ಶಿಡ್ಲಘಟ್ಟ: ಸಾರ್ವಜನಿಕ ಆಸ್ಪತ್ರೆಯ ಸೌಲಭ್ಯಗಳ ಕುರಿತು ಜನಜಾಗೃತಿ. ಶಿಡ್ಲಘಟ್ಟ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸಿಗುವ ವಿವಿಧ ವೈದ್ಯಕೀಯ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಯಿತು. ಆಸ್ಪತ್ರೆಯಲ್ಲಿ ಲಭ್ಯವಿರುವ ಹೊರರೋಗಿ ಮತ್ತು ಒಳರೋಗಿ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವೆಂಕಟೇಶ್ ಮೂರ್ತಿ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಪರಿಣಿತ ವೈದ್ಯರ ಸೇವೆ ಲಭ್ಯವಿದೆ. ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಬದಲು, ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಉಚಿತ ಚಿಕಿತ್ಸೆ ಮತ್ತು ಸರ್ಕಾರದ ಆರೋಗ್ಯ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೈದ್ಯಾಧಿಕಾರಿ ಡಾ. ಸುಗುಣ ಅವರು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣದ ಸ್ಪಂದನೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ವರ್ಗ ಶ್ರಮಿಸುತ್ತಿದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ವಿವರಿಸಿದರು. ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಆಸ್ಪತ್ರೆಯ ದೈನಂದಿನ ಕಾರ್ಯವೈಖರಿ ಹಾಗೂ ನೋಂದಣಿ ಪ್ರಕ್ರಿಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಕೀರ್ತಿ, ಜಗದೀಶ್, ಮತ್ತು ನಾಭಿ,ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ನರೇಶ್ ಇನ್ನು ಮುಂತಾದವರು ಹಾಜರಿದ್ದರು.
ಶಿಡ್ಲಘಟ್ಟ: ಸಾರ್ವಜನಿಕ ಆಸ್ಪತ್ರೆಯ ಸೌಲಭ್ಯಗಳ ಕುರಿತು ಜನಜಾಗೃತಿ. ಶಿಡ್ಲಘಟ್ಟ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸಿಗುವ ವಿವಿಧ ವೈದ್ಯಕೀಯ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಯಿತು. ಆಸ್ಪತ್ರೆಯಲ್ಲಿ ಲಭ್ಯವಿರುವ ಹೊರರೋಗಿ ಮತ್ತು ಒಳರೋಗಿ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವೆಂಕಟೇಶ್ ಮೂರ್ತಿ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಪರಿಣಿತ ವೈದ್ಯರ ಸೇವೆ ಲಭ್ಯವಿದೆ. ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಬದಲು, ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಉಚಿತ ಚಿಕಿತ್ಸೆ ಮತ್ತು ಸರ್ಕಾರದ ಆರೋಗ್ಯ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೈದ್ಯಾಧಿಕಾರಿ ಡಾ. ಸುಗುಣ ಅವರು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣದ ಸ್ಪಂದನೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ವರ್ಗ ಶ್ರಮಿಸುತ್ತಿದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ವಿವರಿಸಿದರು. ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಆಸ್ಪತ್ರೆಯ ದೈನಂದಿನ ಕಾರ್ಯವೈಖರಿ ಹಾಗೂ ನೋಂದಣಿ ಪ್ರಕ್ರಿಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಕೀರ್ತಿ, ಜಗದೀಶ್, ಮತ್ತು ನಾಭಿ,ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ನರೇಶ್ ಇನ್ನು ಮುಂತಾದವರು ಹಾಜರಿದ್ದರು.
- *ವಿಪತ್ತು ನಿರ್ವಹಣೆ ಅರಿವು ಅಗತ್ಯ: ಎಡಿಸಿ ಸೈಯಿದಾ ಆಯಿಷಾ* ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆಗಳು ಸದಾ ಸಿದ್ಧರಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹಾಗೂ ಗ್ಯೇಲ್ ಗ್ಯಾಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನಡೆದ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. ನೈಸರ್ಗಿಕ ವಿಕೋಪಗಳ, ಅಪಾಯಕಾರಿ ಕಾರ್ಖಾನೆಗಳಲ್ಲಿ ಆಗುವಂತಹ ದುರಂತ, ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆ ಅಧಿಕಾರಿಗಳಿಗೆ ಅರಿವು ಇರಬೇಕು. ಕಾರ್ಖಾನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭ ಬಂದರೂ ಕೂಡ ಸಮನ್ವಯ ಇಲಾಖೆಗಳು ಸದಾ ಸನ್ನದ್ಧವಾಗಿರಬೇಕು ಎಂದರು. *ನೈಜ ಘಟನೆಯಂತೆ ರಾಸಾಯನಿಕ ಸೋರಿಕೆ ಮಾಕ್ ಡ್ರಿಲ್* ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನೈಜ ಘಟನೆಯಂತೆ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಂತೆ ಕಾರ್ಖಾನೆ ಆವರಣದಲ್ಲಿ ಅಣಕು ಡ್ರಿಲ್ ಸಂಕೀರ್ಣ ಕೈಗಾರಿಕಾ ತುರ್ತು ಸನ್ನಿವೇಶವನ್ನು ಅನುಕರಿಸಿತು, ಇದರಲ್ಲಿ ಉತ್ಖನನ ಕೆಲಸದ ಸಮಯದಲ್ಲಿ PNG ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಯಿತು, ಇದರ ಪರಿಣಾಮವಾಗಿ ಅನಿಲ ಸೋರಿಕೆ ಮತ್ತು ಸ್ಥಿರ ದಹನದಿಂದಾಗಿ ನಂತರದ ಬೆಂಕಿ ಉಂಟಾಯಿತು. ಅದೇ ಸಮಯದಲ್ಲಿ, LPG ನಿಲ್ದಾಣದಲ್ಲಿ LPG ಟ್ಯಾಂಕರ್ ಇಳಿಸುವ ಕಾರ್ಯಾಚರಣೆಯಲ್ಲಿ ಮೆದುಗೊಳವೆ ಸೋರಿಕೆ ಉಂಟಾಯಿತು, ಇದು ನಂತರ ಉಗಿ ಮೋಡವನ್ನು ರೂಪಿಸಿತು, ಇದು ಆವಿ ಮೋಡ ಸ್ಫೋಟಕ್ಕೆ (VCE) ಕಾರಣವಾಯಿತು. ಪ್ರಥಮ ಚಿಕಿತ್ಸೆ ಅಗತ್ಯವಿರುವ 05 ಜನರು, ಗಂಭೀರ ಸುಟ್ಟ ಗಾಯಗಳೊಂದಿಗೆ 05 ಜನರು ಮತ್ತು 10 ಜನರು ಸಾವನ್ನಪ್ಪಿದ್ದಾರೆ ಎಂದು ಬಂಬಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಿ ಸುಮಾರು 400 ರಿಂದ 500 ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಕಾರ್ಖಾನೆಗಳಲ್ಲಿ ಘಟಿಸುವ ರಾಸಾಯನಿಕ ಸೋರಿಕೆಯಂತಹ ಘಟನೆಯಿಂದ ಕಾರ್ಖಾನೆ ಸಿಬ್ಬಂದಿಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಹಾನಿ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ, ನಿರ್ವಹಣೆ ಮಾಡುವ ಜ್ಞಾನ ಅಧಿಕಾರಿ, ಸಿಬ್ಬಂದಿಗಳಿಗೆ, ಕಾರ್ಖಾನೆಗಳಿಗೆ ಇರಬೇಕು.ಭೂಪಾಲ್ ಅನಿಲ ದುರಂತ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಖಾನೆಗಳಲ್ಲಿ, ಸಾರ್ವಜನಿಕರಿಗೆ ಅರಿವು ಮಾಡಿಸುವ ಸಲುವಾಗಿ ಕಾಲಕಾಲಕ್ಕೆ ಅಣುಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ. ಕಾರ್ಖಾನೆಗಳ ಜಂಟಿ ನಿರ್ದೇಶಕ ಪಾರ್ಥಸಾರಥಿ, ಉಪನಿರ್ದೇಶಕರಾದ ನರಸಿಂಹ ಮೂರ್ತಿ, ತಿಮ್ಮರಾಜು; ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್‌ನಿಂದ ಮುಖ್ಯಸ್ಥರಾದ ವಿಕ್ರಮ್ ಶರ್ಮಾ, ಎಂ. ಸತೇಶ್ ಕುಮಾರ್, ವಿಪತ್ತು ನಿರ್ವಹಣಾ ಪರಿಣಿತರಾದ ಸ್ಮಿತಾ, ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.1
- ಜಿಲ್ಲಾಧಿಕಾರಿ ಗೌರಿಬಿನಲ್ ನಗರಸಭೆಗೆ ದಿಡೀರ್ ಬೇಟಿ2
- ವಾರ್ಡ್ ನೊಂ 22 ರಲ್ಲಿ ಮೂವತ್ತು ಲಕ್ಷ ಕಾಮಗಾರಿ ಗೆ ಚಾಲನೆ ನೀಡಿದ ರಫಿ1
- Admissions only limited seats urryup1
- ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಕ್ರೋಧಗೊಂಡ ಒಳ ಮೀಸಲಾತಿ ಹೋರಾಟಗಾರರು ಇದೀಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ....1
- ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದ ಬಂಗಾರಪ್ಪ ಕಾಲೋನಿಯಲ್ಲಿ ಚರಂಡಿ ಯ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಬಂಗಾರಪ್ಪ ಕಾಲೋನಿ ನಿವಾಸಿ ಗಳ ದೇಹ ಸೇರುತ್ತಿದೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ ಮನವಿ ಸಲ್ಲಿಸಿದ ನಂತರವೂ ಯಾವುದೇ ಕೆಲಸ ಆಗಿಲ್ಲ ಎಂದು ಬಂಗಾರಪ್ಪ ಕಾಲೋನಿ ನಿವಾಸಿಗಳ ಅಳಲು ಅಲ್ಲದೆ ಚರಂಡಿ ಕೂಡ ಸ್ವಚ್ಛತೆ ಮಾಡುವ ಕಾರ್ಯ ಮಾಡಿಲ್ಲ , ಸ್ಥಳೀಯ ನಿವಾಸಿಗಳು ಮಕ್ಕಳು ಅನಾರೋಗ್ಯ ಪೀಡಿತ ರಾಗುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿದ್ದಾರೆ.4
- ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್‌ಕುಮಾರ್ ಹೇಳಿಕೆ • ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ ಮಳವಳ್ಳಿ:ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು-ಕೊರತೆ ಸಭೆ ಬುದವಾರ ಜರುಗಿತು. ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ದೂರು ಸ್ವೀಕಾರ ಸಭೆಯ ನಂತರ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಮಾತನಾಡಿ ಈ ದಿನ ತಹಶೀಲ್ದಾರ್ ಕಛೇರಿಯ ೧೬,ಸರ್ವೆ ಇಲಾಖೆಯ ೬, ಅರಣ್ಯ ಇಲಾಖೆ ೨,ಗ್ರಾ.ಪಂ ಪಿಡಿಓ ೨, ಬಿ.ಎಸ್.ಎನ್.ಎಲ್ ಕಛೇರಿಯ ೧, ಉಪವಿಭಾಗಾದಿಕಾರಿಗಳ ಕಚೇರಿಯ ೧,ಜಿ.ಪಂ.ಸಿಇಓ ಕಚೇರಿಯ ೧ ದೂರು ಸೇರಿದಂತೆ ಒಟ್ಟು ೨೯ ದೂರುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಕ್ರಮವಹಿಸಲಾಗಿದೆ ಎಂದ ಅವರು ತಳಗವಾದಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ದವಿಲ್ಲದ ನೀರು ಸರಬರಾಜು ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ,ಗ್ರಾಮದ ಜನರ ಅರೋಗ್ಯಕ್ಕೆ ಅನೂಕೂಲವಾದ ನೀರು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಅಧಿಕಾರಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಜವಬ್ದಾರಿಯಿಲ್ಲ ಸಾಮಾಜಿಕ ಕಾರ್ಯಕರ್ತರ ಎಂ.ವಿಜಯ್ ಅಕ್ರೋಶ ಈ ಸಂದರ್ಭದಲ್ಲಿ ದೂರು ಕೊಡಲು ಬಂದ ಸಾಮಾಜಿಕ ಕಾರ್ಯಕರ್ತ ಎಂ.ವಿಜಯ್ ಮಾಮರ ನ್ಯೂಸ್ ನೊಂದಿಗೆ ಮಾತನಾಡಿ ನಾನು ಆರ ಟಿ ಸಿಯಲ್ಲಿನ ಹೆಸರು ತಿದ್ದುಪಡಿಗೆ ಅರ್ಜಿ ನೀಡಿ ಕಳೆದ ವರ್ಷ ೨೦೨೪ ರಲ್ಲಿ ನೀಡಿದ್ದೆನೆ.ಇಲ್ಲಿಯವರೆಗೆ ಏನು ಕ್ರಮವಹಿಸಲ್ಲ,ಈಗ ಹಿಂಬರಹ ನೀಡಿ ಮೇಲ್ಮನವಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.ಇದನ್ನು ಮನವಿ ನೀಡಿದಾಗಲೇ ತಿಳಿಸಬಹುದಿತ್ತು.ತಿಳಿಸಿಲ್ಲ. ೧ ವರ್ಷ ಅಲೆಸಿ ಈಗ ಅದು ನಾವು ಕೇಳಿದಾಗ ಮಾತ್ರ ಹಿಂಬರಹ ನೀಡಿದ್ದಾರೆ ಇದು ತಾಲೂಕು ಕಛೇರಿಯ ಆಢಳಿತ ವ್ಯವಸ್ಥೆಯ ಭ್ರಷ್ಠಾಚಾರ ಮತ್ತು ನಿರ್ಲಕ್ಷತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಹಕ್ಕು ಖುಲಾಸೆಗೆ ೧ ವರ್ಷ ಬೇಕು ಯುವ ಮುಖಂಡ ಟಿ.ರಾಜೇಶ್ ಅರೋಪ ಈ ಸಂಭAದ ಲೋಕಾಯುಕ್ತರ ಬಂದಿದ್ದಾರೆAದು ದೂರು ನೀಡಲು ಬಂದ ಟಿ.ರಾಜೇಶ್ ಎಂಬುವರನ್ನು ಮಾಮರ ನ್ಯೂಸ್ ಪ್ರತಿನಿಧಿ ಪ್ರಶ್ನಿಸಿದಾಗ ವ್ಯವಸ್ಥೆಯ ವಿರುದ್ದ ಅಕ್ರೋಶ ವ್ಯಕ್ತವಾಯಿತು. ಕಛೇರಿಯ ಸಿಬಬಂದಿಗಳಿಗೆ ದಪ್ಪ ಚರ್ಮ,ಇವರಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ.ನನ್ನ ಪತ್ನಿಯ ಹೆಸರಿನಲ್ಲಿರುವ ಆರ್‌ಟಿಸಿಯಲ್ಲಿ ಸಹಕಾರ ಸಂಘದ ನಮೂದಾಗಿದ್ದು,ಸಾಲದ ಹಕ್ಕು ಖುಲಾಸೆ ಮಾಡುವಂತೆ ಅರ್ಜಿ ಅದಕ್ಕೆ ಸಂಭAದಿಸಿದAತೆ ಸಬ್ ರಿಜಿಸ್ಟರ್ ಕಛೇರಿಯ ಸಾಲ ಖುಲಾಸೆ ದೃಢೀಕರಣ ನೀಡಿ ವರ್ಷವಾಗಿದೆ,ಅದು ಇನ್ನು ಅಗಿಲ್ಲ.ಬಂದು ಕೇಳಿದರೆ ಆಢಳಿತ ತಹಸೀಲ್ದಾರ್ ಗುರುಪ್ರಸಾದ್ ಹೇಳುತ್ತಾರೆ ,ಆರ್ ಅರ್ ಟಿ ವಿಭಾಗದಲ್ಲಿ ಅನೇಕರು ಬದಲಾವಣೆಯಾಗಿದ್ದಾರೆ.ದಾಖಲಾತಿ ಸಿಗುತ್ತಿಲ್ಲ.ದಯವಿಟ್ಟು ಅದರ ಇನ್ನೊಂದು ಪ್ರತಿ ತಂದು ಕೊಡಿ ಮಾಡುತ್ತವೆ ಎಂದು ಪ್ರತಿಕ್ರಿಯಿಸುತ್ತಾರೆ. ಜನರ ಮನವಿಗಳಿಗೆ,ದೂರುಗಳಿಗೆ ಇಲ್ಲಿ ಬೆಲೆ ಇಲ್ಲದಾಗಿದೆ.ಈಗ ಪುನ: ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಕಲಿ ಪ್ರತಿ ತಗೆದುಕೊಂಡು ಸಲ್ಲಿಸಿದ್ದೆನೆ. ಇನ್ನು ಎಷ್ಟು ತಿಂಗಳು ಅಗುತ್ತದೋ ಗೊತ್ತಿಲ್ಲ.ಕಾನೂನು ಬದ್ದ ಒಂದು ಸಣ್ಣ ಕೆಲಸಕ್ಕೆ ೧ ವರ್ಷವಾದರೂ ಅಗಿಲ್ಲ,ಇದು ಆಢಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅರ್ಜಿ ನೀಡಿ ೨ ತಿಂಗಳಾದರೂ ಜಮೀನಿನ ದಾಖಲಾತಿ ನೀಡಿಲ್ಲ: ಈ ಸಂದರ್ಬದಲ್ಲಿ ಮುಖಂಡ ಕಾಂತರಾಜು ಮಾತನಾಡಿ ನನ್ನ ಸಂಬAಧಿಕರ ಜಮೀನಿನ ದಾಖಲಾತಿಗಾಗಿ ಅರ್ಜಿ ನೀಡಿ ೨ ತಿಂಗಳು ಕಳೆದಿದೆ,ಇನ್ನು ರೇಕಾರ್ಡು ರೂಮಿನ ಸಿಬ್ಬಂದಿಗಳು ದಾಖಲಾತಿ ನೀಡಿಲ್ಲ,ಇದಕ್ಕೆ ಸಂಭAದಿಸಿದAತೆ ತಹಶೀಲ್ದಾರ್ ಮತ್ತು ಆಢಳಿತ ಶಿರಸ್ತದಾರ್ ಗಮನಕ್ಕೆ ತಂದರೂ ಅವರು ಸೂಚನೆ ನೀಡಿದರೂ ಅವರ ಮಾತಿಗೂ ಕಿಮ್ಮತ್ತಿಲ್ಲ.ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಜನರು ದಿನನಿತ್ಯ ಅಲೆಯುವಂತಾಗಿದೆ ಎಂದು ತಾಲೂಕು ಕಛೇರಿಯ ಅವ್ಯವಸ್ಥೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ದರಕಾಸ್ತು ಜಮೀನು ಖಾತೆ ಮಾಡಿಕೊಡಲು ೪—೫ ವರ್ಷ ಅಲೆದಾಟ-ಅಲೆದು ಮೃತಪಟ್ಟ ತಂದೆ: ಕಾನೂನು ಬದ್ದವಾಗಿ ಸರ್ಕಾರ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಎಲ್ಲ ಅಗತ್ಯ ಪೂರಕ ದಾಖಲಾತಿಗಳು ನೀಡಿ ಮನವಿ ಮಾಡಿದರೂ ಕಳೆದ ೪-೫ ವರ್ಷದಿಂದ ಖಾತೆ ಮಾಡಿಕೊಟ್ಟಿಲ್ಲ ಇದಕ್ಕಾಗಿ ಅಲೆದು ಅಲೆದು ನಮ್ಮ ತಂದೆ ಸಾವನ್ನಪ್ಪಿದರೆಂದು ದೂರುದಾರ ಬಸವೇಶ್ ಬೇಸರ ವ್ಯಕ್ತಪಡಿಸಿದರು. ಕಳೆದ ೧ ವರ್ಷದಿಂದ ಖಾತೆ ಮಾಡಿಕೊಡುವಂತೆ ಎಲ್ಲ ಕಾನೂನುಬದ್ದವಾಗಿ ದಾಖಲಾತಿಗಳು ಸಲ್ಲಿಸಿದ್ದೆನೆ.ಅದರೂ ಖಾತೆ ಮಾಡಿಕೊಡುವಲ್ಲಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.ಇದೇ ರೀತಿಯ ೯೦ಕ್ಕೂ ಹೆಚ್ಚು ಪ್ರಕರಣಗಳು ವರ್ಷಾನುಗಟ್ಟಲೆಗಳಿಂದ ನೆನೆಗುದಿಗೆ ಬಿದ್ದಿವೆ,.ಕೇಳಿದರೆ ಅನ್‌ಲೈನ್ ಸಮಸ್ಯೆ ಎಂದು ಹೇಳುತ್ತಾರೆ.ಈ ಬಗ್ಗೆ ಅಪರ ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ದೂರು ನೀಡಿದೆವು, ಅವರು ಸಹ ಕಡಿತ ಪರಿಶೀಲಿಸಿ ಕೂಡಲೇ ಖಾತೆ ಮಾಡಿಕೊಡುವಂತೆ ಸೂಚಿಸಿದರು ಅವರ ಸೂಚನೆಗೂ ಬೆಲೆ-ಕಿಮ್ಮತ್ತಿಲವಾಗಿದೆ.ನಮ್ಮ ಕಡಿತ ಹಾಗೆಯ ಕೊಳೆಯುತ್ತಿದೆ. ಸರ್ಕಾರಗಳು ಜನರಿಗೆ ಅನೂಕೂಲವಾಗಲೆಂದು ಏನೇ ಯೋಜನೆ ಕಾನೂನು ತಂದರೂ ಅನುಷ್ಟಾನ ಮಾಡುವ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಬ್ದಾರಿತನದಿಂದ ಅಲೆಯಬೇಕಿದೆ ಎಂದು ತಮ್ಮ ಅಳನ್ನು ಈ ಸಂದರ್ಭದಲ್ಲಿ ತೊಡಿಕೊಂಡರು. ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸೆಪೆಕ್ಟರ್ ರವಿಕುಮಾರ್,ತಹಶೀಲ್ದಾರ್ ಡಾ.ಎಸ್.ವಿ.ಲೋಕೆಶ್ ಸೇರಿದಮತೆ ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಿತ್ರ-೧೧-೩ ಮಳವಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ತಂಡ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಲಹೆ ಸೂಚನೆ ನೀಡಿದರು. \1
- ನೆಲಮಂಗಲ ಕೂದಲು ವ್ಯಾಪಾರಕ್ಕೆ ಬಂದು ಮಕ್ಕಳ ಕಳ್ಳತನಕ್ಕೆ ಯತ್ನ ಅರೋಪ ಮಕ್ಕಳು ಕಳ್ಳರೆಂದು ಕೂದಲು ವ್ಯಾಪಾರಿಗಳನ್ನ ಹಿಡಿದು ಬಡಿದ ಜನ! ಕೂದಲು ವ್ಯಾಪಾರ ವೇಳೆ ಮಗುವಿನ ಕೈ ಹಿಡಿದು ಎಳೆದದಾಟ ಆರೋಪ ಮಗು ಕಿರುಚುತ್ತಿದ್ದಂತೆ ಗ್ರಾಮಸ್ಥರು ಸುತ್ತುವರೆದು ಬಡಿದಾಟ ಕೂದಲು ವ್ಯಾಪಾರಿಗಳು ಹಾಗೂ ಗ್ರಾಮದ ಮಹಿಳೆಯರ ನಡುವೆ ಮಾರಾಮಾರಿ ನೆಲಮಂಗಲ ಟೌನ್ ಜಕ್ಕಸಂದ್ರ ಗ್ರಾಮದಲ್ಲಿ ಘಟನೆ ಕೂದಲು ವಿಚಾರಕ್ಕೆ ಜಗಳ ತೆಗೆದು ಸುಳ್ಳುಹೇಳುತ್ತಿದ್ದಾರೆ ಎನ್ನುವ ಕೂದಲು ವ್ಯಾಪಾರಿಗಳು ಕಣ್ಣಾರೆ ನೋಡಿದ್ದೀವಿ ಇವರು ಮಕ್ಕಳು ಕಳ್ಳರು ಎಂದು ಪೋಷಕರ ಆರೋಪ ಸದ್ಯ ಕೂದಲು ವ್ಯಾಪಾರಿಗಳನ್ನ ವಶಕ್ಕೆ ಪಡೆದಿರುವ ನೆಲಮಂಗಲ ಪೊಲೀಸರು ನೆಲಮಂಗಲ ಟೌನ್ ಪೊಲೀಸರಿಂದ ವ್ಯಾಪಾರಿಗಳ ವಿಚಾರಣೆ.1