ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಭಾಷೆ ಹಾಗೂ ಮಾಧ್ಯಮ ಹುದ್ದೆಗಳ ಕೈಬಿಡುವಿಕೆ: ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅಸಮಾಧಾನ, ಸೇರ್ಪಡೆಗೆ ಪತ್ರದ ಮೂಲಕ ಆಗ್ರಹ ಕುಷ್ಟಗಿ : ರಾಜ್ಯ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ಸುಮಾರು 15,000 ಕಿರಿಯ ಪ್ರಾಥಮಿಕ, ಪದವೀಧರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಭಾಷಾ ಶಿಕ್ಷಕರು ಮತ್ತು ಉರ್ದು ಮಾಧ್ಯಮ ಶಾಲಾ ಶಿಕ್ಷಕರ ಹುದ್ದೆಗಳನ್ನು ಕೈಬಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕುಷ್ಟಗಿ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಅಮರೇಗೌಡ ಎಲ್. ಪಾಟೀಲ ಬಯ್ಯಾಪುರ ಅವರು ಪತ್ರ ಬರೆದು ತಕ್ಷಣವೇ ಈ ಹುದ್ದೆಗಳನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಅನ್ಯಾಯ – ಬಯ್ಯಾಪುರ ಕಳವಳ: ರಾಜ್ಯದಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಅಗತ್ಯ ಶಿಕ್ಷಕರ ನೇಮಕಾತಿ ಸರಿಯಾಗಿ ನಡೆದಿಲ್ಲ. ಬಹುದಿನಗಳ ನಂತರ ಸರ್ಕಾರ ಶಿಕ್ಷಕರ ಭರ್ತಿಗೆ ಮುಂದಾಗಿರುವುದು ಸ್ವಾಗತಾರ್ಹವಾದರೂ, ಉರ್ದು ಭಾಷೆ ಹಾಗೂ ಉರ್ದು ಮಾಧ್ಯಮದ ಹುದ್ದೆಗಳನ್ನು ಕೈಬಿಟ್ಟಿರುವುದು ಸಮಂಜಸವಲ್ಲ. ಇದರಿಂದ ಉರ್ದು ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭಾರೀ ಹಿನ್ನಡೆಯಾಗಲಿದ್ದು, ಮಕ್ಕಳಿಗೆ ನೇರವಾಗಿ ಅನ್ಯಾಯವಾಗಲಿದೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಹಳೆಯ ಬ್ಯಾಕ್‌ಲಾಗ್ ಹುದ್ದೆಗಳೂ ಭರ್ತಿಯಾಗಿಲ್ಲ: 2022ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಒಟ್ಟು 755 ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಅಂದು ಕೇವಲ 427 ಅರ್ಹ ಅಭ್ಯರ್ಥಿಗಳು ಲಭ್ಯವಾಗಿ ಆ ಹುದ್ದೆಗಳು ಮಾತ್ರ ಭರ್ತಿಯಾಗಿದ್ದವು. ಉಳಿದ 328 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು. ಪ್ರಸ್ತುತ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಈ ಹಿಂದಿನ ಬ್ಯಾಕ್‌ಲಾಗ್ ಹುದ್ದೆಗಳನ್ನಾಗಲಿ ಅಥವಾ ಪ್ರಸ್ತುತ ಖಾಲಿ ಇರುವ ಹೊಸ ಹುದ್ದೆಗಳನ್ನಾಗಲಿ ಪರಿಗಣಿಸದೆ ಸಂಪೂರ್ಣವಾಗಿ ಕೈಬಿಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಅವರು ವಿವರಿಸಿದ್ದಾರೆ. ತಕ್ಷಣವೇ ಅಧಿಸೂಚನೆಗೆ ಸೇರ್ಪಡೆಗೆ ಮನವಿ: ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆಯಲ್ಲೇ ಕಿರಿಯ ಪ್ರಾಥಮಿಕ, ಪದವೀಧರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಉರ್ದು ಭಾಷೆ ಮತ್ತು ಉರ್ದು ಮಾಧ್ಯಮ ಹುದ್ದೆಗಳನ್ನು ತಕ್ಷಣವೇ ಸೇರ್ಪಡೆಗೊಳಿಸಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಶಿಕ್ಷಣ ಇಲಾಖೆಯ ಆಯುಕ್ತರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಭಾಷೆ ಹಾಗೂ ಮಾಧ್ಯಮ ಹುದ್ದೆಗಳ ಕೈಬಿಡುವಿಕೆ: ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅಸಮಾಧಾನ, ಸೇರ್ಪಡೆಗೆ ಪತ್ರದ ಮೂಲಕ ಆಗ್ರಹ ಕುಷ್ಟಗಿ : ರಾಜ್ಯ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ಸುಮಾರು 15,000 ಕಿರಿಯ ಪ್ರಾಥಮಿಕ, ಪದವೀಧರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಭಾಷಾ ಶಿಕ್ಷಕರು ಮತ್ತು ಉರ್ದು ಮಾಧ್ಯಮ ಶಾಲಾ ಶಿಕ್ಷಕರ ಹುದ್ದೆಗಳನ್ನು ಕೈಬಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕುಷ್ಟಗಿ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಅಮರೇಗೌಡ ಎಲ್. ಪಾಟೀಲ ಬಯ್ಯಾಪುರ ಅವರು ಪತ್ರ ಬರೆದು ತಕ್ಷಣವೇ ಈ ಹುದ್ದೆಗಳನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಅನ್ಯಾಯ – ಬಯ್ಯಾಪುರ ಕಳವಳ: ರಾಜ್ಯದಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಅಗತ್ಯ ಶಿಕ್ಷಕರ ನೇಮಕಾತಿ ಸರಿಯಾಗಿ ನಡೆದಿಲ್ಲ. ಬಹುದಿನಗಳ ನಂತರ ಸರ್ಕಾರ ಶಿಕ್ಷಕರ ಭರ್ತಿಗೆ ಮುಂದಾಗಿರುವುದು ಸ್ವಾಗತಾರ್ಹವಾದರೂ, ಉರ್ದು ಭಾಷೆ ಹಾಗೂ ಉರ್ದು ಮಾಧ್ಯಮದ ಹುದ್ದೆಗಳನ್ನು ಕೈಬಿಟ್ಟಿರುವುದು ಸಮಂಜಸವಲ್ಲ. ಇದರಿಂದ ಉರ್ದು ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಬಡ
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭಾರೀ ಹಿನ್ನಡೆಯಾಗಲಿದ್ದು, ಮಕ್ಕಳಿಗೆ ನೇರವಾಗಿ ಅನ್ಯಾಯವಾಗಲಿದೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಹಳೆಯ ಬ್ಯಾಕ್‌ಲಾಗ್ ಹುದ್ದೆಗಳೂ ಭರ್ತಿಯಾಗಿಲ್ಲ: 2022ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಒಟ್ಟು 755 ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಅಂದು ಕೇವಲ 427 ಅರ್ಹ ಅಭ್ಯರ್ಥಿಗಳು ಲಭ್ಯವಾಗಿ ಆ ಹುದ್ದೆಗಳು ಮಾತ್ರ ಭರ್ತಿಯಾಗಿದ್ದವು. ಉಳಿದ 328 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು. ಪ್ರಸ್ತುತ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಈ ಹಿಂದಿನ ಬ್ಯಾಕ್‌ಲಾಗ್ ಹುದ್ದೆಗಳನ್ನಾಗಲಿ ಅಥವಾ ಪ್ರಸ್ತುತ ಖಾಲಿ ಇರುವ ಹೊಸ ಹುದ್ದೆಗಳನ್ನಾಗಲಿ ಪರಿಗಣಿಸದೆ ಸಂಪೂರ್ಣವಾಗಿ ಕೈಬಿಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಅವರು ವಿವರಿಸಿದ್ದಾರೆ. ತಕ್ಷಣವೇ ಅಧಿಸೂಚನೆಗೆ ಸೇರ್ಪಡೆಗೆ ಮನವಿ: ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆಯಲ್ಲೇ ಕಿರಿಯ ಪ್ರಾಥಮಿಕ, ಪದವೀಧರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಉರ್ದು ಭಾಷೆ ಮತ್ತು ಉರ್ದು ಮಾಧ್ಯಮ ಹುದ್ದೆಗಳನ್ನು ತಕ್ಷಣವೇ ಸೇರ್ಪಡೆಗೊಳಿಸಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಶಿಕ್ಷಣ ಇಲಾಖೆಯ ಆಯುಕ್ತರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
- ಸರ್ವಸ್ವವನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಹಿಳೆಗೆ ಇದೆ:- ಡಾ ಹೀರಾ ಕುಷ್ಟಗಿ:- ಹೆಣ್ಣನ್ನು ಹೆಣ್ಣಾಗಿ ನೋಡುವದಕ್ಕಿಂತ ಹೆಣ್ಣನ್ನು ಒಬ್ಬ ಸರಿ ಸಮಾನವಾದ ಮನುಷ್ಯರಂತೆ ನೋಡಬೇಕು ಹೆಣ್ಣಿಗೆ ಈ ಜಗತ್ತನ್ನು ಗೆಲ್ಲುವ ಶಕ್ತಿ ಒಬ್ಬ ಮಹಿಳೆಗೆ ಇದ್ದು ಹೆಣ್ಣು ಏನಾನ್ನಾದರು ಸಾಧಿಸಬಲ್ಲಳು ಅದಕ್ಕಾಗಿ ಬಿ.ಎ ಪದವಿಯಲ್ಲಿ ಓದುತ್ತಿರುವ ಮಹಿಳೆಯರು ಹೆಚ್ಚು ಅಂಕ ತೆಗೆಯುವ ಮೂಲಕ ಒಳ್ಳೆಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳ ಕೀರ್ತಿ ಮತ್ತು ಕಾಲೇಜಿನ ಕೀರ್ತಿ ಗಳಿಸಬೇಕು ಎಂದು ಡಾ.ನಾಗರಾಜ ಹೀರಾ ಜಿಲ್ಲಾ ನೋಡಲ್ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರು ಹೇಳಿದರು. ಇಲ್ಲಿನ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಆನರ್ಸ್ ಎಂಬುವದು ಬಡವರು ಕಲಿಯುವ ವಿದ್ಯಯಲ್ಲ ಆನಸ್೯ ಎಂದರೆ ಬದುಕುವ ಕಲೆ ಈ ಒಂದು ಶಿಕ್ಷಣ ಇಡೀ ಜಗತ್ತಿನ ಪ್ರಕ್ರಿಯೆಯಲ್ಲಿ ಬಿ.ಎ ಪದವಿ ಆನರ್ಸ್ ಶಿಕ್ಷಣವಾಗಿದೆ. ಆದರೆ ಇವತ್ತಿನ ಶಿಕ್ಷಣ ತಂತ್ರಜ್ಞಾನದ ಮೂಲಕ ನಾವುಗಳು ಶಿಕ್ಷಣ ಪಡೆಯಬೇಕಾಗಿದೆ. ಅದಕ್ಕಾಗಿ ನಿತ್ಯ ನಿರಂತರ ಶಿಕ್ಷಣ ಪಡೆದಾಗ ಮಾತ್ರ ನಾವುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಂದರೆ ಒಂದು ಮಾಹಿತಿ ಕೇಂದ್ರವಿದ್ದಂತೆ ಆದರೆ ಇತಿಹಾಸದ ಪುಟಗಳಲ್ಲಿ ನಾವುಗಳು ನೋಡಿದಾಗ ಎಲ್ಲಾ ಪುಟಗಳಲ್ಲಿ ಹೆಣ್ಣು ಮೊದಲನೆಯ ಸ್ಥಾನದಲ್ಲಿ ಇದ್ದಾಳೆ.ಈ ಜಗತ್ತು ಸೃಷ್ಟಿಯಾಗಿದ್ದು ಹೆಣ್ಣಿನಿಂದ ಹೆಣ್ಣಿನಿಂದ ಮಾಹಾ ಭಾರತ, ಹೆಣ್ಣಿನಿಂದ ರಾಮಾಯಣ ಅದಕ್ಕಾಗಿ ಪ್ರತಿಯೊಬ್ಬರು ಯಾರು ಕೂಡ ಹೆದರದೆ ಉತ್ತಮ ಶಿಕ್ಷಣವಂತರಾಗಿ ಬಡವರಾದರೆ ಸರಿ ಶ್ರೀಮಂತರಾದರೆ ಸರಿ ಯಾರು ಯಾವ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ ಅವರ ಮೇಲೆ ಆಲಂಬನೆ ಆಗಿರುತ್ತದೆ. ಇವತ್ತಿನ ದಿನಮಾನದಲ್ಲಿ ಚಲವದಿದ್ದರೆ ಈ ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಸಾಧನೆ ಸಾಲಿನಲ್ಲಿ ನಿಂತು ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಮೂಲಕ ಅಂಕವನ್ನು ಪಡೆದು ಕಾಲೇಜಿನ ಕೀರ್ತಿ ತರುವ ಮೂಲಕ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ.ಪ.ಪೂ.ಕಾಲೇಜು ದೋಟಿಹಾಳ ಉಪನ್ಯಾಸಕಿ ಶ್ರೀಮತಿ ಪ್ರಿಯದರ್ಶಿನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ ಕಾಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕಾಲೇಜು ಅಧ್ಯಕ್ಷರಾದ ಹನಮಂತಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ, ಮಾಜಿ ಪಿ ಕಾಡ್೯ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸೂರ್ಯಕಾಂತ ದೇಸಾಯಿ, ಮಾ.ಹೊ.ಮ.ಪ.ಕಲಾ ಕಾಲೇಜು ಪ್ರಾಂಶುಪಾಲರಾದ ತಿಪ್ಪಣ್ಣ ಬಿಜಕಲ್, ದ್ಯಾಮಣ್ಣ ಕಟ್ಟಿಹೊಲ, ಸತ್ಯಪ್ಪ ರಾಜೂರು, ಎ.ವಾಯ್.ಲೋಕರೆ, ಕ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚೌಡ್ಕಿ, ಮಂಜುನಾಥ ಮಾಹಾಲಿಂಗಪೂರ, ಮುಖೇಶ ನಿಲೋಗಲ್, ಶಶಿಧರ ಕುಂಬಾರ, ಸಂಗಮೇಶ ಬಿಳಿಯಪ್ಪನವರ್, ಸುಂದರಕುಮಾರ ಚೌಡ್ಕಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಹಲವರು ಉಪಸ್ಥಿತರಿದ್ದರು.2
- ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.2
- ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2111ನೇ ಮಧ್ಯವರ್ಜನ ಶಿಬಿರ ನಗರದ ಅನುಭವ ಮಂಟಪದಲ್ಲಿ ನಡೆಯಿತು. ಈ ಮಧ್ಯವರ್ಜನ ಶಿಬಿರವನ್ನು ನಗರಸಭೆಯ ಅಧ್ಯಕ್ಷರಾದ ಸುಧಾರಣಿ ಸಂಗಮ್, ಸದಸ್ಯರಾದ ರೇಷ್ಮಾ ಮಾರನಬಸರಿ, ಸವಿತಾ ಚಲವಾದಿ, ಯಲ್ಲಪ್ಪ ರಾಜಾಪೂರ,ಹನಮಂತ ತುಂಬದ, ಮಾಹಾಂತೇಶ ಹನಮನಾಳ ಹಾಗೂ ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.3
- ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------1
- ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ1
- ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ ರಾಜ ಹೇಳಿಕೆ1
- ಇಳಕಲ್‌ದ ಮಹಾಂತೇಶ ಅಂಗಡಿ ನಿವಾಸದಲ್ಲಿ ಪೂಜ್ಯ ಶ್ರೀ ರುದ್ರಾರಾಧ್ಯ ಶ್ರೀಗಳಿಂದ ವಿಶೇಷ ಪೂಜೆ ಪವಿತ್ರ ಶ್ರಾವಣ ಮಾಸದ ನಿಮಿತ್ತ ಇಳಕಲ್ಲ ನಗರದ ಭಕ್ತರಾದ ಮಹಾಂತೇಶ ಅಂಗಡಿ ಅವರ ನಿವಾಸದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀಗುರುಗಿರಿಸಿದ್ದೇಶ್ವರ ನಿಜೈಕ್ಯ ಕ್ಷೇತ್ರ ಶ್ರೀಮಠದ ಪರಮಪೂಜ್ಯ ವೇದಮೂರ್ತಿ ರುದ್ರಾರಾಧ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನೆರವೇರಿತು. ಶ್ರೀಗಳು ಇಷ್ಟಲಿಂಗ ಪೂಜೆ ಹಾಗೂ ಪೂಜಾ ವಿಧಿವಿಧಾನ ಹಾಗೂ ೧೦೮ ಜಂಗಮರಾಧನೆ ಹಾಗೂ ಪ್ರಸಾದ ಸೇವೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಹರಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತೇಶ ಅಂಗಡಿ, ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ನಗರದ ಪ್ರಮುಖ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿದರು.1
- ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.2