ಬೆಳ್ತಂಗಡಿ ತಾಲೂಕಿನ ಸುತ್ತ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿಕೆ ಬೆಳ್ತಂಗಡಿ ತಾಲೂಕಿನ ಸುತ್ತ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದ್ದು ನರ ಹಂತಕ ಕಾಡಾನೆ ಇನ್ನೂ ಕೊಕ್ಕಡ ಪರಿಸರದಲ್ಲಿಯೇ ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಮಂಗಳವಾರ ರಾತ್ರಿಯ ವೇಳೆ ಹತ್ಯಡ್ಕ ಗ್ರಾಮದ ದರ್ಭೇತಡ್ಕ ದಿನಕರ ಗೋಖಲೆ ಯವರಲ್ಲಿ ಮನೆಯಿಂದ 40-50ಫೀಟು ಸಮೀಪ ಕಾಡಾನೆ ಬಂದಿದ್ದು ತೋಟದಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ತೋಟದಲ್ಲಿನ ತೆಂಗಿನ ಗಿಡಗಳನ್ನು ಹಾಗೂ ಬಾಳೆ ಅಡಿಕೆ ಗಿಡಗಳನ್ನು ನಾಶಗೊಳಿಸಲಾಗಿದೆ ಕಾಡಾನೆಗಳು ಪ್ರತಿನಿತ್ಯ ಈ ಪರಿಸರದಲಲ್ಲಿ ಓಡಾಟ ನಡೆಸುತ್ತಿದ್ದು ಜನರು ಮನೆಗಳಿಂದ ಹೊರ ಬರಲೂ ಭಯ ಪಡುವಂತಹ ವಾತಾವರಣವಿದೆ ಕೊಕ್ಕಡ ಪರಿಸರದಲ್ಲಿ ಈಗಾಗಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇಲಾಖೆಯ ನಿರ್ಲಕ್ಷ್ಯದ ವಿರುದ್ದ ಹೋರಾಟ ನಡೆಸಲು ಸ್ಥಳೀಯ ನಾಗರಿಕರು ಸಿದ್ದತೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುತ್ತ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿಕೆ ಬೆಳ್ತಂಗಡಿ ತಾಲೂಕಿನ ಸುತ್ತ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದ್ದು ನರ ಹಂತಕ ಕಾಡಾನೆ ಇನ್ನೂ ಕೊಕ್ಕಡ ಪರಿಸರದಲ್ಲಿಯೇ ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಮಂಗಳವಾರ ರಾತ್ರಿಯ ವೇಳೆ ಹತ್ಯಡ್ಕ ಗ್ರಾಮದ ದರ್ಭೇತಡ್ಕ ದಿನಕರ ಗೋಖಲೆ ಯವರಲ್ಲಿ ಮನೆಯಿಂದ 40-50ಫೀಟು ಸಮೀಪ ಕಾಡಾನೆ ಬಂದಿದ್ದು ತೋಟದಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ತೋಟದಲ್ಲಿನ ತೆಂಗಿನ ಗಿಡಗಳನ್ನು ಹಾಗೂ ಬಾಳೆ ಅಡಿಕೆ ಗಿಡಗಳನ್ನು ನಾಶಗೊಳಿಸಲಾಗಿದೆ ಕಾಡಾನೆಗಳು ಪ್ರತಿನಿತ್ಯ ಈ ಪರಿಸರದಲಲ್ಲಿ ಓಡಾಟ ನಡೆಸುತ್ತಿದ್ದು ಜನರು ಮನೆಗಳಿಂದ ಹೊರ ಬರಲೂ ಭಯ ಪಡುವಂತಹ ವಾತಾವರಣವಿದೆ ಕೊಕ್ಕಡ ಪರಿಸರದಲ್ಲಿ ಈಗಾಗಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇಲಾಖೆಯ ನಿರ್ಲಕ್ಷ್ಯದ ವಿರುದ್ದ ಹೋರಾಟ ನಡೆಸಲು ಸ್ಥಳೀಯ ನಾಗರಿಕರು ಸಿದ್ದತೆ ನಡೆಸುತ್ತಿದ್ದಾರೆ.
- ಚಿಕ್ಕನಾಯಕನಹಳ್ಳಿಯಲ್ಲಿ ರೈತರ ಹೋರಾಟಕ್ಕೆ ಮೊದಲ ಗೆಲುವು; ಮಾತು ತಪ್ಪಿದರೆ ಮತ್ತೆ ಉಗ್ರ ಹೋರಾಟ: ಹೇಮಾವತಿ ಹೋರಾಟಗಾರರ ಎಚ್ಚರಿಕೆ1
- ಚಿ.ನಾ.ಹಳ್ಳಿ ಹೇಮಾವತಿ ನೀರಿಗಾಗಿ ರೈತರ ಹೋರಾಟ: ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಸಂಪೂರ್ಣ ಬೆಂಬಲ! ಚಿ.ನಾ.ಹಳ್ಳಿ ಹೇಮಾವತಿ ನೀರಿಗಾಗಿ ರೈತರ ಹೋರಾಟ: ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಸಂಪೂರ್ಣ ಬೆಂಬಲ! ---------------- ಚಿಕ್ಕನಾಯಕನಹಳ್ಳಿ:ತಾಲ್ಲೂಕಿಗೆ ಹೇಮಾವತಿ ನದಿ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ *ಚಿ.ನಾ.ಹಳ್ಳಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘವು (ಮೆಡಿಕಲ್ ಅಸೋಸಿಯೇಷನ್) ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.* ಧರಣಿ ಸ್ಥಳಕ್ಕೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಆಗಮಿಸಿ, ಕೊರಳಿನಲ್ಲಿ ಹಸಿರು ಶಾಲು ಧರಿಸಿ, "ರೈತರ ಈ ನ್ಯಾಯಯುತ ಹೋರಾಟಕ್ಕೆ ನಾವು ಸಂಪೂರ್ಣವಾಗಿ ಹೆಗಲು ಕೊಡುತ್ತೇವೆ" ಎಂದು ಭರವಸೆ ನೀಡಿದರು. ಅಸಮಾಧಾನ ಮತ್ತು ಪ್ರಮುಖ ಅಂಶಗಳು:* ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ನೀರಾವರಿ ಯೋಜನೆ ಮೂಲಕ ನೀರು ಹರಿಸುವ ಕಾಮಗಾರಿ ವರ್ಷಗಳಿಂದ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದು ದುರಂತ. *ಇಚ್ಛಾಶಕ್ತಿಯ ಕೊರತೆ:* ಸರ್ಕಾರ, ಆಡಳಿತ ಯಂತ್ರ, ಮತ್ತು ಅಧಿಕಾರಿಗಳು ಸೂಕ್ತ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಇದರಿಂದಾಗಿ ರೈತರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಯ ಮುಂದೆ ಧರಣಿ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. *ಒಣಗಿದ ತೋಟಗಳು - ಕುಸಿದ ಬದುಕು:* ತಾಲ್ಲೂಕಿನಲ್ಲಿ ಪ್ರಕೃತಿ ಸಂಪತ್ತು ಮತ್ತು ಗಣಿ ಸಂಪತ್ತನ್ನು ದೋಚಿಕೊಂಡು ಹೋಗಲಾಗಿದೆ. ನೀರಿನ ಅಭಾವದಿಂದ ತೆಂಗು, ಅಡಿಕೆ ತೋಟಗಳು ಬರಿದಾಗಿವೆ. ಕೃಷಿಗೂ ನೀರಿಲ್ಲ, ಕುಡಿಯುವುದಕ್ಕೂ ನೀರಿಲ್ಲದೆ ಜನ-ಜಾನುವಾರು ಹಾಗೂ ಪ್ರಾಣಿ-ಪಕ್ಷಿಗಳು ಪರದಾಡುವಂತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋರ್‌ವೇಲ್ ಕೊರೆಸಿದ ರೈತರು ಸಾಲ ತೀರಿಸಲಾಗದೆ ಕಂಗಾಲಾಗಿದ್ದಾರೆ. ಔಷಧ ವ್ಯಾಪಾರಿಗಳ ಸಂಘದ ಮಾತು: "ನಮ್ಮ ಹಕ್ಕಿನ ನೀರನ್ನು ಪಡೆದುಕೊಳ್ಳಲು ಪ್ರತಿಭಟನೆಯೇ ಮಾರ್ಗವಾಗಿದೆ. ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೇಳದೆ ಹೋದರೆ ಸರ್ಕಾರ ಯಾವುದನ್ನೂ ನೀಡುವುದಿಲ್ಲ. ನಾವು ಕೇವಲ ಒಂದು ದಿನದ ಬೆಂಬಲ ನೀಡಿ ಹೋಗುತ್ತಿಲ್ಲ; ಈ ಹೋರಾಟಕ್ಕೆ ಅಂತಿಮ ಯಶಸ್ಸು ಸಿಗುವವರೆಗೂ ಮತ್ತು ತಾಲೂಕಿನಲ್ಲಿ ನೀರು ಹರಿಯುವವರೆಗೂ ರೈತರೊಂದಿಗೆ ಸದಾ ಕಾಲ ಇರುತ್ತೇವೆ!"1
- All About,Anytime the Daydreamer will be pulling the tail of those who raises questions,which is public interest *ಭಾರತ ನಲ್ಲಿ ವೈರಲ್*1
- ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ. ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.1
- ರಾಷ್ಟ್ರ ಹಿತ ರಕ್ಷಣಾ ವೇದಿಕೆ ಹಾವೇರಿ ಜಿಲ್ಲೆ ವತಿಯಿಂದ ಜಿ ಎಚ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರವನ್ನು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವಿರೂಪಾಕ್ಷಪ್ಪ ಬಳ್ಳಾರಿ, ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ನಿವೃತ್ತ ತಹಸಿಲ್ದಾರರಾದ ಗವಿಸಿದಪ್ಪ ದ್ಯಾಮಣ್ಣವರ, ನಿರಾಮಯ ಫೌಂಡೇಶನ್ ಸಂಸ್ಥಾಪಕರು ಹಾಗೂ ವೈದ್ಯರಾದ ಡಾ.ಮಲ್ಲಿಕಾರ್ಜುನ್ ಬಾಳಿಕಾಯಿ ಜಿ ಎಚ್ ಕಾಲೇಜಿನ ಪಿ ಯು ವಿಭಾಗದ ಪ್ರಾಚಾರ್ಯರಾದ ಡಾ"ಜ್ಯೋತಿಬಾ ಸಿಂದೆ, ಜಿ ಎಚ್ ಕಾಲೇಜಿನ ಡಿಗ್ರಿ ವಿಭಾಗದ ಪ್ರಾಚಾರ್ಯರಾದ ಪ್ರೋ.ಎಂ ಎಂ ಹೊಳ್ಳಿಯವರ, ಯುವ ಮುಖಂಡರು ಮತ್ತು ಬ್ಯಾಂಕ್ ಉದ್ಯಮಿದಾರರಾದ ಶ್ರೀ ಕಿರಣಕುಮಾರ ಚ ಕೋಣನವರ ಮತ್ತು ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿದ್ದರೂ.1
- ಗುಂಡ್ಲುಪೇಟೆ 9ರಂದು ಉಚಿತ ಮಂಡಿ (ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರ ಗುಂಡ್ಲುಪೇಟೆ ಆ. 5: ಮೈಸೂರು ನಗರದ ಕಾಳಿದಾಸ ರಸ್ತೆಯ ಸಿಎಫ್‌ಟಿಆರ್‌ಐ ಲೇಔಟ್ ಸಮೀಪದ ಶಾರದಾದೇವಿ ನಗರದಲ್ಲಿರುವ ಎ ಆರ್ ಆಸ್ಪತ್ರೆ (AR Hospital) ವತಿಯಿಂದ ಮಂಡಿ ನೋವು, ಮಂಡಿ ಸವೆತ ಹಾಗೂ ಕೀಲು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗಾಗಿ ಉಚಿತ ಮಂಡಿ ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರವನ್ನು ಶಿಕ್ಷಕರ ಭವನ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹತ್ತಿರ, ಗುಂಡ್ಲುಪೇಟೆ ಆಗಸ್ಟ್ 9ರಂದು (ಭಾನುವಾರ) ಆಯೋಜಿಸಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಖ್ಯಾತ ಅಸ್ಥಿ ತಜ್ಞ ಡಾ. ಮಧುರಾಮ್ ಚೌಧರಿ (ಎಂ.ಬಿ.ಬಿ.ಎಸ್., ಎಂ.ಎಸ್. ಆರ್ಥೋ, ಎಫ್‌ಐಎಎಸ್.), ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ತಜ್ಞರು ಭಾಗವಹಿಸಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಮಂಡಿ ನೋವು, ಮಂಡಿ ಸವೆತ, ನಡೆಯಲು ತೊಂದರೆ, ಮಂಡಿ ಬಿಗಿತ ಹಾಗೂ ಕೀಲು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಾಗುವುದು. ಶಿಬಿರದಲ್ಲಿ ಡಿಜಿಟಲ್ ಎಕ್ಸ್-ರೇ ಮೂಲಕ ಮಂಡಿ ತಪಾಸಣೆ, ಮೂಳೆ ಸವೆತದ ಮೌಲ್ಯಮಾಪನ, ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ, ರೊಮಟಾಯ್ಡ್ ಆರ್ಥ್ರೈಟಿಸ್ ಸೇರಿದಂತೆ ಕೀಲು ಸಂಬಂಧಿತ ಸಮಸ್ಯೆಗಳ ತಪಾಸಣೆ, ಹಾಗೂ ಮಂಡಿ ನೋವು ಮತ್ತು ನೀರಿನ ಮಂಡಿಬೀಳು (Joint Effusion) ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ವೈದ್ಯಕೀಯ ಸಲಹೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಇತರ ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ಆಡಳಿತ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಮುಂಗಡ ನೋಂದಣಿಗೆ 91082 80640, 91080 99748 ಹಾಗೂ 89511 86748 ಸಂಖ್ಯೆಗಳ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.1
- ಬೆಳ್ತಂಗಡಿ ತಾಲೂಕಿನಲ್ಲಿ ಸಚಿವ ಯುಟಿ ಖಾದರ್ ರಿಂದ ಮಳೆ ಹಾನಿ ಪ್ರದೇಶದ ಪರಿಶೀಲನೆ ಬೆಳ್ತಂಗಡಿ ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಆಗಸ್ಟ್ 1 ರಂದು ಸುರಿದ ಭಾರೀ ಮಳೆಗೆ ತಾಲೂಕಿನ ಹಲವೆಡೆ ಸಂಪರ್ಕ ಕಡಿತ, ಗುಡ್ಡ ಜರಿತ, ತೋಟ ಮತ್ತು ಮನೆಗಳು ಜಲಾವೃತಗೊಂಡು ವ್ಯಾಪಕ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಅವರು ಆ. 5 ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಲಾಯಿಲ ಭಾಗದಲ್ಲಿ ಸಂಪರ್ಕ ಕಡಿತಗೊಂಡಿರುವ ರಸ್ತೆಗಳು ಮತ್ತು ಗುಡ್ಡ ಕುಸಿತದ ಸಾಧ್ಯತೆ ಇರುವ ಪ್ರದೇಶಗಳನ್ನು ಪರಿಶೀಲಿಸಿದರು. ಸಂತ್ರಸ್ತರೊಂದಿಗೆ ಸಚಿವರು ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಸಂತ್ರಸ್ತ ಕುಟುಂಬಗಳಿಗೆ ಕನಿಷ್ಟ ಪರಿಹಾರವೂ ನೀಡಿಲ್ಲ ಎಂದು ಗಮನ ಸೆಳೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ತುರ್ತು ಪರಿಹಾರ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು ಇಂದು ಸಂಜೆಯೊಳಗೆ ಪ್ರವಾಹದಿಂದ ಸಂತ್ರಸ್ತರಾದವರಿಗೆಬತಾತ್ಕಾಲಿಕ ಪರಿಹಾರವನ್ನು ವಿವರಿಸುವಂತೆ ಸೂಚಿಸಿದರು.1
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದ ಆರನೇ ದಿನದ ರಾತ್ರಿ ಹೋರಾಟಗಾರರು ಭಜನೆಯಲ್ಲಿ ತಲ್ಲಿನರಾಗಿರುವುದು1
- All About,Why the reasons no one is intended to grant relief for our Downtrodden in our Community *ಭಾರತ ನಲ್ಲಿ ವೈರಲ್*1