Shuru
Apke Nagar Ki App…
ಜನವರಿ 3ರಂದು ಶ್ರೀ ರಾಮಲಿಂಗೇಶ್ವರಸ್ವಾಮಿ ವೈಭವದ ಬ್ರಹ್ಮರಥೋತ್ಸವ...! ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲು ತಹಸೀಲ್ದಾರ್ ಗಗನ ಸಿಂಧು ಮನವಿ!
NAYAN NEWS
ಜನವರಿ 3ರಂದು ಶ್ರೀ ರಾಮಲಿಂಗೇಶ್ವರಸ್ವಾಮಿ ವೈಭವದ ಬ್ರಹ್ಮರಥೋತ್ಸವ...! ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲು ತಹಸೀಲ್ದಾರ್ ಗಗನ ಸಿಂಧು ಮನವಿ!
More news from ಕರ್ನಾಟಕ and nearby areas
- ಹನೂರು: ತಾಲೂಕಿನ ಮೂರು ಪೊಲೀಸ್ ಠಾಣೆಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ತಮ್ಮ ಅನುದಾನದಲ್ಲಿ ತಲಾ ಒಂದರಂತೆ ಗಸ್ತು ವಾಹನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ ಅವರ ಮುಖಾಂತರ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಹನೂರು ಪಟ್ಟಣ, ರಾಮಾಪುರ ಹಾಗೂ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗಸ್ತು ವಾಹನಗಳು ಮಹತ್ವದ ಪಾತ್ರ ವಹಿಸುತ್ತವೆ. ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದ್ದು, ಪೊಲೀಸ್ ಇಲಾಖೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.1
- ಚಾಮರಾಜನಗರ ನ್ಯೂಸ್ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಪೀಳಿಗೆಯ ಜಾಗೃತಿ, ಉಪನ್ಯಾಸ ಸಂವಾದ ಕಾರ್ಯಕ್ರಮ........ ‘ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಕಿರಿಯರಿಗೆ ತುಂಬಾ ಅವಶ್ಯಕ, ಅದನ್ನು ಸದಪಯೋಗ ಮಾಡಿಕೊಳ್ಳಬೇಕು’ ಎಂದು ಹಿರಿಯ ನಾಗರಿಕರ ಸಹಾಯವಾಣಿ ಸಂಪನ್ಮೂಲ ಅಧಿಕಾರಿ. ಪ್ರಕಾಶ್ ಹೇಳಿದರು. ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಹಿರಿಯ ಸ್ವಯಂಸೇವಕ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಪೀಳಿಗೆಯ ಜಾಗೃತಿ, ಉಪನ್ಯಾಸ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಾಗೆಯೇ ಹಿರಿಯರ ಜೀವನ ಉತ್ತಮವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಕಿರಿಯರು ನಿರ್ವಹಿಸಬೇಕು’ ಹಿರಿಯ ನಾಗರಿಕರಿಗೆ ಇರುವ ಸರ್ಕಾರದ ಸೌಲಭ್ಯ ಹಾಗೂ ಕಾನೂನುಗಳ ವಿಚಾರವನ್ನು ವಿದ್ಯಾರ್ಥಿಗಳಿಗೆ ತಿಳಿದು ಹಿರಿಯರಿಗೆ ತಲುಪಿಸಲು ಕ್ರಮವಹಿಸಬೇಕು’ ಎಂದು ಹೇಳಿದರು. ನಂತರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪ ಪ್ರಾಂಶುಪಾಲ ಆರ್. ನಂಜುಂಡಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿ ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಕಿರಿಯರಿಗೆ ತುಂಬಾ ಅವಶ್ಯಕ, ಅದನ್ನು ಸದಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರ ಸಹಾಯ ವಾಣಿ ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪ ಪ್ರಾಂಶುಪಾಲ ಆರ್. ನಂಜುಂಡಯ್ಯ,ಚಂದಕವಾಡಿ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿ ಟಿ.ಚಂದ್ರಶೇಖರ. ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ ಎಸ್. ಪುಟ್ಟಸ್ವಾಮಿಹೊನ್ನೂರು3
- *ಭಾರತ ನಲ್ಲಿ ವೈರಲ್*1
- ಚಳ್ಳಕೆರೆ :ಕಾಡುಗೊಲ್ಲರ ಆರಾಧ್ಯ (ಕೇತೇದೇವರ ಜಾತ್ರೋತ್ಸವ) ಕ್ಯಾತಪ್ಪನ ದೈವ ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರ ಜಾತ್ರೆಯು ಡಿ.೧೮ ರಿಂದ ಜ.೯ರ ನಡೆಯುವ (ಕೇತೇದೇವರ ಜಾತ್ರೋತ್ಸವ) ಜಾತ್ರೆಯು ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ನಡೆಯುವ ಅತಿದೊಡ್ಡ ಜಾತ್ರೆಯಾಗಿದೆ.ಈ ದೇವರ ಪರೀಷೆ ಈ ಭಾಗದ ಬುಡಕಟ್ಟು ಸಮುದಾಯಗಳಿಗೆ ಸಂಸ್ಕೃತಿ ಆಚರಣೆಯನ್ನು ಎತ್ತಿ ತೋರುವ ಜಾತ್ರೆಗಳಲ್ಲಿ ಒಂದಾಗಿದೆ. ಚಿತ್ರದುರ್ಗ ಜಿಲ್ಲೆಯ ತಾಲ್ಲೂಕಿನ ಪುರ‍್ಲೆಹಳ್ಳಿಯ ವಸಲು ದಿನ್ನೆಬ್ಬದಲ್ಲಿ ನಡೆಯುವ ಜಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಪಾರಂಪರಿಕವಾಗಿ ಆಚರಣೆಯಲ್ಲಿರುವ ಸಂಪ್ರದಾಯಗಳನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಆಧುನಿಕತೆಯ ಭರಾಟೆಯಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ನಡೆಯುತ್ತದೆ... ಒಟ್ಟಾರೆಯಾಗಿ ಸಾಂಪ್ರದಾಯಿಕ ಆಚರಣೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುವ ಸಂದರ್ಭದಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡಕಟ್ಟು ಸಮುದಾಯದ ಕಾಡುಗೊಲ್ಲರು ವಿಶಿಷ್ಟ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಎನ್ನಬಹುದಾಗಿದೆ... ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದಿಂದ ಕೂಡಿದೆ. ಈ ದೇವರ ಜಾತ್ರೆಗೆ ನೆರೆ ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸುವುದು ಮತ್ತೊಂದು ವಿಶೇಷವಾಗಿದೆ... ಚನ್ನಮ್ಮನಾಗತಿಹಳ್ಳಿಯ ಕೇತೇ ದೇವಸ್ಥಾನದಿಂದ ಕಳಶ ಹೊತ್ತು ತಂದು ಎರದ(ಬಾರೆ),ಬಂದ್ರೆ, ಬ್ಯಾಟೆ,ತುಗ್ಗಲಿ ಇತ್ಯಾದಿ ಕಳ್ಳೆ ಮುಳ್ಳುಗಳಿಂದ ಸಿದ್ದ ಮಾಡಿದ ಕ್ಯಾತಪ್ಪನ ಗುಡಿಯ ಮೇಲೆ ಕೊಣನ ಗೊಲ್ಲ ಮತ್ತು ಬೊಮ್ಮನ ಗೊಲ್ಲರ ಅಣ್ಣತಮ್ಮಂದಿರ ಒಬ್ಬಬ್ಬರನ್ನು ಆಯ್ಕೆ ಮಾಡಿ ಕಳಶ ಇಡಲು ಅವಕಾಶ ನೀಡಲಾಗುತ್ತದೆ.ಇಲ್ಲಿ ದೇವರಿಗೆ ಸಂಬಂದಿಸಿದ ಹಲವಾರು ರೀತಿಯ ಪೂಜಾ ವಿಧಾನಗಳು ವಿಶೇಷವಾಗಿ ನಡೆಯುತ್ತವೆ .. ಇಂದು ಬಾರೆ ಕಳ್ಳೆ ಗುಡಿ ನಿರ್ಮಾಣ ಕಾರ್ಯ ಸಂಭ್ರಮದಿಂದ ಜರುಗಿತು...1
- ಜಾಮೀನು ಬಳಿಕ ಕೆ ಸಿ ವೀರೇಂದ್ರ ಪಪ್ಪಿ ಹೇಳಿದ್ದೇನು1
- ಪಟ್ಟಣದಲ್ಲಿನ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಜ್ಯೂವೆಲ್ಲರಿ ಅಂಗಡಿಗಳಿಗೆ ಮಾನ್ವಿ ಪೊಲೀಸ್ ಠಾಣೆಯ ಎಎಸ್‌ಐ ಶಿವಲಿಂಗಪ್ಪ ಅವರು ಭೇಟಿ ನೀಡಿ ಜಾಗೃತಿ ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ರಾಜಸ್ಥಾನ ಹಾಗೂ ಉತ್ತರಪ್ರದೇಶ ಮೂಲದ ಎರಡು ವಿಭಿನ್ನ ಕಳ್ಳರ ತಂಡಗಳು ಆಭರಣ ಮಳಿಗೆಗಳಲ್ಲಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ಅಮೂಲ್ಯ ಆಭರಣಗಳನ್ನು ಕಳ್ಳತನದಿಂದ ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.1
- ಹನೂರು ತಾಲೂಕಿನ ಮಲೆಮಹದೇಶ್ವರವನ್ಯಧಾನವನ್ನು ಹುಲಿ ಯೋಜನೆಗೆ ಸೇರಿಸುವಂತೆ ಮತ್ತೆ ಮುನ್ನಲೆಗೆ ಬರುತ್ತಾ ಇದೆ ಇದ್ದಕ್ಕೆ ಇತಿಶ್ರೀ ಹಾಡಬೇಕು ಎಂದು ಮಾಜಿ ಶಾಸಕ. ಆರ್ ನರೇಂದ್ರ ತಿಳಿಸಿದರು ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ತಾಲೂಕಿನ ಆದಿವಾಸಿ ಸಮುದಾಯದ ಹಾಡಿಗಳಿಗೆ ವಿದ್ಯುತ್ ನೀಡಲು ಮುಂದಾಗಿದ್ದರೂ ಅರಣ್ಯ ಇಲಾಖೆಯ ಕಾನೂನುನಿಂದ ಸಮಸ್ಯೆಯಾಗಿದೆ ನಮ್ಮ ತಾಲೂಕಿನ ಎಲ್ಲಾ ಆದಿವಾಸಿಗಳು ಜನರ ಗ್ರಾಮಗಳಿಗೆ ವಿದ್ಯುತ್ಚ ಸೌಕರ್ಯಕ್ಕಾಗಿ ನಮ್ಮ 20ವರ್ಷಗಳಿಂದಲೂವ ಹೋರಾಟ ವ್ಯರ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಅವರ ನಮ್ಮ ನಮ್ಮ ದೊಡ್ಡಪ್ಪ ಜೀವಿ ಗೌಡ ತಂದೆ ರಾಜುಗೌಡನಿಮ್ಮ ಸಮುದಾಯದ ಜನರ ಏಳಿಗೆಗಾಗಿ ನಮ್ಮ ಕುಟುಂಬ ಶ್ರಮಿಸಿದ್ದು ನಾನು ಕೂಡ ನಿಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದವೆ ಮುಂದೆ ಕೂಡ ನಮ್ಮ ಕುಟುಂಬ ನಿಮ್ಮ ಸೇವೆಗಾಗಿ ಬದ್ಧರಾಗಿರುತ್ತದೆ ಎಂದು ತಿಳಿಸಿದರು1
- ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ರವೀಂದ್ರರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ರವೀಂದ್ರರವರು ಭೇಟಿ ನೀಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್ , ಕಂಪ್ಯೂಟರ್ ಆಪರೇಟರ್ ಅವರ ಜೊತೆ ಸಮಾಲೋಚನೆ ನಡೆಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಡ್ಡಾಯವಾಗಿ ಮನೆ ಕಂದಾಯ ನೀರಿನ ಕಂದಾಯ ವಸಲಾತಿ ಮಾಡಿಸಬೇಕು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ಗ್ರಾಮ ಪಂಚಾಯಿತಿಗೆ ಅಗತ್ಯ ಕಂದಾಯ ವಸೂಲಾತಿ ಮಾಡುವ ಮೂಲಕ ನೌಕರಿಗೆ ಸಂಬಳ ನೀಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ ನರೇಗಾ ಯೋಜನೆ ಕಾಮಗಾರಿ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಶಿಸ್ತು ಕ್ರಮ ಷ್ಟು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವಣ್ಣ, ಬಿಲ್ ಕಲೆಕ್ಟರ್ ಗೋವಿಂದರಾಜ್, ಕಂಪ್ಯೂಟರ್ ಆಪರೇಟರ್ ಉಷಾ, ಸೇರಿದಂತೆ ಸಾರ್ವಜನಿಕರು, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಹಾಜರಿದ್ದರು. ವರದಿ. ಎಸ್..ಪುಟ್ಟಸ್ವಾಮಿಹೊನ್ನೂರು.3
- *ಭಾರತ ನಲ್ಲಿ ವೈರಲ್*1