Shuru
Apke Nagar Ki App…
ಡಾ ಯೋಗೇಶ್ ಬಾಬು ಗೆ ಶೋಕಾಸ್ ನೋಟೀಸ್ ನೀಡದ ಕರ್ನಾಟಕ ಹೈ ಕಾಮಾಂಡ್ ಡಾ ಯೋಗೇಶ್ ಬಾಬು ಗೆ ಶೋಕಸ್ ನೋಟೀಸ್ ನೀಡಿದ ಹೈ ಕಾಮಾಂಡ್. ಮೊಳಕಾಲ್ಮುರು ಸುದ್ದಿ. ತಾಲ್ಲೂಕಿನ ದೇವಸಮುದ್ರ ಹೋಬಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಗಾಗಿ ಸೃಜನ್ ಸಂಘತನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ವೀಕ್ಷಕರಾಗಿ AICC ವೀಕ್ಷಕರಾಗಿ ರಿಪುನ್ ಬೋರ KICC ವೀಕ್ಷಕರಾಗಿ ವಿ ಎಸ್ ಉಗ್ರಪ್ಪ ಹಾಗೂ DCC ವೀಕ್ಷಕರಾಗಿ ತಾಜ್ ಪೀರ್ ಆಗಮಿಸಿದ್ದರು. ಇಂತಹ ಕಾರ್ಯಕ್ರಮದಲ್ಲಿ ಡಾ ಯೋಗೇಶ್ ಬಾಬು ಅಭಿಮಾನಿಗಳ ಬಳಗ ಹಾಗೂ ಹಾಲಿ ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರ ಅಭಿಮಾನಿಗಳ ಮದ್ಯವಾದ ವಿವಾದಗಳ ನಡೆದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದ ವೀಕ್ಷಕರಿಗೆ ಮುಜುಗರ ಉಂಟಾಯಿತು. ಆದ ಕಾರಣ ಕರ್ನಾಟಕ ಕೆಪಿಸಿಸಿ ಕಮಿಟಿ ಯು ಡಾ ಯೋಗೇಶ್ ಬಾಬು ರವರಿಗೆ ಶೋಕಾಸ್ ನೋಟೀಸ್ ನೀಡಿದೆ. ಒಂದು ವಾರದ ಒಳಗೆ ಕಾರ್ಯಕ್ರಮದಲ್ಲಿ ನಡೆದ ಅಹಿತ ಘಟನೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
Basavaraj
ಡಾ ಯೋಗೇಶ್ ಬಾಬು ಗೆ ಶೋಕಾಸ್ ನೋಟೀಸ್ ನೀಡದ ಕರ್ನಾಟಕ ಹೈ ಕಾಮಾಂಡ್ ಡಾ ಯೋಗೇಶ್ ಬಾಬು ಗೆ ಶೋಕಸ್ ನೋಟೀಸ್ ನೀಡಿದ ಹೈ ಕಾಮಾಂಡ್. ಮೊಳಕಾಲ್ಮುರು ಸುದ್ದಿ. ತಾಲ್ಲೂಕಿನ ದೇವಸಮುದ್ರ ಹೋಬಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಗಾಗಿ ಸೃಜನ್ ಸಂಘತನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ವೀಕ್ಷಕರಾಗಿ AICC ವೀಕ್ಷಕರಾಗಿ ರಿಪುನ್ ಬೋರ KICC ವೀಕ್ಷಕರಾಗಿ ವಿ ಎಸ್ ಉಗ್ರಪ್ಪ ಹಾಗೂ DCC ವೀಕ್ಷಕರಾಗಿ ತಾಜ್ ಪೀರ್ ಆಗಮಿಸಿದ್ದರು. ಇಂತಹ ಕಾರ್ಯಕ್ರಮದಲ್ಲಿ ಡಾ ಯೋಗೇಶ್ ಬಾಬು ಅಭಿಮಾನಿಗಳ ಬಳಗ ಹಾಗೂ ಹಾಲಿ ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರ ಅಭಿಮಾನಿಗಳ ಮದ್ಯವಾದ ವಿವಾದಗಳ ನಡೆದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದ ವೀಕ್ಷಕರಿಗೆ ಮುಜುಗರ ಉಂಟಾಯಿತು. ಆದ ಕಾರಣ ಕರ್ನಾಟಕ ಕೆಪಿಸಿಸಿ ಕಮಿಟಿ ಯು ಡಾ ಯೋಗೇಶ್ ಬಾಬು ರವರಿಗೆ ಶೋಕಾಸ್ ನೋಟೀಸ್ ನೀಡಿದೆ. ಒಂದು ವಾರದ ಒಳಗೆ ಕಾರ್ಯಕ್ರಮದಲ್ಲಿ ನಡೆದ ಅಹಿತ ಘಟನೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
More news from ಕರ್ನಾಟಕ and nearby areas
- ಜಮ್ಮೇನಹಳ್ಳಿ ಗ್ರಾಮದ ಜಮೀನಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಹೆಣ್ಣು ಚಿರತೆಗಳು ಜಮ್ಮೇನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಜೋಡಿ ಹೆಣ್ಣು ಚಿರತೆಗಳು ಮೃತಪಟ್ಟಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಸಿಡಿಗೆರೆ ಹೋಬಳಿಯ ಜಮ್ಮೇನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಒಂದು ವರ್ಷದೊಳಗಿನ ಎರಡು ಹೆಣ್ಣು ಚಿರತೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರೈತರು ಜಮೀನಿಗೆ ತೆರಳಿದ ವೇಳೆ ಎರಡು ಚಿರತೆಗಳು ಚಲನೆಯಿಲ್ಲದೆ ಬಿದ್ದಿರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ವಲಯ ಅರಣ್ಯಾಧಿಕಾರಿ ರಾಮಚಂದ್ರಪ್ಪ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಚಿರತೆಗಳ ಮರಣದ ನಿಖರ ಕಾರಣ ತಿಳಿದುಬಂದಿಲ್ಲ. ವಿಷಪ್ರಾಶನ, ವಿದ್ಯುತ್ ಸ್ಪರ್ಶ ಅಥವಾ ಇತರ ಕಾರಣಗಳಿಂದ ಸಾವು ಸಂಭವಿಸಿರಬಹುದೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಎರಡೂ ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಗತ್ಯ ಮಾದರಿಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.1
- ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಹೆಸರು ಬದಲಾವಣೆ .ರೈತ ಸಮುದಾಯ ಭವನ ಎಂದು ನಾಮಫಲಕ. ಚಳ್ಳಕೆರೆ :ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರೈತ ಸಮುದಾಯ ಭವನವನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತ ಕಚೇರಿಗೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಮಾಹಿತಿ ನೀಡಿದ ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು, ಕೃಷಿ ಮಾರಾಟ ಇಲಾಖೆ ನಿಯಮದಡಿ ಅನುಪಯುಕ್ತವಾಗಿ ಉಳಿದಿದ್ದ ರೈತ ಸಮುದಾಯ ಭವನವನ್ನು ಹರಾಜು ಪ್ರಕ್ರಿಯೆಯಲ್ಲಿ 2026 ರಿಂದ ಅನ್ವಯ ಆಗುವ ರೀತಿಯಲ್ಲಿ ಬಿ. ವೆಂಕಟೇಶ್ ದಳವಾಯಿ ಎಂಬುವರಿಗೆ 55 ತಿಂಗಳ ಅವದಿಗೆ ಲೀಜಿಗೆ ನೀಡಲಾಗಿದೆ. ಇದರ ಬಾಬ್ತು ಮಾನಸಿ 34 ಸಾವಿರ ಕಟ್ಟಬೇಕು. 11 ತಿಂಗಳಿಗೊಮ್ಮೆ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. 33 ತಿಂಗಳಿಗೊಮ್ಮೆ ಮಾಸಿಕ ಬಾಡಿಗೆ ಹಣದಲ್ಲಿ ಶೇ.5 ರಷ್ಟು ಹೆಚ್ಚಳ ಮಾಡುವ ಷರತ್ತುಗಳು ವಿಧಿಸಿ ನೀಡಲಾಗಿದೆ ಎಂದು ತಿಳಿಸಿದರು. ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರೈತ ಭವನವನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿದೆ. ಸಮುದಾಯ ಭವನ ಬದಲಿಗೆ, ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಎಂದು ಹೆಸರು ಬೆರಸಿರುವ ಬಗ್ಗೆ ರಾಜ್ಯ ರೈತ ಸಂಘ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಆರೋಪ ಮಾಡಲಾಗಿತ್ತು. ಈ ಬೆನ್ನಲ್ಲೇ ಬಾಡಿಗೆ ಪಡೆದಿದ್ದ ಬಿ. ವೆಂಕಟೇಶ್ ದಳವಾಯಿ ಅವರಿಗೆ ನೋಟಿಸ್ ಜಾರಿ ಮಾಡಿ, ತಕ್ಷಣವೇ ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಹೆಸರನ್ನು ಬದಲಾಯಿಸಿ, ಮೊದಲಿನಂತೆ ರೈತ ಸಮುದಾಯ ಭವನ ಎಂದು ಬರೆಸಿರುವುದಾಗಿ ದಾಖಲೆ ಸಹಿತ ಉಪ ವಿಭಾಗಾಧಿಕಾರಗಳಿಗೆ ಮಾಹಿತಿ ನೀಡಿದ್ದಾರೆ.1
- ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. ಬೈಟ್: ರಾಜಣ್ಣ2
- ಬಿದರೆಕೆರೆ-ಬೇಡತ್ತೂರು ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡಲು ಒತ್ತಾಯ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿರುವ ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಯಲ್ಲಿ ಬಿದರೆಕೆರೆ ಬೇಡತ್ತೂರು ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡುವಂತೆ, ಬಿಜೆಪಿ ಒಬಿಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಮಿಡಿಗೇರ್ ಶ್ರೀ ಕೃಷ್ಣಮೂರ್ತಿ ಇವತ್ತಾಯಿಸಿದ್ದಾರೆ2
- ಸಚಿವ ಸ್ಥಾನಕ್ಕೆ ₹150 ಕೋಟಿ ಬೇಡಿಕೆ?" | ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹೇಳಿಕೆಯಲ್ಲಿ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ₹150 ಕೋಟಿ ರೂಪಾಯಿಗಳವರೆಗೆ ಹಣ ಬೇಡಿಕೆ ಇಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಸ್ಥಾನಗಳ ಹಂಚಿಕೆ, ಪ್ರಮುಖ ಖಾತೆಗಳ ನೀಡಿಕೆ ಹಾಗೂ ಅಭಿವೃದ್ಧಿ ಅನುದಾನದ ಕೊರತೆ ಕುರಿತು ಸರ್ಕಾರ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ರಾಜ್ಯದ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. #DKShivakumar #DoddanagoudaPatil #KarnatakaPolitics #Congress #BJP #MinisterPost #PoliticalNews #BreakingNews #KarnatakaNews #ASNNews24Kannada #KannadaNews #LatestNews #ViralNews #karnataka1
- ತುಮಕೂರು-ಶ್ರೀ ನೀಲಕಂಠೇರಶ್ವ ಸ್ವಾಮಿ ಪತ್ತಿನ ಸಹಕಾರ ಸಂಘದ 25ನೇ ರಜತ ಮಹೋತ್ಸವ #onlinetv24x7 #ಸೌಹಾರ್ದಸಂಘಗಳು #tumkur1
- ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ_ವಿಜಯನಗರ ಜಿಲ್ಲೆ ಕೂಡ್ಲಿಗಿ *ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜುಲೈ 31ರಂದು , ಉಪ ಆರೋಗ್ಯಕೇಂದ್ರದಲ್ಲಿ ಡಿ ದರ್ಜೆ ನೌಕರರಾದ RNK ನಿಜಲಿಂಗಪ್ಪರವರಿಗೆ. ವಯೋ ನಿವೃತ್ತಿ ಹೊಂದಿದ RNK ನಿಜಲಿಂಗಪ್ಪರವರನ್ನು , ಆರೋಗ್ಯ ಸಿಬ್ಬಂದಿ ಹಾಗೂ ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಅವರನ್ನು ಸನ್ಮಾನಿಸಿ ಗೌರವ ಪೂರ್ವಕವಾಗಿ ಬಿಳ್ಕೊಟ್ಟರು. ಮೂಲತಃ ಕೊಟ್ಟೂರು ರಾಂಪುರ ಗ್ರಾಮದವರಾದ , ನಿಜಲಿಂಗಪ್ಪರವರು. ಕಳೆದ ಮೂರು ದಶಕಗಳ ಹಿಂದೆಯೇ , ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ. ಮಾಸಿಕ ಭತ್ಯೆ ಹೊರಗುತ್ತಿಗೆ ಆಧಾರದಂತೆ , ಹತ್ತು ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಕರ್ಥವ್ಯೆ ನಿರ್ವಹಿಸಿದ್ದರು. ತದನಂತರ ಆರೊಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ , ಹೊರಗುತ್ತಿಗೆ ಡಿ ದರ್ಜೆ ನೌಕರಾಗಿ ಕರ್ಥವ್ಯ ನಿರ್ವಹಿಸಿದರು. ನಂತರ ವಷ್ಠೆ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ , ಖಾಯಂ ನೌಕರರಾಗಿ ಗುರುತಿಸಿಕೊಂಡು ಮೂರುವರೆ ದಶಕಗಳ ಕಾಲ ಡಿ ದರ್ಜೆ ನೌಕರರಾರಿ ಕರ್ಥವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ. ನಿಜಲಿಂಪ್ಪರವರು ಚಿಕ್ಕಜೋಗಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ , 1998 ರಿಂದ ಸೇವೆ ಆರಂಭಿಸಿ ಜುಲೈ 31 2026 ರವರೆಗೆ. ಅಂದರೆ ಸತತ 34 ವರ್ಷಗಳ ಕಾಲ , ಚಿಕ್ಕಜೋಗಿಹಳ್ಳಿ ಉಪ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಪಿಸಿದ್ದಾರೆ. 31 7 2026ರಂದು , ಅವರು ವಯೋ ನಿವೃತ್ತಿ ಹೊಂದಿರುತ್ತಾರೆ. ಅವರ ಸಾರ್ಥಕ ಸೇವೆ ಹಾಗೂ ಸನ್ನಡತೆ ಮೆಚ್ಚಿದ , ಆರೋಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು. ಮತ್ತು ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ , ವಿವಿದ ಸಂಘಟನೆಗಳ ಪದಾಧಿಕಾರಿಗಳು. ನಿಜಲಿಂಗಪ್ಪರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ , ಅಭಿಮಾನದಿಂದ ಹಾರೈಸಿ ಸರಳ ಬೀಳ್ಕೊಡುಗೆ ಸಮಾರಂಭದ ಮೂಲಕ ಬೀಳ್ಕೊಟ್ಟಿದ್ದಾರೆ. ಡಾ ॥ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮಹಮದ್ ಸಾಧಿಕ್ ರವರು ಮಾತನಾಡಿ , ನಿಜಲಿಂಗಪ್ಪರವರು ಸಜ್ಜನ ಪ್ರಾಮಾಣಿಕ ನೌಕರರಾಗಿದ್ದರು. ಅವರು ಕಿಂಚಿತ್ತು ಯಾವುದೇ ದೋಷರೋಪಗಳಿಲ್ಲದೆ , ನಿಷ್ಕಳಂಕದಿಂದ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು. ನಿಜಲಿಂಗಪ್ಪರವರ ಸಾರ್ಥಕ ಸೇವೆಗಾಗಿ , ಅವರನ್ನು ಅವರ ಮಡದಿಯೊಡಗೂಡಿ ತಾವು ಗೌರವಿಸಿ ಸನ್ಮಾನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅವರಿಗೆ ಮುಂದಿನ ಆರೋಗ್ಯ ಆಯಸ್ಸು ಸುಖಮಯವಾಗಿರಲೆಂದು , ತಾವು ದೇವರಲ್ಲಿ ಕೋರುವುದಾಗಿ ಅವರು ತಿಳಿಸಿದ್ದಾರೆ. ವಿಷ್ಣು ಸೇನಾ ಸಮಿತಿ ಮುಖಂಡರಾದ ಜನನಾಯಕ ಕುರಿಹಟ್ಟಿ ಓಬಣ್ಣ , ಮಲಿಯಪ್ಪ , ರಾಜು ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು. ಮತ್ತು ಆರೊಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದು. ನಿಜಲಿಂಗಪ್ಪರವರಿಗೆ ನಿವೃತ್ತಿ ಜೀವನ , ಸುಖಮಯವಾಗಿರಲೆಂದು ಶುಭ ಹಾರೈಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*3
- ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". "ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". ಚಳ್ಳಕೆರೆ:-ನಗರದ ಹೊರವಲಯದ ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಯ ಮುತ್ಯಾಗಾರ ದೇವರ ಎತ್ತುಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಗೋಪೂಜೆ, ಬಾಳೆಹಣ್ಣು,ರಾಗಿಹುಲ್ಲು ವಿತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರ ಎತ್ತುಗಳ ಸಂರಕ್ಷಕರಾದ ಪೂಜಾರಿ ಓಬಯ್ಯ, ಪಾಲಯ್ಯ, ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ.ವಿದ್ಯಾ, ಖಜಾಂಚಿ ಕವಿತಾ ನಾಗೇಶ್,ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಮೀರಾ ರಮೇಶ್,ಸುಮಾ, ನಾಗಶ್ರೀ,ಹೀನಾ ಸೇರಿದಂತೆ ದೇವರ ಎತ್ತುಗಳ ಕಿಲಾರಿಗಳು ಮತ್ತು ಆರಾಧಕರು ಉಪಸ್ಥಿತರಿದ್ದರು.1
- ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಗಳು ಹಿರಿಯೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.1