ವೈದ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ.! OPD ಸೇವೆ ಬಂದ್.! ವೈದ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ.! OPD ಸೇವೆ ಬಂದ್.! ಸಂವಿಧಾನ ಶಕ್ತಿ ನ್ಯೂಸ್ ಮಾ: 10 ಶಿಡ್ಲಘಟ್ಟ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ನೌಕರರು ಹೊರ ರೋಗಿಗಳ ವಿಭಾಗದ (OPD) ಕರ್ತವ್ಯವನ್ನು ಬಹಿಷ್ಕರಿಸಿ ಇಂದಿನಿಂದ (ಮಾರ್ಚ್ 11) ಮುಷ್ಕರ ನಡೆಸಲಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸುವವರೆಗೂ ಹಂತ ಹಂತವಾಗಿ ಮುಷ್ಕರ ನಡೆಸಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಮಂಗಳವಾರದಂದು ತಾಲ್ಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಗಗನ ಸಿಂಧು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಸೇರಿದಂತೆ ವೃಂದ ಸಂಘಗಳ ನೇತೃತ್ವದಲ್ಲಿ ಮಾರ್ಚ್ 11 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ತುರ್ತು ಚಿಕಿತ್ಸೆ ಹೊರತುಪಡಿಸಿ, ಸಾಮಾನ್ಯ ಹೊರರೋಗಿಗಳ ತಪಾಸಣೆ ಸೇವೆಗಳು ಲಭ್ಯವಿರುವುದಿಲ್ಲ. ವೈದ್ಯರ ಬೇಡಿಕೆಗಳೇನು.? : 4 ವರ್ಷಗಳಿಂದ ನಡೆಯದ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ, ಔಷಧಗಳ ಕೊರತೆ, ಮತ್ತು ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ, ವೈದ್ಯರು, ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾದರಿಯಲ್ಲಿ ವೇತನ ನೀಡಬೇಕು. ಗುತ್ತಿಗೆ ವೈದ್ಯ, ನೌಕರರು, ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಭದ್ರತೆ ನೀಡಿ, ವೇತನ ಹೆಚ್ಚಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ 6,000 ನೌಕರರಿಗೆ ವೇತನ ಭತ್ಯೆ ಕೊಡಬೇಕು. ಖಾಲಿ ಇರುವ 39 ಸಾವಿರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡಿ, ಜೇಷ್ಠತಾ ಪಟ್ಟಿ ಪ್ರಕಟಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ಮುಷ್ಕರಕ್ಕೆ ಸರಕಾರಿ ನೌಕರರ ಸಂಘ ಸಹಾ ಬೆಂಬಲ ಸೂಚಿಸಿದ್ದು, ಮೊದಲ ಹಂತದಲ್ಲಿ 11-03-2026 ರಿಂದ 15-03-2026 ತಾಲ್ಲೂಕು ಆಸ್ಪತ್ರೆ, ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯಕೇಂದ್ರ, ಪ್ರಾಥಮಿಕ ಆರೋಗ್ಯಕೇಂದ್ರ, ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲಾ ವೃಂದದ ವೈದ್ಯರು, ಅಧಿಕಾರಿ-ನೌಕರರು ಕಷ್ಟು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ, ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುವುದು. ಎರಡನೇ ಹಂತದಲ್ಲಿ ದಿನಾಂಕ: 16-03-2026 ಬೇಡಿಕೆಗಳು ಈಡೇರುವವರೆವಿಗೂ ರಾಜ್ಯದ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು. ಮುಷ್ಕರವನ್ನು ನೌಕರರು ಕರ್ತವ್ಯಕ್ಕೆ ಅನಿರ್ಧಿಷ್ಟಾವಧಿವರೆಗೆ ಗೈರು ಹಾಜರಾಗುವ ಮೂಲಕ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ, ಆಡಳಿತ ವೈದ್ಯಾಧಿಕಾರಿ ಮನೋಹರ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್ ಸುಬ್ಬಾರೆಡ್ಡಿ, ಸೇರಿದಂತೆ ಆರೋಗ್ಯ ಇಲಾಖೆಯ ಟಿ.ಟಿ ನರಸಿಂಹಪ್ಪ, ಸಿಬ್ಬಂದಿ ಹಾಜರಿದ್ದರು.

- Post by Venu Gopal2
- ದೇವನಹಳ್ಳಿ ದೇವನಹಳ್ಳಿ ಹೊಟೇಲ್ ಮಾಲೀಕರಿಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬಿಸಿ. ಕೆಂಪೇಗೌಡ ಏರ್ ಪೋರ್ಟ್ ಸುತ್ತಲಿರುವ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ. ಗ್ಯಾಸ್ ಸಿಲಿಂಡರ್ ಸಮರ್ಪಕ ಪೂರೈಕಿಯಿಂದ ಕಂಗಾಲಾದ ಹೊಟೇಲ್ ಮಾಲೀಕರು. ದೇವನಹಳ್ಳಿ ಪಟ್ಟಣದ 100ಕ್ಕೂ ಹೆಚ್ಚು ಹೊಟೇಲ್ ಗಳಿಗ ಪೂರೈಕೆ ಹಾಗದ ಸಿಲಿಂಡರ್. ಹತ್ತು ಸಿಲಿಂಡರ್ ಪೂರೈಕೆ ಆಗ್ತಿದ್ದ ಹೊಟೇಲ್ ಗಳಿಗೆ ಈಗ ಒಂದೆರಡು ಸಿಲಿಂಡರ್ ಪೂರೈಕೆ. ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ಕೊಡಲು ಆಗ್ತಿಲ್ಲ ಎಂದು ಹೆಡ್ ಕುಕ್ ಅಳಲು ಇದರ ನಡುವೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಹೆಚ್ಚು ಒಂದು ಸಿಲಿಂಡರ್ ಮೇಲೆ ಹೆಚ್ಚುವರಿ ಬೆಲೆ ಕೊಟ್ಟು ಖರೀದಿಸುತ್ತಿರುವ ಮಾಲೀಕರು. ಕೂಡಲೇ ಸಿಲಿಂಡರ್ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒತ್ತಾಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಭಾಗದ ಹೊಟೇಲ್ ಮಾಲೀಕರಿಗೆ ಸಂಕಷ್ಟ. ................1
- *ತಾಯಿಯ ಪ್ರೀತಿಗೆ ಕೊನೆ ಇಲ್ಲ ತಾಯಿಗಿಂತ ಮತ್ತೊಂದು ದೈವ ವಿಲ್ಲ*1
- नेपाली गीत1
- KOLAR KI.AWAAZ KOUSAR NEWS1
- ಹಳೆ ಮೀಸಲಾತಿಯಂತೆಯೇ 56 ಸಾವಿರ ಉದ್ಯೋಗಳ ನೇಮಕಾತಿ ಮಾಡಿ ಬಾಗೇಪಲ್ಲಿ:- ಒಳಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ತನಕ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ 56 ಸಾವಿರ ಉದ್ಯೋಗಗಳನ್ನು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆ ಆಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಾಗೇಪಲ್ಲಿ ತಾಲ್ಲೂಕು ಲಂಬಾಣಿ (ಗೋರ್ ಬಂಜಾರ್)ಅಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಲಂಬಾಣಿ ಜಿಲ್ಲಾದ್ಯಕ್ಷ ಶ್ರೀರಾಮ ನಾಯಕ್ ಒತ್ತಾಯಿಸಿದರು. ಅವರು ಬಾಗೇಪಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗಗಳನ್ನು ನೇಮಕ ಮಾಡಿದಾಗ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಉದ್ಯೋಗ ದೊರಕುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶಾತಿ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗೀ ಸರ್ಕಾರ ಇಂತಹ ಅವೈಜ್ಞಾನಿಕ ಪರಿಶಿಷ್ಟ ಜಾತಿಗಳ ಕಾಯ್ದೆಯನ್ನು ತಿರಸ್ಕರಿಸಬೇಕು' ಎಂದು ಆಗ್ರಹಿಸಿದರು. ಈಗ ಜಾರಿ ಮಾಡಿರುವ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯದ 101 ಜಾತಿಗಳಿಗೆ ಭಾರಿ ಅನ್ಯಾಯವಾಗಿದ್ದು, ನೇಮಕಾತಿ ಬಿಂದು ಪದ್ದತಿಯಲ್ಲಿ ಭಾರಿ ನ್ಯಾಯವಾಗಿದೆ. ಎ, ಬಿ, ಸಿ ಪ್ರವರ್ಗಗಳಿಗೆ ನಿಗಧಿ ಪಡಿಸುವ ಉದ್ಯೋಗದಲ್ಲಿ ಅನ್ಯಾಯವಾಗುತ್ತದೆ. ವಿವಿಧ ಇಲಾಖೆಯ ಹಾಗೂ ವಿಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ನೇಮಕಾತಿ ನಡೆದಾಗ ಪರಿಶಿಷ್ಟ ಜಾತಿಯಲ್ಲಿಯೇ ಪ್ರವರ್ಗ ಎ ಗೆ ಹೆಚ್ಚು ಹುದ್ದೆಗಳು ಹೋಗುವ ಜೊತೆಗೆ ಇತರೇ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದರಿಂದ ಸಾಮಾಜಿಕ ನ್ಯಾಯದ ಬದಲಾಗಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಸಮಾನ ಅವಕಾಶಗಳು ದೊರೆಯುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಶಂಕರ್ ನಾಯಕ್ ಮಾತನಾಡಿ ಶಿಕ್ಷಣ, ಹಾಸ್ಟೆಲ್ ಹಾಗೂ ಉದ್ಯೋಗ ನೇಮಕಾತಿ ರೋಸ್ಟರ್ ಹಂಚಿಕೆ ಮಾಡಿ ಈ ಹಿಂದೆ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶಗಳನ್ನು ಹಿಂಪಡೆಯಬೇಕು, ರಾಜ್ಯ ಸರ್ಕಾರ ಹೊಸದಾಗಿ ನೀಡುತ್ತಿರುವ ಜಾತಿ ಪ್ರಮಾಣಪತ್ರವನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣಪತ್ರವನ್ನು ಮುಂದುವರಿಸಬೇಕು. ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಆಗಿರುವ ನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ್ ನಾಯಕ್(ಬಾಂಬೆ), ಉಪಾಧ್ಯಕ್ಷ ಶಿವಶಂಕರ್, ಖಜಾಂಚಿ ಸುರೇಶ್ ನಾಯಕ್,ಮಂಜುನಾಥ್ ನಾಯಕ್,ಬಾಲು ನಾಯಕ್,ನಾಗೇ ನಾಯಕ್,ಶ್ರೀನಿವಾಸ್ ನಾಯಕ್,ರಮೇಶ್ ನಾಯಕ್, ಆರ್.ನಾರಾಯಣ್ ನಾಯಕ್, ರಾಮಾಂಜಿ ನಾಯಕ್, ನರಸಿಂಹ ನಾಯಕ್, ಬಾಬು ನಾಯಕ್ ಹಾಗೂ ಲಂಬಾಣಿ ಸಮುದಾಯದವರು ಹಾಜರಿದ್ದರು.1
- ರಾಜ್ಯಸರ್ಕಾರ ಎಸಿಪಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಗಳಿಗೆ ವರ್ಗಾವಣೆ ಅವಧಿಯನ್ನು ondu ವರ್ಷಕ್ಕೆ ನಿಗದಿ ಮಾಡಿ ಆದೇಶ ಹೊರಡಿಸಿದೆ1
- *ಚಿಂತಾಮಣಿ:-ಖಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಭಾಗಿಯಾದ ಕೊರ್ ಕಮಿಟಿ ಅಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ* ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ ರಾಗುಟ್ಟಹಳ್ಳಿ ಶಿಂಗರೇಪಲ್ಲಿ ಮಜರಾ ಗ್ರಾಮದಲ್ಲಿ ನೆಲೆಸಿರುವ ಪುರಾತನ ಖಾದ್ರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಆಗಿದ್ದು ಈ ದೇವಾಲಯಕ್ಕೆ ಜೆಡಿಎಸ್ ರಾಜ್ಯ ಕೊರ್ ಕಮಿಟಿ ಅಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ ಆಗಮಿಸಿ ದೇವರಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಕೋಟಗಲ್ ಸಾಗುಟ್ಟಹಳ್ಳಿ ಮಜರಾ ಶಿಂಗರೇಪಲ್ಲಿ ಗ್ರಾಮದಲ್ಲಿ ಅತ್ಯಂತ ಪ್ರಸಿದ್ಧಿ ಯಾಗಿರುವ ಈ ದೇವಾಲಯು ಭಕ್ತಾದಿಗಳನ್ನು ಕೈಬೀಸಿ ಕರೆಯುವಂತಹ ಸ್ಥಳವಾಗಿದೆ ಖಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಿಂದ ತೀರ್ಥವು ಕದರಿ ದೇವಾಲಯಕ್ಕೆ ಹೋದರೆ ಮಾತ್ರ ಅಲ್ಲಿ ತೇರು ಸಾಗುತ್ತದೆ ಎಂಬ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ರೂಢಿ ಸಂಪ್ರದಾಯ ವಾಗಿದೆ ಶ್ರೀ ಖಾದ್ರಿ ನರಸಿಂಹಸ್ವಾಮಿ ದೇವಾಲಯು ಜಗತ್ ಪ್ರಸಿದ್ಧಿಯಾಗಿದ್ದು ಈ ದೇವಾಲಯಕ್ಕೆ ಮೂಲೆ ಮೂಲೆಗಳಿಂದ ಸಹಸ್ರಾರು ಜನ ಆಗಮಿಸುತ್ತಾರೆ ,ದೇವರಲ್ಲಿ ಪ್ರಾರ್ಥಿಸಿಕೊಂಡರೆ ಸಕಲ ಸೌಭಾಗ್ಯಗಳು ಸಿಗುತ್ತವೆ ಎಂದು ಜನರ ಅಪಾರ ನಂಬಿಕೆಯಿದೆ ಎಂದು ಮಾಜಿ ಶಾಸಕ ಹಾಗು ಜೆಡಿಎಸ್ ರಾಜ್ಯ ಕೋರ್ ಕಮಿಟಿ ರಾಜ್ಯಾಧ್ಯಕ್ಷರು ಜೆಕೆ ಕೃಷ್ಣಾರೆಡ್ಡಿ ದೇವಸ್ಥಾನಕ್ಕೆ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕ್ಷೇತ್ರದ ಜನಜಾನುವಾರುಗಳು ಮಳೆ ಬೆಳೆ ಸಮೃದ್ಧಿಯಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇಲ್ಲಿ ಬಂದ ಸಾವಿರಾರು ಜನರಿಗೆ ದೇವರು ಆಯುಷ್ಯ ಆರೋಗ್ಯ ಉತ್ತಮ ಬೆಳೆ ಮಳೆ ಸಿಗಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸಿದರು ಈ ಸಂದರ್ಭದಲ್ಲಿ:-ಚಿಮುಲ್ ನಿರ್ದೇಶಕ ಬ್ಯಾಂಕ್ ಕೃಷ್ಣಾರೆಡ್ಡಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು4