logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುಂಗಭದ್ರಾ ನೀರು ಕಡಿತದ ಆತಂಕ! 🚨 ರೈತರು ಕಂಗಾಲು — ನವೆಂಬರ್ 22ರವರೆಗೆ ನೀರು ಸಿಗುತ್ತಾ? ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ (LLC) ಕಾಲುವೆಗೆ ನೀರು ಕಡಿತಗೊಳಿಸಲಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆಮಾಡಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ರೈತರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತುಂಗಭದ್ರಾ ರೈತ ಸಂಘದ ಪುರುಷೋತ್ತಮ ಗೌಡ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕರ್ನಾಟಕದ ರೈತರಿಗೆ ನವೆಂಬರ್ 22ರವರೆಗೆ ಯಾವುದೇ ವ್ಯತ್ಯಯವಿಲ್ಲದೆ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. #TungabhadraDam #Tungabhadra #TungabhadraWater #Farmers #KarnatakaFarmers #AndhraPradesh #LLCCanal #Irrigation #WaterCrisis #FarmersIssue #KarnatakaNews #Vijayanagara #Hoovinahadagali #Raitharu #BreakingNews #KannadaNews #ಕರ್ನಾಟಕ #ರೈತರು #ತುಂಗಭದ್ರಾ #ನೀರಿನಬಿಕ್ಕಟ್ಟು

15 hrs ago
user_AsnNews24Kannada
AsnNews24Kannada
Local News Reporter Ballari, Karnataka•
15 hrs ago

ತುಂಗಭದ್ರಾ ನೀರು ಕಡಿತದ ಆತಂಕ! 🚨 ರೈತರು ಕಂಗಾಲು — ನವೆಂಬರ್ 22ರವರೆಗೆ ನೀರು ಸಿಗುತ್ತಾ? ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ (LLC) ಕಾಲುವೆಗೆ ನೀರು ಕಡಿತಗೊಳಿಸಲಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆಮಾಡಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ರೈತರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತುಂಗಭದ್ರಾ ರೈತ ಸಂಘದ ಪುರುಷೋತ್ತಮ ಗೌಡ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕರ್ನಾಟಕದ ರೈತರಿಗೆ ನವೆಂಬರ್ 22ರವರೆಗೆ ಯಾವುದೇ ವ್ಯತ್ಯಯವಿಲ್ಲದೆ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. #TungabhadraDam #Tungabhadra #TungabhadraWater #Farmers #KarnatakaFarmers #AndhraPradesh #LLCCanal #Irrigation #WaterCrisis #FarmersIssue #KarnatakaNews #Vijayanagara #Hoovinahadagali #Raitharu #BreakingNews #KannadaNews #ಕರ್ನಾಟಕ #ರೈತರು #ತುಂಗಭದ್ರಾ #ನೀರಿನಬಿಕ್ಕಟ್ಟು

More news from Karnataka and nearby areas
  • ನಾವೇನು ಪಾಕಿಸ್ತಾನವರಾ?” — ಬಿ. ನಾಗೇಂದ್ರ ವಿರುದ್ಧ ಮಾಜಿ ಸಂಸದ ಎಂ.ಪಿ.ಪಕೀರಪ್ಪ ತೀವ್ರ ವಾಗ್ದಾಳಿ ಮಾಜಿ ಸಂಸದರಾದ ಎಂ.ಪಿ.ಪಕೀರಪ್ಪ ಅವರು ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕೀರಪ್ಪ, “ನಮ್ಮ ಕಮ್ಯುನಿಟಿ ಅಂತ ನಾವು ಮರ್ಯಾದೆ ಕೊಟ್ಟರೆ... ನಾವೇನು ಪಾಕಿಸ್ತಾನವರಾ?” ಎಂದು ಪ್ರಶ್ನಿಸಿ, ಬಳ್ಳಾರಿ ವಿಚಾರವಾಗಿ ನಾಗೇಂದ್ರ ಅವರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. #MPFakeerappa #BNagendra #Ballari #BallariNews #KarnatakaPolitics #KarnatakaNews #PoliticalNews #BreakingNews #KannadaNews #KannadaNewsToday #BallariPolitics #Congress #ViralNews #TrendingNews #IndiaNews
    1
    ನಾವೇನು ಪಾಕಿಸ್ತಾನವರಾ?” — ಬಿ. ನಾಗೇಂದ್ರ ವಿರುದ್ಧ ಮಾಜಿ ಸಂಸದ ಎಂ.ಪಿ.ಪಕೀರಪ್ಪ ತೀವ್ರ ವಾಗ್ದಾಳಿ
ಮಾಜಿ ಸಂಸದರಾದ ಎಂ.ಪಿ.ಪಕೀರಪ್ಪ ಅವರು ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕೀರಪ್ಪ, “ನಮ್ಮ ಕಮ್ಯುನಿಟಿ ಅಂತ ನಾವು ಮರ್ಯಾದೆ ಕೊಟ್ಟರೆ... ನಾವೇನು ಪಾಕಿಸ್ತಾನವರಾ?” ಎಂದು ಪ್ರಶ್ನಿಸಿ, ಬಳ್ಳಾರಿ ವಿಚಾರವಾಗಿ ನಾಗೇಂದ್ರ ಅವರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
#MPFakeerappa #BNagendra #Ballari #BallariNews #KarnatakaPolitics #KarnatakaNews #PoliticalNews #BreakingNews #KannadaNews #KannadaNewsToday #BallariPolitics #Congress #ViralNews #TrendingNews #IndiaNews
    user_AsnNews24Kannada
    AsnNews24Kannada
    Local News Reporter Ballari, Karnataka•
    7 hrs ago
  • ನಾಗೇಂದ್ರ ಇನ್ನು ಸ್ವಲ್ಪ ದಿನಗಳಲ್ಲಿ ಮೈಮೇಲಿನ ಬಟ್ಟೆ ಹರಿದುಕೊಂಡು ತಿರುಗುವ ಪರಿಸ್ಥಿತಿ ಬಂದ್ರು ಬರಬಹುದು - ಮಾಜಿ ಸಂಸದ ಸಣ್ಣ ಪಕ್ಕೀರಪ್ಪ
    1
    ನಾಗೇಂದ್ರ ಇನ್ನು ಸ್ವಲ್ಪ ದಿನಗಳಲ್ಲಿ ಮೈಮೇಲಿನ ಬಟ್ಟೆ ಹರಿದುಕೊಂಡು ತಿರುಗುವ ಪರಿಸ್ಥಿತಿ ಬಂದ್ರು ಬರಬಹುದು - ಮಾಜಿ ಸಂಸದ ಸಣ್ಣ ಪಕ್ಕೀರಪ್ಪ
    user_YSRmedia vijayanagaraupsates
    YSRmedia vijayanagaraupsates
    Mobile Phone Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    9 hrs ago
  • ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಡಿಸುತ್ತೇನೆ ಆದರೆ ಬರ ಘೋಷಣೆ ಮಾಡಿಸಿ ಪ್ರಭಾಕರ್ ಮ್ಯಾಸನಾಯಕ ಮೊಳಕಾಲ್ಮುರು ತಾಲ್ಲೂಕು ಸತತ ಬರದಿಂದ ತತ್ತರಿಸಿ ಹೋಗಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಮೊಳಕಾಲ್ಮುರು ತಾಲ್ಲೂಕನ್ನು ಕೈಬಿಟ್ಟಿರುವುದು ಯಾವ ನ್ಯಾಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಆದಕಾರಣ ನೋವಿನಿಂದ ನಾನು ಹೇಳಿದ್ದೇನೆ ವಿನಾಹ ನಿಮ್ಮನ್ನು ನೋವಿಯಿಸುವ ಮನಸು ನನಗಿಲ್ಲ, ಇದರಿಂದ ನಿಮಗೆ ನೋವಾಗಿದ್ದರೆ ವಿಷಾಡಿಸುತ್ತೇನೆ ಎಂದು ಪ್ರಭಾಕರ್ ಮ್ಯಾಸನಾಯಕ ರವರು ಪತ್ರಿಕಾ ಘೋಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ನೋ ವಿನ ಭಾವನೆಯಲ್ಲಿ ನನ್ನ ಬಾಯಿಂದ ಕೆಲವು ಪದಗಳು ಬಂದಿವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ. ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಮುಖವಾಗಿರುತ್ತದೆ. NDRF ಮತ್ತು SDRF ಮಾನದಂಡ ಹಾಗೂ ವರದಿಗಳ ಆಧಾರದ ಮೇಲೆ ಸರ್ಕಾರದ ಮೊದಲ ಪಟ್ಟಿಯಲ್ಲಿ ನಮ್ಮ ತಾಲ್ಲೂಕು ಘೋಷಣೆಯಾಗಿಲ್ಲ. ಆದ್ದರಿಂದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಸಮರ್ಪಕ ವರದಿ ಸಲ್ಲಿಸಿ ಬರ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಲವರು ನನ್ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಈ ಮಣ್ಣಿಗೆ ಸೇರಿದ ಮಣ್ಣಿನ ಮಗ ನಾನು, ನನಗೆ ಇಲ್ಲಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿರುವಾಗ ಶಾಸಕರು ಬೆಂಗಳೂರಿನಲ್ಲಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊಳಕಾಲ್ಮುರುವನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಭಾಕರ್ ಮ್ಯಾಸನಾಯಕ ಸವಾಲ್ ಹಾಕಿದರು. ಪತ್ರಿಕಾ ಘೋಷ್ಟಿ ನಡೆಸುವ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಕಿರಣ್ ಗಾಯಕ್ ವಾಡ್ , ತಿಪ್ಪೇಸ್ವಾಮಿ ಮಾಜಿ ಪಪ ಉಪ ಅಧ್ಯಕ್ಷರು, ಸಿದ್ದಣ್ಣ, ಭೀಮಣ್ಣ, ಹರೀಶ್ ಕಡೆ ತೋಟ, ಪ್ರಭು ನೇರಳಹಳ್ಳಿ ಭೀಮಣ್ಣ ರಮೇಶ್ ಭಾಗವಹಿಸಿದ್ದರು.
    2
    ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಡಿಸುತ್ತೇನೆ ಆದರೆ ಬರ ಘೋಷಣೆ ಮಾಡಿಸಿ ಪ್ರಭಾಕರ್ ಮ್ಯಾಸನಾಯಕ 
ಮೊಳಕಾಲ್ಮುರು ತಾಲ್ಲೂಕು ಸತತ ಬರದಿಂದ ತತ್ತರಿಸಿ ಹೋಗಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಮೊಳಕಾಲ್ಮುರು ತಾಲ್ಲೂಕನ್ನು ಕೈಬಿಟ್ಟಿರುವುದು ಯಾವ ನ್ಯಾಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಆದಕಾರಣ ನೋವಿನಿಂದ ನಾನು ಹೇಳಿದ್ದೇನೆ ವಿನಾಹ ನಿಮ್ಮನ್ನು ನೋವಿಯಿಸುವ ಮನಸು ನನಗಿಲ್ಲ, ಇದರಿಂದ ನಿಮಗೆ ನೋವಾಗಿದ್ದರೆ ವಿಷಾಡಿಸುತ್ತೇನೆ ಎಂದು  ಪ್ರಭಾಕರ್ ಮ್ಯಾಸನಾಯಕ ರವರು ಪತ್ರಿಕಾ ಘೋಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಈ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ನೋ ವಿನ ಭಾವನೆಯಲ್ಲಿ ನನ್ನ ಬಾಯಿಂದ ಕೆಲವು ಪದಗಳು ಬಂದಿವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ.
ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಮುಖವಾಗಿರುತ್ತದೆ. NDRF ಮತ್ತು SDRF ಮಾನದಂಡ ಹಾಗೂ ವರದಿಗಳ ಆಧಾರದ ಮೇಲೆ ಸರ್ಕಾರದ ಮೊದಲ ಪಟ್ಟಿಯಲ್ಲಿ ನಮ್ಮ ತಾಲ್ಲೂಕು ಘೋಷಣೆಯಾಗಿಲ್ಲ. ಆದ್ದರಿಂದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಸಮರ್ಪಕ ವರದಿ ಸಲ್ಲಿಸಿ ಬರ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಲವರು ನನ್ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಈ ಮಣ್ಣಿಗೆ ಸೇರಿದ ಮಣ್ಣಿನ ಮಗ ನಾನು, ನನಗೆ ಇಲ್ಲಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿರುವಾಗ ಶಾಸಕರು ಬೆಂಗಳೂರಿನಲ್ಲಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊಳಕಾಲ್ಮುರುವನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಭಾಕರ್ ಮ್ಯಾಸನಾಯಕ ಸವಾಲ್ ಹಾಕಿದರು.
ಪತ್ರಿಕಾ ಘೋಷ್ಟಿ ನಡೆಸುವ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಕಿರಣ್ ಗಾಯಕ್ ವಾಡ್ , ತಿಪ್ಪೇಸ್ವಾಮಿ ಮಾಜಿ ಪಪ ಉಪ ಅಧ್ಯಕ್ಷರು, ಸಿದ್ದಣ್ಣ, ಭೀಮಣ್ಣ, ಹರೀಶ್ ಕಡೆ ತೋಟ, ಪ್ರಭು ನೇರಳಹಳ್ಳಿ ಭೀಮಣ್ಣ ರಮೇಶ್ ಭಾಗವಹಿಸಿದ್ದರು.
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    10 hrs ago
  • ಜನಾರ್ದನ ರೆಡ್ಡಿ ಇತಿಹಾಸ ನನಗೆ 2002ರಿಂದ ಗೊತ್ತು– ಸಂಸದ ಈ. ತುಕಾರಾಂ ಕೂಡ್ಲಿಗಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮೊದಲು ಏನಾಗಿದ್ದರು, ನಂತರ ಏನಾದರು, ಯಾವ ಕಂಪೌಂಡ್‌ಗೆ ಬಂದು ಏನು ಕೇಳಿದ್ದರು, ಆಗ ನಾನು ಅವರಿಗೆ ಯಾವ ರೀತಿಯ ಸಹಾಯ ಮಾಡಿದ್ದೆ ಎಂಬುದು ನನಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಹೇಳಿದರು. ಕೂಡ್ಲಿಗಿ ಪಟ್ಟಣದಲ್ಲಿ ಸೆ.5ರಂದು ನಡೆಯಲಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2002ರಿಂದಲೂ ಜನಾರ್ದನ ರೆಡ್ಡಿ ಅವರ ಇತಿಹಾಸ ನನಗೆ ಗೊತ್ತು. ನಾನು ಅಕೌಂಟೆಂಟ್ ಆಗಿದ್ದಾಗಿನಿಂದ ಅವರನ್ನು ನೋಡುತ್ತಿದ್ದೇನೆ” ಎಂದರು. ಜನಾರ್ದನ ರೆಡ್ಡಿ ಅವರು ಯಾವ ಮೈನಿಂಗ್ ವಿಚಾರದಲ್ಲಿ ಏನು ಮಾಡಿದ್ದಾರೆ ಎಂಬುದೂ ನನಗೆ ತಿಳಿದಿದೆ. ಅವರ ರಾಜಕೀಯ ಜೀವನದ ಹಿಂದಿನ ವಿಚಾರಗಳ ಬಗ್ಗೆ ಮಾತನಾಡುವಷ್ಟು ಮಾಹಿತಿ ನನ್ನಲ್ಲಿದೆ. ಆದರೆ ನಾವು ಜನರಿಗೆ ಲೆಕ್ಕ ನೀಡಬೇಕೇ ಹೊರತು, ಜನಾರ್ದನ ರೆಡ್ಡಿ ಹೇಳಿದ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತಾ ಕೂರುವ ಅಗತ್ಯವಿಲ್ಲ ಎಂದು ತುಕಾರಾಂ ತಿರುಗೇಟು ನೀಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯವಾಗಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಮುಂದೆ ನಮ್ಮ ಕೆಲಸದ ಲೆಕ್ಕ ನೀಡುವುದು ಮುಖ್ಯ ಎಂದು ಅವರು ಹೇಳಿದರು.
    1
    ಜನಾರ್ದನ ರೆಡ್ಡಿ ಇತಿಹಾಸ ನನಗೆ 2002ರಿಂದ ಗೊತ್ತು– ಸಂಸದ ಈ. ತುಕಾರಾಂ

ಕೂಡ್ಲಿಗಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮೊದಲು ಏನಾಗಿದ್ದರು, ನಂತರ ಏನಾದರು, ಯಾವ ಕಂಪೌಂಡ್‌ಗೆ ಬಂದು ಏನು ಕೇಳಿದ್ದರು, ಆಗ ನಾನು ಅವರಿಗೆ ಯಾವ ರೀತಿಯ ಸಹಾಯ ಮಾಡಿದ್ದೆ ಎಂಬುದು ನನಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಹೇಳಿದರು.
ಕೂಡ್ಲಿಗಿ ಪಟ್ಟಣದಲ್ಲಿ ಸೆ.5ರಂದು ನಡೆಯಲಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2002ರಿಂದಲೂ ಜನಾರ್ದನ ರೆಡ್ಡಿ ಅವರ ಇತಿಹಾಸ ನನಗೆ ಗೊತ್ತು. ನಾನು ಅಕೌಂಟೆಂಟ್ ಆಗಿದ್ದಾಗಿನಿಂದ ಅವರನ್ನು ನೋಡುತ್ತಿದ್ದೇನೆ” ಎಂದರು.
ಜನಾರ್ದನ ರೆಡ್ಡಿ ಅವರು ಯಾವ ಮೈನಿಂಗ್ ವಿಚಾರದಲ್ಲಿ ಏನು ಮಾಡಿದ್ದಾರೆ ಎಂಬುದೂ ನನಗೆ ತಿಳಿದಿದೆ. ಅವರ ರಾಜಕೀಯ ಜೀವನದ ಹಿಂದಿನ ವಿಚಾರಗಳ ಬಗ್ಗೆ ಮಾತನಾಡುವಷ್ಟು ಮಾಹಿತಿ ನನ್ನಲ್ಲಿದೆ. ಆದರೆ ನಾವು ಜನರಿಗೆ ಲೆಕ್ಕ ನೀಡಬೇಕೇ ಹೊರತು, ಜನಾರ್ದನ ರೆಡ್ಡಿ ಹೇಳಿದ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತಾ ಕೂರುವ ಅಗತ್ಯವಿಲ್ಲ ಎಂದು ತುಕಾರಾಂ ತಿರುಗೇಟು ನೀಡಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯವಾಗಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಮುಂದೆ ನಮ್ಮ ಕೆಲಸದ ಲೆಕ್ಕ ನೀಡುವುದು ಮುಖ್ಯ ಎಂದು ಅವರು ಹೇಳಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    6 hrs ago
  • *ಕೂಡ್ಲಿಗಿ : " ಜನ ಸೇವಾ ಆಂದೋಲನ " ಯಶಸ್ವಿಗೊಳಿಸಿ - ಸಚಿವ ಬಸಂತಪ್ಪ ಕರೆ*_ ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಖ್ಯಮಂತ್ರಿಗಳ ವಿನೂತನ ಕನಸಿನ ಜನಪರ ಕಾರ್ಯಕ್ರಮ , ಜನಸೇವ‍ಾ ಆಂದೋಲನಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳು ಸೆ 5ರಂದು ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವೀಗೊಳಿಸಿ ಎಂದು ಉಸ್ತುವಾರಿ ಸಚಿವರಾದ ಬಸಂತಪ್ಪ ಕರೆ ನೀಡಿದರು. ಅವರು ಸೆ 1ರಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ , ಕ್ಷೇತ್ರದ ಪ್ರತಿಕುಟುಂಬದ ಸಮಸ್ಯೆಗೆ ಸ್ಪಂದಿಸುವ ಉದ್ಧೇಶದಿಂದ ಆಂದೋಲನ ಜರುಗಿಸಲಾಗುತ್ತಿದೆ ಎಂದರು. ರಾಜ್ಯಸರ್ಕಾರದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ , ಸರದಿ ಪ್ರಕಾರ ಪ್ರತಿ ತಿಂಗಳೂ ಒಂದೊಂದು ತಾಲೂಕು ಕೇಂದ್ರದಲ್ಲಿ. ರಾಜ್ಯದ ಎಲ್ಲ‍ಾ ತಾಲೂಕು ಕೇಂದ್ರಗಳಲ್ಲಿ , ಜನ ಸೇವ‍ಾ ಆಂದೋಲನ ನಡೆಯಲಿದೆ. ಆಂದೋಲನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಎಲ್ಲಾ ಮಂತ್ರಿಗಳು , ವಿಧಾನಸೌಧದ ಅಧಿಕಾರಿವರ್ಗ ಜಿಲ್ಲಾ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಹಾಜರಿರುತ್ತಾರೆ. ಜನರಿದ್ದಲ್ಲಿಗೆ ಸರ್ಕಾರ ದಾವಿಸಿ ಖುದ್ದು ಅಹವಾಲು ಆಲಿಸುವ ಉದ್ಧೇಶದಿಂದ , ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು , ಅಹವ‍ಲುಗಳನ್ನು ನಿಗದಿತ ಅರ್ಜಿನಮೂನೆಯ ಮೂಲಕ ನೀಡಿದ್ದಲ್ಲಿ. ಸಂಬಂಧಿಸಿದ ಇಲಾಖೆಗಳ ಮೂಲಕ , ಆಧ್ಯತೆಯ ಮೇರೆಗೆ ಸಮಸ್ಯೆಗೆ ಸ್ಪಂಧನೆ ನೀಡಲ‌‍ಾಗುತ್ತದೆ ಎಂದು ವಿವರಿಸಿದರು. ಶಾಸಕರಾದ ಡ‍ಾ ॥ ಎನ್ ಟಿ ಶ್ರೀನಿವಾಸ್ ಮಾತನಾಡಿ , ಜನಸೇವಾ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದ್ದು , ಇದು ಅವರ ಜನಪರ ಕಾಳಜಿಯ ಪ್ರತಿಕವಾಗಿದೆ. ಮುಖ್ಯಮಂತ್ರಿಗಳ ಮಹತ್ವದ ಕಾರ್ಯಕ್ರಮದಲ್ಲಿ , ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಕೋರಿದರು. ಶಾಸಕರಾದ ಶ್ರಿಮತಿ ಎಂ.ಪಿ.ಲತ‍ಮಲ್ಲಿಕಾರ್ಜುನ , ಜಿಲ್ಲ‍ಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸೇರಿದಂತೆ ಜಿಲ್ಲ‍ಾ ಮಟ್ಟದ ತಾಲೂಕು ಮಟ್ಟದ ಅಧಿಕ‍ಾರಿಗಳು ಹಾಜರಿದ್ದರು. ಕೂಡ್ಲಿಗಿ ಹೊಸಹಳ್ಳಿ ಗುಡೇಕೋಟೆ ಹೋಬಳಿ ಮುಖಂಡರು , ಕ್ಷೇತ್ರದ ವಿವಿದೆಡೆಯ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : " ಜನ ಸೇವಾ ಆಂದೋಲನ " ಯಶಸ್ವಿಗೊಳಿಸಿ - ಸಚಿವ ಬಸಂತಪ್ಪ ಕರೆ*_ ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಖ್ಯಮಂತ್ರಿಗಳ ವಿನೂತನ ಕನಸಿನ ಜನಪರ ಕಾರ್ಯಕ್ರಮ ,  ಜನಸೇವ‍ಾ ಆಂದೋಲನಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳು ಸೆ 5ರಂದು ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವೀಗೊಳಿಸಿ ಎಂದು ಉಸ್ತುವಾರಿ ಸಚಿವರಾದ ಬಸಂತಪ್ಪ ಕರೆ ನೀಡಿದರು. ಅವರು ಸೆ 1ರಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ,   ಕ್ಷೇತ್ರದ ಪ್ರತಿಕುಟುಂಬದ  ಸಮಸ್ಯೆಗೆ ಸ್ಪಂದಿಸುವ ಉದ್ಧೇಶದಿಂದ ಆಂದೋಲನ ಜರುಗಿಸಲಾಗುತ್ತಿದೆ ಎಂದರು. ರಾಜ್ಯಸರ್ಕಾರದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ , ಸರದಿ ಪ್ರಕಾರ ಪ್ರತಿ ತಿಂಗಳೂ ಒಂದೊಂದು ತಾಲೂಕು ಕೇಂದ್ರದಲ್ಲಿ. ರಾಜ್ಯದ ಎಲ್ಲ‍ಾ ತಾಲೂಕು ಕೇಂದ್ರಗಳಲ್ಲಿ , ಜನ ಸೇವ‍ಾ ಆಂದೋಲನ ನಡೆಯಲಿದೆ. ಆಂದೋಲನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಎಲ್ಲಾ ಮಂತ್ರಿಗಳು , ವಿಧಾನಸೌಧದ ಅಧಿಕಾರಿವರ್ಗ ಜಿಲ್ಲಾ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಹಾಜರಿರುತ್ತಾರೆ. ಜನರಿದ್ದಲ್ಲಿಗೆ ಸರ್ಕಾರ  ದಾವಿಸಿ ಖುದ್ದು ಅಹವಾಲು ಆಲಿಸುವ ಉದ್ಧೇಶದಿಂದ , ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು , ಅಹವ‍ಲುಗಳನ್ನು ನಿಗದಿತ ಅರ್ಜಿನಮೂನೆಯ ಮೂಲಕ ನೀಡಿದ್ದಲ್ಲಿ. ಸಂಬಂಧಿಸಿದ ಇಲಾಖೆಗಳ ಮೂಲಕ , ಆಧ್ಯತೆಯ ಮೇರೆಗೆ ಸಮಸ್ಯೆಗೆ ಸ್ಪಂಧನೆ ನೀಡಲ‌‍ಾಗುತ್ತದೆ ಎಂದು ವಿವರಿಸಿದರು. ಶಾಸಕರಾದ ಡ‍ಾ ॥ ಎನ್ ಟಿ ಶ್ರೀನಿವಾಸ್ ಮಾತನಾಡಿ , ಜನಸೇವಾ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದ್ದು , ಇದು ಅವರ ಜನಪರ ಕಾಳಜಿಯ ಪ್ರತಿಕವಾಗಿದೆ. ಮುಖ್ಯಮಂತ್ರಿಗಳ ಮಹತ್ವದ ಕಾರ್ಯಕ್ರಮದಲ್ಲಿ ,  ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಕೋರಿದರು. ಶಾಸಕರಾದ ಶ್ರಿಮತಿ ಎಂ.ಪಿ.ಲತ‍ಮಲ್ಲಿಕಾರ್ಜುನ , ಜಿಲ್ಲ‍ಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸೇರಿದಂತೆ ಜಿಲ್ಲ‍ಾ ಮಟ್ಟದ ತಾಲೂಕು ಮಟ್ಟದ ಅಧಿಕ‍ಾರಿಗಳು ಹಾಜರಿದ್ದರು.
ಕೂಡ್ಲಿಗಿ ಹೊಸಹಳ್ಳಿ ಗುಡೇಕೋಟೆ ಹೋಬಳಿ  ಮುಖಂಡರು , ಕ್ಷೇತ್ರದ ವಿವಿದೆಡೆಯ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ನೂರಾರು  ಕಾರ್ಯಕರ್ತರು  ಸಭೆಯಲ್ಲಿ ಭಾಗವಹಿಸಿದ್ದರು.
✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    7 hrs ago
  • ಮಾನ್ವಿ, ಸಿರವಾರ ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಹೋರಾಟ: ಜಯ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ ಮಾನ್ವಿ, ಸಿರವಾರ ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಹೋರಾಟ: ಜಯ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ
    1
    ಮಾನ್ವಿ, ಸಿರವಾರ ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಹೋರಾಟ: ಜಯ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ
ಮಾನ್ವಿ, ಸಿರವಾರ ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಹೋರಾಟ: ಜಯ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    3 hrs ago
  • ಅಶೋಕ್‌ಗೆ ವಿಪಕ್ಷ ನಾಯಕ ಆಗ್ತೀಯಾ ಎಂದು ಹೇಳಿದ್ದೇ ನಾನು ಎಂದ ರಾಯರೆಡ್ಡಿ ಅಶೋಕ್‌ ಅವರೇ, ನೀವು ವಿಪಕ್ಷ ನಾಯಕರಾಗುತ್ತೀರಾ ಎಂದು ಹೇಳಿದ್ದೇ ನಾನು’ ಎಂದು ಸಚಿವ ಶಿವರಾಜ ತಂಗಡಗಿ ಅವರ ಸಮ್ಮುಖದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ರಾಜ್ಯ ರಾಜಕಾರಣದಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಯರೆಡ್ಡಿ ಅವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಯಲಬುರ್ಗಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಶೋಕ್‌ ಅವರೊಂದಿಗೆ ನಡೆದ ಹಿಂದಿನ ಮಾತುಕತೆಯನ್ನು ಪ್ರಸ್ತಾಪಿಸಿ ಈ ಹೇಳಿಕೆ ನೀಡಿದರು. ವಿಪಕ್ಷ ನಾಯಕ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೇ ರಾಯರೆಡ್ಡಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
    1
    ಅಶೋಕ್‌ಗೆ ವಿಪಕ್ಷ ನಾಯಕ ಆಗ್ತೀಯಾ ಎಂದು ಹೇಳಿದ್ದೇ ನಾನು ಎಂದ ರಾಯರೆಡ್ಡಿ
ಅಶೋಕ್‌ ಅವರೇ, ನೀವು ವಿಪಕ್ಷ ನಾಯಕರಾಗುತ್ತೀರಾ ಎಂದು ಹೇಳಿದ್ದೇ ನಾನು’ ಎಂದು ಸಚಿವ ಶಿವರಾಜ ತಂಗಡಗಿ ಅವರ ಸಮ್ಮುಖದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಯರೆಡ್ಡಿ ಅವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಯಲಬುರ್ಗಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಶೋಕ್‌ ಅವರೊಂದಿಗೆ ನಡೆದ ಹಿಂದಿನ ಮಾತುಕತೆಯನ್ನು ಪ್ರಸ್ತಾಪಿಸಿ ಈ ಹೇಳಿಕೆ ನೀಡಿದರು.
ವಿಪಕ್ಷ ನಾಯಕ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೇ ರಾಯರೆಡ್ಡಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
    user_ಶ್ರೀಕಾಂತ ಸರಗಣಾಚಾರಿ ಸಂಯುಕ್ತ ಕರ್
    ಶ್ರೀಕಾಂತ ಸರಗಣಾಚಾರಿ ಸಂಯುಕ್ತ ಕರ್
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    4 hrs ago
  • ಕರ್ನಾಟಕದಲ್ಲಿ ‘ಪ್ರಜಾಸೇವಾ ಇಲಾಖೆ’ ಆರಂಭ! ಸೆ.5ರಿಂದ ಸಚಿವರು ತಾಲೂಕುಗಳಿಗೆ ಭೇಟಿ — ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ? ಕರ್ನಾಟಕ ಸರ್ಕಾರವು ಜನಸಾಮಾನ್ಯರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಕಾನೂನು ಚೌಕಟ್ಟಿನಲ್ಲಿ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ‘ಪ್ರಜಾಸೇವಾ ಇಲಾಖೆ’ ಆರಂಭಿಸಲು ಮುಂದಾಗಿದೆ. ಸೆಪ್ಟೆಂಬರ್ 5, 2026ರಿಂದ ಪ್ರತಿ ಜಿಲ್ಲೆಯಲ್ಲಿ ಆಯ್ದ ತಾಲೂಕುಗಳಿಗೆ ಸಚಿವರು ಭೇಟಿ ನೀಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಶಾಸಕರು ತಮ್ಮ ವ್ಯಾಪ್ತಿಯ ಪಂಚಾಯಿತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆಯೂ ಇರಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಸಚಿವರು ತಾಲೂಕುಗಳಿಗೆ ಭೇಟಿ ನೀಡುವ ವ್ಯವಸ್ಥೆ ಇರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 📌 ನಿಮ್ಮ ತಾಲೂಕಿನಲ್ಲೂ ಸಚಿವರ ಭೇಟಿ ಯಾವಾಗ? ಸುದ್ದಿ ನಿಮಗೆ ಉಪಯುಕ್ತವೆನಿಸಿದರೆ ಶೇರ್ ಮಾಡಿ. #PrajaSeva #PrajaSevaDepartment #Karnataka #KarnatakaGovernment #DKShivakumar #KarnatakaNews #BreakingNews #PublicGrievance #GovernmentNews #KannadaNews #IndiaNews #ಕರ್ನಾಟಕ #ಪ್ರಜಾಸೇವಾ #ಜನಸೇವೆ #ಸಾರ್ವಜನಿಕಸಮಸ್ಯೆ
    1
    ಕರ್ನಾಟಕದಲ್ಲಿ ‘ಪ್ರಜಾಸೇವಾ ಇಲಾಖೆ’ ಆರಂಭ! ಸೆ.5ರಿಂದ ಸಚಿವರು ತಾಲೂಕುಗಳಿಗೆ ಭೇಟಿ — ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ?
ಕರ್ನಾಟಕ ಸರ್ಕಾರವು ಜನಸಾಮಾನ್ಯರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಕಾನೂನು ಚೌಕಟ್ಟಿನಲ್ಲಿ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ‘ಪ್ರಜಾಸೇವಾ ಇಲಾಖೆ’ ಆರಂಭಿಸಲು ಮುಂದಾಗಿದೆ.
ಸೆಪ್ಟೆಂಬರ್ 5, 2026ರಿಂದ ಪ್ರತಿ ಜಿಲ್ಲೆಯಲ್ಲಿ ಆಯ್ದ ತಾಲೂಕುಗಳಿಗೆ ಸಚಿವರು ಭೇಟಿ ನೀಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಶಾಸಕರು ತಮ್ಮ ವ್ಯಾಪ್ತಿಯ ಪಂಚಾಯಿತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆಯೂ ಇರಲಿದೆ.
ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಸಚಿವರು ತಾಲೂಕುಗಳಿಗೆ ಭೇಟಿ ನೀಡುವ ವ್ಯವಸ್ಥೆ ಇರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
📌 ನಿಮ್ಮ ತಾಲೂಕಿನಲ್ಲೂ ಸಚಿವರ ಭೇಟಿ ಯಾವಾಗ?
ಸುದ್ದಿ ನಿಮಗೆ ಉಪಯುಕ್ತವೆನಿಸಿದರೆ ಶೇರ್ ಮಾಡಿ.
#PrajaSeva #PrajaSevaDepartment #Karnataka #KarnatakaGovernment #DKShivakumar #KarnatakaNews #BreakingNews #PublicGrievance #GovernmentNews #KannadaNews #IndiaNews #ಕರ್ನಾಟಕ #ಪ್ರಜಾಸೇವಾ #ಜನಸೇವೆ #ಸಾರ್ವಜನಿಕಸಮಸ್ಯೆ
    user_AsnNews24Kannada
    AsnNews24Kannada
    Local News Reporter Ballari, Karnataka•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.