ಯುವಜನರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.. ಮತದಾನದ ಹಕ್ಕಿನ ಮಹತ್ವ ಅರಿತುಕೊಳ್ಳಿ: ಸಂತೋಷ ಮ್ಯಾಗೇರಿ ಕೊಲ್ಹಾರ: ಪ್ರಜಾಪ್ರಭುತ್ವದ ತಳಹದಿಯಾಗಿರುವ ಮತದಾನದ ಹಕ್ಕಿನ ಮಹತ್ವವನ್ನು ಯುವಜನರು ಅರಿತುಕೊಂಡು, ಅರ್ಹ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು. ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ ಸಭೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ‘ಮತದಾನವು ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರ. ಅರ್ಹ ಪ್ರತಿಯೊಬ್ಬ ಯುವಕ–ಯುವತಿಯೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು, ತಮ್ಮ ಮತದಾನದ ಹಕ್ಕನ್ನು ಸಮರ್ಥವಾಗಿ ಚಲಾಯಿಸಬೇಕು. ದೇಶದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮನು ಪತ್ತಾರ ಅವರು ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕ ಎಂ.ಎಂ. ಯಂಡಿಗೇರಿ ಅವರು ಪ್ರಜಾಪ್ರಭುತ್ವದ ತಳಹದಿ ಹಾಗೂ ಅದರ ವಿವಿಧ ಪ್ರಕಾರಗಳ ಕುರಿತು ಮಾತನಾಡಿದರು. ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನ ಹಾಗೂ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಮದ್ದೀನ ಮಾತನಾಡಿ, ಶಿಕ್ಷಣವಂತ ಹಾಗೂ ಜವಾಬ್ದಾರಿಯುತ ಯುವಜನರಿಂದಲೇ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ. ಯುವಕರು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎ.ಡಿ. ಚೌವ್ಹಾಣ್ ಮಾತನಾಡಿ, ಯುವ ಸಂಸತ್ ರಚನೆಯು ವಿದ್ಯಾರ್ಥಿಗಳಿಗೆ ಸಂಸದೀಯ ವ್ಯವಸ್ಥೆ, ಚರ್ಚೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಮಹತ್ವದ ವೇದಿಕೆಯಾಗಿದೆ. ಭವ್ಯ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಜಿ. ಜಮಖಂಡಿ, ಉಪತಹಸೀಲ್ದಾರ್ ಎನ್.ಕೆ. ನದಾಫ್, ಶಿಕ್ಷಣ ಸಂಯೋಜಕ ವ್ಹಿ.ಎಚ್. ಪುರೋಹಿತ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಬಾಲಗೊಂಡ, ಎಎಸ್‌ಐ ಎಸ್.ಆರ್. ಪವಾರ, ಸಂಪನ್ಮೂಲ ವ್ಯಕ್ತಿಗಳಾದ ಸಂಗಮೇಶ ಜಂಗಮಶೆಟ್ಟಿ, ಶಿವಶರಣ ತಡಲಗಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಮೇಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಮಂಜುನಾಥ ಮಟ್ಯಾಳ ವಂದಿಸಿದರು. ವರದಿ ಭೀಮಾಶಂಕರ್ ತೆಗ್ಗಿ

- ಮುದ್ದೇಬಿಹಾಳದಲ್ಲಿ ಗಣಪತಿ ಬಸವೇಶ್ವರ ಸರ್ಕಲಿನಲ್ಲಿ ಅತಿ ವಿಜೃಂಭಣೆಯಿಂದ ಮೆರೆವಣಿಗೆ ಮೂಲಕ . ಹುಡುಕು ಕಾಲೂನಿಗೆ ಪ್ರತಿ ಸ್ಥಾಪನೆ ಮಾಡಲಾಯಿತು.1
- ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.1
- ಅದ್ದೂರಿಯಾಗಿ ಜರುಗಿದ ಹಲ್ಯಾಳ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು. ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಪ್ರವಚನ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಘತರಗಿ ಭಾಗ್ಯವತಿ ದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಿದರು. ಕುಂಭಮೇಳ: ಜಾತ್ರೆಯ ಪೂರ್ವಭಾವಿಯಾಗಿ ಕೃಷ್ಣಾ ನದಿಯಿಂದ ಹಲ್ಯಾಳ ಗ್ರಾಮದವರೆಗೆ ಮುತ್ತೈದೆಯರಿಂದ ವಿಜೃಂಭಣೆಯ ಕುಂಭಮೇಳ ನಡೆಯಿತು. ಮಹಿಳೆಯರು ಕುಂಭ ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ ಮತ್ತು ಮಹಾಭಿಷೇಕ: ಜಾತ್ರೆಯ ದಿನ ಮುಂಜಾನೆ ಶ್ರೀ ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿ ಸೋಮಣ್ಣ ಪೂಜಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ: ಶ್ರೀ ಶಿವರಾಯ ಮುತ್ಯಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದ ತಂಡಗಳು ಜಾತ್ರೆಗೆ ವಿಶೇಷ ಮೆರುಗು ನೀಡಿದವು. ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ವಿಶೇಷ ಆಚರಣೆಗಳು ಮತ್ತು ಪ್ರಸಾದ ವಿನಿಯೋಗ ಗ್ರಾಮದ ಹೃದಯಭಾಗದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೂಜಾರಿಗಳಿಂದ ಅಲಗ ಹಾಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ವೇಳೆ ದೇವರಲ್ಲಿ ಹರಕೆ ಹೊತ್ತ ಭಕ್ತರು ಶಿವರಾಯ ಮುತ್ಯಾ ಮೂರ್ತಿಗೆ ಭಂಡಾರ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ನಂತರ ಆಗಮಿಸಿದ್ದ ಸಮಸ್ತ ಭಕ್ತರು ವಿಶೇಷ ಪ್ರಸಾದ ಸ್ವೀಕರಿಸಿ ಶ್ರೀ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು. ಗಣ್ಯರ ಉಪಸ್ಥಿತಿ ಈ ಜಾತ್ರಾ ಮಹೋತ್ಸವದಲ್ಲಿ ಗುಂಡು ಹಿರೇಕುರುಬರ, ಮುತ್ತಣ್ಣ ಸನದಿ, ಮುದುಕಣ್ಣ ಶೇಗುಣಸಿ, ಕಾಕಾಸಾಹೇಬ್ ಪಾಟೀಲ, ಚಂದ್ರಕಾಂತ ಕಾಗವಾಡ, ಸಿದ್ದಪ್ಪ ಲೋಕರ, ಕಾಂತೇಶ ಬಾಗಿ, ರಾಯಪ್ಪ ಬಾಗಿ, ಅಣ್ಣಪ್ಪ ಬಾಗಿ, ಗುಳ್ಳಪ್ಪ ನಾಯಿಕ, ಸಿದ್ದು ಮಗದುಮ, ಆಕಾಶ ಬಾಗಿ, ಪರಶುರಾಮ ಡಂಗಿ ಹಾಗೂ ಸಚಿನ್ ಮೆಂಡಿಗೇರಿ ಸೇರಿದಂತೆ ಗ್ರಾಮದ ಗಣ್ಯರು, ಹಲ್ಯಾಳ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.4
- ED. IT. ಯಾವಾಗ ಬೇಕಾದರೂ ನನ್ನ ಮನೆಗೆ ಬರಬಹುದು ಸಚಿವ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ: ಕೈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಹುನ್ನಾರ ವಿಚಾರಕ್ಕೆ ಸಚಿವ ಕಾಶಪ್ಪನವರ ಪ್ರತಿಕ್ರಿಯಿಸಿದರು ಈ ಹಿಂದೆ ಬಿಜೆಪಿ ಕಾಂಗ್ರೆಸ್ನ 55 ಜನರ ಪಟ್ಟಿ ರೆಡಿ ಮಾಡಿತ್ತು ಕಾಂಗ್ರೆಸ್ ಶಾಸಕರ ಆಪರೇಷನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು ಬಿಜೆಪಿ ಪಕ್ಷಕ್ಕೆ ಸೆಳೆಯುವುದು, ಬರೋಲ್ಲ ಅಂದರೆ ಹಿಡಿ ದಾಳಿ ಅಂಜಿಕೆ ಹಾಕುವುದು ಮಾಡಿದ್ದರು. ನಾ ಬಿಜೆಪಿಗರಿಗೆ ಹೇಳಿದ್ದೇನೆ ನನ್ನ ಮೇಲೆ ಇಡಿ ಐಟಿ ದಾಳಿ ಮಾಡಿದರು ಅಂಜಿಕೆ ಇಲ್ಲ ಎಂದು ಸಚಿವ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದರು.1
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- *ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ...* 500 ಮನೆಗಳ ಕಾರ್ಯಾದೇಶ ತಡೆಹಿಡಿದಿರುವುದನ್ನು ಖಂಡಿಸಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ. #ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ... 500 ಮನೆಗಳ ಕಾರ್ಯಾದೇಶ ತಡೆಹಿಡಿದಿರುವುದನ್ನು ಖಂಡಿಸಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ.1
- ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಜಿಲ್ಲಾಡಳಿತ ಭವನದ ಎದುರು ಸರಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಕೇವಲ 5–10 ಪಡಿತರ ಚೀಟಿಗಳ ಇ-ಕೆವೈಸಿ ಇ-ಕೆವೈಸಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಪಡಿತರ ಚೀಟಿದಾರರು ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು–ಚೀಟಿದಾರರ ನಡುವೆ ವಾಗ್ವಾದ ವಿತರಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಒತ್ತಡ: ಆರೋಪ ಇ-ಕೆವೈಸಿ ಪ್ರಕ್ರಿಯೆಯಿಂದ ವಿತರಕರಿಗೆ ಮಾನಸಿಕ ಒತ್ತಡ ಹೆಚ್ಚಳ ವಿತರಕರ ಆರೋಗ್ಯದ ಮೇಲೂ ದುಷ್ಪರಿಣಾಮ: ಸಂಘದ ಆರೋಪ ಐಹೊಳೆ ಗ್ರಾಮದ ವಿತರಕಿ ಗುರುದೇವಿ ಪ್ಯಾಟಿಶೆಟ್ಟರ ಅವರಿಗೆ ಅನಾರೋಗ್ಯ: ಸಂಘದ ಉಲ್ಲೇಖ ಇ-ಕೆವೈಸಿ ಸರ್ವರ್ ಸಮಸ್ಯೆ ಕೂಡಲೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ1
- ಸೆ.17ರ ಕಪ್ಪು ಬಾವುಟದ ಹೋರಾಟದ ನಂತರವೂ ಸರ್ಕಾರ ನ್ಯಾಯ ನೀಡದೆ ನಿರ್ಲಕ್ಷ್ಯ ಮಾಡಿದರೆ, ಅಕ್ಟೋಬರ್ 02ರಂದು ಗೃಹ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು:ಶಿವಕುಮಾರ ನಾಟಿಕಾರ.! ಸೆ.17ರ ಕಪ್ಪು ಬಾವುಟದ ಹೋರಾಟದ ನಂತರವೂ ಸರ್ಕಾರ ನ್ಯಾಯ ನೀಡದೆ ನಿರ್ಲಕ್ಷ್ಯ ಮಾಡಿದರೆ, ಅಕ್ಟೋಬರ್ 02ರಂದು ಗೃಹ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು:ಶಿವಕುಮಾರ ನಾಟಿಕಾರ.!1
- ಬಡವರಿಗೆ ಅನ್ಯಾಯ ಮಾಡುತ್ತಿರುವ ಶಾಸಕ ಸುಪುತ್ರರ ಅಧಿಕಾರದ ಕಾಲ ಅಂತ್ಯಕ್ಕೆ ಬಂದಿದೆ-ಸಿದ್ದು ದೇವತ್ಕಲ ವಾಗ್ದಾಳಿ ಬಡವರಿಗೆ ಅನ್ಯಾಯ ಮಾಡುತ್ತಿರುವ ಶಾಸಕ ಸುಪುತ್ರರ ಅಧಿಕಾರದ ಕಾಲ ಅಂತ್ಯಕ್ಕೆ ಬಂದಿದೆ-ಸಿದ್ದು ದೇವತ್ಕಲ ವಾಗ್ದಾಳಿ1