಡಿದ್ದಾರೆ.1
- ಸಚಿವ ಸಿ. ಪುಟ್ಟರಂಗಶೆಟ್ಟಿಗೆ ತವರು ತಾಲೂಕಿನಲ್ಲಿ ಅದ್ಧೂರಿ ಸ್ವಾಗತ ಯಳಂದೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಗೊಂಡಿರುವ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿರವರಿಗೆ ಅವರ ತವರು ತಾಲೂಕಾಗಿರುವ ಯಳಂದೂರು ತಾಲೂಕು ಹಾಗೂ ಸ್ವಗ್ರಾಮದ ಅವರ ಮನೆಯಲ್ಲಿ ಮಂಗಳವಾರ ಅದ್ಧೂರಿ ಸ್ವಾಗತ ಕೋರಲಾಯಿತು. ತಾಲೂಕಿಗೆ ಆಗಮಿಸಿದ ಅವರಿಗೆ ಯರಿಯೂರು ಗ್ರಾಮದ ಭಗೀರಥ ಪುತ್ಥಳಿ ಮುಂಭಾಗ, ಯಳಂದೂರು ಪಟ್ಟಣದ ಜಾಮೀಯಾ ಮಸೀದಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ಪಟ್ಟಣದ ಬಳೇಪೇಟೆಯ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಲಾಯಿತು ನಂತರ ಇವರ ಸ್ವಗ್ರಾಮದವಾಗಿ ಉಪ್ಪಿಮೋಳೆ ಗ್ರಾಮದ ಇವರ ಮನೆಯಲ್ಲಿ ಮೊಮ್ಮಗ, ಮೊಮ್ಮಗಳು ಸೇರಿದಂತೆ ಇವರ ಕುಟುಂಬಸ್ಥರು, ಬೆಲ್ಲದ ಆರತಿ ಎತ್ತಿ ಸ್ವಾಗತ ಕೋರಿದರು. ಇವರು ಗ್ರಾಮದ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ತಾಲೂಕಿನ ವೈ.ಕೆ.ಮೋಳೆ ಗ್ರಾಮದ ದೊಡ್ಡಮ್ಮ, ಚಿಕ್ಕಮ್ಮತಾಯಿ, ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲೂ ಕೂಡ ಇವರ ಅಭಿಮಾನಿಗಳ ದೊಡ್ಡ ದಂಡೇ ನೆರೆದಿತ್ತು. ಹೋದಲ್ಲೆಡೆ ಇವರಿಗೆ ಹಾರ, ತುರಾಯಿ ಹಾಕಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ನಮ್ಮ ಜಿಲ್ಲೆಯಲ್ಲಿ ನಾನು ಸಚಿವನಾಗಿ ಆಯ್ಕೆಯಾಗಿರುವುದು ಅತೀವ ಸಂತಸ ಮೂಡಿಸಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ ಪಕ್ಷದ ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತೇನೆ. ಇಡೀ ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಅನುಗುಣವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಕುಸುಮರಾಜು, ಪುಟ್ಟರಂಗಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಯರಿಯೂರು ಕಿರಣ್, ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಕೃಷ್ಣಾಪುರ ದೇವರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಗೌಡಹಳ್ಳಿ ರಾಜೇಶ್, ಶಾಂತಮಲ್ಲು ಸೇರಿದಂತೆ ಅನೇಕರು ಇದ್ದರು.2
- ಸುಗ್ಗಿ ಕುಣಿತಕ್ಕೆ ಚಾಂಪಿಯನ್ ಪಟ್ಟ: ಮೈಸೂರಿನಲ್ಲಿ ಜಾನಪದ ನೃತ್ಯಗಳ ಸೊಬಗು, ಸಾಂಸ್ಕೃತಿಕ ಸಂಭ್ರಮ ಕಳೆಗಟ್ಟಿತು ಮೈಸೂರು: ಮೈಸೂರು ಬ್ಯೂಟಿಷಿಯನ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಹೋಟೆಲ್ ಪ್ರೆಸಿಡೆಂಟ್‌ನಲ್ಲಿ ಆಯೋಜಿಸಿದ್ದ "ಶೈನ್ ಟುಗೆದರ್ ಮಿಡ್ ಇಯರ್ ಗೆಟ್-ಟುಗೆದರ್" ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದ ಅದ್ಧೂರಿ ವೇದಿಕೆಯಾಗಿತ್ತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸದಸ್ಯರು ಜಾನಪದ ಹಾಗೂ ಸಾಂಪ್ರದಾಯಿಕ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಮೈಸೂರು ತಂಡದ "ಸುಗ್ಗಿ ಕುಣಿತ" ಪ್ರಥಮ ಸ್ಥಾನ ಪಡೆದು ವಿಜೇತರಾಗಿ ಹೊರಹೊಮ್ಮಿತು. ರೈತರ ಬದುಕು, ಕೊಯ್ಲು ಹಬ್ಬದ ಸಂಭ್ರಮ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಮನಮುಟ್ಟುವ ರೀತಿಯಲ್ಲಿ ಬಿಂಬಿಸಿದ ಈ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಕೊಳ್ಳೇಗಾಲ ತಂಡವು "ವನ ಸಿರಿ" ಎಂಬ ಪರಿಸರ ಸಂರಕ್ಷಣೆ ಹಾಗೂ ಅರಣ್ಯದ ವೈಭವವನ್ನು ಸಾರುವ ನೃತ್ಯ ಪ್ರದರ್ಶನ ನೀಡಿ ಪ್ರಥಮ ರನ್ನರ್-ಅಪ್ ಸ್ಥಾನ ಗಳಿಸಿತು. ಮಂಡ್ಯ ತಂಡವು "ರೆಟ್ರೋ ಟು ಮೆಟ್ರೋ" ವಿಷಯಾಧಾರಿತ ನೃತ್ಯದ ಮೂಲಕ ಹಳೆಯ ಮತ್ತು ಹೊಸ ಜೀವನಶೈಲಿಯ ಬದಲಾವಣೆಗಳನ್ನು ಮನೋರಂಜನಾತ್ಮಕವಾಗಿ ಮೂಡಿಸಿ ದ್ವಿತೀಯ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಯಿತು. ಇದರ ಜೊತೆಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲಾರೂಪಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪುಟ್ಟರಾಜ ಗವಾಯಿಗಳ ಶೈಲಿಯ ನೃತ್ಯ, ಕೋಲಾಟ, ಕರಗ, ಯಕ್ಷಗಾನ ನೃತ್ಯ, ಹುಲಿವೇಷ ಹಾಗೂ ಸುಗ್ಗಿ ಕುಣಿತ ಮೊದಲಾದ ಕಲಾ ಪರಂಪರೆಯ ವೈಭವವನ್ನು ನೆನಪಿಸುವ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದವು. ಖ್ಯಾತ ಶಾಸ್ತ್ರೀಯ ನೃತ್ಯ ಕಲಾವಿದೆಯರಾದ ಶ್ರದ್ಧಾ ಶೆಟ್ಟಿ ಹಾಗೂ ಶ್ರೀವಿದ್ಯಾ ರಾವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ನೃತ್ಯದ ಭಾವಾಭಿನಯ, ಲಯ, ಸಮನ್ವಯ, ವೇಷಭೂಷಣ ಮತ್ತು ವೇದಿಕೆ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿದರು. ಇವರ ತೀರ್ಪು ಸ್ಪರ್ಧೆಗೆ ಹೆಚ್ಚಿನ ವಿಶ್ವಾಸಾರ್ಹತೆ ನೀಡಿತು. ಸಂಘದ ಅಧ್ಯಕ್ಷೆ ವೇದರೈ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಸದಸ್ಯರ ಒಗ್ಗಟ್ಟು, ಪ್ರತಿಭೆ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಮೈಸೂರು ಬ್ಯೂಟಿಷಿಯನ್ಸ್ ವೆಲ್ಫೇರ್ ಅಸೋಸಿಯೇಷನ್‌ನ ವಿಶಿಷ್ಟ ಸಾಂಸ್ಕೃತಿಕ ಸಂಭ್ರಮವಾಗಿ ಯಶಸ್ವಿಯಾಗಿ ನೆರವೇರಿತು.1
- ಮಳೆಯಿಂದ ಮೈದಳೆದ ಹೊಗೇನಕಲ್ ಜಲಪಾತದ ಸೌಂದರ್ಯ ಹನೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತ ಮತ್ತೆ ವೈಭವದಿಂದ ಕಂಗೊಳಿಸುತ್ತಿದೆ. ಕೆಲ ದಿನಗಳ ಹಿಂದೆ ನೀರಿನ ಕೊರತೆಯಿಂದ ಬಣಗುಡುತ್ತಿದ್ದ ಜಲಪಾತ ಇದೀಗ ಕಾವೇರಿ ನದಿಯ ನೀರಿನ ಹರಿವು ಹೆಚ್ಚಳದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು, ರುದ್ರ ರಮಣೀಯ ದೃಶ್ಯವನ್ನು ಸೃಷ್ಟಿಸಿದೆ. ಬಂಡೆಗಳ ನಡುವೆ ಹರಿಯುತ್ತಿರುವ ಜಲಧಾರೆಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಮಳೆಗಾಲದಲ್ಲಿ ಹೊಗೇನಕಲ್ ಜಲಪಾತದ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿದ್ದು, ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿರುವುದರಿಂದ ಸ್ಥಳೀಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಚೈತನ್ಯ ದೊರೆತಿದೆ. ಹನೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತ ಮತ್ತೆ ವೈಭವದಿಂದ ಕಂಗೊಳಿಸುತ್ತಿದೆ. ಕೆಲ ದಿನಗಳ ಹಿಂದೆ ನೀರಿನ ಕೊರತೆಯಿಂದ ಬಣಗುಡುತ್ತಿದ್ದ ಜಲಪಾತ ಇದೀಗ ಕಾವೇರಿ ನದಿಯ ನೀರಿನ ಹರಿವು ಹೆಚ್ಚಳದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು, ರುದ್ರ ರಮಣೀಯ ದೃಶ್ಯವನ್ನು ಸೃಷ್ಟಿಸಿದೆ. ಬಂಡೆಗಳ ನಡುವೆ ಹರಿಯುತ್ತಿರುವ ಜಲಧಾರೆಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಮಳೆಗಾಲದಲ್ಲಿ ಹೊಗೇನಕಲ್ ಜಲಪಾತದ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿದ್ದು, ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿರುವುದರಿಂದ ಸ್ಥಳೀಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಚೈತನ್ಯ ದೊರೆತಿದೆ.1
- All About,Anytime the Daydreamer will be pulling the tail of those who raises questions,which is public interest *ಭಾರತ ನಲ್ಲಿ ವೈರಲ್*1
- ಜಿಲ್ಲೆಯ ಅಭಿವೃದ್ಧಿಗೆ ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟಿಯವರು ಹೆಚ್ಚು ಒತ್ತು ನೀಡಲಿ: ಎನ್. ಲಕ್ಷ್ಮಣ್ ಸ್ವಯಂ ಪ್ರೇರಣೆ ಸುದ್ದಿ,ಚಾಮರಾಜನಗರ: ನಗರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎನ್.ಲಕ್ಷ್ಮಣ್ ಅವರು ಮಾತನಾಡಿ, ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಪುಟ್ಟರಂಗಶೆಟ್ಟಿಯವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆಗಳು. ನೂತನ ಸಚಿವರಾದ ಸಿ. ಪುಟ್ಟರಂಗಶೆಟ್ಟಿಯವರು ಕಳೆದ ಬಾರಿ ಸಚಿವರಾಗಿದ್ದಾಗ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಈ ಬಾರಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿವರಾದ ಡಿಕೆ. ಶಿವಕುಮಾರ್ ಅವರಿಗೆ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿ ಹೆಚ್ಚಿನ ಅನುದಾನವನ್ನು ತಂದು ನಮ್ಮ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ನಮ್ಮ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿಸಲವಾಡಿ ಸಿದ್ದರಾಜು, ಮಹದೇವಯ್ಯ ರಾಮಸಮುದ್ರ ಇದ್ದರು. ಜಿಲ್ಲೆಯ ಅಭಿವೃದ್ಧಿಗೆ ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟಿಯವರು ಹೆಚ್ಚು ಒತ್ತು ನೀಡಲಿ: ಎನ್. ಲಕ್ಷ್ಮಣ್ ಚಾಮರಾಜನಗರ: ನಗರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎನ್.ಲಕ್ಷ್ಮಣ್ ಅವರು ಮಾತನಾಡಿ, ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಪುಟ್ಟರಂಗಶೆಟ್ಟಿಯವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆಗಳು. ನೂತನ ಸಚಿವರಾದ ಸಿ. ಪುಟ್ಟರಂಗಶೆಟ್ಟಿಯವರು ಕಳೆದ ಬಾರಿ ಸಚಿವರಾಗಿದ್ದಾಗ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಈ ಬಾರಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿವರಾದ ಡಿಕೆ. ಶಿವಕುಮಾರ್ ಅವರಿಗೆ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿ ಹೆಚ್ಚಿನ ಅನುದಾನವನ್ನು ತಂದು ನಮ್ಮ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ನಮ್ಮ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿಸಲವಾಡಿ ಸಿದ್ದರಾಜು, ಮಹದೇವಯ್ಯ ರಾಮಸಮುದ್ರ ಇದ್ದರು.1
- ಹೆಚ್.ಎಸ್.ಮಹದೇವಪ್ರಸಾದ್ ಹುಟ್ಟುಹಬ್ಬ: ಇಂಚರ್ ಗ್ರೂಪ್‌ನಿಂದ ಅನ್ನಸಂತರ್ಪಣೆ ಮಹದೇವಪ್ರಸಾದ್ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿದ್ದರು : ಹೆಚ್.ಎಂ.ಗಣೇಶ್ ಪ್ರಸಾದ್ ಹೆಚ್.ಎಸ್.ಮಹದೇವಪ್ರಸಾದ್ ಹುಟ್ಟುಹಬ್ಬ: ಇಂಚರ್ ಗ್ರೂಪ್‌ನಿಂದ ಅನ್ನಸಂತರ್ಪಣೆ ಚಾಮರಾಜನಗರ : ಮಾಜಿ ಸಚಿವ ಹೆಚ್.ಎನ್. ಮಹದೇವಪ್ರಸಾದ್ ಅವರು ಜಿಲ್ಲೆಯ ಅಭಿವೃದ್ಧಿಗೆ `ದೂರದೃಷ್ಟಿ ಹೊಂದಿದ್ದರು ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇಂಚರ್ ಗ್ರೂಪ್ ವತಿಯಿಂದ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ 68ನೇ ಜನ್ಮದಿನದ ಅಂಗವಾಗಿ ಅಯೋಜಿಸಿದ್ದ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸ್ಕಿ, ಹೆಚ್.ಎಸ್. ಮಹದೇವಪ್ರಸಾದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅನ್ನಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದರು. ಮಹದೇವಪ್ರಸಾದ್ ಅವರು ಬದುಕಿದ್ದರೆ ಜಿಲ್ಲೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿತ್ತು. . ಅವರು ನಮ್ಮಿಂದ ದೂರವಾಗಿದ್ದರು ಅವರು ಜಿಲ್ಲೆಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳು ನಮ್ಮ ಮುಂದೆ ಜೀವಂತವಾಗಿ ಉಳಿದಿವೆ. ನಮ್ಮ ತಂದೆ ಹುಟ್ಟುಹಬ್ಬವನ್ನು ಹಮ್ಮಿಕೊಂಡಿರುವುದು ತುಂಬಾ ಸಂತಸವಾಗಿದೆ. ಕಾರ್ಯಕ್ರಮ ಆಯೋಜಕ ಸ್ಟೈಲ್ ಮಂಜುನಾಥ್, ಎಲ್ಲರಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಆಯೋಜಕ ಸ್ಟೈಲ್ ಮಂಜುನಾಥ್ ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಎನ್ ರಿಚ್ ಮಹದೇವಸ್ವಾಮಿ, ಬಸಪ್ಪ, ಕೃಷ್ಣಪ್ಪ, ಮಂಜೇಶ್, ದೊಡ್ಡರಾಯಪೇಟೆ ಗಿರೀಶ್, ವೈ.ಪಿ. ರಾಜೇಂದ್ರ, ಬಿ.ಕೆ.ರವಿಕುಮಾರ್, ಪ್ರೊಟ್ಸ್ ರವಿಕುಮಾರ್, ಸೈಯದ್‌ರಫೀ, ಮಹೇಶ್‌ಕುದರ್, ಕಾವುದವಾಡಿ ಗುರು, ಮೂಗೂರು ಸುಂದ್ರಪ್ಪ, ರಾಜು, ಕಲ್ಪುರ ಮಂಜು, ಗುರುಸ್ವಾಮಿ ಇತರರು ಹಾಜರಿದ್ದರು.3