Shuru
Apke Nagar Ki App…
Sharanugouda Patil
- Sharanugouda Patilಮುದ್ದೇಬಿಹಾಳ, ವಿಜಯಪುರ, ಕರ್ನಾಟಕಮುದ್ದೇಬಿಹಾಳ.. ಪಟ್ಟಣದಲ್ಲಿ ಚಿನ್ನರ ಬಣ್ಣ ಕಾರ್ಯಕ್ರಮ ಅಯೂಜಿಸಲಾಗಿ6 hrs ago
More news from ಕರ್ನಾಟಕ and nearby areas
- ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಅರಳಿಕಟ್ಟಿಯ ಹತ್ತಿರದ ಬಸವಣ್ಣನ ದೇವಸ್ಥಾನದಲ್ಲಿ ಗುಡಿ ಮ್ಯಾಳದವರು ಪ್ರತಿಷ್ಠಾಪನೆ ಮಾಡಿರುವ ಸಂಪ್ರದಾಯಿಕ ರತಿ ಮನ್ಮಥ ಮೂರ್ತಿ ನೋಡುಗರನ್ನು ಸೆಳೆಯಿತು.1
- ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಭರ್ಜರಿ ಕಲರ್‌ಫುಲ್ ಹೋಳಿ ಸಂಭ್ರಮ ಜೋರಾಗಿ ನಡೆಯಿತು. ಎಸ್.ಆರ್.ಎ ಮೈದಾನದಲ್ಲಿ ಆಯೋಜಿಸಿದ್ದ ರಂಗಿನ ಹೋಳಿ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ಬಣ್ಣದಾಟದಲ್ಲಿ ಮಿಂದೇಳಿದರು. ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಡಿಜೆ ಆಪರೇಟರ್‌ಗಳಾದ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಡಿಜೆ ಸದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಹೋಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ನೇತೃತ್ವದಲ್ಲಿ ಈ ಹೋಳಿ ಉತ್ಸವವನ್ನು ಆಯೋಜಿಸಲಾಗಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.1
- ವಿಜಯಪುರ: ಚಂದ್ರ ಗ್ರಹಣ ವಿಶೇಷ ಪೂಜೆ ಸಲ್ಲಿಕೆ ಸುರೇಶ್ ಜತ್ತಿ ವಿಜಯಪುರದಲ್ಲಿ ಮಂಗಳವಾರದಂದು ಸುರೇಶ್ ಜತ್ತಿ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಂತೆ, ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ವಿಜಯಪುರದ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪುರೋಹಿತರಿಂದ ವಿಧಿ ವಿಧಾನಗಳ ಮಾಹಿತಿ ಪಡೆದು, ನಂತರ ಮನೆಯಲ್ಲಿ ಆಚರಣೆ ಮಾಡಿದ್ದಾರೆ. ಗರ್ಭಿಣಿ ಮಹಿಳೆಯರು ಪಾಲಿಸಬೇಕಾದ ನಿಯಮಗಳು, ಪೂಜೆ ಹಾಗೂ ಆಹಾರ ಸೇವನೆಯ ಕುರಿತು ಮಾಹಿತಿ ಪಡೆದು ಪಾಲನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.1
- ಹೋಳಿ ಹಬ್ಬ ಹಿಂದುಗಳ ಪ್ರಮುಖ ಭಾರತೀಯ ಹಬ್ಬವಾಗಿದ್ದು, ಇದನ್ನು ಬಣ್ಣಗಳ ಹಬ್ಬ, ಪ್ರೀತಿ ಮತ್ತು ವಸಂತ ಎಂದು ಆಚರಿಸಲಾಗುತ್ತದೆ. ಇದು ರಾಧಾ ಮತ್ತು ಕೃಷ್ಣ ದೇವತೆಗಳ ಶಾಶ್ವತ ಮತ್ತು ದೈವಿಕ ಪ್ರೀತಿಯನ್ನು ಆಚರಿಸುತ್ತದೆ.1
- Post by Nava karnataka News channel1
- Post by @april14news1
- ಹೊಸ ಮುರನಾಳ: ಹೊಳಿ ಹುಣ್ಣಿಮೆಯ ಪ್ರಯುಕ್ತ ಗ್ರಾಮದಲ್ಲಿ ಸಂಪ್ರದಾಯಬದ್ಧವಾಗಿ ಕಾಮದೇವನಿಗೆ ಪೂಜೆ ಸಲ್ಲಿಸಿ ಬಳಿಕ ಕಾಮದಹನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಸಂಜೆ ವೇಳೆ ಗ್ರಾಮಸ್ಥರು ಸೇರಿಕೊಂಡು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಕಟ್ಟಿದ ಚಿತೆಯಲ್ಲಿ ಕಾಮದೇವನ ಪ್ರತಿಕೃತಿಗೆ ಅಗ್ನಿ ಹಚ್ಚಿ ‘ಕಾಮದಹನ’ ಆಚರಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮದ ಹಿರಿಯರು ಹಬ್ಬದ ಮಹತ್ವವನ್ನು ವಿವರಿಸಿ, ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಸತ್ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳುವ ಸಂದೇಶ ನೀಡಿದರು. ಹಬ್ಬದ ಅಂಗವಾಗಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸೌಹಾರ್ದತೆಯ ವಾತಾವರಣ ನಿರ್ಮಾಣವಾಯಿತು. ಹೋಳಿ ಹುಣ್ಣಿಮೆ ಹಬ್ಬವು ದುಷ್ಟದ ಮೇಲೆ ಶಿಷ್ಟದ ಜಯವನ್ನು ಸಾರುವ ಪವಿತ್ರ ದಿನವೆಂದು ಗ್ರಾಮಸ್ಥರು ತಿಳಿಸಿದರು.1
- ವಿಜಯಪುರ: ಶಾಸಕ ಯತ್ನಾಳ್ ವಿರುದ್ಧ ಭ್ರಷ್ಟಾಚಾರ ಆರೋಪಿಸಿದ ಗಿರೀಶ್ ವಿಜಯಪುರದಲ್ಲಿ ಮಂಗಳವಾರದಂದು ಕಾಂಗ್ರೆಸ್ ಮುಖಂಡ ಗಿರೀಶ್ ಇಟ್ಟಂಗಿಹಾಳ ಅವರು, ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ್ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರವರು ನಗರದ ಮುಖ್ಯ ರಸ್ತೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಉದ್ಘಾಟನೆಯಾಗಿದ್ದ ಕೋರ್ಟ್ ಸರ್ಕಲ್‌ನಿಂದ ಬಿಡಿ ಕಚೇರಿಯವರೆಗಿನ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಇದರಲ್ಲಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.1
- ಕೆಂಬಾವಿ : ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿ ಸಮೀಪದ ಗುತ್ತಿಬಸವಣ್ಣ ಕ್ರಾಸ್ ಹತ್ತಿರ ನಡೆದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸನಗೌಡ (30) ಎಂದು ಗುರುತಿಸಲಾಗಿದೆ. ಕೊಲೆಯಾದ ಯುವಕ ಹಾಗೂ ಕೃತ್ಯವೆಸಗಿದ ಆರೋಪಿ ಇವರಿಬ್ಬರೂ ಟಿಪ್ಪರ್ ಡ್ರೈವರ್‌ಗಳಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮೊದಲೇ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಕುಡಿತದ ಮತ್ತಿನಲ್ಲಿದ್ದಾಗ ಇದೇ ವಿಚಾರವಾಗಿ ಗೆಳೆಯರಿಬ್ಬರ ಮಧ್ಯೆ ತೀವ್ರ ಗಲಾಟೆ ನಡೆದಿದ್ದು ಅದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪೃತ್ವಿಕ್ ಶಂಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ಆರೋಪಿಯನ್ನು (ಮಾಹಿತಿಯ ಪ್ರಕಾರ ಆರೋಪಿಯ ಹೆಸರೂ ಬಸನಗೌಡ) ಪೊಲೀಸರು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಕುರಿತು ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1