Shuru
Apke Nagar Ki App…
ಕುಂದಾಪುರ ಶೂಟೌಟ್ ಪ್ರಕರಣ | ಉಡುಪಿ ಎಸ್ ಪಿ ಹೇಳಿದ್ದೇನು..? ಕುಂದಾಪುರ : ಶೂಟೌಟ್ ಪ್ರಕರಣ ಅರೋಪಿ ಡೆರಿಕ್ ಪತ್ತೆಗೆ ವಿಶೇಷ ತಂಡ ಎಸ್ ಪಿ ಹರಿರಾಮ್ ಶಂಕರ್
Sunil
ಕುಂದಾಪುರ ಶೂಟೌಟ್ ಪ್ರಕರಣ | ಉಡುಪಿ ಎಸ್ ಪಿ ಹೇಳಿದ್ದೇನು..? ಕುಂದಾಪುರ : ಶೂಟೌಟ್ ಪ್ರಕರಣ ಅರೋಪಿ ಡೆರಿಕ್ ಪತ್ತೆಗೆ ವಿಶೇಷ ತಂಡ ಎಸ್ ಪಿ ಹರಿರಾಮ್ ಶಂಕರ್
More news from ಕರ್ನಾಟಕ and nearby areas
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣವಾಗಿ ಸುರಿದ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರವೂ ಮಳೆ ಬಿಡುವು ನೀಡಿದ್ದು, ಜಿಲ್ಲೆಯಾದ್ಯಂತ ಗುರುವಾರ ಸಾಧಾರಣ ಮಳೆಯಾಗಿದೆ. ಗುರುವಾರ ದಿನದ ಬಹುತೇಕ ಹೆಚ್ಚು ಸಮಯ ಬಿಡುವು ನೀಡಿದ್ದ ಮಳೆ ಕೆಲ ಕಾಲ ಸಾಧಾರಣ ಮಳೆಯಾಗಿತ್ತು, ಉಳಿದಂತೆ ಅಲ್ಪ ಬಿಸಿಲಿನ ವಾತಾವರಣ ಮುಂದುವರಿದಿತ್ತು. ಗುರುವಾರ ಬೆಳಗ್ಗೆಯವರೆಗೆ ದ.ಕ. ಜಿಲ್ಲೆಯಲ್ಲಿ 28.1 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 41.3 ಮಿ.ಮೀ.ಗರಿಷ್ಠ ಮಳೆಯಾಗಿದೆ.1
- ಶಿವಮೊಗ್ಗ-ಕೆಂಪುಕಲ್ಲು ಕ್ವಾರಿಗೆ ದಿಢೀರ್ ದಾಳಿ:ಲಾರಿ ವಶಕ್ಕೆ ಪಡೆದ ತಹಶೀಲ್ದಾರ್ ಡಾ.ಪ್ರತಿಭಾ. ಸಾಗರ: ತಾಲೂಕಿನಲ್ಲಿ ಯಾವುದೇ ಎಗ್ಗಿಲ್ಲದೆ ರಾಜಾ ರೋಷವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಮತ್ತು ಜಂಬಿಟ್ಟಿಗೆ ಸಾಗಾಟಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಬ್ರೇಕ್ ಹಾಕಿದ್ದಾರೆ. ರಾಜಕೀಯ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಅಕ್ರಮಗಳ ವಿರುದ್ಧ ಸಮರ ಸಾರಿರುವ ತಹಶೀಲ್ದಾರ್, ದಿಢೀರ್ ಕಾರ್ಯಾಚರಣೆ ನಡೆಸಿ ಅಕ್ರಮ ಜಂಬಿಟ್ಟಿಗೆ ತುಂಬಿದ್ದ ಲಾರಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅಕ್ರಮ ಕೋರರಿಗೆ ನಡುಕ ಹುಟ್ಟಿಸಿದ್ದಾರೆ. ಬೊಮ್ಮತ್ತಿ ಬಳಿಯ ಮಳ್ಳ ಬಳಿ ಮಿಂಚಿನ ಕಾರ್ಯಾಚರಣೆ..! ತ್ಯಾಗರ್ತಿ ಭಾಗದ ಬೊಮ್ಮತ್ತಿ ಸಮೀಪದ ಬ್ರಾಹ್ಮಣ ಮಂಚಾಲೆ ಗ್ರಾಮದ ಮಳ್ಳ ಬಳಿ ಸರ್ವೇ ನಂಬರ್ 107ರಲ್ಲಿ ಬಹಳ ದಿನಗಳಿಂದ ಅನುಮತಿ ಇಲ್ಲದೆ ಅಕ್ರಮವಾಗಿ ಜಂಬಿಟ್ಟಿಗೆ ತೆಗೆದು ಸಾಗಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಈ ದೂರಿನ ಆಧಾರದ ಮೇಲೆ ಕಂದಾಯ ಪರಿವೀಕ್ಷಕ ಗುರುರಾಜ್ ಹಾಗೂ ಗ್ರಾಮ ಆಡಳಿತಾಧಿ ಕಾರಿ ನಂದೀಶ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಡಾ. ಪ್ರತಿಭಾ, ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಜಪ್ತಿ ಮಾಡಿದ್ದಾರೆ.ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎಫ್‌ಐಆರ್ (FIR) ಹಾಕಿಸಿದ್ದಾರೆ. ಯಾವುದೇ ಕಾರಣಕ್ಕೂ ಅಕ್ರಮ ಸಹಿಸಲ್ಲ" - ತಹಶೀಲ್ದಾರ್ ಆರ್ ಪ್ರತಿಭಾ ಎಚ್ಚರಿಕೆ.. ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಅವರು ಸಾಗರ ತಾಲೂಕಿನಲ್ಲಿ ಅವ್ಯಾಹತ ವಾಗಿ ನಡೆಯುತ್ತಿರುವ ಅಕ್ರಮ ಜಂಬಿಟ್ಟಿಗೆ ಹಾಗೂ ಮರಳು ಸಾಗಾಟವನ್ನು ಖಂಡಿತ ವಾಗಿಯೂ ಸಹಿಸುವುದಿಲ್ಲ. ಇಂದಿನ ಈ ದಾಳಿ ಪ್ರತಿಯೊಬ್ಬ ಅಕ್ರಮಕೋರನಿಗೂ ಎಚ್ಚರಿಕೆಯ ಗಂಟೆಯಾಗ ಬೇಕು. ತಾಲೂಕಿನಲ್ಲಿ ಇನ್ಮುಂದೆ ಎಲ್ಲಿಯೇ ಅಕ್ರಮ ಗಣಿಗಾರಿಕೆ ಕಂಡುಬಂದರೂ ನಿರ್ದಾಕ್ಷಿಣ್ಯ ವಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಾಗರದ ಜನತೆಯಿಂದ ಹ್ಯಾಟ್ಸಾಫ್: ಹಿಂದಿನ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಇರುತ್ತಿದ್ದ ಜಾಗದಲ್ಲಿ, ಅಧಿಕಾರ ಸ್ವೀಕರಿಸಿದಾಗಿ ನಿಂದಲೂ ಸಾಗರದ ನೆಲ, ಜಲ ಹಾಗೂ ಪರಿಸರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಡಾ. ಪ್ರತಿಭಾ ಅವರ ದಿಟ್ಟತನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ."ಇದ್ದರೆ ಇರಬೇಕು ಇಂತಹ ಅಧಿಕಾರಿ" ಎಂದು ಕೊಂಡಾಡಿರುವ ಸಾಗರದ ಜನತೆ, ಅಕ್ರಮ ಒತ್ತುವರಿ ಹಾಗೂ ಗಣಿಗಾರಿಕೆ ವಿರುದ್ಧ ಸಿಂಹಸ್ವಪ್ನ ವಾಗಿರುವ ತಹಶೀಲ್ದಾರ್ ಅವರನ್ನು 'ಲೇಡಿ ಸಿಂಗಂ' ಎಂದು ಬಣ್ಣಿಸಿ ಹ್ಯಾಟ್ಸಾಫ್ ಹೇಳಿದ್ದಾರೆ.1
- We are authorised distributor for Karnataka for Yodha agricultural equipments ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ ಸಂಪರ್ಕಿಸಿ: 7483066169 ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110 Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow We are authorised distributor for karnataka Shri shivabasava agro care Haveri Contact us: 7483066169 Location: Industrial area, near, TMAE college, Hubli road, Haveri 5811101
- ರೈತ ಆತ್ಮಹತ್ಯೆ, ಉಪತಹಶೀಲ್ದಾರ ಕಛೇರಿ ಎದುರು ಪರಿಹಾರಕ್ಕಾಗಿ ರೈತರ ಪ್ರತಿಭಟನೆ. ರೈತನ ಕುಟುಂಬಕ್ಕೆ ಪರಿಹಾರಕ್ಕಾಗಿ ರೈತರ ಪ್ರತಿಭಟನೆ ಶಿಗ್ಗಾವಿ : ತಾಲೂಕಿನ ಹೋತನಹಳ್ಳಿ ಗ್ರಾಮದ ರೈತ ಮಲ್ಲೇಶಪ್ಪ ತಳವಾರ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿ 10 ತಿಂಗಳು ಕಳೆದರು ಸರ್ಕಾರದಿಂದ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ. ತಕ್ಷಣ ಮೇಲಾಧಿಕಾರಿಗಳು ಪರಿಶೀಲಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಂಕಾಪುರ ಉಪತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕುಟುಂಬಕ್ಕೆ ಆಸರೆಯಾದ ರೈತ ಸಾಲಕ್ಕೆ ಸಿಲುಕಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ, ಮಕ್ಕಳು ಬದುಕು ಸಾಗಿಸುವುದು ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಈ ವರೆಗೆ ಯಾವುದೇ ವರದಿ ಕಳುಹಿಸಿಲ್ಲ. ಅಧಿಕಾರಿಗಳ ನಿರ್ಲಕ್ಷತೆಯಿಂದ ಬಡ ಕುಟುಂಬಕ್ಕೆ ಪರಿಹಾರ ಮಂಜುರಾತಿ ವಿಳಂಬವಾಗಿದೆ. ಹೀಗಾಗಿ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಉಪತಹಶೀಲ್ದಾರ್ ಕಚೇರಿ ಬೀಗ ಹಾಕಿದ ಹಿನ್ನೆಲೆಯಲ್ಲಿ ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ ಹಾಗೂ ಸಿಬ್ಬಂದಿ ಹೂರಗೆ ಉಳಿಯಬೇಕಾಯಿತು. ಸುತ್ತಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ದಾಖಲಾತಿ ಪಡೆಯಲು ಬಂದು ಮರಳಿ ಹೋಗಬೇಕಾಯಿತು. ಕೆಲವರು ಕಾದು ಬೇಸರಗೊಂಡರು. ಎಸ್.ಐ.ಆರ್ ಮಾಡುವ ನೌಕರರು ಸಹ ಕಾಯ್ದು ಕುಳಿತು ಮರಳಿ ಹೋದರು. ಹೀಗಾಗಿ ಕೆಲಸ ಕಾರ್ಯಗಳಿಗೆ ಅಡೆತಡೆಯಾಯಿತು. ಆದರೂ ರೈತರು ಮೇಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಕೃಷಿ ಅಧಿಕಾರಿ ಶಿವಕುಮಾರ ಶಿಡೇನೂರ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸ್ಪಂದಿಸಿ ತಕ್ಷಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇನೆ. ರೈತನ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತದೆ ಎಂದಾಗಿ ಪ್ರತಿಭಟನೆ ಹಿಂದರು. ರೈತ ಮುಖಂಡರಾದ ಶಶಿಧರ ಹೊಣ್ಣನ್ನವರ , ಶಿವಾನಂದ ತೊಂಡೂರ, ಉಮೇಶ ಗುಳೇದ, ಚಂದ್ರಣ್ಣ ಬೆಳವತ್ತಿ, ಶಂಕ್ರಣ್ಣ ಗಂಗಣ್ಣವರ, ಬಾಪುಗೌಡ ಪಾಟೀಲ, ದೇವಣ್ಣ ಹಳವಳ್ಳಿ, ಶಂಭಣ್ಣ ಕುರಗೋಡಿ, ಬಸವರಾಜ ನಾರಾಯಣಪುರ, ಚಂದ್ರಣ್ಣ ತಳವಾರ, ಮೃತ ರೈತನ ಪತ್ನಿ ಕವಿತಾ ಅವರ ಕುಟುಂಬದ ಸದಸ್ಯರು, ವಿವಿಧ ಗ್ರಾಮಗಳ ರೈತರು ಇದ್ದರು.1
- ಈಗಾಗಲೇ ನೀರಿಗೆ ಹಾಹಾಕಾರ ಶುರುವಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಾವೇರಿ ವಿವಾದದಲ್ಲಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ನಾಡಿನ ಹಿತ ಕಾಯುವುದು ಸಿಎಂ ಡಿ. ಕೆ. ಶಿವಕುಮಾರ್ ಅವರ ಆದ್ಯ ಕರ್ತವ್ಯವಾಗಬೇಕು. ಶ್ರೀ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು #CongressFailsKarnataka #ರೈತವಿರೋಧಿಕಾಂಗ್ರೆಸ್1
- ಭೇತ್ರಿ ಸಮೀಪ ತುಂಬಿ ಹರಿಯುತ್ತಿರುವ ಕಾವೇರಿ ನದಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆ ಮೂರ್ನಾಡು ಬಳಿ ಭೇತ್ರಿಯಲ್ಲಿ ಕಾವೇರಿ ನದಿ ನೀರಿನ ಹರಿವು ಹೆಚ್ಚುತ್ತಲೇ ಇದೆ. ನದಿ ಪಾತ್ರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.1
- ಉಡುಪಿ ಬಿಜೆಪಿ ಶಾಸಕರ ವಿರುದ್ಧ ಕ್ರಮಕ್ಕೆ ಮಂಗಳೂರಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಒತ್ತಾಯ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವ್ರ ಬಗ್ಗೆ ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣರು ಬಳಸಿರುವ ಭಾಷೆ ಮತ್ತು ವೈಯಕ್ತಿಕ ಆರೋಪಗಳು ಖಂಡನೀಯ. ಯಶ್ ಪಾಲ್ ಅವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಬಿಜೆಪಿ `ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಒತ್ತಾಯಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ದೇಶಕಂಡ ಅಪ್ರತಿಮ ಯುವ ನಾಯಕ. ಹಾರ್ವರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಯುವ ವ್ಯಕ್ತಿತ್ವದ ನಾಯಕನ ಘನತೆಗೆ ಧಕ್ಕೆ ತರುವ ಹೇಳಿಕೆ ಸರಿಯಲ್ಲ. ಯಶ್‌ಪಾಲ್ ಹೇಳಿಕೆ ಬೇಜವಾಬ್ದಾರಿಯುತ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ. ಈ ಹೇಳಿಕೆ ವಿರುದ್ಧಮಂಗಳೂರು ನಗರ ಪೊಲೀಸ್ ಆಯಕ್ತರಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗುವುದು ಎಂದರು. ವೈಯಕ್ತಿಕ ನಿಂದನೆ, ಬೆದರಿಕೆ ಮತ್ತು ದ್ವೇಷದ ರಾಜಕಾರಣಕ್ಕೆ ನಾವು ಎಂದಿಗೂ ಮಣಿಯುವುದಿಲ್ಲ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್.ಅಪ್ಪಿ, ಕಾಂಗ್ರೆಸ್ ಮುಖಂಡರಾದ ವೀಣಾ, ಶಶಿಕಲಾ, ಚಂದ್ರಕಲಾ, ವೃಂದಾ ಪೂಜಾರಿ ಇದ್ದರು.1
- ಕುಂದಾಪುರ ಶೂಟೌಟ್ ಪ್ರಕರಣ | ಉಡುಪಿ ಎಸ್ ಪಿ ಹೇಳಿದ್ದೇನು..? ಕುಂದಾಪುರ : ಶೂಟೌಟ್ ಪ್ರಕರಣ ಅರೋಪಿ ಡೆರಿಕ್ ಪತ್ತೆಗೆ ವಿಶೇಷ ತಂಡ ಎಸ್ ಪಿ ಹರಿರಾಮ್ ಶಂಕರ್1