ಸಚಿವ ಸಿ. ಪುಟ್ಟರಂಗಶೆಟ್ಟಿಗೆ ತವರು ತಾಲೂಕಿನಲ್ಲಿ ಅದ್ಧೂರಿ ಸ್ವಾಗತ ಯಳಂದೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಗೊಂಡಿರುವ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿರವರಿಗೆ ಅವರ ತವರು ತಾಲೂಕಾಗಿರುವ ಯಳಂದೂರು ತಾಲೂಕು ಹಾಗೂ ಸ್ವಗ್ರಾಮದ ಅವರ ಮನೆಯಲ್ಲಿ ಮಂಗಳವಾರ ಅದ್ಧೂರಿ ಸ್ವಾಗತ ಕೋರಲಾಯಿತು. ತಾಲೂಕಿಗೆ ಆಗಮಿಸಿದ ಅವರಿಗೆ ಯರಿಯೂರು ಗ್ರಾಮದ ಭಗೀರಥ ಪುತ್ಥಳಿ ಮುಂಭಾಗ, ಯಳಂದೂರು ಪಟ್ಟಣದ ಜಾಮೀಯಾ ಮಸೀದಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ಪಟ್ಟಣದ ಬಳೇಪೇಟೆಯ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಲಾಯಿತು ನಂತರ ಇವರ ಸ್ವಗ್ರಾಮದವಾಗಿ ಉಪ್ಪಿಮೋಳೆ ಗ್ರಾಮದ ಇವರ ಮನೆಯಲ್ಲಿ ಮೊಮ್ಮಗ, ಮೊಮ್ಮಗಳು ಸೇರಿದಂತೆ ಇವರ ಕುಟುಂಬಸ್ಥರು, ಬೆಲ್ಲದ ಆರತಿ ಎತ್ತಿ ಸ್ವಾಗತ ಕೋರಿದರು. ಇವರು ಗ್ರಾಮದ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ತಾಲೂಕಿನ ವೈ.ಕೆ.ಮೋಳೆ ಗ್ರಾಮದ ದೊಡ್ಡಮ್ಮ, ಚಿಕ್ಕಮ್ಮತಾಯಿ, ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲೂ ಕೂಡ ಇವರ ಅಭಿಮಾನಿಗಳ ದೊಡ್ಡ ದಂಡೇ ನೆರೆದಿತ್ತು. ಹೋದಲ್ಲೆಡೆ ಇವರಿಗೆ ಹಾರ, ತುರಾಯಿ ಹಾಕಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ನಮ್ಮ ಜಿಲ್ಲೆಯಲ್ಲಿ ನಾನು ಸಚಿವನಾಗಿ ಆಯ್ಕೆಯಾಗಿರುವುದು ಅತೀವ ಸಂತಸ ಮೂಡಿಸಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ ಪಕ್ಷದ ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತೇನೆ. ಇಡೀ ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಅನುಗುಣವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಕುಸುಮರಾಜು, ಪುಟ್ಟರಂಗಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಯರಿಯೂರು ಕಿರಣ್, ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಕೃಷ್ಣಾಪುರ ದೇವರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಗೌಡಹಳ್ಳಿ ರಾಜೇಶ್, ಶಾಂತಮಲ್ಲು ಸೇರಿದಂತೆ ಅನೇಕರು ಇದ್ದರು.
ಸಚಿವ ಸಿ. ಪುಟ್ಟರಂಗಶೆಟ್ಟಿಗೆ ತವರು ತಾಲೂಕಿನಲ್ಲಿ ಅದ್ಧೂರಿ ಸ್ವಾಗತ ಯಳಂದೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಗೊಂಡಿರುವ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿರವರಿಗೆ ಅವರ ತವರು ತಾಲೂಕಾಗಿರುವ ಯಳಂದೂರು ತಾಲೂಕು ಹಾಗೂ ಸ್ವಗ್ರಾಮದ ಅವರ ಮನೆಯಲ್ಲಿ ಮಂಗಳವಾರ ಅದ್ಧೂರಿ ಸ್ವಾಗತ ಕೋರಲಾಯಿತು. ತಾಲೂಕಿಗೆ ಆಗಮಿಸಿದ ಅವರಿಗೆ ಯರಿಯೂರು ಗ್ರಾಮದ ಭಗೀರಥ ಪುತ್ಥಳಿ ಮುಂಭಾಗ, ಯಳಂದೂರು ಪಟ್ಟಣದ ಜಾಮೀಯಾ ಮಸೀದಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ಪಟ್ಟಣದ ಬಳೇಪೇಟೆಯ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಲಾಯಿತು ನಂತರ ಇವರ ಸ್ವಗ್ರಾಮದವಾಗಿ ಉಪ್ಪಿಮೋಳೆ ಗ್ರಾಮದ ಇವರ ಮನೆಯಲ್ಲಿ ಮೊಮ್ಮಗ, ಮೊಮ್ಮಗಳು ಸೇರಿದಂತೆ ಇವರ ಕುಟುಂಬಸ್ಥರು, ಬೆಲ್ಲದ ಆರತಿ ಎತ್ತಿ ಸ್ವಾಗತ ಕೋರಿದರು. ಇವರು ಗ್ರಾಮದ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ತಾಲೂಕಿನ ವೈ.ಕೆ.ಮೋಳೆ ಗ್ರಾಮದ ದೊಡ್ಡಮ್ಮ, ಚಿಕ್ಕಮ್ಮತಾಯಿ, ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲೂ ಕೂಡ ಇವರ
ಅಭಿಮಾನಿಗಳ ದೊಡ್ಡ ದಂಡೇ ನೆರೆದಿತ್ತು. ಹೋದಲ್ಲೆಡೆ ಇವರಿಗೆ ಹಾರ, ತುರಾಯಿ ಹಾಕಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ನಮ್ಮ ಜಿಲ್ಲೆಯಲ್ಲಿ ನಾನು ಸಚಿವನಾಗಿ ಆಯ್ಕೆಯಾಗಿರುವುದು ಅತೀವ ಸಂತಸ ಮೂಡಿಸಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ ಪಕ್ಷದ ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತೇನೆ. ಇಡೀ ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಅನುಗುಣವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಕುಸುಮರಾಜು, ಪುಟ್ಟರಂಗಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಯರಿಯೂರು ಕಿರಣ್, ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಕೃಷ್ಣಾಪುರ ದೇವರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಗೌಡಹಳ್ಳಿ ರಾಜೇಶ್, ಶಾಂತಮಲ್ಲು ಸೇರಿದಂತೆ ಅನೇಕರು ಇದ್ದರು.
- ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ, ಭೋರ್ಗೆ ರೆದು ದುಮ್ಮಿಕ್ಕುತ್ತಿರುವ ಜಲಪಾತ ಮಳವಳ್ಳಿ : ಕಳೆದ 5-6 ತಿಂಗ ಳಿಂದ ಮಳೆ ಇಲ್ಲದೆ ನದಿಯಲ್ಲಿ ನೀರು ಇಲ್ಲದೆ ಬತ್ತಿಹೋಗಿದ್ದ ಮಳವಳ್ಳಿ ತಾಲ್ಲೂಕಿನ ಶಿವನ ಸಮುದ್ರ ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತಕ್ಕೆ ಇದೀಗ ಜೀವಕಳೆ ಬಂದಿದೆ. ಕಳೆದ ಒಂದು ವಾರದಿಂದ ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆ ಆರ್ ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣ ದಲ್ಲಿ ನೀರು ಹರಿದು ಬರುತ್ತಿದ್ದು ಕಬಿನಿ ಜಲಾಶಯವಂತು ಭರ್ತಿ ಯಾಗುವ ಹಂತ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಕಾವೇರಿ ನದಿಪಾತ್ರಕ್ಕೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಯಬಿಟ್ಟಿರುವುದ ರಿಂದ ನೀರಿಲ್ಲದೆ ಒಣಗಿ ನಿಂತಿದ್ದ ಗಗನಚುಕ್ಕಿ ಜಲಪಾತ ಮತ್ತೊಮ್ಮೆ ದುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯ ಬಿಟ್ಟಿರುವ ಹಿನ್ನಲೆಯಲ್ಲಿ ಕಳೆದ 3-4 ದಿನಗಳಿಂದಲೂ ಗಗನ ಚುಕ್ಕಿ ಜಲಪಾದಲ್ಲಿ ಮತ್ತೆ ಭೋರ್ಗೆರತ ಮೊಳಗುತ್ತಿದ್ದು ಪ್ರವಾಸಿಗರ ಕೈಬೀಸಿ ಕರೆಯುತ್ತಿದ್ದು ಈ ಮನ ಮೋಹಕ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಸದ್ಯದಲ್ಲೆ ಕೆ ಆರ್ ಎಸ್ ಅಣೆಕಟ್ಟೆ ಸಹ ಭರ್ತಿಯಾಗುವ ಹಂತದಲ್ಲಿದ್ದು ಆಗ ಇನ್ನೂ ಭಾರಿ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿದು ಬರಲಿದ್ದು ಜಲಪಾತದ ದೃಶ್ಯ ಇನ್ನಷ್ಟು ಮನಮೋಹಕವಾಗಲಿದೆ.1
- ಗುಂಡ್ಲುಪೇಟೆ 9ರಂದು ಉಚಿತ ಮಂಡಿ (ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರ ಗುಂಡ್ಲುಪೇಟೆ ಆ. 5: ಮೈಸೂರು ನಗರದ ಕಾಳಿದಾಸ ರಸ್ತೆಯ ಸಿಎಫ್‌ಟಿಆರ್‌ಐ ಲೇಔಟ್ ಸಮೀಪದ ಶಾರದಾದೇವಿ ನಗರದಲ್ಲಿರುವ ಎ ಆರ್ ಆಸ್ಪತ್ರೆ (AR Hospital) ವತಿಯಿಂದ ಮಂಡಿ ನೋವು, ಮಂಡಿ ಸವೆತ ಹಾಗೂ ಕೀಲು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗಾಗಿ ಉಚಿತ ಮಂಡಿ ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರವನ್ನು ಶಿಕ್ಷಕರ ಭವನ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹತ್ತಿರ, ಗುಂಡ್ಲುಪೇಟೆ ಆಗಸ್ಟ್ 9ರಂದು (ಭಾನುವಾರ) ಆಯೋಜಿಸಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಖ್ಯಾತ ಅಸ್ಥಿ ತಜ್ಞ ಡಾ. ಮಧುರಾಮ್ ಚೌಧರಿ (ಎಂ.ಬಿ.ಬಿ.ಎಸ್., ಎಂ.ಎಸ್. ಆರ್ಥೋ, ಎಫ್‌ಐಎಎಸ್.), ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ತಜ್ಞರು ಭಾಗವಹಿಸಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಮಂಡಿ ನೋವು, ಮಂಡಿ ಸವೆತ, ನಡೆಯಲು ತೊಂದರೆ, ಮಂಡಿ ಬಿಗಿತ ಹಾಗೂ ಕೀಲು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಾಗುವುದು. ಶಿಬಿರದಲ್ಲಿ ಡಿಜಿಟಲ್ ಎಕ್ಸ್-ರೇ ಮೂಲಕ ಮಂಡಿ ತಪಾಸಣೆ, ಮೂಳೆ ಸವೆತದ ಮೌಲ್ಯಮಾಪನ, ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ, ರೊಮಟಾಯ್ಡ್ ಆರ್ಥ್ರೈಟಿಸ್ ಸೇರಿದಂತೆ ಕೀಲು ಸಂಬಂಧಿತ ಸಮಸ್ಯೆಗಳ ತಪಾಸಣೆ, ಹಾಗೂ ಮಂಡಿ ನೋವು ಮತ್ತು ನೀರಿನ ಮಂಡಿಬೀಳು (Joint Effusion) ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ವೈದ್ಯಕೀಯ ಸಲಹೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಇತರ ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ಆಡಳಿತ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಮುಂಗಡ ನೋಂದಣಿಗೆ 91082 80640, 91080 99748 ಹಾಗೂ 89511 86748 ಸಂಖ್ಯೆಗಳ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.1
- ಕೊಡಗಿನ ಮದುವೆಯ ಸುಂದರ ವಿಶೇಷ ನೋಟ `ತುಂಬಾ ಅರ್ಥ ಗರ್ಭಿತ ಮಾತುಗಳು ಕೊಡಗಿನ ಮದುವೆಯ ನೋಟ `ತುಂಬಾ ಅರ್ಥ ಗರ್ಭಿತ ಮಾತುಗಳು ಈ ವಿಡಿಯೋ ಕೊನೆವರೆಗೂ ನೋಡಿ ನೀವು ಹೋದ ಮದುವೆಗೆ ಈ ರೀತಿಯಾಗಿ ಹೇಳಲು ಪ್ರಯತ್ನಿಸಿ. ಧನ್ಯವಾದಗಳು`1
- ಆತ್ಮಹತ್ಯೆ ಮಾಡಿಕೊಂಡರೈತಕುಟುಂಭಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ, ಪ್ರತಿಭಟನೆ ಮಂಡ್ಯ- ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಿ ಹಟ್ನಾ ಗ್ರಾಮದ ದಂಪತಿಗಳು ಹಾಗೂ ಪಾಂಡುಪುರ ತಾಲೂಕು ಮಂಡಿ ಬೆಟ್ಟಹಳ್ಳಿ ಗ್ರಾಮದ ಎಂ ಎಸ್ ಮಂಜುನಾಥ್ ಕುಟುಂಬಕ್ಕೆ ತಲಾ ಇಪ್ಪತ್ತೈದು ಸಾವಿರ ಪರಿಹಾರ ನೀಡುವಂತೆ ಕೋರಿ, ರಾಜ್ಯ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡುವಂತೆ ಹಲವು ಬೇಡಿಕೆಗಳನ್ನು ಇಟ್ಟು ಇಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.1
- ಕಾಳಿಕಾಂಬ ಕಾಲೋನಿಯಲ್ಲಿ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಚಾಮರಾಜನಗರ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಕೆಲ ದಿನಗಳಿಂದ ಕಾಳಿಕಾಂಬ ಗ್ರಾಮದ ಸುತ್ತಮುತ್ತ ಚಿರತೆ ಕಾಟ ಹೆಚ್ಚಾಗಿತ್ತು. ದನ ಕರುಗಳ ಮೇಲೆ ದಾಳಿ ಮಾಡಿತ್ತು ಇದರಿಂದ ಗ್ರಾಮಸ್ಥರು ಚಿರತೆ ಹಿಡಿಯುವಂತೆ ಒತ್ತಾಯಿಸಿದರು. ಇನ್ನು ಅರಣ್ಯ ಇಲಾಖೆಯವರು ಅಳವಡಿಸಿದ ಬೋನಿಗೆ ಚಿರತೆ ಬಿದ್ದಿದೆ.1
- ಚಾಮರಾಜನಗರ ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೆಲ್ಲಂಬಳ್ಳಿ ಸೋಮನಾಯಕ ಅವರಿಂದ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಒತ್ತಾಯ ಚಾಮರಾಜನಗರ ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೆಲ್ಲಂಬಳ್ಳಿ ಸೋಮನಾಯಕ ಅವರಿಂದ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಒತ್ತಾಯ2
- ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ ರೈತರು ವ್ಯವಸಾಯಕ್ಕೆ ಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ- ಸುಂದರ್ ರಾಜ್. ಹಲಗೂರು:- ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟ ಆಗಿರುವುದರಿಂದ ನೀರಿನ ಸರಿಯಾದ ಬಳಕೆಗೆ ನಿಮ್ಮ ಜಮೀನಿನಲ್ಲಿ ವ್ಯವಸಾಯಕ್ಕಾಗಿಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ ವಾಗಿರುತ್ತದೆ, ಎಂದು ಮಂಡ್ಯಜಿಲ್ಲಾ ಪಂಚಾಯತ್ ರೇಷ್ಮೆ ಉಪ ನಿರ್ದೇಶಕರಾದ ಡಾ.ಸುಂದರ್ ರಾಜ್ ರೈತರಿಗೆ ಸಲಹೆ ನೀಡಿದರು. ತಾಂತ್ರಿಕ ಸೇವಾ ಕೇಂದ್ರ ಡಿ. ಹಲಸಹಳ್ಳಿ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಇಲಾಖಾ ಕಾರ್ಯಕ್ರಮಗಳ ಬಗ್ಗೆ ಹಾಗೂ ಮುಂದಿನ ಆಯೋಜನೆಗಳ ಬಗ್ಗೆ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಎಲ್ಲ ರೀತಿಯಾದಂತಹ ಪರಿಹಾರವನ್ನು ನೀಡುವುದಲ್ಲದೆ ಸರ್ಕಾರಗಳಿಂದ ಹಾಗೂ ಇಲಾಖೆಯಿಂದ ಬರುವಂತಹ ಎಲ್ಲಾ ಅನುದಾನಗಳು ಸರಿಯಾದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಕೂಡಿಸಿ ಕೊಡುವುದಾಗಿ ರೈತರಿಗೆ ಭರವಸೆಯನ್ನು ನೀಡಿದರು. ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉಂಟಾಗುತ್ತಿರುವ ಹಲವಾರು ತೊಂದರೆಗಳಿಗೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿ ಮತ್ತು ರೈತರ ಹಲವಾರು ಪ್ರಶ್ನೆಗಳಿಗೆ ರೈತರೊಂದಿಗೆ ಚರ್ಚಿಸಿ ಉತ್ತರವನ್ನು ನೀಡಿದರು. ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ವಿಸ್ತರಣಾ ಉಪ ವಿಭಾಗ ಮದ್ದೂರಿನ ವಿಜ್ಞಾನಿ ಡಾ ಶಿವಕುಮಾರ್ ಮಾತನಾಡುತ್ತಾ, ರೈತರು ಬಳಸುತ್ತಿರುವ ರಾಸಾಯನಿಕ ಔಷಧಿಗಳ ಬಳಕೆ ಹಾಗೂ ಸರಿ ಪ್ರಮಾಣದ ಔಷಧಿ ಸಿಂಪಡಣೆ ಬಗ್ಗೆ ಮತ್ತು ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ದ್ವಿತಳಿ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ನಮ್ಮ ಆರ್ಥಿಕ ಲಾಭವು ಹೆಚ್ಚಾಗುವುದಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ, ನಮ್ಮಲ್ಲೇ ಬೆಳೆದ ದ್ವಿತಳಿ ರೇಷ್ಮೆ ಬೆಳೆಗೆ ಅತ್ಯುನ್ನತ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಈಗಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕತೆಗಳಲ್ಲಿ ಟ್ರೆಂಚಿಂಗ್, ಮಲ್ಚಿಂಗ್ ಮಾಡುವುದು ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವುದು ಹಾಗೂ ವೈಜ್ಞಾನಿಕವಾಗಿ ಹೊಸ ತಾಂತ್ರಿಕತೆಗೆ ಬದಲಾಗುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗೂ ಸಿ ಎಸ್ ಆರ್ ಅಂಡ್ ಟಿ ಐ ಮೈಸೂರು ರವರ ಹೊಸ ಅನ್ವೇಷಣೆಯ ಹಿಪ್ಪು ನೇರಳೆ ತಳಿಯಾದಂತಹ ಎಜಿಬಿ8 ಎಂಬುದು ಅತಿ ಹೆಚ್ಚು ಜನಪ್ರಿಯವಾಗಿ ಹಾಗೂ ಬೇರು ಕೊಳೆ ರೋಗಕ್ಕೆ ಪರ್ಯಾಯವಾಗಿ ಬೆಳೆಯಬಹುದಾಗಿದೆ, ಈ ತಳಿಯಲ್ಲಿ ನೀರನ್ನು ಅತಿ ಹೆಚ್ಚು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು ಹಿಪ್ಪು ನೇರಳೆ ಸೊಪ್ಪು ಬೇಗ ಬಾಡಿ ಹೋಗದ ರೀತಿಯಲ್ಲಿ ಇರುವುದರಿಂದ ಹಾಗೂ ಅತಿ ಹೆಚ್ಚು ಇಳುವರಿಯನ್ನು ನೀಡುತ್ತಿರುವುದರಿಂದ ಈ ಒಂದು ಹಿಪ್ಪು ನೇರಳೆ ತಳಿಯು ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮತ್ತು ಔಷಧಿ ಸಿಂಪಡಣೆಯ ಬಗ್ಗೆ ಇಲಾಖೆಯಿಂದ ಶಿಫಾರಸ್ಸು ಮಾಡಿರುವಂತಹ ಔಷಧಿಗಳನ್ನು ಮಾತ್ರ ಬಳಸುವುದು ಸೂಕ್ತ ಎಂದು ಹೇಳಿ ಹಿಪ್ಪು ನೇರಳೆ ತೋಟದಲ್ಲಿ ಔಷಧಿ ಸಿಂಪಡಣೆಯ ಬಗ್ಗೆ ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟು ತೋಟಕ್ಕೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷತೆಯ ಮುಖಾಂತರ ರೈತರಿಗೆ ಮನದಟ್ಟು ಮಾಡಿಸಿದರು. ಕೆ ಆರ್ ಪೇಟೆಯ ರೇಷ್ಮೆ ತರಬೇತಿ ಸಂಸ್ಥೆ ಪ್ರಾಚಾರ್ಯರಾದಂತಹ ಡಿ.ಸೋಮಣ್ಣ ಮಾತನಾಡಿ,ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಬಳಸಿ ಸಾವಯವ ಗೊಬ್ಬರ ವನ್ನು ಬಳಸಿ ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಸರಿಯಾದ ರೀತಿಯ ಗಾಳಿ ಸಂಚಾರ ಹಾಗೂ ಬೆಳಕು ಅತ್ಯಾವಶ್ಯಕ. ಹಾಗೇನೇ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಶೇಖರಣೆಯಾಗುವ ಹಾಸಿಗೆ ಕಸದಿಂದ ಉತ್ಕೃಷ್ಟವಾದ ಗೊಬ್ಬರವನ್ನು ತಯಾರಿಸಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ರೇಷ್ಮೆ ಗೂಡಿನ ಇಳುವರಿಯು ಕೂಡ ಹೆಚ್ಚಾಗಿ ರೈತರಿಗೆ ಆರ್ಥಿಕವಾಗಿ ಲಾಭವನ್ನು ನೀಡುತ್ತದೆ. ಮಣ್ಣಿನ ಫಲವತ್ತತೆಯಿಂದ ನಮ್ಮ ಮುಂದಿನ ಪೀಳಿಗೆಗೆ ಈ ಒಂದು ಮಣ್ಣನ್ನು ವರದಾನವಾಗಿ ನಾವು ನೀಡಬೇಕಾಗಿದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಹಲವಾರು ರೀತಿಯ ರೇಷ್ಮೆ ಹಾಗೂ ಇನ್ನಿತರ ಕೃಷಿಯಲ್ಲಿ ಬೇರು ಕೊಳೆ ರೋಗ ಹಾಗೂ ಬೇರು ಗಂಟು ರೋಗ ಅದಲ್ಲದೆ ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಕೂಡ ಕಡಿಮೆಯಾಗಿ ಹಲವಾರು ರೀತಿಯಾದಂತಹ ರೋಗಗಳಿಗೆ ಹಾಗೂ ಕೀಟ ಬಾದೆಗಳಿಗೆ ತುತ್ತಾಗುತ್ತದೆ ಎಂದು ರೇಷ್ಮೆ ಬೆಳೆಗಾರರಿಗೆ ಮಣ್ಣಿನ ಫಲವತ್ತತೆಯ ಬಗ್ಗೆ ಮನದಟ್ಟು ಮಾಡಿದರು. ನಂತರದಲ್ಲಿ ಕಾರ್ಯಕ್ರಮದಲ್ಲಿ ಮಳವಳ್ಳಿ ರೇಷ್ಮೆ ಸಹಾಯಕ ನಿರ್ದೇಶಕ ಎ. ಬಿ. ರವಿ, ರೇಷ್ಮೆ ವಿಸ್ತರಣಾಧಿಕಾರಿ ಎಸ್.ವಿ. ನರಸಿಂಹಮೂರ್ತಿ,ಆಶಾ, ಹೆಚ್.ಜಿ,ಕುಮಾರಿ , ಟಿ.ಆರ್. ಪೂಜಾ, ರೇಷ್ಮೆ ನಿರೀಕ್ಷಕ ಬಿ.ಆರ್ ಕಿರಣ್, ಎಂ.ನವೀನ್, ಉದಯಶಂಕರ್ ಹಾಗೂ ಕೋಡಿಪುರ ಗ್ರಾಮದ ಎಲ್ಲಾ ರೇಷ್ಮೆ ಬೆಳೆಗಾರರು ಇದ್ದರು. ಕೋಡಿಪುರ ಗ್ರಾಮದಲ್ಲಿ ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಮತ್ತು ತರಬೇತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ರೈತರು ಮತ್ತು ಅಧಿಕಾರಿಗಳು ಇದ್ದಾರೆ.1
- ರೈತರ ಚಿನ್ನ ವಾಪಸ್ ಕೊಡಿಸುವಂತೆ ಆಗ್ರಹಿಸಿ : ನಗರದಲ್ಲಿ ರೈತರ ಪ್ರತಿಭಟನೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೊಳ್ಳೇಗಾಲದಜ ಸಾಫ್ ಫೈನಾನ್ಸ್ ಬ್ಯಾಂಕ್ ನಲ್ಲಿ ಗಿರಿವಿ ಇಟ್ಟಿರುವ ರೈತರ ಚಿನ್ನವನ್ನು ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ನಲ್ಲಿ. ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರಿವಿ ಇಟ್ಟಿದ್ದ ಚಿನ್ನವನ್ನು ಅನಧಿಕೃತವಾಗಿ ಕೊಳ್ಳೇಗಾಲದ ಇ ಸಾಫ್ ಫೈನಾನ್ಸ್ ಬ್ಯಾಂಕ್ ಗೆ ವರ್ಗಾಯಿಸಿಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು1