ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಂಗ್ರಾಳಿ ಬಿ ಕೆ ಶಾಲೆಯಲ್ಲಿ ಶ್ರೀ ಎಸ್ ಎಸ್ ವನ್ನುರ ಶಿಕ್ಷಕರ ಸೇವಾ ನಿವೃತ್ತಿ ಸಮಾರಂಭ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ರುದ್ರಪ್ಪ ಬಾಳೇಕುಂದಿ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಂಗ್ರಾಳಿ ಬಿ ಕೆ ಶಾಲೆಯಲ್ಲಿ ಶ್ರೀ ಎಸ್ ಎಸ್ ವನ್ನುರ ಶಿಕ್ಷಕರ ಸೇವಾ ನಿವೃತ್ತಿ ಸಮಾರಂಭ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ರುದ್ರಪ್ಪ ಬಾಳೇಕುಂದಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ನಗರ ಅಧ್ಯಕ್ಷ ಅರುಣ ಪಾಟೀಲ ನಮಿತಾ ಕಾಂಬಳೆ ಶಿಕ್ಷಕರ ಸಂಘದ ಶ್ರೀಮತಿ ಆಸ್ಮಾ ನಾಯ್ಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬಿ ವೈ ಹಿತಾರಗೌಡ್ರ್ಕರ್ನಾಟಕ ರಾಜ್ಯ ಬರಹಗಾರರ ಸಂಘದ ಗ್ರಾಮೀಣ ಅಧ್ಯಕ್ಷೆ ಎಸ್ ಎನ್ ಉಪ್ಪಿನ ಸಾವಿತ್ರಿ ಬಾಯಿ ಫುಲೆ ಸಂಘದ ಪದಾಧಿ ಕಾರಿಗಳಾದ ಶಾಬಾಷ್ ಖಾನ್ ಮರಾಠಿ ಶಾಲೆಯ ಪ್ರ ಗು,ಶ್ರೀ ಬಾಂದುರ್ಗೆ, ಶ್ರೀಮತಿ ಭಾರತಿ ಸೊಪ್ಪಿಮಠ, ಎಸ್ ಎಂ ಅಂಗಡಿ ಮೇಡಂ ಎಸ್ ಡಿ ಎಂ ಸಿ ಸದಸ್ಯರು ಟ ಕ್ಕೇಕರ್ ಬಾಳಿಗಟ್ಟಿ ಹಳೆಯ ವಿದ್ಯಾರ್ಥಿನಿಯರು ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಶ್ರೀ ಆರ್ ಜೆ ಭಜಂತ್ರಿ ಎಲ್ಲರನ್ನು ಸ್ವಾಗತಿಸಿದರು ನಾಲ್ಕನೇ ವರ್ಗದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು ಆಷ್ಮಾ ನಾಯ್ಕ, ಉಪ್ಪಿನ ಶಿಕ್ಷಕಿಯರು ನಿವೃತ್ತ ಗುರುಗಳ ಬಗ್ಗೆ ಮಾತನಾಡಿದರು ಎಸ್ ಎಸ್ ವಗ್ಗರ ಶೈಲಶ್ರೀ ಸಿ ಕೆ ಕೋಲಕಾರ ಎಸ್ ಎಸ್ ಕೋಲಕಾರ ಪ್ರಭಾವತಿ ಪತ್ತಾರ ಹಾಗು ಅತಿಥಿ ಶಿಕ್ಷಕಿಯರು ಅಮೃತಾ ಕಮ್ಮಾರ, ಶಿವಲೀಲಾ ಗೀತಾ ಬಡಿಗೇರ ಮತ್ತು ವಿವಿಧ ಶಾಲಾ ಶಿಕ್ಷಕವೃಂದ ಹಾಜರಿದ್ದರು ಶ್ರೀ ವನ್ನುರ ದಂಪತಿಗಳನ್ನು ಶಾಲಾ ವತಿಯಿಂದ ಸನ್ಮಾನ ಮಾಡಲಾಯಿತು ಸರಕಾರಿ ಪ್ರೌಢಶಾಲೆ ಶಿಕ್ಷಕ ವೃಂದ ಮರಾಠಿ ಶಾಲೆ ಶಾಹು ನಗರ ಗುರುವೃಂದ ಮತ್ತು ಅಡುಗೆ ಸಿಬ್ಬಂದಿ ಶೋಭಾ ತಳವಾರ ರವರಿಂದ ಸನ್ಮಾನ ಮಾಡಲಾಯಿತು ಶಾಲೆಯ ಎಲ್ಲ ಮುದ್ದು ಮಕ್ಕಳು ಹಾಜರಿದ್ದರು ಶ್ರೀ ವನ್ನುರ್ ಶಿಕ್ಷಕರು ಮಕ್ಕಳಿಗೆ ಸಿಹಿಭೋಜನ ಮಾಡಿಸಿದ್ದರು ಅತಿಥಿಗಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರು ಸುರೇಶ ಸಕ್ರೆಣ್ಣವರ ನಿವೃತ್ತಿ ಗುರುಗಳ ಕಿರುಪರಿಚಯ ಮಾಡುತ್ತ ಕಾರ್ಯಕ್ರಮ ನಿರೂಪಿಸಿದರು ಮೊದಲಿಗೆ ಮಕ್ಕಳು ಪ್ರಾರ್ಥನೆ , ಸ್ವಾಗತ ಗೀತೆ ಹೇಳಿದರು ಸಿ ಕೆ ಕೋಲಕಾರ ವಂದಿಸಿದರು

- ಸಿದ್ದಪ್ಪ ಅವಟಿ ವಿಜಯಪುರದ ಕಗ್ಗೊಡ ಗ್ರಾಮದಲ್ಲಿ 1200ಕ್ಕೂ ಅಧಿಕ ಮರಗಳಿಗೆ ನೀರುಣಿಸಿ ರಕ್ಷಣೆ ಮಾಡುತ್ತಿರುವ ಸಿದ್ದಪ್ಪ ಅಜ್ಜ | ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಮರಗಳ ರಕ್ಷಕ | ಕಡಕೋಳ ಶ್ರೀ ಮಡಿವಾಳೇಶ್ವರರ ವಚನ ಅಜ್ಜನಬಾಯಲ್ಲಿ | suddi point 📢 #suddipoint #siddappaavati #kadakolmadivaleshwar1
- ತಾಲೂಕು ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ: ಸಂತ್ರಸ್ತೆಯ ಅಳಲು ಆಲಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ. ಅಥಣಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಇಂದು ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ವ್ಯವಸ್ಥೆ ಹಾಗೂ ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು. ಸಂತ್ರಸ್ತೆ ವರ್ಷಾ ಕಾಂಬಳೆ ಅವರಿಂದ ಕಣ್ಣೀರಿನ ದೂರು: ಪರಿಶೀಲನೆಯ ಸಂದರ್ಭದಲ್ಲಿ ವರ್ಷಾ ಪ್ರವೀಣ ಕಾಂಬಳೆ ಎಂಬ ಸಂತ್ರಸ್ತ ಮಹಿಳೆಯೊಬ್ಬರು ಅಧ್ಯಕ್ಷರನ್ನು ಭೇಟಿಯಾಗಿ ತಮ್ಮ ಕರುಣಾಜನಕ ಕಥೆಯನ್ನು ವಿವರಿಸಿದರು. "ನನ್ನ ಗಂಡ ಪ್ರವೀಣ ಕಾಂಬಳೆ ಅವರ ಮನೆ ಕೊಡಗನೂರ ಗ್ರಾಮದಲ್ಲಿದ್ದು, ಕ್ಷುಲ್ಲಕ ಕಾರಣಕ್ಕೆ ನನ್ನ ಮೇಲೆ ದೌರ್ಜನ್ಯ ಎಸಗಿ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ನನ್ನ 4 ವರ್ಷದ ಪುತ್ರಿ ಪ್ರಣತಿ ಎಂಬ ಮಗುವನ್ನು ನನ್ನಿಂದ ಬಲವಂತವಾಗಿ ಕಸಿದುಕೊಂಡಿದ್ದಾರೆ," ಎಂದು ಕಣ್ಣೀರಿಡುತ್ತಾ ದೂರಿದರು. ಈ ದೂರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು, ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಲು ಹಾಗೂ ಮಹಿಳೆಗೆ ನ್ಯಾಯ ಒದಗಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದರು. ಭಾಗ್ಯಲಕ್ಷ್ಮಿ ಬಾಂಡ್ ವಿಳಂಬದ ಬಗ್ಗೆ ಆಕ್ರೋಶ: ಇದೇ ವೇಳೆ ಮತ್ತೊಬ್ಬ ಮಹಿಳೆ ತನಗೆ ನಾಲ್ಕು ಜನ ಮಕ್ಕಳಿದ್ದರೂ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸುತ್ತಿಲ್ಲ ಎಂದು ಅಧ್ಯಕ್ಷರ ಗಮನಕ್ಕೆ ತಂದರು. ಈ ಬಗ್ಗೆ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. ಆಸ್ಪತ್ರೆಯ ವ್ಯವಸ್ಥೆಗಳ ಪರಿಶೀಲನೆ: ಸ್ವಚ್ಛತೆ: ಶೌಚಾಲಯಗಳ ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದ ಅಧ್ಯಕ್ಷರು, ರೋಗಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಲು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಹೆರಿಗೆ ವಿಭಾಗ: ಮಹಿಳೆಯರ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ ಬಾಣಂತಿಯರ ಆರೋಗ್ಯ ವಿಚಾರಿಸಿದ ಅವರು, ಚಿಕಿತ್ಸೆ ಮತ್ತು ಔಷಧಿ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಿ ಬಾಣಂತಿಯರಿಗೆ ಹೆರಿಗೆ ಹಾಗೂ ಊಟೋಪಚಾರ ಸ್ವಚ್ಛತೆ ಹಲವಾರು ಸಂಗತಿಗಳನ್ನು ವಿಚಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು . ದಾಖಲೆಗಳ ತಪಾಸಣೆ: ಔಷಧಿ ವಿತರಣಾ ಕೇಂದ್ರ ಮತ್ತು ಹೊರರೋಗಿಗಳ ನೋಂದಣಿ ವಿಭಾಗವನ್ನು ತಪಾಸಣೆ ಮಾಡಿ, ಸರ್ಕಾರಿ ಸೌಲಭ್ಯಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುತ್ತಿರುವುದನ್ನು ಖಚಿತಪಡಿಸಿಕೊಂಡರು. ಮಹಿಳೆಯರ ರಕ್ಷಣೆಗೆ ಆಯೋಗ ಬದ್ಧ: ಬಳಿಕ ಮಾತನಾಡಿದ ಡಾ. ನಾಗಲಕ್ಷ್ಮಿ ಚೌಧರಿ ಅವರು, "ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಗುವನ್ನು ತಾಯಿಯಿಂದ ದೂರ ಮಾಡುವಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಸಂತ್ರಸ್ತ ವರ್ಷಾ ಅವರಿಗೆ ನ್ಯಾಯ ಕೊಡಿಸುವಲ್ಲಿ ಆಯೋಗವು ಸಂಪೂರ್ಣವಾಗಿ ಬೆಂಬಲ ನೀಡಲಿದೆ," ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ತಹಸಿಲ್ದಾರ್ ಸಿದ್ದರಾಯ ಬೋಸಗಿ, ಈ ಓ ಶಿವಾನಂದ ಕಲ್ಲಾಪುರ, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಬಸವರಾಜ ಕಾಗೆ ಹಾಗೂ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ, ಸಿಡಿಪಿಓ ಮಂಜುನಾಥ ಸೌಂದಲಗೆ , ಪುರಸಭೆ ಮುಖ್ಯಾಧಿಕಾರಿ ಅಶೋಕ್ ಗುಡಿಮನಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಅಪಾರ ಸಂಖ್ಯೆಯ ಮಹಿಳೆಯರು ಆಗಮಿಸಿದ್ದರು.2
- ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,1
- ಗುಳೇದಗುಡ್ಡ: ಶ್ರೀರಾಮನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮದಿನವೆಂದು ಭಕ್ತರು ಪರಿಗಣಿಸುತ್ತಾರೆ. ರಾಮನು ಸತ್ಯ, ಧರ್ಮ, ಕರ್ತವ್ಯನಿಷ್ಠೆ ಮತ್ತು ಆದರ್ಶ ಜೀವನದ ಪ್ರತೀಕವಾಗಿದ್ದು, ರಾಮಾಯಣದಲ್ಲಿ ಶ್ರೀರಾಮನ ಜೀವನ ಮೌಲ್ಯಗಳ ಬಗ್ಗೆ ತಿಳಿಸಲಾಗಿದೆ. ರಾಮರಾಜ್ಯವು ನ್ಯಾಯ, ಸಮಾನತೆ ಮತ್ತು ಸುಖಶಾಂತಿಯ ಸಂಕೇತವಾಗಿದ್ದು, ಇಂತಹ ಆದರ್ಶ ಸಮಾಜ ನಿರ್ಮಾಣವಾಗಲು ಶ್ರೀ ರಾಮ ರಾಜ್ಯದಂತಹ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸುಜಾತಾ ಹುಳಿಪಲ್ಲೇದ ಹೇಳಿದರು. ಅವರು ಶ್ರೀರಾಮನವಮಿ ನಿಮಿತ್ತ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಗುಳೇದಗುಡ್ಡದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ಶ್ರೀರಾಮ ಜಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ರೀತಿ ರಾಘವೇಂದ್ರ ಮಠ, ಪಾಂಡುರಂಗ ದೇವಸ್ಥಾನ, ವಿಠ್ಠಲರುಕ್ಷ್ಮಿಣಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ ಸೇರಿದಂತೆ ಪಟ್ಟಣದ ಹಲವು ದೇವಸ್ಥಾನಗಳಲ್ಲಿ ಶ್ರೀರಾಮ ನಾಮಜಪ, ಪ್ರಾರ್ಥನೆ ಹಾಗೂ ರಾಮರಾಜ್ಯ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಿ ಮಾಡಲಾಯಿತು. ಪಟ್ಟಣದ ವಾಸವಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ ಪರ್ವತಿಕರ್, ಅಂಜನಾ ಪರ್ವತಿಕರ್, ರಮೇಶ್ ಚಿಲ್ಲಾಪುರ, ರಜನಿ ಚಿಲ್ಲಾಪುರ, ದಾಮೋದರ ಆಚಾರ್ಯ, ಶ್ರೀಧರ ನರೇಗಲ್, ಅನುಪಮಾ ಧಾರವಾಡ, ಸುರೇಖಾ ಧಾರವಾಡ, ಅನಿತಾ ಬಿಜಾಪುರ, ಸುಜಾತಾ ಬೋನಗಿರಿ, ಸ್ನೇಹಾ ನರೆಗಲ್, ಸನಾತನ ಸಂಸ್ಥೆಯ ಲತಾ ಬನ್ನಿ, ರುದ್ರಮ್ಮ ಬಳಿಗೇರ್, ಸ್ಮಿತಾ ಬನ್ನಿ, ಸುವರ್ಣಾ ಬಳಿಗೇರ, ತ್ರಿವೇಣಿ ಬಳಿಗೇರ, ರಾಜೇಶ್ವರಿ ಬಳಿಗೇರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಸೇರಿದಂತೆ 150 ಕ್ಕೂ ಅಧಿಕ ಜನರು ಉಪಸ್ಥಿತರಿದ್ದು, ಶ್ರೀರಾಮನ ನಾಮಜಪ ಮಾಡಿದರು. ಇದೇ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಗೆ ಸತ್ಸಂಕಲ್ಪಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು.3
- ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ (18) ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ ಹಾಗೂ ಮೃತನ ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- ಇಳಕಲ್ : ಇಲ್ಲಿನ ಎಸ್.ಆರ್.ಕೆ. ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರದAದು ಆಚರಿಸಲಾಯಿತು. ಈ ಸಮಯದಲ್ಲಿ ಜೈನ ಸಮಾಜದ ಅಧ್ಯಕ್ಷ ಸಜ್ಜನರಾಜ್ ಮೆಹತಾ, ಹಿರಿಯರಾದ ಗೌತಮ ಬೋರಾ, ರತ್ನಲಾಲಭಂಡಾರಿ, ಸಜ್ಜನರಾಜ ಸೋರಾನಾ, ಪವನ್ ಸೋರಾನಾ, ಸಂದೀಪ ಮೆಹತಾ, ಸ್ವಪ್ನಿಲ್ ಬೋರಾ, ಮನಿಶ್ ಕಠಾರಿಯಾ, ವಿಶಾಲ ಜೈನ್, ಅಂಕಿತ ಬೋರಾ, ಸುದೀಕ್ ಕಠಾರಿಯಾ , ಜಿತೇಂದ್ರ ಭಂಡಾರಿ, ಅನೂಜ್ ಬೋರಾ, ಕೆಪಿಸಿಸಿ ಆಚರಣೆ ಸಮಿತಿಯ ಮಂಜುನಾಥ ಸಪ್ಪರದ, ಖಾಜಾಬಿ ಸೋಲಾಪೂರ ಮತ್ತಿತರರು ಇದ್ದರು.1
- ಯತ್ನಾಳ್ ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು ಸಿದ್ದರಾಮಯ್ಯ ಹೇಳಿಕೆ #congress #bjp #yatnal1
- ಗುಳೇದಗುಡ್ಡ: ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸುವ ರಾಚೋಟೇಶ್ವರ ದೇವರ ಅಗ್ನಿ ಉತ್ಸವವು ಭಾನುವಾರ ರಾತ್ರಿ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ರಾಚೋಟೇಶ್ವರ ದೇವರ ಅಗ್ನಿ ಉತ್ಸವದ ಅಂಗವಾಗಿ ಕಿಚಕಣ ಸಂಹಾರದ ಸುಂದರ ಅಂಲಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಅಗ್ನಿ ಕುಂಡವನ್ನು ಮಾಡಲಾಗಿತ್ತು, ಅಗ್ನಿ ಪ್ರಾರಂಭಕ್ಕೂ ಮುನ್ನ ಚಿಕ್ಕ ಮಕ್ಕಳ, ಯುವಕರು, ಹಿರಿಯರು ಮುಂದಿರುವ ರಾಚೋಟೇಶ್ವರ ದೇವರ ಕಡೆ ಹೇಳಿದರು. ರಾತ್ರಿ 11 ಗಂಟೆಗೆ ಪ್ರಾರಂಭವಾದ ಅಗ್ನಿ ಉತ್ಸವವು ಸುಮಾರು ಒಂದು ಗಂಟೆಗು ಹೆಚ್ಚು ಕಾಲ ನಡೆಯಿತು, ಮೊದಲು ಪತ್ತಾರ ಮನೆತದವರು ಪಲ್ಲಕ್ಕಿ, ನಂದಿಕೋಲು ಹೊತ್ತವರು ರಾಚೋಟೇಶ್ವರ ಮಹರಾಜ ಕೀ ಜೈ' ಎನ್ನುತ ಕೆಂಡವನ್ನು ಹಾಯದರು.ಕೆರೂರ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಕೆಂಡವನ್ನು ಹಾಯ್ದು ಹರೆಯನ್ನು ತೀರಿಸಿದರು. ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ರಾತ್ರಿ ಅನ್ನ-ಪ್ರಸಾದದ ವ್ಯವಸ್ಥೆಮಾಡಲಾಗಿತ್ತು.2