logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಡಿಸುತ್ತೇನೆ ಆದರೆ ಬರ ಘೋಷಣೆ ಮಾಡಿಸಿ ಪ್ರಭಾಕರ್ ಮ್ಯಾಸನಾಯಕ ಮೊಳಕಾಲ್ಮುರು ತಾಲ್ಲೂಕು ಸತತ ಬರದಿಂದ ತತ್ತರಿಸಿ ಹೋಗಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಮೊಳಕಾಲ್ಮುರು ತಾಲ್ಲೂಕನ್ನು ಕೈಬಿಟ್ಟಿರುವುದು ಯಾವ ನ್ಯಾಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಆದಕಾರಣ ನೋವಿನಿಂದ ನಾನು ಹೇಳಿದ್ದೇನೆ ವಿನಾಹ ನಿಮ್ಮನ್ನು ನೋವಿಯಿಸುವ ಮನಸು ನನಗಿಲ್ಲ, ಇದರಿಂದ ನಿಮಗೆ ನೋವಾಗಿದ್ದರೆ ವಿಷಾಡಿಸುತ್ತೇನೆ ಎಂದು ಪ್ರಭಾಕರ್ ಮ್ಯಾಸನಾಯಕ ರವರು ಪತ್ರಿಕಾ ಘೋಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ನೋ ವಿನ ಭಾವನೆಯಲ್ಲಿ ನನ್ನ ಬಾಯಿಂದ ಕೆಲವು ಪದಗಳು ಬಂದಿವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ. ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಮುಖವಾಗಿರುತ್ತದೆ. NDRF ಮತ್ತು SDRF ಮಾನದಂಡ ಹಾಗೂ ವರದಿಗಳ ಆಧಾರದ ಮೇಲೆ ಸರ್ಕಾರದ ಮೊದಲ ಪಟ್ಟಿಯಲ್ಲಿ ನಮ್ಮ ತಾಲ್ಲೂಕು ಘೋಷಣೆಯಾಗಿಲ್ಲ. ಆದ್ದರಿಂದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಸಮರ್ಪಕ ವರದಿ ಸಲ್ಲಿಸಿ ಬರ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಲವರು ನನ್ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಈ ಮಣ್ಣಿಗೆ ಸೇರಿದ ಮಣ್ಣಿನ ಮಗ ನಾನು, ನನಗೆ ಇಲ್ಲಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿರುವಾಗ ಶಾಸಕರು ಬೆಂಗಳೂರಿನಲ್ಲಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊಳಕಾಲ್ಮುರುವನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಭಾಕರ್ ಮ್ಯಾಸನಾಯಕ ಸವಾಲ್ ಹಾಕಿದರು. ಪತ್ರಿಕಾ ಘೋಷ್ಟಿ ನಡೆಸುವ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಕಿರಣ್ ಗಾಯಕ್ ವಾಡ್ , ತಿಪ್ಪೇಸ್ವಾಮಿ ಮಾಜಿ ಪಪ ಉಪ ಅಧ್ಯಕ್ಷರು, ಸಿದ್ದಣ್ಣ, ಭೀಮಣ್ಣ, ಹರೀಶ್ ಕಡೆ ತೋಟ, ಪ್ರಭು ನೇರಳಹಳ್ಳಿ ಭೀಮಣ್ಣ ರಮೇಶ್ ಭಾಗವಹಿಸಿದ್ದರು.

7 hrs ago
user_Basavaraj
Basavaraj
Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
7 hrs ago
52155cdf-8d5d-47f3-b86a-e36d2e05b550

ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಡಿಸುತ್ತೇನೆ ಆದರೆ ಬರ ಘೋಷಣೆ ಮಾಡಿಸಿ ಪ್ರಭಾಕರ್ ಮ್ಯಾಸನಾಯಕ ಮೊಳಕಾಲ್ಮುರು ತಾಲ್ಲೂಕು ಸತತ ಬರದಿಂದ ತತ್ತರಿಸಿ ಹೋಗಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಮೊಳಕಾಲ್ಮುರು ತಾಲ್ಲೂಕನ್ನು ಕೈಬಿಟ್ಟಿರುವುದು ಯಾವ ನ್ಯಾಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಆದಕಾರಣ ನೋವಿನಿಂದ ನಾನು ಹೇಳಿದ್ದೇನೆ ವಿನಾಹ ನಿಮ್ಮನ್ನು ನೋವಿಯಿಸುವ ಮನಸು ನನಗಿಲ್ಲ, ಇದರಿಂದ ನಿಮಗೆ ನೋವಾಗಿದ್ದರೆ ವಿಷಾಡಿಸುತ್ತೇನೆ ಎಂದು ಪ್ರಭಾಕರ್ ಮ್ಯಾಸನಾಯಕ ರವರು ಪತ್ರಿಕಾ ಘೋಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ನೋ ವಿನ ಭಾವನೆಯಲ್ಲಿ ನನ್ನ ಬಾಯಿಂದ ಕೆಲವು ಪದಗಳು ಬಂದಿವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ. ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಮುಖವಾಗಿರುತ್ತದೆ. NDRF ಮತ್ತು SDRF ಮಾನದಂಡ ಹಾಗೂ

ವರದಿಗಳ ಆಧಾರದ ಮೇಲೆ ಸರ್ಕಾರದ ಮೊದಲ ಪಟ್ಟಿಯಲ್ಲಿ ನಮ್ಮ ತಾಲ್ಲೂಕು ಘೋಷಣೆಯಾಗಿಲ್ಲ. ಆದ್ದರಿಂದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಸಮರ್ಪಕ ವರದಿ ಸಲ್ಲಿಸಿ ಬರ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಲವರು ನನ್ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಈ ಮಣ್ಣಿಗೆ ಸೇರಿದ ಮಣ್ಣಿನ ಮಗ ನಾನು, ನನಗೆ ಇಲ್ಲಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿರುವಾಗ ಶಾಸಕರು ಬೆಂಗಳೂರಿನಲ್ಲಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊಳಕಾಲ್ಮುರುವನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಭಾಕರ್ ಮ್ಯಾಸನಾಯಕ ಸವಾಲ್ ಹಾಕಿದರು. ಪತ್ರಿಕಾ ಘೋಷ್ಟಿ ನಡೆಸುವ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಕಿರಣ್ ಗಾಯಕ್ ವಾಡ್ , ತಿಪ್ಪೇಸ್ವಾಮಿ ಮಾಜಿ ಪಪ ಉಪ ಅಧ್ಯಕ್ಷರು, ಸಿದ್ದಣ್ಣ, ಭೀಮಣ್ಣ, ಹರೀಶ್ ಕಡೆ ತೋಟ, ಪ್ರಭು ನೇರಳಹಳ್ಳಿ ಭೀಮಣ್ಣ ರಮೇಶ್ ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಡಿಸುತ್ತೇನೆ ಆದರೆ ಬರ ಘೋಷಣೆ ಮಾಡಿಸಿ ಪ್ರಭಾಕರ್ ಮ್ಯಾಸನಾಯಕ ಮೊಳಕಾಲ್ಮುರು ತಾಲ್ಲೂಕು ಸತತ ಬರದಿಂದ ತತ್ತರಿಸಿ ಹೋಗಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಮೊಳಕಾಲ್ಮುರು ತಾಲ್ಲೂಕನ್ನು ಕೈಬಿಟ್ಟಿರುವುದು ಯಾವ ನ್ಯಾಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಆದಕಾರಣ ನೋವಿನಿಂದ ನಾನು ಹೇಳಿದ್ದೇನೆ ವಿನಾಹ ನಿಮ್ಮನ್ನು ನೋವಿಯಿಸುವ ಮನಸು ನನಗಿಲ್ಲ, ಇದರಿಂದ ನಿಮಗೆ ನೋವಾಗಿದ್ದರೆ ವಿಷಾಡಿಸುತ್ತೇನೆ ಎಂದು ಪ್ರಭಾಕರ್ ಮ್ಯಾಸನಾಯಕ ರವರು ಪತ್ರಿಕಾ ಘೋಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ನೋ ವಿನ ಭಾವನೆಯಲ್ಲಿ ನನ್ನ ಬಾಯಿಂದ ಕೆಲವು ಪದಗಳು ಬಂದಿವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ. ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಮುಖವಾಗಿರುತ್ತದೆ. NDRF ಮತ್ತು SDRF ಮಾನದಂಡ ಹಾಗೂ ವರದಿಗಳ ಆಧಾರದ ಮೇಲೆ ಸರ್ಕಾರದ ಮೊದಲ ಪಟ್ಟಿಯಲ್ಲಿ ನಮ್ಮ ತಾಲ್ಲೂಕು ಘೋಷಣೆಯಾಗಿಲ್ಲ. ಆದ್ದರಿಂದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಸಮರ್ಪಕ ವರದಿ ಸಲ್ಲಿಸಿ ಬರ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಲವರು ನನ್ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಈ ಮಣ್ಣಿಗೆ ಸೇರಿದ ಮಣ್ಣಿನ ಮಗ ನಾನು, ನನಗೆ ಇಲ್ಲಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿರುವಾಗ ಶಾಸಕರು ಬೆಂಗಳೂರಿನಲ್ಲಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊಳಕಾಲ್ಮುರುವನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಭಾಕರ್ ಮ್ಯಾಸನಾಯಕ ಸವಾಲ್ ಹಾಕಿದರು. ಪತ್ರಿಕಾ ಘೋಷ್ಟಿ ನಡೆಸುವ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಕಿರಣ್ ಗಾಯಕ್ ವಾಡ್ , ತಿಪ್ಪೇಸ್ವಾಮಿ ಮಾಜಿ ಪಪ ಉಪ ಅಧ್ಯಕ್ಷರು, ಸಿದ್ದಣ್ಣ, ಭೀಮಣ್ಣ, ಹರೀಶ್ ಕಡೆ ತೋಟ, ಪ್ರಭು ನೇರಳಹಳ್ಳಿ ಭೀಮಣ್ಣ ರಮೇಶ್ ಭಾಗವಹಿಸಿದ್ದರು.
    2
    ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಡಿಸುತ್ತೇನೆ ಆದರೆ ಬರ ಘೋಷಣೆ ಮಾಡಿಸಿ ಪ್ರಭಾಕರ್ ಮ್ಯಾಸನಾಯಕ 
ಮೊಳಕಾಲ್ಮುರು ತಾಲ್ಲೂಕು ಸತತ ಬರದಿಂದ ತತ್ತರಿಸಿ ಹೋಗಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಮೊಳಕಾಲ್ಮುರು ತಾಲ್ಲೂಕನ್ನು ಕೈಬಿಟ್ಟಿರುವುದು ಯಾವ ನ್ಯಾಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಆದಕಾರಣ ನೋವಿನಿಂದ ನಾನು ಹೇಳಿದ್ದೇನೆ ವಿನಾಹ ನಿಮ್ಮನ್ನು ನೋವಿಯಿಸುವ ಮನಸು ನನಗಿಲ್ಲ, ಇದರಿಂದ ನಿಮಗೆ ನೋವಾಗಿದ್ದರೆ ವಿಷಾಡಿಸುತ್ತೇನೆ ಎಂದು  ಪ್ರಭಾಕರ್ ಮ್ಯಾಸನಾಯಕ ರವರು ಪತ್ರಿಕಾ ಘೋಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಈ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ನೋ ವಿನ ಭಾವನೆಯಲ್ಲಿ ನನ್ನ ಬಾಯಿಂದ ಕೆಲವು ಪದಗಳು ಬಂದಿವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ.
ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಮುಖವಾಗಿರುತ್ತದೆ. NDRF ಮತ್ತು SDRF ಮಾನದಂಡ ಹಾಗೂ ವರದಿಗಳ ಆಧಾರದ ಮೇಲೆ ಸರ್ಕಾರದ ಮೊದಲ ಪಟ್ಟಿಯಲ್ಲಿ ನಮ್ಮ ತಾಲ್ಲೂಕು ಘೋಷಣೆಯಾಗಿಲ್ಲ. ಆದ್ದರಿಂದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಸಮರ್ಪಕ ವರದಿ ಸಲ್ಲಿಸಿ ಬರ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಲವರು ನನ್ನನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಈ ಮಣ್ಣಿಗೆ ಸೇರಿದ ಮಣ್ಣಿನ ಮಗ ನಾನು, ನನಗೆ ಇಲ್ಲಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿರುವಾಗ ಶಾಸಕರು ಬೆಂಗಳೂರಿನಲ್ಲಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊಳಕಾಲ್ಮುರುವನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಭಾಕರ್ ಮ್ಯಾಸನಾಯಕ ಸವಾಲ್ ಹಾಕಿದರು.
ಪತ್ರಿಕಾ ಘೋಷ್ಟಿ ನಡೆಸುವ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಕಿರಣ್ ಗಾಯಕ್ ವಾಡ್ , ತಿಪ್ಪೇಸ್ವಾಮಿ ಮಾಜಿ ಪಪ ಉಪ ಅಧ್ಯಕ್ಷರು, ಸಿದ್ದಣ್ಣ, ಭೀಮಣ್ಣ, ಹರೀಶ್ ಕಡೆ ತೋಟ, ಪ್ರಭು ನೇರಳಹಳ್ಳಿ ಭೀಮಣ್ಣ ರಮೇಶ್ ಭಾಗವಹಿಸಿದ್ದರು.
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    7 hrs ago
  • ಜನಾರ್ದನ ರೆಡ್ಡಿ ಇತಿಹಾಸ ನನಗೆ 2002ರಿಂದ ಗೊತ್ತು– ಸಂಸದ ಈ. ತುಕಾರಾಂ ಕೂಡ್ಲಿಗಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮೊದಲು ಏನಾಗಿದ್ದರು, ನಂತರ ಏನಾದರು, ಯಾವ ಕಂಪೌಂಡ್‌ಗೆ ಬಂದು ಏನು ಕೇಳಿದ್ದರು, ಆಗ ನಾನು ಅವರಿಗೆ ಯಾವ ರೀತಿಯ ಸಹಾಯ ಮಾಡಿದ್ದೆ ಎಂಬುದು ನನಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಹೇಳಿದರು. ಕೂಡ್ಲಿಗಿ ಪಟ್ಟಣದಲ್ಲಿ ಸೆ.5ರಂದು ನಡೆಯಲಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2002ರಿಂದಲೂ ಜನಾರ್ದನ ರೆಡ್ಡಿ ಅವರ ಇತಿಹಾಸ ನನಗೆ ಗೊತ್ತು. ನಾನು ಅಕೌಂಟೆಂಟ್ ಆಗಿದ್ದಾಗಿನಿಂದ ಅವರನ್ನು ನೋಡುತ್ತಿದ್ದೇನೆ” ಎಂದರು. ಜನಾರ್ದನ ರೆಡ್ಡಿ ಅವರು ಯಾವ ಮೈನಿಂಗ್ ವಿಚಾರದಲ್ಲಿ ಏನು ಮಾಡಿದ್ದಾರೆ ಎಂಬುದೂ ನನಗೆ ತಿಳಿದಿದೆ. ಅವರ ರಾಜಕೀಯ ಜೀವನದ ಹಿಂದಿನ ವಿಚಾರಗಳ ಬಗ್ಗೆ ಮಾತನಾಡುವಷ್ಟು ಮಾಹಿತಿ ನನ್ನಲ್ಲಿದೆ. ಆದರೆ ನಾವು ಜನರಿಗೆ ಲೆಕ್ಕ ನೀಡಬೇಕೇ ಹೊರತು, ಜನಾರ್ದನ ರೆಡ್ಡಿ ಹೇಳಿದ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತಾ ಕೂರುವ ಅಗತ್ಯವಿಲ್ಲ ಎಂದು ತುಕಾರಾಂ ತಿರುಗೇಟು ನೀಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯವಾಗಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಮುಂದೆ ನಮ್ಮ ಕೆಲಸದ ಲೆಕ್ಕ ನೀಡುವುದು ಮುಖ್ಯ ಎಂದು ಅವರು ಹೇಳಿದರು.
    1
    ಜನಾರ್ದನ ರೆಡ್ಡಿ ಇತಿಹಾಸ ನನಗೆ 2002ರಿಂದ ಗೊತ್ತು– ಸಂಸದ ಈ. ತುಕಾರಾಂ

ಕೂಡ್ಲಿಗಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮೊದಲು ಏನಾಗಿದ್ದರು, ನಂತರ ಏನಾದರು, ಯಾವ ಕಂಪೌಂಡ್‌ಗೆ ಬಂದು ಏನು ಕೇಳಿದ್ದರು, ಆಗ ನಾನು ಅವರಿಗೆ ಯಾವ ರೀತಿಯ ಸಹಾಯ ಮಾಡಿದ್ದೆ ಎಂಬುದು ನನಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಹೇಳಿದರು.
ಕೂಡ್ಲಿಗಿ ಪಟ್ಟಣದಲ್ಲಿ ಸೆ.5ರಂದು ನಡೆಯಲಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2002ರಿಂದಲೂ ಜನಾರ್ದನ ರೆಡ್ಡಿ ಅವರ ಇತಿಹಾಸ ನನಗೆ ಗೊತ್ತು. ನಾನು ಅಕೌಂಟೆಂಟ್ ಆಗಿದ್ದಾಗಿನಿಂದ ಅವರನ್ನು ನೋಡುತ್ತಿದ್ದೇನೆ” ಎಂದರು.
ಜನಾರ್ದನ ರೆಡ್ಡಿ ಅವರು ಯಾವ ಮೈನಿಂಗ್ ವಿಚಾರದಲ್ಲಿ ಏನು ಮಾಡಿದ್ದಾರೆ ಎಂಬುದೂ ನನಗೆ ತಿಳಿದಿದೆ. ಅವರ ರಾಜಕೀಯ ಜೀವನದ ಹಿಂದಿನ ವಿಚಾರಗಳ ಬಗ್ಗೆ ಮಾತನಾಡುವಷ್ಟು ಮಾಹಿತಿ ನನ್ನಲ್ಲಿದೆ. ಆದರೆ ನಾವು ಜನರಿಗೆ ಲೆಕ್ಕ ನೀಡಬೇಕೇ ಹೊರತು, ಜನಾರ್ದನ ರೆಡ್ಡಿ ಹೇಳಿದ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತಾ ಕೂರುವ ಅಗತ್ಯವಿಲ್ಲ ಎಂದು ತುಕಾರಾಂ ತಿರುಗೇಟು ನೀಡಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯವಾಗಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಮುಂದೆ ನಮ್ಮ ಕೆಲಸದ ಲೆಕ್ಕ ನೀಡುವುದು ಮುಖ್ಯ ಎಂದು ಅವರು ಹೇಳಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    4 hrs ago
  • *ಕೂಡ್ಲಿಗಿ : " ಜನ ಸೇವಾ ಆಂದೋಲನ " ಯಶಸ್ವಿಗೊಳಿಸಿ - ಸಚಿವ ಬಸಂತಪ್ಪ ಕರೆ*_ ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಖ್ಯಮಂತ್ರಿಗಳ ವಿನೂತನ ಕನಸಿನ ಜನಪರ ಕಾರ್ಯಕ್ರಮ , ಜನಸೇವ‍ಾ ಆಂದೋಲನಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳು ಸೆ 5ರಂದು ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವೀಗೊಳಿಸಿ ಎಂದು ಉಸ್ತುವಾರಿ ಸಚಿವರಾದ ಬಸಂತಪ್ಪ ಕರೆ ನೀಡಿದರು. ಅವರು ಸೆ 1ರಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ , ಕ್ಷೇತ್ರದ ಪ್ರತಿಕುಟುಂಬದ ಸಮಸ್ಯೆಗೆ ಸ್ಪಂದಿಸುವ ಉದ್ಧೇಶದಿಂದ ಆಂದೋಲನ ಜರುಗಿಸಲಾಗುತ್ತಿದೆ ಎಂದರು. ರಾಜ್ಯಸರ್ಕಾರದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ , ಸರದಿ ಪ್ರಕಾರ ಪ್ರತಿ ತಿಂಗಳೂ ಒಂದೊಂದು ತಾಲೂಕು ಕೇಂದ್ರದಲ್ಲಿ. ರಾಜ್ಯದ ಎಲ್ಲ‍ಾ ತಾಲೂಕು ಕೇಂದ್ರಗಳಲ್ಲಿ , ಜನ ಸೇವ‍ಾ ಆಂದೋಲನ ನಡೆಯಲಿದೆ. ಆಂದೋಲನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಎಲ್ಲಾ ಮಂತ್ರಿಗಳು , ವಿಧಾನಸೌಧದ ಅಧಿಕಾರಿವರ್ಗ ಜಿಲ್ಲಾ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಹಾಜರಿರುತ್ತಾರೆ. ಜನರಿದ್ದಲ್ಲಿಗೆ ಸರ್ಕಾರ ದಾವಿಸಿ ಖುದ್ದು ಅಹವಾಲು ಆಲಿಸುವ ಉದ್ಧೇಶದಿಂದ , ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು , ಅಹವ‍ಲುಗಳನ್ನು ನಿಗದಿತ ಅರ್ಜಿನಮೂನೆಯ ಮೂಲಕ ನೀಡಿದ್ದಲ್ಲಿ. ಸಂಬಂಧಿಸಿದ ಇಲಾಖೆಗಳ ಮೂಲಕ , ಆಧ್ಯತೆಯ ಮೇರೆಗೆ ಸಮಸ್ಯೆಗೆ ಸ್ಪಂಧನೆ ನೀಡಲ‌‍ಾಗುತ್ತದೆ ಎಂದು ವಿವರಿಸಿದರು. ಶಾಸಕರಾದ ಡ‍ಾ ॥ ಎನ್ ಟಿ ಶ್ರೀನಿವಾಸ್ ಮಾತನಾಡಿ , ಜನಸೇವಾ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದ್ದು , ಇದು ಅವರ ಜನಪರ ಕಾಳಜಿಯ ಪ್ರತಿಕವಾಗಿದೆ. ಮುಖ್ಯಮಂತ್ರಿಗಳ ಮಹತ್ವದ ಕಾರ್ಯಕ್ರಮದಲ್ಲಿ , ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಕೋರಿದರು. ಶಾಸಕರಾದ ಶ್ರಿಮತಿ ಎಂ.ಪಿ.ಲತ‍ಮಲ್ಲಿಕಾರ್ಜುನ , ಜಿಲ್ಲ‍ಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸೇರಿದಂತೆ ಜಿಲ್ಲ‍ಾ ಮಟ್ಟದ ತಾಲೂಕು ಮಟ್ಟದ ಅಧಿಕ‍ಾರಿಗಳು ಹಾಜರಿದ್ದರು. ಕೂಡ್ಲಿಗಿ ಹೊಸಹಳ್ಳಿ ಗುಡೇಕೋಟೆ ಹೋಬಳಿ ಮುಖಂಡರು , ಕ್ಷೇತ್ರದ ವಿವಿದೆಡೆಯ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : " ಜನ ಸೇವಾ ಆಂದೋಲನ " ಯಶಸ್ವಿಗೊಳಿಸಿ - ಸಚಿವ ಬಸಂತಪ್ಪ ಕರೆ*_ ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಖ್ಯಮಂತ್ರಿಗಳ ವಿನೂತನ ಕನಸಿನ ಜನಪರ ಕಾರ್ಯಕ್ರಮ ,  ಜನಸೇವ‍ಾ ಆಂದೋಲನಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳು ಸೆ 5ರಂದು ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವೀಗೊಳಿಸಿ ಎಂದು ಉಸ್ತುವಾರಿ ಸಚಿವರಾದ ಬಸಂತಪ್ಪ ಕರೆ ನೀಡಿದರು. ಅವರು ಸೆ 1ರಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ,   ಕ್ಷೇತ್ರದ ಪ್ರತಿಕುಟುಂಬದ  ಸಮಸ್ಯೆಗೆ ಸ್ಪಂದಿಸುವ ಉದ್ಧೇಶದಿಂದ ಆಂದೋಲನ ಜರುಗಿಸಲಾಗುತ್ತಿದೆ ಎಂದರು. ರಾಜ್ಯಸರ್ಕಾರದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ , ಸರದಿ ಪ್ರಕಾರ ಪ್ರತಿ ತಿಂಗಳೂ ಒಂದೊಂದು ತಾಲೂಕು ಕೇಂದ್ರದಲ್ಲಿ. ರಾಜ್ಯದ ಎಲ್ಲ‍ಾ ತಾಲೂಕು ಕೇಂದ್ರಗಳಲ್ಲಿ , ಜನ ಸೇವ‍ಾ ಆಂದೋಲನ ನಡೆಯಲಿದೆ. ಆಂದೋಲನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಎಲ್ಲಾ ಮಂತ್ರಿಗಳು , ವಿಧಾನಸೌಧದ ಅಧಿಕಾರಿವರ್ಗ ಜಿಲ್ಲಾ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಹಾಜರಿರುತ್ತಾರೆ. ಜನರಿದ್ದಲ್ಲಿಗೆ ಸರ್ಕಾರ  ದಾವಿಸಿ ಖುದ್ದು ಅಹವಾಲು ಆಲಿಸುವ ಉದ್ಧೇಶದಿಂದ , ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು , ಅಹವ‍ಲುಗಳನ್ನು ನಿಗದಿತ ಅರ್ಜಿನಮೂನೆಯ ಮೂಲಕ ನೀಡಿದ್ದಲ್ಲಿ. ಸಂಬಂಧಿಸಿದ ಇಲಾಖೆಗಳ ಮೂಲಕ , ಆಧ್ಯತೆಯ ಮೇರೆಗೆ ಸಮಸ್ಯೆಗೆ ಸ್ಪಂಧನೆ ನೀಡಲ‌‍ಾಗುತ್ತದೆ ಎಂದು ವಿವರಿಸಿದರು. ಶಾಸಕರಾದ ಡ‍ಾ ॥ ಎನ್ ಟಿ ಶ್ರೀನಿವಾಸ್ ಮಾತನಾಡಿ , ಜನಸೇವಾ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದ್ದು , ಇದು ಅವರ ಜನಪರ ಕಾಳಜಿಯ ಪ್ರತಿಕವಾಗಿದೆ. ಮುಖ್ಯಮಂತ್ರಿಗಳ ಮಹತ್ವದ ಕಾರ್ಯಕ್ರಮದಲ್ಲಿ ,  ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಕೋರಿದರು. ಶಾಸಕರಾದ ಶ್ರಿಮತಿ ಎಂ.ಪಿ.ಲತ‍ಮಲ್ಲಿಕಾರ್ಜುನ , ಜಿಲ್ಲ‍ಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸೇರಿದಂತೆ ಜಿಲ್ಲ‍ಾ ಮಟ್ಟದ ತಾಲೂಕು ಮಟ್ಟದ ಅಧಿಕ‍ಾರಿಗಳು ಹಾಜರಿದ್ದರು.
ಕೂಡ್ಲಿಗಿ ಹೊಸಹಳ್ಳಿ ಗುಡೇಕೋಟೆ ಹೋಬಳಿ  ಮುಖಂಡರು , ಕ್ಷೇತ್ರದ ವಿವಿದೆಡೆಯ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ನೂರಾರು  ಕಾರ್ಯಕರ್ತರು  ಸಭೆಯಲ್ಲಿ ಭಾಗವಹಿಸಿದ್ದರು.
✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    5 hrs ago
  • ನಾವೇನು ಪಾಕಿಸ್ತಾನವರಾ?” — ಬಿ. ನಾಗೇಂದ್ರ ವಿರುದ್ಧ ಮಾಜಿ ಸಂಸದ ಎಂ.ಪಿ.ಪಕೀರಪ್ಪ ತೀವ್ರ ವಾಗ್ದಾಳಿ ಮಾಜಿ ಸಂಸದರಾದ ಎಂ.ಪಿ.ಪಕೀರಪ್ಪ ಅವರು ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕೀರಪ್ಪ, “ನಮ್ಮ ಕಮ್ಯುನಿಟಿ ಅಂತ ನಾವು ಮರ್ಯಾದೆ ಕೊಟ್ಟರೆ... ನಾವೇನು ಪಾಕಿಸ್ತಾನವರಾ?” ಎಂದು ಪ್ರಶ್ನಿಸಿ, ಬಳ್ಳಾರಿ ವಿಚಾರವಾಗಿ ನಾಗೇಂದ್ರ ಅವರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. #MPFakeerappa #BNagendra #Ballari #BallariNews #KarnatakaPolitics #KarnatakaNews #PoliticalNews #BreakingNews #KannadaNews #KannadaNewsToday #BallariPolitics #Congress #ViralNews #TrendingNews #IndiaNews
    1
    ನಾವೇನು ಪಾಕಿಸ್ತಾನವರಾ?” — ಬಿ. ನಾಗೇಂದ್ರ ವಿರುದ್ಧ ಮಾಜಿ ಸಂಸದ ಎಂ.ಪಿ.ಪಕೀರಪ್ಪ ತೀವ್ರ ವಾಗ್ದಾಳಿ
ಮಾಜಿ ಸಂಸದರಾದ ಎಂ.ಪಿ.ಪಕೀರಪ್ಪ ಅವರು ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕೀರಪ್ಪ, “ನಮ್ಮ ಕಮ್ಯುನಿಟಿ ಅಂತ ನಾವು ಮರ್ಯಾದೆ ಕೊಟ್ಟರೆ... ನಾವೇನು ಪಾಕಿಸ್ತಾನವರಾ?” ಎಂದು ಪ್ರಶ್ನಿಸಿ, ಬಳ್ಳಾರಿ ವಿಚಾರವಾಗಿ ನಾಗೇಂದ್ರ ಅವರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
#MPFakeerappa #BNagendra #Ballari #BallariNews #KarnatakaPolitics #KarnatakaNews #PoliticalNews #BreakingNews #KannadaNews #KannadaNewsToday #BallariPolitics #Congress #ViralNews #TrendingNews #IndiaNews
    user_AsnNews24Kannada
    AsnNews24Kannada
    Local News Reporter Ballari, Karnataka•
    5 hrs ago
  • ಇನ್ನರ್ವಿಲ್ ಕ್ಲಬ್ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ.. ಇನ್ನರ್ವಿಲ್ ಕ್ಲಬ್ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ.. ಚಳ್ಳಕೆರೆ:ಈ ವರ್ಷ ಬರ, ಬೇಸಿಗೆ ಧಗೆಯ ಮಧ್ಯೆ ಪ್ರಾಣಿ ಹಾಗೂ ಪಕ್ಷಿಗಳು ಎದುರಿಸುತ್ತಿರುವ ಸಮಸ್ಯೆ ಅರಿತು ಸಾರ್ವಜನಿಕರು ಪಕ್ಷಿ, ಪ್ರಾಣಿ ಪ್ರೀಯರು ಅಲ್ಲಲ್ಲಿ ನೀರು, ಕಾಳಿನ ವ್ಯವಸ್ಥೆ ಕಲ್ಪಿಸಿ ಪಕ್ಷಿ ಸಂಕುಲವನ್ನು ಉಳಿಸುವಂತೆ ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷ ಅಪರ್ಣ ದೇವೆಂದ್ರಪ್ಪ ಮನವಿ ಮಾಡಿದ್ದಾರೆ ನಗರದ ಚಿತ್ರದುರ್ಗ ರಸ್ತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇಂದು ಇನ್ನರ್ವಿಲ್ ಕ್ಲಬ್ ವತಿಯಿಂದ ಪಕ್ಷಿಗಳಿಗೆ ಕಾಳು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಉದ್ಯಾನವನದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ನಂತರ ಅವರು ಮಾತನಾಡಿದರು.. ಈಗಾಗಲೆ ಮಳೆಗಾಲ ವಾದರೂ ಮಳೆ ಬಾರದೆ ನೀರಿನ ತಾಣಗಳಾದ ಕೆರೆ .ಕಟ್ಟೆ. ಗೋಕಟ್ಟೆ ಸೇರಿದಂತೆ ಎಲ್ಲೂ ನೀರು ಸಿಗುತ್ತಿಲ್ಲಾ ಇಂದರಿಂದ ಪ್ರಾಣಿ ಪಕ್ಷಿಗಳ ಸಾವನ್ನಪ್ಪುತ್ತಿದ್ದು ಇದರಿಂದ ಪಕ್ಷೀಯ ಸಂಕುಲ ಕ್ಷೆಣಿಸುತ್ತಿದೆ.. ಮಾನವರಾದ ನಾವು ಇದನ್ನು ಅರಿತು. ಮನೆಯ ಮೇಲೆ ಕಾಂಪೌಂಡ್ ಮೇಲೆ ಮನೆಯ ಮುಂದೆ ಪಕ್ಷಿಗಳು ಇರುವಂತಹ ಗಿಡ ಗಳನ್ನು ಗುರುತಿಸಿ ಇಂತಹ ಸ್ಥಳಗಳಲ್ಲಿ ನೀರು ಕಾಳುಗಳನ್ನು ಇಡುವ ಮೂಲಕ ಅಳಿದುಳಿದ ಪಕ್ಷಗಳ ಸಂಕುಲವನ್ನು ಉಳಿಸಬೇಕಿದೆ. ನಾವು ಎಲ್ಲ ಕಡೆನೂ ನೀರು ಇಡಲಾಗದು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರು ಅವಕಾಶ ಸಿಗು ಕಡೆ ನೀರು ಕಾಳು ವ್ಯವಸ್ಥೆ ಮಾಡಿದರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಪ್ರಮುಖ್ಯವಾಗಿ ಈಗ ‌ಈ ನಗರದಲ್ಲಿ ಇರುವುದು ಒಂದೇ ಉದ್ಯಾನವನ ವೃಕ್ಷ ಮಾತೇ ಸಾಲುಮರದ ತಿಮ್ಮಕ್ಕ ಉದ್ಯಾನವನ ಉದ್ಯಾನವನಕ್ಕೆ ಬರುವಂತಹ ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲಿ,ಪ್ಲಾಸ್ಟಿಕ್ ಕವರ್ ಕಸದ ತ್ಯಾಜ್ಯವನ್ನ ಎಲ್ಲಂದರೆ ಹಾಕ ಇಲ್ಲಿನ ಸುಂದರ ಪರಿಸರವನ್ನ ಹಾಳು ಮಾಡದಿರಿ.. ಕಸದ ತ್ಯಾಜ್ಯವನ್ನು ಹಾಕಲು ಕೆಲವು ಕಡೆ ಕಸದ ಬುಟ್ಟಿಗಳನ್ನು ಇಡಲಾಗಿದೆ.ನೀವು ತಂದಂತಹ ಪ್ಲಾಸ್ಟಿಕ್ ಬಾಟಲಿ ಕವರ್ ಎಲ್ಲವನ್ನ ಕಸದ ತೊಟ್ಟಿ ಒಳಗೆ ಹಾಕಿ ಪರಿಸರವನ್ನ ಸ್ವಚ್ಛವಾಗಿ ಇಡಲು ಪ್ರಯತ್ನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇನ್ನರ್ವಿಲ್ ಕ್ಲಬ್ ನ ಖಜಾಂಚಿ ಡಾ. ಕವಿತಾ ನಾಗೇಶ್ ಮಾತನಾಡಿ, ಮಾನವನ ಆಹಾರ ಸರಪಳಿಯಲ್ಲಿ ಪ್ರಾಣಿ-ಪಕ್ಷಿಗಳ ಪ್ರಮುಖ ಪಾತ್ರವಿದೆ. ಇಂತಹ ಪ್ರಾಣಿ ಪಕ್ಷಿ ಉಳಿವಿಗಾಗಿ ನೀರು ಕಾಳು ಆಹಾರಗಳನ್ನು‌ ಇಡುವ ಮೂಲಕ. ಪ್ರಾಣಿ ಪಕ್ಷಿಗಳ ಸಂಕುಲನ ಉಳಿಸಬೇಕಿದೆ.. ಈಗ ನಗರದಲ್ಲಿ ಸಾಕಷ್ಟು ಕೋತಿಗಳು ಆಹಾರಕ್ಕಾಗಿ ಮನೆ ಒಳಗೆ ನುಗ್ಗುತ್ತಿವೆ. ಮನೆಯ ಮೇಲೆ ಅವುಳಿಗಾಗಿನೇ ನೀರು ಆಹಾರ ಹಣ್ಣುಗಳ ಇಟ್ಟರೆ ಅವುಗಳನ್ನು ತಿಂದು ಜೀವ ಉಳಿಸಿಕೊಳ್ಳುತ್ತವೆ ಎಂದರು.. ಶುಭಸೋಮುಶೇಖರ್ ಮಾತನಾಡಿ. ಕಳೆದ ವರ್ಷವೂ ಸಹ ಇದೇ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು ಒಂದು ತಿಂಗಳ ವರೆಗೂ ನಾವು ಬಂದು ನೀರು ಕಾಳಿಗಳನ್ನು ಹಾಕುತ್ತಿದ್ದೆವು. ‌ಇಂದು ಸಹ ಇದೇ ರೀತಿಯಾಗಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ನೀರು ಕಾಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.. ಈ ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಕ್ಲಬ್ ನ ಕಾರ್ಯದರ್ಶಿ ಡಾ. ವಿದ್ಯಾಐತಾಳ್ ಸದಸ್ಯರಾದ ನೀನಾ ವಿನಯ ಕುಮಾರ್. ಮೀರಾ ರಮೇಶ್ ನಳಿನ ಬಾಬು ಯತೀಶ್ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಇದ್ದರು..
    1
    ಇನ್ನರ್ವಿಲ್ ಕ್ಲಬ್ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ..
ಇನ್ನರ್ವಿಲ್ ಕ್ಲಬ್ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ..
ಚಳ್ಳಕೆರೆ:ಈ ವರ್ಷ ಬರ, ಬೇಸಿಗೆ ಧಗೆಯ ಮಧ್ಯೆ ಪ್ರಾಣಿ ಹಾಗೂ ಪಕ್ಷಿಗಳು ಎದುರಿಸುತ್ತಿರುವ ಸಮಸ್ಯೆ ಅರಿತು  ಸಾರ್ವಜನಿಕರು ಪಕ್ಷಿ, ಪ್ರಾಣಿ ಪ್ರೀಯರು  ಅಲ್ಲಲ್ಲಿ ನೀರು, ಕಾಳಿನ ವ್ಯವಸ್ಥೆ ಕಲ್ಪಿಸಿ ಪಕ್ಷಿ ಸಂಕುಲವನ್ನು ಉಳಿಸುವಂತೆ ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷ ಅಪರ್ಣ ದೇವೆಂದ್ರಪ್ಪ ಮನವಿ ಮಾಡಿದ್ದಾರೆ
ನಗರದ ಚಿತ್ರದುರ್ಗ ರಸ್ತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇಂದು ಇನ್ನರ್ವಿಲ್ ಕ್ಲಬ್ ವತಿಯಿಂದ ಪಕ್ಷಿಗಳಿಗೆ ಕಾಳು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಉದ್ಯಾನವನದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ನಂತರ ಅವರು ಮಾತನಾಡಿದರು..
ಈಗಾಗಲೆ ಮಳೆಗಾಲ ವಾದರೂ ಮಳೆ  ಬಾರದೆ   ನೀರಿನ ತಾಣಗಳಾದ ಕೆರೆ .ಕಟ್ಟೆ. ಗೋಕಟ್ಟೆ ಸೇರಿದಂತೆ ಎಲ್ಲೂ  ನೀರು  ಸಿಗುತ್ತಿಲ್ಲಾ ಇಂದರಿಂದ ಪ್ರಾಣಿ ಪಕ್ಷಿಗಳ  ಸಾವನ್ನಪ್ಪುತ್ತಿದ್ದು ಇದರಿಂದ ಪಕ್ಷೀಯ ಸಂಕುಲ ಕ್ಷೆಣಿಸುತ್ತಿದೆ.. ಮಾನವರಾದ ನಾವು ಇದನ್ನು ಅರಿತು. ಮನೆಯ ಮೇಲೆ ಕಾಂಪೌಂಡ್ ಮೇಲೆ ಮನೆಯ ಮುಂದೆ ಪಕ್ಷಿಗಳು ಇರುವಂತಹ ಗಿಡ ಗಳನ್ನು ಗುರುತಿಸಿ ಇಂತಹ ಸ್ಥಳಗಳಲ್ಲಿ ನೀರು ಕಾಳುಗಳನ್ನು ಇಡುವ ಮೂಲಕ ಅಳಿದುಳಿದ ಪಕ್ಷಗಳ ಸಂಕುಲವನ್ನು ಉಳಿಸಬೇಕಿದೆ. ನಾವು ಎಲ್ಲ ಕಡೆನೂ ನೀರು ಇಡಲಾಗದು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರು ಅವಕಾಶ ಸಿಗು ಕಡೆ ನೀರು ಕಾಳು  ವ್ಯವಸ್ಥೆ ಮಾಡಿದರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ. 
ಪ್ರಮುಖ್ಯವಾಗಿ ಈಗ ‌ಈ ನಗರದಲ್ಲಿ ಇರುವುದು ಒಂದೇ ಉದ್ಯಾನವನ ವೃಕ್ಷ ಮಾತೇ ಸಾಲುಮರದ ತಿಮ್ಮಕ್ಕ ಉದ್ಯಾನವನ ಉದ್ಯಾನವನಕ್ಕೆ ಬರುವಂತಹ  ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲಿ,ಪ್ಲಾಸ್ಟಿಕ್ ಕವರ್ ಕಸದ ತ್ಯಾಜ್ಯವನ್ನ ಎಲ್ಲಂದರೆ ಹಾಕ ಇಲ್ಲಿನ ಸುಂದರ ಪರಿಸರವನ್ನ ಹಾಳು ಮಾಡದಿರಿ.. ಕಸದ ತ್ಯಾಜ್ಯವನ್ನು ಹಾಕಲು ಕೆಲವು ಕಡೆ ಕಸದ ಬುಟ್ಟಿಗಳನ್ನು ಇಡಲಾಗಿದೆ.ನೀವು  ತಂದಂತಹ ಪ್ಲಾಸ್ಟಿಕ್ ಬಾಟಲಿ ಕವರ್ ಎಲ್ಲವನ್ನ ಕಸದ ತೊಟ್ಟಿ ಒಳಗೆ ಹಾಕಿ ಪರಿಸರವನ್ನ ಸ್ವಚ್ಛವಾಗಿ ಇಡಲು ಪ್ರಯತ್ನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇನ್ನರ್ವಿಲ್ ಕ್ಲಬ್ ನ ಖಜಾಂಚಿ ಡಾ. ಕವಿತಾ ನಾಗೇಶ್ ಮಾತನಾಡಿ, ಮಾನವನ ಆಹಾರ ಸರಪಳಿಯಲ್ಲಿ ಪ್ರಾಣಿ-ಪಕ್ಷಿಗಳ ಪ್ರಮುಖ ಪಾತ್ರವಿದೆ. ಇಂತಹ ಪ್ರಾಣಿ ಪಕ್ಷಿ ಉಳಿವಿಗಾಗಿ ನೀರು ಕಾಳು ಆಹಾರಗಳನ್ನು‌ ಇಡುವ ಮೂಲಕ. ಪ್ರಾಣಿ ಪಕ್ಷಿಗಳ ಸಂಕುಲನ ಉಳಿಸಬೇಕಿದೆ..
ಈಗ ನಗರದಲ್ಲಿ ಸಾಕಷ್ಟು ಕೋತಿಗಳು ಆಹಾರಕ್ಕಾಗಿ ಮನೆ ಒಳಗೆ ನುಗ್ಗುತ್ತಿವೆ. ಮನೆಯ ಮೇಲೆ ಅವುಳಿಗಾಗಿನೇ ನೀರು ಆಹಾರ ಹಣ್ಣುಗಳ ಇಟ್ಟರೆ  ಅವುಗಳನ್ನು ತಿಂದು ಜೀವ ಉಳಿಸಿಕೊಳ್ಳುತ್ತವೆ ಎಂದರು..
ಶುಭಸೋಮುಶೇಖರ್  ಮಾತನಾಡಿ. ಕಳೆದ ವರ್ಷವೂ ಸಹ ಇದೇ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು ಒಂದು ತಿಂಗಳ ವರೆಗೂ ನಾವು ಬಂದು ನೀರು ಕಾಳಿಗಳನ್ನು ಹಾಕುತ್ತಿದ್ದೆವು. ‌ಇಂದು ಸಹ ಇದೇ ರೀತಿಯಾಗಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ನೀರು ಕಾಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು..
ಈ ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಕ್ಲಬ್ ನ ಕಾರ್ಯದರ್ಶಿ ಡಾ. ವಿದ್ಯಾಐತಾಳ್ ಸದಸ್ಯರಾದ ನೀನಾ ವಿನಯ ಕುಮಾರ್. ಮೀರಾ ರಮೇಶ್ ನಳಿನ ಬಾಬು ಯತೀಶ್ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಇದ್ದರು..
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ದುರಸ್ತಿ ಕುರಿತು ಸಚಿವ ಟಿ ರಘೂಮೂರ್ತಿ ಪ್ರತಿಕ್ರಿಯೆ ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ದುರಸ್ತಿ ಕುರಿತು ಸಚಿವ ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ನೆನ್ನೆ ತಾನೆ ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ಬಿರುಕು ಬಿಟ್ಟ ಬಗ್ಗೆ ಪಬ್ಲಿಕ್ ಆಪ್ ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ಚಿತ್ರದುರ್ಗದಲ್ಲಿ ಅವರು ಮಾತನಾಡಿದ್ದು ಈಗಾಗಲೇ ಈ ಸಂಬಂದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ. ಮುಂದಿನ ಕ್ಯಾಬಿನೆಟ್ ಬರಲಿದ್ದು ಡಿ ಪಿ ಆರ್ ಮಾಡಲು ತಿಳಿಸಿದ್ದೇನೆ. ಪಿ ಡಬ್ಲ್ಯೂ ಡಿ ಇಲಾಖೆ ವತಿಯಿಂದ ಡಿ ಪಿ ಆರ್ ಮಾಡಿ ಮುಂದಿನ ಸಭೆಯಲ್ಲಿ 35 ರಿಂದ 40 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರು ಡಿ ಪಿ ಆರ್ ಮಾಡಲು ನಿರ್ದೇಶನ ಕೊಟ್ಟಿದ್ದಾರೆ. ಮುಂದಿನ 15 ರ ಒಳಗೆ ಅದು ಅನುಮೋದನೆ ಆಗಿ ಟೆಂಡರ್ ಕರದು ಕಾಮಗಾರಿಗೆ ಚಾಲನೆ ಕೊಡಲಿದ್ದೇವೆ. ಸೇತುವೆ ಬಿರುಕು ಬಿಟ್ಟ ಕಡೆ ಸೂಕ್ತ ಅಧಿಕಾರಿಗಳ ತಂಡ ರಚಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಹಾಗೂ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳುವುದಾಗಿ ಟಿ ರಘೂಮೂರ್ತಿ ಅವರು ಮಾಹಿತಿ ನೀಡಿದ್ದಾರೆ.
    1
    ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ದುರಸ್ತಿ ಕುರಿತು ಸಚಿವ ಟಿ ರಘೂಮೂರ್ತಿ ಪ್ರತಿಕ್ರಿಯೆ
ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ದುರಸ್ತಿ ಕುರಿತು ಸಚಿವ ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ನೆನ್ನೆ ತಾನೆ ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ಬಿರುಕು ಬಿಟ್ಟ ಬಗ್ಗೆ ಪಬ್ಲಿಕ್ ಆಪ್ ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ 
ಚಿತ್ರದುರ್ಗದಲ್ಲಿ ಅವರು ಮಾತನಾಡಿದ್ದು ಈಗಾಗಲೇ ಈ ಸಂಬಂದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ. ಮುಂದಿನ ಕ್ಯಾಬಿನೆಟ್ ಬರಲಿದ್ದು ಡಿ ಪಿ ಆರ್ ಮಾಡಲು ತಿಳಿಸಿದ್ದೇನೆ. ಪಿ ಡಬ್ಲ್ಯೂ ಡಿ ಇಲಾಖೆ ವತಿಯಿಂದ ಡಿ ಪಿ ಆರ್ ಮಾಡಿ ಮುಂದಿನ ಸಭೆಯಲ್ಲಿ 35 ರಿಂದ 40 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರು ಡಿ ಪಿ ಆರ್ ಮಾಡಲು ನಿರ್ದೇಶನ ಕೊಟ್ಟಿದ್ದಾರೆ. ಮುಂದಿನ 15 ರ ಒಳಗೆ ಅದು ಅನುಮೋದನೆ ಆಗಿ ಟೆಂಡರ್ ಕರದು ಕಾಮಗಾರಿಗೆ ಚಾಲನೆ ಕೊಡಲಿದ್ದೇವೆ. ಸೇತುವೆ ಬಿರುಕು ಬಿಟ್ಟ ಕಡೆ ಸೂಕ್ತ ಅಧಿಕಾರಿಗಳ ತಂಡ ರಚಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಹಾಗೂ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳುವುದಾಗಿ ಟಿ ರಘೂಮೂರ್ತಿ ಅವರು ಮಾಹಿತಿ ನೀಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
  • ನಾಗೇಂದ್ರ ಇನ್ನು ಸ್ವಲ್ಪ ದಿನಗಳಲ್ಲಿ ಮೈಮೇಲಿನ ಬಟ್ಟೆ ಹರಿದುಕೊಂಡು ತಿರುಗುವ ಪರಿಸ್ಥಿತಿ ಬಂದ್ರು ಬರಬಹುದು - ಮಾಜಿ ಸಂಸದ ಸಣ್ಣ ಪಕ್ಕೀರಪ್ಪ
    1
    ನಾಗೇಂದ್ರ ಇನ್ನು ಸ್ವಲ್ಪ ದಿನಗಳಲ್ಲಿ ಮೈಮೇಲಿನ ಬಟ್ಟೆ ಹರಿದುಕೊಂಡು ತಿರುಗುವ ಪರಿಸ್ಥಿತಿ ಬಂದ್ರು ಬರಬಹುದು - ಮಾಜಿ ಸಂಸದ ಸಣ್ಣ ಪಕ್ಕೀರಪ್ಪ
    user_YSRmedia vijayanagaraupsates
    YSRmedia vijayanagaraupsates
    Mobile Phone Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    7 hrs ago
  • ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸುವುದೇ ಪ್ರಜಾಸೇವಾ ಆಂದೋಲನದ ಉದ್ದೇಶ: ಸಚಿವ ಕೆ.ಎಸ್. ಬಸವಂತಪ್ಪ ಕೂಡ್ಲಿಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನದ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಕೆ.ಎಸ್. ಬಸವಂತಪ್ಪ ಸೂಚಿಸಿದರು. ಪಟ್ಟಣದ ಎಸ್.ಎ.ವಿ.ಟಿ. ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಪ್ರಜಾಸೇವಾ ಆಂದೋಲನ ಸಭೆಯ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಕಚೇರಿಗಳ ಸುತ್ತ ಅಲೆದಾಡಿಸುವ ಬದಲು, ಆಡಳಿತವೇ ಜನರ ಬಳಿಗೆ ತೆರಳಿ ಸ್ಪಂದಿಸುವುದು ಪ್ರಜಾಸೇವಾ ಆಂದೋಲನದ ಪ್ರಮುಖ ಆಶಯವಾಗಿದೆ ಎಂದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಪ್ರಜಾಸೇವಾ ಆಂದೋಲನದ ಮೂಲಕ ತಾಲೂಕಿನ ಜನರ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತಂದು, ಸಾಧ್ಯವಾದಷ್ಟು ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರಕಿಸಲು ಅವಕಾಶ ಕಲ್ಪಿಸಲಾಗುತ್ತಿದೆ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಸಭಾ ಸ್ಥಳದಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಆಸನ ವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಇಲಾಖಾವಾರು ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ,ಡ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ವರ್ಗದ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದೆ. ಇದೀಗ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಪ್ರಜಾಸೇವಾ’ ಎಂಬ ವಿನೂತನ ಆಂದೋಲನಕ್ಕೆ ಪ್ರತ್ಯೇಕ ಇಲಾಖೆಯನ್ನು ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ರಾಜ್ಯಮಟ್ಟದಲ್ಲಿ ನಡೆಯಲಿರುವ ಪ್ರಜಾಸೇವಾ ಆಂದೋಲನಕ್ಕೆ ತಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡುತ್ತಿರುವುದು ಕ್ಷೇತ್ರದ ಜನತೆ ಹಾಗೂ ತಮ್ಮ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಆಂದೋಲನದ ಮೂಲಕ ತಾಲೂಕಿನ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಈ ವೇಳೆ ಜಿಲ್ಲಾ ಅಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಟ್ಟು 48 ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಟ್ಟು 60 ಮಳಿಗೆಗಳನ್ನು ತೆರೆಯಲಾಗುತ್ತಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಅರ್ಜಿಗಳನ್ನು ಸ್ವೀಕರಿಸಲು 30 ಕೌಂಟರ್‌ಗಳನ್ನು ಕಾಯ್ದಿರಿಸಲಾಗಿದೆ. ತಾಲ್ಲೂಕಿನ ಎಲ್ಲಾ ಮನೆಗಳಿಗೆ ಮುಖ್ಯಮಂತ್ರಿಗಳ ಸಂದೇಶ ಪತ್ರ ಹಾಗೂ ಆಹ್ವಾನ ಪತ್ರಿಕೆ ಮತ್ತು ಸ್ವೀಕೃತಿ ಪತ್ರವನ್ನು ತಲುಪಿಸಲಾಗಿದೆ. ಸಿ.ಎಂ ಸಂದೇಶ ಹಾಗೂ ಕುಂದುಕೊರತೆಗಳ ಆಹ್ವಾನ ಪತ್ರಿಕೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಕುಂದು ಕೊರತೆ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳ ಕುರಿತು ಪಟ್ಟಿ ನೀಡಲಾಗಿದೆ. ಸಾರ್ವಜನಿಕರು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಭರ್ತಿ ಮಾಡಿ ಸೆ.5ರಂದು ಬೆಳಿಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಸಾರ್ವಜನಿಕರು ನೀಡುವ ಅರ್ಜಿಗಳನ್ನು ಸ್ಥಳದಲ್ಲೇ ಡಿಜಿಟಲ್ ಹಾಗೂ ತಾಂತ್ರಿಕ ವ್ಯವಸ್ಥೆಯ ಮೂಲಕ ವಿಂಗಡಿಸಿ ತಕ್ಷಣವೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಮಟ್ಟದ ಸಿಬ್ಬಂದಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ವಿಜಯನಗರ ಸಂಸದ ಈ ತುಕಾರಾಂ, ಹೊಸಪೇಟೆ ಶಾಸಕ ಎಚ್.ಆರ್ ಗವಿಯಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಜಿಲ್ಲಾ ಅಧಿಕಾರಿ ಕವಿತಾ ಮನ್ನಿಕೇರಿ, ಎಸ್.ಪಿ ಜಾಹ್ನವಿ, ಜಿಪಂ ಸಿಇಒ ನೊಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಎಡಿಸಿ ಪಿ.ಎನ್.ಲೋಕೇಶ್, ಗ್ಯಾರಂಟಿ ಅಧ್ಯಕ್ಷ ಕುರಿಮೂರ್ತಿ, ತಹಶೀಲ್ದಾರ್ ವಿ.ಕೆ ನೇತ್ರಾವತಿ, ಇಒ ನರಸಪ್ಪ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
    1
    ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸುವುದೇ ಪ್ರಜಾಸೇವಾ ಆಂದೋಲನದ ಉದ್ದೇಶ: ಸಚಿವ ಕೆ.ಎಸ್. ಬಸವಂತಪ್ಪ
ಕೂಡ್ಲಿಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನದ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಕೆ.ಎಸ್. ಬಸವಂತಪ್ಪ ಸೂಚಿಸಿದರು.
ಪಟ್ಟಣದ ಎಸ್.ಎ.ವಿ.ಟಿ. ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಪ್ರಜಾಸೇವಾ ಆಂದೋಲನ ಸಭೆಯ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಕಚೇರಿಗಳ ಸುತ್ತ ಅಲೆದಾಡಿಸುವ ಬದಲು, ಆಡಳಿತವೇ ಜನರ ಬಳಿಗೆ ತೆರಳಿ ಸ್ಪಂದಿಸುವುದು ಪ್ರಜಾಸೇವಾ ಆಂದೋಲನದ ಪ್ರಮುಖ ಆಶಯವಾಗಿದೆ ಎಂದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಪ್ರಜಾಸೇವಾ ಆಂದೋಲನದ ಮೂಲಕ ತಾಲೂಕಿನ ಜನರ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತಂದು, ಸಾಧ್ಯವಾದಷ್ಟು ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರಕಿಸಲು ಅವಕಾಶ ಕಲ್ಪಿಸಲಾಗುತ್ತಿದೆ
ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಸಭಾ ಸ್ಥಳದಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಆಸನ ವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಇಲಾಖಾವಾರು ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ,ಡ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ವರ್ಗದ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದೆ. ಇದೀಗ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಪ್ರಜಾಸೇವಾ’ ಎಂಬ ವಿನೂತನ ಆಂದೋಲನಕ್ಕೆ ಪ್ರತ್ಯೇಕ ಇಲಾಖೆಯನ್ನು ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ರಾಜ್ಯಮಟ್ಟದಲ್ಲಿ ನಡೆಯಲಿರುವ ಪ್ರಜಾಸೇವಾ ಆಂದೋಲನಕ್ಕೆ ತಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡುತ್ತಿರುವುದು ಕ್ಷೇತ್ರದ ಜನತೆ ಹಾಗೂ ತಮ್ಮ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಆಂದೋಲನದ ಮೂಲಕ ತಾಲೂಕಿನ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಅಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಟ್ಟು 48 ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಟ್ಟು 60 ಮಳಿಗೆಗಳನ್ನು ತೆರೆಯಲಾಗುತ್ತಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಅರ್ಜಿಗಳನ್ನು ಸ್ವೀಕರಿಸಲು 30 ಕೌಂಟರ್‌ಗಳನ್ನು ಕಾಯ್ದಿರಿಸಲಾಗಿದೆ. ತಾಲ್ಲೂಕಿನ ಎಲ್ಲಾ ಮನೆಗಳಿಗೆ ಮುಖ್ಯಮಂತ್ರಿಗಳ ಸಂದೇಶ ಪತ್ರ ಹಾಗೂ ಆಹ್ವಾನ ಪತ್ರಿಕೆ ಮತ್ತು ಸ್ವೀಕೃತಿ ಪತ್ರವನ್ನು ತಲುಪಿಸಲಾಗಿದೆ. ಸಿ.ಎಂ ಸಂದೇಶ ಹಾಗೂ ಕುಂದುಕೊರತೆಗಳ ಆಹ್ವಾನ ಪತ್ರಿಕೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಕುಂದು ಕೊರತೆ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳ ಕುರಿತು ಪಟ್ಟಿ ನೀಡಲಾಗಿದೆ. ಸಾರ್ವಜನಿಕರು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಭರ್ತಿ ಮಾಡಿ ಸೆ.5ರಂದು ಬೆಳಿಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಸಾರ್ವಜನಿಕರು ನೀಡುವ ಅರ್ಜಿಗಳನ್ನು ಸ್ಥಳದಲ್ಲೇ ಡಿಜಿಟಲ್ ಹಾಗೂ ತಾಂತ್ರಿಕ ವ್ಯವಸ್ಥೆಯ ಮೂಲಕ ವಿಂಗಡಿಸಿ ತಕ್ಷಣವೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಮಟ್ಟದ ಸಿಬ್ಬಂದಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ವಿಜಯನಗರ ಸಂಸದ ಈ ತುಕಾರಾಂ, ಹೊಸಪೇಟೆ ಶಾಸಕ ಎಚ್.ಆರ್ ಗವಿಯಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಜಿಲ್ಲಾ ಅಧಿಕಾರಿ ಕವಿತಾ ಮನ್ನಿಕೇರಿ, ಎಸ್.ಪಿ ಜಾಹ್ನವಿ, ಜಿಪಂ ಸಿಇಒ ನೊಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಎಡಿಸಿ ಪಿ.ಎನ್.ಲೋಕೇಶ್, ಗ್ಯಾರಂಟಿ ಅಧ್ಯಕ್ಷ ಕುರಿಮೂರ್ತಿ, ತಹಶೀಲ್ದಾರ್ ವಿ.ಕೆ ನೇತ್ರಾವತಿ, ಇಒ ನರಸಪ್ಪ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.