Shuru
Apke Nagar Ki App…
ಕುರುಬಾರಹಳ್ಳಿ ಜಮೀನು ಒಪ್ಪಂದದ ಬಗ್ಗೆ ಶಾಸಕ ಶ್ರೀವತ್ಸ ಸಿಡಿಮಿಡಿ ಮೈಸೂರಿನ ಕುರುಬಾರಹಳ್ಳಿ ಸರ್ವೇ ನಂ.4ರಲ್ಲಿ ಇರುವ 24 ಎಕರೆ 10 ಗುಂಟೆ ಸರ್ಕಾರಿ ಜಮೀನು ಮಾರಾಟಕ್ಕೆ ಮುಂದಾದ ಪ್ರಕರಣದ ಬಗ್ಗೆ ಶಾಸಕ ಶ್ರೀವತ್ಸ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ಮೌಲ್ಯದ ಜಮೀನನ್ನು ಕೇವಲ ₹4.75 ಕೋಟಿಗೆ ಅಗ್ರಿಮೆಂಟ್ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ವಿಷಯ ಬಹಿರಂಗವಾದ ಬಳಿಕ ಅಧಿಕಾರಿಗಳು ತರಾತುರಿಯಲ್ಲಿ ಅಗ್ರಿಮೆಂಟ್ ರದ್ದು ಮಾಡಿ ಹಣವನ್ನು ವಾಪಸ್ ಪಡೆದಿರುವುದೂ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪ್ರಕರಣದಲ್ಲಿ ರೆವಿನ್ಯೂ ಹಾಗೂ ಸಬ್-ರಿಜಿಸ್ಟ್ರಾರ್ ಅಧಿಕಾರಿಗಳ ಕೈವಾಡವಿರಬಹುದೆಂದು ಹೇಳಿದ ಅವರು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Ashwini
ಕುರುಬಾರಹಳ್ಳಿ ಜಮೀನು ಒಪ್ಪಂದದ ಬಗ್ಗೆ ಶಾಸಕ ಶ್ರೀವತ್ಸ ಸಿಡಿಮಿಡಿ ಮೈಸೂರಿನ ಕುರುಬಾರಹಳ್ಳಿ ಸರ್ವೇ ನಂ.4ರಲ್ಲಿ ಇರುವ 24 ಎಕರೆ 10 ಗುಂಟೆ ಸರ್ಕಾರಿ ಜಮೀನು ಮಾರಾಟಕ್ಕೆ ಮುಂದಾದ ಪ್ರಕರಣದ ಬಗ್ಗೆ ಶಾಸಕ ಶ್ರೀವತ್ಸ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ಮೌಲ್ಯದ ಜಮೀನನ್ನು ಕೇವಲ ₹4.75 ಕೋಟಿಗೆ ಅಗ್ರಿಮೆಂಟ್ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ವಿಷಯ ಬಹಿರಂಗವಾದ ಬಳಿಕ ಅಧಿಕಾರಿಗಳು ತರಾತುರಿಯಲ್ಲಿ ಅಗ್ರಿಮೆಂಟ್ ರದ್ದು ಮಾಡಿ ಹಣವನ್ನು ವಾಪಸ್ ಪಡೆದಿರುವುದೂ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪ್ರಕರಣದಲ್ಲಿ ರೆವಿನ್ಯೂ ಹಾಗೂ ಸಬ್-ರಿಜಿಸ್ಟ್ರಾರ್ ಅಧಿಕಾರಿಗಳ ಕೈವಾಡವಿರಬಹುದೆಂದು ಹೇಳಿದ ಅವರು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
- ಜಯಶೀಲಮೈಸೂರು, ಮೈಸೂರು, ಕರ್ನಾಟಕ🙏on 24 March
More news from ಕರ್ನಾಟಕ and nearby areas
- ಹನೂರು: ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಏಪ್ರಿಲ್ 14ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಮುದಾಯದ ಮುಖಂಡರು ಸಲಹೆ, ಸೂಚನೆ ನೀಡಿ ಸಹಕರಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದ್ದಾರೆ. ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಜಯಂತಿ ಕಾರ್ಯಕ್ರಮ ಕೇವಲ ಆಚರಣೆಗೆ ಸೀಮಿತವಾಗದೆ, ಸಮಾಜದ ಮಾರ್ಗದರ್ಶನವನ್ನು ಪಾಲನೆ ಮಾಡುವ ಮೂಲಕ ಮಾತ್ರ ಇದರ ಅರ್ಥ ಸಿಗುತ್ತದೆ. ವಿವಿಧ ಗ್ರಾಮಗಳಿಂದ ಬಂದಿರುವ ಯಜಮಾನರು, ಸಮುದಾಯ ಮುಖಂಡರು ಸಲಹೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದರು. ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಚೈತ್ರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ, ಬಿ.ಇ.ಒ ಮಹೇಶ್, ಸಿಡಿಪಿಒ ಅಂಬಿಕಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ವಿವಿಧ ಗ್ರಾಮಗಳ ಸಮುದಾಯ ಮುಖಂಡರು ಉಪಸ್ಥಿತರಿದ್ದರು1
- ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ ಆರೋಪಗಳಿಗೆ ನಮ್ಮ ಪಕ್ಷದ ಮುಖಂಡರು ಉತ್ತರ ನೀಡಲು ಸಿದ್ದರಿದ್ದೇವೆ, ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು. ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು. ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು. 1
- ಸೂರ್ಯನ ಬಿಸಿಲಿನ ತಾಪಕ್ಕೆ ನೀರನ್ನು ಅರಸಿ ಬಂದ ನಾಯಿಗೆ. ನೀರುಣಿಸಿ ಮಾನವೀಯತೆ ಮೆರೆದ ಮಾನವ ನೀರನ್ನು ಅರಸಿ ಬಂದ ನಾಯಿಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬರು ನಾಯಿ ಯ ಬಾಯಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿ ನ ವ್ಯವಸ್ಥೆ ಮಾಡಬೇಕಾಗಿರುವುದು ಮಾನವ ಧರ್ಮ ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಮನೆ ಹಾಗೂ ಊರಿನಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಮಾಡಿ .1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- Post by ಅರವಿಂದ್ ರಾಜೀವ್1
- ಸುಳ್ಳು ಹೇಳುತ್ತಿದ್ದಾರೆ ನನ್ನ ಬಗ್ಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಂದು ಸತ್ಯವನ್ನ ಹೇಳಿಕೊಂಡ ಎ ಪಿ ರಾಘವ್ ಚಡ್ಡಾ1
- ಮಾಗಡಿ ; ವಿಶ್ವ ವಿಖ್ಯಾತ ಬೆಂಗಳೂರು ನಿರ್ಮಾತೃ ಧರ್ಮಪ್ರಭು ಕೆಂಪೇಗೌಡರಿಗೆ ನಿಲ್ಲಲು ಮಾಗಡಿಯಲ್ಲಿ ನೆಲೆ ಇಲ್ಲದಂತಾಗಿದೆ. ಧರ್ಮದ ಹಾದಿಯಲ್ಲಿ ನಡೆದ ಕೆಂಪೇಗೌಡರಿಗೆ ಮಾಗಡಿಯಲ್ಲಿ ನೆಲೆ ಇಲ್ಲ ಎಂದರೆ ನಾಡಿಗೆ ಅವಮಾನ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಚ್.ಎಂ.ಕೃಷ್ಣಮೂರ್ತಿಯೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಕೆಂಪೇಗೌಡರ ಪ್ರತಿಮೆಯನ್ನು ಗೌರವಯುತವಾಗಿ ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದ್ದರಿಂದ ನಾವೂ ಕೂಡ ಕೋರ್ಟ್ ಆದೇಶಕ್ಕೆ ತಲೆಭಾಗಿ ಗೌರವ ಕೊಡುತ್ತೇವೆ. ಆದರೆ ಪುರಸಭೆ ಅಧಿಕಾರಿಗಳು ರಾತ್ರೊರಾತ್ರಿ ಪ್ರತಿಮೆಯ ಬಳಿಯ ಮೆಟ್ಟಿಲ್ಲನ್ನು ತೆರವುಗೊಳಿಸುವ ಅನಿವಾರ್ಯತೆ ಏನಿತ್ತು. ಅದರಲ್ಲೂ ಅಮಾವಾಸ್ಯೆ ದಿನವೇ ಮೆಟ್ಟಿಲು ಕಿತ್ತು ಹಾಕಿದ್ದು ಒಂದೆಡೆಯಾದರೆ ಅಂದಿನಿಂದ ಕೆಂಪೇಗೌಡ ಪ್ರತಿಮೆ ಗೌರವಕ್ಕಾದರೂ ಹೂವಿನ ಹಾರ ಹಾಕದೆ ಅವಮಾನಿಸಲಾಗಿದೆ. ಜತೆಗೆ ದಿಕ್ಕುದೆಸೆ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿಮೆ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕಾಮಗಾರಿಯೂ ನಡೆದಿದೆ. ಈಗ ಇದೊಂದು ವಿವಾಧಾತ್ಮಕ ಸ್ಥಳಾವಾಗಿದೆ. ಕೆಂಪೇಗೌಡರು ಸತ್ಯದ ಹಾದಿಯಲ್ಲಿ ನಡೆದಿದ್ದರು. ಅವರನ್ನು ಅವಮಾನಿಸುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಅದರ ಫಲ ಅವರೇ ಉಣ್ಣಬೇಕಿದೆ. ಕಾದು ನೋಡುತ್ತೇನೆ ಎಂದು ಹೆಸರೇಳದೆ ಶಾಸಕರ ವಿರುದ್ಧ ಹರಿಹಾಯ್ದರು. ಈಗಾಗಲೇ ಅಡಿಗೆ 45 ರೂ ನಂತೆ ನಂತೆ 60/70 ವಿಸ್ತೀರ್ಣದ ಸ್ಥಳವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಪುರಸಭೆ ನೀಡಿದೆ. ನಮಗೂ ಕೆಂಪೇಗೌಡರ ಹೆಸರಿನಲ್ಲಿ 1 ಎಕರೆ ಜಮೀನು ಸರ್ಕಾರ ಮಂಜೂರು ಮಾಡಿಕೊಡಲಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಜಮಾ ಮಾಡುತ್ತೇನೆ. ಇಲ್ಲೊಂದು ಸುಂದರವಾದ ಪಾರ್ಕ್ ನಿರ್ಮಿಸಿ ಜನರ ಆರೋಗ್ಯಕ್ಕೆ ಮುಂದಾಗುವುದಾಗಿ ಮನವಿ ಮಾಡಿದ ಅವರು. ಈಗಿನ ಕೆಂಪೇಗೌಡರ ಪ್ರತಿಮೆಯ ಮೆಟ್ಟಿಲು ತೆರವುಗೊಳಿಸಿರುವುದರಿಂದ ಪ್ರತಿಮೆಗೆ ಹಾರ ಹಾಕಲಾಗದ ಪರಿಸ್ಥಿತಿ ತಂದೊಡ್ಡಿರುವ ಪುರಸಭೆ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಅವರಿಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು ನನ್ನ ಸ್ವಂತ ದುಡಿಮೆಯ ಹಣದಲ್ಲಿ ಸುಂದರವಾದ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ಪುರಸಭಾ ಆವರಣದಲ್ಲಿ ಕಳೆದ 22 ವರ್ಷಗಳ ಹಿಂದೆ ಅನೇಕ ಮಠಮಾನ್ಯಗಳ ಶ್ರೀಗಳರು, ಸಚಿವರು, ಶಾಸಕರು, ಗಣ್ಯರು, ರೈತರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಮೆಯನ್ನು ಪ್ರತಿμÁ್ಠಪಿಸಿ, ಆದ್ದೂರಿಯಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅನ್ನಸಂತರ್ಪಣೆ ಸಹ ಅವಿರತವಾಗಿ ನಡೆದಿತ್ತು. ಈ ಮೂಲಕ ಕೆಂಪೇಗೌಡರ ಇತಿಹಾಸವನ್ನು ಮರುಕಳಿಸುವಂತ ಕೆಲಸವನ್ನು ಮಾಡಿ ತೋರಿಸಿದ್ದೆ. ಹೀಗಾಗಿ ಆವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸರ್ಕಾರ ಇದೆ ಎಂದು ದೆಹಲಿಯಿಂದ ಕಲ್ಕತ್ತಗೆ ಎಂಬಂತೆ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಹಿಂದೆ ಶಾಸಕರ ತಾಳಕ್ಕೆ ಕುಣಿದ ಕೆಲವು ಅಧಿಕಾರಿಗಳು ನೇಣಿನ ಕುಣಿಕೆಗೆ ತಲೆಯೊಡ್ಡಬೇಕಾಯಿತು. ಈಗ ಅವರ ಕುಟುಂಬಗಳು ಶೋಚನೀಯಸ್ಥಿತಿ ತಲುಪಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಭಾರಿ ವಿವಾಧಕ್ಕೆ ಒಳಗಾದ ಧರ್ಮಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ; 2008 ರಲ್ಲಿ ಪುರಸಭೆ ಆಡಳಿತ ಮಂಡಲಿ ರೆಜ್ಯುಲೇಷನ್ ಮಾಡಿ ಪ್ರತಿಮೆ ಸ್ಥಾಪನೆಗೆ 50/50 ಸ್ಥಳ ಮಂಜೂರು ಮಾಡಿತ್ತು. ಈಗ ಕೆಂಪೇಗೌಡರ ಪ್ರತಿಮೆ ಸ್ಥಳವನ್ನು ಸೇರಿಸಿಕೊಂಡಂತೆ ಸುಮಾರು 2 ಎಕರೆ ಪ್ರದೇಶದಲ್ಲಿ100 ಬೆಡ್ಡಿನ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಶಾಸಕರು ಮುಂದಾಗಿದ್ದಾರೆ. ಕೆಂಪೇಗೌಡರ ಪ್ರತಿಮೆಯನ್ನು ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸಬಹುದಿತ್ತು. ಕೆಂಪೇಗೌಡರ ಕೋಟೆ ಕಂದಕ ಮುಚ್ಚದಂತೆ ನಾನು ಕೋರ್ಟ್ ಮೊರೆ ಹೋಗಿದ್ದರಿಂದ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಅಧಿಕಾರಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು. ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿ, ಧರ್ಮಪ್ರಭು ಕೆಂಪೆಗೌಡರು ಸರ್ವಧರ್ಮಪ್ರಿಯರು, ಎಲ್ಲ ವರ್ಗದ ಜನರಿಗೂ ಒಂದೊಂದು ಪೇಟೆಯನ್ನು ಕಟ್ಟಿಕೊಟ್ಟ ಮಹಾನೀಯರ ಪ್ರತಿಮೆಗೆ ದಕ್ಕೆಯಾಗುತ್ತಿದೆ. ಶಾಸಕರ ಸರ್ವಾಧಿಕಾರ ಇಲ್ಲಿ ನಡೆಯುತ್ತಿದೆ. ನಾವೂ ಅವರ ಪ್ರತಿಮೆಗೆ ಅವಮಾನಿಸಿದರೆ ಅವರ ಹೃದಯಕ್ಕೆ ಅವಮಾನಿಸಿದಂತೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಅವರೇ ಉಣ್ಣಬೇಕಿದೆ ಎಂದು ಕಿಡಿಕಾರಿದರು. ನಿಸರ್ಗ ಪರಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್,ಶಿವಲಿಂಗಯ್ಯ ಮಾತನಾಡಿ, ಗೌರವಯುತವಾಗಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದೆ. ಇಲ್ಲಿರುವ ಮರಗಿಡಗಳನ್ನು ತೆರವುಗೊಳಿಸಬಾರದು. ತೆರವುಗೊಳಿಸಬೇಕಾದರೆ ಕಾನೂನಾತ್ಮಕವಾಗಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದೆ. ಆದರೆ ಈಗಾಗಲೆ ಪುರಸಭೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಿದೆ. ಆರೋಗ್ಯ ಇಲಾಖೆಗೆ ವರ್ಗಾಯಿಸಿದ ಮೇಲೆ ಪ್ರತಿಮೆಯ ಮೆಟ್ಟಿಲು ಕಿತ್ತು ಹಾಕಲು ಇವರಿಗೇನು ಹಕ್ಕಿದೆ. ಇದೊಂದು ರಾಹಕೀಯ ಶಡ್ಯಂತರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಕ್ಸ್ ; ಸರ್ಕಾರದ ಮತ್ತು ಕೋರ್ಟ್ ಆದೇಶವನ್ನು ಪಾಲಿಸುವುದು ನಮ್ಮ ಕೆಲಸ. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ, ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ಜಮೀನು ವರ್ಗಾಯಿಸಲು ಅದೇಶ ನೀಡಿದ್ದರಿಂದ ವರ್ಗಾಯಿಸಿದ್ದೇವೆ. ಪ್ರತಿಮೆ ತೆರವುಗೊಳಿಸಲು ಕೋರ್ಟ್ ಆದೇಶವಿರುವುದರಿಂದ ಸಂಬಂಧಪಟ್ಟರು ಸ್ಥಳಾಂತರಿಸಲಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನೀವೇನಿದ್ದರೂ ಕೇಳುವುದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ನಮ್ಮದೇನು ಅಭ್ಯಂತರವಿಲ್ಲ. ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವೆ. ಟಿ.ಎನ್.ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆ ಮಾಗಡಿ. ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ಮಾಡಬಾಳ್ ಕೆಂಪೇಗೌಡ, ಸಾಗರ್, ಎನ್‍ಇಎಸ್ ಆನಂದ್, ದೊಡ್ಡಿ ಗೋಪಿ, ನಾಗರಾಜು, ಶಿವಶಂಕರ್, ಮೂರ್ತಿ, ಮೋಹನ್, ರಾಜೇಶ್, ಶಿವಣ್ಣ, ಕುಮಾರ್, ಆರ್‍ಐ ರವಿ, ಎಂಜಿನಿಯರ್ ಪ್ರಶಾಂತ್ ಶೆಟ್ಟಿ ಇತರರು ಇದ್ದರು.1
- Post by ಅರವಿಂದ್ ರಾಜೀವ್1
- ಬೆಂಗಳೂರಿನಲ್ಲಿ ಆಟೋ ಗ್ಯಾಸ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಹಲವು ಗ್ಯಾಸ್ ಬಂಕ್‌ಗಳಲ್ಲಿ ₹90 ರಿಂದ ₹115ರವರೆಗೆ ದರ ನಿಗದಿ ಮಾಡಿರುವುದರಿಂದ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶನಿವಾರ ವೀರೇಶ್ ಥಿಯೇಟರ್ ಬಳಿ ಗ್ಯಾಸ್ ಸಿಗದೆ ಆಕ್ರೋಶಗೊಂಡ ಚಾಲಕರು ಬಂಕ್ ಸಿಬ್ಬಂದಿಯೊಂದಿಗೆ ಜಗಳವಾಡಿದ ಘಟನೆ ನಡೆದಿದೆ. ಬೆಳಗ್ಗಿನಿಂದಲೇ ಹಲವು ಕಿಲೋಮೀಟರ್‌ಗಳಷ್ಟು ಆಟೋಗಳು ಸಾಲುಗಟ್ಟಿ ನಿಂತಿದ್ದು, ಚಾಲಕರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದರ ಏರಿಕೆ ಹಾಗೂ ಪೂರೈಕೆ ಸಮಸ್ಯೆ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.1