ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಬಸವ ಜಯಂತಿಯಂದು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರಿಗೆ ಮೈಸೂರು ಬಸವ ಜಯಂತಿಯಲ್ಲಿ ಅಭಿನಂದನೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಅಭಿನಂದಿಸಿದರು. ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಒಟ್ಟಾಗಿ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಎಸ್.ಜಿ.ಸುಶೀಲಮ್ಮ, ಐಎಎಸ್ ಅಧಿಕಾರಿ ನಿತೇಶ್ ಪಾಟೀಲ್, ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್, ಚಿನ್ನಸ್ವಾಮಿ ವಡ್ಡಗೆರೆ ಸೇರಿದಂತೆ ಒಂಬತ್ತು ಗಣ್ಯರನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಜಿ, ದೇವನೂರು ಮಠದ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಬಸವ ಜಯಂತಿಯಂದು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರಿಗೆ ಮೈಸೂರು ಬಸವ ಜಯಂತಿಯಲ್ಲಿ ಅಭಿನಂದನೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವ ಜಯಂತಿ
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಅಭಿನಂದಿಸಿದರು. ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ
ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಒಟ್ಟಾಗಿ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಎಸ್.ಜಿ.ಸುಶೀಲಮ್ಮ, ಐಎಎಸ್ ಅಧಿಕಾರಿ ನಿತೇಶ್ ಪಾಟೀಲ್, ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್, ಚಿನ್ನಸ್ವಾಮಿ ವಡ್ಡಗೆರೆ ಸೇರಿದಂತೆ
ಒಂಬತ್ತು ಗಣ್ಯರನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಜಿ, ದೇವನೂರು ಮಠದ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಭಾಗವಹಿಸಿದ್ದರು.
- ಸೊರಬ: ಮಾಜಿ ಮುಖ್ಯಮಂತ್ರಿ ದಿ|| ಎಸ್ ಬಂಗಾರಪ್ಪನವರ ಪತ್ನಿ ಶಕುಂತಲ ಬಂಗಾರಪ್ಪನವರ ಪುಣ್ಯ ಸ್ಮರಣೆಯ ಅಂಗವಾಗಿ ಪಟ್ಟಣದ ಬಂಗಾರಧಾಮದಲ್ಲಿರುವ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಮಧು ಬಂಗಾರಪ್ಪ, ಎಸ್ ಬಂಗಾರಪ್ಪನವರನ್ನು ಕಂಡಂತೆಯೇ ನಮ್ಮ ತಾಯಿಯನ್ನು ಕ್ಷೇತ್ರದ ಜನತೆ ತುಂಬಾ ಗೌರವದಿಂದ ಕಂಡಿದ್ದಾರೆ. ತಂದೆ-ತಾಯಿಯ ಆಶೀರ್ವದ ಹಾಗೂ ಅವರ ಹಾದಿಯಲ್ಲಿ ಮುನ್ನಡೆಯುತ್ತಿರುವ ನನಗೆ ತಾಲೂಕಿನ ಜನತೆಯ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷವು ಕ್ಷೇತ್ರದ ಜನತೆ, ಮುಖಂಡರು, ಕಾರ್ಯಕರ್ತರು ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ತಿಲಕ್ ಕುಮಾರ್, ಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಎಂ.ಡಿ ಶೇಖರ್, ಕೆ.ಪಿ ರುದ್ರಗೌಡ, ಜಯಶೀಲಗೌಡ, ಶಿವಲಿಂಗೇಗೌಡ, ಸುರೇಶ್ ಹಾವಣ್ಣನವರ್, ನಾಗರಾಜ ಚಿಕ್ಕಸವಿ, ಸುರೇಶ್ ಬಿಳವಾಣಿ, ಪವನಗೌಡ, ಸಂಜೀವ್ ನೇರಲಗಿ, ಶ್ರೀಕಾಂತ ಚಿಕ್ಕಶಕುನ, ಸುಜಾಯತ್, ಅಧಿಕಾರಿಗಳಾದ ಇಒ ಶಶಿಧರ ಕೆ.ಜಿ, ಕೃಷಿ ನಿರ್ದೇಶಕ ಕುಮಾರ್, ಚಂದನ್, ನಾಗರಾಜ್ ಅನ್ವೆಕರ್, ಸಂತೋಷ್, ಯಶೋಧರ, ಪುಷ್ಪಾ, ಇಕ್ಬಾಲ್ ಜಾತಿಗೇರ, ಚರಣ್, ಸೋಮ ಶೇಖರ್, ಶ್ರೀಪಾದ ನಾಯ್ಕ, ಜಾವೇದ್ ಬಾಷಾ ಅಂಗಡಿ, ಜಗದೀಶ್, ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.4
- ಎಸ್ ಎಸ್ ಎಲ್ ಸಿ ರಿಸಲ್ಟ್ ನೋಡಲು ನೀವು ಈ ಆಪ್ ಅನ್ನು ಡೌನ್ಲೋಡ್ ಮಾಡಿ ಮತ್ತು ಶೇರ್ ಮಾಡಿ1
- Post by Mayur TV Hangal YouTube c1
- ಶಿಗ್ಗಾಂವಿ, ಮೂಡನಂಬಿಕೆ, ಲಿಂಗತಾರತಮ್ಯ, ಮೌಢ್ಯಗಳನ್ನು ವಿರೋಧಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರು ಪ್ರಮುಖರಾದವರು ಎಂದು ಶಿವಮೊಗ್ಗ ಎಸ್.ಆರ್.ಎನ್.ಎಮ್.ಎನ್ ಕಾಲೇಜ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮಣ ಕೆ. ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ನಡೆದ ಜಗದ್ಗುರು ಶ್ರೀ ವಿಶ್ವಬಂದು ಮರುಳಸಿದ್ದರ ಜಯಂತಿ ಆಚರಣೆಯಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರರ ಜೀವನದ ಕುರಿತು ಉಪನ್ಯಾಸ ನೀಡಿದರು. ರೇವಣಸಿದ್ಧರ ಶಿಷ್ಯರಾದ ಮರುಳಸಿದ್ಧರು, ಹಿಂಸಾತ್ಮಕ ಆಚರಣೆಗಳನ್ನು ಬಲವಾಗಿ ವಿರೋಧಿಸಿ, ಲೋಕದಲ್ಲಿರುವವರೆಲ್ಲರ ಬಾಳು ತರಳಾಗಲು ನಾಡಿನಾದ್ಯಂತ ಸಂಚರಿಸಿ, ತರಳಬಾಳು ಸಂಸ್ಥಾನದ ಸಂಸ್ಥಾಪಕರಾಗಿದ್ದಾರೆ ಎಂದರು. ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಾತಿ ಜಾತಿಗಳ ಮಧ್ಯೆ ಇರುವ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ವರೆಗೂ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಿಲ್ಲ. ಮರುಳಸಿದ್ಧರು ಸಮಾಜದಲ್ಲಿ ಜ್ಞಾನ ಮತ್ತು ಭಕ್ತಿ ಮಾರ್ಗವನ್ನು ಪ್ರಚುರಪಡಿಸಿ, ಮೇಲು-ಕೀಳು, ಜಾತಿ ಭೇದಗಳನ್ನು ವಿರೋಧಿಸಿ, ಮಾನವತಾವಾದದ ತತ್ವವನ್ನು ಎತ್ತಿ ಹಿಡಿದವರಲ್ಲಿ ಮರುಳಸಿದ್ಧರು ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬಸವಾದಿ ಶರಣರಂತೆ ಮರುಳಸಿದ್ಧರು ಪ್ರಮುಖರಾಗಿದ್ದಾರೆ ಆದರೆ ಎಲೆಮರೆ ಕಾಯಿಯಂತೆ ಕಣ್ಮರೆಯಾಗಿರುವುದು ಬೇಸರಿಸದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮರುಳಸಿದ್ದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಿವೃತ ಶಿಕ್ಷಕರಾದ ಕೆ.ಡಿ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕ ಬಸವರಾಜ ಬಸರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎಂ.ಮುಳಗುಂದ, ಪ್ರಭುಗೌಡ ತೆಂಬದಮನಿ, ಹಿರೇಗೌಡ ಪಾಟೀಲ, ಶಶಿಕಾಂತ ರಾಠೋಡ, ಸಿ.ಡಿ.ಯತ್ನಳ್ಳಿ, ಮಾನಪ್ಪ ಕಮ್ಮಾರ, ಬಸವರಾಜ ಬಸರಿಕಟ್ಟಿ, ಉಷಾ ಪಾಟೀಲ ಸೇರಿದಂತೆ ಇತರರಿದ್ದರು.4
- ಜಗಳೂರು: ಮಲ್ಪೆ-ಮೊಳಕಾಲ್ಮೂರು ಹೆದ್ದಾರಿಯ, ಮೆದಿಗಿನಕೆರೆ ಅಂಬೇಡ್ಕರ್ ವಸತಿ ಶಾಲೆಯ ಸಮೀಪ ಎರಡು ಬೈಕ್ ಮುಖಾ ಮುಖಿ ಡಿಕ್ಕಿ, ಎರಡು ಬೈಕ್ ನ ಸವಾರರು ಗಾಯ. *ಜಗಳೂರು ವಿಧಾನಸಭಾ ಕ್ಷೇತ್ರ.* *ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ ಶ್ರೀ ಬಿ.ದೇವೇಂದ್ರಪ್ಪ ರವರು ಖಾಸಗಿ ಕಾರ್ಯಕ್ರಮಗಳ ಪ್ರಯುಕ್ತ ಜಗಳೂರಿನಿಂದ ದಾವಣಗೆರೆಗೆ ತೆರಳುತ್ತಿರುವ ಮಾರ್ಗ ಮಧ್ಯೆ ಮೆದಗಿನಕೆರೆ ಕ್ರಾಸ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ವಿಪರೀತವಾಗಿ ಪೆಟ್ಟು ಬಿದ್ದ ಗಾಯಾಳುಗಳನ್ನು ಮಾನ್ಯ ಶಾಸಕರು ತಮ್ಮ ಸ್ವಂತ ವಾಹನದಲ್ಲಿ ಗಾಯಾಳುಗಳಾದ ಹಿರೇಅರಕೆರೆ ಗ್ರಾಮದ ಚನ್ನಪ್ಪ, ಹಾಗೂ ಖಾನಹೊಸಹಳ್ಳಿ ಹತ್ತಿರದ ಹಾಲೂರು ಗ್ರಾಮದ ಗೋವಿಂದಮ್ಮ ಹಾಗೂ ಪ್ರದೀಪ್ ಇವರನ್ನು ಜಗಳೂರು ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆಯ ನೆರವಿಗಾಗಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.*2
- Post by Nitin 9071795156 press reporte1
- ಚಿತ್ರದುರ್ಗದಲ್ಲಿಂದು ಕೆಇಎ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಚಾಲನೆ ನೀಡಲಾಯಿತು. ಏಪ್ರಿಲ್ 23 ಮತ್ತು 24 ರಂದು ಪರೀಕ್ಷೆಗಳು ನಡೆಯಲಿದ್ದು ಒಟ್ಟು 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಬವಾಗಿದ್ದು ಚಿತ್ರದುರ್ಗ ಜಿಲ್ಲೆಯ ಒಟ್ಟು 6,640 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇಂದು ಬೆಳಿಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ. ನಾಳೆ ಬೆಳಿಗ್ಗೆ ಗಣಿತಶಾಸ್ತ್ರ, ಮಧ್ಯಾಹ್ನ ಜೀವಶಾಸ್ತ್ರ. ಪ್ರಮುಖ ಮಾರ್ಗಸೂಚಿಗಳು ಮತ್ತು ನಿರ್ಬಂಧಗಳು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.1
- ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ಸೋಲಾರ್ ಚಾಲಿತಾ ರೈತರ ಅನುಕೂಲಕೋಸ್ಕರ true view ಸಿಸಿ ಕ್ಯಾಮೆರಾ ಅತಿ ಕಡಿಮೆ ದರದಲ್ಲಿ ದೊರೆಯುತ್ತದೆ. ಸಂಪರ್1