ಬೆಳಗಾವಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ನಿವೃತ್ತ ಯೋಧ, ಪುತ್ರಿ ಹ... ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿವೃತ್ತ ಯೋಧ ಹಾಗೂ ಅವರ ಪುತ್ರಿ ಹತ್ಯೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆಸ್ತಿ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಮತ್ತು ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. **ಪೊಲೀಸರ ಅಧಿಕೃತ ಮಾಹಿತಿ ಹೊರಬಂದ ಬಳಿಕವಷ್ಟೇ ಹತ್ಯೆಯ ನಿಖರ ಕಾರಣ ಮತ್ತು ಆರೋಪಿಗಳ ಕುರಿತು ಸ್ಪಷ್ಟತೆ ಸಿಗಲಿದೆ.**
ಬೆಳಗಾವಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ನಿವೃತ್ತ ಯೋಧ, ಪುತ್ರಿ ಹ... ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿವೃತ್ತ ಯೋಧ ಹಾಗೂ ಅವರ ಪುತ್ರಿ ಹತ್ಯೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆಸ್ತಿ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಮತ್ತು ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. **ಪೊಲೀಸರ ಅಧಿಕೃತ ಮಾಹಿತಿ ಹೊರಬಂದ ಬಳಿಕವಷ್ಟೇ ಹತ್ಯೆಯ ನಿಖರ ಕಾರಣ ಮತ್ತು ಆರೋಪಿಗಳ ಕುರಿತು ಸ್ಪಷ್ಟತೆ ಸಿಗಲಿದೆ.**
- ಐಪಿಎಸ್ ಅಧಿಕಾರಿಯೊಬ್ಬರು "ಅಸ್ಸಲಾಮು ಅಲೈಕುಂ," "ಇನ್ಶಾ ಅಲ್ಲಾಹ್" ನೊಂದಿಗೆ ಪ್ರಾರಂಭಿಸಿ "ಜಝಾಕಲ್ಲಾಹ್" ನೊಂದಿಗೆ ಅಂತ್ಯಗೊಳಿಸಿದಕ್ಕೆ ವರ್ಗಾವಣೆ ಶಿಕ್ಷೆ.1
- ಹಾವೇರಿ: ವಂದೇ ಮಾತರಂನ ಕೇವಲ 2 ಚರಣಗಳನ್ನು ಮಾತ್ರ ಹಾಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಾವೇರಿ ನಗರ ಮಂಡಲ ತೀವ್ರವಾಗಿ ಖಂಡಿಸಿದೆ. 1937ರಲ್ಲಿ ಕಾಂಗ್ರೆಸ್ ಮುಸ್ಲಿಂ ಲೀಗ್ ಒತ್ತಡಕ್ಕೆ ಮಣಿದು ವಂದೇ ಮಾತರಂಗೆ 2 ಚರಣಗಳಿಗೆ ಕತ್ತರಿ ಹಾಕಿತ್ತು. ಇದು ಸಂವಿಧಾನದ ತೀರ್ಮಾನವಲ್ಲ, ಕಾಂಗ್ರೆಸ್‌ನ ರಾಜಕೀಯ ನಿರ್ಧಾರ. 24 ಜನವರಿ 1950ರಲ್ಲಿ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನಗಣಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಅಧಿಕೃತವಾಗಿ ಹೇಳಿದ್ದರು. ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂದು ಮತ್ತೆ ವಂದೇ ಮಾತರಂಗೆ ಕತ್ತರಿ ಹಾಕಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇಂದು ವಂದೇ ಮಾತರಂಗೆ ಕತ್ತರಿ ಹಾಕುವವರು ನಾಳೆ ಕುವೆಂಪು ರಚಿತ ನಾಡಗೀತೆಗೆ ಕತ್ತರಿ ಹಾಕುತ್ತಾರಾ? ಎಂದು ಪ್ರಶ್ನಿಸಿದೆ. ನೇಣುಗಂಬ ಏರಿದರೂ ವಂದೇ ಮಾತರಂ ಹಾಡುತ್ತೇವೆ ಎಂದಿದ್ದ ಕಾಂಗ್ರೆಸ್, ಈಗ ನೇಣುಗಂಬಕ್ಕೆ ಏರಿಸಿದರೂ ಹಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿರುವುದು ಖಂಡನೀಯ ಎಂದು ಹಾವೇರಿ ವಿಧಾನಸಭಾ ಕೊಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರದ ಸಿದ್ದರಾಜು ಕಲಕೋಟಿ, ನಗರ ಮಂಡಲ ಅಧ್ಯಕ್ಷ *ಕಿರಣ್ ಚನಬಸಪ್ಪ ಕೊಳ್ಳಿ ಈರಣ್ಣ ಹೇರೂರು, ಅಲ್ಲಾಬಾಕ್ಸ್ ತಿಮ್ಮಾಪುರ, ನಿರಂಜನ್ ಹೇರೂರು ನಗರ ಮಂಡಲದ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಸುನಿಲ್ ಲಕ್ಷ್ಮಣ ಬೆಟಗೇರಿ, ಮಾರುತಿ ಸವಣುರ ಗಿರೀಶ್ ಶೆಟ್ಟಿ, ಹೊನ್ನಪ್ಪ ಮಾಳಗಿ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಸೇರಿ ಭಾಗವಹಿಸಿದ್ದರು *1
- "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸರಕಾರದ ನೂತನ ಪ್ರಜಾ ಸೇವಾ ಆಂದೋಲನ ದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು .... "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸರಕಾರದ ನೂತನ ಪ್ರಜಾ ಸೇವಾ ಆಂದೋಲನ ದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು ....1
- 🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ… ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು. ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು. “ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ. ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ. ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁 ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ, ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ. ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ; ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ. 🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ. — @Anil Karne Gajendragad1
- ಭಾರತದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಜಿ ರವರ 25 ವರ್ಷಗಳ ಜನ ಸೇವೆಯ ಗೌರವಾರ್ಥ ಆಶೀರ್ವಾದದ ದೀಪ ಹಚ್ಚೋಣ. ಜನಪ್ರಿಯ ಸಂಸದ ಬಿ ವೈ ರಾಘವೇಂದ್ರ. ಭಾರತ ದೇಶದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಜಿ ರವರ 25 ವರ್ಷಗಳ ಜನ ಸೇವೆಯ ಗೌರವಾರ್ಥ ಆಶೀರ್ವಾದದ ದೀಪ ಹಚ್ಚೋಣ. " ಬಿಜೆಪಿ ಸೇವಾ ಸಂಕಲ್ಪ ಅಭಿಯಾನ" ಬಿ. ವೈ .ರಾಘವೇಂದ್ರ ರವರು ಜನಪ್ರಿಯ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ.1
- ನಾಳೆ ಅದ್ದೂರಿಯಾಗಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲು ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಕರೆ. ಕುಷ್ಟಗಿ : ನಾಳೆ ಸೆಪ್ಟೆಂಬರ್ 17 ನಮ್ಮ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಪವಿತ್ರ ಮತ್ತು ಹೆಮ್ಮೆಯ ದಿನ! ನಾಳೆ ನಾವು ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣವೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ಹೇಳಿದರು. 1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ನಮ್ಮ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರದ ಜನತೆ ನಿಜಾಮರ ಹಾಗೂ ರಜಾಕಾರರ ಕೌರ್ಯವನ್ನು ಎದುರಿಸಬೇಕಾಯಿತು. ಭಾರತ ಸರ್ಕಾರದ ‘ಆಪರೇಷನ್ ಪೋಲೋ’ ಕಾರ್ಯಾಚರಣೆಯ ಫಲವಾಗಿ, 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ಸ್ವಾತಂತ್ರ್ಯ ದೊರೆಯಿತು. ಈ ಮಹಾನ್ ವಿಮೋಚನೆಗಾಗಿ ಹೋರಾಡಿ, ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬ ಅಮರ ವೀರರಿಗೂ, ಸ್ವಾತಂತ್ರ್ಯ ಹೋರಾಟಗಾರರಿಗೂ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳು. ನಾಳೆ ಪ್ರತಿಯೊಬ್ಬರೂ ನಮ್ಮ ನಾಡಿನ ಈ ಐತಿಹಾಸಿಕ ದಿನವನ್ನು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ, ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಂದು ಊರಲ್ಲೂ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ. ಈ ಭಾಗದ ಶಿಕ್ಷಣ, ಉದ್ಯೋಗ, ನೀರಾವರಿ ಹಾಗೂ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಶ್ರಮಿಸುವ ಸಂಕಲ್ಪ ಮಾಡೋಣ ಎಂದು ಶಾಸಕರು ಕರೆ ನೀಡಿದರು.2
- ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ ಅವರ ಆಜ್ಞೆಯಂತೆ ಎಲ್ಲವನ್ನು ಮಾಡಿದ್ದೇನೆ: ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ1
- ಬೆಳಗಾವಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ನಿವೃತ್ತ ಯೋಧ, ಪುತ್ರಿ ಹ... ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿವೃತ್ತ ಯೋಧ ಹಾಗೂ ಅವರ ಪುತ್ರಿ ಹತ್ಯೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆಸ್ತಿ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಮತ್ತು ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. **ಪೊಲೀಸರ ಅಧಿಕೃತ ಮಾಹಿತಿ ಹೊರಬಂದ ಬಳಿಕವಷ್ಟೇ ಹತ್ಯೆಯ ನಿಖರ ಕಾರಣ ಮತ್ತು ಆರೋಪಿಗಳ ಕುರಿತು ಸ್ಪಷ್ಟತೆ ಸಿಗಲಿದೆ.**1