ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಸಮೀಪ 10ಅಡಿ ಉದ್ದದ ಹೆಬ್ಬಾವು ರಕ್ಷಣೆ. ಗಾಣಾಳು ಸಮೀಪ 10ಅಡಿ ಉದ್ದದ ಹೆಬ್ಬಾವು ರಕ್ಷಣೆ. ಹಲಗೂರು:- ಸಮೀಪದ ಗಾಣಾಳು ಗ್ರಾಮದ ಜಮೀನೊಂದರಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಕೃಷ್ಣ ಹಿಡಿದು ಅರಣ್ಯ ಇಲಾಖೆ ಸಮ್ಮುಖದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ. ಮೂಲತಹ ಗಾಣಾಳು ಗ್ರಾಮದ ವಾಸಿ ಹಾಗೂ ತೋಟದ ಮೇಲ್ವಿಚಾರಕರಾದ ಶ್ರೀನಿವಾಸ್ ಮಾತನಾಡಿ, ನಮ್ಮ ಜಮೀನಿನ ಕೃಷಿ ಹೊಂಡದ ಬಳಿ ಇರುವ ಪೊದೆಯೊಂದರಲ್ಲಿ ನಮ್ಮ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರು ಹೆಬ್ಬಾವನ್ನುನೋಡಿದ ತಕ್ಷಣ ಹೆದರಿ ಓಡಿ ಬಂದರು. ತಕ್ಷಣ ನಾನು ಉರುಗ ತಜ್ಞ ಕೃಷ್ಣಾರಿಗೆ ವಿಷಯ ತಿಳಿಸಿದೆ ಮೇರೆಗೆ ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಬಿಟ್ಟಿರುತ್ತಾರೆ ಎಂದು ತಿಳಿಸಿದರು. ಉರಗ ತಜ್ಞ ಕೃಷ್ಣ ಮಾತನಾಡಿ, ನಮ್ಮ ಜಗದೀಶ ಮತ್ತು ನಾನು ಇದುವರೆಗೂ ಹಲಗೂರು ವ್ಯಾಪ್ತಿಯಲ್ಲಿ ಸುಮಾರು 15 ಹೆಬ್ಬಾವುಗಳ ಹಿಡಿದು ಅರಣ್ಯಕ್ಕೆ ಬಿಟ್ಟಿರುತ್ತೇವೆ. ಯಾರಾದರೂ ಯಾವುದೇ ತರಹದ ಹಾವುಗಳನ್ನು ಕಂಡರೆ ಅದನ್ನು ಹೊಡೆಯಬೇಡಿ ತಕ್ಷಣ ನಮಗೆ ವಿಷಯ ತಿಳಿಸಿದರೆ ನಾವು ಬಂದು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತೇವೆ ಎಂದು ಮನವಿ ಮಾಡಿದರು. ಹಲಗೂರು ಸಮೀಪ ಹೆಬ್ಬಾವು ರಕ್ಷಣೆ ಮಾಡಿದ ಉರುಗ ತಜ್ಞ.
ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಸಮೀಪ 10ಅಡಿ ಉದ್ದದ ಹೆಬ್ಬಾವು ರಕ್ಷಣೆ. ಗಾಣಾಳು ಸಮೀಪ 10ಅಡಿ ಉದ್ದದ ಹೆಬ್ಬಾವು ರಕ್ಷಣೆ. ಹಲಗೂರು:- ಸಮೀಪದ ಗಾಣಾಳು ಗ್ರಾಮದ ಜಮೀನೊಂದರಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಕೃಷ್ಣ ಹಿಡಿದು ಅರಣ್ಯ ಇಲಾಖೆ ಸಮ್ಮುಖದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ. ಮೂಲತಹ ಗಾಣಾಳು ಗ್ರಾಮದ ವಾಸಿ ಹಾಗೂ ತೋಟದ ಮೇಲ್ವಿಚಾರಕರಾದ ಶ್ರೀನಿವಾಸ್ ಮಾತನಾಡಿ, ನಮ್ಮ ಜಮೀನಿನ ಕೃಷಿ ಹೊಂಡದ ಬಳಿ ಇರುವ ಪೊದೆಯೊಂದರಲ್ಲಿ ನಮ್ಮ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರು ಹೆಬ್ಬಾವನ್ನುನೋಡಿದ ತಕ್ಷಣ ಹೆದರಿ ಓಡಿ ಬಂದರು. ತಕ್ಷಣ ನಾನು ಉರುಗ ತಜ್ಞ ಕೃಷ್ಣಾರಿಗೆ ವಿಷಯ ತಿಳಿಸಿದೆ ಮೇರೆಗೆ ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಬಿಟ್ಟಿರುತ್ತಾರೆ ಎಂದು ತಿಳಿಸಿದರು. ಉರಗ ತಜ್ಞ ಕೃಷ್ಣ ಮಾತನಾಡಿ, ನಮ್ಮ ಜಗದೀಶ ಮತ್ತು ನಾನು ಇದುವರೆಗೂ ಹಲಗೂರು ವ್ಯಾಪ್ತಿಯಲ್ಲಿ ಸುಮಾರು 15 ಹೆಬ್ಬಾವುಗಳ ಹಿಡಿದು ಅರಣ್ಯಕ್ಕೆ ಬಿಟ್ಟಿರುತ್ತೇವೆ. ಯಾರಾದರೂ ಯಾವುದೇ ತರಹದ ಹಾವುಗಳನ್ನು ಕಂಡರೆ ಅದನ್ನು ಹೊಡೆಯಬೇಡಿ ತಕ್ಷಣ ನಮಗೆ ವಿಷಯ ತಿಳಿಸಿದರೆ ನಾವು ಬಂದು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತೇವೆ ಎಂದು ಮನವಿ ಮಾಡಿದರು. ಹಲಗೂರು ಸಮೀಪ ಹೆಬ್ಬಾವು ರಕ್ಷಣೆ ಮಾಡಿದ ಉರುಗ ತಜ್ಞ.
- ಮಳವಳ್ಳಿ ತಾಲೂಕಿನ ಗಾಜುನೂರಿನಲ್ಲಿ ಹಗಲಿನಲ್ಲೇ ಚಿರತೆ ದಾಳಿ ಮೇಕೆ ಬಲಿ ಗ್ರಾಮಸ್ಥರಲ್ಲಿ ಆತಂಕ ಮಳವಳ್ಳಿ ತಾಲೂಕಿನ ಗಾಜುನೂರಿನಲ್ಲಿ ಹಗಲಿನಲ್ಲೇ ಚಿರತೆ ದಾಳಿ ಮೇಕೆ ಬಲಿ ಗ್ರಾಮಸ್ಥರಲ್ಲಿ ಆತಂಕ ಮಳವಳ್ಳಿ ತಾಲೂಕಿನ ಗಾಜನೂರು ಗ್ರಾಮದಲ್ಲಿ ಹಾಡುಹಗಲಿನಲ್ಲೇ ಚಿರತೆ ದಾಳಿ ಮಾಡಿ ಮೇಕೆಯನ್ನು ಬಲಿ ತೆಗೆದುಕೊಂಡಿರುವ ಘಟನೆ ಮಂಗಳವಾರ ಮಧ್ಯಾನ ಜರುಗಿದೆ . ಗಾಜನೂರು ಗ್ರಾಮದ ಮಾದೇವು ಎಂಬುವರಿಗೆ ಸೇರಿದ ಸುಮಾರು 10,000 ಮೌಲ್ಯದ ಮೇಕೆಯನ್ನು ಚಿರತೆ ದಾಳಿ ಮಾಡಿ ಸಾಯಿಸಿದ್ದು ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ ಹೋಗಲು ಆ ರಸ್ತೆಗಳಲ್ಲಿ ಸಂಚಾರ ಮಾಡಲು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ . ಕೂಡಲೇ ಅರಣ್ಯ ಇಲಾಖೆ ಚಿರುತಿಯನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಜನರ ರಕ್ಷಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಈ ಸಂದರ್ಭದಲ್ಲಿ ರೈತ ಮಾದೇವ ಮಾತನಾಡಿ ನಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಯ ದಾಳಿ ಹೆಚ್ಚಾಗಿದೆ ಮಳೆ ಬೆಲೆ ಇಲ್ಲದೆ ಜನರು ತತ್ತರಿಸಿದ್ದಾರೆ ಕನಿಷ್ಠ ಸಾಕು ಪ್ರಾಣಿಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಈ ರೀತಿಯ ಚಿರತೆ ದಾಳಿಯಿಂದ ತುಂಬಾ ಹಾನಿಯಾಗಿದೆ ನಷ್ಟವಾಗಿದೆ ಹಾಗೂ ಸಂಚರಿಸಲು ಆತಂಕ ಉಂಟಾಗಿದೆ ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಂಡು ರೈತರ ರಕ್ಷಣೆ ಮಾಡುವಂತೆ ಹಾಗೂ ಬಲಿಯಾದ ಮೇಕಿಗೆ ಪರಿಹಾರ ನೀಡುವಂತೆ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು1
- ಕೌದಳ್ಳಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಭಾವೈಕ್ಯತೆ ಮೆರೆದ ಸೌಹಾರ್ದ ಮೆರವಣಿಗೆ ಹನೂರು:ತಾಲೂಕಿನ ಕೌದಳ್ಳಿ ಗ್ರಾಮದ ಮುಸ್ಲಿಂ ಬಾಂಧವರ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ 'ಈದ್ ಮಿಲಾದ್' ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಗ್ರಾಮದ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಕುರಾನ್ ಪಠಣ ಮತ್ತು ಪ್ರವಾದಿಯವರ ಜೀವನ ಸಂದೇಶಗಳ ಕುರಿತು ಧರ್ಮೋಪದೇಶ ಕಾರ್ಯಕ್ರಮಗಳು ಜರುಗಿದವು. ಸೌಹಾರ್ದ ಮೆರವಣಿಗೆ ಬಳಿಕ ಬಣ್ಣ ಬಣ್ಣದ ದೀಪಗಳು, ತೋರಣಗಳು ಮತ್ತು ಧ್ವಜಗಳಿಂದ ಅಲಂಕೃತಗೊಂಡಿದ್ದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕರು ಮತ್ತು ಮಕ್ಕಳು ಪ್ರವಾದಿಯವರ ಶಾಂತಿ, ಪ್ರೀತಿ, ಸಹೋದರತೆಯ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಭಾವೈಕ್ಯತೆಯ ಸಂಕೇತ ಗ್ರಾಮದ ವಿವಿಧ ಧರ್ಮಗಳ ಮುಖಂಡರು, ಹಿಂದೂ-ಕ್ರೈಸ್ತ ಬಾಂಧವರು ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆದರು. ಈದ್ ಮಿಲಾದ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ, ಎಲ್ಲಾ ಧರ್ಮಗಳ ಸೌಹಾರ್ದತೆಯ ಪ್ರತೀಕವಾಗಿದೆ ಎಂಬುದನ್ನು ಈ ಆಚರಣೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರು, ಮಸೀದಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.2
- ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಗೆ 1,000 ಹಣ ಕೇಳಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಗ್ರಾಮದ ಬಡ ಕುಟುಂಬದ ರೈತಾಪಿ ಜನರ ಮೇಲೆ ಚಿಕಿತ್ಸೆ ನೀಡಿ ಸರಿಪಡಿಸಬೇಕಾದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಬರೆದು ಉಚಿತ ಆಂಬುಲೆನ್ಸ್ ಸೇವೆ ಇದ್ದರೂ ಕೂಡ ವಯಸ್ಸಾದ ರೋಗಿಗಳ ಬಳಿ ಸಾವಿರ ರೂಪಾಯಿಗಳ ಸುಲಿಗೆ ಮಾಡಲು ಮುಂದಾಗಿದ್ದಾರೆ.1
- ಬೈಕ್ ವೀಲಿಂಗ್ ಪುಂಡರ ಹಾವಳಿ ಕಗ್ಗಲಹಳ್ಳಿ ಮುಖ್ಯ ರಸ್ತೆಯಲ್ಲಿ ಅಪಾಯಕಾರಿ ವೀಲಿಂಗ್; ಪ್ರಯಾಣಿಕರ ಮೊಬೈಲ್‌ನಲ್ಲಿ ದೃಶ್ಯ ಸೆರೆ ಕನಕಪುರ: ಕನಕಪುರ ರಸ್ತೆಯ ಕಗ್ಗಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ. ಸೋಮನಹಳ್ಳಿ ಟೋಲ್‌ನಿಂದ ಹಾರೋಹಳ್ಳಿ ಕಡೆಗೆ ತೆರಳುವ ಮಾರ್ಗದಲ್ಲಿ ಕೆಲ ಯುವಕರು ಬೈಕ್‌ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಸಂಚರಿಸಿರುವ ದೃಶ್ಯಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಯಲ್ಲೇ ವೀಲಿಂಗ್ ನಡೆಸುತ್ತಿರುವುದರಿಂದ ಇತರ ವಾಹನ ಸವಾರರು ಹಾಗೂ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ವೀಲಿಂಗ್ ವೇಳೆ ನಿಯಂತ್ರಣ ತಪ್ಪಿದರೆ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಳವಳಗೊಂಡಿದ್ದಾರೆ. ಪೊಲೀಸರು ಹಲವು ಬಾರಿ ಜಾಗೃತಿ ಮೂಡಿಸಿ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡರೂ ವೀಲಿಂಗ್ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿ ವೀಲಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ1
- ಈ ಬಾರಿ ಕಂಬಳ ನಡೆಯುವುದು ಖಚಿತ : ಖುದ್ದು ಸಿಎಂ ಸೂಚನೆ ನೀಡಿದ್ದಾರೆ ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಬಳ ನಡೆಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಅದೇ ಸ್ಥಳದಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು. ಕಂಬಳ ನಡೆಸುವಂತೆ ಮುಖ್ಯಮಂತ್ರಿ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ನಡೆಯುವುದು ಖಚಿತ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.1
- ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಎಸ್ ದೊಡ್ಡಿ ಬಳಿ ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.2
- ಕತ್ತಲೆಯಿಂದ ಬೆಳಕಿನೆಡೆಗೆ: ಈದ್ ಮಿಲಾದ್-ಉನ್-ನಬಿ ಹುಟ್ಟಿದ ಕಥೆ ಸುಮಾರು 1400 ವರ್ಷಗಳ ಹಿಂದಿನ ಮಾತು. ಅರೇಬಿಯಾದ ಮರಳುಗಾಡು ಸಂಪೂರ್ಣ ಅಂಧಕಾರದಲ್ಲಿ ಮುಳುಗಿತ್ತು. ಅನ್ಯಾಯ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಮೂಢನಂಬಿಕೆಗಳು ಮತ್ತು ಪರಸ್ಪರ ಕಚ್ಚಾಡುವಿಕೆಗಳು ಸಮಾಜವನ್ನು ಆವರಿಸಿದ್ದವು. ಇಂತಹ ಸಂದರ್ಭದಲ್ಲಿ ಇಡೀ ಮಾನವಕುಲಕ್ಕೆ ಶಾಂತಿ ಮತ್ತು ಕರುಣೆಯ ಸಂದೇಶ ನೀಡಲು ಒಬ್ಬ ಮಾರ್ಗದರ್ಶಿಯ ಅಗತ್ಯವಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ‘ರಬೀ-ಉಲ್-ಅವ್ವಲ್’ 12 ರಂದು, ಮೆಕ್ಕಾ ನಗರದಲ್ಲಿ ಪವಿತ್ರ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನನವಾಯಿತು. ತಂದೆ ಅಬ್ದುಲ್ಲಾ ಅವರ ಅಗಲಿಕೆಯ ನಂತರ ಜನಿಸಿದ ಈ ಮಗುವಿಗೆ ತಾಯಿ ಆಮಿನಾ ಮತ್ತು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರೀತಿಯಿಂದ ಆಸರೆಯಾದರು. ಬೆಳೆಯುತ್ತಾ ತಮ್ಮ ಅಸಾಧಾರಣ ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯಿಂದಾಗಿ ಜನರು ಅವರನ್ನು ‘ಅಲ್-ಅಮೀನ್’ (ನಂಬಿಕಸ್ಥ) ಎಂದು ಗೌರವದಿಂದ ಕರೆದರು. ಮುಂದೆ ಅವರು ಸಮಾಜಕ್ಕೆ ಕೇವಲ ಧರ್ಮವನ್ನಷ್ಟೇ ಬೋಧಿಸಲಿಲ್ಲ; ಬದಲಿಗೆ: ಹೆಣ್ಣು ಮಕ್ಕಳಿಗೆ ಗೌರವ ಮತ್ತು ಹಕ್ಕುಗಳನ್ನು ನೀಡಿದರು. ಬಡವರು, ಅನಾಥರು ಮತ್ತು ಗುಲಾಮರ ಮೇಲಿನ ಶೋಷಣೆಯನ್ನು ನಿಲ್ಲಿಸಿ ಸಮಾನತೆಯನ್ನು ಸಾರಿದರು. "ನಿಮ್ಮ ನೆರೆಹೊರೆಯವರು ಹಸಿದಿರುವಾಗ ನೀವು ಹೊಟ್ಟೆ ತುಂಬ ಉಣ್ಣುವುದು ಸರಿಯಲ್ಲ" ಎಂದು ಸಹಾನುಭೂತಿಯ ಪಾಠ ಕಲಿಸಿದರು. ಈ ಆಚರಣೆ ಆರಂಭವಾಗಿದ್ದು ಹೇಗೆ? ಪ್ರವಾದಿಯವರ ಕಾಲದ ನಂತರ, ಶತಮಾನಗಳು ಕಳೆದಂತೆ ಜನರು ಅವರ ತ್ಯಾಗ, ಬೋಧನೆ ಮತ್ತು ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಒಂದು ವಿಶೇಷ ದಿನವನ್ನು ಮೀಸಲಿಡಲು ಬಯಸಿದರು. 12ನೇ ಶತಮಾನದ ಸುಮಾರಿಗೆ ಇಸ್ಲಾಮಿಕ್ ಜಗತ್ತಿನ ವಿದ್ವಾಂಸರು ಹಾಗೂ ಆಡಳಿತಗಾರರು ಪ್ರವಾದಿಯವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದರು. ಇರ್ಬಿಲ್ (ಇಂದಿನ ಇರಾಕ್) ನಗರದ ರಾಜ ಮುಜಫ್ಫರ್ ಅಲ್-ದಿನ್ ಈ ದಿನವನ್ನು ದೊಡ್ಡ ಉತ್ಸವದಂತೆ ಆಯೋಜಿಸಿ, ಬಡವರಿಗೆ ಆಹಾರ ವಿತರಿಸಿ, ಪ್ರವಾದಿಯವರ ಜೀವನ ಚರಿತ್ರೆ ಮತ್ತು ಕವಿತೆಗಳನ್ನು ವಾಚಿಸುವ ಸಂಪ್ರದಾಯವನ್ನು ವ್ಯಾಪಕವಾಗಿ ಬೆಳೆಸಿದನು. ಕಾಲಾನಂತರದಲ್ಲಿ ಈ ಸಂಪ್ರದಾಯ ಈಜಿಪ್ಟ್, ಟರ್ಕಿ ಸೇರಿದಂತೆ ಇಡೀ ವಿಶ್ವದಾದ್ಯಂತ ಹರಡಿತು. ಇಂದು ಏಕೆ ಆಚರಿಸಲಾಗುತ್ತದೆ? ಮಿಲಾದ್-ಉನ್-ನಬಿ ಎಂದರೆ ಕೇವಲ ಹಬ್ಬದ ಸಡಗರವಲ್ಲ; ಅದು ಪ್ರವಾದಿಯವರ ಬದುಕನ್ನು ಸ್ಮರಿಸುವ ದಿನ. ಕೃತಜ್ಞತೆ: ಪ್ರವಾದಿಯವರ ಮೂಲಕ ಸಮಾಜಕ್ಕೆ ಸಿಕ್ಕ ಶಾಂತಿ ಮತ್ತು ಜ್ಞಾನದ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸುವುದು. ದಾನ-ಧರ್ಮ: ಹಸಿದವರಿಗೆ ಅನ್ನದಾನ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು. ಸೌಹಾರ್ದತೆ: ಮೆರವಣಿಗೆ ಮತ್ತು ಪ್ರಾರ್ಥನೆಗಳ ಮೂಲಕ ಸಮಾಜದಲ್ಲಿ ಸೋದರತ್ವ ಮತ್ತು ಪ್ರೀತಿಯನ್ನು ಸಾರುವುದು. ಕತ್ತಲೆಯನ್ನು ಹೋಗಲಾಡಿಸಿ ಮಾನವೀಯತೆಯ ಬೆಳಕು ಚೆಲ್ಲಿದ ಪ್ರವಾದಿಯವರ ಜನ್ಮದಿನವನ್ನು ಇಂದು ವಿಶ್ವದಾದ್ಯಂತ ಅತ್ಯಂತ ಶ್ರದ್ಧೆಯಿಂದ ‘ಈದ್ ಮಿಲಾದ್-ಉನ್-ನಬಿ’ ಎಂದು ಆಚರಿಸಲಾಗುತ್ತದೆ.2
- ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಸಮೀಪ 10ಅಡಿ ಉದ್ದದ ಹೆಬ್ಬಾವು ರಕ್ಷಣೆ. ಗಾಣಾಳು ಸಮೀಪ 10ಅಡಿ ಉದ್ದದ ಹೆಬ್ಬಾವು ರಕ್ಷಣೆ. ಹಲಗೂರು:- ಸಮೀಪದ ಗಾಣಾಳು ಗ್ರಾಮದ ಜಮೀನೊಂದರಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಕೃಷ್ಣ ಹಿಡಿದು ಅರಣ್ಯ ಇಲಾಖೆ ಸಮ್ಮುಖದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ. ಮೂಲತಹ ಗಾಣಾಳು ಗ್ರಾಮದ ವಾಸಿ ಹಾಗೂ ತೋಟದ ಮೇಲ್ವಿಚಾರಕರಾದ ಶ್ರೀನಿವಾಸ್ ಮಾತನಾಡಿ, ನಮ್ಮ ಜಮೀನಿನ ಕೃಷಿ ಹೊಂಡದ ಬಳಿ ಇರುವ ಪೊದೆಯೊಂದರಲ್ಲಿ ನಮ್ಮ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರು ಹೆಬ್ಬಾವನ್ನುನೋಡಿದ ತಕ್ಷಣ ಹೆದರಿ ಓಡಿ ಬಂದರು. ತಕ್ಷಣ ನಾನು ಉರುಗ ತಜ್ಞ ಕೃಷ್ಣಾರಿಗೆ ವಿಷಯ ತಿಳಿಸಿದೆ ಮೇರೆಗೆ ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಬಿಟ್ಟಿರುತ್ತಾರೆ ಎಂದು ತಿಳಿಸಿದರು. ಉರಗ ತಜ್ಞ ಕೃಷ್ಣ ಮಾತನಾಡಿ, ನಮ್ಮ ಜಗದೀಶ ಮತ್ತು ನಾನು ಇದುವರೆಗೂ ಹಲಗೂರು ವ್ಯಾಪ್ತಿಯಲ್ಲಿ ಸುಮಾರು 15 ಹೆಬ್ಬಾವುಗಳ ಹಿಡಿದು ಅರಣ್ಯಕ್ಕೆ ಬಿಟ್ಟಿರುತ್ತೇವೆ. ಯಾರಾದರೂ ಯಾವುದೇ ತರಹದ ಹಾವುಗಳನ್ನು ಕಂಡರೆ ಅದನ್ನು ಹೊಡೆಯಬೇಡಿ ತಕ್ಷಣ ನಮಗೆ ವಿಷಯ ತಿಳಿಸಿದರೆ ನಾವು ಬಂದು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತೇವೆ ಎಂದು ಮನವಿ ಮಾಡಿದರು. ಹಲಗೂರು ಸಮೀಪ ಹೆಬ್ಬಾವು ರಕ್ಷಣೆ ಮಾಡಿದ ಉರುಗ ತಜ್ಞ.1