logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ರಾಜಕೀಯ ಮತ್ತು ವ್ಯವಹಾರಿಕ ಪಾಲುದಾರಿಕೆ ಇದೆ ಎಂಬ ವದಂತಿಗಳಿಗೆ ಧರ್ಮಸ್ಥಳದಲ್ಲಿ ತೆರೆ ಎಳೆದಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅವರು ಕಟುವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಹಿಂದೆ ವಿಜಯೇಂದ್ರ ಅವರ ಕೈವಾಡವಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಅಡ್ಡ ಮತದಾನದ ಘಟನೆಯು ತಮಗೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು ಎಂದು ತಿಳಿಸಿದರು. ತಪ್ಪು ಯಾರೆಂಬುದನ್ನು ಸಾಬೀತುಪಡಿಸಲು ಭಾವನಾತ್ಮಕವಾಗಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ನಿರ್ಧರಿಸಿದ್ದಾಗಿ ಹೇಳಿದ ಅವರು, ಪಕ್ಷದ ಹಿರಿಯ ನಾಯಕರು ಈ ಸಮಸ್ಯೆಯನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ ಕಾರಣ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕೇವಲ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮಾತ್ರ ಬಂದಿರುವುದಾಗಿ ಸ್ಪಷ್ಟಪಡಿಸಿದರು. ತಮ್ಮ ವಿರುದ್ಧ ಸ್ವಪಕ್ಷದ ಕೆಲವರೇ ಮಾಡುತ್ತಿರುವ ಆರೋಪಗಳಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಾಕ್ಷಿಯಾಗಿ ಉತ್ತರಿಸಿದ ವಿಜಯೇಂದ್ರ, ತನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ರೀತಿಯ ರಾಜಕೀಯ ಅಥವಾ ಬ್ಯುಸಿನೆಸ್ ಸಂಬಂಧಗಳಿಲ್ಲ ಎಂದು ಹೇಳಿದರು. ಸಿಎಂ ಪರವಾಗಿ ತಾನೇ ಅಡ್ಡ ಮತದಾನ ಮಾಡಿಸಿದ್ದೇನೆ ಎನ್ನುವುದೆಲ್ಲಾ ಸಂಪೂರ್ಣ ಸುಳ್ಳು ಮತ್ತು ವ್ಯವಸ್ಥಿತ ಅಪಪ್ರಚಾರ ಎಂದು ಬಣ್ಣಿಸಿದ ಅವರು, ಒಬ್ಬ ಕೆಪಿಸಿಸಿ ಅಧ್ಯಕ್ಷರಿಗೆ ಅಥವಾ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ನೀಡಬೇಕಾದ ಸಾಂವಿಧಾನಿಕ ಗೌರವವನ್ನಷ್ಟೇ ತಾನು ನೀಡುತ್ತಿದ್ದೇನೆ ಎಂದು ವಿವರಿಸಿದರು. ಕೊನೆಯದಾಗಿ, ತಮ್ಮ ವಿರುದ್ಧ ಇಲ್ಲದ ಸಲ್ಲದ ಅಪಪ್ರಚಾರ ಮಾಡುತ್ತಿರುವವರಿಗೂ ಆ ಮಂಜುನಾಥ ಸ್ವಾಮಿಯು ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರೊಂದಿಗೆ ಓರ್ವ ಸಂಸದ, ಎಂಟು ಮಂದಿ ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

1 hr ago
user_Lavanya
Lavanya
Local News Reporter ಪಾವಗಡ, ತುಮಕೂರು, ಕರ್ನಾಟಕ•
1 hr ago

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ರಾಜಕೀಯ ಮತ್ತು ವ್ಯವಹಾರಿಕ ಪಾಲುದಾರಿಕೆ ಇದೆ ಎಂಬ ವದಂತಿಗಳಿಗೆ ಧರ್ಮಸ್ಥಳದಲ್ಲಿ ತೆರೆ ಎಳೆದಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅವರು ಕಟುವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಹಿಂದೆ ವಿಜಯೇಂದ್ರ ಅವರ ಕೈವಾಡವಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಅಡ್ಡ ಮತದಾನದ ಘಟನೆಯು ತಮಗೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು ಎಂದು ತಿಳಿಸಿದರು. ತಪ್ಪು ಯಾರೆಂಬುದನ್ನು ಸಾಬೀತುಪಡಿಸಲು ಭಾವನಾತ್ಮಕವಾಗಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ನಿರ್ಧರಿಸಿದ್ದಾಗಿ ಹೇಳಿದ ಅವರು, ಪಕ್ಷದ ಹಿರಿಯ ನಾಯಕರು ಈ ಸಮಸ್ಯೆಯನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ ಕಾರಣ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕೇವಲ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮಾತ್ರ ಬಂದಿರುವುದಾಗಿ ಸ್ಪಷ್ಟಪಡಿಸಿದರು. ತಮ್ಮ ವಿರುದ್ಧ ಸ್ವಪಕ್ಷದ ಕೆಲವರೇ ಮಾಡುತ್ತಿರುವ ಆರೋಪಗಳಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಾಕ್ಷಿಯಾಗಿ ಉತ್ತರಿಸಿದ ವಿಜಯೇಂದ್ರ, ತನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ರೀತಿಯ ರಾಜಕೀಯ ಅಥವಾ ಬ್ಯುಸಿನೆಸ್ ಸಂಬಂಧಗಳಿಲ್ಲ ಎಂದು ಹೇಳಿದರು. ಸಿಎಂ ಪರವಾಗಿ ತಾನೇ ಅಡ್ಡ ಮತದಾನ ಮಾಡಿಸಿದ್ದೇನೆ ಎನ್ನುವುದೆಲ್ಲಾ ಸಂಪೂರ್ಣ ಸುಳ್ಳು ಮತ್ತು ವ್ಯವಸ್ಥಿತ ಅಪಪ್ರಚಾರ ಎಂದು ಬಣ್ಣಿಸಿದ ಅವರು, ಒಬ್ಬ ಕೆಪಿಸಿಸಿ ಅಧ್ಯಕ್ಷರಿಗೆ ಅಥವಾ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ನೀಡಬೇಕಾದ ಸಾಂವಿಧಾನಿಕ ಗೌರವವನ್ನಷ್ಟೇ ತಾನು ನೀಡುತ್ತಿದ್ದೇನೆ ಎಂದು ವಿವರಿಸಿದರು. ಕೊನೆಯದಾಗಿ, ತಮ್ಮ ವಿರುದ್ಧ ಇಲ್ಲದ ಸಲ್ಲದ ಅಪಪ್ರಚಾರ ಮಾಡುತ್ತಿರುವವರಿಗೂ ಆ ಮಂಜುನಾಥ ಸ್ವಾಮಿಯು ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರೊಂದಿಗೆ ಓರ್ವ ಸಂಸದ, ಎಂಟು ಮಂದಿ ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ರಾಜಕೀಯ ಮತ್ತು ವ್ಯವಹಾರಿಕ ಪಾಲುದಾರಿಕೆ ಇದೆ ಎಂಬ ವದಂತಿಗಳಿಗೆ ಧರ್ಮಸ್ಥಳದಲ್ಲಿ ತೆರೆ ಎಳೆದಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅವರು ಕಟುವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಹಿಂದೆ ವಿಜಯೇಂದ್ರ ಅವರ ಕೈವಾಡವಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಅಡ್ಡ ಮತದಾನದ ಘಟನೆಯು ತಮಗೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು ಎಂದು ತಿಳಿಸಿದರು. ತಪ್ಪು ಯಾರೆಂಬುದನ್ನು ಸಾಬೀತುಪಡಿಸಲು ಭಾವನಾತ್ಮಕವಾಗಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ನಿರ್ಧರಿಸಿದ್ದಾಗಿ ಹೇಳಿದ ಅವರು, ಪಕ್ಷದ ಹಿರಿಯ ನಾಯಕರು ಈ ಸಮಸ್ಯೆಯನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ ಕಾರಣ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕೇವಲ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮಾತ್ರ ಬಂದಿರುವುದಾಗಿ ಸ್ಪಷ್ಟಪಡಿಸಿದರು. ತಮ್ಮ ವಿರುದ್ಧ ಸ್ವಪಕ್ಷದ ಕೆಲವರೇ ಮಾಡುತ್ತಿರುವ ಆರೋಪಗಳಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಾಕ್ಷಿಯಾಗಿ ಉತ್ತರಿಸಿದ ವಿಜಯೇಂದ್ರ, ತನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ರೀತಿಯ ರಾಜಕೀಯ ಅಥವಾ ಬ್ಯುಸಿನೆಸ್ ಸಂಬಂಧಗಳಿಲ್ಲ ಎಂದು ಹೇಳಿದರು. ಸಿಎಂ ಪರವಾಗಿ ತಾನೇ ಅಡ್ಡ ಮತದಾನ ಮಾಡಿಸಿದ್ದೇನೆ ಎನ್ನುವುದೆಲ್ಲಾ ಸಂಪೂರ್ಣ ಸುಳ್ಳು ಮತ್ತು ವ್ಯವಸ್ಥಿತ ಅಪಪ್ರಚಾರ ಎಂದು ಬಣ್ಣಿಸಿದ ಅವರು, ಒಬ್ಬ ಕೆಪಿಸಿಸಿ ಅಧ್ಯಕ್ಷರಿಗೆ ಅಥವಾ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ನೀಡಬೇಕಾದ ಸಾಂವಿಧಾನಿಕ ಗೌರವವನ್ನಷ್ಟೇ ತಾನು ನೀಡುತ್ತಿದ್ದೇನೆ ಎಂದು ವಿವರಿಸಿದರು. ಕೊನೆಯದಾಗಿ, ತಮ್ಮ ವಿರುದ್ಧ ಇಲ್ಲದ ಸಲ್ಲದ ಅಪಪ್ರಚಾರ ಮಾಡುತ್ತಿರುವವರಿಗೂ ಆ ಮಂಜುನಾಥ ಸ್ವಾಮಿಯು ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರೊಂದಿಗೆ ಓರ್ವ ಸಂಸದ, ಎಂಟು ಮಂದಿ ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
    1
    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ರಾಜಕೀಯ ಮತ್ತು ವ್ಯವಹಾರಿಕ ಪಾಲುದಾರಿಕೆ ಇದೆ ಎಂಬ ವದಂತಿಗಳಿಗೆ ಧರ್ಮಸ್ಥಳದಲ್ಲಿ ತೆರೆ ಎಳೆದಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅವರು ಕಟುವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಹಿಂದೆ ವಿಜಯೇಂದ್ರ ಅವರ ಕೈವಾಡವಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಅಡ್ಡ ಮತದಾನದ ಘಟನೆಯು ತಮಗೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು ಎಂದು ತಿಳಿಸಿದರು. ತಪ್ಪು ಯಾರೆಂಬುದನ್ನು ಸಾಬೀತುಪಡಿಸಲು ಭಾವನಾತ್ಮಕವಾಗಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ನಿರ್ಧರಿಸಿದ್ದಾಗಿ ಹೇಳಿದ ಅವರು, ಪಕ್ಷದ ಹಿರಿಯ ನಾಯಕರು ಈ ಸಮಸ್ಯೆಯನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ ಕಾರಣ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕೇವಲ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮಾತ್ರ ಬಂದಿರುವುದಾಗಿ ಸ್ಪಷ್ಟಪಡಿಸಿದರು.

ತಮ್ಮ ವಿರುದ್ಧ ಸ್ವಪಕ್ಷದ ಕೆಲವರೇ ಮಾಡುತ್ತಿರುವ ಆರೋಪಗಳಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಾಕ್ಷಿಯಾಗಿ ಉತ್ತರಿಸಿದ ವಿಜಯೇಂದ್ರ, ತನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ರೀತಿಯ ರಾಜಕೀಯ ಅಥವಾ ಬ್ಯುಸಿನೆಸ್ ಸಂಬಂಧಗಳಿಲ್ಲ ಎಂದು ಹೇಳಿದರು. ಸಿಎಂ ಪರವಾಗಿ ತಾನೇ ಅಡ್ಡ ಮತದಾನ ಮಾಡಿಸಿದ್ದೇನೆ ಎನ್ನುವುದೆಲ್ಲಾ ಸಂಪೂರ್ಣ ಸುಳ್ಳು ಮತ್ತು ವ್ಯವಸ್ಥಿತ ಅಪಪ್ರಚಾರ ಎಂದು ಬಣ್ಣಿಸಿದ ಅವರು, ಒಬ್ಬ ಕೆಪಿಸಿಸಿ ಅಧ್ಯಕ್ಷರಿಗೆ ಅಥವಾ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ನೀಡಬೇಕಾದ ಸಾಂವಿಧಾನಿಕ ಗೌರವವನ್ನಷ್ಟೇ ತಾನು ನೀಡುತ್ತಿದ್ದೇನೆ ಎಂದು ವಿವರಿಸಿದರು. ಕೊನೆಯದಾಗಿ, ತಮ್ಮ ವಿರುದ್ಧ ಇಲ್ಲದ ಸಲ್ಲದ ಅಪಪ್ರಚಾರ ಮಾಡುತ್ತಿರುವವರಿಗೂ ಆ ಮಂಜುನಾಥ ಸ್ವಾಮಿಯು ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರೊಂದಿಗೆ ಓರ್ವ ಸಂಸದ, ಎಂಟು ಮಂದಿ ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    1 hr ago
  • ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹಳೆ ಟೌನ್‌ನಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪ್ರತೀಕವಾಗಿರುವ ಮೊಹರಂ, ಅಂದರೆ ಪೀರಲ ಹಬ್ಬದ ಅಂಗವಾಗಿ ಕೆಂಡ ಹಾಯುವ ಸಂಪ್ರದಾಯವು ಶುಕ್ರವಾರ ಮುಂಜಾನೆ ಭಕ್ತಿಪೂರ್ವಕವಾಗಿ ನೆರವೇರಿತು. ಈ ಆಚರಣೆಯು ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದೆ. ಕಳೆದ ಏಳು ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಪೀರಲ ಹಬ್ಬದಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯದವರು ಒಂದಾಗಿ ಭಾಗವಹಿಸಿದ್ದಾರೆ. ಪೀರಲ ದೇವರ ಪೂಜಾ ವಿಧಿವಿಧಾನಗಳನ್ನು ಮುಸ್ಲಿಂ ಸಮುದಾಯದವರು ನೆರವೇರಿಸಿದರೆ, ಹಬ್ಬದ ಉಸ್ತುವಾರಿ ಹಾಗೂ ವಿವಿಧ ವ್ಯವಸ್ಥೆಗಳಲ್ಲಿ ಹಿಂದೂ ಸಮುದಾಯದವರು ಸಕ್ರಿಯವಾಗಿ ಕೈಜೋಡಿಸಿದರು. ಹಬ್ಬದ ಪ್ರಮುಖ ಆಕರ್ಷಣೆಯಾದ ಕೆಂಡ ತುಳಿಯುವ ಆಚರಣೆಯಲ್ಲಿ, ಮೊದಲಿಗೆ ಹಿಂದೂ ಸಮುದಾಯದ ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿದರು. ಬಳಿಕ ಇತರ ಭಕ್ತರೂ ಕೆಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಹಬ್ಬದ ಅಂಗವಾಗಿ ಹಳ್ಳಿಗಳಲ್ಲಿ ಆಲಿಗುಂಡಿ ಸಿದ್ಧಪಡಿಸಿ, ಊರಿನ ರೈತರು ದೊಡ್ಡ ದೊಡ್ಡ ಮರಗಳನ್ನು ತಂದು ಗುರುವಾರ ರಾತ್ರಿ ಪೂರ್ತಿ ಬೆಂಕಿ ಹಚ್ಚಿದರು. ಬೆಂಕಿ ಕೆಂಡವಾಗಿ ಮಾರ್ಪಟ್ಟ ಬಳಿಕ ಈ ಕೆಂಡ ತುಳಿಯುವ ಆಚರಣೆ ನೆರವೇರಿತು, ಇದು ಚಳ್ಳಕೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಅನಾವರಣಗೊಳಿಸಿತು.
    1
    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹಳೆ ಟೌನ್‌ನಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪ್ರತೀಕವಾಗಿರುವ ಮೊಹರಂ, ಅಂದರೆ ಪೀರಲ ಹಬ್ಬದ ಅಂಗವಾಗಿ ಕೆಂಡ ಹಾಯುವ ಸಂಪ್ರದಾಯವು ಶುಕ್ರವಾರ ಮುಂಜಾನೆ ಭಕ್ತಿಪೂರ್ವಕವಾಗಿ ನೆರವೇರಿತು. ಈ ಆಚರಣೆಯು ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದೆ.

ಕಳೆದ ಏಳು ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಪೀರಲ ಹಬ್ಬದಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯದವರು ಒಂದಾಗಿ ಭಾಗವಹಿಸಿದ್ದಾರೆ. ಪೀರಲ ದೇವರ ಪೂಜಾ ವಿಧಿವಿಧಾನಗಳನ್ನು ಮುಸ್ಲಿಂ ಸಮುದಾಯದವರು ನೆರವೇರಿಸಿದರೆ, ಹಬ್ಬದ ಉಸ್ತುವಾರಿ ಹಾಗೂ ವಿವಿಧ ವ್ಯವಸ್ಥೆಗಳಲ್ಲಿ ಹಿಂದೂ ಸಮುದಾಯದವರು ಸಕ್ರಿಯವಾಗಿ ಕೈಜೋಡಿಸಿದರು.

ಹಬ್ಬದ ಪ್ರಮುಖ ಆಕರ್ಷಣೆಯಾದ ಕೆಂಡ ತುಳಿಯುವ ಆಚರಣೆಯಲ್ಲಿ, ಮೊದಲಿಗೆ ಹಿಂದೂ ಸಮುದಾಯದ ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿದರು. ಬಳಿಕ ಇತರ ಭಕ್ತರೂ ಕೆಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಹಬ್ಬದ ಅಂಗವಾಗಿ ಹಳ್ಳಿಗಳಲ್ಲಿ ಆಲಿಗುಂಡಿ ಸಿದ್ಧಪಡಿಸಿ, ಊರಿನ ರೈತರು ದೊಡ್ಡ ದೊಡ್ಡ ಮರಗಳನ್ನು ತಂದು ಗುರುವಾರ ರಾತ್ರಿ ಪೂರ್ತಿ ಬೆಂಕಿ ಹಚ್ಚಿದರು. ಬೆಂಕಿ ಕೆಂಡವಾಗಿ ಮಾರ್ಪಟ್ಟ ಬಳಿಕ ಈ ಕೆಂಡ ತುಳಿಯುವ ಆಚರಣೆ ನೆರವೇರಿತು, ಇದು ಚಳ್ಳಕೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಅನಾವರಣಗೊಳಿಸಿತು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಚಳ್ಳಕೆರೆ ವಿಜ್ಞಾನಿ ನಗರದ ಜನರು ತಮ್ಮ ನಿತ್ಯದ ಒತ್ತಡದ ಕೆಲಸದಿಂದ ಮುಕ್ತಿ ಪಡೆಯಲು ಇದೀಗ ಒಂದು ತಿಂಗಳ ಕಾಲ ಮನರಂಜನೆಗೆ ಮುಕ್ತ ಅವಕಾಶ ಸಿಕ್ಕಿದೆ. ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಬಳಿ, ಕುಂಚಿಟಿಗರ ವಾಣಿಜ್ಯ ಮಳಿಗೆಗಳ ಹಿಂಭಾಗದ ಆವರಣದಲ್ಲಿ 'ದುಬೈ ಸಿಟಿ ಎಕ್ಸಿಬಿಷನ್ ಚಳ್ಳಕೆರೆ ಉತ್ಸವ' ಇಂದಿನಿಂದ (ಕಳೆದ ಸಂಜೆ 25ರಂದು ಉದ್ಘಾಟನೆಗೊಂಡಿದೆ) ಪ್ರಾರಂಭಗೊಂಡಿದೆ. ಈ ಉತ್ಸವದಲ್ಲಿ ಮಕ್ಕಳ ಮನರಂಜನೆಗಾಗಿ ತಿರುಗುವ ರೈಲು, ಏರೋಪ್ಲೇನ್, ಮೇರಿಗೋ ರೌಂಡ್, ಬೈಕ್, ಕಾರು, ಜಂಪಿಂಗ್ ಮತ್ತು ಬೋಟಿಂಗ್‌ನಂತಹ ಆಟಗಳು ಲಭ್ಯವಿವೆ. ಇದರ ಜೊತೆಗೆ, ಯುವಕ ಯುವತಿಯರಿಗೂ ಇಷ್ಟವಾಗುವ ಟೊರೋಟ ಡಿಸ್ಕೋ ಡಾನ್ಸ್, ಜಾಯಿಂಟ್ ವಿಲ್, ಡ್ರ್ಯಾಗನ್ ಟ್ರೈನ್, ಮತ್ತು ಕೊಲಂಬಸ್‌ನಂತಹ ವಿಶೇಷ ಆಟಗಳೂ ಇವೆ. ಕೌಶಲ್ಯ ಆಟಗಳಾದ ರಿಂಗ್ ಟಾಸ್ ಸಹ ಇದ್ದು, ಇಲ್ಲಿ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದೆ. ಸಾಕಷ್ಟು ವೈವಿಧ್ಯಮಯ ಆಟಿಕೆಗಳು ಕೂಡ ಇಲ್ಲಿ ಲಭ್ಯವಿವೆ. ಈ ಉತ್ಸವವು ಒಂದು ತಿಂಗಳ ಕಾಲ ನಡೆಯಲಿದ್ದು, ಸಂಜೆಯ ಸಮಯದಲ್ಲಿ ಕೇವಲ ₹30 ಪ್ರವೇಶ ಶುಲ್ಕದೊಂದಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ಮಕ್ಕಳನ್ನು ಕರೆತಂದು ವಿವಿಧ ಆಟಗಳಲ್ಲಿ ತೊಡಗಿಸಲು ಇದೊಂದು ಸುವರ್ಣಾವಕಾಶವಾಗಿದೆ. ನಿತ್ಯದ ಒತ್ತಡವನ್ನು ಕಳೆಯಲು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರವಿರಲು ಚಳ್ಳಕೆರೆ ಜನತೆಗೆ ಇದು ಉತ್ತಮ ಅವಕಾಶ ಒದಗಿಸಿದೆ. ಚಳ್ಳಕೆರೆ ನಗರದಲ್ಲಿ 100% ಮನರಂಜನೆ ನೀಡಲು ಈ 'ಚಳ್ಳಕೆರೆ ಉತ್ಸವ' ಸಜ್ಜಾಗಿದೆ.
    1
    ಚಳ್ಳಕೆರೆ ವಿಜ್ಞಾನಿ ನಗರದ ಜನರು ತಮ್ಮ ನಿತ್ಯದ ಒತ್ತಡದ ಕೆಲಸದಿಂದ ಮುಕ್ತಿ ಪಡೆಯಲು ಇದೀಗ ಒಂದು ತಿಂಗಳ ಕಾಲ ಮನರಂಜನೆಗೆ ಮುಕ್ತ ಅವಕಾಶ ಸಿಕ್ಕಿದೆ. ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಬಳಿ, ಕುಂಚಿಟಿಗರ ವಾಣಿಜ್ಯ ಮಳಿಗೆಗಳ ಹಿಂಭಾಗದ ಆವರಣದಲ್ಲಿ 'ದುಬೈ ಸಿಟಿ ಎಕ್ಸಿಬಿಷನ್ ಚಳ್ಳಕೆರೆ ಉತ್ಸವ' ಇಂದಿನಿಂದ (ಕಳೆದ ಸಂಜೆ 25ರಂದು ಉದ್ಘಾಟನೆಗೊಂಡಿದೆ) ಪ್ರಾರಂಭಗೊಂಡಿದೆ.

ಈ ಉತ್ಸವದಲ್ಲಿ ಮಕ್ಕಳ ಮನರಂಜನೆಗಾಗಿ ತಿರುಗುವ ರೈಲು, ಏರೋಪ್ಲೇನ್, ಮೇರಿಗೋ ರೌಂಡ್, ಬೈಕ್, ಕಾರು, ಜಂಪಿಂಗ್ ಮತ್ತು ಬೋಟಿಂಗ್‌ನಂತಹ ಆಟಗಳು ಲಭ್ಯವಿವೆ. ಇದರ ಜೊತೆಗೆ, ಯುವಕ ಯುವತಿಯರಿಗೂ ಇಷ್ಟವಾಗುವ ಟೊರೋಟ ಡಿಸ್ಕೋ ಡಾನ್ಸ್, ಜಾಯಿಂಟ್ ವಿಲ್, ಡ್ರ್ಯಾಗನ್ ಟ್ರೈನ್, ಮತ್ತು ಕೊಲಂಬಸ್‌ನಂತಹ ವಿಶೇಷ ಆಟಗಳೂ ಇವೆ. ಕೌಶಲ್ಯ ಆಟಗಳಾದ ರಿಂಗ್ ಟಾಸ್ ಸಹ ಇದ್ದು, ಇಲ್ಲಿ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದೆ. ಸಾಕಷ್ಟು ವೈವಿಧ್ಯಮಯ ಆಟಿಕೆಗಳು ಕೂಡ ಇಲ್ಲಿ ಲಭ್ಯವಿವೆ.

ಈ ಉತ್ಸವವು ಒಂದು ತಿಂಗಳ ಕಾಲ ನಡೆಯಲಿದ್ದು, ಸಂಜೆಯ ಸಮಯದಲ್ಲಿ ಕೇವಲ ₹30 ಪ್ರವೇಶ ಶುಲ್ಕದೊಂದಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ಮಕ್ಕಳನ್ನು ಕರೆತಂದು ವಿವಿಧ ಆಟಗಳಲ್ಲಿ ತೊಡಗಿಸಲು ಇದೊಂದು ಸುವರ್ಣಾವಕಾಶವಾಗಿದೆ. ನಿತ್ಯದ ಒತ್ತಡವನ್ನು ಕಳೆಯಲು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರವಿರಲು ಚಳ್ಳಕೆರೆ ಜನತೆಗೆ ಇದು ಉತ್ತಮ ಅವಕಾಶ ಒದಗಿಸಿದೆ. ಚಳ್ಳಕೆರೆ ನಗರದಲ್ಲಿ 100% ಮನರಂಜನೆ ನೀಡಲು ಈ 'ಚಳ್ಳಕೆರೆ ಉತ್ಸವ' ಸಜ್ಜಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    7 hrs ago
  • ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಅವಿಶ್ರಾಂತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಜಾಲಕ್ಕೆ ಅಬಕಾರಿ ಇಲಾಖೆಯ ಸಿಬ್ಬಂದಿಯೇ ಕೈಜೋಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಎಸ್‌ಸಿ/ಎಸ್‌ಟಿ ಪ್ರಗತಿ ಪರಿಶೀಲನಾ ಹಾಗೂ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಈ ಆರೋಪವನ್ನು ತೀವ್ರ ಆಕ್ರೋಶದಿಂದ ವ್ಯಕ್ತಪಡಿಸಿದ್ದು, ಇಲಾಖೆಯ ವಾಹನ ಚಾಲಕರು ದಾಳಿ ನಡೆಸುವ ಮುನ್ನವೇ ಮಾಹಿತಿ ಸೋರಿಕೆ ಮಾಡಿ ಮದ್ಯ ವ್ಯಾಪಾರಿಗಳಿಗೆ ನೆರವಾಗುತ್ತಿದ್ದಾರೆ ಎಂದು ದೂರಿದ್ದಾರೆ. ಇದಲ್ಲದೆ, ತಾಲ್ಲೂಕಿನಾದ್ಯಂತ ಎಂ.ಆರ್.ಪಿ. (ಗರಿಷ್ಠ ಚಿಲ್ಲರೆ ಮಾರಾಟ ಬೆಲೆ) ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುವ ಮೂಲಕ ಬಹಿರಂಗ ಲೂಟಿ ನಡೆಯುತ್ತಿದೆ ಎಂದು ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಮಲ್ಲಿಕಾರ್ಜುನ ಅವರು, ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮತ್ತು ಸಂಘಟನೆಯ ಕಾರ್ಯಕರ್ತರು ನಿಖರ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು. ಅಧಿಕಾರಿಗಳು ದಾಳಿಗೆ ಹೊರಡುವ ಮುನ್ನವೇ ಇಲಾಖೆಯ ವಾಹನ ಚಾಲಕರು ಲಿಕ್ಕರ್ ಮಾಫಿಯಾದವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ರವಾನಿಸುತ್ತಿದ್ದಾರೆ. ಇದರಿಂದ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಅಕ್ರಮ ಮದ್ಯವೆಲ್ಲವೂ ಮಾಯವಾಗುತ್ತದೆ. ಕಣ್ಣೊರೆಸುವ ತಂತ್ರವಾಗಿ, ದಾಳಿಗೆ ಹೋದಾಗಲೂ ಅಸಲಿ ಮದ್ಯ ಮಾರಾಟ ಮಾಡುವ ಮನೆಯನ್ನು ಬಿಟ್ಟು, ಪಕ್ಕದ ಬೇರೆ ಇನ್ಯಾರದೋ ಮನೆಗಳ ಬಾಗಿಲು ತಟ್ಟಿ ನಾಟಕವಾಡುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದರು. ಇದರ ಜೊತೆಗೆ, ತಾಲ್ಲೂಕಿನಲ್ಲಿರುವ ಬಹುತೇಕ ಬಾರ್ ಹಾಗೂ ವೈನ್ ಶಾಪ್‌ಗಳಲ್ಲಿ, ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ (MSIL) ಮದ್ಯದ ಅಂಗಡಿಗಳು ಸೇರಿದಂತೆ, ಪ್ರತಿ ಮದ್ಯದ ಬಾಟಲಿ ಅಥವಾ ಪಾಕೆಟ್‌ಗೆ ಕನಿಷ್ಠ ₹15 ರಷ್ಟು ಹೆಚ್ಚುವರಿ ಹಣವನ್ನು ಕಾನೂನುಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಅವರು ವಿವರಿಸಿದರು. ತಾಲ್ಲೂಕಿನಲ್ಲಿ ಪ್ರತಿ ತಿಂಗಳು ಅಂದಾಜು 2 ಲಕ್ಷ ಲೀಟರ್ ಮದ್ಯ ಮಾರಾಟವಾಗುತ್ತಿದ್ದು, ಕೇವಲ ಒಂದು ಪಾಕೆಟ್ ಅಥವಾ ಬಾಟಲಿಗೆ ₹15 ಹೆಚ್ಚುವರಿ ಹಣ ವಸೂಲಿ ಮಾಡಿದರೂ ತಿಂಗಳಿಗೆ ಬಡ ಕೂಲಿ ಕಾರ್ಮಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಅಕ್ರಮವಾಗಿ ದೋಚಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಈ ರೀತಿಯ ಬಹಿರಂಗ ಲೂಟಿ ಅವ್ಯಾಹತವಾಗಿ ನಡೆದಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಮುಖಂಡರ ಆರೋಪ ಹಾಗೂ ದೂರುಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆಯ ಅಧಿಕಾರಿ ಜ್ಯೋತಿ ಅವರು, ಸರ್ಕಾರದಿಂದ ಮದ್ಯದ ಮೇಲಿನ ತೆರಿಗೆ ಸ್ಲ್ಯಾಬ್‌ಗಳು ಬದಲಾಗಿರುವುದರಿಂದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ಯಾವುದೇ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಹಣ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಖಚಿತಪಡಿಸಿದರು. ಮುಖಂಡರು ನೀಡಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ ಜ್ಯೋತಿ, ನಿರ್ದಿಷ್ಟವಾಗಿ ಯಾವ ಅಂಗಡಿಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಲಿಖಿತ ದೂರು ನೀಡಿದರೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜೊತೆಗೆ, ತಾಲ್ಲೂಕಿನ ಎಲ್ಲಾ ಬಾರ್ ಮತ್ತು ಮದ್ಯದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸರ್ಕಾರದ ಅಧಿಕೃತ ಬೆಲೆ ಪಟ್ಟಿ (Price List) ಪ್ರದರ್ಶಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದೂ ಅವರು ತಿಳಿಸಿದರು. ಸಭೆಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಗ್ರಾಮೀಣ ಭಾಗದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
    1
    ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಅವಿಶ್ರಾಂತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಜಾಲಕ್ಕೆ ಅಬಕಾರಿ ಇಲಾಖೆಯ ಸಿಬ್ಬಂದಿಯೇ ಕೈಜೋಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಎಸ್‌ಸಿ/ಎಸ್‌ಟಿ ಪ್ರಗತಿ ಪರಿಶೀಲನಾ ಹಾಗೂ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಈ ಆರೋಪವನ್ನು ತೀವ್ರ ಆಕ್ರೋಶದಿಂದ ವ್ಯಕ್ತಪಡಿಸಿದ್ದು, ಇಲಾಖೆಯ ವಾಹನ ಚಾಲಕರು ದಾಳಿ ನಡೆಸುವ ಮುನ್ನವೇ ಮಾಹಿತಿ ಸೋರಿಕೆ ಮಾಡಿ ಮದ್ಯ ವ್ಯಾಪಾರಿಗಳಿಗೆ ನೆರವಾಗುತ್ತಿದ್ದಾರೆ ಎಂದು ದೂರಿದ್ದಾರೆ. ಇದಲ್ಲದೆ, ತಾಲ್ಲೂಕಿನಾದ್ಯಂತ ಎಂ.ಆರ್.ಪಿ. (ಗರಿಷ್ಠ ಚಿಲ್ಲರೆ ಮಾರಾಟ ಬೆಲೆ) ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುವ ಮೂಲಕ ಬಹಿರಂಗ ಲೂಟಿ ನಡೆಯುತ್ತಿದೆ ಎಂದು ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಮಲ್ಲಿಕಾರ್ಜುನ ಅವರು, ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮತ್ತು ಸಂಘಟನೆಯ ಕಾರ್ಯಕರ್ತರು ನಿಖರ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು. ಅಧಿಕಾರಿಗಳು ದಾಳಿಗೆ ಹೊರಡುವ ಮುನ್ನವೇ ಇಲಾಖೆಯ ವಾಹನ ಚಾಲಕರು ಲಿಕ್ಕರ್ ಮಾಫಿಯಾದವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ರವಾನಿಸುತ್ತಿದ್ದಾರೆ. ಇದರಿಂದ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಅಕ್ರಮ ಮದ್ಯವೆಲ್ಲವೂ ಮಾಯವಾಗುತ್ತದೆ. ಕಣ್ಣೊರೆಸುವ ತಂತ್ರವಾಗಿ, ದಾಳಿಗೆ ಹೋದಾಗಲೂ ಅಸಲಿ ಮದ್ಯ ಮಾರಾಟ ಮಾಡುವ ಮನೆಯನ್ನು ಬಿಟ್ಟು, ಪಕ್ಕದ ಬೇರೆ ಇನ್ಯಾರದೋ ಮನೆಗಳ ಬಾಗಿಲು ತಟ್ಟಿ ನಾಟಕವಾಡುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದರು. ಇದರ ಜೊತೆಗೆ, ತಾಲ್ಲೂಕಿನಲ್ಲಿರುವ ಬಹುತೇಕ ಬಾರ್ ಹಾಗೂ ವೈನ್ ಶಾಪ್‌ಗಳಲ್ಲಿ, ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ (MSIL) ಮದ್ಯದ ಅಂಗಡಿಗಳು ಸೇರಿದಂತೆ, ಪ್ರತಿ ಮದ್ಯದ ಬಾಟಲಿ ಅಥವಾ ಪಾಕೆಟ್‌ಗೆ ಕನಿಷ್ಠ ₹15 ರಷ್ಟು ಹೆಚ್ಚುವರಿ ಹಣವನ್ನು ಕಾನೂನುಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಅವರು ವಿವರಿಸಿದರು. ತಾಲ್ಲೂಕಿನಲ್ಲಿ ಪ್ರತಿ ತಿಂಗಳು ಅಂದಾಜು 2 ಲಕ್ಷ ಲೀಟರ್ ಮದ್ಯ ಮಾರಾಟವಾಗುತ್ತಿದ್ದು, ಕೇವಲ ಒಂದು ಪಾಕೆಟ್ ಅಥವಾ ಬಾಟಲಿಗೆ ₹15 ಹೆಚ್ಚುವರಿ ಹಣ ವಸೂಲಿ ಮಾಡಿದರೂ ತಿಂಗಳಿಗೆ ಬಡ ಕೂಲಿ ಕಾರ್ಮಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಅಕ್ರಮವಾಗಿ ದೋಚಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಈ ರೀತಿಯ ಬಹಿರಂಗ ಲೂಟಿ ಅವ್ಯಾಹತವಾಗಿ ನಡೆದಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಮುಖಂಡರ ಆರೋಪ ಹಾಗೂ ದೂರುಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆಯ ಅಧಿಕಾರಿ ಜ್ಯೋತಿ ಅವರು, ಸರ್ಕಾರದಿಂದ ಮದ್ಯದ ಮೇಲಿನ ತೆರಿಗೆ ಸ್ಲ್ಯಾಬ್‌ಗಳು ಬದಲಾಗಿರುವುದರಿಂದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ಯಾವುದೇ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಹಣ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಖಚಿತಪಡಿಸಿದರು. ಮುಖಂಡರು ನೀಡಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ ಜ್ಯೋತಿ, ನಿರ್ದಿಷ್ಟವಾಗಿ ಯಾವ ಅಂಗಡಿಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಲಿಖಿತ ದೂರು ನೀಡಿದರೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜೊತೆಗೆ, ತಾಲ್ಲೂಕಿನ ಎಲ್ಲಾ ಬಾರ್ ಮತ್ತು ಮದ್ಯದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸರ್ಕಾರದ ಅಧಿಕೃತ ಬೆಲೆ ಪಟ್ಟಿ (Price List) ಪ್ರದರ್ಶಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದೂ ಅವರು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಗ್ರಾಮೀಣ ಭಾಗದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    15 hrs ago
  • ಚಿಂತಾಮಣಿ ಪಟ್ಟಣದಲ್ಲಿ ರೈತ ಸಮುದಾಯದ ಧ್ವನಿ ಮೊಳಗಿದ್ದು, KPRS ಸಂಘಟನೆ ಮಾವು ಬೆಳೆಗಾರರ ಹಿತಾಸಕ್ತಿಗಳ ಪರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
    1
    ಚಿಂತಾಮಣಿ ಪಟ್ಟಣದಲ್ಲಿ ರೈತ ಸಮುದಾಯದ ಧ್ವನಿ ಮೊಳಗಿದ್ದು, KPRS ಸಂಘಟನೆ ಮಾವು ಬೆಳೆಗಾರರ ಹಿತಾಸಕ್ತಿಗಳ ಪರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    34 min ago
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಪ್ರವಾಸ ಮುಗಿಸಿದ ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿಯೇ ಧರ್ಮಸ್ಥಳಕ್ಕೆ ಆಗಮಿಸಿ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ಅವರು, ಶುಕ್ರವಾರ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ವಿಜಯೇಂದ್ರ ಅವರ ಈ ಭೇಟಿಗೆ ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕರಾವಳಿ ಭಾಗದ ಪ್ರಮುಖ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತು ಯಶ್‌ಪಾಲ್ ಸುವರ್ಣ ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದರು. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ 'ಅಡ್ಡ ಮತದಾನ'ದ ಸತ್ಯಾಸತ್ಯತೆಯನ್ನು ಹೊರಹಾಕಲು ಮತ್ತು ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರಿಂದ ಆಣೆ-ಪ್ರಮಾಣ ಮಾಡಿಸಲು ಮೊದಲು ಯೋಜಿಸಲಾಗಿತ್ತು. ಆದರೆ, ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳವನ್ನು ರಾಜಕೀಯ ಆಣೆ-ಪ್ರಮಾಣಕ್ಕೆ ಬಳಸುವುದು ಸರಿಯಲ್ಲ ಎಂದು ಪಕ್ಷದ ಒಳಗಿನ ಹಿರಿಯ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಿರಿಯ ನಾಯಕರ ವಿರೋಧದಿಂದಾಗಿ ಆಣೆ-ಪ್ರಮಾಣದ ಯೋಜನೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ, ಪಕ್ಷದ ಕೆಲವು ನಾಯಕರು ಈ ಗೊಂದಲಕ್ಕೆ ನೇರವಾಗಿ ವಿಜಯೇಂದ್ರ ಅವರನ್ನೇ ಹೊಣೆಗಾರರನ್ನಾಗಿ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ರಾಜ್ಯಾಧ್ಯಕ್ಷರು, ಎಲ್ಲಾ ಶಾಸಕರನ್ನು ಕರೆತರುವ ನಿರ್ಧಾರವನ್ನು ಕೈಬಿಟ್ಟು ತಾವೊಬ್ಬರೇ ದಕ್ಷಿಣ ಕನ್ನಡಕ್ಕೆ ಧಾವಿಸಿ ದೇವರ ಮೊರೆ ಹೋಗಿರುವುದು ಕೇವಲ ಧಾರ್ಮಿಕ ಭೇಟಿಯಲ್ಲ, ಬದಲಿಗೆ ಇದೊಂದು ರಾಜಕೀಯ 'ಧರ್ಮ ಪರೀಕ್ಷೆ' ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಇದೇ ವೇಳೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರನ್ನು ಭೇಟಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ನಾಯಕರು ಆಶೀರ್ವಾದ ಪಡೆದರು.
    2
    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಪ್ರವಾಸ ಮುಗಿಸಿದ ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿಯೇ ಧರ್ಮಸ್ಥಳಕ್ಕೆ ಆಗಮಿಸಿ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ಅವರು, ಶುಕ್ರವಾರ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ವಿಜಯೇಂದ್ರ ಅವರ ಈ ಭೇಟಿಗೆ ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕರಾವಳಿ ಭಾಗದ ಪ್ರಮುಖ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತು ಯಶ್‌ಪಾಲ್ ಸುವರ್ಣ ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದರು.

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ 'ಅಡ್ಡ ಮತದಾನ'ದ ಸತ್ಯಾಸತ್ಯತೆಯನ್ನು ಹೊರಹಾಕಲು ಮತ್ತು ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರಿಂದ ಆಣೆ-ಪ್ರಮಾಣ ಮಾಡಿಸಲು ಮೊದಲು ಯೋಜಿಸಲಾಗಿತ್ತು. ಆದರೆ, ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳವನ್ನು ರಾಜಕೀಯ ಆಣೆ-ಪ್ರಮಾಣಕ್ಕೆ ಬಳಸುವುದು ಸರಿಯಲ್ಲ ಎಂದು ಪಕ್ಷದ ಒಳಗಿನ ಹಿರಿಯ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಹಿರಿಯ ನಾಯಕರ ವಿರೋಧದಿಂದಾಗಿ ಆಣೆ-ಪ್ರಮಾಣದ ಯೋಜನೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ, ಪಕ್ಷದ ಕೆಲವು ನಾಯಕರು ಈ ಗೊಂದಲಕ್ಕೆ ನೇರವಾಗಿ ವಿಜಯೇಂದ್ರ ಅವರನ್ನೇ ಹೊಣೆಗಾರರನ್ನಾಗಿ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ರಾಜ್ಯಾಧ್ಯಕ್ಷರು, ಎಲ್ಲಾ ಶಾಸಕರನ್ನು ಕರೆತರುವ ನಿರ್ಧಾರವನ್ನು ಕೈಬಿಟ್ಟು ತಾವೊಬ್ಬರೇ ದಕ್ಷಿಣ ಕನ್ನಡಕ್ಕೆ ಧಾವಿಸಿ ದೇವರ ಮೊರೆ ಹೋಗಿರುವುದು ಕೇವಲ ಧಾರ್ಮಿಕ ಭೇಟಿಯಲ್ಲ, ಬದಲಿಗೆ ಇದೊಂದು ರಾಜಕೀಯ 'ಧರ್ಮ ಪರೀಕ್ಷೆ' ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಇದೇ ವೇಳೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರನ್ನು ಭೇಟಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ನಾಯಕರು ಆಶೀರ್ವಾದ ಪಡೆದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    4 hrs ago
  • ಉತ್ತರಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ಅನಿರೀಕ್ಷಿತ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಓರ್ವ ವ್ಯಕ್ತಿ 11,000 ವೋಲ್ಟೇಜ್ ಸಾಮರ್ಥ್ಯದ ವಿದ್ಯುತ್ ಕಂಬವನ್ನು ಏರಿ ಅದರ ಮೇಲಿದ್ದ ವಿದ್ಯುತ್ ತಂತಿಗಳ ಮೇಲೆ ಮಲಗಿದ್ದ. ಈ ದೃಶ್ಯವು ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು. ಅದೃಷ್ಟವಶಾತ್, ಈ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ವ್ಯಕ್ತಿಗೆ ಯಾವುದೇ ವಿದ್ಯುತ್ ಆಘಾತ ಸಂಭವಿಸಲಿಲ್ಲ. ವಿಷಯ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ವಿದ್ಯುತ್ ಕಂಬದಿಂದ ಕೆಳಗೆ ಇಳಿಸಿದರು.
    1
    ಉತ್ತರಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ಅನಿರೀಕ್ಷಿತ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಓರ್ವ ವ್ಯಕ್ತಿ 11,000 ವೋಲ್ಟೇಜ್ ಸಾಮರ್ಥ್ಯದ ವಿದ್ಯುತ್ ಕಂಬವನ್ನು ಏರಿ ಅದರ ಮೇಲಿದ್ದ ವಿದ್ಯುತ್ ತಂತಿಗಳ ಮೇಲೆ ಮಲಗಿದ್ದ. ಈ ದೃಶ್ಯವು ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು.

ಅದೃಷ್ಟವಶಾತ್, ಈ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ವ್ಯಕ್ತಿಗೆ ಯಾವುದೇ ವಿದ್ಯುತ್ ಆಘಾತ ಸಂಭವಿಸಲಿಲ್ಲ. ವಿಷಯ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ವಿದ್ಯುತ್ ಕಂಬದಿಂದ ಕೆಳಗೆ ಇಳಿಸಿದರು.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.