ಸಾವಿರಾರು ಮಕ್ಕಳ ಬದುಕಿನಲ್ಲಿ ಜ್ಞಾನದ ಬೆಳಕಾದ ಬೆಳಗೆರೆ ಕೃಷ್ಣ ಶಾಸ್ತ್ರಿಗಳು. . ಚಳ್ಳಕೆರೆ:ಶಿಕ್ಷಕ ವೃತ್ತಿ ಅನ್ನೋದು ಸಾವಿರಾರು ಮಕ್ಕಳ ಬದುಕಿನಲ್ಲಿ ಜ್ಞಾನದ ಬೆಳಕನ್ನು ಹಂಚುವ ಮೂಲಕ ಸಮಾಜವನ್ನು ಉನ್ನತೀಕರಿಸುವ ಪವಿತ್ರ ವೃತ್ತಿಯಾಗಿದೆ. ಅಂತಹ ಸುಧೀರ್ಘ 34 ವರ್ಷಗಳ ಪವಿತ್ರ ವೃತ್ತಿಗೆ ವಿದಾಯ ಹೇಳಿ ನಿವೃತ್ತಿಯಾದ ಆರ್. ಸರೋಜಮ್ಮ ಅವರ ಮುಂದಿನ ಜೀವನ ಸಂತಸಮಯ ಆಗಿರಲಿ ಅನ್ನೋದು ಸೀತಾರಾಮಶಾಸ್ತ್ರಿ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಆಶಯವಾಗಿದೆ . ಹಾಗೂ ಈ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪ ಹಾಗುವುದರ ಜತೆಗೆ ಸಂಸ್ಕಾರಕವನ್ನು ಕಲಿಸಿದೆ.ಎಂದು ಶ್ರೀ ಶಾರದಾ ಮಂದಿರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ ರಾಜಣ್ಣ ಹೇಳಿದರು.. ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ನಾರಾಯಣಪುರ ಶ್ರೀ ಶಾರದಾ ಮಂದಿರ ವಿದ್ಯಾ ಸಂಸ್ಥೆ ಇವರ ವತಿಯಿಂದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಿ ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿಗೊಂಡ ಆರ್ ಸರೋಜಮ್ಮ ಇವರಿಗೆ ಬಿಳ್ಕೊಡುಗೆ ಸಮಾರಂಭ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ನಾಡಿದರು..... ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಗೊಂಡ ಆರ್ ಸರೋಜಮ್ಮ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಂಸ್ಥೆ ತೆರೆಯುವ ಮೂಲಕ ಈ ಭಾಗದ ನೂರಾರು ಬಡ ಮಕ್ಕಳ ಬದುಕಿಗೆ ದಾರಿದೀಪವಾದ ಕೃಷ್ಣಶಾಸ್ತ್ರಿಜಿ ಅವರನ್ನು ಎಂದೂ ಮರೆಯುವಂತಿಲ್ಲ.. ನಾನು ಸಹ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಗೊಂಡಿರುವುದು ನನಗೆ ಹೆಮ್ಮೆಯಾಗಿದೆ.. ಕಾಲೇಜು ಪ್ರಾರಂಭದ ದಿನಗಳಿಂದಲೂ ಇಲ್ಲಿಯವರೆಗೆ ಇಲ್ಲಿ ಉತ್ತಮವಾದ ವಾತಾವರಣ ಕಲ್ಪಿಸಿದ್ದ ನಮ್ಮ ಕೃಷ್ಣ ಶಾಸ್ತ್ರಿ ನಾವೆಲ್ಲರೂ ನಾವೆಲ್ಲರೂ ಚಿರಋಣಿ ಆಗಿದ್ದೇವೆ. ಉತ್ತಮವಾದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಇಂದು ಬರುತ್ತಿರುವುದು ಸಂತಸ ತಂದಿದೆ ಎಂದರು.. ಇದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಶಿಲ್ಪ ಮುರಳಿಧರ್ ಮಾತನಾಡಿ. ಶಿಕ್ಷಣದಿಂದ ಯಾರು ಸಹ ವಂಚಿತರಾಗಬಾರದು ಎಂಬ ಮುಂದಾಲೋಚನೆ ಹಾಗೂ ಸದುದ್ದೇಶದಿಂದ ಬೆಳಗೆರೆ ಹೊರವಲಯದಲ್ಲಿ 1967ರಲ್ಲಿ ಪ್ರೌಢಶಾಲೆ ಹಾಗೂ 1991ರಲ್ಲಿ ಪದವಿ ಕಾಲೇಜು ಆರಂಭ ಮಾಡಿದ್ರು. ಇಲ್ಲಿ ವಾಣಿಜ್ಯ ಹಾಗೂ ಕಲಾವಿಭಾಗಗಳು ಇದ್ದು, ಇದುವರೆಗೂ ಸಾವಿರಾರು ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮುಗಿಸಿ ತಮ್ಮ ಉಜ್ವಲವಾದ ಬದುಕು ಕಟ್ಟಿಕೊಂಡಿದ್ದಾರೆ. ವಿಶೇಷ ಅಂದರೆ ಹೆಚ್ಚಾಗಿ ಕಲ್ಯಾಣ ಕರ್ನಾಟಕದ ಮಕ್ಕಳು ಇಲ್ಲಿ ವಿದ್ಯಾಭಾಸ ಮಾಡಲು ಬರುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಬರುವ ಎಲ್ಲ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಗ್ರಂಥಾಲಯ, ಓದಲು ಅನುಕೂಲಕರವಾದ ವಾತಾವರಣ ಕಲ್ಪಿಸಲಾಗಿದೆ. ಸದ್ಯ ಈ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ 80 ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕದ ಮಕ್ಕಳಿದ್ದಾರೆ. ಈ ಬಾರಿ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಇನಷ್ಟು ಹೆಚ್ಚಿಸಿದ್ದಾರೆ. ಅಂತಹ ಪ್ರತಿಭಾನ್ವಿತ ಮಕ್ಕಳಿಗೆ ಇಂದು ಪ್ರತಿಭಾ ಪುರಸ್ಕಾರ ಹಾಗೂ ಧನ ಸಹಾಯ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇಂದು ನಿವೃತ್ತಿ ಪ್ರಾಶುಪಾಲೆ ಸರೋಜಮ್ಮ ಅವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ನಾನು ಸಹ ಬಂದಿದ್ದು ಸಂತಸ ತಂದಿದೆ ನಾನು ಸಹ ಇದೇ ಶಾಲೆಯಲ್ಲಿ ಓದಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು... ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿನಿ ಕಾಪರಹಳ್ಳಿ ಭಾಗ್ಯಮ್ಮ,ಹೇಮಣ್ಣ, ಸಾಹಿತಿ ಹಾಗೂ ಉಪನ್ಯಾಸಕ ವೆಂಕಟ್ರಮಣ,ಮಾತನಾಡಿದರು. ಈ ವೇಳೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ನಂತರ ಸಂಸ್ಥೆ ವತಿಯಿಂದ ಹಾಗೂ ಕಾಲೇಜು ವತಿಯಿಂದ ಶಾಲಾ ಆಡಳಿತ ವತಿಯಿಂದ ಹಳೆಯ ವಿದ್ಯಾರ್ಥಿಗಳಿಂದ ನಿವೃತ್ತಿ ಗುಂಡ ಸರೋಜಮ್ಮ ಅವರಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು.. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಭಾರ ಕಾರ್ಯದರ್ಶಿ ಎಚ್ .ಮಂಜುನಾಥ, ನಿವೃತ್ತಿ ನೌಕರರಾದ ಗೋಪಾಲ್ ,ವೆಂಕಟ್,ಶ್ರೀಪಾದ್ ಪುಜಾರ್ ಪ್ರಾಶುಪಾಲರಾದ ಚನ್ನಕೇಶವ, ಟಿ ತಿಪ್ಪೇಸ್ವಾಮಿ(ಜಿಎಸ್ ಟಿ) ವಿಜಯಕುಮಾರ್ , ನಿ.ಉಪನ್ಯಾಕ ರಂಗಸ್ವಾಮಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್ ವೀರಣ್ಣ, ಹಳೆಯ ವಿದ್ಯಾರ್ಥಿಗಳಾದ ಬೆಳಗೆರೆ ಸುರೇಶ,ರಾಘುವೇಂದ್ರ,ಪೈರೋಜ್ ಖಾನ್ ಆರ್.ಮಂಜುಳ,ಬಸವರಾಜ್, ಚಿತ್ತಪ್ಪ ,ಕಮಲಾಕ್ಷ್ಕಿ, ಬಿಎಲ್ ಗಾಯತ್ರಿ,ಜಾನಕಿ,ಮುದ್ದುರಂಗಮ್ಮ ಹಾಗೂ ಕಾಲೇಜಿನ ಸೇರಿದಂತೆ ಉಪನ್ಯಾಸಕರು ಹಾಗೂ ಪ್ರೌಢಶಾಲೆಯ ಶಿಕ್ಷಕರು ಶಿಕ್ಷಕಿಯರು ಹಾಗೂ ಹಳೆಯ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪೋಷಕರು ಇದ್ದರು...

- ಬೆಳಗೆರೆ ನ್ಯೂಸ್Chitradurga, Karnataka👏on 5 August
- ನಮಸ್ತೆ 🙏ಕರ್ನಾಟಕ ನಮಸ್ತೆ ವೀಕ್ಷಕರೇ H t m ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ ನಾಟಿ ವೈದ್ಯ )1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿಗೆ ರಾಷ್ಟçಪತಿ ಅಗಮನ-ದೆಹಲಿಯ ಭದ್ರತಾ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆಗಳ ಪರಿಶೀಲನೆ-ಕಾರ್ಯಕ್ರಮದ ಸ್ಥಳದ ಸಿದ್ಧತೆಗಳ ಬಗ್ಗೆ ಎ.ಎಸ್.ಎಲ್ ಸಭೆ • ರಾಷ್ಟçಪತಿಗಳ ಅಗಮನ-ಎ.ಎಸ್.ಎಲ್ ಸಭೆಗೆ ಸಾರಿಗೆ-ಅರಣ್ಯಾಧಿಕಾರಿಗಳ ಗೈರು-ನೋಟಿಸ್ ನೀಡಲು ಜಿಲ್ಲಾಧಿಕಾರಿ ಡಾ ಕುಮಾರ್ ಸೂಚನೆ ಮಳವಳ್ಳಿ:ಭಾರತದ ಘನತ್ತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಡಿಸೆಂಬರ್ ೧೬ ರಂದು ಮಳವಳ್ಳಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಭದ್ರತಾ ವಿಭಾಗದ ಅಧಿಕಾರಿ ಧನಂಜಯ್ ಕುಮಾರ್, ಕೇಂದ್ರ ಗುಪ್ತಚರ ಅಧಿಕಾರಿಗಳಾದ ವಿಶಾಲ್ ಅವರ ನೇತೃತ್ವದಲ್ಲಿ ಶನಿವಾರ ಜಿಲ್ಲಾಢಳಿತದ ಮತ್ತು ತಾಲೂಕು ಆಢಳಿತದ ಅದಿಕಾರಿಗಳೊಂದಿಗೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಎ.ಎಸ್.ಎಲ್ ಸಭೆ ನಡೆಸಿದರು. ಸಭೆಯಲ್ಲಿ ರಾಷ್ಟçಪತಿಗಳು ಬರುವ ಮುನ್ನ ಕೈಗೊಳ್ಳಬೇಕಾದ ಕಾನೂನು ಕ್ರಮಗಳು,ತುರ್ತು ಸೇವೆ,ಹೆಲಿಪ್ಯಾಡ್ ಮತ್ತು ವೇದಿಕೆ ಕಾರ್ಯಕ್ರಮದ ಭದ್ರತೆ ಕರ್ತವ್ಯಗಳ ಬಗ್ಗೆ ಭದ್ರತಾ ಅದಿಕಾರಿ ಧನಂಜಯ್ ಕುಮಾರ್ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ ಕುಮಾರ ಮಳವಳ್ಳಿ ಯಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಸ್ಧಳದಲ್ಲಿ ಗ್ರೀನ್ ರೂಮ್, ಹೆಲಿಪ್ಯಾಡ್ ಸುತ್ತಾ ಬ್ಯಾರಿಕೇಡ್ ನಿರ್ಮಾಣ ಹಾಗೂ ರೆಡ್ ಕಾರ್ಪೆಟ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಲು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು. ರಾಷ್ಟ್ರಪತಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷ ಎದುರಾಗದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು.ಪ್ರತಿಯೊಂದು ಜಾಗ,ವಸ್ತುಗಳು,ಬಳಸುವ ಉಪಕರಣಗಳು ತಪಾಸಣೆ ನಡೆಸಬೇಕು, ಕಾರ್ಯಕ್ರಮ ಸಂಪೂರ್ಣವಾಗಿ ಮುಗಿಯುವವರೆಗೂ ಎಲ್ಲಿಯೂ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಜಾಗಗಳಲ್ಲಿ ಅಗ್ನಿಶಾಮಕ ದಳದ ವಾಹನಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಗಣ್ಯರು ಸಂಚರಿಸುವ ಮಾರ್ಗದ ರಸ್ತೆಗಳು ಸ್ವಚ್ಚತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬ್ಯುಲೆನ್ಸ್ ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಉಪಹಾರ, ಕುಡಿಯುವ ನೀರು ಹಾಗೂ ಸ್ನಾಕ್ಸ್ ಗಳನ್ನು ನೀಡುವ ಮೊದಲು ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ಮಾಡಬೇಕು ಎಂದ ಅವರು ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಆಗದಂತೆ ಶಿಸ್ತುಪಾಲನೆಯಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಗುರುತಿನ ಪತ್ರ : ರಾಷ್ಟçಪತಿಗಳ ಕಾರ್ಯಕ್ರಮದಲ್ಲಿ ಕರ್ತವ್ಯ ನಿವರ್ಬಹಿಸುವ ಅಧಿಕಾರಿಗಳು ಕಡ್ಡಾಯವಾಗಿ ಸಂಭAದಪಟ್ಟ ಭದ್ರತಾ ಅದಿಕಾರಿಗಳಿಂದ ಪಡೆದ ಗುರುತುನ ಪತ್ರ ಹಾಕಿರಬೇಕು,ಇದರಲ್ಲಿ ಲೋಪವಾಗಬಾರದು, ಸಾರಿಗೆ ಅದಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್: ತುರ್ತು ಸಭೆ ಇದೆ ಮಾಹಿತಿ ನೀಡಿದ್ದರೂ ನಿಗಧಿತ ಸಮಯಕ್ಕೆ ಸಭೆಗೆ ಹಾಜರಾಗದ ಸಾರಿಗೆ ಅದಿಕಾರಿಗಳಿಗೆ ಮತ್ತು ಅರಣ್ಯ ಇಲಖೆಯ ಎಸಿಎಪ್,ಡಿಸಿಎಪ್ ,ವಲಯ ಅರಣ್ಯ ಅದಿಕಾರಿಗಳು ಸಭೆಗೆ ಅಗಮಿಸದೆ ಕಛೇರಿಯ ಸಿಬ್ಬಂದಿಯನ್ನು ಕಳುಹಿಸಿರುವುದಕ್ಕೆ ಕುಪಿತಗೊಂಡ ಜಿಲ್ಲಾಧಿಕಾರಿ ಡಾ ಕುಮಾರ್ ಇವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು. ಹೆಲಿಪ್ಯಾಡ್ ಸ್ಥಳಕ್ಕೆ ಮಾದ್ಯಮಕ್ಕ ನಿರ್ಭಂದ:ರಾಷ್ಟçಪತಿಗಳು ಅಗಮಿಸುವ ಹೆಲಿಪ್ಯಾಡ್ ಬಳಿ ಮಾದ್ಯಮದವರನ್ನು ನಿರ್ಭಂದಿಸಲಾಗಿದೆ,ಜಿಲ್ಲಾಢಳಿತದಿAದ ನಿಯೋಜನೆ ಮಾಡಿದ ಓರ್ವ ಪೋಟೋ ಗ್ರಾಪರ್ ಮತ್ತು ವೀಡಿಯೋ ಗ್ರಾಪರ್‌ಗೆ ಮಾತ್ರ ಹೆಲಿಪ್ಯಾಡ್ ಬಳಿ ಅವಕಾಶವಿದೆ.ಅದನ್ನು ಹೊರೆತು ಪಡಿಸಿ ಮಾದ್ಯಮದವರಿಗೆ ಇರುವುದಿಲ್ಲ.ಕಾರ್ಯಕ್ರಮದ ಬಳಿ ಅವಕಾಶ ನೀಡಲಾಗಿದೆ,ಅದರಲ್ಲೂ ಮಾದ್ಯಮ ಅಕಾಡೆಮಿಯಿಂದ ಅಧಿಕೃತ ಗುರುತಿನ ಪತ್ರ ಇರುವವರಿಗೆ ರಾಷ್ಟçಪತಿಗಳ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿದೆ.ಅದನ್ನು ಹೊರೆತು ಪಡಿಸಿ ಉಳಿದವರಿಗೆ ಹೊರಗಡೆ ಇರುವ ಮೀಡಿಯಾ ಗ್ಯಾಲರಿಯಲ್ಲಿ ಅವಕಾಶ ನೀಡಲಾಗಿದ್ದು ಅವರು ಸಹ ಪೋಲಿಸ್ ಇಲಾಖೆಯಿಂದ ಗುರುತಿನ ಪತ್ರ ಪಡೆಯಬೇಕಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಉಪವಿಬಾಘಾದಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್,ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು,ಜಯಂತಿ ಮಹೋತ್ಸವದ ಸಮಿತಿಯ ವಿದ್ಯಾಪೀಠದ ಅದಿಕರಿಗಳು, ಉಪಸ್ಥಿತರಿದ್ದರು. ಮಳವಳ್ಳಿಯಲ್ಲಿ ರಾಷ್ಟçಪತಿಗಳ ಭದ್ರತಾ ಅದಿಕಾರಿಗಳ ಎ.ಎಸ್.ಎಲ್ ಸಭೆಯ ಚಿತ್ರ1
- ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಮೈಲಾಪುರ ಗ್ರಾಮದಲ್ಲಿರುವ ದಲಿತ ಸಮುದಾಯಕ್ಕೆ ಹಲವಾರು ದಶಕ ಗಳಿಂದ ಸಿಗಬೇಕಾದ ಸವಲತ್ತುಗಳು ಧಕ್ಕು ತ್ತಿಲ್ಲ. ಇದರಿಂದ ದಲಿತರು ಪರಿತಪಿಸುವಂತಾಗಿದೆ ಎಂದು ಜಾಂಬವ ಯುವ ಸೇನಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ರಮೇಶ್ ಚಕ್ರವರ್ತಿ ತಿಳಿಸಿದರು. ನಗರದ ತಾಲೂಕು ಕಚೇರಿ ಆವರಣದಲ್ಲಿ ಮೈಲಾಪುರ ಗ್ರಾಮದ ದಲಿತರ ಸಮಸ್ಯೆಗಳ ಪರಿಹಾರಕ್ಕಾಗಿ ಹಮ್ಮಿಕೊಂಡಿದ್ದ ತಮಟೆ ಚಳುವಳಿ ವೇಳೆ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೂ ತಮ್ಮ ಸವಲತ್ತುಗಳಿಗಾಗಿ ದಲಿತರು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪ್ರಮುಖವಾಗಿ ರಾಜಕೀಯ ಮಾಡುವ ರಾಜಕಾರಣಿಗಳು ಸಹ ದಲಿತರ ಅಭಿವೃದ್ಧಿಗೆ ಮುಂದಾಗಿಲ್ಲ. ನಮ್ಮಿಂದ ಮತ ಪಡೆದು ಗೆದ್ದು ಅಧಿಕಾರ ಮಾಡುವ ಶಾಸಕರು, ಸಚಿವರಲ್ಲಿ ನಾವು ಯಾವುದೇ ರೀತಿಯ ರಾಜಕೀಯ ಸ್ಥಾನಮಾನ ಕೇಳಲ್ಲ. ಆದರೆ ಕೇಳುವ ಮೂಲಭೂತ ಸೌಕರ್ಯ ಗಳನ್ನು ಸಹ ಕಲ್ಪಿಸುವ ಗೋಜಿಗೆ ಹೋಗಲ್ಲ. ಮೈಲಾಪುರ ಗ್ರಾಮದಲ್ಲಿ ದಲಿತರಿಗೆ ವಸತಿ ಯೋಜನೆ ಹಕ್ಕುಪತ್ರ ಕೊಟ್ಟಿಲ್ಲ. ಸಮು ದಾಯಕ್ಕೆ ರುದ್ರ ಭೂಮಿ ಇಲ್ಲ, ಅಂಬೇಡ್ಕರ್ ಭವನ ಇಲ್ಲ. ಮುಖ್ಯವಾಗಿ ಸರ್ವೇ ನಂಬರ್ 5/1ರಲ್ಲಿ ಏಳು ಗುಂಟೆ ಗೋಮಾಳ ಜಮೀ ನಿದ್ದು ಇದರ ಜೊತೆಗೆ 1 ಎಕರೆ ಪ್ರದೇಶವನ್ನು ಸೇರಿಸಿ ಸಮುದಾಯ ಭವನ, ರುದ್ರಭೂಮಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು. ಒಂದು ವೇಳೆ 15 ದಿನದಲ್ಲಿ ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ತಾಲೂಕು ಕಚೇರಿ ಎದುರು ಉಪವಾ ಸತ್ಯಾ ಗ್ರಹ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು. ಮಹದೇವಪುರ ಕ್ಷೇತ್ರದ ತಾಲೂಕು ಅಧ್ಯಕ್ಷ ಕುಮಾರ್, ಹೊಸಕೋಟೆ ತಾಲೂಕು ಕಾರ್ಯದರ್ಶಿ ಸಂತೋಷ್, ಪದಧಿಕಾರಿ ಗಳಾದ ವಿಜಯ್, ಕೋಲಾರ ಅಚ್ಚುತ್ ಮೂರ್ತಿ, ರಮೇಶ್, ನಾಗರಾಜ್, ವೇಮಗಲ್ ಗುರು, ವೇಮಗಲ್ ನರಸಿಂಹಮೂರ್ತಿ, ಮುನಿ ಯಪ್ಪ, ವಿಜಯಪುರ ಶಿವಪ್ಪ, ನೆಲಮಂಗಲ ಪದಾಧಿಕಾರಿಗಳು ಹಾಜರಿದ್ದರು.1
- ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ ರಕ್ತ ದಾನ ಶಿಬಿರ ಹನೂರು ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳ 110 ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು ಶಿಬಿರದಲ್ಲಿ ಸುಮಾರು 35 ಕೂ ಹೆಚ್ಚು ಜನ ರಕ್ತ ದಾನ ಮಾಡಿದರು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಮಾತನಾಡಿ ರೈತರು ಕೇವಲ ನೇಗಿಲು ಹಿಡಿದು ದುಡಿಯುವವರು ಮಾತ್ರ ಅಲ್ಲ ಅವರು ಜನರ ಹೊಟ್ಟೆ ಹಸಿವು ನೀಗಿಸುತ್ತಾರೆ ಎಂದರು ಹಾಗೆಯೇ ಕೇವಲ ಜನರ ಹಸಿವು ನೀಗಿಸುವ ಕೆಲಸ ಮಾತ್ರ ಅಲ್ಲ ಆತ ತನ್ನ ರಕ್ತ ವನ್ನು ಕೊಟ್ಟು ಇನ್ನೊಬರ ಜೀವವು ಸಹ ಕಾಪಾಡುತ್ತಾನೆ ಎಂದರು ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು...2
- ಸೆಸ್ಕಾಂ ಕಚೇರಿ ಆವರಣದಲ್ಲಿ ಜನ ಸಂಪರ್ಕ ಸಭೆ. ಹನೂರು : ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗದ ಆವರಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹನೂರು ಉಪ ವಿಭಾಗದ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಿಭಾಗ ಕಚೇರಿ ಕೊಳ್ಳೇಗಾಲ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ್ದ ರೈತ ಮುಖಂಡರುಗಳು ಹಾಗೂ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಆದಷ್ಟು ಬೇಗನೆ ಸಭೆಯಲ್ಲಿ ತಿಳಿಸಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅವರು ಮಾತನಾಡಿ ಇಂದಿನ ಸಭೆಯಲ್ಲಿ ರೈತರು ವಿವಿಧ ಸಮಸ್ಯೆಗಳನ್ನು ಒಳಗೊಂಡ ಸುಮಾರು 18 ಅರ್ಜಿಗಳು ಬಂದಿದ್ದು ಸ್ಥಳದಲ್ಲೇ ಆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಎಂದು ತಿಳಿಸಿ ಕೇಂದ್ರ ಸರಕಾರದ ಯೋಜನೆಯಾಗಿರುವ ಪಿ ಎಂ ಕುಸುಮ್ ಬಿ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಕೊಳ್ಳಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ರೈತರಿಗೆ ತುಂಬಾ ಕಡಿಮೆ ಹಣ ಖರ್ಚಿನಲ್ಲಿ ಇದೊಂದು ಉತ್ತಮ ಯೋಜನೆಯಗಿದ್ದು ಕೇಂದ್ರ ಸರ್ಕಾರ ಶೇಕಡಾ 30 ರಷ್ಟು ಸಹಾಯ ಧನ ನೀಡುತ್ತದೆ, ರಾಜ್ಯ ಸರ್ಕಾರ ಶೇಕಡಾ 50 ರಷ್ಟು ಸಹಾಯ ಧನ ನೀಡುತ್ತದೆ. ತಾವುಗಳು ಕೇವಲ 20 ರಷ್ಟು ಹಣ ವ್ಯಯ ಮಾಡಬೇಕು ಆಗಾಗಿ ತುಂಬಾ ಒಳ್ಳೆಯ ಯೋಜನೆ ಇದನ್ನು ಜಮೀನು ಇರುವ ರೈತರುಗಳೂ ಸದುಪಯೋಗ ಪಡೆದುಕೊಳ್ಳಿ ಜೊತೆಗೆ ಹಲವಾರು ಏಜೇನ್ಸಿ ಗಳ ದೂರವಾಣಿ ಸಂಖ್ಯೆ ಇರುವ ಬಿತ್ತಿ ಪತ್ರವನ್ನು ತಮಗೆ ನೀಡಿದ್ದೇವೆ ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ ನಂತರ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎ ಇ ಇ ರಂಗಸ್ವಾಮಿ, ಎ ಇ ಆನಂದ್, ಜೆ ಇ ನವೀನ್, ಜೆ ಇ ಅರ್ಜುನ್, ಎಸ್ ಎ, ರಿಯಾಜ್, ಹಾಗೂ ಗ್ರಾಹಕರು ರೈತ ಮುಖಂಡರುಗಳೂ ಇನ್ನಿತರರಿದ್ದರು. ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು4
- Vegetable sald day For Kindergarten Students1
- namaste 🙏 Karnataka namaste 🙏 bangalore H T M Ayurveda Hakeem Naushad khan Traditional treatment1