ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಇದೇ ಆಗಸ್ಟ್ 02ರಂದು ಲಿಖಿತ ಪರೀಕ್ಷೆ ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ:* *********** ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಇದೇ ಆಗಸ್ಟ್ 02ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಶನಿವಾರ ಚಿತ್ರದುರ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಚಿನ್ಮೋಲಾದ್ರಿ ಪದವಿಪೂರ್ವ ಕಾಲೇಜು, ನಮ್ಮ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜು, ಎಸ್‍ಜೆಎಂಐಟಿ ಪದವಿಪೂರ್ವ ಕಾಲೇಜು, ಎಂ.ಕೆ.ಹಟ್ಟಿ ಎಸ್‍ಜೆಎಂ ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆಯನ್ನು ಸುವ್ಯವಸ್ಥೆಯಿಂದ ನಡೆಸುವುದಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಆಗಸ್ಟ್ 02ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಚಿತ್ರದುರ್ಗ ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಪ್ರಭಾರಿ ಪಿ.ಯು. ಉಪನಿರ್ದೇಶಕ ಅಶೋಕ್, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಧಿಕಾರಿಗಳು, ವಸ್ತಸಂಹಿತೆ ಅಧಿಕಾರಿಗಳು ಉಪಸ್ಥಿತರಿದ್ದರು
ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಇದೇ ಆಗಸ್ಟ್ 02ರಂದು ಲಿಖಿತ ಪರೀಕ್ಷೆ ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ:* *********** ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಇದೇ ಆಗಸ್ಟ್ 02ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಶನಿವಾರ ಚಿತ್ರದುರ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಚಿನ್ಮೋಲಾದ್ರಿ ಪದವಿಪೂರ್ವ ಕಾಲೇಜು, ನಮ್ಮ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜು, ಎಸ್‍ಜೆಎಂಐಟಿ ಪದವಿಪೂರ್ವ ಕಾಲೇಜು, ಎಂ.ಕೆ.ಹಟ್ಟಿ ಎಸ್‍ಜೆಎಂ ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆಯನ್ನು ಸುವ್ಯವಸ್ಥೆಯಿಂದ ನಡೆಸುವುದಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಆಗಸ್ಟ್ 02ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಚಿತ್ರದುರ್ಗ ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಪ್ರಭಾರಿ ಪಿ.ಯು. ಉಪನಿರ್ದೇಶಕ ಅಶೋಕ್, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಧಿಕಾರಿಗಳು, ವಸ್ತಸಂಹಿತೆ ಅಧಿಕಾರಿಗಳು ಉಪಸ್ಥಿತರಿದ್ದರು
- ಧರ್ಮಸ್ಥಳ ಬುರುಡೇ ಕೇಸ್ ಫಂಡಿಂಗ್ ಆರೋಪದಿಂದ ರಮಾ ನಾಗರಾಜ್ ನಿರ್ದೋಷಿ ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಚಿತ್ರದುರ್ಗದ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಇನ್ನೂ ಧರ್ಮಸ್ಥಳದ ಬುರುಡೆ ಕೇಸ್ ಗೆ ಚಿತ್ರದುರ್ಗದ ರಮಾ ನಾಗರಾಜ್ ಫಂಡಿಂಗ್ ಮಾಡಿದ್ದಾಗಿ ಮಾಸ್ಕ್ ಮ್ಯಾನ್ ಚನ್ನಯ್ಯ ಆರೋಪ ಮಾಡಿದ್ದು ಈ ಆರೋಪ ಸುಳ್ಳು ಎಂದು ಉಚ್ಚ ನ್ಯಾಯಾಲಯದಿಂದ ರಮಾ ನಾಗರಾಜ್ ನಿರ್ದೋಷಿ ಎಂದು ತೀರ್ಪು ನೀಡಿದೆ. ರಮಾ ನಾಗರಾಜ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ, ಜಯಂತಿ, ವಿಠ್ಠಲ ಗೌಡ, ಪ್ರಕಾಶ್ ರೈ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ನೀಡಿದ್ದು ಈ ಕುರಿತು ಚಿತ್ರದುರ್ಗದಲ್ಲಿ ರಮಾ ನಾಗರಾಜ್ ಹಾಗೂ ಗಿರೀಶ್ ಮಟ್ಟಣ್ಣನವರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು ಈ ವೇಳೆ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಅವರು ಮಾತನಾಡಿದ್ದು ಧರ್ಮಸ್ಥಳ ಸಂಘದ ಬಗ್ಗೆ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ವಿನಾಃ ಕಾರಣ ಆರೋಪ ಮಾಡಿದ್ದರು ಎಂದು ರಮಾ ನಾಗರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.1
- ಸಾರ್ವಜನಿಕ ಸ್ಥಳದಲ್ಲಿ ನಿದ್ರೆಗೆ ಜಾರುವ ವ್ಯಕ್ತಿಗಳಿಗೆ ಅತಿ ಹೆಚ್ಚು ದಣಿವು, ನಿದ್ರಾಹೀನತೆ ಅಥವಾ ಆರೋಗ್ಯದ ಸಮಸ್ಯೆ ಮತ್ತು ಮಧ್ಯದ ಪ್ರಭಾವ ಕಾರಣವಿರಬಹುದು. ನಿದ್ರಾದೇವಿ ಆವರಿಸಿದಾಗ ಇವೆಲ್ಲವನ್ನೂ ಮರೆತು ಎಂಥದೆ ಸ್ಥಳದಲ್ಲಿಯೂ ಸಹ ತನ್ನನ್ನು ತಾನು ಮರೆತು ನಿದ್ರೆಗೆ ಜಾರುವ ಕೆಲವು ವ್ಯಕ್ತಿಗಳು ಇದ್ದಾರೆ .. ಹೌದು ಆತ್ಮೀಯ ವೀಕ್ಷಕರೇ ಚಳ್ಳಕೆರೆ ನಗರದ ನೆಹರು ಸರ್ಕಲ್ ಬಳಿಯ ರಸ್ತೆಯ ಪಕ್ಕದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಒಬ್ಬ ವ್ಯಕ್ತಿ ಮೊಬೈಲ್ ಹಾಗೂ ಬ್ಯಾಗನ್ನು ಮರೆತು ನಿದ್ರೆ ಮಾಡುವುದು ಕಂಡು ಬಂತು ಅಲ್ಲಿ ತಕ್ಷಣ ಆ ವ್ಯಕ್ತಿಯನ್ನು ಎಚ್ಚರಿಸಿ ಮಾತನಾಡಿಸಿ ಮೊಬೈಲ್ ಹಾಗೂ ಬ್ಯಾಗ್ ಗಳ ಜೋಪಾನತೆಗೆ ಎಚ್ಚರಿಕೆಯನ್ನು ನೀಡಿಲಾಯ್ತು ಸಾರ್ವಜನಿಕ ಸ್ಥಳದಲ್ಲಿ ನಿದ್ರೆಗೆ ಜಾರುವ ವ್ಯಕ್ತಿಗಳಿಗೆ ಅತಿ ಹೆಚ್ಚು ದಣಿವು, ನಿದ್ರಾಹೀನತೆ ಅಥವಾ ಆರೋಗ್ಯದ ಸಮಸ್ಯೆ ಮತ್ತು ಮಧ್ಯದ ಪ್ರಭಾವ ಕಾರಣವಿರಬಹುದು. ಹೀಗೆ ನಿದ್ದೆ ಮಾಡುವ ವೇಳೆ ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ನಿದ್ದೆ ಮಾಡುವ ವೇಳೆ ತುಂಬಾ ಜಾಗೃತೆ ವಹಿಸಬೇಕು ಮೊಬೈಲ್ ಬ್ಯಾಗ್ ಗಳು ಇತರೆ ವಸ್ತುಗಳನ್ನ ಕಾಣುವ ರೀತಿಯಲ್ಲಿ ಇಟ್ಟುಕೊಂಡು ನಿದ್ರೆ ಮಾಡಿದರೆ ಆ ವಸ್ತುಗಳು ಕಳೆದು ಹೋದರೆ ಯಾರು ಹೊಣೆ ಆಗ್ತಾರೆ ಅಲ್ವೇ ಸ್ನೇಹಿತರೇ..1
- ಪ್ರತಿಯೊಬ್ಬರು ಪಕ್ಷದಲ್ಲಿ ಶಿಸ್ಥು ಸಂಘಟನೆ ಕಾಪಾಡಿಕೊಳ್ಳೋದು ಮುಖ್ಯ - ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್ - ವಿಜಯನಗರ ಜಿಲ್ಲೆ ಕೂಡ್ಲಿಗಿ *ಪ್ರತಿಯೊಬ್ಬರು ಪಕ್ಷದಲ್ಲಿ ಶಿಸ್ಥು ಸಂಘಟನೆ ಕಾಪಾಡಿಕೊಳ್ಳೋದು ಮುಖ್ಯ - ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಕ್ಷ ಭಲವರ್ಧನೆಗೆ ಎಲ್ಲರೂ ಶಿಸ್ಥು , ಹಾಗೂ ಸಂಘಟನಾತ್ಮಕ ಮನೋಭಾವ ಬಳೆಸಿಕೊಳ್ಳಬೇಕೆಂದು. ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರು , ಹಾಗೂ ಮಾಜಿ ಶಾಸಕರಾದ ಶಿರಾಜ್ ಶೇಖ್ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ ಸಂಘಟನೆಗಾಗಿ ಆಯೋಜಿಸಲಾಗಿದ್ದ. ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಜರುಗಿದ ಸಂಘಟನೆ ಸೃಜನ ಅಭಿಯಾನದಲ್ಲಿ , ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು. ಟಿಪಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಹಾ ಸಮಿತಿಯ ಹಿರಿಯರು. ವೀಕ್ಷಕರಾದ ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ಹಾಗೂ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಸಿಎಂ ಡಿಕೆ ಶಿವಕುಮಾರ್ ಅವರು ಮೈಸೂರಿಗೆ ಭೇಟಿ ಆತ್ಮೀಯವಾಗಿ ಸ್ವಾಗತಿಸಿದ ಸಾಂಸ್ಕೃತಿಕ ನಗರಿಯ ಜನರು ಮೈಸೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಮೈಸೂರಿಗೆ ಭೇಟಿ ನೀಡಿದ್ದು, ಸಾಂಸ್ಕೃತಿಕ ನಗರಿಯ ಜನರು ನೀಡಿದ ಆತ್ಮೀಯವಾಗಿ ಸ್ವಾಗತಿಸಿದರು.1
- ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಎರಡನೇ ದಿನದ ರಾತ್ರಿಲ್ಲೂ ಕೂಡ ಅರಿತರು ಜಗ್ಗದೆ ಧರಣಿ ಮುಂದುವರಿಸುತ್ತಿರುವುದು1
- ಬಿದರೆಕೆರೆ-ಬೇಡತ್ತೂರು ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡಲು ಒತ್ತಾಯ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿರುವ ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಯಲ್ಲಿ ಬಿದರೆಕೆರೆ ಬೇಡತ್ತೂರು ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡುವಂತೆ, ಬಿಜೆಪಿ ಒಬಿಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಮಿಡಿಗೇರ್ ಶ್ರೀ ಕೃಷ್ಣಮೂರ್ತಿ ಇವತ್ತಾಯಿಸಿದ್ದಾರೆ2
- ಪೊಲೀಸ್ ಕಾನ್ಸ್‍ಟೇಬಲ್(ಸಿವಿಲ್) ನೇಮಕಾತಿ ಪರೀಕ್ಷೆ* *ಕೆ.ಇ.ಎ. ಮಾರ್ಗಸೂಚಿಗಳ ಪಾಲನೆ ಕಡ್ಡಾಯ* *-ಜಿಲ್ಲಾಧಿಕಾರಿ ಟಿ.ವೆಂಕಟೇಶ್* *ಪೊಲೀಸ್ ಕಾನ್ಸ್‍ಟೇಬಲ್(ಸಿವಿಲ್) ನೇಮಕಾತಿ ಪರೀಕ್ಷೆ* *ಕೆ.ಇ.ಎ. ಮಾರ್ಗಸೂಚಿಗಳ ಪಾಲನೆ ಕಡ್ಡಾಯ* *-ಜಿಲ್ಲಾಧಿಕಾರಿ ಟಿ.ವೆಂಕಟೇಶ್* ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.01: ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 2 ರಂದು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಮೇಲ್ವಿಚಾರಕರು, ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆ.ಇ.ಎ) ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಮಾರ್ಗಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ನಿರ್ಧಿಷ್ಟ ಪಡಿಸಿದ ವಾಹನ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಾಗಿಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕೊಠಡಿ ಮೇಲ್ವಾಚರಕರು ಹಾಗೂ ವಸ್ತ್ರಸಂಹಿತೆ ಅಧಿಕಾರಿಗಳು ಸಭೆ ನಡೆಸಿ, ಪರೀಕ್ಷ ಕೇಂದ್ರಗಳಲ್ಲಿ, ನಿರ್ವಹಿಸಬೇಕಾದ ಕರ್ತವ್ಯಗಳು ಬಗ್ಗೆ ತಿಳಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಹಾಗೂ ಮೊಬೈಲ್ ನೆಟ್‍ವರ್ಕ ಜಾಮರ್‌ಗಳು ಸುಸ್ಥಿತಿಯಲ್ಲಿ ಇದ್ದು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.1
- ತಾಲ್ಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ತಹಶಿಲ್ದಾರ್ ಕಚೇರಿ ಬಳಿ ಪ್ರತಿಭಟನೆ ತಾಲ್ಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಮೀನು ವರ್ಗಾವಣೆ ಮಾಡಿದ್ದು ಇದನ್ನ ಖಂಡಿಸಿ ಕರುನಾಡ ವಿಜಯ ಸೇನೆ ವತಿಯಿಂದ ಚಿತ್ರದುರ್ಗದ ತಹಶಿಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಗೂಳಯ್ಯನಹಟ್ಟಿ ಗ್ರಾಮದ ವಾಸಿಯಾದ ಚಂದ್ರಪ್ಪ ಅವರ ಹೆಸರಿಗೆ ಚಿಕ್ಕಪುರ ಗ್ರಾಮದ ರಿ.ಸ. ನಂ:8/1 ರಲ್ಲಿ 2 ಎಕರೆ 20 ಗುಂಟೆ ಜಮೀನು ಇರುತ್ತದೆ. ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಸರ್ವೆ ಸ್ಟೇಚ್ ನಕ್ಷೆ ಸಂಖ್ಯೆ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಆಗಿರುತ್ತದೆ. ಇದರ ಪ್ರಕಾರ ಕಾನೂನುಬದ್ದವಾಗಿ ಜಯಲಕ್ಷ್ಮಿ ಇವರಿಗೆ 1 ಎಕರೆ 20 ಗುಂಟೆ ಜಮೀನು ಪಹಣಿ ವರ್ಗಾವಣೆಯಾಗಬೇಕಾಗಿದ್ದು, ಆದರೆ ತಾಲ್ಲೂಕು ಕಛೇರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನದಿಂದ ಪೂರಾ 2 ಎಕರೆ 20 ಗುಂಟೆ ಜಮೀನು ಜಯಲಕ್ಷ್ಮೀ ಇವರ ಹೆಸರಿಗೆ ಪಹಣಿ ಮಾಡಲು ಮುಂದಾಗಿರುತ್ತಾರೆ1
- *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ:ನಿತೀಶ್ ಮತ್ತು ತಂಡ ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ *ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ *ಎತ್ತರ ಜಿಗಿತ* ತೃತೀಯ : ಮೇಘನಾ *400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ ನಾಗಭೂಷಣ್, B.P ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.1