ದಿ|| ಎಸ್ ಬಂಗಾರಪ್ಪನವರ ಪತ್ನಿ ಶಕುಂತಲ ಬಂಗಾರಪ್ಪನವರ ಪುಣ್ಯ ಸ್ಮರಣೆ ಸೊರಬ: ಮಾಜಿ ಮುಖ್ಯಮಂತ್ರಿ ದಿ|| ಎಸ್ ಬಂಗಾರಪ್ಪನವರ ಪತ್ನಿ ಶಕುಂತಲ ಬಂಗಾರಪ್ಪನವರ ಪುಣ್ಯ ಸ್ಮರಣೆಯ ಅಂಗವಾಗಿ ಪಟ್ಟಣದ ಬಂಗಾರಧಾಮದಲ್ಲಿರುವ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಮಧು ಬಂಗಾರಪ್ಪ, ಎಸ್ ಬಂಗಾರಪ್ಪನವರನ್ನು ಕಂಡಂತೆಯೇ ನಮ್ಮ ತಾಯಿಯನ್ನು ಕ್ಷೇತ್ರದ ಜನತೆ ತುಂಬಾ ಗೌರವದಿಂದ ಕಂಡಿದ್ದಾರೆ. ತಂದೆ-ತಾಯಿಯ ಆಶೀರ್ವದ ಹಾಗೂ ಅವರ ಹಾದಿಯಲ್ಲಿ ಮುನ್ನಡೆಯುತ್ತಿರುವ ನನಗೆ ತಾಲೂಕಿನ ಜನತೆಯ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷವು ಕ್ಷೇತ್ರದ ಜನತೆ, ಮುಖಂಡರು, ಕಾರ್ಯಕರ್ತರು ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ತಿಲಕ್ ಕುಮಾರ್, ಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಎಂ.ಡಿ ಶೇಖರ್, ಕೆ.ಪಿ ರುದ್ರಗೌಡ, ಜಯಶೀಲಗೌಡ, ಶಿವಲಿಂಗೇಗೌಡ, ಸುರೇಶ್ ಹಾವಣ್ಣನವರ್, ನಾಗರಾಜ ಚಿಕ್ಕಸವಿ, ಸುರೇಶ್ ಬಿಳವಾಣಿ, ಪವನಗೌಡ, ಸಂಜೀವ್ ನೇರಲಗಿ, ಶ್ರೀಕಾಂತ ಚಿಕ್ಕಶಕುನ, ಸುಜಾಯತ್, ಅಧಿಕಾರಿಗಳಾದ ಇಒ ಶಶಿಧರ ಕೆ.ಜಿ, ಕೃಷಿ ನಿರ್ದೇಶಕ ಕುಮಾರ್, ಚಂದನ್, ನಾಗರಾಜ್ ಅನ್ವೆಕರ್, ಸಂತೋಷ್, ಯಶೋಧರ, ಪುಷ್ಪಾ, ಇಕ್ಬಾಲ್ ಜಾತಿಗೇರ, ಚರಣ್, ಸೋಮ ಶೇಖರ್, ಶ್ರೀಪಾದ ನಾಯ್ಕ, ಜಾವೇದ್ ಬಾಷಾ ಅಂಗಡಿ, ಜಗದೀಶ್, ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ದಿ|| ಎಸ್ ಬಂಗಾರಪ್ಪನವರ ಪತ್ನಿ ಶಕುಂತಲ ಬಂಗಾರಪ್ಪನವರ ಪುಣ್ಯ ಸ್ಮರಣೆ ಸೊರಬ: ಮಾಜಿ ಮುಖ್ಯಮಂತ್ರಿ ದಿ|| ಎಸ್ ಬಂಗಾರಪ್ಪನವರ ಪತ್ನಿ ಶಕುಂತಲ ಬಂಗಾರಪ್ಪನವರ ಪುಣ್ಯ ಸ್ಮರಣೆಯ ಅಂಗವಾಗಿ ಪಟ್ಟಣದ ಬಂಗಾರಧಾಮದಲ್ಲಿರುವ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಮಧು ಬಂಗಾರಪ್ಪ, ಎಸ್ ಬಂಗಾರಪ್ಪನವರನ್ನು ಕಂಡಂತೆಯೇ
ನಮ್ಮ ತಾಯಿಯನ್ನು ಕ್ಷೇತ್ರದ ಜನತೆ ತುಂಬಾ ಗೌರವದಿಂದ ಕಂಡಿದ್ದಾರೆ. ತಂದೆ-ತಾಯಿಯ ಆಶೀರ್ವದ ಹಾಗೂ ಅವರ ಹಾದಿಯಲ್ಲಿ ಮುನ್ನಡೆಯುತ್ತಿರುವ ನನಗೆ ತಾಲೂಕಿನ ಜನತೆಯ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷವು ಕ್ಷೇತ್ರದ ಜನತೆ, ಮುಖಂಡರು, ಕಾರ್ಯಕರ್ತರು ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಾನು
ಚಿರಋಣಿಯಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ತಿಲಕ್ ಕುಮಾರ್, ಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಎಂ.ಡಿ ಶೇಖರ್, ಕೆ.ಪಿ ರುದ್ರಗೌಡ, ಜಯಶೀಲಗೌಡ, ಶಿವಲಿಂಗೇಗೌಡ, ಸುರೇಶ್ ಹಾವಣ್ಣನವರ್, ನಾಗರಾಜ ಚಿಕ್ಕಸವಿ, ಸುರೇಶ್ ಬಿಳವಾಣಿ, ಪವನಗೌಡ, ಸಂಜೀವ್ ನೇರಲಗಿ, ಶ್ರೀಕಾಂತ ಚಿಕ್ಕಶಕುನ, ಸುಜಾಯತ್, ಅಧಿಕಾರಿಗಳಾದ
ಇಒ ಶಶಿಧರ ಕೆ.ಜಿ, ಕೃಷಿ ನಿರ್ದೇಶಕ ಕುಮಾರ್, ಚಂದನ್, ನಾಗರಾಜ್ ಅನ್ವೆಕರ್, ಸಂತೋಷ್, ಯಶೋಧರ, ಪುಷ್ಪಾ, ಇಕ್ಬಾಲ್ ಜಾತಿಗೇರ, ಚರಣ್, ಸೋಮ ಶೇಖರ್, ಶ್ರೀಪಾದ ನಾಯ್ಕ, ಜಾವೇದ್ ಬಾಷಾ ಅಂಗಡಿ, ಜಗದೀಶ್, ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- ನಗರದ ಯೂನಿಯನ್ ಪಾರ್ಕ್ ಬಳಿ ಭಗೀರಥ ಜಯಂತಿ ಅಂಗವಾಗಿ ಮೆರವಣಿಗೆ ಹಮ್ಮಿಕೊಂಡಿದ್ದು ಎಸಿ ಕಾಂತರಾಜ್ ಅವರು ಆಗಮಿಸಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು ವಾಲ್ಮೀಕಿ ಭವನ ತಲುಪಲಿದ್ದು ವಾಲ್ಮೀಕಿ ಭವನದಲ್ಲಿ ವೇಧಿಕೆ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.1
- Post by Suresh Belagere1
- ಜಗಳೂರು: ಮಲ್ಪೆ-ಮೊಳಕಾಲ್ಮೂರು ಹೆದ್ದಾರಿಯ, ಮೆದಿಗಿನಕೆರೆ ಅಂಬೇಡ್ಕರ್ ವಸತಿ ಶಾಲೆಯ ಸಮೀಪ ಎರಡು ಬೈಕ್ ಮುಖಾ ಮುಖಿ ಡಿಕ್ಕಿ, ಎರಡು ಬೈಕ್ ನ ಸವಾರರು ಗಾಯ. *ಜಗಳೂರು ವಿಧಾನಸಭಾ ಕ್ಷೇತ್ರ.* *ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ ಶ್ರೀ ಬಿ.ದೇವೇಂದ್ರಪ್ಪ ರವರು ಖಾಸಗಿ ಕಾರ್ಯಕ್ರಮಗಳ ಪ್ರಯುಕ್ತ ಜಗಳೂರಿನಿಂದ ದಾವಣಗೆರೆಗೆ ತೆರಳುತ್ತಿರುವ ಮಾರ್ಗ ಮಧ್ಯೆ ಮೆದಗಿನಕೆರೆ ಕ್ರಾಸ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ವಿಪರೀತವಾಗಿ ಪೆಟ್ಟು ಬಿದ್ದ ಗಾಯಾಳುಗಳನ್ನು ಮಾನ್ಯ ಶಾಸಕರು ತಮ್ಮ ಸ್ವಂತ ವಾಹನದಲ್ಲಿ ಗಾಯಾಳುಗಳಾದ ಹಿರೇಅರಕೆರೆ ಗ್ರಾಮದ ಚನ್ನಪ್ಪ, ಹಾಗೂ ಖಾನಹೊಸಹಳ್ಳಿ ಹತ್ತಿರದ ಹಾಲೂರು ಗ್ರಾಮದ ಗೋವಿಂದಮ್ಮ ಹಾಗೂ ಪ್ರದೀಪ್ ಇವರನ್ನು ಜಗಳೂರು ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆಯ ನೆರವಿಗಾಗಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.*2
- ದಿನಾಂಕ 23.04.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 33/11 ಕೆವಿ ಕಾಟಿಪಳ್ಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೃಷ್ಣಾಪುರ, ಕುತ್ತೆತ್ತೂರು, ಸುರತ್ಕಲ್, ಕಾನ ಮತ್ತು ತಡಂಬೈಲ್ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಾನ, ಕಟ್ಲ, ಜನತಾ ಕಾಲೊನಿ, ಸುರತ್ಕಲ್, ಗುಡ್ಡೆಕೊಪ್ಲ,, ಹೊಸಬೆಟ್ಟು, ತಡಂಬೈಲ್, ಪೆಡ್ಡಿಯಂಗಡಿ, 1 ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್, ಆಶ್ರಯ ಕಾಲೊನಿ, ಬಾಳ, ಎಂ.ಆರ್.ಪಿ.ಎಲ್ ಕಾರ್ಗೋ ಗೇಟ್, ಕೈಕಂಬ, ಮಂಗಳಪೇಟೆ, ಸೂರಿಂಜೆ, ದೇಲಂತಬೆಟ್ಟು, ರಾಜೀವನಗರ, ಪೆರ್ಮುದೆ, ಕುತ್ತೆತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.1
- Post by Nitin 9071795156 press reporte1
- ಗಮನಿಸಬೇಕಾದ ಅಂಶಗಳು: ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು. ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು. ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.1
- Post by Suresh Belagere1
- ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣಾ ಹಿನ್ನೆಲೆ ತಡವಾಗಿದ್ಷು ಇದೀಗ ಕರೆದಿದ್ದಾರೆ. 56434 ಹುದ್ದೆಗಳ ಬರ್ತಿ ಬಾಕಿದ್ದು ನಮ್ಮ ಮನವಿ ಮೇರೆಗೆ ನಿಲ್ಲಿಸಿದ್ದರು. ಕೆ ಪಿ ಎಸ್ ಸಿ ಯಿಂದ ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗೆ ಹಿಂದೆ ಕೆಪಿಎಸ್ ಸಿಗೆ ಕೊಟ್ಟಿದ್ದು ಕೆಪಿಎಸ್ ಸಿ ಗೆ ಕೊಡದ ಹಾಗೆ ತಡೆದಿದ್ದು ಇದೀಗ ಪರೀಕ್ಷಾ ಪ್ರಾದೀಕಾರಕ್ಕೆ ಈ ಎಲ್ಲಾ ಹುದ್ದೆ ತುಂಬಲು ಕೊಟ್ಟಿದ್ದು ಆಶ್ಚರ್ಯವಾಗಿದೆ. ಆತಂಕ ಆಗಿದ್ದು ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಗೆ ಹೊರಟಿದ್ದಾರೆ. ವಂಚನೆ ಆಗುತ್ತಿದ್ದಾಗಿ ಕರೆಗಳು ಬರುತ್ತಿದ್ದವು. ಅವಕಾಶ ವಂಚಿತರಾಗಿ ಆತಂಕ ಎದುರಾಗಿದ್ದು ಪ್ರತ್ಯೇಕ ಮೀಸಲಾತಿಗೆ ಆಗ್ರಹ ಮಾಡಿದ್ದೆವು. ಎಲ್ಲಾ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು ಈ ತಿಂಗಳ 24 ರಂದು ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಇತ್ಯರ್ಥ ಆಗುವ ಬಗ್ಗೆ ವಿಶ್ವಾಸ ಇರುವುದಾಗಿ ಹೆಚ್ ಆಂಜನೇಯ ಆಶಯ ವ್ಯಕ್ತಪಡಿಸಿದ್ದಾರೆ1
- ಬುಧವಾರ ಮುಂಜಾನೆ ಸುಮಾರು 3.30ರ ವೇಳೆಗೆ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದ ನಗರದ ಚಮ್ಮಾರ ಗಲ್ಲಿಯ ಬಸವನಗುಡಿಯ ಅಶ್ವತ್ಥ ಕಟ್ಟೆಯಲ್ಲಿದ್ದ ಬೃಹತ್ ಅಶ್ವತ್ಥ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಎರಡು ಮನೆಗಳು ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಬಿದ್ದ ಮರದ ಗೆಲ್ಲಿನ ಅಡಿಯಲ್ಲಿ ಸಿಲುಕಿದ್ದ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಇದೇ ವೇಳೆ ಮರದ ಗೆಲ್ಲು ಬಿದ್ದ ಪರಿಣಾಮ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.1