Shuru
Apke Nagar Ki App…
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು
MAHESH
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು
More news from ಕರ್ನಾಟಕ and nearby areas
- ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು1
- ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು. “ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ ಶುಭ ಹಾರೈಸಿದರು. ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.1
- BSSK ಬಚಾವ್ ಹೋರಾಟದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಭಾಷಣ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ1
- ಅಫಜಲಪುರ ತಾಲೂಕಿನ ಚೌಡಾಪುರ ಬ್ರಿಡ್ಜ್ ಹತ್ತಿರ ಶಿವಕುಮಾರ ನಾಟೀಕಾರ ಅವರನ್ನು ಹಾಗೂ ಸ್ವಾಭಿಮಾನಿ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ ಅಫಜಲಪುರ ತಾಲೂಕಿನ ಚೌಡಾಪುರ ಬ್ರಿಡ್ಜ್ ಹತ್ತಿರ ಶಿವಕುಮಾರ ನಾಟೀಕಾರ ಅವರನ್ನು ಹಾಗೂ ಸ್ವಾಭಿಮಾನಿ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ1
- ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ.! ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ.!1
- ಇಂಚೂರ ಬಳಿ ಡಾ: ಚನ್ನಬಸವ ಪಟ್ಟದ್ದೆವರು ಟ್ರೀ ಪಾರ್ಕ್ ಲೋಕಾರ್ಪಣೆ ಭಾಲ್ಕಿ: ಇಂಚೂರ ಬಳಿ ಡಾ: ಚನ್ನಬಸವ ಪಟ್ಟದ್ದೆವರು ಟ್ರೀ ಪಾರ್ಕ್ ಲೋಕಾರ್ಪಣೆ1
- ಕುಂಚಾವರಂನಲ್ಲಿ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರವೇಶ ಕಾರ್ಯಕ್ರಮಕ್ಕೆ ಶಾಸಕರು ಅವಿನಾಶ್ ಜಾಧವ ಚಾಲನೆ ನೀಡಿದರು ಚಿಂಚೋಳಿ: ಕುಂಚಾವರಂ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ವತಿಯಿಂದ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್ ಉದ್ಘಾಟಿಸಿದರು. ಶಾಲೆಯ ಪ್ರಾಂಶುಪಾಲ ಪ್ರಭುರಾಜ ಸೇರಿದಂತೆ ಗೋಪಾಲರಾವ ಕಟ್ಟಿಮನಿ, ವಿಜಯಕುಮಾರ್ ಚಂಗಟ್ಟಿ, ಶ್ರೀಮಂತ ಕಟ್ಟಿಮನಿ, ಕೆ.ಎಂ. ಭೀಮಶಟ್ಟಿ ಮೂರಡಾ, ಅಶೋಕಕುಮಾರ್ ಮೂಗದಂಪೂರ, ವೆಂಕಟರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಸಕರು ಮಾತನಾಡಿ, ಗಡಿಭಾಗದಲ್ಲಿ ಸುಮಾರು ₹9 ಕೋಟಿ ಅನುದಾನದಲ್ಲಿ ವಸತಿ ಶಾಲೆ ನಿರ್ಮಾಣವಾಗಿರುವುದು ಸಂತಸದ ಸಂಗತಿ. ಜಿಲ್ಲೆಯ 43 ವಸತಿ ಶಾಲೆಗಳ ಪೈಕಿ ಈ ಶಾಲೆ 3ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮಕ್ಕೆ ಗೈರಾಗಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ವೈಯಕ್ತಿಕ ಲೆಟರ್‌ಪ್ಯಾಡ್ ಮೂಲಕ ನೋಟಿಸ್ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಪಡೆಯುವುದಾಗಿ ತಿಳಿಸಿದರು.3
- ಕಲಬುರಗಿ: ಅನುಮತಿ ಇಲ್ಲದೆ ರಾತ್ರೋ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಕಲಬುರಗಿ- ಮಾಜಿ ಸಿಎಂ ಸಿದ್ದರಾಮಯ್ಯ ನವರ ಪ್ರತಿಮೆಯನ್ನು ರಾತ್ರೋರಾತ್ರಿ ಸ್ಥಾಪಿಸಿದ ಘಟನೆ ನಗರದ ಹೈಕೋರ್ಟ್ ಕ್ರಾಸ್ ಬಳಿ ನಡೆದಿದೆ. ಯಾವುದೇ ಅನುಮತಿ ಪಡೆಯದೇನೆ ಸುಮಾರು ಏಳೆಂಟು ಜನರಿಂದ ರಾತ್ರೋ ರಾತ್ರಿ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆಯೂ ಇದೆ ತರಹ ರಾತ್ರೋ ರಾತ್ರಿ ಸಿದ್ದರಾಮಯ್ಯ ಭಾವಚಿತ್ರದ ಬ್ಯಾನರ್ ಅಳವಡಿಸಿ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೆ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಿದ್ರು ಈ ಹಿಂದೆಯೋ ಸಿದ್ದರಾಮಯ್ಯ ಸರ್ಕಲ್ ಮಾಡೋದಕ್ಕು ಅನುಮತಿ ಪಡೆಯದೇನೆ ನಿರ್ಮಾಣ ಮಾಡಲಾಗಿತ್ತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಇದಿಗಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲಬುರಗಿ ಪ್ರವಾಸದಲ್ಲಿರುವಾಗ್ಲೆ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಟಾಪನೆ ಮಾಡಿದ ಸರ್ಕಲ್ ನಿಂದಲೇ ಸಿಎಂ ಡಿಕೆಶಿ ಅಫಜಲಪುರಕ್ಕೆ ತೇರಳಲಿರುವರು.ಅನುಮತಿಯಿಲ್ಲದೆ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಿದ ಹಿನ್ನಲೆ ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತೆ ಅನ್ನೋದೆ ಕೂತುಹಲ ಮೂಡಿದೆ2