Shuru
Apke Nagar Ki App…
BABU BANNUR Social Media
More news from Mysuru and nearby areas
- Post by BABU BANNUR Social Media4
- ಹಲಗೂರು ಭಾಗದಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅಣ್ಣನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.*1
- ‘ಅಕ್ಕ ಪಡೆ’ ಯೋಜನೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸ್ ಇಲಾಖೆಗೆ ನೀಡಿರುವ ವಾಹನಕ್ಕೆ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನವನ್ನು ಬಳಸಲಾಗುತ್ತದೆ ಎಂದರು. ಈ ವಾಹನದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ 112 ಹಾಗೂ ಚಾಮುಂಡಿ ಪಡೆ ವಾಹನಗಳೂ ತಮ್ಮ ಕರ್ತವ್ಯ ಮುಂದುವರಿಸಲಿವೆ ಎಂದು ಹೇಳಿದರು.1
- *ಭಾರತ ನಲ್ಲಿ ವೈರಲ್*1
- ಮಾತನಾಡಿದ ಶಾಸಕರು ತಾಲ್ಲೂಕು ಕೇಂದ್ರದಲ್ಲಿ ಎಲ್ಲಾ ರೀತಿ ಸೌಲಭ್ಯ ಹೊಂದಿರುವ ಡಯಾಗ್ನಸ್ಟಿಕ್ ಸೆಂಟರ್ ಪ್ರಾರಂಭ ಆಗಿರುವುದು ಸಂತೋಷವಾಗಿದೆ. ಅದೇ ರೀತಿಯಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನ ಮನ್ನಣೆ ಪಡೆಯಲಿ. ಎಂದು ಹಾರೈಸಿ ಶುಭ ಕೋರಿದರು. ಗುರು ಡಯಾಗ್ನಸ್ಟಿಕ್ ಸೆಂಟರ್ ಮುಖ್ಯಸ್ಥರು ಆದ ನವೀನ್ ಕುಮಾರ್ ಮಾತನಾಡಿ ಜನರಿಗೆ ಉತ್ತಮ ಗುಣಮಟ್ಟ ಆರೋಗ್ಯ ಸೇವೆ ಒದಗಿಸುವಂಥ ಉದ್ದೇಶವನ್ನ ಹೊಂದಲಾಗಿದೆ. ನಮ್ಮಲ್ಲಿ ಹೆಮಟಾಲಜಿ, ಸೆರೋಲಜಿ, ಕ್ಲಿನಿಕಲ್ ಪ್ಯಾಥಾಲಜಿ, ಬಯೋ-ಕೆಮಿಸ್ಟ್ರಿ,ಇಮ್ಯುನೊಅಸ್ಸೇ, ಮೈಕ್ರೋಬಯಾಲಜಿ, ಇ.ಸಿ.ಜಿ. ಪ್ರಯೋಗಾಲಯಗಳ ಸೇವೆಗಳು ಲಭ್ಯ ಇರುತ್ತದೆ. ಹಾಗೆಯೇ ಅಲ್ಟಾಸೌಂಡ್ ಸ್ಕಾನಿಂಗ್, ಕಲರ್ ಡಾಕ್ಟರ್ ಡಿಜಿಟಲ್ ಎಕ್ಸ್ –ರೇ, 2ಡಿ ಎಕೋ / ಟಿ.ಎಂ.ಟಿ, ಫಸಿಯೋಥೆರಪಿ ಸೇವೆಗಳು ಒಂದು ಗಂಟೆ ಶೀಘ್ರದಲ್ಲೆ ಲಭ್ಯವಾಗುತ್ತದೆ. ವಿಶ್ವಸಾರ್ಹ ಪ್ರಯೋಗಲಯ ಫಲಿತಾಂಶಗಳಿಗಾಗಿ ಬುದ್ದಿವಂತಿಕೆಯ ಅನುಭವಯುಳ್ಳ ಸಿಬ್ಬಂಧಿಗಳಿದ್ದು ಜನರ ಸೇವೆಗೆ ಜನಾರ್ಧನ ಸೇವೆ ಆಗಿರುತ್ತದೆ. ಮತ್ತು ಸಮಯ : ಪ್ರತಿನಿತ್ಯ ಬೆಳಿಗ್ಗೆ 7-00 ರಿಂದ ರಾತ್ರಿ 9-00 ಗಂಟೆ ವರೆಗೆ ಸೇವೆ ಲಭ್ಯ ಇರುತ್ತದೆ. ಇದೇ ಸಮಯದಲ್ಲಿ ಚಾಮುಲ್ ನಿರ್ದೇಶಕ ರಾದ ಉದ್ದನೂರು ಪ್ರಸಾದ್,ಮಹದೇವ್,ಶಶಿ,ಸತ್ಯರಾಜ್, ವೆಂಕಟೇಗೌಡ,ಎಸ್ ಆರ್ ಮಹದೇವ್, ವಿಜಯ್ ಕುಮಾರ್,ಗುರುಸ್ವಾಮಿ, ಮೂರ್ತಿ,ಹಾಗೂ ಇನ್ನಿತರರು ಇದ್ದರು.4
- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್ ನಿದ್ದೋಡಿ ಅವರನ್ನು ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು... ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ✍️ವರದಿ: ಸುರೇಂದ್ರ ಶಿವಮೊಗ್ಗ.....2
- ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..1
- ಇದು ನಮ್ಮ ಬನ್ನೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ತುಂಬಾ ಕಸ ಇದೆ ಆದಷ್ಟು ಬೇಗ ಸ್ವಚ್ಛ ಮಾಡಿಸಿ3