Arkalgud : ಎಬಿಎಂ ಹಳ್ಳಿ ಶೆಡ್ ಗಳ ತೆರವು ವಿವಾದ ; ಖುದ್ದು ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಲತಾಕುಮಾರಿ | News5Kannada ಅರಕಲಗೂಡು ತಾಲೂಕಿನ ಅಬ್ಬೂರು ಮಾಚಗೋಡನ ಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಗ್ರಾಮದಲ್ಲಿ ತಾಲೂಕು ಆಡಳಿತ ಕೈಗೊಂಡಿರುವ ಅನಧಿಕೃತ ಶೆಡ್ ತೆರವು ಕಾರ್ಯಚರಣೆ ಕುರಿತು ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು. ಗ್ರಾಮದ ಸರಕಾರಿ ಗೋಮಾಳ ಜಾಗದಲ್ಲಿ ಅನಧಿಕೃತ ಶೇಡ್ ಗಳನ್ನು ತೆರವುಗೋಳಿಸಿರುವ ಸ್ಥಳವನ್ನು ಸಹ ಅವರು ವೀಕ್ಷಣೆ ಮಾಡಿದರು. ಅಲ್ಲದೆ ಜಾಗಕ್ಕೆ ಸಂಬಂಧ ಪಟ್ಟ ತಕರಾರು ಹಾಗೂ ಹಕ್ಕು ಪತ್ರ ಹೊಂದಿರುವವರನ್ನು ಪ್ರತ್ಯೇಕವಾಗಿ ಆಹ್ವಾನಿಸಿ ಆಹವಾಲು ಅಳಿಸಿದರು. ತಾಲೂಕು ಆಡಳಿತ ತೆರವುಗೊಳಿಸಿರುವ ಸ್ಥಳವನ್ನು ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ ಮತ್ತು ಹಕ್ಕು ಪತ್ರವನ್ನು ಹೊಂದಿರುವವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗ್ರಾಮದ ಕೆಲವರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಈ ಸಲುವಾಗಿ ಜಿಲ್ಲಾಧಿಕಾರಿಯವರ ಭೇಟಿ ಮಹತ್ವ ಪಡೆದುಕೊಂಡಿದೆ. #HassanDC #Abmhalli #Arkalgud #News5Kannada

- User4883Andalgi🙏5 days ago
- User4883Andalgi😂5 days ago
- User6347Raichur, Karnataka🙏on 19 April
- ಕಡೂರು (ಬೀರೂರು): ಬೇಸಿಗೆ ರಜೆ ಹಿನ್ನೆಲೆಯಲ್ಲಿ ಊರಿಗೆ ಕಳಿಸಲಿಲ್ಲ ಎಂಬ ಸಣ್ಣದೊಂದು ಗಲಾಟೆಯ ನಡುವೆ ಪೊಲೀಸ್ ಅಧಿಕಾರಿಯ ಪತ್ನಿ ಮನನೊಂದು ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬೀರೂರು ಪಟ್ಟಣದ ಪೊಲೀಸ್ ಠಾಣೆಯ ಪಿಎಸೈ ಡಿ.ವಿ. ತಿಪ್ಪೇಶ್ ಅವರ ಪತ್ನಿ ಪದ್ಮ(35) ಮೃತ ದುರ್ದೈವಿಯಾಗಿದ್ದು. ಬೀರೂರು ಪಟ್ಟಣದ ರಾಜಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂಲತಃ ತುಮಕೂರು ಜಿಲ್ಲೆಯವರಾದ ಪದ್ಮ ಮತ್ತು ದಾವಣಗೆರೆ ಮೂಲದ ತಿಪ್ಪೇಶ್ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಗೆ ಶಾಲೆ ರಜೆಯಿದ್ದು ಊರಿಗೆ ಕಳಿಸುವಂತೆ ಪತಿ ಪಿಎಸ್ಐ ತಿಪ್ಪೇಶ್ ಗೆ ಹೇಳಿದ್ದರು. ಮಕ್ಕಳಿಗೆ ಬೇಸಿಗೆ ರಜೆ ಇರೋದ್ರಿಂದ ಊರಿಗೆ ಹೋಗ್ತೀನಿ ಎಂದಿದ್ದರು. ಆದರೆ, ಪತಿ ತಿಪ್ಪೇಶ್ ನೈಟ್ ಡ್ಯೂಟಿ ಇದೆ. ನಾಳೆ ಹೋಗುವಂತೆ ಎಂದು ತಿಳಿ ಹೇಳಿದ್ದರು. ಅಷ್ಟಕ್ಕೆ ಮಾತಿಗೆ ಮಾತು ಬೆಳೆದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ದಂಪತಿಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪತಿ ಮಕ್ಕಳನ್ನ ಊರಿಗೆ ಕಳಿಸಲಿಲ್ಲವೆಂದು ಆಕ್ರೋಶಗೊಂಡ ಪದ್ಮ ಕಳೆದ ರಾತ್ರಿ 12 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ರೋಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಕೌಟುಂಬಿಕವಾಗಿ ಸಣ್ಣದೊಂದು ವಿಚಾರದ ಮಾತಿನ ಚಕಮಕಿಯಿಂದಾಗಿ ತನ್ನ ಜೀವವನ್ನೇ ಬಲಿಕೊಟ್ಟಿರುವ ಪದ್ಮಾ ಅವರ ಆತ್ಮಹತ್ಯೆಯ ನಿರ್ಧಾರದ ಧಾರುಣ ಘಟನೆಯ ಬಗ್ಗೆ ಪೊಲೀಸ್ ಸಿಬ್ಬಂದಿಗಳು ಮತ್ತು ನಾಗರೀಕರು ಮಮ್ಮುಲ ಮರುಗಿದರು. ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.2
- *ಭಾರತ ನಲ್ಲಿ ವೈರಲ್*1
- "ಸ್ವಚ್ಛತೆ ಎಲ್ಲಿ? ಮೈಸೂರು ಮಹಾನಗರ ಪಾಲಿಕೆ ಗಮನಕ್ಕೆ..." ಮೈಸೂರಿನ ಕೆ.ಎನ್ ಪುರ (KN Pura) ವ್ಯಾಪ್ತಿಯ ಹೆಚ್.ಸಿ.ಜಿ ರಸ್ತೆಯಲ್ಲಿರುವ ರಾಜಕಾಲುವೆ/ಚರಂಡಿಯಲ್ಲಿ ಗಿಡಗಂಟಿಗಳು ಕಾಡಿನಂತೆ ಬೆಳೆದು ನಿಂತಿವೆ. ಇದರಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ಹಾವುಗಳು ನುಗ್ಗುವ ಭೀತಿ ಎದುರಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಮಕ್ಕಳು ಆತಂಕದಲ್ಲಿದ್ದಾರೆ. ಬೇಸಿಗೆಯ ಸಮಯವಾಗಿರುವುದರಿಂದ ಹಾವುಗಳ ಕಾಟ ಹೆಚ್ಚಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಗಿಡಗಳನ್ನು ತೆರವುಗೊಳಿಸಿ ಚರಂಡಿ ಸ್ವಚ್ಛಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.1
- ಡಿ.ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠಕ್ಕೆ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ ಆಗಮನ- ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದ ಶ್ರೀಗಳು. * ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ಕಣ್ಮನ ಸೆಳೆದ ವಿದ್ಯುತ್ ದೀಪ ಅಲಂಕಾರ . * * ಹಲಗೂರು ಬೆಂಗಳೂರು ಮುಖ್ಯ ರಸ್ತೆಯಿಂದ ಗವಿಮಠದವರೆಗೂ ಆಕರ್ಷಕ ವಿದ್ಯುತ್ ಅಲಂಕಾರ. * ವಿಮಾನ ಗೋಪುರ ಕಳಸರೋಹಣ ಹಾಗೂ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಹರ ಗುರು ಚರಮೂರ್ತಿಗಳಿಂದ ವಿದ್ಯುಕ್ತ ಚಾಲನೆ * ಶ್ರೀ ಷಡಕ್ಷರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಡುಗೂರು ಅಡವಿ ಮಠದ ಶ್ರೀ ಶಿವಲಿಂಗಂದ್ರ ಸ್ವಾಮಿಗಳು, ಸರ ಗುರು ಪಡುವಲು ಮಠದ ಶ್ರೀ ಮಾದೇವಸ್ವಾಮಿಗಳು ,ಕಂಚುಗಲ್ಲು ಬಂಡೆಮಠದ ಶ್ರೀ ಬಸವಲಿಂಗ ಸ್ವಾಮಿಗಳು, ತೋಟಹಳ್ಳಿ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರಿಂದ ಕಳಸಾ ರೋಣ ಮತ್ತು ಕುಂಭಾಭಿಷೇಕ ಐತಿಹಾಸಿಕ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ನಾಡಿನ ಹಲವಡೆಯಿಂದ ಭಕ್ತರ ಆಗಮನ ಆಗಮಿಸಿದ ಸಕಲ ಭಕ್ತರಿಗೂ ನಾಲ್ಕು ದಿನಗಳು ಸಹ ವ್ಯವಸ್ಥಿತ ಪ್ರಸಾದ ವಿನಿಯೋಗ1
- ವಿಧ್ಯಾರ್ಥಿಗಳ ಸನಸ್ಯೆ ಗಳನ್ನು ಬಗೆಹರಿಸುವಂತೆ ವಿಶ್ವವಿದ್ಯಾಲಯದ ಗಮನಕ್ಕೆ ಸಕಾಷ್ಟುಬಾರಿ ತಂದರು ಸ್ಪಂದಿಸದೇ ವಿದ್ಯಾರ್ಥಿ ವಿರೋದಿ ನೀತಿ ತೋರುತ್ತಿರುವ ಕುಲಪತಿಗಳ ವಿರುದ್ದ ಹೋರಾಟ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿತು.2
- ದ್ವಿತೀಯ ಪಿಯುಸಿ ಪರೀಕ್ಷೆ - 2 ರ ಪರೀಕ್ಷೆಗಳು ಎಪ್ರಿಲ್ 30 ರಿಂದ ಮೇ 13 ರವರೆಗೆ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಶಾಂತಿಯುತವಾಗಿ, ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತಲಿನ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಉಪಪೋಲಿಸ್ ಆಯುಕ್ತ ಮಿಥುನ್ ಹೆಚ್.ಎನ್ ಆದೇಶಿಸಿದ್ದಾರೆ.1
- ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ. ಇನ್ನು ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ ತಿಳಿ ಹೇಳಿದರು ಜಗಳ ನಿಲ್ಲಸದ ಮಹಿಳೆಯರು.1
- *ಭಾರತ ನಲ್ಲಿ ವೈರಲ್*1