Shuru
Apke Nagar Ki App…
ವಡಗೇರಿಯಲ್ಲಿ ಕಲ್ಯಾಣ ಕರ್ನಾಟಕೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ವಡಗೇರಿಯಲ್ಲಿ ಕಲ್ಯಾಣ ಕರ್ನಾಟಕೋತ್ಸವ ಆಚರಣೆ ವಡಗೇರಿ, ಸೆಪ್ಟೆಂಬರ್ 17: ವಿಕಾಸ ಅಕಾಡೆಮಿ ವಡಗೇರಿ ತಾಲ್ಲೂಕು ವತಿಯಿಂದ ಇಂದು ವಡಗೇರಿ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕೋತ್ಸವ ಆಚರಣೆ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷರಾದ ಸಿದ್ದಣ್ಣಗೌಡ ಕಾಡಂನೋರ್ ಅವರು ಧ್ವಜಾರೋಹಣ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸರಾವ್ ಕುಲಕರ್ಣಿ, ಮಲ್ಲುಗೌಡ, ಯಂಕಣ್ಣ ಬಸಂತಪೂರ್, ರಾಚಯ್ಯಸ್ವಾಮಿ, ಡಾ. ಮರೆಪ್ಪ ನಾಟೇಕಾರ್, ರಾಜಶೇಖರ್ ಕಾಡಂನೋರ್, ಕೊಂಕಲ್, ಸಿದ್ದಪ್ಪ ತಮ್ಮಣ್ಣೋರ್, ಮೈನುದ್ದೀನ್ ದೇವದುರ್ಗ, ಬಸವರಾಜ್ ಕೋಲ್ಕಾರ್, ಮೋನಪ್ಪ ವಿಶ್ವಕರ್ಮ, ಹೊನ್ನಪ್ಪ ಕಡೆಚೂರ್, ಗಂಗಣ್ಣ ವಿಶ್ವಕರ್ಮ, ಸಂತೋಷ್ ಬೊಜ್ಜಿ, ಸುದರ್ಶನ್ ನೀಲಹಳ್ಳಿ, ನಾಗಪ್ಪ ಬಸಂತಪೂರ್, ಶಿವಪ್ಪ ಡುರೇ, ಸಾಬಯ್ಯ ಗುತ್ತೇದಾರ್, ಮಲ್ಲು ಹೇರುಂಡಿ, ರಂಗಯ್ಯ ಕೋಪ್ಪುರ್, ಸುಬ್ಬಣ್ಣಗೌಡ ಕಿರದಳ್ಳಿ, ಮೋನೇಶ್ ನಾಟೇಕಾರ್, ಅಶೋಕ್ ಚಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Shivaraj Sahukar Wadagera
ವಡಗೇರಿಯಲ್ಲಿ ಕಲ್ಯಾಣ ಕರ್ನಾಟಕೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ವಡಗೇರಿಯಲ್ಲಿ ಕಲ್ಯಾಣ ಕರ್ನಾಟಕೋತ್ಸವ ಆಚರಣೆ ವಡಗೇರಿ, ಸೆಪ್ಟೆಂಬರ್ 17: ವಿಕಾಸ ಅಕಾಡೆಮಿ ವಡಗೇರಿ ತಾಲ್ಲೂಕು ವತಿಯಿಂದ ಇಂದು ವಡಗೇರಿ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕೋತ್ಸವ ಆಚರಣೆ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷರಾದ ಸಿದ್ದಣ್ಣಗೌಡ ಕಾಡಂನೋರ್ ಅವರು ಧ್ವಜಾರೋಹಣ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸರಾವ್ ಕುಲಕರ್ಣಿ, ಮಲ್ಲುಗೌಡ, ಯಂಕಣ್ಣ ಬಸಂತಪೂರ್, ರಾಚಯ್ಯಸ್ವಾಮಿ, ಡಾ. ಮರೆಪ್ಪ ನಾಟೇಕಾರ್, ರಾಜಶೇಖರ್ ಕಾಡಂನೋರ್, ಕೊಂಕಲ್, ಸಿದ್ದಪ್ಪ ತಮ್ಮಣ್ಣೋರ್, ಮೈನುದ್ದೀನ್ ದೇವದುರ್ಗ, ಬಸವರಾಜ್ ಕೋಲ್ಕಾರ್, ಮೋನಪ್ಪ ವಿಶ್ವಕರ್ಮ, ಹೊನ್ನಪ್ಪ ಕಡೆಚೂರ್, ಗಂಗಣ್ಣ ವಿಶ್ವಕರ್ಮ, ಸಂತೋಷ್ ಬೊಜ್ಜಿ, ಸುದರ್ಶನ್ ನೀಲಹಳ್ಳಿ, ನಾಗಪ್ಪ ಬಸಂತಪೂರ್, ಶಿವಪ್ಪ ಡುರೇ, ಸಾಬಯ್ಯ ಗುತ್ತೇದಾರ್, ಮಲ್ಲು ಹೇರುಂಡಿ, ರಂಗಯ್ಯ ಕೋಪ್ಪುರ್, ಸುಬ್ಬಣ್ಣಗೌಡ ಕಿರದಳ್ಳಿ, ಮೋನೇಶ್ ನಾಟೇಕಾರ್, ಅಶೋಕ್ ಚಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ1
- ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.1
- ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ತಾಳಿಕೋಟಿ ವರದಿ ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಧರಣಿ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಅವರಿಗೆ ಬಿಸಿಲಿನ ತಾಪದಿಂದ ತಲೆ ಸುತ್ತಿ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ರೈತ ಮುಖಂಡರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯ ಬಳಿಕ ಅರವಿಂದ ಕುಲಕರ್ಣಿ ಅವರು ಚೇತರಿಸಿಕೊಂಡಿದ್ದು, ಧರಣಿ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ಬರಗಾಲ ಘೋಷಣೆಯಿಂದ ಹೊರಗುಳಿದಿರುವ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಎಂದು ರೈತ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ್ ಕುಲಕರ್ಣಿ, ಉಮೇಶ್ ವಾಲಿಕಾರ್, ಬಾಲಪ್ಪ ಗೌಡ ಲಿಂಗದಳ್ಳಿ ವಿಟ್ಟಲ್ ಬಿರಾದರ್, ಮಲ್ಲನಗೌಡ ಹಗರಟಿಗಿ, ಗುರುನಾಥ್ ರೆಡ್ಡಿ, ಪವಿತ್ರ ಬಡಿಗೇರ್, ಸಾವಿತ್ರಿ ಪಂದಗನೂರ್, ಬಸ್ಸು ಮಾಲಿ ಪಾಟೀಲ್, ಗುರುಲಿಂಗಪ್ಪ ಪಡಸಲಗಿ, ಮುತ್ತು ಗೌಡ ಪರ್ಸನಳ್ಳಿ, ರಾಜು ಗೌಡ ಆನಂದ್ ರೆಡ್ಡಿ, ಶಿವಶರಣಪ್ಪ ಸಾಹುಕಾರ್ ಇನ್ನು ಅನೇಕ ರೈತ ಮುಖಂಡರು ಭಾಗಿಯಾಗಿದ್ದರು1
- ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆಗೆ ಯುವ ಕಾಂಗ್ರೆಸ್ ಒತ್ತಾಯ ಲಿಂಗಸುಗೂರು, ಸೆ.17: ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಸೊಪ್ಪಿಮಠ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಕರೆಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ‘ನಿರುದ್ಯೋಗ ದಿನ’ವಾಗಿ ಆಚರಿಸಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರಿಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಯುವಕರ ಭವಿಷ್ಯದ ದೃಷ್ಟಿಯಿಂದ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೌನೇಶ ಪೂಜಾರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖದೀರ ಪಾನವಾಲೆ, ಮಾಜಿ ಅಧ್ಯಕ್ಷರಾದ ಕುಪ್ಪಣ್ಣ ಕೌತಾಳ, ವಾಸಿಮ್ ಪಾಶಾ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.2
- ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಮಹೋತ್ಸವ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ಲಿಂಗಸುಗೂರು: ಪಟ್ಟಣದ ವಾಡಿ–7ರ ಏಕದಂತ ಗಣೇಶನ ಮಂಟಪದಲ್ಲಿ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗಸುಗೂರು ಪಟ್ಟಣದ ವಾಡಿ–7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಸಲಾಯಿತು. ನಂತರ ವಿಜೇತರಾದ ಕ್ರೀಡಾಪಟುಗಳಿಗೆ ಏಕದಂತ ಗಜಾನನ ಮಂಡಳಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಮೂರನೆ ದಿನ ಸಂಜೆ ಬಾಜಾ ಬಜಂತ್ರಿ ಯೊಂದಿಗೆ ನೃತ್ಯದೊಂದಿಗೆ ಅದ್ದೂರಿಯಾಗಿ ವಿಸರ್ಜನೆ ಕೈಗೊಳ್ಳಲಾಯಿತು.4
- ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು1
- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯಾವಾಗ? ಸಾಮಾಜಿಕ ಹೋರಾಟಗಾರ ವಿರುಪಾಕ್ಷಿ ಮಾಲಿಪಾಟೀಲ್ ಯಾದಗಿರಿ: ಸೆಪ್ಟೆಂಬರ್ 17 "ಕಲ್ಯಾಣ ಕರ್ನಾಟಕ ವಿಮೋಚನ ದಿನ" ಇದು ಕೇವಲ ಒಂದು ದಿನಾಂಕವಲ್ಲ. ನಮ್ಮ ನೆಲದ ನೋವು, ನಮ್ಮ ಜನರ ಹೋರಾಟ, ನಮ್ಮ ಹಿರಿಯರ ತ್ಯಾಗ ಮತ್ತು ನಮ್ಮ ಸ್ವಾಭಿಮಾನದ ವಿಜಯಗಾಥೆಯನ್ನು ನೆನಪಿಸುವ ಪವಿತ್ರ ದಿನವಾಗಿದೆ. ತಲೆಮಾರುಗಳ ಸಂಕಷ್ಟವನ್ನು ಹೊತ್ತುಕೊಂಡು, ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ತಮ್ಮ ಬದುಕನ್ನೇ ಹೋರಾಟಕ್ಕೆ ಸಮರ್ಪಿಸಿದ ಅಸಂಖ್ಯಾತ ಹೋರಾಟಗಾರರ ತ್ಯಾಗದ ಫಲವೇ ನಮ್ಮ ಈ ವಿಮೋಚನೆ. ಅವರ ತ್ಯಾಗವನ್ನು ನೆನಪಿಸಿಕೊಂಡಾಗ ಕಣ್ಣುಗಳು ತೇವವಾಗುತ್ತವೆ. ಆದರೆ, ಅದೇ ಕ್ಷಣದಲ್ಲಿ ಹೃದಯದಲ್ಲಿ ಒಂದು ಪ್ರಶ್ನೆಯೂ? ಮೂಡುತ್ತದೆ. ಅವರು ಕಂಡ ಕನಸಿನ ಕಲ್ಯಾಣ ಕರ್ನಾಟಕವನ್ನು ನಾವು ನಿರ್ಮಿಸಿದ್ದೇವೆಯೇ? ಇದು ಕೇವಲ ಪ್ರಶ್ನೆಯಲ್ಲ; ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನಮ್ಮ ಮಣ್ಣಿನ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ನಮ್ಮ ಯುವಕರ ಕೈಗಳಿಗೆ ಉದ್ಯೋಗ ಸಿಗಬೇಕು. ನಮ್ಮ ರೈತರ ಹೊಲಗಳಿಗೆ ನೀರು ಹರಿಯಬೇಕು. ನಮ್ಮ ತಾಯಂದಿರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ನಮ್ಮ ಗ್ರಾಮಗಳು ಅಭಿವೃದ್ಧಿಯ ಬೆಳಕಿನಲ್ಲಿ ನಗಬೇಕು. ನಮ್ಮ ಪ್ರತಿಭೆಗಳಿಗೆ ನಮ್ಮ ನೆಲದಲ್ಲಿಯೇ ಅವಕಾಶಗಳು ಸಿಗಬೇಕು. ವಿಮೋಚನೆ ನಮಗೆ ಇತಿಹಾಸವನ್ನು ಕೊಟ್ಟಿದೆ; ಅಭಿವೃದ್ಧಿ ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕೊಡಬೇಕು. ನಮ್ಮ ಹಿರಿಯರು ನಮಗೆ ಸ್ವಾಭಿಮಾನದ ನೆಲವನ್ನು ಕೊಟ್ಟರು. ನಾವು ನಮ್ಮ ಮಕ್ಕಳಿಗೆ ಸಮೃದ್ಧಿಯ ನೆಲವನ್ನು ಕೊಡುವ ಸಂಕಲ್ಪ ಮಾಡೋಣ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯಾವುದೋ ಒಂದು ಸರ್ಕಾರದ, ಒಂದು ವ್ಯಕ್ತಿಯ ಅಥವಾ ಒಂದು ಕಾಲಘಟ್ಟದ ಜವಾಬ್ದಾರಿಯಲ್ಲ. ಇದು ನಮ್ಮೆಲ್ಲರ ಕನಸು, ನಮ್ಮೆಲ್ಲರ ಕರ್ತವ್ಯ. ಈ ಮಣ್ಣಿನ ಪ್ರತಿಯೊಂದು ಕಣ್ಣೀರಿಗೂ ಬೆಲೆ ಸಿಗಲಿ, ಪ್ರತಿಯೊಂದು ಬೆವರಿನ ಹನಿಗೂ ಫಲ ಸಿಗಲಿ, ಪ್ರತಿಯೊಂದು ಯುವ ಕನಸಿಗೂ ರೆಕ್ಕೆಗಳು ಮೂಡಲಿ ಎಂದು ಆಶಿಸುತ್ತೇನೆ. ಪ್ರತಿಯೊಂದು ಮನೆಯಲ್ಲೂ ಅಭಿವೃದ್ಧಿಯ ನಗು ಅರಳಲಿ, ವಿಮೋಚನೆಗಾಗಿ ಹೋರಾಡಿದ ಮಹನೀಯರಿಗೆ ಶತ ಶತ ನಮನಗಳು. ಅವರ ತ್ಯಾಗದ ಜ್ಯೋತಿ ಎಂದಿಗೂ ಆರದಿರಲಿ, ಅವರ ಕನಸುಗಳ ಕಲ್ಯಾಣ ಕರ್ನಾಟಕ ನಿರ್ಮಾಣವಾಗಲಿ, ಅಭಿವೃದ್ಧಿಯ ಪರ್ವ ನಿಲ್ಲದೆ, ಇನ್ನಷ್ಟು ವೇಗವಾಗಿ, ಇನ್ನಷ್ಟು ದೂರವಾಗಿ ಮುಂದುವರಿಯಲಿ, ಇದೇ ನನ್ನ ಹೃದಯದಾಳದ ಆಶಯ. ವಿಮೋಚನೆಯ ಹೆಮ್ಮೆ ನಮ್ಮದಾಗಲಿ, ಅಭಿವೃದ್ಧಿಯ ಭವಿಷ್ಯವೂ ನಮ್ಮದಾಗಲಿ, ಸಮೃದ್ಧ ಕಲ್ಯಾಣ ಕರ್ನಾಟಕ ನಮ್ಮೆಲ್ಲರ ಸಂಕಲ್ಪವಾಗಲಿ. ಜೈ ಕಲ್ಯಾಣ ಕರ್ನಾಟಕ 🙏 ಜೈ ಕರ್ನಾಟಕ ಇಂತಿ ನಿಮ್ಮ ವಿಶ್ವಾಸಿ ಸಾಮಾಜಿಕ ಹೋರಾಟಗಾರ ವಿರುಪಾಕ್ಷಿ ಮಾಲಿಪಾಟೀಲ್ ಗುರುಮಠಕಲ್1
- ಯಾದಗಿರಿ ನಾಳೆ ಸೆಪ್ಟೆಂಬರ್ 17 ರಂದು ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಜಯಂತಿಯ ಶುಭಾಶಯಗಳು ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಇವರ ಶ್ರಮ ದಿಂದ ವಿಶ್ವಕರ್ಮ ಜಯಂತಿಯ ಆಚರಿಸುವಂತೆ ಅದು ಸೆಪ್ಟೆಂಬರ್ 17 ರಂದು ವಿಶ್ವಕರ್ಮರ ಹಬ್ಬ ಅಂತೆ ಮನೆ ಮನೆಯಲ್ಲಿ ವಿಶ್ವಕರ್ಮರು ಭಾವಚಿತ್ರಕ್ಕೆ ಪೂಜ್ಯ ಮಾಡಲು ಸೃಷ್ಟಿಕರ್ತನಾದ ಪ್ರೀತಿ ನಂಜುಂಡಿ ಇವರ ಶ್ರಮ1
- ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ ನಿಯಮಿತ ಇದರ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು. ತಾಳಿಕೋಟಿ ವರದಿ ಲಿಂಗದಹಳ್ಳಿ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ. ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಆರಂಭಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀಮತಿ ಸೌಮ್ಯ ಆರ್.ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ ಸಂಘದ ಒಂದು ವರ್ಷದ ಚಟುವಟಿಕೆಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಹಾಜರಿದ್ದ ಶೇರುದಾರರು ಸಂಘದ ಅಭಿವೃದ್ಧಿಗಾಗಿ ಕೆಲವು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು. ಅಧ್ಯಕ್ಷತೆ ವಹಿಸಿದ ಬಸನಗೌಡ ಬಸರಕೋಡ ಅವರು ಮಾತನಾಡಿ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು. ಶಿಕ್ಷಕ ಅಪ್ಪಸಾಹೇಬಗೌಡ ಮೂಲಿಮನಿ ಕಾರ್ಯಕ್ರಮವನ್ನು ಸುಂದರವಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಇವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ , ಗಂಗಮ್ಮ ನಾಡಗೌಡ ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ,ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.1