Shuru
Apke Nagar Ki App…
ವಿಶ್ವಕರ್ಮ ಜಯಂತಿ ಅಳ್ನಾವರದ ತಾಲ್ಲೂಕ ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ವಿಶ್ವಕರ್ಮ ಜಯಂತಿ ಅಳ್ನಾವರದ ತಾಲ್ಲೂಕ ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶೀರಸ್ಥೆದಾರ ಎ.ಎಂ. ಮಂಗಳಗಟ್ಟಿ, ಪ.ಪಂ. ಮುಖ್ಯಾಧಿಕಾರಿ ಪ್ರಕಾಶ ಮುಗದಮು, ದತ್ತಾ ನಿಟ್ಟೂರಕರ, ರವಿ ಬಡಿಗೇರ, ವಿಶ್ವ ಕರ್ಮ ಸಮಾಜದ ಹಿರಿಯರು, ಮತ್ತಿತರು ಇದ್ದರು.
Vineetmiskin Alnavar
ವಿಶ್ವಕರ್ಮ ಜಯಂತಿ ಅಳ್ನಾವರದ ತಾಲ್ಲೂಕ ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ವಿಶ್ವಕರ್ಮ ಜಯಂತಿ ಅಳ್ನಾವರದ ತಾಲ್ಲೂಕ ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶೀರಸ್ಥೆದಾರ ಎ.ಎಂ. ಮಂಗಳಗಟ್ಟಿ, ಪ.ಪಂ. ಮುಖ್ಯಾಧಿಕಾರಿ ಪ್ರಕಾಶ ಮುಗದಮು, ದತ್ತಾ ನಿಟ್ಟೂರಕರ, ರವಿ ಬಡಿಗೇರ, ವಿಶ್ವ ಕರ್ಮ ಸಮಾಜದ ಹಿರಿಯರು, ಮತ್ತಿತರು ಇದ್ದರು.
More news from ಕರ್ನಾಟಕ and nearby areas
- ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 76 ನೇಯ ಜನ್ಮದಿನದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿದ. ಬೊಮ್ಮಾಯಿ. ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 76 ನೇಯ ಜನ್ಮದಿನದ ಅಂಗವಾಗಿ ಇಂದು ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಗಣೇಶ ದೇವಸ್ಥಾನ ಹಾಗೂ ಶ್ರೀ ಸುಬ್ರಮಣ್ಯ ಸ್ವಾಮಿಯ ದರ್ಶನಾಶೀರ್ವಾದವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು.1
- ಖಾನಾಪುರ್ ತಾಲೂಕಿನ ಕಕ್ಕೇರಿ ಗ್ರಾಮದ ಸಿದ್ಧಾರೂಢ ಗಜಾನನನೋತ್ಸವ ಮಂಡಲದವರು ಸಾರ್ವಜನಿಕ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುವ ದೃಶ್ಯ.1
- ಮುಂಬರುವ ಸರ್ಕಾರಕ್ಕೆ ಒಳ್ಳೆಯ ಭವಿಷ್ಯವಿಲ್ಲ ಶಾಸಕ ಸಿ ಸಿ ಪಾಟೀಲ. ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿ ಜಮಾ ಕೊಟ್ಟಿತ್ತು,ಪ್ರಸ್ತುತ ಸರ್ಕಾರದ್ದು 9 ಲಕ್ಷ ಕೋಟಿ ಮಾಡಿದೆ. ಮುಂಬರುವ ಸರ್ಕಾರಕ್ಕೆ ಒಳ್ಳೆಯ ಭವಿಷ್ಯವಿಲ್ಲ ಶಾಸಕ ಸಿ ಸಿ ಪಾಟೀಲ. ಪ್ರಸ್ತುತ ಸರ್ಕಾರದ್ದು 9 ಲಕ್ಷ ಕೋಟಿ ಸಾಲವಿದೆ,ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿ ಜಮಾ ಇತ್ತು. ಗದಗ : ಪಂಚ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಾಗಿ ಉಳಿದಿಲ್ಲ, ಅಧಿಕಾರದ ದುರಾಸೆಗೆ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದು ಆರ್ಥಿಕವಾಗಿ ದುರ್ಬಲವಾಗಿದೆ ಇದರಿಂದ ಮುಂಬರುವ ಸರ್ಕಾರಕ್ಕೆ ಒಳ್ಳೆಯ ಭವಿಷ್ಯವಿಲ್ಲ ಎಂದು ಶಾಸಕ ಸಿ ಸಿ ಪಾಟೀಲ ಹೇಳಿದರು. ತಾಲೂಕಿನ ಕದಡಿ ಗ್ರಾಮದಲ್ಲಿ ನೀಲಾಂಬಿಕಾ ದೇವಸ್ಥಾನದ ಬಯಲು ಜಾಗೆಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಐದು ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಅದರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಸರ್ಕಾರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಅನುದಾನವಿರುವದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರು ಏನೇ ಅಭಿವೃದ್ಧಿ ಕೆಲಸಕ್ಕೆ ಬೇಡಿಕೆ ಇಟ್ಟರೆ ಇಲ್ಲಾ ಎಂದ ಉದಾಹರಣೆ ಸಿಗುತ್ತಿರಲಿಲ್ಲ,ಆದರೆ ಪ್ರಸಕ್ತ ನಮ್ಮ ಪರಿಸ್ಥಿತಿ ಮನೆಗೆ ಯಾರಾದರೂ ಕಾರ್ಯಕರ್ತರು ಬಂದರೆ ಎಲ್ಲಿ ಏನ ಕೇಳುವರೋ ಎಂಬ ಹೆದರಿಕೆ ಪಡುವಂತಾಗಿದೆ,ಆದರೂ ಕೂಡಾ ಇವತ್ತು ಎರಡು ಕೋಟಿ ಐವತ್ತು ಲಕ್ಷರೂ ಕದಡಿ ಹೊನ್ನಾಪುರ ಸಂಪರ್ಕ ರಸ್ತೆಯ 1300 ಮೀಟರ್ ರಸ್ತೆ ದುರಸ್ಥಿಗೆ ಹಾಗೂ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಐದು ಲಕ್ಷ ಬಿಡುಗಡೆ ಮಾಡಿದ್ದೇನೆ ಅಲ್ಲದೇ ಮುಂಬರುವ ಶಾಸಕರ ನಿಧಿಯಲ್ಲಿ ಇನ್ನೂ ಐದು ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಹಾಗೂ ನೂತನ ಗಡ್ಡಿ ತೇರಿನ ನಿರ್ಮಾಣಕ್ಕೆ ವೈಯಕ್ತಿಕ ಒಂದು ಲಕ್ಷ ನೀಡುವುದಾಗಿ ಭರವಸೆ ನೀಡುವೆ ಎಂದರು. ನಮಗೆ ಶಾಸಕ ನಿಧಿಗೆ ಸರ್ಕಾರ ಬರೀ ಐವತ್ತು ಲಕ್ಷ ಮಾತ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತದೆ ಅದರಲ್ಲಿ ಬರೀ ಹತ್ತು ಲಕ್ಷ ಮಾತ್ರ ನೀಡಿದೆ ಅದರಲ್ಲಿ ನಮ್ಮ ಕ್ಷೇತ್ರದ 105 ಹಳ್ಳಿಗಳಿಗೂ ಹಂಚಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಅಸಹಾಯಕತೆ ಎತ್ತಿ ತೋರಿಸುವ ಕೆಲಸ ಮಾಡಿದರು. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ ಸಮಯದಲ್ಲಿ ಅಧಿಕಾರಿಗಳ ಮೇಲೆ ಹಿಡಿತವಿದ್ದಿಲ್ಲ, ಪ್ರಸ್ತುತ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರವರು ಸ್ವಲ್ಪ ಹಿಡಿತ ಸಾಧಿಸುತ್ತಿದ್ದಾರೆ ಎಂದರು. ನಾನು ಆರು ಭಾರೀ ಸಚಿವನಾಗಿ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಸಮಯದಲ್ಲಿ ಅಧಿಕಾರಿಗಳೊಂದಿಗೆ ಹೊಂದಿದ್ದ ಉತ್ತಮ ಭಾಂದವ್ಯವೇ ಹಿಂದಿನ ಈ ಅನುದಾನ ತರುವಲ್ಲಿ ಸಾಧ್ಯವಾಗಿದೆ ಇಲ್ಲವಾದರೆ ಇವತ್ತು ಈ ಅನುದಾನ ತರಲು ಸಾಧ್ಯವಾಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ದ ಆರ್ಥಿಕ ದುರ್ಬಲತೆ ಎತ್ತಿ ತೋರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವೇದಮೂರ್ತಿ ಮಹಾದೇವಯ್ಯ ಸ್ವಾಮಿಗಳು ವಹಿಸಿದ್ದರು, ವಸಂತಗೌಡ ಪೊಲೀಸಪಾಟೀಲ, ವಿರೂಪಾಕ್ಷಪ್ಪ ಗೊಜನೂರು,ಶೇಕಣ್ಣ ಹುಲಗೂರು,ವಸಂತ ಮೇಟಿ, ಗ್ರಾಮ ಪಂಚಾಯ್ತಿ ಪಿ ಡಿ ಓ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು,ಹಾಗೂ ಗ್ರಾಮದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.2
- 🚨 ಹಳ್ಳೂರಿನ ಗ್ರಾಮೀಣ ರಸ್ತೆಯಲ್ಲೇ ಹೆಲ್ಮೆಟ್ ತಪಾಸಣೆ! ಗದ್ದೆಗೆ ಹೋಗುವವರಿಗೂ ದಂಡ #Hallur #Mudalagi #HelmetCheck #PoliceAction #TrafficRules #VillageRoad #KarnatakaNews #BelagaviNews #PSIYamanappa #HelmetFine #RoadSafety #VillageNews #KannadaNews #BreakingNews #ViralNews #PublicReaction #MudalagiNews #HallurVillage #TrafficPolice #NewsUpdate #BreakingNews ಹಳ್ಳೂರು ಹೆಲ್ಮೆಟ್ ತಪಾಸಣೆ, ಮೂಡಲಗಿ ಸುದ್ದಿ, ಗ್ರಾಮೀಣ ರಸ್ತೆ ಹೆಲ್ಮೆಟ್ ದಂಡ, PSI ಯಮನಪ್ಪ ಬಿಸನ್ಯಾಳ, ಬೆಳಗಾವಿ ಜಿಲ್ಲೆ ಸುದ್ದಿ, ಕನ್ನಡ ವೈರಲ್ ಸುದ್ದಿ, ಟ್ರಾಫಿಕ್ ನಿಯಮಗಳು, ಗ್ರಾಮಸ್ಥರ ಆಕ್ರೋಶ, ಹೆಲ್ಮೆಟ್ ಫೈನ್ ಕರ್ನಾಟಕ, Mudalagi Helmet Check.1
- ಗದಗ ಜೀಮ್ಸ್‌ನಲ್ಲಿ ಬಿಸಿಲಲ್ಲೇ ನಿಂತು ಔಷಧಿ ಪಡೆಯುವ ದುಸ್ಥಿತಿ! ಗದಗ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ಜೀಮ್ಸ್‌ಗೆ ಪ್ರತಿದಿನ ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿ ಔಷಧಿ ಪಡೆಯಲು ರೋಗಿಗಳು ಬಿಸಿಲು, ಮಳೆ ಹಾಗೂ ಗಾಳಿಯ ನಡುವೆಯೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಗದಗ ಜೀಮ್ಸ್‌ನಲ್ಲಿ ಬಿಸಿಲಲ್ಲೇ ನಿಂತು ಔಷಧಿ ಪಡೆಯುವ ದುಸ್ಥಿತಿ! ಗದಗ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ಜೀಮ್ಸ್‌ಗೆ ಪ್ರತಿದಿನ ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿ ಔಷಧಿ ಪಡೆಯಲು ರೋಗಿಗಳು ಬಿಸಿಲು, ಮಳೆ ಹಾಗೂ ಗಾಳಿಯ ನಡುವೆಯೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೂ ಸಮರ್ಪಕ ನೆರಳಿನ ವ್ಯವಸ್ಥೆ ಇಲ್ಲದೆ ಹೊರಗಡೆ ಕಾಯುವಂತಾಗಿದೆ. ಆಸ್ಪತ್ರೆ ಆವರಣದಲ್ಲಿ ಆಸನಗಳಿದ್ದರೂ, ಔಷಧಿ ವಿತರಣಾ ಕೌಂಟರ್ ಬಳಿ ಸರಿಯಾದ ಸರತಿ ವ್ಯವಸ್ಥೆ ಮತ್ತು ರೋಗಿಗಳಿಗೆ ಅನುಕೂಲಕರ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರ ಜೊತೆಗೆ, ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದೆ ಹೊರಗಿನ ಖಾಸಗಿ ಔಷಧಿ ಅಂಗಡಿಗಳಿಂದ ಖರೀದಿಸುವಂತೆ ಚೀಟಿ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹಾಗಾದರೆ ಜೀಮ್ಸ್‌ನಲ್ಲಿ ರೋಗಿಗಳ ಗೋಳು ಕೇಳುವವರು ಯಾರು? ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಔಷಧಿ ವಿತರಿಸುವ ಕೌಂಟರ್‌ಗೆ ನೆರಳು, ಕುಡಿಯುವ ನೀರು, ಆಸನ ಹಾಗೂ ಸಮರ್ಪಕ ಔಷಧಿ ವಿತರಣಾ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.1
- ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ನೈತಿಕತೆ ರಾಹುಲ್ ಗಾಂಧಿಗಿಲ್ಲ: ಬಸವರಾಜ ಬೊಮ್ಮಾಯಿ ತಿರುಗೇಟು* ಗದಗ: ಅಮೇರಿಕ ಅಧ್ಯಕ್ಷ ಡೋಲಾನ್ಡ್ ಟ್ರಂಪ್ ಏನೇ ಮಾಡಿದರೂ ಅದನ್ನು ನಮ್ಮ ದೇಶದ ಪರಿಸ್ಥಿತಿಗೆ ಜೋಡಿಸುವ ಕೆಲಸವನ್ನು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಧಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಆರ್ಥಿಕತೆ ಶೂನ್ಯ ಎಂದಾಗ ಇವರು ಖುಷಿ ಪಟ್ಟಿದ್ದರು, ಆದರೆ ಇಂದು ಭಾರತ ಶೇ. 7.8 ರಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇಂತಹ ಅದ್ಭುತ ಪ್ರಗತಿ ಅಮೆರಿಕಕ್ಕಾಗಲಿ ಅಥವಾ ರಷ್ಯಾಕ್ಕಾಗಲಿ ಇಲ್ಲ," ಎಂದು ಸ್ಪಷ್ಟಪಡಿಸಿದರು. ಇಂದಿರಾಗಾಂಧಿ ಅವರ ಕಾಲದಲ್ಲಿ 1975ರಲ್ಲಿ ಬಹುಮತ ಕಳೆದುಕೊಂಡು, ಕಮ್ಯುನಿಷ್ಟ್ ಪಾರ್ಟಿಯ ಬೆಂಬಲದೊಂದಿಗೆ ಅಲ್ಪಸಂಖ್ಯಾತ ಸರ್ಕಾರವನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ ದೇಶದಲ್ಲಿ ಎಡಪಂಥವಾಗಲಿ, ಬಲಪಂಥವಾಗಲಿ, ಜನಪಂಥವೂ ಇರಲಿಲ್ಲ, ಬದಲಿಗೆ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಇದು ಇಂದಿರಾಗಾಂಧಿ ಅವರ ಅಜ್ಜಿ ಗೀತು ಪಾಠ," ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು. *ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ:* ಇವತ್ತು ದೇಶವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಗಟ್ಟಿಯಾಗಿದೆ ಎಂದರೆ ಅದು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾತ್ರ ಸಾಧ್ಯವಾಗಿದೆ ಎಂದ ಬೊಮ್ಮಾಯಿ, "ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿರುವ ನಮ್ಮ ದೇಶದಲ್ಲಿ ಸಂಕಷ್ಟದ ಕಾಲದಲ್ಲಿಯೂ ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ಮುನ್ನಡೆಯುತ್ತಿರುವ ಏಕೈಕ ರಾಷ್ಟ್ರ ಭಾರತ. ಇದು ನರೇಂದ್ರ ಮೋದಿ ಅವರ ವಿಚಾರ, ಕಾರ್ಯಕ್ರಮ ಮತ್ತು ಅನುಷ್ಠಾನ ಶಕ್ತಿಯ ಫಲ," ಎಂದು ಪ್ರಶಂಸಿಸಿದರು. ,*ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ:* ಕಾಂಗ್ರೆಸ್ ಪಕ್ಷದಲ್ಲಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನಾಯಕರಿಲ್ಲ, ಅದರಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು. ಯುಪಿಐ ಶುಲ್ಕ ಹೆಚ್ಚಳದ ವಿಚಾರದಲ್ಲಿ ಅಮೆರಿಕದ ಟ್ರಂಪ್‌ಗೆ ಶರಣಾಗಿದ್ದಾರೆ ಎನ್ನುವ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, "ಟ್ರಂಪ್ ಏನೇ ಮಾಡಿದರೂ ಅದನ್ನು ನಮ್ಮ ದೇಶದ ಪರಿಸ್ಥಿತಿಗೆ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಭಾರತದ ಆರ್ಥಿಕತೆ ಶೂನ್ಯ ಎಂದಾಗ ಇವರು ಖುಷಿ ಪಟ್ಟಿದ್ದರು, ಆದರೆ ಇಂದು ಭಾರತ ಶೇ. 7.8 ರಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇಂತಹ ಅದ್ಭುತ ಪ್ರಗತಿ ಅಮೆರಿಕಕ್ಕಾಗಲಿ ಅಥವಾ ರಷ್ಯಾಕ್ಕಾಗಲಿ ಇಲ್ಲ," ಎಂದು ಸ್ಪಷ್ಟಪಡಿಸಿದರು. ದೇಶದ ನೈಜ ಆರ್ಥಿಕ ಸಾಧನೆ ಮತ್ತು ಪ್ರಧಾನಿ ಮೋದಿಯವರ ಜನಪರ ನಾಯಕತ್ವವನ್ನು ಹತ್ತಿಕ್ಕಲು ವಿರೋಧ ಪಕ್ಷಗಳು ನಿರರ್ಥಕ ಪ್ರಯತ್ನ ಮಾಡುತ್ತಿವೆ ಎಂದು ಬೊಮ್ಮಾಯಿ ಕಿಡಿಕಾರಿದರು. *ಕೆಪಿಎಸ್ಸಿ ಹಗರಣ* ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ಕೆಪಿಸಿಎಸ್ ಹಗರಣ ದಿನದಿಂದ ದಿನಕ್ಕೆ ಬಯಲಾಗುತ್ತಿದ್ದು, ಸರ್ಕಾರದ ವಿರುದ್ಧ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಟಿ. ನರಸೀಪುರ ಪೊಲೀಸ್ ಅಧಿಕಾರಿಯ ಉದ್ಧಟತನದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಹೈಕೋರ್ಟ್ ಹಲವಾರು ಬಾರಿ ಚಾಟಿ ಬೀಸಿದೆ ಮತ್ತು ಡಿಎಸ್‌ಪಿಗಳು ಸೇರಿದಂತೆ ಎಲ್ಲರಿಗೂ ಇದು ಒಂದು ಹೊಸ ಪೊಲೀಸ್ ಸಂಸ್ಕೃತಿಯಂತೆ ಮುಂದುವರಿದಿದೆ ಎಂದರು. ಪೊಲೀಸರು ಜನರ ಪರವಾಗಿರಬೇಕು, ಸ್ನೇಹಮಯಿಯಾಗಿರಬೇಕು ಆದರೆ ಕಾನೂನು ರಕ್ಷಣೆ ಮಾಡುವ ರಕ್ಷಕರೇ ಕಾನೂನು ಸುವ್ಯವಸ್ಥೆಯನ್ನು ಹದೆಗೆಡಿಸುವಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. *ಜನರ ಪರದಾಟ:* ಕೆಪಿಸಿಎಸ್ ಹಗರಣ ದಿನದಿಂದ ದಿನಕ್ಕೆ ಹೊರಬರುತ್ತಿದ್ದು, ಕೆವೈಸಿ, ಈ-ಖಾತೆ, ಎ ಯಿಂದ ಬಿ ಖಾತೆ ಹಾಗೂ ರೇಷನ್ ಕಾರ್ಡ್ ಪಡೆಯಲು ಕೂಡ ಜನರು ಸಾಕಷ್ಟು ಪರದಾಡುತ್ತಿದ್ದಾರೆ. ಯಾವುದೇ ಪೂರ್ವ ತಯಾರಿ, ತಾಂತ್ರಿಕ ಜ್ಞಾನ ಅಥವಾ ಸರ್ವರ್ ವ್ಯವಸ್ಥೆ ಇಲ್ಲದೆ ಈ ಸರ್ಕಾರ ಜನರಿಗೆ ತೊಂದರೆ ಕೊಡುತ್ತಿದ್ದು, ಇದು ಕೇವಲ ಒಂದು ನಾಟಕ ಕಂಪನಿಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. *ಸಿಬಿಐ ತನಿಖೆಗೆ ಒತ್ತಾಯ:* ಈ ಎಲ್ಲಾ ಹಗರಣಗಳ ಸತ್ಯಾಂಶ ಪೂರ್ಣ ಪ್ರಮಾಣದಲ್ಲಿ ಹೊರಬರಬೇಕಾದರೆ ಸಿಬಿಐ ತನಿಖೆಯಾಗಬೇಕು ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.1
- ಅಣ್ಣಿಗೇರಿ ಹುಬ್ಬಳ್ಳಿ ರಸ್ತೆ ಕಾರಿನ ಟೈರ ಬ್ಲಾಸ್ಟ್ ಆಗ್ಗಿ ಕಾರ್ ಪಾಲ್ಟಿ ಆಗಿ ಒಬ್ಬ ಸಾವು ಇಬ್ಬರೂ ಗಾಯಾಳುಗಳ ಅಣ್ಣಿಗೇರಿ ಹುಬ್ಬಳ್ಳಿ ರಸ್ತೆ ಕಾರಿನ ಟೈರ ಬ್ಲಾಸ್ಟ್ ಆಗ್ಗಿ ಕಾರ್ ಪಾಲ್ಟಿ ಆಗಿ ಒಬ್ಬ ಸಾವು ಇಬ್ಬರೂ ಗಾಯಾಳುಗಳ1
- ಬೆಳಗಾವಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ನಿವೃತ್ತ ಯೋಧ, ಪುತ್ರಿ ಹ... ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿವೃತ್ತ ಯೋಧ ಹಾಗೂ ಅವರ ಪುತ್ರಿ ಹತ್ಯೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆಸ್ತಿ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಮತ್ತು ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. **ಪೊಲೀಸರ ಅಧಿಕೃತ ಮಾಹಿತಿ ಹೊರಬಂದ ಬಳಿಕವಷ್ಟೇ ಹತ್ಯೆಯ ನಿಖರ ಕಾರಣ ಮತ್ತು ಆರೋಪಿಗಳ ಕುರಿತು ಸ್ಪಷ್ಟತೆ ಸಿಗಲಿದೆ.**1